Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?

– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
2024 ಜೂನ್ 08ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

** ಮೇಷ ರಾಶಿ :
ಆರ್ಥಿಕವಾಗಿ ಗೊಂದಲಮಯ ಪರಿಸ್ಥಿತಿಗಳು ಉಂಟಾಗುತ್ತದೆ. ಹೊಸ ಸಾಲಗಳನ್ನು ಮಾಡಬೇಕಾಗುತ್ತದೆ. ಕುಟುಂಬ ಸದಸ್ಯರ ವರ್ತನೆ ನಿರಾಶಾದಾಯಕವಾಗಿರುತ್ತದೆ. ದೂರದ ಪ್ರಯಾಣದ ಸೂಚನೆಗಳಿವೆ. ಹೊಸ ವ್ಯಾಪಾರ ವಿಸ್ತರಣೆಯ ಪ್ರಯತ್ನಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ನಿಧಾನವಾಗಿ ಸಾಗುತ್ತವೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

** ವೃಷಭ ರಾಶಿ :
ಪಾಲುದಾರರೊಂದಿಗೆ ಭಿನ್ನಭಿಪ್ರಾಯಗಳು ಇರುತ್ತವೆ. ಬಾಲ್ಯದ ಸ್ನೇಹಿತರೊಂದಿಗೆ ನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಕೆಲಸದ ಹೊರೆ ಹೆಚ್ಚಾಗುತ್ತವೆ. ಹಣಕಾಸಿನ ವ್ಯವಹಾರಗಳು ನಿರುತ್ಸಾಹಗೊಳಿಸುತ್ತವೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಉತ್ತಮ.

** ಮಿಥುನ ರಾಶಿ :
ಬಾಲ್ಯದ ಸ್ನೇಹಿತರಿಂದ ನೀವು ಆಸಕ್ತಿದಾಯಕ ಮಾಹಿತಿಯನ್ನು ಸ್ವೀಕರಿಸುತ್ತೀರಿ. ಅಗತ್ಯಕ್ಕೆ ಹಣ ದೊರೆಯುತ್ತದೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ವ್ಯಾಪಾರ ಉದ್ಯೋಗಗಳಲ್ಲಿ ಸ್ವಂತ ನಿರ್ಧಾರಗಳು ಕೂಡಿ ಬರುತ್ತವೆ. ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಾಗುತ್ತದೆ. ಬಂಧು ಮಿತ್ರರೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

** ಕಟಕ ರಾಶಿ :
ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ದೂರ ಪ್ರಯಾಣಗಳು ಶ್ರಮದಾಯಕವಾಗಿರುತ್ತವೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಒಂದು ಪ್ರಮುಖ ವಿಷಯದಲ್ಲಿ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ.

** ಸಿಂಹ ರಾಶಿ :
ಪ್ರೀತಿಪಾತ್ರರಿಂದ ಅಪರೂಪದ ಆಹ್ವಾನಗಳನ್ನು ಸ್ವೀಕರಿಸುತ್ತೀರಿ . ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ ಮತ್ತು ಆರ್ಥಿಕ ಲಾಭ ದೊರೆಯುತ್ತದೆ. ವೃತ್ತಿಪರ ವ್ಯವಹಾರದಲ್ಲಿ, ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ.

** ಕನ್ಯಾ ರಾಶಿ :
ಹಳೆ ಸಾಲದ ಒತ್ತಡದದಿಂದ ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಕೌಟುಂಬಿಕ ವಿಚಾರಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಹೊಸ ವ್ಯಾಪಾರ ಹೂಡಿಕೆ ಮಾಡುವ ಪ್ರಯತ್ನಗಳು ನಿಧಾನವಾಗುತ್ತವೆ. ಪ್ರಯಾಣವನ್ನು ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.

** ತುಲಾ ರಾಶಿ :
ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸಹೋದರರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ನಿರುದ್ಯೋಗಿಗಳು ತಮ್ಮ ಪ್ರಯತ್ನದ ಫಲವಾಗಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ, ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗ ವಾತಾವರಣವು ಅನುಕೂಲಕರವಾಗಿರುತ್ತದೆ. ಹಣದ ಆದಾಯ ಉತ್ತಮವಾಗಿರುತ್ತದೆ.

** ವೃಶ್ಚಿಕ ರಾಶಿ :
ದೀರ್ಘಾವಧಿ ಸಾಲಗಳಿಂದ ಪರಿಹಾರ ದೊರೆಯುತ್ತದೆ. ಕೌಟುಂಬಿಕ ವಾತಾವರಣ ಶಾಂತಿಯುತವಾಗಿರುತ್ತದೆ. ಹಣಕಾಸಿನ ವಿಷಯಗಳು ಕೂಡಿ ಬರುತ್ತವೆ. ಹೊಸ ವಸ್ತ್ರ ಖರೀದಿಸಲಾಗುತ್ತದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವುದು ಸಂತೋಷವನ್ನು ತರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತದೆ. ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ.

** ಧನುಸ್ಸು ರಾಶಿ :
ಕೈಗೆತ್ತಿಕೊಂಡ ಕೆಲಸದಲ್ಲಿ ಹೆಚ್ಚಿನ ಪ್ರಯತ್ನದಿಂದ ಅಲ್ಪ ಫಲವನ್ನು ಪಡೆಯುತ್ತೀರಿ. ಸಹೋದರರೊಂದಿಗೆ ವಿವಾದವಿರುತ್ತದೆ. ದೀರ್ಘಾವಧಿ ಸಾಲಗಳ ಒತ್ತಡ ಹೆಚ್ಚಾಗುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಹಿರಿಯರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಉದ್ಯೋಗದ ವಾತಾವರಣ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ, ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುವುದು ಒಳ್ಳೆಯದು.

** ಮಕರ ರಾಶಿ :
ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ನಿರುದ್ಯೋಗಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವ್ಯಾಪಾರ ವ್ಯವಹಾರಗಳಲ್ಲಿ ವಿಚಾರಗಳು ಕೂಡಿ ಬರುವುದಿಲ್ಲ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

** ಕುಂಭ ರಾಶಿ :
ಹೊಸ ವಸ್ತು ಮತ್ತು ವಾಹನಗಳನ್ನು ಖರೀದಿಸುತ್ತೀರಿ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳಲಿವೆ. ಸಹೋದರರಿಂದ ಶುಭ ಆಹ್ವಾನಗಳು ಬರುತ್ತವೆ. ಬಾಲ್ಯದ ಗೆಳೆಯರೊಂದಿಗೆ ದೂರ ಪ್ರಯಾಣ ಮಾಡುತ್ತೀರಿ. ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಸಹೋದ್ಯೋಗಿಗಳೊಂದಿಗೆ ಸಾಮರಸ್ಯವಿರುತ್ತದೆ.

** ಮೀನ ರಾಶಿ :
ಮನೆಯಲ್ಲಿ ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತೀರಿ , ರಾಜಕೀಯ ವರ್ಗದವರಿಗೆ ಬಡ್ತಿ ಹೆಚ್ಚಾಗುತ್ತದೆ. ಬಾಲ್ಯದ ಸ್ನೇಹಿತರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ದೂರದ ಸಂಬಂಧಿಕರೊಂದಿಗೆ ಹಳೆಯ ವಿಷಯಗಳನ್ನು ಚರ್ಚಿಸಲಾಗುತ್ತದೆ. ವ್ಯಾಪಾರ ಉದ್ಯೋಗಗಳಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಲಾಭ ಗಳಿಸುತ್ತೀರಿ. ಮನೆಯಲ್ಲಿ ಶುಭ ಕಾರ್ಯ ಪ್ರಯತ್ನಗಳು ಫಲ ನೀಡುತ್ತವೆ.

Categories
ಚುನಾವಣಾ ಸುದ್ದಿ ರಾಜಕೀಯ ರಾಜ್ಯ

ರಾಜ್ಯದಲ್ಲಿ ಮೈತ್ರಿ ಪಾಸ್: ಜಿಪಂ, ತಾಪಂ ಅಲ್ಲೂ ದೋಸ್ತಿ?

ರಾಜ್ಯದಲ್ಲಿ ಮೈತ್ರಿ ಪಾಸ್: ಜಿಪಂ, ತಾಪಂ ಅಲ್ಲೂ ದೋಸ್ತಿ?

– ಲೋಕ ಸಭೆಯಲ್ಲಿ ಮೈತ್ರಿ ಇಲ್ದಿದ್ರೆ ಕಷ್ಟ ಕಷ್ಟ
– ವಿಧಾನ ಪರಿಷತ್ ಚುನಾವಣೆಯಲ್ಲೂ ಮೈತ್ರಿಗೆ ಗೆಲುವು
– ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏನಾಗುತ್ತೆ..?

NAMMUR EXPRESS NEWS
ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಪಾಸ್ ಆಗಿದೆ. ಒಂದು ವೇಳೆ ಲೋಕ ಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲದಿದ್ದರೆ ಇನ್ನಷ್ಟು ಸ್ಥಾನ ಕಳೆದುಕೊಳ್ಳುವ ಆತಂಕ ಇತ್ತು.

ಲೋಕ ಸಭೆಯಲ್ಲಿ 17 ಸ್ಥಾನ ಬಿಜೆಪಿ, 2 ಸ್ಥಾನ ಜೆಡಿಎಸ್ ಗೆದ್ದಿದೆ. ಕಾಂಗ್ರೆಸ್ 9 ಸ್ಥಾನ ಗೆದ್ದಿದೆ. ಒಂದು ವೇಳೆ ಮೈತ್ರಿ ಇಲ್ಲದಿದ್ದರೆ ಭಾರೀ ಕಷ್ಟ ಆಗುತ್ತಿತ್ತು ಎಂಬ ಚರ್ಚೆ ಜೋರಾಗಿದೆ.

ಇನ್ನು ರಾಜ್ಯದ ವಿಧಾನ ಪರಿಷತ್‌ನ ಮೂರು ಶಿಕ್ಷಕರ ಹಾಗೂ ಮೂರು ಪದವೀಧರ ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಐದು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್‌‍, ಜೆಡಿಎಸ್‌‍ ತಲಾ ಎರಡು ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿವೆ.

ಲೋಕಸಭಾ ಚುನಾವಣೆಯಂತೆ ವಿಧಾನ ಪರಿಷತ್‌ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಜೆಡಿಎಸ್‌‍ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಎರಡು ಕ್ಷೇತ್ರ ಸೋತಿದ್ದು, ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್‌‍ ಆರು ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಮೂರು ಕ್ಷೇತ್ರಗಳಲ್ಲಿ ಸೋತು ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದೆ.

ಸ್ಥಳೀಯ ಚುನಾವಣೆಗೂ ಮೈತ್ರಿ?!

ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆಯಾ ಎಂಬ ಚರ್ಚೆ ಶುರುವಾಗಿದೆ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರದಲ್ಲಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ.

Categories
ಚಿಕ್ಕಮಗಳೂರು

ಪ್ರಜ್ಞೆ ತಪ್ಪುವ ವಿಷ ಇಟ್ಟು 30 ಮಂಗಗಳ ಹೊಡೆದು ಕೊಂದರು!

ಪ್ರಜ್ಞೆ ತಪ್ಪುವ ವಿಷ ಇಟ್ಟು 30 ಮಂಗಗಳ ಹೊಡೆದು ಕೊಂದರು!
– ಎನ್‌.ಆರ್ ಪುರ ತಾಲೂಕಿನ ದ್ಯಾವಣ ಗ್ರಾಮದಲ್ಲಿ ನಡೆದ ಘಟನೆ
– ಬೆಳೆ ನಾಶ ಮಾಡಿದ್ದಕ್ಕೆ ಹತ್ಯೆ?: ಇದೆಂತಾ ವಿಕೃತಿ…?

NAMMUR EXPRESS NEWS

ನರಸಿಂಹರಾಜಪುರ: ಪ್ರಜ್ಞೆ ತಪ್ಪುವ ಔಷಧವಿಟ್ಟು 30 ಮಂಗಗಳ ಮಾರಣಹೋಮ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ದ್ಯಾವಣ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದ ಮಂಗಗಳ ಪೈಕಿ 16 ಗಂಡು, 14 ಹೆಣ್ಣು, 4 ಮರಿ ಮಂಗಗಳು ಸೇರಿವೆ. ಮೊದಲಿಗೆ ತೋಟದ ಬಾಳೆಹಣ್ಣಿಗೆ ಪ್ರಜ್ಞೆ ತಪ್ಪುವ ಔಷಧ ಬೆರೆಸಿರುವ ಪಾಪಿಗಳು. ಬಾಳೆಹಣ್ಣು ತಿಂದ ಬಳಿಕ ಪ್ರಜ್ಞೆ ತಪ್ಪಿ ಬಿದ್ದ ಮಂಗಗಳ ತಲೆಗೆ ಬಲವಾಗಿ ಹೊಡೆದು ಕೊಂದಿರುವ ನರರಾಕ್ಷಸರು ನಂತರ ರಸ್ತೆಗೆ ಎಸೆದು ಹೋಗಿದ್ದಾರೆ.

30 ಮಂಗಗಳ ತಲೆಯಲ್ಲೂ ಒಂದೇ ರೀತಿ ಗಾಯ, ರಕ್ತ ಸುರಿದು ಮೃತಪಟ್ಟಿವೆ. ಮೂವತ್ತು ಮಂಗಗಳಿಗೆ ತಲೆಗೆ ಹೊಡೆದು ಕೊಂದಿದ್ದು ಕೊಲೆ ಕಾರಣ ತಿಳಿದುಬಂದಿಲ್ಲ.
ತೋಟದ ಬೆಳೆ ನಾಶ ಮಾಡುತ್ತವೆಂದು ಕೊಂದಿರಬಹುದಾ? ಅಥವಾ ಬೇರೆ ಏನಾದರೂ ಕಾರಣ ಇದ್ದಿರಬಹುದಾ? ಒಟ್ಟಿನಲ್ಲಿ ಮೂಕ ಪ್ರಾಣಿಗಳನ್ನ ರೀತಿ ಮನುಷ್ಯತ್ವಹೀನರಂತೆ ಹೊಡೆದುಕೊಂದಿರುವುದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಡಿಎಫ್‌ಓ, ಆರ್‌ಎಫ್‌ಓ, ಪಿಎಸ್‌ಐ, ಪಶುಸಂಗೋಪನೆ, ಪಶುವೈದ್ಯರು, ಪಂಚಾಯ್ತಿ, ಆಶಾ ಕಾರ್ಯಕರ್ತೆಯರು ಸೇರಿ ವಿವಿಧ ಇಲಾಖೆಯ ಎಲ್ಲ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್‌ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Categories
ಕರಾವಳಿ ಮಂಗಳೂರು

ಕರಾವಳಿಯಲ್ಲಿ ಜಾಸ್ತಿಯಾಗುತ್ತಿದೆ ಗಾಂಜಾ ಅಮಲು!

-ಕರಾವಳಿಯಲ್ಲಿ ಜಾಸ್ತಿಯಾಗುತ್ತಿದೆ ಗಾಂಜಾ ಅಮಲು!
-ಮಂಗಳೂರಿನಲ್ಲಿ ಗಾಂಜಾ ಸೇವಿಸಿ ತೂರಾಡುತ್ತಿದ್ದವನ ಬಂಧನ

NAMMUR EXPRESS NEWS

ಕರಾವಳಿ ಭಾಗದಲ್ಲಿ ಗಾಂಜಾ ಮಾರಾಟ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಈ ಜಾಲಕ್ಕೆ ಸೆಳೆದುಕೊಳ್ಳುವ ಪ್ರಯತ್ನ ರಾಜಾರೋಷವಾಗಿ ನಡೆಯುತ್ತಿದೆ. ಪೊಲೀಸರು ಎಷ್ಟೇ ಆರೋಪಿಗಳನ್ನು ಬಂಧಿಸಿದರೂ ಗಾಂಜಾ ಮಾರಾಟ ಹಾಗೂ ಸೇವನೆಗೆ ಕರಾವಳಿ ಭಾಗದಲ್ಲಿ ಕಡಿವಾಣ ಬೀಳದಿರುವುದು ಆತಂಕದ ವಿಚಾರ. ನಿನ್ನೆಯಷ್ಟೇ ಉಡುಪಿಯ ಮಣಿಪಾಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಅಪಾರ್ಟ್‌ಮೆಂಟ್‌ನಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಕೇರಳದ ಮೂಲದ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದರು.
ಈ ಪ್ರಕರಣದ ಬೆನ್ನಲ್ಲೇ ಮಂಗಳೂರಿನಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ. ಲಾಲ್‌ಬಾಗ್‌ನ ಬಳಿ ತೂರಾಡುತ್ತ ನಿಂತಿದ್ದ ಸುಳ್ಯ ಅಲೆಟ್ಟಿ ಗ್ರಾಮದ ಪೂಜಿತ್‌ ಸಾಗರ್‌(28) ಎಂಬಾತನನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಜೂ.5ರಂದು ನಗರದ ಧಕ್ಕೆ ಬಳಿ ಗಾಂಜಾ ಸೇವನೆ ಮಾಡಿದ್ದ ಬಂಟ್ವಾಳದ ಲೋಲಾಕ್ಷ(35) ಎಂಬಾತನನ್ನು ಬಂದರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Categories
ಬೆಂಗಳೂರು ರಾಜಕೀಯ

11 ವಿಧಾನ ಪರಿಷತ್‌ ಸದಸ್ಯರ ಭಾಗ್ಯ!

11 ವಿಧಾನ ಪರಿಷತ್‌ ಸದಸ್ಯರ ಭಾಗ್ಯ!

– ಸಿಟಿ ರವಿ, ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಸ್ಥಾನ
– 7 ಮಂದಿ ಕಾಂಗ್ರೆಸ್, 3 ಮಂದಿ ಬಿಜೆಪಿ, 1 ಜೆಡಿಎಸ್ ಆಯ್ಕೆ

NAMMUR EXPRESS NEWS

ಬೆಂಗಳೂರು: ವಿಧಾನ ಸಭೆಯಿಂದ ಪರಿಷತ್‌ಗೆ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ 11 ಜನ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅಧಿಕೃತ ಆದೇಶ ಹೊರಬಿದ್ದಿದೆ.
ಕಾಂಗ್ರೆಸ್ ಏಳು ಮತ್ತು ಬಿಜೆಪಿ 3 ಹಾಗೂ ಜೆಡಿಎಸ್‌ನಿಂದ ಒಂದು ಸ್ಥಾನಕ್ಕೆ ಆಯ್ಕೆ ನಡೆದಿದ್ದು, ಪದವೀದರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಇಸಂಜೆಯಷ್ಟರಲ್ಲಿ ಹೊರಬೀಳಲಿದೆ.
ಈಗ 11 ಸದಸ್ಯರು ಮಾತ್ರ ಅವಿರೋಧ ಆಯ್ಕೆಯಾಗಿದ್ದು, ಆ ಪಟ್ಟಿಯನ್ನು ಎಂ.ಕೆ.ವಿಶಾಲಾಕ್ಷಿ ದೃಢೀಕರಿಸಿ ಆದೇಶ ಹೊರಡಿಸಿದ್ದಾರೆ.

ಯಾವ ಪಕ್ಷದಿಂದ ಯಾರು ಯಾರು ಆಯ್ಕೆ?

ಕಾಂಗ್ರೆಸ್ ನಿಂದ ಐವಾನ್ ಡಿಸೋಜಾ, ಕೆ.ಗೋವಿಂದರಾಜು, ಜಗದೇವ್ ಗುತ್ತೇದಾ‌ರ್, ಬಲ್ಕಿಶ್ ಬಾನು, ಎನ್.ಎಸ್ ಬೋಸರಾಜು, ಡಾ. ಯತೀಂದ್ರ, ಎ ವಸಂತ್ ಕುಮಾರ್ ಆಯ್ಕೆಯಾಗಿದ್ದರು.

ಬಿಜೆಪಿಯಿಂದ ಸಿ.ಟಿ.ರವಿ, ಮುಳೆ ಮಾರುತಿ ರಾವ್, ಎನ್.ರವಿಕುಮಾ‌ರ್ ಆಯ್ಕೆಯಾಗಿದ್ದಾರೆ.

ಜೆಡಿಎಸ್‌ನಿಂದ ನಾಲ್ಕು ಬಾರಿ ಚುನಾವಣೆಯಲ್ಲಿ ಸೋಲು ಕಂಡಿದ್ದ ಎನ್‌.ಜವರಾಯಿಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

Categories
ಬೆಂಗಳೂರು ರಾಜಕೀಯ

ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನ: ಇನ್ಯಾರು ಲಿಸ್ಟ್ ಅಲ್ಲಿ?

ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನ: ಇನ್ಯಾರು ಲಿಸ್ಟ್ ಅಲ್ಲಿ?

– ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ನಾಗೇಂದ್ರ ತಲೆದಂಡ
– ಇನ್ನು ಹಲವರು ಲಿಸ್ಟ್ ಅಲ್ಲಿ?: ಕೆಲಸ ಮಾಡದವರಿಗೆ ಗೇಟ್ ಪಾಸ್?

NAMMUR EXPRESS NEWS

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್‌ ಪತನವಾಗಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾಗಿರುವ ನಾಗೇಂದ್ರ ಅವರಿಗೆ ತನಿಖೆ ಮುಗಿಯುವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಹೈಕಮಾಂಡ್ ಜೊತೆ ಸಿಎಂ, ಡಿಸಿಎಂ ಮಾತುಕತೆ ನಡೆಸಿದ ಬಳಿಕ ನಾಗೇಂದ್ರ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಈ ಪ್ರಕರಣದ ತನಿಖೆ ಸಿಬಿಐಗೆ ಹೋದಲ್ಲಿ ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಕಷ್ಟ. ಬಳಿಕ ರಾಜೀನಾಮೆ ನೀಡಿದರೆ ಸರ್ಕಾರ, ಪಕ್ಷಕ್ಕೆ ಮುಜುಗರವಾಗಲಿದೆ. ಅದರ ಬದಲು ಈಗಲೇ ರಾಜೀನಾಮೆ ಕೊಡುವಂತೆ ಸೂಚನೆ ನೀಡಲಾಗಿತ್ತು. ಬುಧವಾರ ನಾಗೇಂದ್ರ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ರಾಜೀನಾಮೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದ್ದರು. ಬಳಿಕ ಅವರು ರಾಜೀನಾಮೆ ನೀಡಿದ್ದಾರೆ.

ಇನ್ನು ಹಲವರು ಲಿಸ್ಟ್ ಅಲ್ಲಿ?

ಲೋಕಸಭಾ ಹಾಗೂ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಸಾಧ್ಯ ಆಗದ ಹಾಗೂ ಪಕ್ಷ ಸಂಘಟನೆ, ಇನ್ನು ಹಲವು ಕಾರಣಗಳಿಂದ ಅನೇಕ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಒಳಿತು? ಯಾವ ರಾಶಿಯವರಿಗೆ ಕೆಡುಕು?

NAMMUR EXPRESS NEWS
2024 ಜೂನ್ 07ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

** ಮೇಷ :
ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳಿರುತ್ತವೆ. ಕಠಿಣ ಪರಿಶ್ರಮದಿಂದ ಕೈಗೆತ್ತಿಕೊಂಡ ಕೆಲಸ ಪೂರ್ಣಗೊಳ್ಳುವುದಿಲ್ಲ. ಪ್ರಯಾಣವನ್ನು ಮುಂದೂಡಲಾಗುತ್ತದೆ. ಉದ್ಯೋಗಿಗಳಿಗೆ ಹುದ್ದೆಗಳು ದೊರೆಯಲು ಸ್ವಲ್ಪ ವಿಳಂಬ ಉಂಟಾಗುತ್ತದೆ. ದೈವಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಮನೆಯ ಹೊರಗಿನ ಜವಾಬ್ದಾರಿಗಳು ಹೆಚ್ಚಾಗುತ್ತವೆ ಮತ್ತು ವೃತ್ತಿಪರ ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ.

** ವೃಷಭ ರಾಶಿ :
ದೂರದ ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ಹಠಾತ್ ಧನಲಾಭ ಉಂಟಾಗುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ಹೆಚ್ಚಾಗುತ್ತವೆ. ಬಾಲ್ಯದ ಸ್ನೇಹಿತರಿಂದ ಕೆಲವು ಪ್ರಮುಖ ಮಾಹಿತಿಗಳು ತಿಳಿದು ಬರುತ್ತವೆ. ಹೊಸ ವಾಹನ ಖರೀದಿಸುತ್ತೀರಿ. ವ್ಯಾಪಾರದಲ್ಲಿ ಸಮಸ್ಯೆಗಳನ್ನು ನಿವಾರಿಸುತ್ತೀರಿ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುತ್ತದೆ.

** ಮಿಥುನ ರಾಶಿ :
ದೂರ ಪ್ರಯಾಣದಲ್ಲಿ ವಾಹನ ತೊಂದರೆಗಳು ಎದುರಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಹೊಸ ಸಾಲದ ಪ್ರಯತ್ನಗಳು ಫಲ ನೀಡುವುದಿಲ್ಲ. ವೃತ್ತಿಪರ ವ್ಯವಹಾರಗಳು ಸೀಮಿತವಾಗಿ ಸಾಗುತ್ತವೆ. ಉದ್ಯೋಗದ ವಾತಾವರಣವು ನಿರುತ್ಸಾಹಗೊಳಿಸುತ್ತದೆ.

** ಕಟಕ ರಾಶಿ :
ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸುತ್ತೀರಿ. ಕೌಟುಂಬಿಕ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಮನೆಯಲ್ಲಿ ಮಕ್ಕಳ ವಿವಾಹದ ಪ್ರಸ್ತಾಪವಿರುತ್ತದೆ. ಕೈಗೊಂಡ ವ್ಯವಹಾರಗಳಲ್ಲಿ ಯಶಸ್ಸು ದೊರೆಯುತ್ತದೆ. ವೃತ್ತಿ ವ್ಯವಹಾರಗಳು ತೃಪ್ತಿಕರವಾಗಿ ಸಾಗುತ್ತವೆ. ನಿರುದ್ಯೋಗಿಗಳಿಗೆ ಅಧಿಕಾರಿಗಳ ಬೆಂಬಲದಿಂದ ಹೊಸ ಅವಕಾಶಗಳು ಸಿಗುತ್ತವೆ.

** ಸಿಂಹ ರಾಶಿ :
ನೀವು ಹೆಚ್ಚಿನ ಪ್ರಯತ್ನದಿಂದ ಸ್ವಲ್ಪ ಫಲಿತಾಂಶವನ್ನು ಪಡೆಯುತ್ತೀರಿ. ಕೆಲವು ವಿಚಾರಗಳಲ್ಲಿ ಬಂಧುಗಳೊಂದಿಗೆ ವಿವಾದ ಉಂಟಾಗುತ್ತವೆ. ಪ್ರಮುಖ ವಿಷಯಗಳಲ್ಲಿ ವಿಳಂಬ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ವ್ಯಾಪಾರಸ್ಥರಿಗೆ ಅಲ್ಪ ಲಾಭ ದೊರೆಯುತ್ತದೆ. ಪ್ರಯಾಣವನ್ನು ಮುಂದೂಡಲಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗೊಂದಲಮಯ ಸನ್ನಿವೇಶಗಳಿರುತ್ತವೆ.

** ಕನ್ಯಾ ರಾಶಿ :
ಮನೆಯ ಹೊರಗೆ ಒತ್ತಡಗಳನ್ನು ನಿವಾರಿಸಿ ಮುನ್ನಡೆಯುತ್ತೀರಿ. ಕೈಗೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ಭೂಮಿ ಸಂಬಂಧಿತ ಮಾರಾಟದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ವ್ಯಾಪಾರಗಳಿಗೆ ಸಮಯಕ್ಕೆ ಹೂಡಿಕೆಗಳು ದೊರೆಯುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹ ದೊರೆಯುತ್ತದೆ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ.

** ತುಲಾ ರಾಶಿ :
ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ವಾಹನ ವ್ಯಾಪಾರಿಗಳಿಗೆ ಹೆಚ್ಚಿನ ಪ್ರಗತಿ ದೊರೆಯುತ್ತದೆ. ಬಂಧುಗಳ ಆಗಮನ ಸಂತಸ ತರುತ್ತದೆ. ಉದ್ಯೋಗ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆಗಳು ಅನುಕೂಲಕರವಾಗಿರುತ್ತವೆ. ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ಕೆಲವು ವ್ಯವಹಾರಗಳಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ ಎಲ್ಲರ ಮೆಚ್ಚುಗೆಯನ್ನು ಪಡೆಯುತ್ತೀರಿ.

** ವೃಶ್ಚಿಕ ರಾಶಿ :
ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಸಾಕಷ್ಟು ವಿಶ್ರಾಂತಿ ಇರುವುದಿಲ್ಲ. ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಪ್ರಮುಖ ವಿಷಯಗಳಲ್ಲಿ ಆಲೋಚನಾ ವಿಧಾನವನ್ನು ಬದಲಾಯಿಸುವುದು ಒಳ್ಳೆಯದು. ಕುಟುಂಬದ ಸದಸ್ಯರೊಂದಿಗೆ ದೈವಿಕ ದರ್ಶನ ಪಡೆಯುತ್ತೀರಿ. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಪ್ರಯತ್ನಗಳು ನಿಧಾನವಾಗುತ್ತವೆ.

** ಧನುಸ್ಸು ರಾಶಿ :
ಮನೆಯ ವಾತಾವರಣ ಕಿರಿಕಿರಿಯುಂಟು ಮಾಡುತ್ತದೆ. ಕೈಗೊಂಡ ಕೆಲಸ ಹೆಚ್ಚು ಶ್ರಮದಾಯಕವಾಗಿರುತ್ತದೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರಿಗಳಿಗೆ ಕಷ್ಟಕ್ಕೆ ತಕ್ಕ ಫಲಿತಾಂಶ ಸಿಗುವುದಿಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಆತುರದಿಂದ ಇತರರೊಂದಿಗೆ ಮಾತನಾಡುವುದು ಒಳ್ಳೆಯದಲ್ಲ. ಆರ್ಥಿಕ ಪರಿಸ್ಥಿತಿ ಸ್ವಲ್ಪ ನಿಧಾನವಾಗುತ್ತದೆ.

** ಮಕರ ರಾಶಿ :
ಮನೆಯ ವಾತಾವರಣ ಉತ್ಸಾಹದಾಯಕವಾಗಿರುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಹೊಸ ಲಾಭವನ್ನು ಪಡೆಯುತ್ತೀರಿ. ಆಪ್ತ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ವಾಹನ ಯೋಗವಿದೆ. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ಉದ್ಯೋಗದಲ್ಲಿ ಹೊಸ ಪ್ರೋತ್ಸಾಹ ಸಿಗುತ್ತದೆ. ಸಂಗಾತಿಯ ಸಲಹೆ ಕೂಡಿ ಬರುತ್ತವೆ.

** ಕುಂಭ ರಾಶಿ :
ವ್ಯಾಪಾರ ವ್ಯವಹಾರಗಳಲ್ಲಿ ಆತ್ಮೀಯರಿಂದ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು. ನೀವು ಸಮಾಜದಲ್ಲಿ ವಿಶೇಷ ಗೌರವವನ್ನು ಪಡೆಯುತ್ತೀರಿ ಮತ್ತು ಪ್ರಮುಖ ಕೆಲಸಗಳು ಸುಗಮವಾಗಿ ಸಾಗುತ್ತವೆ. ಸ್ನೇಹಿತರಿಂದ ಅಮೂಲ್ಯ ವಸ್ತುಗಳನ್ನು ಉಡುಗೊರೆಯಾಗಿ ಸ್ವೀಕರಿಸಲಾಗುತ್ತದೆ. ವ್ಯವಹಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಉದ್ಯೋಗಗಳಲ್ಲಿನ ಅಡಚಣೆಗಳು ನಿವಾರಣೆಯಾಗುತ್ತವೆ.

** ಮೀನ ರಾಶಿ :
ಹಣಕಾಸಿನ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ, ಕೆಲವು ವಿಷಯಗಳಲ್ಲಿ ಆಲೋಚನೆಗಳು ಬದಲಾಗುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಕುಟುಂಬ ಸದಸ್ಯರಿಂದ ನಿರೀಕ್ಷಿತ ಸಹಾಯ ದೊರೆಯುವುದಿಲ್ಲ. ಪ್ರಯಾಣವನ್ನು ಮುಂದೂಡುವುದು ಉತ್ತಮ. ವ್ಯಾಪಾರದ ತೊಡಕುಗಳು ಹೆಚ್ಚಾಗುತ್ತವೆ. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ.

Categories
ಚಿಕ್ಕಮಗಳೂರು ಜಿಲ್ಲಾ ವಾರ್ತೆ ರಾಜಕೀಯ

ಮತ್ತೆ ಸಿಟಿ ರವಿ ಪರ್ವ ಶುರು!

ಮತ್ತೆ ಸಿಟಿ ರವಿ ಪರ್ವ ಶುರು!

– ವಿಧಾನ ಪರಿಷತ್ ಸದಸ್ಯರಾಗಿ ಸಿ. ಟಿ. ರವಿ ಆಯ್ಕೆ
– ಕರ್ನಾಟಕ ಬಿಜೆಪಿಗೆ ಹೊಸ ಚೈತನ್ಯ: ಅಭಿಮಾನಿಗಳ ಸಂತಸ

NAMMUR EXPRESS NEWS
ಚಿಕ್ಕಮಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದ ಇಂದು ಅಂತಿಮ ಕಣದಲ್ಲಿ ಡಾ. ಸಿ. ಟಿ. ರವಿ ಸೇರಿದಂತೆ ಉಳಿದಿದ್ದ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಬೆಂಗಳೂರಿನಲ್ಲಿ ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಮಲೆನಾಡ ನಾಯಕನಿಗೆ ಮಹತ್ವದ ಹುದ್ದೆ ಸಿಕ್ಕಿದೆ.

ಮೂರು ದಶಕಗಳ ಕಾಲ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ನಿರಂತರ ತೊಡಗಿಸಿಕೊಂಡಿದ್ದ ಡಾ. ಸಿ. ಟಿ. ರವಿ ಮತಗಟ್ಟೆ ಮಟ್ಟದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಷಾ ಜೊತೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಲೋಕಸಭಾ ಚುನಾವಣೆಯಲ್ಲಿ ನಿರಂತರ ಪಾದರಸದಂತೆ ಕರ್ನಾಟಕವಲ್ಲದೆ ದೇಶದ ನಾನಾ ರಾಜ್ಯಗಳಲ್ಲಿ ಬಿಜೆಪಿ ಮತ್ತು ಎನ್ ಡಿ ಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.

ಎಬಿವಿಪಿ, ಯುವ ಮೋರ್ಚಾ, ಬಿಜೆಪಿಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ದಕ್ಷತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾರೆ. ಅವರ ಸಂಘಟನಾ ಚಾತುರ್ಯವನ್ನು ಮನಗಂಡಿದ್ದ ಪಕ್ಷವು ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಉನ್ನತ ಹುದ್ದೆಗೆ ನೇಮಕ ಮಾಡಿತ್ತು. ಅಲ್ಲಿಯೂ ದೇಶದ ತುಂಬಾ ಪಕ್ಷ ಸಂಘಟಿಸುವ ಮೂಲಕ ಪಕ್ಷದ ಗಮನ ಸೆಳೆದಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಪರಾಭಾವಗೊಂಡಿದ್ದ ಅವರು ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಸಂಘಟನಾ ಸಾಮರ್ಥ್ಯಕ್ಕೆ ಪಕ್ಷ ಮನ್ನಣೆ ನೀಡುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ಬಂದಂತಾಗಿದೆ.

Categories
ಉಡುಪಿ ಚಿಕ್ಕಮಗಳೂರು ರಾಜಕೀಯ ರಾಜ್ಯ ಶಿವಮೊಗ್ಗ

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಭೋಜೇಗೌಡ ಗೆಲುವು!

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಭೋಜೇಗೌಡ ಗೆಲುವು!

– ಕಾಂಗ್ರೆಸ್ ಸೋಲು: ಮತ್ತೆ ಮೈತ್ರಿ ಅಭ್ಯರ್ಥಿ ಜಯಭೇರಿ
– ಸರಳ ನಾಯಕನ ಕೈ ಹಿಡಿದ ಮತದಾರರು!

NAMMUR EXPRESS NEWS
ಶಿವಮೊಗ್ಗ / ಚಿಕ್ಕಮಗಳೂರು/ ಉಡುಪಿ : ನೈರುತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ನಡೆದಿದ್ದು ಮತ ಎಣಿಕೆಯಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯ ಭೋಜೆಗೌಡ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಕೂಡ ಸೋಲು ಕಂಡಿದ್ದಾರೆ.

ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹೊನ್ನಾಡಿ, ನ್ಯಾಮತಿ, ಚನ್ನಗಿರಿ ತಾಲೂಕು ವ್ಯಾಪ್ತಿಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಹಾಲಿ ಎಂಎಂಸಿ ಎಸ್ ಎಲ್ ಬೋಜೇಗೌಡ, ಭಾರೀ ಬಹುಮತದಿಂದ ಜಯ ಸಾಧಿಸಿದ್ದಾರೆ.

ಈ ಮೂಲಕ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮತ್ತೆ ಜೆಡಿಎಸ್ ಬಿಜೆಪಿ ಮೈತ್ರಿ ಗೆಲುವನ್ನ ಸಾಧಿಸಿದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ತನ್ನ ಸ್ಥಾನಗಳನ್ನ ಮರು ಪಡೆದುಕೊಂಡಿದೆ

Categories
ಅಂತಾರಾಷ್ಟ್ರೀಯ ಸುದ್ದಿ ರಾಜಕೀಯ

ಹ್ಯಾಟ್ರಿಕ್ ಮೋದಿ ಭಾರತ!

ಹ್ಯಾಟ್ರಿಕ್ ಮೋದಿ ಭಾರತ!

– ಜೂನ್ 9ಕ್ಕೆ ಮೋದಿ ಪದಗ್ರಹಣಕ್ಕೆ ಸಜ್ಜು
– ಇಡೀ ದೇಶಕ್ಕೆ ಕಾತುರ: ಎಲ್ಲೆಡೆ ಸಂಭ್ರಮ

NAMMUR EXPRESS NEWS
ನವ ದೆಹಲಿ: ಹಂಗಾಮಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್ 9, ಭಾನುವಾರ ವಾರ ಸಂಜೆ 6: 30ಕ್ಕೆ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅನೇಕ ದೇಶ ವಿದೇಶಗಳ ಗಣ್ಯಾತಿ ಗಣ್ಯರು ಪ್ರಮಾಣ ವಚನದಲ್ಲಿ ಭಾಗಿಯಾಗಲಿದ್ದಾರೆ.
ಎನ್.ಡಿ.ಎ ಒಕ್ಕೂಟ ಬಹುಮತ ಪಡೆದಿದ್ದು ಇದೀಗ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಸಭೆಯಲ್ಲಿ ನಿರ್ಧಾರವಾಗುವ ಮೂಲಕ ಭಾರತದ ಹ್ಯಾಟ್ರಿಕ್ ಪ್ರಧಾನ ಮಂತ್ರಿಯಾಗಲಿದ್ದಾರೆ.

ದೇಶದ 14ನೇ ಪ್ರಧಾನಿಯಾಗಿ 2014ರಿಂದ ಇಲ್ಲಿವರೆಗೆ ಸತತವಾಗಿ ಆಡಳಿತ ನಡೆಸಿದ ಮೋದಿ ಪ್ರಧಾನಿಯಾಗಿ ವಿಶ್ವದಲ್ಲಿ ಭಾರತದ ಹೆಸರನ್ನು ಅಚ್ಚಳಿಯದಂತೆ ಮಾಡಿದ್ದರು. ಬಿಜೆಪಿ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದೆ.