Categories
ಅಡಿಕೆ-ದರ ಶಿವಮೊಗ್ಗ

ಅಡಿಕೆ ದರ 18-03-2024

ಅಡಿಕೆ ದರ
18-03-2024
ಸರಕು 48100 81200
ಬೆಟ್ಟೆ 42000 53350
ರಾಶಿ 32009 49089
ಗೊರಬಲು 15166 32869
Nammur Express
Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಹಿಟ್ ಆಂಡ್ ರನ್ ನಡೆಸಿದ ಸ್ಕೂಟರ್ ಸವಾರ, ಬೈಕ್ ಸವಾರ ಆಸ್ಪತ್ರೆಗೆ ದಾಖಲು
– ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದು ಕಾರು ಚಾಲಕನಿಗೆ ಗಾಯ
– ಆಲ್ಟೊ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರಗೆ ಗಾಯ
– ಮನೆಗೆ ನುಗ್ಗಿ 15 ಮಂದಿಯ ಮನೆಯಲ್ಲಿದ್ದ ವ್ಯಕ್ತಿಗೆ ಜೀವ ಬೆದರಿಕೆ

NAMMUR EXPRESS NEWS
ಬಂಟ್ವಾಳ : ಬೈಕಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಾಯಗೊಂಡಿದ್ದು, ಅಪಘಾತಪಡಿಸಿದ ಸ್ಕೂಟರ್ ಸವಾರ ನಿಲ್ಲಿಸದೆ ಪರಾರಿಯಾದ ಘಟನೆ ನರಿಕೊಂಬು ಗ್ರಾಮದ ನೇತ್ರಾವತಿ ಸೇತುವೆ ಬಳಿ ಸಂಭವಿಸಿದೆ. ಗಾಯಗೊಂಡ ಬೈಕ್‌ ಸವಾರರನ್ನು ಚರಣ್ ಎಂದು ಹೆಸರಿಸಲಾಗಿದೆ. ಇವರು ತನ್ನ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಆಕ್ಟಿವಾ ಸ್ಕೂಟರ್ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಧಾವಿಸಿ ಬಂದು ಬೈಕಿಗೆ ಡಿಕ್ಕಿ ಹೊಡೆದು ಬಳಿಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡ ಚರಣ್ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು- ಕಂಕನಾಡಿ ಫಾದ‌ರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಗಾಯಾಳು ಚರಣ್ ಅವರ ಸ್ನೇಹಿತ ವಿಜಯಕುಮಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದು ಕಾರು ಚಾಲಕನಿಗೆ ಗಾಯ

ಬಂಟ್ವಾಳ : ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ಸಂಭವಿಸಿದೆ. ಗಾಯಾಳು ಕಾರು ಚಾಲಕನನ್ನು ಕಾವಳಪಡೂರು ಗ್ರಾಮದ ನಿವಾಸಿ ಸಿರಿಲ್ ಡಿ’ಸೋಜ (60) ಎಂದು ಗುರುತಿಸಲಾಗಿದೆ. ಇವರು ತನ್ನ ಕಾರಿನಲ್ಲಿ ಮದ್ವ ಕಡೆಯಿಂದ ವಗ್ಗ ಕಡೆಗೆ ಕಡೂರು-ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಬಾಂಬಿಲ ಎಂಬಲ್ಲಿ ಬಸವರಾಜ್ ಎಂಬವರು ಚಲಾಯಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ಎದುರಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಗಾಯಗೊಂಡ ಕಾರು ಚಾಲಕನನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಆಲ್ಟೊ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರಗೆ ಗಾಯ

ಬಂಟ್ವಾಳ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಬದನಾಜೆ ಎಂಬಲ್ಲಿ ಸಂಭವಿಸಿದೆ. ಗಾಯಗೊಂಡ ಬೈಕ್‌ ಸವಾರನನ್ನು ಹರಿಣಾಕ್ಷ ಎಂದು ಹೆಸರಿಸಲಾಗಿದೆ. ಹರಿಣಾಕ್ಷ ಅವರು ಬೈಕಿನಲ್ಲಿ ಬರುತ್ತಿದ್ದ ವೇಳೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಧಾವಿಸಿ ಬಂದ ಆಲ್ಟೊ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗಾಯಾಳು ಹರಿಣಾಕ್ಷ ಅವರನ್ನು ಪುತ್ತೂರು ಪ್ರಗತಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಸ್ಟ್‌ ನ್ಯೂರೋ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಮನೆಗೆ ನುಗ್ಗಿ 15 ಮಂದಿಯ ಮನೆಯಲ್ಲಿದ್ದ ವ್ಯಕ್ತಿಗೆ ಜೀವ ಬೆದರಿಕೆ

ಪುತ್ತೂರು : ಮನೆಯಲ್ಲಿದ್ದ ವ್ಯಕ್ತಿಗೆ ಸುಮಾರು 15 ಮಂದಿಯ ತಂಡ ಅಕ್ರಮವಾಗಿ ಮನೆಗೆ ಪ್ರವೇಶ ಮಾಡಿ ಬೈದು ಜೀವಬೆದರಿಕೆ ಒಡ್ಡಿದ ಘಟನೆ ಚಿಕ್ಕಮುನ್ನೂರು ಗ್ರಾಮದ ತಾರಿಗುಡ್ಡೆ ಎಂಬಲ್ಲಿ ಇಲ್ಲಿನ ನಿವಾಸಿ ಜಯಾನಂದ ಕೆ (41) ಎಂಬವರು ತನ್ನ ಮನೆಯಲ್ಲಿದ್ದ ವೇಳೆ ಏಕಾಏಕಿಯಾಗಿ ಆರೋಪಿಗಳಾದ ಪ್ರಜ್ವಲ್ ರೈ, ಸನತ್ ರೈ ಮತ್ತು ಇತರ ಸುಮಾರು 15 ಜನರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಜಯಾನಂದ ಹಾಗೂ ಅವರ ಮನೆ ಮಂದಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2023 0 448, 143, 147, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Categories
ರಾಜ್ಯ ಶಿವಮೊಗ್ಗ

ಕರ್ನಾಟಕ ಟಾಪ್ 5 ನ್ಯೂಸ್..!

– ಶಿವಮೊಗ್ಗ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ.!
– ತಾಯಿಯನ್ನು ಚುಡಾಯಿಸಿದವನ ಮನೆಗೆ ನುಗ್ಗಿ ಹೊಡೆದು ಕೊಂದ ಮಗ!
– ನಶೆಗೆ ಹಾವಿನ ವಿಷವನ್ನು ಆರ್ಡರ್ ಮಾಡಿದ್ದ ಎಲ್ವಿಶ್ ಯಾದವ್!
– ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್‌ ಹಾಕ್ತಿಯಾ ಅಂತಾ ಯುವಕನಿಗೆ ಥಳಿತ : ಎಫ್ ಐ ಆರ್ ಗೆ ಪೊಲೀಸ್ ಹಿಂದೇಟು!
– ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗುಬ್ಬಿ ಶಾಸಕ; ವಿಡಿಯೊ ವೈರಲ್

NAMMUR EXPRESS NEWS
ಶಿವಮೊಗ್ಗ: ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಗರದ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಶಾಂತ್ ಗಾಯಾಳು ಯುವಕ ಹಲ್ಲೆ ಮಾಡಿದಾಗ ತಲೆಯಲ್ಲಿ ಲಾಂಗ್ ಸಿಕ್ಕಿಹಾಕಿಕೊಂಡಿದ್ದು, ನರಳಾಡುತ್ತಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಾಯಿಯನ್ನು ಚುಡಾಯಿಸಿದವನ ಮನೆಗೆ ನುಗ್ಗಿ ಹೊಡೆದು ಕೊಂದ ಮಗ:

ಬೆಳಗಾವಿ: ತಾಯಿಯನ್ನು ಚುಡಾಯಿಸಿದ್ದಕ್ಕೆ ಸಿಟ್ಟಾದ ಮಗನೊಬ್ಬ, ಯುವಕನ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿ ಆಗಿದ್ದಾನೆ. ಬೆಳಗಾವಿ ನಗರದ ತೆಲಗು ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗಣೇಶ ಕಾಂಬಳೆ (25) ಕೊಲೆಯಾದವನು. ತರುಣ್ ನಾಯ್ಕ ಆರೋಪಿಯಾಗಿದ್ದಾನೆ. ತರುಣ್ ನಾಯ್ಕ ತಾಯಿಯನ್ನು ಗಣೇಶ ಕಾಂಬಳೆ ಚುಡಾಯಿಸಿದ್ದ. ಈ ವಿಷಯ ತಿಳಿದು ಸಿಟ್ಟಾದ ತರುಣ್ ಕೈಯಲ್ಲಿ ದೊಣ್ಣೆ ಹಿಡಿದು ಗಣೇಶನ ಮನೆಗೆ ನುಗ್ಗಿದ್ದ. ದೊಣ್ಣೆಯಿಂದ ಗಣೇಶನ ತಲೆಗೆ ಬಡಿದು ತೀವ್ರವಾಗಿ ಹಲ್ಲೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಗಣೀಶ ಸ್ಥಳದಲ್ಲೇ ಮೃತಪಟ್ಟಿದ್ದ.

ಗಣೇಶ ಮೃತಪಟ್ಟ ನಂತರ ತರುಣ್ ನಾಯ್ಕ ಘಟನಾ ಸ್ಥಳದಿಂದ ಪರಾರಿ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಣೇಶ ಕಾಂಬಳೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಕೊಲೆ ನಡೆದು 12 ಗಂಟೆಯಲ್ಲೆ ಆರೋಪಿಗಳನ್ನು ಬಂಧಿಸಿದ್ದಾರೆ. ತರುಣ್‌ಗೆ ಸಹಾಯ ಮಾಡಿದ ಓರ್ವ ಬಾಲಾಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತುರಣ್ ನಾಯ್ಕನ ತಾಯಿಯನ್ನು ಗಣೇಶ ಕಾಡಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಮನಗೆ ನುಗ್ಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ತಲೆ ಮರೆಸಿಕೊಂಡಿದ್ದ ತರುಣ್ ನಾಯ್ಕ ಬಂಧಿಸಿರುವ ಬೆಳಗಾವಿಯ ಪ್ಯಾಂಪ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ನಶೆಗೆ ಹಾವಿನ ವಿಷವನ್ನು ಆರ್ಡರ್ ಮಾಡಿದ್ದ ಎಲ್ವಿಶ್ ಯಾದವ್;
ಕೊನೆಗೂ ಪೊಲೀಸರ ಮುಂದೆ ತಪ್ರೊಪ್ಪಿಕೊಂಡ ನಟ!:

ಬೆಂಗಳೂರು: ಬಿಗ್ ಬಾಸ್ ಒಟಿಟಿ 2 ವಿಜೇತ ಮತ್ತು ಯೂಟ್ಯೂಬ‌ರ್ ಎಲ್ವಿಶ್ ಯಾದವ್‌ ಪೊಲೀಸರ ವಿಚಾರಣೆ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಎಲ್ವಿಶ್ ಹಾವಿನ ವಿಷವನ್ನು ಆರ್ಡರ್ ಮಾಡಿರುವ ಬಗ್ಗೆ ಪೊಲೀಸರ ಬಳಿ ತಪೊಪ್ಪಿಕೊಂಡಿದ್ದಾರೆ. ಈ ಯೂಟ್ಯೂಬ‌ರ್ ಅನ್ನು ಭಾನುವಾರ ಬಂಧಿಸಲಾಯಿತು. ನಂತರ ಅವರನ್ನು 14 ದಿನಗಳ ರಿಮಾಂಡ್‌ಗೆ ಕಳುಹಿಸಲಾಗಿದೆ.

ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್‌ ಹಾಕ್ತಿಯಾ ಅಂತಾ ಯುವಕನಿಗೆ ಥಳಿತ;
ಎಫ್‌ಐಆರ್‌ಗೆ ಪೊಲೀಸರು ಹಿಂದೇಟು?:

ಬೆಂಗಳೂರು: ಭಕ್ತಿಗೀತೆ ಹಾಡುಗಳನ್ನು ಹಾಕಿದ್ದಕ್ಕೆ ಐದಾರು ಮುಸ್ಲಿಂ ಯುವಕರಿಂದ ಯುವಕನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ. ಮುಖೇಶ್, ಹಲ್ಲೆಗೊಳಗಾಗಿರುವ ಯುವಕ.’ವರ್ಧಮಾನ್ ಟೆಲಿಕಾಮ್’ ಎಂಬ ಮೊಬೈಲ್‌ ಶಾಪ್ ನಡೆಸುತ್ತಿದ್ದ ಮುಖೇಶ್ ಸಂಜೆ ಸಮಯ ಮೊಬೈಲ್ ಶಾಪ್‌ನಲ್ಲಿ ಭಕ್ತಿಗೀತೆ ಹಾಡುಗಳನ್ನು ಹಾಕಿದ್ದ ಯುವಕ. ಈ ವೇಳೆ ಅಂಗಡಿಗೆ ಬಂದಿದ್ದ ನಾಲೈದು ಮುಸ್ಲಿಂ ಯುವಕರು. ಸಂಜೆ ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕ್ತಿಯ ಅಂತಾ ಕಿರಿಕ್ ಮಾಡಿರುವ ಪುಂಡರು. ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿಯಿಂದ ಹೊರ ಎಳೆದು ಯುವಕನ ಮೇಲೆ ಹಲ್ಲೆ ನಡೆಸಿರುವ ಪುಂಡರು. ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿ ಹೋಗಿದ್ದಾರೆ.

ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗುಬ್ಬಿ ಶಾಸಕ; ವಿಡಿಯೊ ವೈರಲ್:

ತುಮಕೂರು: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್‌ ವಿರುದ್ಧ ಎಫ್‌ಐಆ‌ರ್ ದಾಖಲಾದ ಬೆನ್ನಲ್ಲೇ ಸರ್ಕಾರಿ ಅಧಿಕಾರಿಯನ್ನು ಶಾಸಕ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೊ ವೈರಲ್ ಆಗಿದೆ. ಮಾ. 4ರಂದು ಗುಬ್ಬಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಡೆದ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಸೀಮೆ ಎಣ್ಣೆ ಬಳಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ.!

ಸೀಮೆ ಎಣ್ಣೆ ಬಳಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ.!
– ಹೈ ಸ್ಪೀಡ್ ಡೀಸೆಲ್ ಆಯಿಲ್‌ಗೆ ಭರ್ಜರಿ ಬೇಡಿಕೆ!
– ಡೀಸೆಲ್ ಆಯಿಲ್ ಬಳಕೆ ಪ್ರಮಾಣ ಶೇ 38.52 ಹೆಚ್ಚಳ

NAMMUR EXPRESS NEWS
ನವದೆಹಲಿ: ಕೇಂದ್ರ ಸರ್ಕಾರವು ನವೀಕರಿಸಬಹುದಾದ ಇಂಧನ ನೀತಿಗೆ ಒತ್ತು ನೀಡಿದ ಬೆನ್ನಿಗೇ ದೇಶದಲ್ಲಿ ಸೀಮೆ ಎಣ್ಣೆ ಬಳಕೆ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದೆ. ಕಳೆದ 2013 -14ರಿಂದ 2022-23ರ ನಡುವೆ ಸೀಮೆಎಣ್ಣೆ ಬಳಕೆಯು ಶೇ 26ರಷ್ಟು ಇಳಿಕೆಯಾಗಿದೆ ಎಂದು ಎನ್‌ಎಸ್‌ಒ (ರಾಷ್ಟ್ರೀಯ ಸಾಂಖ್ಯಿಕ ಕಚೇರಿ) ಅಂಕಿಅಂಶಗಳು ಹೇಳುತ್ತಿವೆ. ಇದೇ ವೇಳೆ ದೇಶದಲ್ಲಿ 2022-23ರ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಹೈ ಸ್ಪೀಡ್ ಡೀಸೆಲ್ ಆಯಿಲ್ ಬಳಕೆ ಪ್ರಮಾಣ ಶೇ 38.52 ಹೆಚ್ಚಿದೆ. ಇನ್ನು 2021-22ನೇ ಸಾಲಿಗೆ ಹೋಲಿಸಿದರೆ ಬಳಕೆ ಪ್ರಮಾಣದಲ್ಲಿ ಶೇ 12.05ರಷ್ಟು ಏರಿಕೆ ಆಗಿದೆ. ಪೆಟ್ರೋಲ್ ಬಳಕೆ ಶೇ 13.38ರಷ್ಟು ಇದ್ದರೆ, ಪೆಟ್ರೋಲಿಯಂ ಕೋಕ್ ಬಳಕೆ ಶೇ 28.68ರಷ್ಟಿದೆ. ಹೈ ಸ್ಪೀಡ್ ಡೀಸೆಲ್ ಬಳಕೆಯಲ್ಲಿ ಶೇ 12.05ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

Categories
ರಾಜ್ಯ

ಬಾಲದೊಂದಿಗೆ ಹುಟ್ಟಿದ ಮಗು: ಏನಿದು ವಿಚಿತ್ರ!

ಬಾಲದೊಂದಿಗೆ ಹುಟ್ಟಿದ ಮಗು: ಏನಿದು ವಿಚಿತ್ರ!
– ವೈದ್ಯ ಲೋಕವನ್ನೇ ಅಚ್ಚರಿಗೊಳಿಸಿದ ಘಟನೆ
– 4 ಇಂಚಿನ ಬಾಲದೊಂದಿಗೆ ಹುಟ್ಟಿರುವ ಮಗು.!
– ವೈದ್ಯರು ಏನಂತಾರೆ? ಇದು ಪವಾಡನಾ?

NAMMUR EXPRESS NEWS
ಮಂಗನಿಂದ ಮಾನವ ಕೇಳಿದ್ದೇವೆ. ಆದರೆ ಇಲ್ಲೊಂದು ಘಟನೆ ಮಾನವ ಕುಲಕ್ಕೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ.
ನಾಲ್ಕು ಇಂಚಿನ ಬಾಲದೊಂದಿಗೆ ಮಗುವೊಂದು ಜನಿಸಿದ ಅಚ್ಚರಿಯ ಘಟನೆ ಚೀನಾದಲ್ಲಿ ಸಂಭವಿಸಿದ್ದು, ವೈದ್ಯ ಲೋಕವನ್ನೇ ಬೆರಗಾಗಿಸಿದೆ. ಚೀನಾದ ಹ್ಯಾಂಗ್ಝೌ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ಈ ಮಗುವಿನ ಬೆನ್ನಿನ ಭಾಗದಲ್ಲಿ ಬಾಲವಿರುವುದು ಪತ್ತೆಯಾಗಿದೆ. ಇದೊಂದು ಅಸಹಜ ಬೆಳವಣಿಗೆಯಾಗಿದ್ದು, ಬೆನ್ನುಮೂಳೆಗೆ ಸಂಬಂಧಿಸಿದ ಅಸ್ವಸ್ಥತೆಗಳ ಕಾರಣದಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಯ ಪೀಡಿಯಾಟ್ರಿಕ್ ನ್ಯೂರೋಸರ್ಜರಿ ವಿಭಾಗದ ವೈದ್ಯ ಡಾ. ಲೀ ಮಗುವಿನ ಬೆನ್ನುಹುರಿ ಸರಿಯಾಗಿ ಬೆಳವಣಿಗೆಯಾಗದಿದ್ದಾಗ ಸಂಭವಿಸುವ ಜನ್ಮ ದೋಷದಿಂದ ಈ ರೀತಿ ಬಾಲದಂತಹ ಅಂಗ ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದ್ದಾರೆ .

ಅವರು ನವಜಾತ ಶಿಶುವಿನ ಬೆನ್ನಿನ ಭಾಗದಲ್ಲಿ ಬಾಲ ಇರುವುದನ್ನು ಪತ್ತೆ ಹಚ್ಚಿದ್ದು. ಬೆನ್ನು ಹುರಿಯ ಸುತ್ತಮುತ್ತಲಿನ ಅಂಗಾಂಶಗಳಿಗೆ ಅಸಹಜವಾಗಿ ಜೋಡಿಸಲ್ಪಟ್ಟಿರುವ ಒಂದು ರೀತಿಯ ಸ್ಥಿತಿಯಾಗಿದ್ದು, ಇದರಿಂದ ಬಾಲ ಬೆಳೆಯುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇಂತಹ ಸ್ಥಿತಿ ಯಾರಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಬಾಲದೊಂದಿಗೆ ಮಗು ಜನಿಸಿದ ಪ್ರಕರಣ ಇದೇ ಮೊದಲಲ್ಲ. ವರದಿಗಳ ಪ್ರಕಾರ 2017 ರ ವರೆಗ ಇಂತಹ 195 ಪ್ರಕರಣಗಳು ವರದಿಯಾಗಿವೆ. 2021 ರಲ್ಲಿ ಬ್ರೆಜಿಲ್ ನಲ್ಲಿ ಹೆಣ್ಣು ಮಗು ಹಾಗೂ 2022 ರಲ್ಲಿ ಮೆಕ್ಸಿಕೋದಲ್ಲಿ ಹೆಣ್ಣು ಮಗುವೊಂದು ಬಾಲದೊಂದಿಗೆ ಜನಿಸಿದ ಪ್ರಕರಣ ವರದಿಯಾಗಿದೆ. ಇದೀಗ ಚೀನಾದಲ್ಲಿಯೂ ಇಂತಹ ಪ್ರಕರಣ ವರದಿಯಾಗಿದೆ.

Categories
ರಾಷ್ಟ್ರೀಯ ವಾರ್ತೆ

ಎಲೆಕ್ಷನ್​​​ ಟಿಕೆಟ್‌ಗಾಗಿ ನಡೆಯಿತು ಬೆಟ್ಟಿಂಗ್​​..!

ಎಲೆಕ್ಷನ್​​​ ಟಿಕೆಟ್‌ಗಾಗಿ ನಡೆಯಿತು ಬೆಟ್ಟಿಂಗ್​​..!
– ಅರ್ಧ ತಲೆಕೂದಲು ಮೀಸೆ ಬೋಳಿಸಿದ ವ್ಯಕ್ತಿ
– ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

NAMMUR EXPRESS NEWS
ಆಂಧ್ರಪ್ರದೇಶ: ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಶ್ರೀಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿಯ ವೈಸಿಪಿ ಟಿಕೆಟ್ ಶ್ರೀಧ‌ರ್ ರೆಡ್ಡಿಗೆ ಸಿಗುವುದಿಲ್ಲ ಎಂದು ವ್ಯಕ್ತಯೊಬ್ಬರು ಬೆಟ್ಟಿಂಗ್ ಹಾಕಿದ್ದರು. ಇದಲ್ಲದೇ ಶ್ರೀಧರ್ ರೆಡ್ಡಿಗೆ ವೈಸಿಪಿ ಟಿಕೆಟ್‌ ಕೊಟ್ಟರೆ, ಅರ್ಧ ತಲೆಕೂದಲು ಮತ್ತು ಅರ್ಧ ಮೀಸೆತೆಗೆಸುತ್ತೇನೆ ಎಂದು ಪಣತೊಟ್ಟಿದ್ದರು. ಅಂತಿಮವಾಗಿ ಪುಟ್ಟಪರ್ತಿ ವೈಸಿಪಿ ಟಿಕೆಟ್‌ಗೆ ಶ್ರೀಧ‌ರ್ ರೆಡ್ಡಿ ಹೆಸರನ್ನು ವೈಸಿಪಿ ಘೋಷಿಸಿದೆ. ಶ್ರೀಧರ್ ರೆಡ್ಡಿಗೆ ಟಿಕೆಟ್ ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆ ಮಹೇಶ್ವ‌ರ್ ರೆಡ್ಡಿ ಎಂಬ ವ್ಯಕ್ತಿ ತನ್ನ ಅರ್ಧ ತಲೆಕೂದಲು ಮತ್ತು ಅರ್ಧ ಮೀಸೆ ಬೋಳಿಸಿದ್ದಾನೆ.

ಶ್ರೀಧ‌ರ್ ರೆಡ್ಡಿಗೆ ಪುಟ್ಟಪರ್ತಿ ಟಿಕೆಟ್ ನೀಡಿರುವುದನ್ನು ಮಹೇಶ್ವರರೆಡ್ಡಿ ಈ ರೀತಿಯಾಗಿ ಪ್ರತಿಭಟಿಸಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪುಟ್ಟಪರ್ತಿಯ ಸತ್ಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಮಹೇಶ್ವರರೆಡ್ಡಿ ಅರ್ಧ ಮೀಸೆ ಬೋಳಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಶ್ರೀಧ‌ರ್ ರೆಡ್ಡಿಗೆ ಟಿಕೆಟ್ ಸಿಗಬಾರದು ಎಂದು ಪಣತೊಟ್ಟಿರುವ ಮಹೇಶ್ವರ್ ರೆಡ್ಡಿ ಈ ಹಿಂದೆ ಶಾಸಕ ಶ್ರೀಧ‌ರ್ ರೆಡ್ಡಿ ಅವರ ಕಾರು ಚಾಲಕನಾಗಿ ಕೆಲಸ ಮಾಡಿದ್ದರು. ಬಂಗಾರರಾಜು ಮಹೇಶ್ವರ್ ರೆಡ್ಡಿ ಅವರು ಅರ್ಧ ತಲೆಕೂದಲು ಮೀಸೆ ಬೋಳಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Categories
ಕರಾವಳಿ ರಾಜ್ಯ

ಕರಾವಳಿ ಭಾಗದಲ್ಲಿ ಮತ್ತೆ ನಕ್ಸಲರು!?

ಕರಾವಳಿ ಭಾಗದಲ್ಲಿ ಮತ್ತೆ ನಕ್ಸಲರು!?
-ಸುಳ್ಯ ಗಡಿಯ ಕೂಜಿಮಲೆ ವ್ಯಾಪ್ತಿಯಲ್ಲಿ ನಕ್ಸಲರು ಪ್ರತ್ಯಕ್ಷ
– ದಿನಸಿ ಸಾಮಾನು ಖರೀದಿಸಿದ 8 ಮಂದಿಯ ತಂಡ

NAMMUR EXPRESS NEWS
ಮಂಗಳೂರು: ದಶಕದಿಂದ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎಂಬ ಅನುಮಾನಕ್ಕೆ ಪುಷ್ಟಿ ನೀಡುವಂತೆ ಕಳೆದ ಮೂರು- ನಾಲ್ಕು ತಿಂಗಳಿಂದ ನಕ್ಸಲರ ಸದ್ದು ಅಲ್ಲಲ್ಲಿ ಕೇಳಿಬರುತ್ತಿದೆ. ಇದೀಗ ಹೊಸ ಬೆಳವಣಿಗೆ ಎಂಬಂತೆ ದಕ್ಷಿಣ ಕನ್ನಡ- ಕೊಡಗು ಗಡಿಭಾಗದ ಪ್ರದೇಶವಾದ ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ವ್ಯಾಪ್ತಿಯಲ್ಲಿನ ರಬ್ಬರ್ ಎಸ್ಟೇಟ್ ನ ಬಳಿ ಶನಿವಾರ ಸಂಜೆ ನಕ್ಸಲರು ಓಡಾಟ ನಡೆಸಿರುವ ಬಗ್ಗೆ ಗ್ರಾಮಸ್ಥರು ಅನುಮಾನ ಹೊರಹಾಕಿದ್ದಾರೆ. 8 ಜನ ಶಂಕಿತ ನಕ್ಸಲರಿದ್ದ ತಂಡ ಕೂಜಿಮಲೆ, ಕಲ್ಮಕಾರಿನ ಅಂಗಡಿಯೊಂದರಿಂದ 3,500 ರೂ. ಮೌಲ್ಯದ ದಿನಸಿ ಖರೀದಿಸಿದ್ದಾರೆ ಎನ್ನಲಾಗಿದೆ. ತಮ್ಮಲ್ಲಿದ್ದ ನಗದು ಹಣವನ್ನು ನೀಡಿ ಸಾಮಾಗ್ರಿಗಳನ್ನು ಖರೀದಿಸಿ ಬಳಿಕ ಅಲ್ಲಿಂದ ತೆರಳಿದೆ ಎನ್ನಲಾಗಿದೆ.

2012 ರಲ್ಲಿ ಕಾಲೂರು ಗ್ರಾಮದಲ್ಲಿ ನಕ್ಸಲರು ಒಡಾಟ ನಡೆಸಿದ್ದರು..ಬಳಿಕ 2018 ರ ಫೆಬ್ರವರಿ ತಿಂಗಳಿನಲ್ಲಿ ಇದೆ ವ್ಯಾಪ್ತಿಯ ಸಂಪಾಜೆ ಗುಡ್ಡೆಗದ್ದೆಯಲ್ಲಿ ನಕ್ಸಲರು ಪ್ರತ್ಯಕ್ಷಗೊಂಡಿದ್ದರು.ಇದಾದ 5 ವರ್ಷದ ಬಳಿಕ ಮತ್ತೆ ಅದೇ ಭಾಗದಲ್ಲಿ ನಕ್ಸಲ್‌ ತಂಡ ಪ್ರತ್ಯಕ್ಷವಾಗಿದೆ. ನಕ್ಸಲರು ಕಾಣಿಸಿಕೊಂಡ ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕಾಲೂರಿನಲ್ಲಿ ಕೂoಬಿಂಗ್‌ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ನವೆಂಬರ್ ತಿಂಗಳಲ್ಲಿ ಕೇರಳದ ವಯನಾಡಿನಲ್ಲಿ ಕಾಣಿಸಿಕೊಂಡ ನಕ್ಸಲರನ್ನು ಬೆನ್ನಟ್ಟಿದ ಕೇರಳ ಪೊಲೀಸರು ಕರ್ನಾಟಕ ಮೂಲದ ಶ್ರೀಮತಿ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಉಳಿದ ಇಬ್ಬರು ತಪ್ಪಿಸಿಕೊಂಡಿದ್ದರು. ನಕ್ಸಲರು ಕಳೆದ ತಿಂಗಳು ಫೆಬ್ರವರಿಯಲ್ಲಿ ಕೇರಳದಿಂದ ಉಡುಪಿ ಜಿಲ್ಲೆಯ ಬೈಂದೂರುಗೆ ಆಗಮಿಸಿರುವ ಅನುಮಾನ ವ್ಯಕ್ತವಾಗಿತ್ತು. ಉಡುಪಿಯ ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್‌, ಬೆಳ್ಕಲ್‌ ಗ್ರಾಮ ಸುತ್ತಮುತ್ತ ಓಡಾಡಿರುವ ಶಂಕೆ ಮೂಡಿತ್ತು. ಈ ಹಿನ್ನಲೆಯಲ್ಲಿ ಆ ಭಾಗದಲ್ಲೂ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

Categories
ಬೆಂಗಳೂರು ರಾಜ್ಯ ರಾಷ್ಟ್ರೀಯ ವಾರ್ತೆ

ಕಪ್ ನಮ್ದೇ…!

ಕಪ್ ನಮ್ದೇ…!
– ಕನ್ನಡಿಗರ ಕನಸು ನನಸು ಮಾಡಿದ ಮಹಾಲಕ್ಷ್ಮಿಯರು!
– ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಆರ್.ಸಿ. ಬಿ

NAMMUR EXPRESS NEWS
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಕ್ರಿಕೆಟ್ ಪಂದ್ಯಾಟದಲ್ಲಿ RCB ಮಹಿಳಾ ತಂಡವು ಕೊನೆಗೂ ಕಪ್ ಗೆದ್ದುಕೊಂಡು ಇತಿಹಾಸ ನಿರ್ಮಿಸಿದೆ. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ,
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ತಂಡ 113 ರನ್ ಗಳಿಗೆ ಕಟ್ಟಿಹಾಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ವರ್ಮಾರವರ ಅದ್ಭುತ ಬ್ಯಾಟಿಂಗ್ ಹೊರತಾಗಿಯೂ 18.3 ಓವರ್ ಗಳಲ್ಲಿ 113 ರನ್ನಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಬೆಂಗಳೂರು ತಂಡದ ಪರ ಶ್ರೇಯಂಕ್ ಪಾಟೀಲ್ ಅವರು ನಾಲ್ಕು ವಿಕೆಟ್ ಹಾಗೂ ಎಸ್ ಮೊಲಿನಿಸ್ ಮೂರು ವಿಕೆಟ್ ಕಬಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡ ಉತ್ತಮ ಆರಂಭದ ಹೊರತಾಗಿಯೂ ಸತತ ವಿಕೆಟ್ ಕಳೆದುಕೊಂಡು ಕಡಿಮೆ ಮೊತ್ತ ದಾಖಲಿಸಿತ್ತು. ಡೆಲ್ಲಿ ಪರ ಶಿಫಾಲಿ ವರ್ಮಾ 44 ರನ್, ರಾಧಾ ಯಾದವ್ 12, ಅನುರಾಧ ರೆಡ್ಡಿ 10 ರನ್ ಬಾರಿಸಿದ್ದು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 113 ರನ್ ಗಳಿಗೆ ಆಲೌಟ್ ಆಗಿದ್ದು ಆರ್ ಸಿಬಿಗೆ 114 ರನ್ ಗಳ ಗುರಿ ನೀಡಿತ್ತು.

ಕನ್ನಡತಿ ಶ್ರೇಯಾಂಕಗೆ 4 ವಿಕೆಟ್!

14ನೇ ಓವರ್‌ನ ಮೊದಲ ಎಸೆತದಲ್ಲಿ ಆಶಾ ಕೇಪ್ ಅವರನ್ನು 8 ರನ್‌ಗಳಿಗೆ ಬಲಿ ಪಡೆದರೆ, ಜೆಸ್ ಜೊನಾಸೆನ್ ಕೂಡ ಆಶಾಗೆ ವಿಕೆಟ್ ಒಪ್ಪಿಸಿದರು. ಸೋಫಿ ಮೊಲಿನೆಕ್ಸ್ ಅವರ ಅದ್ಭುತ ಎಸೆತದಲ್ಲಿ ರಾಧಾ ರನೌಟ್‌ಗೆ ಬಲಿಯಾದರೆ, ಕೊನೆಯ ಮೂರು ವಿಕೆಟ್‌ಗಳನ್ನು ಕನ್ನಡತಿ ಶ್ರೇಯಾಂಕ ಪಡೆಯುವಲ್ಲಿ ಯಶಸ್ವಿಯಾದರು. ಶ್ರೇಯಾಂಕ, ಮಿನ್ನು ಮಣಿ (5 ರನ್) ಅರುಂಧತಿ ರೆಡ್ಡಿ (10 ರನ್) ತನಿಯಾ ಭಾಟಿಯಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸಿದರು. ಫೈನಲ್ ಪಂದ್ಯದಲ್ಲಿ ಶ್ರೇಯಾಂಕ 4 ವಿಕೆಟ್ ಪಡೆಯುವ ಮೂಲಕ ಲೀಗ್‌ನಲ್ಲಿ ಅತಿ ಶ್ರೇಯಾಂಕ 4 ವಿಕೆಟ್ ಪಡೆಯುವ ಮೂಲಕ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ನಂತರ ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಮೃತಿ ಮಂದಣ್ಣ ಹಾಗೂ ಡಿವೈನ್ ರವರಿಂದ ಭರ್ಜರಿ ಆರಂಭ ಪಡೆದುಕೊಂಡಿತ್ತು. ಸ್ಮೃತಿ ಮಂದಣ್ಣ 31ರನ್ ಗಳಿಸಿ ಔಟ್ ಆದರೆ ಡಿವೈನ್ ರವರು 32ರನ್ ಗಳಿಸಿ ಔಟಾದರು.

Categories
ರಾಜ್ಯ ಸಿನಿಮಾ

ಸರಿಗಮಪ ವಿನ್ನರ್ ಯಾರು..?

ಸರಿಗಮಪ ವಿನ್ನರ್ ಯಾರು..?
– ದರ್ಶನ್​​ ನಾರಾಯಣ್​ಗೆ ಗೆಲುವಿನ ಕಿರೀಟ
– ರಮೇಶ್​​ ಲಮಾಣಿ ಫಸ್ಟ್​ ರನರ್ ಅಪ್

NAMMUR EXPRESS NEWS
ಸರಿಗಮಪ ಜೀ ಕನ್ನಡದಲ್ಲಿ ಪ್ರಸಾರವಾಗುವ ಪ್ರಸಿದ್ಧ ರಿಯಾಲಿಟಿ ಶೋ ಆಗಿದ್ದು, ಈ ಬಾರಿ ದರ್ಶನ್​ ನಾರಾಯಣ್​ ವಿನ್ನರ್ ಆಗಿದ್ದಾರೆ. ಗೆಲುವಿನ ಪಟ್ಟವನ್ನು ಇವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ರಮೇಶ್​​ ಲಮಾಣಿ ಫಸ್ಟ್​ ರನರ್ ಅಪ್ ಆಗಿದ್ದಾರೆ. ಡಾ.ಶ್ರಾವ್ಯಾ ರಾವ್ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಅದ್ಬುತ ಪ್ರತಿಭೆಯಿಂದ ಎಲ್ಲರ ಮನಗೆದ್ದು ಸರಿಗಮಪ ಸೀಸನ್ 20ರ ಗೆಲುವಿನ ಕಿರೀಟವನ್ನು ದರ್ಶನ್ ನಾರಾಯಣ್ ತಮ್ಮದಾಗಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಅರ್ಜುನ್ ಜನ್ಯ, ಹಂಸಲೇಖಾ ಹಾಗೂ ವಿಜಯ್ ಪ್ರಕಾಶ್​ ಅವರು ಇದ್ದರು. ಅನುಶ್ರೀ ಅವರು ಈ ಕಾರ್ಯಕ್ರಮ ನಿರ್ವಹಣೆ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನವನ್ನು ನೀಡಲಾಗಿದೆ. ಫಿನಾಲೆ ಸಡಗರಕ್ಕೆ ಮೆರುಗು ಕೊಟ್ಟ ಅಪ್ಪು ಬರ್ತ್‌ಡೇ ಸಂಭ್ರಮ ಹೆಚ್ಚು ಜನರನ್ನು ಮುಟ್ಟಿತ್ತು. ಈ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಪುನೀತ್​ ರಾಜ್​ಕುಮಾರ್​ ಅವರ ಕಟೌಟ್​ ನಿಲ್ಲಿಸಲಾಗಿತ್ತು. ಈ ಕಾರ್ಯಕ್ರಮ ಅರ್ಪಣೆ ಮಾಡಲಾಯಿತು.

Categories
ತೀರ್ಥಹಳ್ಳಿ ಮಲ್ನಾಡ್ ರಾಜ್ಯ

ರಚನೆಯಾಗದ ಬಗರ್ ಹುಕುಂ ಸಮಿತಿ: ರೈತರಿಗಿಲ್ಲ ನ್ಯಾಯ?

ರಚನೆಯಾಗದ ಬಗರ್ ಹುಕುಂ ಸಮಿತಿ: ರೈತರಿಗಿಲ್ಲ ನ್ಯಾಯ?
– ರೈತರ ಭೂಮಿ ಆಸೆ ಇನ್ನೂ ಕನಸು!
– ಮಲೆನಾಡಿನಾದ್ಯಂತ ಜನರ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಭಾಗದ ಜ್ವಲಂತ ಸಮಸ್ಯೆಯಾದ ಬಗರ್ ಹುಕುಂ ಕಮಿಟಿಯನ್ನು ಸರ್ಕಾರ ಇನ್ನು ನೇಮಕ ಮಾಡಿಲ್ಲ. ಇದರಿಂದಾಗಿ ಸಾವಿರಾರು ಕುಟುಂಬಗಳ ಭೂಮಿ ಆಸೆ ಇನ್ನು ಕನಸಾಗಿಯೇ ಉಳಿದಿದೆ. ಚುನಾವಣೆಗಳ ಬಗ್ಗೆ ಇರುವ ಆಸಕ್ತಿ ಜನರ ಬದುಕಿನ ಮೇಲೆ ಯಾವುದೇ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಗಳಿಗಿಲ್ಲದಿರುವುದು ಇದೀಗ ಜನಾಕ್ರೋಶಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೂಡ ಇದುವರೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ರಾಜ್ಯ ಸರ್ಕಾರ ಕೂಡ ಒಂದಷ್ಟು ವಿಚಾರಗಳಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಬಹುತೇಕ ಭಾಗಗಳ ಜ್ವಲಂತ ಸಮಸ್ಯೆಯಾಗಿರುವ ದಶಕಗಳಿಂದ ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಕನಸಾಗಿಯೇ ಉಳಿದಿರುವ ಬಗರ್ ಹುಕುಂ ಯೋಜನೆ ಹಳ್ಳ ಹಿಡಿದಿದೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕು ಸೇರಿದಂತೆ ಯಾವುದೇ ತಾಲೂಕಿನಲ್ಲಿ ಬಗರ್ ಹುಕುಂ ಸಮಿತಿಯನ್ನು ಇನ್ನೂ ರಚನೆ ಮಾಡಿಲ್ಲ.

ಮೂರು ಪಕ್ಷಗಳಿಗೆ ಜನ ಹಿತ ಬೇಕಿಲ್ಲ!

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷವೇ ಕಳೆದಿದೆ, ಇದರಿಂದಾಗಿ ರೈತರಿಗೆ ಸಮಸ್ಯೆಯಾಗುತ್ತದೆ ಜೊತೆಗೆ ಆಶ್ರಯ ಸಮಿತಿಗಳು ಕೂಡ ನೇಮಕವಾಗಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಮಲೆನಾಡಿನ ಜನರ ಬದುಕನ್ನು ಹಾಗೂ ಮಲೆನಾಡಿನ ಜನರ ಹಕ್ಕನ್ನು ಗೌರವಿಸದಿರುವುದು ಮಲೆನಾಡಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಶಿವಮೊಗ್ಗ ಚಿಕ್ಕಮಗಳೂರು ಸೇರಿದಂತೆ ರಾಜ್ಯದ್ಯಂತ ಬಗರ್ ಹುಕುಂ ಸಾಗುವಳಿದಾರರು ತಮ್ಮ ಜಮೀನು ಹಕ್ಕನ್ನು ಪಡೆಯಲು ಈಗಾಗಲೇ ಹೋರಾಟವನ್ನು ಮಾಡುತ್ತಿದ್ದಾರೆ. ಚುನಾವಣೆ ಹೊತ್ತಿನಲ್ಲೆ ಈ ಪ್ರಕರಣ ಗಂಭೀರವಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಮನಿಸಬೇಕಿದೆ.