Categories
ರಾಜಕೀಯ ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಇಂದು ಮೋದಿ ಮೋಡಿ!

ಶಿವಮೊಗ್ಗದಲ್ಲಿ ಇಂದು ಮೋದಿ ಮೋಡಿ!
– ಲೋಕಸಭೆ ಚುನಾವಣೆಗಾಗಿ ಶಿವಮೊಗ್ಗದಲ್ಲಿ ಮೋದಿ ಪ್ರಚಾರ:
– ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಶೂನ್ಯ ಸಂಚಾರ

NAMMUR EXPRESS NEWS
ಶಿವಮೊಗ್ಗ: ಲೋಕ ಸಭಾ ಚುನಾವಣೆ ಕಣ ರಂಗೇರಿದೆ. ಅದರಲ್ಲೂ ಶಿವಮೊಗ್ಗ ಲೋಕ ಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಲೋಕ ಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ. ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಗರದ ಅಲ್ಲಮಪ್ರಭು ಮೈದಾನದವರೆಗೆ ರಸ್ತೆ ಮಾರ್ಗವಾಗಿ ಪ್ರಧಾನಿ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸೋಮವಾರ ಮುಂಜಾನೆ 6 ರಿಂದ ಸಂಜೆ 6ರ ವರೆಗೆ ಶೂನ್ಯ ಸಂಚಾರವನ್ನು ಘೋಷಿಸಿದೆ. ಶೂನ್ಯ ಸಂಚಾರ ಮತ್ತು ಹೊರಗಿನಿಂದ ಅಧಿಕ ಸಂಖ್ಯೆಯ ವಾಹನಗಳು ಬರುತ್ತಿರುವುದರಿಂದ ಶಿವಮೊಗ್ಗದಲ್ಲಿ ಸೋಮವಾರ ಇಡೀ ದಿನ ವಾಹನಗಳ ಸಂಚಾರ ಬಂದ್ ಆಗಲಿದೆ.

ಮೂರು ಕ್ಷೇತ್ರದ ನಾಯಕರು ಹಾಜರ್!

ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರ ವ್ಯಾಪ್ತಿಗೆ ಅನುಗುಣವಾಗಿ ಈ ಪ್ರಚಾರ ನಡೆಯಲಿದೆ. ಯಡಿಯೂರಪ್ಪ, ರಾಘವೇಂದ್ರ, ವಿಜಯೇಂದ್ರ ಸೇರಿ ಎಲ್ಲಾ ಬಿಜೆಪಿ ನಾಯಕರು ಹಾಜರಿರಲಿದ್ದಾರೆ.

Categories
ಅಪಘಾತ ಅಪರಾಧ ತೀರ್ಥಹಳ್ಳಿ ಶಿವಮೊಗ್ಗ

ನಡೆದುಕೊಂಡು ಹೋಗುತ್ತಿದ್ದವನಿಗೆ ಕಾರು ಡಿಕ್ಕಿ: ಸಾವು!

ನಡೆದುಕೊಂಡು ಹೋಗುತ್ತಿದ್ದವನಿಗೆ ಕಾರು ಡಿಕ್ಕಿ: ಸಾವು!
– ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಬಳಿ ಘಟನೆ

– ತೀರ್ಥಹಳ್ಳಿ ರಸ್ತೆಯಲ್ಲಿ ಹೆಚ್ಚಿದ ಆಕ್ಸಿಡೆಂಟ್!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸಮೀಪದ ಬಿಳುಕೊಪ್ಪದಲ್ಲಿ ಭಾನುವಾರ ನಡೆದ ಭೀಕರ ಅಪಘಾತದಲ್ಲಿ ಪುಟ್ಟಪ್ಪ ಕಿಟ್ಟಯ್ಯ ಗೌಡ (60) ಎಂಬುವವರು ಮೃತಪಟ್ಟಿದ್ದಾರೆ. ಬಿಳುಕೊಪ್ಪ ಸಮೀಪ ಬಸ್ ಇಳಿದು ಮನೆಗೆ ಹೋಗುವಾಗ ಸಾಗರ ಮೂಲದ ವ್ಯಕ್ತಿಯ ಕಾರು ಡಿಕ್ಕಿ ಹೊಡೆದು ತೀರ್ಥಹಳ್ಳಿ ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ಪುಟ್ಟಪ್ಪ ಸಾವನ್ನು ಕಂಡಿದ್ದಾರೆ. ಜೆಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.

ತೀರ್ಥಹಳ್ಳಿ ರಸ್ತೆಯಲ್ಲಿ ಹೆಚ್ಚಿದ ಆಕ್ಸಿಡೆಂಟ್!

ತೀರ್ಥಹಳ್ಳಿ ತಾಲೂಕಿನಲ್ಲಿ ಎಲ್ಲೆಡೆ ಅಪಘಾತ ದಿನೇ ದಿನೇ ನಡೆಯುತ್ತಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

Categories
ತೀರ್ಥಹಳ್ಳಿ

ಆರಗ ಶ್ರೀ ಮಾರಿಕಾಂಬಾ ದೇವಸ್ಥಾನ ಜಾತ್ರೆ 2024

ಆರಗ ಶ್ರೀ ಮಾರಿಕಾಂಬಾ ದೇವಸ್ಥಾನ ಜಾತ್ರೆ 2024
– ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ
-ದಿನಾಂಕ 19-03-2024 ರಿಂದ 27-03-2024ರ ವರೆಗೂ ಕೂಡ
-ಶಿವದೂತ ಗುಳಿಗ ವಿಭಿನ್ನ ಶೈಲಿಯ ಕನ್ನಡ ನಾಟಕ ಪ್ರದರ್ಶನ

NAMMUR EXPRESS NEWS
ಸುಪ್ರಸಿದ್ಧ ಆರಗ ಶ್ರೀ ಮಾರಿಕಾಂಬ ದೇವಸ್ಥಾನದ ಮಾರಿಕಾಂಬ ಜಾತ್ರೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ದಿನಾಂಕ 19-03-2024 ರಿಂದ 27-03-2024ರ ವರೆಗೂ ಕೂಡ ಪೂಜೆ ಪುನಸ್ಕಾರ ನಡೆಯಲಿದೆ. 19-03-2024 ನೇ ಮಂಗಳವಾರ ಸಂಜೆ ಆರಗ ಸೀಮೆಯಲ್ಲಿ ಜಾತ್ರೆ ಸಾರಲಾಗುತ್ತದೆ. ದಿನಾಂಕ 27-03-2024ರ ಬುಧವಾರ ಸಂಜೆ 4.30ಕ್ಕೆ ರಾಜಬೀದಿ ಉತ್ಸವದೊಂದಿಗೆ ಜಯಪುರದಲ್ಲಿ ಗೊಂಬೆ ವಿಸರ್ಜನೆ, ಅತೀ ವಿಜೃಂಭಣೆಯಿಂದ ನಡೆಯಲಿದೆ. ಪ್ರತಿದಿನ “ಧಾರ್ಮಿಕ ಕಾರ್ಯಕ್ರಮ” ನಡೆಯಲಿದ್ದು. ಮಾರ್ಚ್ 25ರ ಸೋಮವಾರ ರಾತ್ರಿ 8 ಗಂಟೆಗೆ ಸರಿಯಾಗಿ ಆರಗದ ಹಳೇಕೋಟೆ ಕ್ರೀಡಾಂಗಣದಲ್ಲಿ “ಶಿವದೂತ ಗುಳಿಗ” ವಿಭಿನ್ನ ಶೈಲಿಯ ಕನ್ನಡ ನಾಟಕ ಪ್ರದರ್ಶನವಿದೆ.

ಮಾರ್ಚ್ 20 ರಿಂದ ಪ್ರತಿ ದಿನ 7 ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಇರುತ್ತದೆ. 26-03-2024ರ ಮಂಗಳವಾರ ಸಂಜೆ ಹಾಗೂ 27-03-2024ರ ಬುಧವಾರ ಮಧ್ಯಾಹ್ನ ಅನ್ನಸಂತರ್ಪಣೆ ಇರುತ್ತದೆ. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಈ ಎಲ್ಲಾ ಕಾರ್ಯಕ್ರಮಕ್ಕೂ ಆದರದ ಸ್ವಾಗತವನ್ನು ಬಯಸುವ ಆಡಳಿತ ಮಂಡಳಿ ಅಧ್ಯಕ್ಷರು: ಕೃಷ್ಣಮೂರ್ತಿ ಕಡೆಗದ್ದೆ, ಕಾರ್ಯದರ್ಶಿ: ವಿಷ್ಣುಮೂರ್ತಿ ದಾವಣಿ ಬೈಲು, ಖಜಾಂಚಿ: ಶ್ಯಾಮಣ್ಣ ಕಾಳಮ್ಮನ ಗುಡಿ ಹಾಗೂ ಆಡಳಿತ ಮಂಡಳಿ. ಚಂದವಳ್ಳಿ ಸೋಮಶೇಖರ್, ಆರಗ ಪ್ರಕಾಶ್, ಎಆರ್ ಗಂಗಾಧರ್, ಶಿವರಾಜ್ ಆರಗ, ಶಶಿಧರ್, ಭೋಜರಾಜ್ ಬಿ. ಟಿ, ಅಗಳ ಬಾಗಿಲು ಮಹೇಶ್,ಆನೆ ಮಹಲ್ ಪ್ರಕಾಶ್ ,ಎಸ್ ಎನ್ ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದು ಸಾರ್ವಜನಿಕರಲ್ಲಿ ತನು-ಮನ-ಧನದೊಂದಿಗೆ ಸಹಕಾರ ಜೊತೆಗೆ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಂಡಿದ್ದಾರೆ.

Categories
ತೀರ್ಥಹಳ್ಳಿ

ಪುನೀತ್ ನೆನಪಿನೋತ್ಸವ: ಸಂಜೆ ಪುನೀತ್ ಪುನೀತ್ ನೈಟ್ಸ್!

ಪುನೀತ್ ನೆನಪಿನೋತ್ಸವ: ಸಂಜೆ ಪುನೀತ್ ಪುನೀತ್ ನೈಟ್ಸ್!
– ವಿಶ್ವಮಾನವ ಕನ್ನಡ ವೇದಿಕೆ, ಪುನೀತ್ ಬ್ರಿಗೇಡ್ ಸಂಸ್ಥೆಯಿಂದ ರಕ್ತದಾನ
– ಟಿವಿ ಖ್ಯಾತ ಕಲಾವಿದರಿಂದ ಮ್ಯೂಸಿಕ್ ನೈಟ್ಸ್, ಕಾಮಿಡಿ, ವಿಶೇಷ ನಾಟಕ
– ಸಮಸ್ತ ಜನತೆಗೆ ಸ್ವಾಗತ: ಪುನೀತ್ ಹಬ್ಬದ ಸಂಭ್ರಮ

NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ಸಮೀಪ ಕಲ್ಲುಕೊಡಿಗೆಯಲ್ಲಿ ವಿಶ್ವ ಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆ ವತಿಯಿಂದ ಪುನೀತ್ ನೆನಪಿನೋತ್ಸವ ಕಾರ್ಯಕ್ರಮ ಶುರುವಾಗಿದೆ. ಈಗಾಗಲೇ ರಕ್ತದಾನ, ನೇತ್ರದಾನ ನೋಂದಣಿ, ಸಾಮಾಜಿಕ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಖ್ಯಾತ ಸಿನಿಮಾ ಕಲಾವಿದರಿಂದ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, 7 ಸ್ಥಳಗಳಲ್ಲಿ ಗೋವು ಹಾಗೂ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣದಂತ ಕಾರ್ಯಕ್ರಮ ನಡೆದಿದೆ ಸಂಜೆ ವೇದಿಕೆ ಕಾರ್ಯಕ್ರಮ 6ಕ್ಕೆ ನಡೆಯಲಿದೆ. ಸಿನಿಮಾ ನಟ, ನಟಿಯರು ಆಗಮಿಸಲಿದ್ದು ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಸಂಜೆ 7 ಗಂಟೆಗೆ ಸಿನಿಮಾ, ಟಿವಿ ಕಲಾವಿದರಿಂದ ವಿಶೇಷ ಪುನೀತ್ ಮ್ಯೂಸಿಕ್ಸ್ ನೈಟ್ಸ್, ಕಾಮಿಡಿ, ಪ್ರಸಿದ್ಧ ನಾಟಕ ಚಿಟ್ಟೆ ಪ್ರದರ್ಶನಗೊಳ್ಳಲಿದೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಲೋಕ ಸಮರಕ್ಕೆ ಉಡುಪಿ-ಚಿಕ್ಕಮಗಳೂರು ಸಜ್ಜು!

ಲೋಕ ಸಮರಕ್ಕೆ ಉಡುಪಿ-ಚಿಕ್ಕಮಗಳೂರು ಸಜ್ಜು!
– ಕ್ಷೇತ್ರದಲ್ಲಿ 1842 ಮತಗಟ್ಟೆ ಸ್ಥಾಪನೆ: ಎಲ್ಲಾ ಸಿದ್ಧತೆ
– ಮದುವೆ,ಜಾತ್ರೆ, ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ

NAMMUR EXPRESS NEWS
ಉಡುಪಿ: ಏ.26ರಂದು ನಡೆಯುವ ಲೋಕಸಭೆ ಚುನಾವಣೆಯ ಮತದಾನಕ್ಕೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿದ್ಧತೆ ಈಗಾಗಲೇ ಪೂರ್ಣಗೊಂಡಿದೆ. ಶನಿವಾರ ತಾನೇ ಚುನಾವಣೆ ದಿನಾಂಕ ಪ್ರಕಟಗೊಂಡಿದೆ. ಉಡುಪಿ ಡಿಸಿ ವಿದ್ಯಾ ಕುಮಾರಿ ಮಾಹಿತಿ ನೀಡಿ, ಉಡುಪಿ -ಚಿಕ್ಕಮಗಳೂರು ಕ್ಷೇತ್ರವು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 7,62,558 ಪುರುಷ ಮತದಾರರು, 8,10,362 ಮಹಿಳಾ ಮತದಾರರು, 38 ಇತರರು ಸೇರಿದಂತೆ ಒಟ್ಟು 15,72,958 ನೋಂದಾಯಿತ ಮತದಾರರು ಕ್ಷೇತ್ರದಲ್ಲಿದ್ದಾರೆ. ಕ್ಷೇತ್ರದಲ್ಲಿ 1842 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಪ್ರಕ್ರಿಯೆಯು ಜೂನ್ 06, 2024 ರಂದು ಕೊನೆಗೊಳ್ಳುತ್ತದೆ. ಪ್ರಕ್ರಿಯೆ ನಡೆಸಲು ನಾಲ್ಕು ARO ಗಳನ್ನು ನೇಮಿಸಲಾಗಿದೆ. ಮಾನವಶಕ್ತಿ ನಿರ್ವಹಣೆ, ತರಬೇತಿ, ವಸ್ತು ನಿರ್ವಹಣೆ, ವಾಹನ ನಿರ್ವಹಣೆ, ಐಟಿ ಇಲಾಖೆ, ಸ್ವೀಪ್ ನೋಡಲ್, ಎಂಸಿಸಿ, ಕಾನೂನು ಮತ್ತು ಸುವ್ಯವಸ್ಥೆ, ಭದ್ರತಾ ಯೋಜನೆ, ಇವಿಎಂ ನಿರ್ವಹಣೆ, ವೆಚ್ಚ ನಿಗಾ ತಂಡಗಳಿಗೆ 16 ನೋಡಲ್ ಅಧಿಕಾರಿಗಳನ್ನು ರಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 14 ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸಲಿವೆ

“ಕಾರ್ಯಕ್ರಮದ ಸುಗಮ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಹಲವು ಐಟಿ ಅಪ್ಲಿಕೇಶನ್‌ಗಳನ್ನು ಸಹ ಸ್ಥಾಪಿಸಲಾಗಿದೆ. ವಿವಿಧ ಕಾರ್ಯಕ್ರಮಗಳು ಮತ್ತು ಪ್ರಚಾರ ಚಟುವಟಿಕೆಗಳಿಗಾಗಿ ಎಲ್ಲಾ ಅನುಮತಿ-ಸಂಬಂಧಿತ ಪ್ರಕ್ರಿಯೆಗಳಿಗೆ ಸುವಿಧಾ ಅಪ್ಲಿಕೇಶನ್ ಅನ್ನು ಬಳಸಲಾಗುತ್ತದೆ. ಸಿ-ವಿಜಿಲ್, ಮತದಾರರ ಸಹಾಯವಾಣಿ, ಸಕ್ಷಮ್‌ನಂತಹ ಅಪ್ಲಿಕೇಶನ್‌ಗಳನ್ನು ಸಹ ಬಳಸಲಾಗುತ್ತದೆ. ನೀತಿ ಸಂಹಿತೆಯ ಉಲ್ಲಂಘನೆಗಳ ವಶಪಡಿಸಿಕೊಳ್ಳುವಿಕೆಯನ್ನು ನಿರ್ವಹಿಸಲು ESMS- ಚುನಾವಣಾ ಸೀಜರ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಎಂಬ ಹೊಸ ಅಪ್ಲಿಕೇಶನ್ ಅನ್ನು ಬಳಸಲಾಗುತ್ತದೆ.

“ಜಿಲ್ಲೆಯಲ್ಲಿ ಒಟ್ಟು 14 ಚೆಕ್‌ಪೋಸ್ಟ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೇಲ್ವಿಚಾರಣೆಗಾಗಿ ಸ್ಥಾಪಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ತಂಡಗಳು ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲಿವೆ. ಮಾದರಿ ನೀತಿ ಸಂಹಿತೆ ಜೂನ್ 6, 2024 ರವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ.

ಧಾರ್ಮಿಕ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಮತಿ ಕುರಿತು ಮಾತನಾಡಿದ ಡಾ.ವಿದ್ಯಾಕುಮಾರಿ, ”ದೇವಸ್ಥಾನದ ಜಾತ್ರೆ, ಮದುವೆ ಮತ್ತಿತರ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕು. ಕ್ರಿಕೆಟ್ ಪಂದ್ಯಗಳಿಗೂ ಅನುಮತಿ ಪಡೆಯಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯ ಅನುಮತಿಗಳನ್ನು ಪಡೆಯುವ ಮೂಲಕ ಪೂರ್ವ ನಿರ್ಧರಿತ ಕಾರ್ಯಕ್ರಮಗಳನ್ನು ಸಹ ನಡೆಸಬಹುದು. ರಾಜಕೀಯ ನಾಯಕರು ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗಿದ್ದರೆ, ಅದನ್ನು ಖರ್ಚಿಗೆ ಲೆಕ್ಕ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಿ ಎಂದು ಮನವಿ ಮಾಡಿದ ಜಿಲ್ಲಾಧಿಕಾರಿಗಳು ಬಾಲಕಾರ್ಮಿಕರನ್ನ ಚುನಾವಣೆ ಪ್ರಚಾರಕ್ಕೆ ಬಳಸುವಂತೆ ಇಲ್ಲ.ವೈಯುಕ್ತಿಕ ನಿಂದನೆ, ಧಾರ್ಮಿಕ ವಿಚಾರ ಕೆರಳಿಸುವಂತ ಮತಪ್ರಚಾರ ಮಾಡುವಂತಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

Categories
ಬೆಂಗಳೂರು ರಾಜ್ಯ ರಾಷ್ಟ್ರೀಯ ವಾರ್ತೆ

ಲೋಕ ಸಮರಕ್ಕೆ ಸಜ್ಜು: ನಿಯಮಗಳೇನು?

ಲೋಕ ಸಮರಕ್ಕೆ ಸಜ್ಜು: ನಿಯಮಗಳೇನು?
– 28 ಕ್ಷೇತ್ರಗಳಲ್ಲೂ ಆಡಳಿತ ಅಲರ್ಟ್
– ಮದುವೆ,ಜಾತ್ರೆ ಅನುಮತಿ ಕಡ್ಡಾಯ
– ನೀತಿ ಸಂಹಿತೆ ಜಾರಿ: ಏನ್ ಮಾಡಬಹುದು, ಏನ್ ಮಾಡಬಾರದು?

NAMMUR EXPRESS NEWS
ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮತದಾನಕ್ಕೆ ಈಗಾಗಲೇ ಸಿದ್ಧತೆ ಶುರುವಾಗಿದೆ. ಶನಿವಾರ ತಾನೇ ಚುನಾವಣೆ ದಿನಾಂಕ ಪ್ರಕಟಗೊಂಡಿದ್ದು ರಾಜ್ಯದ 28 ಕ್ಷೇತ್ರಗಳಲ್ಲೂ ಜಿಲ್ಲಾಡಳಿತ, ಚುನಾವಣೆ ವಿಭಾಗ ಭರದಿಂದ ತಯಾರಿ ನಡೆಸುತ್ತಿದೆ.
ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಶನಿವಾರ ಜಾರಿಗೆ ಬಂದಿದೆ. ಪ್ರತಿ ಲೋಕ ಸಭಾ ಕ್ಷೇತ್ರಗಳಲ್ಲಿ ಮಾನವಶಕ್ತಿ ನಿರ್ವಹಣೆ, ತರಬೇತಿ, ವಸ್ತು ನಿರ್ವಹಣೆ, ವಾಹನ ನಿರ್ವಹಣೆ, ಐಟಿ ಇಲಾಖೆ, ಸ್ವೀಪ್ ನೋಡಲ್, ಎಂಸಿಸಿ, ಕಾನೂನು ಮತ್ತು ಸುವ್ಯವಸ್ಥೆ, ಭದ್ರತಾ ಯೋಜನೆ, ಇವಿಎಂ ನಿರ್ವಹಣೆ, ವೆಚ್ಚ ನಿಗಾ ತಂಡಗಳಿಗೆ ನೋಡಲ್ ಅಧಿಕಾರಿಗಳನ್ನು ರಚಿಸಲಾಗಿದೆ. ಪ್ರತಿ ಲೋಕ ಸಭಾ ಕ್ಷೇತ್ರದಲ್ಲಿ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸಲಿವೆ.

“ಕಾರ್ಯಕ್ರಮದ ಸುಗಮ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಹಲವು ಐಟಿ ಅಪ್ಲಿಕೇಶನ್‌ಗಳನ್ನು ಸಹ ಸ್ಥಾಪಿಸಲಾಗಗುತ್ತಿದೆ. ಸಿ-ವಿಜಿಲ್, ಮತದಾರರ ಸಹಾಯವಾಣಿ, ಸಕ್ಷಮ್‌ನಂತಹ ಅಪ್ಲಿಕೇಶನ್‌ಗಳನ್ನು ಸಹ ಬಳಸಲಾಗುತ್ತದೆ. ನೀತಿ ಸಂಹಿತೆಯ ಉಲ್ಲಂಘನೆಗಳ ವಶಪಡಿಸಿಕೊಳ್ಳುವಿಕೆಯನ್ನು ನಿರ್ವಹಿಸಲು ESMS- ಚುನಾವಣಾ ಸೀಜರ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಎಂಬ ಹೊಸ ಅಪ್ಲಿಕೇಶನ್ ಅನ್ನು ಬಳಸಲಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿರುವ ತಂಡಗಳು ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲಿವೆ. ಮಾದರಿ ನೀತಿ ಸಂಹಿತೆ ಜೂನ್ 6, 2024 ರವರೆಗೆ ಜಾರಿಯಲ್ಲಿರುತ್ತದೆ.

ಮದುವೆ ಜಾತ್ರೆಗೂ ಅನುಮತಿ ಕಡ್ಡಾಯ!

ಧಾರ್ಮಿಕ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಮತಿ ಕುರಿತು ಮಾತನಾಡಿದ ಡಾ.ವಿದ್ಯಾಕುಮಾರಿ, ”ದೇವಸ್ಥಾನದ ಜಾತ್ರೆ, ಮದುವೆ ಮತ್ತಿತರ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕು. ಕ್ರಿಕೆಟ್ ಪಂದ್ಯಗಳಿಗೂ ಅನುಮತಿ ಪಡೆಯಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯ ಅನುಮತಿಗಳನ್ನು ಪಡೆಯುವ ಮೂಲಕ ಪೂರ್ವ ನಿರ್ಧರಿತ ಕಾರ್ಯಕ್ರಮಗಳನ್ನು ಸಹ ನಡೆಸಬಹುದು. ರಾಜಕೀಯ ನಾಯಕರು ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗಿದ್ದರೆ, ಅದನ್ನು ಖರ್ಚಿಗೆ ಲೆಕ್ಕ ಹಾಕಲಾಗುತ್ತದೆ. ಬಾಲಕಾರ್ಮಿಕರನ್ನ ಚುನಾವಣೆ ಪ್ರಚಾರಕ್ಕೆ ಬಳಸುವಂತೆ ಇಲ್ಲ.ವೈಯುಕ್ತಿಕ ನಿಂದನೆ, ಧಾರ್ಮಿಕ ವಿಚಾರ ಕೆರಳಿಸುವಂತ ಮತಪ್ರಚಾರ ಮಾಡುವಂತಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಏಪ್ರಿಲ್ 26ಕ್ಕೆ ಎಲ್ಲೆಲ್ಲಿ ಮತದಾನ?

ಚಿತ್ರದುರ್ಗ
ಉಡುಪಿ-ಚಿಕ್ಕಮಗಳೂರು
ದಕ್ಷಿಣ ಕನ್ನಡ
ಹಾಸನ
ತುಮಕೂರು
ಚಿಕ್ಕಬಳ್ಳಾಪುರ
ಕೋಲಾರ
ಮಂಡ್ಯ
ಮೈಸೂರು-ಕೊಡಗು
ಚಾಮರಾಜನಗರ
ಬೆಂಗಳೂರು ಗ್ರಾಮಾಂತರ
ಬೆಂಗಳೂರು ದಕ್ಷಿಣ
ಬೆಂಗಳೂರು ಉತ್ತರ
ಬೆಂಗಳೂರು ಕೇಂದ್ರ

ಮೇ 7ರಂದು ಎಲ್ಲೆಲ್ಲಿ ಮತದಾನ?

ಬೆಳಗಾವಿ
ಬಳ್ಳಾರಿ
ಚಿಕ್ಕೋಡಿ
ಹಾವೇರಿ-ಗದಗ
ಕಲಬುರಗಿ
ಬೀದರ್​
ಹುಬ್ಬಳಿ – ಧಾರವಾಡ
ಕೊಪ್ಪಳ
ರಾಯಚೂರು
ಉತ್ತರ ಕನ್ನಡ
ದಾವಣಗೆರೆ
ಶಿವಮೊಗ್ಗ
ಬಾಗಲಕೋಟೆ
ವಿಜಯಪುರ

ಮತ ದಾನ ಮಾಡಿ ನಿಮ್ಮ ಹಕ್ಕು ಚಲಾಯಿಸಿ..!

Categories
ತೀರ್ಥಹಳ್ಳಿ

ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕದ 2ನೇ ವರ್ಷದ ವಾರ್ಷಿಕೋತ್ಸವ..!

ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕದ 2ನೇ ವರ್ಷದ ವಾರ್ಷಿಕೋತ್ಸವ..!
– ಭಾನುವಾರ ಕಮ್ಮರಡಿಯಲ್ಲಿ ಸ್ವಚ್ಛ ಕಮ್ಮರಡಿ ಆಂದೋಲನ..!
– ಮಾ.20 ರಂದು ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಪೌರಾಣಿಕ ಯಕ್ಷಗಾನ

NAMMUR EXPRESS NEWS
ತೀರ್ಥಹಳ್ಳಿ: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕದ 2 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಮ್ಮರಡಿ ಘಟಕ ಹಾಗೂ ಭಾರತೀಯ ಯೋಗ ಶಿಕ್ಷಣ ಪುರುಷ ಮತ್ತು ಮಹಿಳಾ ಘಟಕ ಕಮ್ಮರಡಿ ವತಿಯಿಂದ ಮಾ.17 ರ ಭಾನುವಾರ ಕಮ್ಮರಡಿಯ ಸುತ್ತಮುತ್ತಲಿನ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಮ್ಮರಡಿಯನ್ನು ಸ್ವಚ್ಛ ಹಾಗೂ ಸುಂದರವಾಗಿ ಮಾಡುವುದಕ್ಕಾಗಿ ನಮ್ಮ ಕಮ್ಮರಡಿ ನಮ್ಮ ಹೆಮ್ಮೆ ಎಂಬ ವಿಶೇಷ ಸ್ವಚ್ಛತಾ ಆಂದೋಲನವನ್ನು ಕಮ್ಮರಡಿಯ ಸಜ್ಜನ ನಾಗರಿಕ ಬಂಧುಗಳ ಸಹಕಾರದೊಂದಿಗೆ ನಡೆಸಲಾಗುವುದು.

ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವುದು ನಮ್ಮ ಆದ್ಯ ಕರ್ತವ್ಯ. ಈ ಸ್ವಚ್ಛತಾ ಆಂದೋಲನದಲ್ಲಿ ಕಮ್ಮರಡಿಯ ಸುತ್ತಮುತ್ತಲಿನ ಎಲ್ಲರೂ ಪಾಲ್ಗೊಂಡು ಸ್ವಚ್ಛ ಹಾಗೂ ಸುಂದರ ಮಾದರಿ ಕಮ್ಮರಡಿಯನ್ನಾಗಿ ಮಾಡುವ ಶಪಥ ಮಾಡೋಣ ಎಂದು ತಂಡ ವಿನಂತಿಸಿದೆ. ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀಮಠ ಹರಿಹರಪುರ ಇವರ ಕೃಪಾಶೀರ್ವಾದದೊಂದಿಗೆ ಮಾ.20 ರ ಬುಧವಾರ ಸಂಜೆ 6:30ಕ್ಕೆ ಕಮ್ಮರಡಿಯ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ. ಸರ್ವರಿಗೂ ಆದರದ ಸ್ವಾಗತ.

Categories
ಕಾರ್ಕಳ

ಕಾರ್ಕಳದಲ್ಲಿ ಹಲಸು ಹವಾ..!

ಕಾರ್ಕಳದಲ್ಲಿ ಹಲಸು ಹವಾ..!
– ಉದ್ಯೋಗ ಸೃಷ್ಟಿಯತ್ತ ಹಲಸಿನ ಹಣ್ಣು
– ಹಲಸು ಸಂಸ್ಕರಣಾ ಘಟಕ ಉದ್ಘಾಟನೆ

NAMMUR EXPRESS NEWS
ಕಾರ್ಕಳ : ನಿಟ್ಟೆ ಪಡುಬಿದ್ರೆ ಹೆದ್ದಾರಿಯಲ್ಲಿರುವ ಹಲಸು ಸಂಸ್ಕರಣಾ ಘಟಕವು ಘಟಕವು ಡಾ. ಎ. ಪಿ ಆಚಾರ್ಯ ಅವರ ಕನಸಿನ ಕೂಸಾಗಿದೆ. ಅವರ ಮೂಲಕ ಸುಫಲ ರೈತ ಉತ್ಪಾದಕ ಘಟಕವು ಸುಮಾರು ಮೂರು ವರುಷಗಳ ಕಾಲ ಹಲಸಿನ ಹಣ್ಣಿನ ಬಗ್ಗೆ ಅಧ್ಯಯನ ಮಾಡಿ, ಅದರಿಂದ ತಯಾರಿಸಲಾಗುವ ವಿವಿಧ ಖಾದ್ಯಗಳು ಮತ್ತು ಆರೋಗ್ಯಕ್ಕೆ ಆಗುವ ಉಪಯೋಗಗಳ ಮೂಲಕ, ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದು, ಅವರಿಗೆ ಆರ್ಥಿಕವಾಗಿ ಸಹಕಾರಿಯಾಗಲು ಈ ಘಟಕದ ನಿರ್ಮಾಣವಾಗಿದೆ. ಹಲಸು ಬೆಳೆಗಾರರಿಗೆ ಉತ್ತಮ ಆದಾಯ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಂಎಸ್ಎಂಇಯ ಅಧೀನದಲ್ಲಿ ಹಾಗೂ ಧರ್ಮಸ್ಥಳ ಸಿರಿ ಉತ್ಪನ್ನ ಘಟಕದ ಮೂಲಕ ಈ ಸುಫಲ ರೈತ ಉತ್ಪಾದಕ ಘಟಕವು ನಿರ್ಮಾಣ ಗೊಂಡಿರುತ್ತದೆ.

ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಬೆಂಬಲದಿಂದ ಸುಫಲ ರೈತ ಉತ್ಪಾದಕ ಕಂಪನಿ ಆಶ್ರಯದಲ್ಲಿ ಅಟಲ್ ಇಂಕ್ಯುಬೇಷನ್ ಸೆಂಟರ್ ನ ಹಲಸು ಸಂಸ್ಕರಣಾ ಘಟಕ ನಿಟ್ಟೆಯಲ್ಲಿ ಸಿದ್ದಗೊಂಡಿದೆ. ಹಲಸಿನ ಕೃಷಿಯ ಮೂಲಕ ಸಮುದಾಯದ ಸಬಲೀಕರಣ ಉತ್ತೇಜಿಸುವ ನಿಟ್ಟಿನಲ್ಲಿ ಹಲಸು ಸಂಸ್ಕರಣ ಘಟಕ ಕಾರ್ಯಚರಿಸಲಿದೆ. ದಿನಕ್ಕೆ 6 ಸಾವಿರ ಹಲಸು ಸಂಸ್ಕರಣೆ 20 ಟನ್ ಸಂಗ್ರಹ ಸಾಮರ್ಥ್ಯವನ್ನು ಘಟಕ ಹೊಂದಿದೆ. ಬಿಸಿ ನೀರಿನಲ್ಲಿ ಶುಚಿಗೊಳಿಸುವ ಲೆಂಚಿಂಗ್ ಮೆಷಿನ್ ಪಲ್ಟಿoಗ್ ಮೆಷಿನ್, ಹವೆಯಿಂದ ಕಾರ್ಯಚರಿಸುವ ಹಲ್ವಾ ಮೇಕಿಂಗ್ ಮೆಷಿನ್, ಬೃಹತ್ ಬಾಯ್ಲರ್, ಪ್ಯಾಕಿಂಗ್ ಮೆಷಿನ್, ಆಯಿಲ್ ಕಂಟ್ರೋಲರ್, ಬೃಹತ್ ಫ್ರಿಡ್ಜ್, ಬ್ಯಾಕ್ಟೀರಿಯಾ ನಿಯಂತ್ರಿಸುವ ಮೆಷಿನ್ ಹೀಗೆ ಅತ್ಯಾಧುನಿಕ ತಂತ್ರಜ್ಞಾನ, ಸಾಮಾನ್ಯ ಸೌಲಭ್ಯ ಘಟಕ ಹೊಂದಿದೆ.

ಹಲಸು ಹಣ್ಣು ಮಾತ್ರವಲ್ಲದೆ ಇತರ ಹಣ್ಣುಗಳು ಮತ್ತು ತರಕಾರಿಗಳನ್ನು ಸಹ ಸಂಸ್ಕರಿಸುತ್ತದೆ. ಘಟಕವು ಒಂದು ಕೋಟಿ ರೂ ವೆಚ್ಚದಲ್ಲಿ ಕಟ್ಟಡ, ಮೂರು ಕೋಟಿ ರೂ ವೆಚ್ಚದಲ್ಲಿ ವಿವಿಧ ಯಂತ್ರಗಳು ಸೇರಿ ಸುಮಾರು 6.5 ಕೋಟಿ ರೂ ವೆಚ್ಚದಲ್ಲಿ ಸಂಸ್ಕರಣ ಘಟಕ ಚಟುವಟಿಕೆ ಆರಂಭಿಸಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಘಟಕ ಕಾರ್ಯರಾಂಬಿಸುತ್ತಿದ್ದು ಸುಮಾರು ಒಂದು ಸಾವಿರ ಉದ್ಯೋಗ ಸೃಷ್ಟಿಸುವ ಸಾಧ್ಯತೆಗಳಿದ್ದು ಮಹಿಳೆಯರಿಗೆ ವಿಫಲ ಉದ್ಯೋಗಾವಕಾಶಗಳನ್ನು ಕೇಂದ್ರ ಒದಗಿಸಲಿದೆ. ರೈತರಿಗೆ ಆದಾಯ ಹೆಚ್ಚಳ, ಮಾರುಕಟ್ಟೆ ಪ್ರವೇಶ ಸುಧಾರಣೆ, ಸುಸ್ಥಿರ ಕೃಷಿ ಉತ್ತೇಜಿಸಲು ಘಟಕ ಸಹಕಾರಿಯಾಗಿದೆ. ಕರಾವಳಿ ಭಾಗದಲ್ಲಿ ಹಲಸು ಹಣ್ಣುಗಳಿದ್ದು, ಹಲಸು ಸಂಸ್ಕರಣ ಘಟಕಕ್ಕೆ ಅಗತ್ಯವಿರುವ ಹಲಸು ಪೈಕಿ ಶೇ.50 ಅನ್ನು ಉಡುಪಿ, ದ. ಕ ಜಿಲ್ಲೆಯಿಂದ ಸಿಗಲಿದೆ.

ಉಳಿದಂತೆ ರಾಜ್ಯದ ಇತರ ಜಿಲ್ಲೆ, ಪಕ್ಕದ ಕೇರಳ, ತಮಿಳುನಾಡು ಮುಂತಾದ ಕಡೆಗಳಿಂದ ಆಮದು ತರಿಸಿಕೊಳ್ಳಲು ಸಿದ್ಧತೆ ನಡೆಸಿದ್ದು ಹಲಸು ಬೆಳೆಗಾರರ ಸಂಘ ರಚಿಸಲಾಗಿದೆ. ಆರಂಭದಲ್ಲಿ 150 ಪ್ರೊಡಕ್ಟ್ ಉತ್ಪಾದಿಸಲಾಗುತ್ತಿದೆ. ಸಿರಿ ಸಂಸ್ಥೆ ಎಂ ಟಿ ಆರ್ ಮೊದಲಾದ ಬ್ರಾಂಡ್ ಉತ್ಪನ್ನಗಳು ಹಾಗೂ ವಿದೇಶಿ ಕಂಪನಿಗಳ ಜೊತೆ ಮಾರುಕಟ್ಟೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ಚಿಪ್ಸ್, ಜ್ಯೂಸ್, ಪಾಯಸ, ಇಡ್ಲಿ, ದೋಸೆ, ಗಟ್ಟಿ, ಪತ್ತೋಳಿ, ಮಾಂಬಳ, ಮುಳಕ, ಗೆಣಸಲೆ, ಬನ್ಸ್, ಶೀರಾ, ಹೋಳಿಗೆ, ಹಪ್ಪಳ ಹೀಗೆ ಹಲವು ಬಗೆಯ ಖಾದ್ಯಗಳನ್ನು ಹಲಸಿನಿಂದ ತಯಾರಿಸಲಾಗುತ್ತಿದೆ. ಬೀಜ ಕೂಡ ಪದಾರ್ಥ, ಖಾದ್ಯ ತಯಾರಿಕೆಗೆ ಬಳಕೆಯಾಗುತ್ತಿದೆ. ನಿಟ್ಟೆ ಸುಫಲ ರೈತ ಉತ್ಪಾದಕ ಮತ್ತು ಹಲಸು ಸಂಸ್ಕರಣಾ ಘಟಕದ ಉದ್ಘಾಟನಾ ಸಮಾರಂಭವು ಮಾ. 15ರಂದು ನೆರವೇರಿದೆ.

Categories
ಬೆಂಗಳೂರು ರಾಜ್ಯ

ಲೋಕ ಸಭಾ ಚುನಾವಣೆ ದಿನಾಂಕ ಫಿಕ್ಸ್!

ಲೋಕ ಸಭಾ ಚುನಾವಣೆ ದಿನಾಂಕ ಫಿಕ್ಸ್!
– ದೇಶದಲ್ಲಿ 7 ಹಂತಗಳಲ್ಲಿ ಮತದಾನ
– ಏಪ್ರಿಲ್ 26, ಮೇ 7ರಂದು ಮತದಾನ

NAMMUR EXPRESS NEWS
ಬೆಂಗಳೂರು: ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮುಂಬರುವ ಲೋಕಸಭೆ ಚುನಾವಣೆ ದಿನಾಂಕವನ್ನು ಶನಿವಾರ ಪ್ರಕಟಿಸಿದರು. ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಇಂದಿನಿಂದಲೇ ಜಾರಿಗೆ ಬರಲಿದೆ. ಮತ್ತೊಂದೆಡೆ, ಲೋಕಸಭೆ ಚುನಾವಣೆಗೆ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಚುನಾವಣಾ ದಿನಾಂಕ ಪ್ರಕಟವಾದ ದಿನವೇ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರಚಾರ ಕಹಳೆ ಮೊಳಗಿಸಿದ್ದಾರೆ.

ಏಪ್ರಿಲ್ 26, ಮೇ 7ರಂದು ಮತದಾನ ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ. ದಕ್ಷಿಣ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆದರೆ, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

ಏಪ್ರಿಲ್ 26ಕ್ಕೆ ಎಲ್ಲೆಲ್ಲಿ ಮತದಾನ?

ಚಿತ್ರದುರ್ಗ
ಉಡುಪಿ-ಚಿಕ್ಕಮಗಳೂರು
ದಕ್ಷಿಣ ಕನ್ನಡ
ಹಾಸನ
ತುಮಕೂರು
ಚಿಕ್ಕಬಳ್ಳಾಪುರ
ಕೋಲಾರ
ಮಂಡ್ಯ
ಮೈಸೂರು-ಕೊಡಗು
ಚಾಮರಾಜನಗರ
ಬೆಂಗಳೂರು ಗ್ರಾಮಾಂತರ
ಬೆಂಗಳೂರು ದಕ್ಷಿಣ
ಬೆಂಗಳೂರು ಉತ್ತರ
ಬೆಂಗಳೂರು ಕೇಂದ್ರ

ಮೇ 7ರಂದು ಎಲ್ಲೆಲ್ಲಿ ಮತದಾನ?

ಬೆಳಗಾವಿ
ಬಳ್ಳಾರಿ
ಚಿಕ್ಕೋಡಿ
ಹಾವೇರಿ-ಗದಗ
ಕಲಬುರಗಿ
ಬೀದರ್​
ಹುಬ್ಬಳಿ – ಧಾರವಾಡ
ಕೊಪ್ಪಳ
ರಾಯಚೂರು
ಉತ್ತರ ಕನ್ನಡ
ದಾವಣಗೆರೆ
ಶಿವಮೊಗ್ಗ
ಬಾಗಲಕೋಟೆ
ವಿಜಯಪುರ

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ದೇಶದಲ್ಲಿ ಒಟ್ಟು 97 ಕೋಟಿ ನೋಂದಾಯಿತ ಮತದಾರರಿದ್ದಾರೆ. 10.5 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳು ಇವೆ. 1.5 ಕೋಟಿ ಸಿಬ್ಬಂದಿ, 55 ಲಕ್ಷ ಇವಿಎಂಗಳಿಂದ ಚುನಾವಣೆ ನಿರ್ವಹಿಸಲ್ಪಡುತ್ತವೆ. ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಜಯ ಗಳಿಸಿತ್ತು. ಉಳಿದಂತೆ ಜೆಡಿಎಸ್ ಒಂದು ಸ್ಥಾನ ಹಾಗೂ ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನ ಗಳಿಸಿದ್ದರು.

Categories
ಶಿವಮೊಗ್ಗ

ಟಾಪ್ ನ್ಯೂಸ್ ಶಿವಮೊಗ್ಗ

ಕಾರಿಗೆ ಬೆಂಕಿ ಹಚ್ಚಿ ಯುವಕನೋರ್ವನನ್ನು ಭೀಕರ ಕೊಲೆ!
– ಭತ್ತ, ಒಣ ಹುಲ್ಲಿಗೆ ಬೆಂಕಿ ತಗುಲಿ ಭಸ್ಮ
– ಎರಡು ಬೈಕ್‌ ಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವರ ಸ್ಥಿತಿ ಗಂಭೀರ.!
– ನೇಣು ಬೀಗಿದ ರೀತಿಯಲ್ಲಿ ಶವ ಪತ್ತೆ.!
– ಬೈಕ್ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸಾವು.!

NAMMUR EXPRESS NEWS
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ, ಶಿವಮೊಗ್ಗದ ಯುವಕನೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದ್ದು, ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಗಾಡಿಕೊಪ್ಪದ ಮೈಸೂರು ಬೀದಿ ನಿವಾಸಿ ವೀರೇಶ್ (27) ಹತ್ಯೆಗೀಡಾದ ಯುವಕ ಎಂದು ಹೇಳಲಾಗಿದ್ದು, ತೋಗರ್ಸಿ ಹೊರವಲಯದ ಸ್ಮಶಾನದ ಬಳಿ ಈ ಘಟನೆ ನಡೆದಿದೆ. ಆತ ಕೊಂಡೊಯ್ದ ಇನ್ನೋವಾ ಕಾರಿನ ಡಿಕ್ಕಿಯಲ್ಲಿ, ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹಂತಕರು ಕಾರಿಗೆ ಬೆಂಕಿ ಹಚ್ಚಿ ಸುಟ್ಟಿರುವುದರಿಂದ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ರಾತ್ರಿ ಗಾಡಿಕೊಪ್ಪದ ಮನೆಯಲ್ಲಿದ್ದ ಯುವಕನಿಗೆ, ಕೆಲ ಪರಿಚಿತರು ಆತನ ಮೊಬೈಲ್ ಫೋನ್ ಗೆ ಕರೆ ಮಾಡಿದ್ದರು.

ಸ್ನೇಹಿತರೋರ್ವರ ಇನ್ನೋವಾ ಕಾರಿನಲ್ಲಿ ವೀರೇಶ್ ತೆರಳಿದ್ದರು. ನಂತರ ಮನೆಗೆ ಹಿಂದಿರುಗಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಡಿವೈಎಸ್‌ಪಿ ಕೇಶವ್, ಇನ್ಸ್ ಪೆಕ್ಟರ್ ರುದ್ರೇಶ್, ಶಿರಾಳಕೊಪ್ಪ ಠಾಣೆ ಸಬ್ ಇನ್ಸ್’ಪೆಕ್ಟರ್ ರಮೇಶ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ.

– ಭತ್ತ, ಒಣ ಹುಲ್ಲಿಗೆ ಬೆಂಕಿ ತಗುಲಿ ಭಸ್ಮ

ಸೊರಬ : ಚಂದ್ರಗುತ್ತಿ ಸಮೀಪ ಕಮಲಾಪುರ ಗ್ರಾಮದಲ್ಲಿ ಬೆಂಕಿ ತಗುಲಿ ಭತ್ತದ ಹುಲ್ಲಿನ ಪೆಂಡಿ ಹಾಗೂ ಭತ್ತ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟವಾದ ಘಟನೆ ಬೆಳಿಗ್ಗೆ ಸಂಭವಿಸಿದೆ. ಕಮಲಾಪುರ ಗ್ರಾಮದ ಸರ್ವೆ ನಂ. 6ರಲ್ಲಿನ ನಾಗರಾಜ ಮತ್ತು 7ರಲ್ಲಿನ ಶೇಖರ ಎಂಬುವವರಿಗೆ ಸೇರಿದ ಪಕ್ಕದ ಜಮೀನಿನಲ್ಲಿ ಯಾರೋ ತರಗೆಲೆಗಳಿಗೆ ಹಚ್ಚಿದ ಬೆಂಕಿಯ ಕಿಡಿ ಇವರ ಜಮೀನಿಗೆ ಆವರಿಸಿ ಜಮೀನಿನಲ್ಲಿದ್ದ ಭತ್ತದ ಹುಲ್ಲು ಮತ್ತು ಕಟಾವು ಮಾಡಿದ್ದ ಭತ್ತಕ್ಕೆ ಆವರಿಸಿ ಸುಮಾರು ಮೂರು ಸಾವಿರ ಹುಲ್ಲಿನ ಪೆಂಡಿ ಮತ್ತು ಹತ್ತು ಕ್ವಿಂಟಾಲ್ ಭತ್ತ ಸಂಪೂರ್ಣ ಭಸ್ಮವಾಗಿದೆ. ಇದರಲ್ಲಿ ನಾಗರಾಜ ಅವರಿಗೆ ಸೇರಿದ 2 ಸಾವಿರ ಹುಲ್ಲಿನ ಪೆಂಡಿ, 10 ಕ್ವಿಂಟಾಲ್ ಭತ್ತ ಹಾಗೂ ಶೇಖರ ಅವರಿಗೆ ಸೇರಿದ 1 ಸಾವಿರ ಹುಲ್ಲಿನ ಪೆಂಡಿ ಎಂದು ತಿಳಿದು ಬಂದಿದೆ. ಅಕ್ಕಪಕ್ಕದ ಜಮೀನಿನಲ್ಲಿ ಯಾವುದೇ ಬೆಳೆ ಇಲ್ಲದ ಕಾರಣ ಬೆಂಕಿ ಮುಂದುರೆದಿಲ್ಲ. ತಾಲೂಕಿನಲ್ಲಿ ಆವರಿಸಿರುವ ಬರದ ನಡುವೆಯೂ ಭತ್ತ ಬೆಳೆದ ತಮಗೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಮಾರು ಒಂದು ಲಕ್ಷ ರೂ.ಗಳಷ್ಟು ಫಸಲು ನಾಶವಾಗಿದೆ.

ಬ್ಯಾಂಕ್‌ ಮತ್ತು ಖಾಸಗಿ ಸಂಘ-ಸಂಸ್ಥೆಗಳಲ್ಲಿ ಬೆಳೆಗಾಗಿ ಸಾಲ ಮಾಡಿದ್ದ ನಮಗೆ ಇದರಿಂದ ಜೀವನ ನಿರ್ವಹಣೆ ಇನ್ನಷ್ಟು ಬಿಗಡಾಯಿಸಿದೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಪ್ರಕರಣ ದಾಖಲಿಸಿಕೊಂಡು ಪರಿಹಾರ ನೀಡುವಂತೆ ಹುಲ್ಲು ಮತ್ತು ಭತ್ತ ಕಳೆದುಕೊಂಡ ನಾಗರಾಜ ಮತ್ತು ಶೇಖರ ಅಧಿಕಾರಿಗಳ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಚಂದ್ರಗುತ್ತಿ ಪೊಲೀಸ್ ಠಾಣೆಯ ದಫೇದಾ‌ರ್ ಸಂತೋಷ್ ಮತ್ತು ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿ ರಮೇಶ್ ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

– ಎರಡು ಬೈಕ್‌ ಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವರ ಸ್ಥಿತಿ ಗಂಭೀರ.!

ಸಾಗರ : ತಾಲೂಕಿನ ಆನಂದಪುರದ ಸಂತೆ ಮಾರ್ಕೆಟ್ ರಸ್ತೆಯ ಬಳಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಆನಂದಪುರದಿಂದ ತಾವರೆಹಳ್ಳಿ ಹೋಗುವ ಬೈಕ್ ಸವಾರರಿಗೂ ಹಾಗೂ ಎಡೆ ಹಳ್ಳಿಯಿಂದ ಆನಂದಪುರದ ಕಡೆ ಬರುತ್ತಿದ್ದ ಬೈಕ್ ಸವಾರರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಸತ್ಯನಾರಾಯಣ ಎಂಬುವರಿಗೆ ತೀವ್ರ ಪೆಟ್ಟಾಗಿದ್ದು ಅವರನ್ನು ತಕ್ಷಣವೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಬೈಕ್ ಸವಾರನನ್ನು ಕೂಡ ಅಲ್ಲಿಯ ಆಸ್ಪತ್ರೆಗೆ ರವಾನಿಸಲಾಗಿದೆ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

– ನೇಣು ಬೀಗಿದ ರೀತಿಯಲ್ಲಿ ಶವ ಪತ್ತೆ.!

ಸಾಗರ: ತಾಲೂಕಿನ ಆಲಳ್ಳಿ ಸಮೀಪ ಕುಮಟಾದಲ್ಲಿ ಸುಮಾರು 45 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು. ಶವವು ನೋಡಲು ನೇಣು ಬೀಗಿದ ರೀತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಹೆಸರು ಉಪೇಂದ್ರ ಎಂದು ಗುರುತಿಸಲಾಗಿದೆ. ಹಾಗೂ ಮೃತರ ಕುಟುಂಬ ಸಿದ್ದಾಪುರದಲ್ಲಿ ನೆಲೆಸಿದ್ದು, ಸ್ಥಳಕ್ಕೆ ಪೋಲೀಸರು ಆಗಮಿಸಿ ತನಿಕೆ ನಡೆಸಿದ್ದಾರೆ. ಮೃತರ ಕುಟುಂಬಸ್ತರ ಸುಳಿವು ಇನ್ನು ಪತ್ತೆಯಾಗಿಲ್ಲ.ಆದರಿಂದ ಕುಟುಂಬದವರ ಪತ್ತೆಗಾಗಿ ಶೋಧ ನಡೆಯುತ್ತಿದೆ. ಹಾಗೂ ಪ್ರಕರಣ ವನ್ನು ಗ್ರಾಮಾಂತರ ಪೋಲಿಸ್ ಠಾಣೆಯುಲ್ಲಿ ದಾಖಲಾಗಿದೆ.

-ಬೈಕ್ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸಾವು.!

ಸಾಗರ : ತಾಲೂಕಿನ ಆನಂದಪುರ ಸಮೀಪದ ಹೊಸಕೊಪ್ಪ ಸಂಜೆ 7 ಗಂಟೆಗೆ ಹೊಸಕೊಪ್ಪ ಗ್ರಾಮಕ್ಕೆ ಬೈಕ್ ಸವಾರ ತಿರುಗುತ್ತಿದ್ದ ವೇಳೆ ಹಿಂಬದಿ ಯಿಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ತಕ್ಷಣ ಗಾಯಾಳುಗಳನ್ನು ಆನಂದಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ವಿರೂಪಾಕ್ಷಪ್ಪ ಹಾಗೂ ಷಣ್ಮುಖಪ್ಪ ಎಂಬವರಿಗೆ ತೀವ್ರ ಗಾಯವಾಗಿತ್ತು. ಮೆಣಸಿನಸರ ಗ್ರಾಮದ ನಿವಾಸಿ ಷಣ್ಮುಖಪ್ಪ ( 65 ) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಎರಡು ಬೈಕ್‌ ಗಳನ್ನು ಆನಂದಪುರ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.