Categories
ಬೆಂಗಳೂರು ರಾಜ್ಯ

ಈತನ ಎದೆಯೊಳಗೆ ಹೃದಯವೇ ಇಲ್ಲ

ಈತನ ಎದೆಯೊಳಗೆ ಹೃದಯವೇ ಇಲ್ಲ
– ಎಲೆಕ್ಟ್ರಿಕ್‌ ಡಬ್ಬದಲ್ಲಿ ಕೇಳುತ್ತೆ ಲಬ್‌ ಡಬ್‌ ಸೌಂಡ್!
– ಸಿಲಿಕಾನ್ ಸಿಟಿಯಲ್ಲಿ ಮೊದಲ ಆರ್ಟಿಫಿಶಿಯಲ್ ಹಾರ್ಟ್ ಅಳವಡಿಕೆ
-ಹಾರ್ಟ್​ಮೇಟ್​ 3 ಬ್ಯಾಟರಿ ಮೂಲಕ ಹೃದಯ ಕೆಲಸ

NAMMUR EXPRESS NEWS
ಬೆಂಗಳೂರು: ಜನರ ಜೀವ ಉಳಿಸಲು ವೈದ್ಯ ಲೋಕದಲ್ಲಿ ಒಂದಲ್ಲ ಒಂದು ಹೊಸ ಪ್ರಯೋಗ ನಡೆಯುತ್ತಲೇ ಇರುತ್ತದೆ. ಸದ್ಯ ಬೆಂಗಳೂರು ವೈದ್ಯರ ಸಾಧನೆಗೆ ಎಲ್ಲರೂ ಶಹಬಾಷ್‌ ಹೇಳುತ್ತಿದ್ದಾರೆ. ಜೀವ ಕೈಚೆಲ್ಲಿದ್ದ ವ್ಯಕ್ತಿಗೆ ಕೃತಕ ಹೃದಯವನ್ನು ಅಳವಡಿಸಿ ಹೊಸ ಜೀವನವನ್ನು ವೈದ್ಯರು ಕಟ್ಟಿಕೊಟ್ಟಿದ್ದಾರೆ. ಈ ವ್ಯಕ್ತಿಗೆ ಹೃದಯವು ಎದೆಯೊಳಗಿಲ್ಲ, ಬದಲಿಗೆ ಬ್ಯಾಗ್‌ನಲ್ಲಿರುವ ಎಲೆಕ್ಟ್ರಿಕ್‌ ಡಬ್ಬದಲ್ಲಿದೆ. ದುರ್ಬಲ ಹೃದಯ ತೆಗೆದು ಕೃತಕ ಹೃದಯ ಅಳವಡಿಕೆ ಮಾಡಲಾಗಿದೆ. ಈ ಹೃದಯವು ದೇಹದೊಳಗೆ ಇರವುದಿಲ್ಲ. ಬದಲಾಗಿ ಬ್ಯಾಗ್‌ನಲ್ಲಿಟ್ಟುಕೊಂಡು ಸಾಗಬೇಕಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ವ್ಯಕ್ತಿಗೆ ಹೃದಯಾಘಾತದಿಂದ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರು. ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಕೃತಕ ಹೃದಯ ಅಳವಡಿಕೆ ಮಾಡಿ ವೈದ್ಯರು ಮರು ಜನ್ಮ ನೀಡಿದ್ದಾರೆ. ಇದೇ ಮೊದಲ ಬಾರಿಗೆ ರಾಜಧಾನಿಯ ಖಾಸಗಿ ಆಸ್ಪತ್ರೆಯ ವೈದ್ಯರು ಕೃತಕ ಹೃದಯ ಅಳವಡಿಕೆ ಮಾಡಿದ್ದಾರೆ. ಇದು ರಾಜ್ಯದ ಮೊದಲ 3rd ಜನೆರೇಶನ್ ಎಲ್ ಬಿ ಯಶಸ್ವಿ ಕೃತಕ ಹೃದಯ ಕಸಿ ಚಿಕಿತ್ಸೆ ಆಗಿದೆ.

ದುರ್ಬಲವಾಗಿದ್ದ ಹೃದಯವನ್ನು ಬದಲಿಸಿ ಕೃತಕ ಹೃದಯವನ್ನು ವೈದ್ಯರು ಅಳವಡಿಕೆ ಮಾಡಿದ್ದಾರೆ. ಅಂದಹಾಗೇ ಈ ಕೃತಕ ಮಷಿನ್ ಬ್ಲೆಡ್ ಪಂಪ್ ಮಾಡುತ್ತದೆ. ಬ್ಯಾಗ್‍ನಲ್ಲಿರುವ ಬ್ಯಾಟರಿಗಳು, ಎಲೆಕ್ಟ್ರಿಕ್ ಮೋಟರ್ ಮತ್ತು ಟ್ಯೂಬ್‍ಗಳ ಮೂಲಕ ಗಾಳಿಯನ್ನು ಪಂಪ್ ಮಾಡುತ್ತದೆ. ಅದು ಕೃತಕ ಹೃದಯದ ಕೋಣೆಗಳಿಗೆ ಶಕ್ತಿ ನೀಡುತ್ತದೆ. ಈ ಮೂಲಕ ದೇಹದಲ್ಲೆಲ್ಲಾ ರಕ್ತ ಸಂಚಾರಗೊಳ್ಳುತ್ತದೆ. ಹೀಗಾಗಿ ಹೃದಯ ಇಲ್ಲದೆಯೂ ಕೃತಕ ಹೃದಯದ ಮೂಲಕ ಜೀವನ ಪೂರ್ತಿ ಬದುಕು ಸಾಗಿಸುವ ಶಕ್ತಿ ನೀಡಲಾಗಿದೆ. ಇನ್ನು ಈ ಚಿಕಿತ್ಸೆಗೆ 1 ಕೋಟಿ 10 ಲಕ್ಷ ರೂ. ಖರ್ಚು ಆಗಿದೆ. ರಾಜ್ಯದಲ್ಲಿಯೇ ಮೊದಲ 3rd ಜನರೇಶನ್ ಕೃತಕ ಹೃದಯ ಅಳವಡಿಕೆ ಮಾಡಿರುವ ಖ್ಯಾತಿಯು ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ.ಅಶ್ವಿನಿ ಕುಮಾರ್ ಅವರಿಗೆ ಸಲ್ಲುತ್ತದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣದಲ್ಲಿ ಅಪಘಾತ!

ತೀರ್ಥಹಳ್ಳಿ ಪಟ್ಟಣದಲ್ಲಿ ಅಪಘಾತ!
– ಕಾರು – ಮಿನಿ ಟಿಪ್ಪರ್ ಅಪಘಾತ: ಅಪಾಯದಿಂದ ಪಾರು
– ಪಟ್ಟಣದಲ್ಲಿ ದಿನೇ ದಿನೇ ಹೆಚ್ಚಿದ ಅನಾಹುತ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಬಾಳೆಬೈಲು ಸಮೀಪ ಹೆಗಡೆ ಪೆಟ್ರೋಲ್ ಬಂಕ್ ಸಮೀಪ ಮಾರುತಿ ಬಲೆನೋ ಕಾರು ಹಾಗೂ  ಮಿನಿ ಟಿಪ್ಪರ್ ನಡುವೆ ಶನಿವಾರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಟಿಪ್ಪರ್ ಗುದ್ದಿದ ರಭಸಕ್ಕೆ ಮಾರುತಿ ಬಲೆನೋ ಕಾರ್ ಹಿಂಭಾಗ ನುಚ್ಚುಗುಜ್ಜಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾರುತಿ ಬಲಿನೋ ಕಾರು ಯು ಟರ್ನ್ ತೆಗೆದುಕೊಂಡ ಕಾರಣ ಸಂಭವಿಸಿದ ಅಪಘಾತ ಮಿನಿ ಟಿಪ್ಪರ್ ಬಂದು ಕಾರಿನ ಹಿಂಭಾಗಕ್ಕೆ ಗುದ್ದಿದೆ.

ಹೈವೇ, ವಾಹನ ಹೆಚ್ಚಾಗಿ ಅಪಘಾತ!

ಹೊಸ ರಸ್ತೆ ಬಳಿಕ ವಾಹನ ಅಪಘಾತ ಹೆಚ್ಚುತ್ತಿದೆ. ಇನ್ಮು ಈ ರಸ್ತೆಯಲ್ಲಿ ವಾಹನ ಸಂಖ್ಯೆ ಕೂಡ ಹೆಚ್ಚಿದೆ. ಮರಳು ಸಾಗಣೆ ವಾಹನ ಸಂಖ್ಯೆ ಕೂಡ ಹೆಚ್ಚಿದೆ.

Categories
ತೀರ್ಥಹಳ್ಳಿ ಬೆಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ವೇಷ ಮರೆಸಿಕೊಂಡು ಶಂಕಿತರ ಓಡಾಟ: ಸುಳಿವು ಕೊಟ್ಟರೆ 10 ಲಕ್ಷ ರೂ. ಬಹುಮಾನ!

ವೇಷ ಮರೆಸಿಕೊಂಡು ಶಂಕಿತರ ಓಡಾಟ: ಸುಳಿವು ಕೊಟ್ಟರೆ 10 ಲಕ್ಷ ರೂ. ಬಹುಮಾನ!
– ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಿಸಿದವರ ಅಸಲಿ ಫೋಟೋ ಬಹಿರಂಗ
– ಐಡೆಂಟಿಟಿ ಮರೆ ಮಾಚಲು ನಕಲಿ ಗಡ್ಡ, ನಕಲಿ ವಿಗ್!

NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಆರೋಪಿಗಳಾದ ಅಬ್ದುಲ್ ಮತೀನ್ ಅಹಮದ್ ತಾಹ ಹಾಗೂ ಆತನ ಸಹಚರ ಮುಸಾವಿರ್ ಹುಸ್ಸೇನ್ ಅವರ ಫೋಟೋವನ್ನು ಎನ್‌ಐಎ ಬಿಡುಗಡೆ ಮಾಡಿದೆ. ಆರೋಪಿಗಳ ಸುಳಿವು ನೀಡುವವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಈಗಾಗಲೇ ಅವರಿಗಾಗಿ ರಾಜ್ಯದ ಹಲವು ಕಡೆ ಶೋಧ ನಡೆಯುತ್ತಿದೆ. ಕರಾವಳಿ, ಮಲೆನಾಡು, ಬೆಂಗಳೂರು ಭಾಗದಲ್ಲಿ ಇವರ ಜಾಡು ಪತ್ತೆ ಮಾಡಲಾಗುತ್ತಿದೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಮಾಡಿ ಪರಾರಿ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾರ್ಚ್ 1 ರಂದು ನಡೆದಿದ್ದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹುಡುಕಾಟ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಿಗಳ ಫೋಟೋವನ್ನು ಹಂಚಿಕೊಂಡಿದೆ. ಅಬ್ದುಲ್ ಮತೀನ್ ಅಹಮದ್ ತಾಹ ಹಾಗೂ ಆತನ ಸಹಚರ ಮುಸಾವಿರ್ ಹುಸ್ಸೇನ್ ಎಂಬ ಆರೋಪಿಗಳ ಫೋಟೋವನ್ನು ಹಂಚಿಕೊಂಡಿದ್ದು, ಈ ಆರೋಪಿಗಳ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಘೋಷಣೆ ಮಾಡಿದೆ. ಅಬ್ದುಲ್ ಮತೀನ್ ಅಹಮದ್ ತಾಹಾ ಹಾಗೂ ಮುಸಾವಿರ್ ಹುಸ್ಸೇನ್ ಶಾಜಿಬ್ ಇಬ್ಬರ ಪೋಟೋ ಬಿಡುಗಡೆ ಮಾಡಲಾಗಿದೆ. ಇಬ್ಬರು ಶಂಕಿತರ ತಲಾ 3 ಮಾದರಿಯ ಪೋಟೋ ಬಿಡುಗಡೆ ಮಾಡಿದೆ. ಶಂಕಿತರು ಹೇಗೆ ಇರಬಹುದು ಎಂಬುದರ ಮಾಹಿತಿಯನ್ನು ಎನ್‌ಐಎ ನೀಡಿದೆ

ಹಿಂದೂ ಹೆಸರಿಟ್ಟುಕೊಂಡು ಓಡಾಟ!

ಎನ್ ಐ ಎ ಬಿಡುಗಡೆ ಮಾಡಿದ ವಾಂಟೆಡ್ ಲಿಸ್ಟ್ ನಲ್ಲಿ ಸ್ಪೋಟಕ ವಿಚಾರ ಬಯಲಿಗೆ ಬಂದಿದೆ. ಅಬ್ದುಲ್ ಮತೀನ್ ಅಹಮದ್ ತಾಹಾ ಹಿಂದೂ ಯುವಕನ ರೀತಿಯಲ್ಲಿರೋದು ಪತ್ತೆಯಾಗಿದೆ. ಬಾಂಬ್ ಬ್ಲಾಸ್ಟ್ ಮಾಡಿದ ಆರೋಪಿ ಅಬ್ದುಲ್ ಮತೀನ್ ತಾಹ ತಾನು ಹಿಂದೂ ಹೆಸರು ಹೇಳಿಕೊಂಡು ದೇಶದ ವಿವಿಧ ನಗರಗಳಲ್ಲಿ ಸಂಚಾರ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಈತ ತಲೆ ಮರೆಸಿಕೊಳ್ಳಲು ವಿಘ್ನೇಶ್ ಹಾಗೂ ಸುಮಿತ ಎಂಬ ಹೆಸರನ್ನು ಇಟ್ಟುಕೊಂಡು ಓಡಾಡುತ್ತಿದ್ದಾನೆ. ಜೊತೆಗೆ, ವಿಘ್ನೇಶ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್‌ ಕೂಡ ಮಾಡಿಸಿಕೊಂಡಿದ್ದಾನೆ.

ಬೇರೊಬ್ಬರ ಹೆಸರಲ್ಲಿ ಡ್ರೈವಿಂಗ್ ಲೈಸೆನ್ಸ್‌

ಇನ್ನು ಬಾಂಬ್ ಹಾಕಿದ ಆರೋಪಿ ಅಬ್ದುಲ್ ಮತೀನ್ ತಾಹನ ಸಹಚರ ಮುಸಾವೀರ್ ಹುಸ್ಸೇನ್ ಶಾಜಿಬ್ ಕೂಡ ತಲೆ ಮರೆಸಿಕೊಂಡಿದ್ದಾರೆ. ಈತನು ಕೂಡ ಹೇಗಿರಬಹುದು ಎಂಬ 3 ಮಾದರಿಯ ಫೋಟೋ ಹಂಚಿಕೊಳ್ಳಲಾಗಿದೆ. ಇನ್ನು ಮುಸಾವೀರ್ ಹುಸ್ಸೇನ್ ಶಾಜಿಬ್ ಕೂಡ ತನ್ನ ಹೆಸರನ್ನು ಬದಲಿಸಿಕೊಂಡು ದೇಶದ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದಾನೆ. ಈತ ಮಹಮ್ಮದ್ ಜುನೇದ್ ಸೈಯದ್ ಎಂಬ ಹೆಸರಿನಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾನೆ. ಶಂಕಿತರಿಬ್ಬರು ತಮ್ಮ ಐಡೆಂಟಿಟಿ ಮರೆ ಮಾಚಲು ನಕಲಿ ಗಡ್ಡ, ನಕಲಿ ವಿಗ್ ಬಳಸುತ್ತಿದ್ದಾರೆ ಎಂದು ಎನ್‌ಐಎ ಮಾಹಿತಿ ನೀಡಿದೆ.

Categories
ಬೆಂಗಳೂರು ರಾಜ್ಯ

ಬೆಂಗಳೂರು ಟಾಪ್ 5 ನ್ಯೂಸ್..!

ಬೆಂಗಳೂರು ಟಾಪ್ 5 ನ್ಯೂಸ್..!
– ಬೆಂಗಳೂರು: ಕರುವಿನ ಮೇಲೆ ಕಾರು ಹತ್ತಿಸಿ ಪ್ರಾಣ ತೆಗೆದ ಪಾಪಿ.!
– ಗುದನಾಳಕ್ಕೆ ಪೈಪ್‌ನಿಂದ ಗಾಳಿ ಬಿಟ್ಟ ಸ್ನೇಹಿತ: ಯುವಕ ಸಾವು!
– ಬಸ್ ನಲ್ಲಿ ಕುಳಿತಾಗ ಹೃದಯಾಘಾತ: ಹಾರಿಹೋಯ್ತು ವೃದ್ಧನ ಪ್ರಾಣಪಕ್ಷಿ!
– ರಾಜಕಾಲುವೆ ಬಳಿ ಶುಚಿರಹಿತ ಫಲೂಡಾ ತಯಾರಿಕೆ: ನೋಟಿಸ್
– ಬಿಬಿಎಂಪಿ: ಇಬ್ಬರು ಮಾರ್ಷಲ್‌ಗಳ ವಜಾ..!

NAMMUR EXPRESS NEWS
ಬೆಂಗಳೂರು: ರಸ್ತೆಯಲ್ಲಿ ಕರು ಮಲಗಿರುವುದನ್ನು ಕಂಡರೂ ಸಹ ಕಾರು ಚಾಲಕನೊಬ್ಬ ಮೂಕ ಪ್ರಾಣಿಯ ಮೇಲೆ ಕಾರು ಹತ್ತಿಸಿಕೊಂಡ ಹೋದ ಅಮಾನವೀಯ ಘಟನೆ ನಡೆದಿದೆ. ಕಳೆದ ತಿಂಗಳು 25 ರಂದು ನಡೆದಿರುವ ಘಟನೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕರು ಚಕ್ರದಡಿ ಸಿಲುಕಿದ್ರೂ ಸಹ ಕರುಣೆ ತೋರದೆ ಕಾರು ಚಾಲಕ ಕ್ರೌರ್ಯ ಮೆರೆದಿದ್ದಾನೆ.

ಬೆಂಗಳೂರು: ಗುದನಾಳಕ್ಕೆ ಏರ್‌ ಪ್ರೆಶ‌ರ್ ಪೈಪ್‌ನಿಂದ ಗಾಳಿ ಬಿಟ್ಟ ಸ್ನೇಹಿತ:
ಕರುಳು ಛಿದ್ರವಾಗಿ ಯುವಕ ಸಾವು!:

ಬೆಂಗಳೂರು: ತಮಾಷೆಗಾಗಿ ಸ್ನೇಹಿತನ ಗುದದ್ವಾರಕ್ಕೆ ಏರ್ ಪ್ರೆಶರ್ ಪೈಪ್‌ನಿಂದ ಗಾಳಿ ಬಿಟ್ಟ ಪರಿಣಾಮ ಒತ್ತಡ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಛಿದ್ರವಾಗಿ ಯುವಕ ಮೃತಪಟ್ಟಿರುವ ಘಟನೆ ಇಲ್ಲಿನ ಸಂಪಿಗೆಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮಾ.25ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯೋಗೇಶ್ (24) ಎಂಬಾತ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದ್ದು, ಆರೋಪಿ ಮುರುಳಿ ಎಂಬವನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಸ್ ಏರಿ ಕುಳಿತಾಗಲೇ ಹಠಾತ್ ಹೃದಯಾಘಾತ; ಹಾರಿ ಹೋಯ್ತು ವೃದ್ಧನ ಪ್ರಾಣ ಪಕ್ಷಿ:

ಬೆಂಗಳೂರು: ಹೃದಯಾಘಾತ ವೃದ್ಧರೊಬ್ಬರ ಪ್ರಾಣವನ್ನು ಬಲಿ ಪಡೆದಿದೆ. ಈಗೀಗ ಹೃದಯಾಘಾತ ಯಾವುದೇ ಕ್ಷಣದಲ್ಲಿ ಆಗಿಬಿಡಬಹುದು ಎನ್ನುವಷ್ಟು ಭಯಾನಕವಾಗಿದೆ. ಕುಳಿತಲ್ಲೇ, ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುವ, ನಿಂತಲ್ಲೇ ಉಸಿರು ನಿಲ್ಲುವ, ಮಲಗಿದ್ದಲ್ಲೇ ಉಸಿರು ಚೆಲ್ಲುವ ವಿದ್ಯಮಾನಗಳು ಏಕಾಏಕಿ ಹೆಚ್ಚಾಗಿದೆ. ಇಂಥಹುದೇ ಒಂದು ಆತಂಕ ಮೂಡಿಸುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ದರೊಬ್ಬರು ಕುಳಿತಲ್ಲೇ ಕುಸಿದಿದ್ದು, ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಹಠಾತ್ ಹೃದಯಾಘಾತದಿಂದ ವೃದ್ಧ ಪ್ರಾಣ ಕಳೆದುಕೊಂಡಿದ್ದಾರೆ.
ಕೃಷ್ಣ (60) ಮೃತ ದುರ್ದೈವಿ. 11 ಗಂಟೆ ಸುಮಾರಿಗೆ ಮೆಜೆಸ್ಟಿಕ್ ನಿಲ್ದಾಣದಿಂದ ಬಸ್ ಹತ್ತಿದ್ದ ಕೃಷ್ಣ ಅವರು ಟಿಕೆಟ್ ಪಡೆದು ಸೀಟ್‌ನಲ್ಲಿ ಕುಳಿತುಕೊಂಡಿದ್ದರು. ನವರಂಗ್‌ ಬಳಿ ಬರುತ್ತಿದ್ದಂತೆ ಹದಿನೈದು ನಿಮಿಷದಲ್ಲೇ ಹೃದಯಾಘಾತವಾಗಿದೆ. ನೋಡನೋಡುತ್ತಿದ್ದಂತೆ ಬಸ್ಸಿನಲ್ಲೇ ಉಸಿರು ಚೆಲ್ಲಿದ್ದಾರೆ.

ಬೆಂಗಳೂರು:ರಾಜಕಾಲುವೆ ಬಳಿ ಶುಚಿರಹಿತ ಫಲೂಡಾ ತಯಾರಿಕೆ: ನೋಟಿಸ್:

ಬೆಂಗಳೂರು: ಶೇಷಾದ್ರಿಪುರ ರಾಜಕಾಲುವೆಯ ಪಕ್ಕದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವೊಂದರಲ್ಲಿ ಫಲೂಡಾ, ಐಸ್ ಕ್ರೀಂ, ಬಾದಾಮ್ ಹಾಲು ಉತ್ಪಾದನೆ ಘಟಕ ನಡೆಸಲಾಗುತ್ತಿದೆ’ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಭಾರತ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿವಿಎಂಪಿ) ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಹೈಕೋರ್ಟ್ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಬಿಬಿಎಂಪಿ: ಇಬ್ಬರು ಮಾರ್ಷಲ್‌ಗಳ ವಜಾ!

ಬೆಂಗಳೂರು: ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ ಬಳಿಯ ಪಾದಚಾರಿ ಮಾರ್ಗದಲ್ಲಿ ಬ್ಯಾಗ್‌ ಮಾರಾಟ ಮಾಡುತ್ತಿದ್ದ ಹಿರಿಯ ನಾಗರಿಕರೊಬ್ಬರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದ ಇಬ್ಬರು ಮಾರ್ಪಲ್‌ಗಳನ್ನು ಕೆಲಸದಿಂದ ಬಿಬಿಎಂಪಿ ವಜಾಗೊಳಿಸಿದೆ. ಬ್ಯಾಗ್‌ ಮಾರುತ್ತಿದ್ದ ಹಿರಿಯ ನಾಗರಿಕರಿಂದ ಬ್ಯಾಗ್‌ ಕಸಿದು, ಎಳೆದಾಡಿದ್ದ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಮಾರ್ಷಲ್‌ಗಳ ಮೇಲೆ ಆಕ್ರೋಶ ವ್ಯಕ್ತವಾಗತ್ತು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾ‌ರ್ ಗಿರಿನಾಥ್ ಅವರು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಮಾರ್ಷಲ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು.

Categories
ಮಂಗಳೂರು

ನದಿಯಲ್ಲಿ ತಾಯಿ, 1 ವರ್ಷದ ಮಗುವಿನ ಮೃತದೇಹ ಪತ್ತೆ!

ನದಿಯಲ್ಲಿ ತಾಯಿ, 1 ವರ್ಷದ ಮಗುವಿನ ಮೃತದೇಹ ಪತ್ತೆ!
– ಆತ್ಮಹತ್ಯೆ ಶಂಕೆ: ವಾರದ ಹಿಂದೆಯಷ್ಟೇ ಆಶ್ರಮದವೊಂದರಲ್ಲಿ ಮಗುವಿನ ಹುಟ್ಟುಹಬ್ಬ ಸಂಭ್ರಮಿಸಿದ್ದರು.!

NAMMUR EXPRESS NEWS
ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ನೇತ್ರಾವತಿ ನದಿಗೆ ಮಗುವಿನೊಂದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶುಕ್ರವಾರ ನಡೆದಿದೆ. ಹುಡುಕಾಟದ ಬಳಿಕ ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ.‌ ಮೃತ ಮಹಿಳೆಯನ್ನು ಅಡ್ಯಾರ್ ನಿವಾಸಿಯಾಗಿರುವ ನಾಗರಾಜ್ ಎಂಬವರ ಪತ್ನಿ ಚೈತ್ರಾ( 30) ಎಂದು ಗುರುತಿಸಲಾಗಿದೆ. ಚೈತ್ರ ಅವರು ತನ್ನ ಒಂದು ವರ್ಷದ ಮಗು ದಿಯಾಂಶ್ ಜತೆ ಮಧ್ಯಾಹ್ನ ಸೇತುವೆಯ ಬಳಿಗೆ ಆಟೊ ರಿಕ್ಷಾದಲ್ಲಿ ಬಂದಿದ್ದಎನ್ನಲಾಗಿದೆ. ಬಳಿಕ ನಡೆದುಕೊಂಡು ಬಂದು ಹರೇಕಳ ಕಡವಿನಬಳಿ ಬಂದಿದ್ದರು ಎನ್ನಲಾಗಿದೆ. ನದಿಯ ಸಮೀಪ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ಗಮನಿಸಿದ್ದರು. ಆದರೆ ಮಧ್ಯಾಹ್ನ ಬಳಿಕ ಆಕೆಯ ಮನೆಯವರು ಬಂದು ವಿಚಾರಿಸಿದ್ದು, ಆ ಬಳಿಕ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ತಿಳಿದಿತ್ತು.

ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ರಾತ್ರಿ 8.30 ರ ವೇಳೆಗೆ ಹರೇಕಳ ನೇತ್ರಾವತಿ ನದಿಯಲ್ಲಿ ತಾಯಿ ಮಗುವಿನ ಶವ ಪತ್ತೆಯಾಗಿದೆ. ಮಹಿಳೆಯು ಮಗುವಿನೊಂದಿಗೆ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.

ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿದ್ದರು!

ದಿಯಾಂಶ್ ಒಂದು ವರ್ಷದ ಹುಟ್ಟುಹಬ್ಬವನ್ನು ದೇರಳೆಕಟ್ಟೆಯ ಆಶ್ರಮವೊಂದರಲ್ಲಿ ವಾರದ ಹಿಂದೆಯಷ್ಟೇ ಆಚರಿಸಿದ್ದರೆಂಬ ಮಾಹಿತಿಯಿದೆ. ಆದರ್ಶಯುತವಾಗಿ ಮಗುವಿನ ಹುಟ್ಟುಹಬ್ಬ ಸಂಭ್ರಮಿಸಿ ಇಂದು ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿರುವುದರ ಕುರಿತು ಸಾರ್ವಜನಿಕ ವಲಯದಲ್ಲಿ ಸಂಶಯಗಳು ವ್ಯಕ್ತವಾಗಿದೆ. ಚೈತ್ರ ಪತಿ ನಾಗರಾಜ್ ದಿನಗೂಲಿ ನೌಕರರಾಗಿದ್ದು, ಪತ್ನಿ ಮಗುವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು ಎಂದು ಅವರ ಕುಟುಂಬವನ್ನು ಹತ್ತಿರದಿಂದ ಬಲ್ಲವರು ತಿಳಿಸಿದ್ದಾರೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Categories
ತೀರ್ಥಹಳ್ಳಿ ಮಲ್ನಾಡ್

ಮಲ್ನಾಡ್ ಕ್ಲಬ್ ಸದಸ್ಯರ ಮಾನವೀಯ ಕಾರ್ಯ!

ಮಲ್ನಾಡ್ ಕ್ಲಬ್ ಸದಸ್ಯರ ಮಾನವೀಯ ಕಾರ್ಯ!
– ಮೃತ ಪೃಥ್ವಿನ್ ಕುಟುಂಬಕ್ಕೆ ಸಹಾಯ
– 6 ಲಕ್ಷ ರೂ.ಪೃಥ್ವಿನ್ ತಾಯಿಯ ಹೆಸರಿನಲ್ಲಿ ನಿಶ್ಚಿತ ಠೇವಣಿ

NAMMUR EXPRESS NEWS
ತೀರ್ಥಹಳ್ಳಿ: ತೋಟಕ್ಕೆ ನೀರು ಹಾಯಿಸಲು ಹೋಗಿ ಆಕಸ್ಮಿಕವಾಗಿ ಮೃತನಾದ ವಿದ್ಯಾರ್ಥಿ, ಮಲ್ನಾಡ್ ಕ್ಲಬ್ ಸಿಬ್ಬಂದಿ ಪೃಥ್ವಿನ್ ಕುಟುಂಬಕ್ಕೆ ಕ್ಲಬ್ ಸಹೃದಯಿ ಸದಸ್ಯರು, ಕ್ಲಬ್ ಸಿಬ್ಬಂದಿಗಳು,ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ಎಲ್ಲರ ಸಹಕಾರದಿಂದ ಸಂಗ್ರಹವಾದ ರೂ 6.00 ಲಕ್ಷ ಮೊತ್ತವನ್ನು ಪೃಥ್ವಿನ್ ತಾಯಿ ವೀಣಾ ಹೆಸರಿನಲ್ಲಿ ನಿಶ್ಚಿತ ಠೇವಣಿ ಇರಿಸಲಾಗಿದ್ದು, ಪ್ರತಿ ತಿಂಗಳು ಅವರಿಗೆ ರೂ. 3700.00 ಬಡ್ಡಿಯ ರೂಪದಲ್ಲಿ ಸಿಗಲಿದೆ. ನಿಶ್ಚಿತ ಠೇವಣಿಯ ಬಾಂಡ್ ನ್ನು ಎಲ್ಲರ ಸಮ್ಮುಖದಲ್ಲಿ ವಿತರಿಸಲಾಯಿತು ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ಅಲ್ಲಿ ಶುಕ್ರವಾರ ಸಂಜೆ 6.30 ಕ್ಕೆ ಕ್ಲಬ್ ನ ಸಿಲ್ವರ್ ಜುಬಲಿ‌ ಹಾಲ್ ನಲ್ಲಿ ಪೃಥ್ವಿನ್ ಕುಟುಂಬಕ್ಕೆ ಸಹಾಯಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೃಷಿ ಇಲಾಖೆಯಿಂದ ರೈತರ ಆಕಸ್ಮಿಕ ಮರಣ ಪರಿಹಾರ ₹ 2.00 ಲಕ್ಷ ಮೊತ್ತದ ಪ್ರಸ್ತಾವನೆ ಮಂಜೂರಾತಿಯ ಅಂತಿಮ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಆ ಪರಿಹಾರ ಮೊತ್ತವೂ ಸಿಗಲಿದೆ ಎಂದು ಹಾಜರಿದ್ದ ಕೃಷಿ ಇಲಾಖೆಯ ಕೌಶಿಕ್ ತಿಳಿಸಿದರು. ತಹಸೀಲ್ದಾರ್ ಅಧ್ಯಕ್ಷತೆಯ ತಾಲ್ಲೂಕು ಮಟ್ಟದ ಸಮಿತಿಯಲ್ಲಿ ಪರಿಹಾರ ಅರ್ಜಿಯ ಶೀಘ್ರ ವಿಲೇವಾರಿಗೆ ಸಹಕರಿಸಿದ ತಹಸೀಲ್ದಾರ್, ಕಾರ್ಯ ನಿರ್ವಾಹಕಾಧಿಕಾರಿಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಲಾಯಿತು. ಕ್ಲಬ್ ಪ್ರಭಾರ ಅಧ್ಯಕ್ಷರಾದ ಶರಾವತಿ ಜಗದೀಶ್ ಹೆಗ್ಡೆ, ಪದವಿ ಕಾಲೇಜಿನ ಪ್ರಾoಶುಪಾಲರಾದ ಧರ್ಮಣ್ಣ, ಗೌರವ ಕಾರ್ಯದರ್ಶಿ ಎಸ್. ರಾಘವೇಂದ್ರ, ಕೃಷಿ ಇಲಾಖೆ ಅಧಿಕಾರಿಗಳಾದ ಕೌಶಿಕ್, ಕ್ಲಬ್ ನ ಆಡಳಿತ ಮಂಡಳಿ ಮತ್ತು ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಸಹಾಯ ಹಸ್ತ ಚಾಚಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದವನ್ನು ಅರ್ಪಿಸಲಾಯಿತು.

ತಮ್ಮ ತೋಟಕ್ಕೆ ನೀರು ಬಿಡುವ ಸಂದರ್ಭದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಪೃತ್ವಿನ್ ಮೃತಪಟ್ಟಿದ್ದ. ಆತನಿಗೆ ನಮನ ಸಲ್ಲಿಸಲಾಯಿತು.

ಸ್ನೇಹಿತನ ಸಹೋದರಿ ಕೈ ಹಿಡಿದ ಅಭಿಷೇಕ್!

ಇನ್ನು ತನ್ನ ಜತೆ ಇದ್ದ ಪೃಥ್ವಿನ್ ಅವರಅಕ್ಕ ಪೂಜಾ ಜೊತೆಗೆ ಕ್ಲಬ್ ಸಿಬ್ಬಂದಿಯಾದ ಅಭಿಷೇಕ್ ಮದುವೆ ನಿಶ್ಚಯವಾಗಿದ್ದು, ಆಧಾರವೇ ಇಲ್ಲದ ಕುಟುಂಬಕ್ಕೆ ಆಸರೆಯಾಗುತ್ತಿರುವ ಅಭಿಷೇಕ್ ಅವರಿಗೆ ಸರ್ವರೂ ಆಶೀರ್ವಾದ ಮಾಡಿದರು.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಇಂದು, ನಾಳೆ ಬ್ಯಾಂಕ್,ಎಲ್ ಐಸಿ ಕಚೇರಿಗಳು ಪೂರ್ಣ ದಿನ ಓಪನ್

ಇಂದು, ನಾಳೆ ಬ್ಯಾಂಕ್,ಎಲ್ ಐಸಿ ಕಚೇರಿಗಳು ಪೂರ್ಣ ದಿನ ಓಪನ್
– ಆ‌ರ್ ಬಿಐ ಅಧಿಸೂಚನೆ: ಮಾರ್ಚ್ ತಿಂಗಳ ಕೊನೆ ದಿನ
– ಐಟಿ ರಿಟರ್ನ್ಸ್ ಮಾಡೋದನ್ನು ಮರೆಯದಿರಿ

NAMMUR EXPRESS NEWS
ನವದೆಹಲಿ : ಜೀವ ವಿಮಾ ನಿಗಮ ಮಾರ್ಚ್ 30 ಮತ್ತು ಮಾರ್ಚ್ 31ರಂದು ತನ್ನ ಕಚೇರಿಗಳನ್ನ ತೆರೆದಿಡಲಿದ್ದು, ಹಣಕಾಸು ವರ್ಷ ಮುಗಿಯುವ ಮೊದಲು ತೆರಿಗೆ ಉಳಿತಾಯ ಕಾರ್ಯವನ್ನ ಪೂರ್ಣಗೊಳಿಸಲು ತೆರಿಗೆದಾರರಿಗೆ ಅನುಕೂಲವಾಗಲಿದೆ. ಶನಿವಾರ ಮತ್ತು ಭಾನುವಾರ ತಮ್ಮ ಶಾಖೆಗಳು ತೆರೆದಿರುತ್ತವೆ ಎಂದು ಬ್ಯಾಂಕುಗಳು ಘೋಷಿಸಿದ ನಂತರ ಎಲ್‌ಐಸಿ ಈ ಕ್ರಮ ಕೈಗೊಂಡಿದೆ. ಭಾರತದಲ್ಲಿ ಬ್ಯಾಂಕುಗಳಿಗೆ ಪ್ರತಿ ಭಾನುವಾರ ರಜೆ ಇರುತ್ತದೆ. ಇದಲ್ಲದೆ, ತಿಂಗಳ ಎರಡು ಶನಿವಾರಗಳಂದು ಬ್ಯಾಂಕುಗಳು ಸಹ ಮುಚ್ಚಲ್ಪಡುತ್ತವೆ. ಆದಾಗ್ಯೂ, ಈ ವಾರ ವಿಭಿನ್ನವಾಗಿದೆ. ಈ ವಾರ ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.

ಆ‌ರ್ ಬಿಐ ಅಧಿಸೂಚನೆ: ಇದಕ್ಕಾಗಿ ರಿಸರ್ವ್ ಬ್ಯಾಂಕ್ ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಮಾರ್ಚ್ 20, 2024 ರಂದು ರಿಸರ್ವ್ ಬ್ಯಾಂಕ್ ಹೊರಡಿಸಿದ ಅಧಿಸೂಚನೆಯಲ್ಲಿ ಎಲ್ಲಾ ಏಜೆನ್ಸಿ ಬ್ಯಾಂಕುಗಳ ಎಲ್ಲಾ ಶಾಖೆಗಳು ಮಾರ್ಚ್ 30 ಶನಿವಾರ ಮತ್ತು ಮಾರ್ಚ್ 31 ಭಾನುವಾರ ತೆರೆದಿರುತ್ತವೆ ಎಂದು ತಿಳಿಸಲಾಗಿದೆ. ಆ‌ರ್ ಬಿಐನ ಈ ಅಧಿಸೂಚನೆಯನ್ನು ಜಾರಿಗೆ ತರುತ್ತಿರುವ ಬ್ಯಾಂಕುಗಳ ಶಾಖೆಗಳು ಈ ವಾರ ಶನಿವಾರ ಮತ್ತು ಭಾನುವಾರ ತೆರೆದಿರುತ್ತವೆ. ಬಾಧಿತ ಬ್ಯಾಂಕುಗಳ ಉದ್ಯೋಗಿಗಳಿಗೆ ಈ ವಾರಾಂತ್ಯದಲ್ಲಿ ರಜೆ ಸಿಗುವುದಿಲ್ಲ.

Categories
ಜಾತಕ

ನಿಮ್ಮ ರಾಶಿಗೆ ಇವತ್ತು ಹೇಗಿದೆ?

ನಿಮ್ಮ ರಾಶಿಗೆ ಇವತ್ತು ಹೇಗಿದೆ?
– ಯಾವ ರಾಶಿಯವರಿಗೆ ಏನೆಲ್ಲಾ ಫಲ ಇವೆ…!
– ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

NAMMUR EXPRESS NEWS
2024 ಮಾರ್ಚ್ 30ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

* ಮೇಷ

ಪ್ರಮುಖ ವ್ಯಕ್ತಿಗಳೊಂದಿಗಿನ ಪರಿಚಯಗಳು ಭವಿಷ್ಯಕ್ಕೆ ಉಪಯುಕ್ತವಾಗಿರುತ್ತದೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ. ಹೊಸ ಉದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತದೆ. ಬಂಧು ಮಿತ್ರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ವ್ಯಾಪಾರ ಉದ್ಯೋಗಗಳು ಸುಗಮವಾಗಿ ಸಾಗುತ್ತವೆ.

* ವೃಷಭ

ಹೊಸ ವಾಹನ ಖರೀದಿಸುತ್ತೀರಿ. ಕೈಗೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ವೃತ್ತಿ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳು ಕಾರ್ಯಗತಗೊಳಿಸುತ್ತೀರಿ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಬಂಧು ಮಿತ್ರರಿಂದ ಅಮೂಲ್ಯ ಮಾಹಿತಿ ದೊರೆಯುತ್ತದೆ. ಕೆಲವು ವ್ಯವಹಾರಗಳಲ್ಲಿ ಆತ್ಮೀಯರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ.

* ಮಿಥುನ

ಆಧ್ಯಾತ್ಮಿಕ ಚಟುವಟಿಕೆಗಳತ್ತ ಗಮನ ಹರಿಸುತ್ತೀರಿ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಸಣ್ಣಪುಟ್ಟ ಅಡಚಣೆಗಳು ಉಂಟಾಗುತ್ತವೆ. ವ್ಯಾಪಾರ ವಿಸ್ತರಣೆಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಉದ್ಯೋಗದ ವಾತಾವರಣವು ಅಸ್ತವ್ಯಸ್ತವಾಗಿರುತ್ತದೆ ಮತ್ತು ಹಣಕಾಸಿನ ಪರಿಸ್ಥಿತಿ ನಿಧಾನವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗುತ್ತವೆ.

* ಕಟಕ

ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ. ಸಹೋದರರ ಸಹಕಾರದಿಂದ ಪ್ರಮುಖ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಉದ್ಯೋಗದ ವಾತಾವರಣ ಅನುಕೂಲಕರವಾಗಿರುತ್ತದೆ. ಪ್ರಮುಖ ವಿಷಯಗಳಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುತ್ತವೆ. ಬಾಲ್ಯದ ಸ್ನೇಹಿತರೊಂದಿಗೆ ಭೋಜನಾ, ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.

* ಸಿಂಹ

ಉದ್ಯೋಗದ ಪ್ರಯತ್ನಗಳು ಸ್ವಲ್ಪಮಟ್ಟಿಗೆ ಅನುಕೂಲಕರವಾಗಿರುತ್ತದೆ. ಆಪ್ತ ಸ್ನೇಹಿತರಿಂದ ಟೀಕೆಗಳು ಎದುರಾಗುತ್ತವೆ. ಆರ್ಥಿಕ ಪರಿಸ್ಥಿತಿ ತುಂಬಾ ಕಳಪೆಯಾಗಿರುತ್ತದೆ. ವಿವಾದಗಳಿಗೆ ಸಂಬಂಧಿಸಿದಂತೆ ದೂರದ ಸಂಬಂಧಿಕರಿಂದ ಪಡೆದ ಮಾಹಿತಿಯು ಸ್ವಲ್ಪ ಪರಿಹಾರವನ್ನು ನೀಡುತ್ತದೆ.

* ಕನ್ಯಾ

ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತವೆ. ಆರ್ಥಿಕ ಪರಿಸ್ಥಿತಿ ಹಿಂದಿಗಿಂತ ಉತ್ತಮವಾಗಿತ್ತದೆ. ಆರೋಗ್ಯದ ವಿಷಯದಲ್ಲಿ ಅಜಾಗರೂಕತೆಯು ಒಳ್ಳೆಯದಲ್ಲ ಮತ್ತು ಸಂಬಂಧಿಕರೊಂದಿಗಿನ ವಿವಾದಗಲು ಪರಿಹಾರದತ್ತ ಸಾಗುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.

* ತುಲಾ

ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಕುಟುಂಬದ ಸದಸ್ಯರು ನಿಮ್ಮ ಮಾತಿಗೆ ಒಪ್ಪುವುದಿಲ್ಲ. ನಿರುದ್ಯೋಗ ಪ್ರಯತ್ನಗಳು ಮಂದಗತಿಯಲ್ಲಿ ಸಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಬಾಧಿಸುತ್ತವೆ. ಅಗತ್ಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ. ಹಣಕಾಸಿನ ವ್ಯವಹಾರಗಳು ನೀರುತ್ಸಾಹಗೊಳಿಸುತ್ತವೆ ಒಳಗಾಗುತ್ತವೆ.

* ವೃಶ್ಚಿಕ

ಕೌಟುಂಬಿಕ ವಿಚಾರಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಸಹೋದರರೊಂದಿಗಿನ ಆಸ್ತಿ ವಿವಾದಗಳು ಬಗೆಹರಿಯುತ್ತವೆ. ದೂರದ ಸಂಬಂಧಿಕರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ.

* ಧನುಸ್ಸು

ಸ್ನೇಹಿತರಿಂದ ಸಾಲದ ಒತ್ತಡ ಹೆಚ್ಚಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಸ್ವಲ್ಪ ವಿಳಂಬ ಉಂಟಾಗುತ್ತದೆ, ವ್ಯಾಪಾರದಲ್ಲಿ ಆತುರದ ನಿರ್ಧಾರಗಳು ಮತ್ತು ನಷ್ಟವನ್ನು ಎದುರಿಸುವುದು ನಿಶ್ಚಿತ. ಕೆಲಸದ ಪ್ರಯತ್ನಗಳು ನಿಧಾನವಾಗುವುದು ಆರೋಗ್ಯದ ವಿಷಯಗಳಲ್ಲಿ ಅಜಾಗರೂಕತೆ ಒಳ್ಳೆಯದಲ್ಲ. ಕುಟುಂಬ ಸದಸ್ಯರೊಂದಿಗೆ ವಿವಾದಗಳಿರುತ್ತವೆ.

* ಮಕರ

ಆಪ್ತ ಸ್ನೇಹಿತರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಲಾಗುತ್ತದೆ, ಉದ್ಯೋಗದ ವಾತಾವರಣವು ತೃಪ್ತಿಕರವಾಗಿರುತ್ತದೆ, ಭೋಜನ ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ಆಹ್ವಾನಗಳು ದೊರೆಯುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

*ಕುಂಭ

ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆಗಳು ನಡೆಯುತ್ತವೆ. ಹಣಕಾಸಿನ ಪರಿಸ್ಥಿತಿ ಕೊಂಚ ನಿರಾಶಾದಾಯಕವಾಗಿರುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಭೂಮಿ ಮಾರಾಟ ಲಾಭದಾಯಕವಾಗಿರುತ್ತದೆ. ಕೈಗೊಂಡ ವ್ಯವಹಾರಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

* ಮೀನ

ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಹಣಕಾಸಿನ ಸಮಸ್ಯೆಗಳು ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡುತ್ತವೆ. ಕುಟುಂಬ ಸದಸ್ಯರೊಂದಿಗೆ ವಿವಾದ ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಸ್ಥಾನ ಚಲನೆ ಸೂಚನೆಗಳಿವೆ. ಆರೋಗ್ಯವು ಸಹಕರಿಸುವುದಿಲ್ಲ, ಮನೆಯ ಹೊರಗೆ ಒತ್ತಡ ಹೆಚ್ಚಾಗುತ್ತದೆ. ದೇಗುಲಗಳಿಗೆ ಭೇಟಿ ನೀಡುತ್ತೀರಿ

Categories
ರಾಜಕೀಯ ರಾಜ್ಯ

ರಾಜ್ಯದಲ್ಲಿ ರಂಗೇರಿದ ಲೋಕಸಭಾ ಚುನಾವಣೆ..!

ರಾಜ್ಯದಲ್ಲಿ ರಂಗೇರಿದ ಲೋಕಸಭಾ ಚುನಾವಣೆ..!
– ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ – ಜೆಡಿಎಸ್ ಮೈತ್ರಿ
– ನಾಮಪತ್ರ ಸಲ್ಲಿಕೆ ಆರಂಭಕ್ಕೂ ಮುನ್ನವೇ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಣೆ

NAMMUR EXPRESS NEWS
ಬೆಂಗಳೂರು : ಕರ್ನಾಟಕದಲ್ಲಿ ಮಾರ್ಚ್ 28 ರಿಂದ ಲೋಕಸಭಾ ಚುನಾವಣಾ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಮೊದಲ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆ ಕೂಡ ಆರಂಭವಾಗಿದೆ. ಇದರ ನಡುವೆ ಶತಾಯಗತಾಯ ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಪಣತೊಟ್ಟು ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಎಲ್ಲ ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿವೆ. 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಹಾಗೂ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಕೆ ಆರಂಭಕ್ಕೂ ಮುನ್ನ ಎಲ್ಲ ಕ್ಷೇತ್ರಗಳಿಗೂ ಉಮೇದುವಾರರನ್ನು ಘೋಷಿಸಿವೆ. ಈ ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ ಕಾಂಗ್ರೆಸ್‌ಗಿಂತ ಒಂದು ಹೆಜ್ಜೆ ಮುಂದೆ ಇವೆ. ಕಾಂಗ್ರೆಸ್ ಇನ್ನೂ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಮೊದಲ ಹಂತದಲ್ಲಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ, ಆಮೇಲೆ ನಾಲ್ಕು ಕ್ಷೇತ್ರಗಳಿಗೆ ಹಾಗೂ ಬುಧವಾರ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಹಾಸನಕ್ಕೆ ಪ್ರಜ್ವಲ್ ರೇವಣ್ಣ ಹೆಸರು ಮೊದಲೇ ಘೋಷಣೆಯಾಗಿದ್ದರು ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳ ಟಿಕೆಟ್ ಘೋಷಣೆಯ ಸಸ್ಪೆನ್ಸ್ ಅನ್ನು ಜೆಡಿಎಸ್ ಕಾಯ್ದಿರಿಸಿಕೊಂಡಿತ್ತು. ಕೋಲಾರ ಕ್ಷೇತ್ರಕ್ಕೆ ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಕೂಡ ಬದಲಾವಣೆ ಮಾಡಿರುವ ಜೆಡಿಎಸ್ ಕಾಂಗ್ರೆಸ್ ಗಲಾಟೆಯ ಲಾಭ ಪಡೆಯಲು ಯತ್ನಿಸಿದೆ. ಇಲ್ಲಿ ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬ 28 ಕ್ಷೇತ್ರಗಳ ಪಟ್ಟಿ ಇದೆ.

ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ, ಬೆಳಗಾವಿ – ಜಗದೀಶ್ ಶೆಟ್ಟರ್, ಬಾಗಲಕೋಟೆ – ಪಿಸಿ ಗದ್ದಿಗೌಡರ್ ಬಿಜಾಪುರ – ರಮೇಶ್ ಜಿಗಜಿಣಗಿ, ಕಲಬುರಗಿ – ಡಾ ಉಮೇಶ್ ಜಾಧವ್, ರಾಯಚೂರು – ರಾಜಾ ಅಮರೇಶ್ವರ ನಾಯಕ, ಬೀದರ್ – ಭಗವಂತ್ ಖೂಬಾ, ಕೊಪ್ಪಳ – ಡಾ. ಬಸವರಾಜ್ ಕ್ಯಾವಟೂರು, ಬಳ್ಳಾರಿ – ಶ್ರೀರಾಮುಲು, ಹಾವೇರಿ – ಬಸವರಾಜ ಬೊಮ್ಮಾಯಿ, ಧಾರವಾಡ ಪ್ರಹ್ಲಾದ್ ಜೋಶಿ, ಉತ್ತರ ಕನ್ನಡ – ವಿಶ್ವೇಶ್ವರ ಹೆಗಡೆ ಕಾಗೇರಿ, ದಾವಣಗೆರೆ – ಗಾಯತ್ರಿ ಸಿದ್ದೇಶ್ವ‌ರ್, ಶಿವಮೊಗ್ಗ – ಬಿವೈ ರಾಘವೇಂದ್ರ, ಉಡುಪಿ – ಚಿಕ್ಕಮಗಳೂರು – ಕೋಟ ಶ್ರೀನಿವಾಸ್ ಪೂಜಾರಿ, ಹಾಸನ – ಪ್ರಜ್ವಲ್ ರೇವಣ್ಣ (ಜೆಡಿಎಸ್), ದಕ್ಷಿಣ ಕನ್ನಡ ಕ್ಯಾ. ಬ್ರಿಜೇಶ್ ಚೌಡ, ಚಿತ್ರದುರ್ಗ – ಗೋವಿಂದ ಕಾರಜೋಳ, ತುಮಕೂರು – ವಿ ಸೋಮಣ್ಣ, ಮಂಡ್ಯ – ಎಚ್‌ಡಿ ಕುಮಾರಸ್ವಾಮಿ (ಜೆಡಿಎಸ್), ಮೈಸೂರು – ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್, ಚಾಮರಾಜನಗರ – ಎಸ್ ಬಾಲರಾಜ್
ಬೆಂಗಳೂರು ಗ್ರಾಮಾಂತರ – ಡಾ ಸಿ ಎನ್ ಮಂಜುನಾಥ್, ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರ – ಪಿಸಿ ಮೋಹನ್, ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ, ಚಿಕ್ಕಬಳ್ಳಾಪುರ – ಡಾ ಕೆ ಸುಧಾಕರ್, ಕೋಲಾರ – ನಿಸರ್ಗ ನಾರಾಯಣಸ್ವಾಮಿ (ಜೆಡಿಎಸ್).

Categories
ಕರಾವಳಿ

ಪುತ್ತೂರಿನ ಖ್ಯಾತ ಡಾಕ್ಟರನ್ನೇ ಯಾಮಾರಿಸಿದ ಸೈಬ‌ರ್ ವಂಚಕರು!

ಪುತ್ತೂರಿನ ಖ್ಯಾತ ಡಾಕ್ಟರನ್ನೇ ಯಾಮಾರಿಸಿದ ಸೈಬ‌ರ್ ವಂಚಕರು!
– ಬ್ಲ್ಯಾಕ್ ಮೇಲ್ ಮಾಡಿದ್ದು ಹೇಗೆ ? ಡಾಕ್ಟರ್ 16 ಲಕ್ಷ ಗುಳುಂ!
– ಕರಾವಳಿಯಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ!

NAMMUR EXPRESS NEWS
ಪುತ್ತೂರು: ವೈದ್ಯರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದಿದ್ದು, ಸುಮಾರು 16 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಎರಡು ದಿನದ ಹಿಂದೆ ವೈದ್ಯರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ವಂಚನೆ ನಡೆದಿರುವ ಬಗ್ಗೆ ಪುತ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪುತ್ತೂರಿನ ಬೊಳ್ವಾರು ನಿವಾಸಿ, ಹಾಗೂ ಖ್ಯಾತ ವೈದ್ಯರಾಗಿರುವ ಡಾ.ಚಿದಂಬರ ಅಡಿಗ ವಂಚನೆಗೊಳದವರು.ಅವರು ನೀಡಿದ ದೂರಿನಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ ಅಡಿಗ ಅವರಿಗೆ ದೂರವಾಣಿ ಮೂಲಕ ಮಾ.28 ರಂದು ಬೆಳಿಗ್ಗೆ, ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿದೆ. ಆ ಕರೆಯನ್ನು ಸ್ವೀಕರಿಸಿ ಮಾತನಾಡಿದಾಗ, ಕರೆ ಮಾಡಿದ ವ್ಯಕ್ತಿಯು ನಾನು ದೆಹಲಿಯ ಪೊಲೀಸ್ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದಾರೆ.

ಈತ ಬಳಿಕ ” ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂದಿಸಿದಂತೆ ಹಾಗೂ ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳ ಸಾಗಾಣಿಕೆ ಪ್ರಕರಣ ದಾಖಲಾಗಿದೆ. ನಿಮ್ಮನ್ನು ಬಂಧಿಸಲು ಮಾಡಲು ಕೋರ್ಟ್ ನಿಂದ ವಾರಂಟ್ ಬಂದಿದೆ. ಹೀಗಾಗಿ ತಕ್ಷಣ ದೆಹಲಿಯ ಸಿಬಿಐ ಕೋರ್ಟ್ ಗೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್ಲೈನ್ ಮೂಲಕ ಕೋರ್ಟ್ ನ ಕೇಸ್ ನಡೆಸುತ್ತೇವೆ” ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ನೀವು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ನಾನು ಹೇಳುವ ಅಕೌಂಟ್ ಗೆ ವರ್ಗಾವಣೆ ಮಾಡಬೇಕು, ನ್ಯಾಯಾಲಯದಲ್ಲಿ ಪ್ರಕರಣ ಮುಗಿದ ಮೇಲೆ ನಿಮಗೆ ನಿಮ್ಮ ಹಣ ವಾಪಾಸು ಸಿಗುತ್ತದೆ ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ , ವೈದರಾಗಿರುವ ಅಡಿಗ ಅವರ ಬಗ್ಗೆ ವಿರುದ್ದ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಅಡಿಗ ರವರ ಮೊಬೈಲ್ ಫೋನ್ ನ ವಾಟ್ಸ್ ಆಪ್ ಗೆ ಕಳುಹಿಸಿ ಪ್ರಕರಣ ನೈಜವೆಂಬಂತೆ ಬಿಂಬಿಸಿದ್ದಾನೆ.

ಅಪರಿಚಿತನ ಮಾತನ್ನು ನಂಬಿ, ಗಾಬರಿಗೊಂಡು,ಅಡಿಗರವರು ಬ್ಯಾಂಕ್ ಖಾತೆಯಿಂದ, RTGS ಮೂಲಕ ಸದರಿ ಅಪರಿಚಿತ ತಿಳಿಸಿದ ಬ್ಯಾಂಕ್ ಖಾತೆಗೆ ರೂ 16,50,000/- ಹಣವನ್ನು ವರ್ಗಾವಣೆ ಮಾಡಿದ್ದರೆ. ಸ್ವಲ್ಪ ಹೊತ್ತಿನ ಬಳಿಕ ಸದ್ರಿ ಅದೇ ವ್ಯಕ್ತಿಯು ಪಿರ್ಯಾದಿದಾರರಿಗೆ ಕರೆಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ, ಅನುಮಾನ ಬಂದು ದೂರವಾಣಿ ಕರೆ ಕಡಿತಗೊಳಿಸಿದ್ದು, ತನ್ನ ಗೆಳೆಯರೊಂದಿಗೆ ಈ ಬಗ್ಗೆ ತಿಳಿಸಿದಾಗ ಸದರಿ ಆನ್ ಲೈನ್ ಮೋಸದ ಕೃತ್ಯದ ಬಗ್ಗೆ ತಿಳಿದುಬಂದಿರುತ್ತದೆ. ಈ ಬಗ್ಗೆ ದೂರುದಾರರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.