Categories
ತೀರ್ಥಹಳ್ಳಿ ರಾಜಕೀಯ ರಾಜ್ಯ ಶಿಕ್ಷಣ

ಬೋಜೇಗೌಡ ಅವರ ಗೆಲುವಿಗೆ ಯಡೂರು ರಾಜಾರಾಮ್ ಉತ್ತಮ ಸಂಘಟನೆ

ಬೋಜೇಗೌಡ ಅವರ ಗೆಲುವಿಗೆ ಯಡೂರು ರಾಜಾರಾಮ್ ಉತ್ತಮ ಸಂಘಟನೆ

– ಬೋಜೇಗೌಡ ಅವರ ಸಂಘಟನೆಗೆ ಕೆಲಸ ಮಾಡಿದ ರಾಜಾರಾಮ್ ಗೆ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆಲುವು ಸಾಧಿಸಿದ ಎಸ್ ಎಂ ಬೋಜೇಗೌಡ ಅವರ ಗೆಲುವಿಗೆ ಮಲೆನಾಡು ಭಾಗದಲ್ಲಿ ಜೆಡಿಎಸ್ ಮುಖಂಡ ಯುವ ಸಂಘಟಕ ಯಡೂರು ರಾಜಾರಾಮ್ ಅತ್ಯುತ್ತಮ ಸಂಘಟನೆಯಲ್ಲಿ ಕೆಲಸ ಮಾಡಿದ್ದಾರೆ.

ಕಳೆದ ಎರಡು ತಿಂಗಳಿಂದ ಮತದಾರರನ್ನು ತಲುಪುವಲ್ಲಿ ಬೋಜೇಗೌಡ ಅವರ ಜೊತೆ ಸಾತ್ ನೀಡಿದ ರಾಜಾರಾಮ್ ಅನೇಕ ಮತದಾರರಿಗೆ ಬೋಜೇಗೌಡರ ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಅವರ ಕೆಲಸದ ಬಗ್ಗೆ ಮಾಹಿತಿಯನ್ನು ನೀಡಿ ಅವರ ಸಂಘಟಿಸುವಲ್ಲಿ ಸಫಲರಾಗಿದ್ದರು. ಇದೀಗ ಬೋಜೇಗೌಡ ಅವರ ಗೆಲುವಿನ ಬಳಿಕ ರಾಜಾರಾಮ್ ಅವರ ಬಗ್ಗೆ ಬೋಜೇಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅವರ ಕೆಲಸದ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

ರಾಜರಾಮ್ ತೀರ್ಥಹಳ್ಳಿ ಹಾಗೂ ಮಲೆನಾಡು ಭಾಗದ ಸಂಘಟಕ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು ಹಿಂದೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದರು. ಇದೀಗ ಸಂಘಟನೆಯ ಮೂಲಕ ಚುನಾವಣೆ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಮೈಸೂರಿನಲ್ಲಿ ನಡೆದ ಮತ ಎಣಿಕೆ ಭೋಜೇಗೌಡ ಅವರ ಭೇಟಿಯಾಗಿರುವ ರಾಜಾರಾಮ್ ಅವರನ್ನು ಅಭಿನಂದಿಸಿದ್ದಾರೆ.

Categories
ರಾಜ್ಯ ಹವಾಮಾನ ಸುದ್ದಿ

ಟಾಪ್ 5 ನ್ಯೂಸ್ ಕರ್ನಾಟಕ

ಟಾಪ್ 5 ನ್ಯೂಸ್ ಕರ್ನಾಟಕ

ಹಾವೇರಿ: ಧಗಧಗಿಸಿದ ಬೆಂಕಿ ಸುಟ್ಟು ಭಸ್ಮವಾಯ್ತು 5 ಅಂಗಡಿ
– ಬೆಳಗಾವಿ: ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
– ಮೈಸೂರಿನ ಗುಜರಿ ಗೋಡೌನ್​ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ
– ಗದಗ : ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ
– ಧಾರವಾಡ: ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ

NAMMUR EXPRESS NEWS
ಹಾವೇರಿ: ಹಾವೇರಿ ಜಿಲ್ಲೆಯ ಚಿಕ್ಕೇರೂರು ಗ್ರಾಮದಲ್ಲಿ ಬೆಂಕಿ ಆಕಸ್ಮಿಕ ನಡೆದಿದ್ದು, ಐದಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಸುಮಾರು 30 ಲಕ್ಷ ರೂ.ಗಿಂತ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.‍ ಸದ್ಯ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದಟ್ಟ ಹೊಗೆ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಎಲೆಕ್ಟ್ರಿಕಲ್ ಅಂಗಡಿ, ಬೇಕರಿ, ಗೊಂಬಿ ಅಂಗಡಿ, ಫುಟವೇರ್ ಅಂಗಡಿ, ಹೊಟೇಲ್ ಭಸ್ಮ.ವಾಗಿದೆ. ಸ್ಥಳಕ್ಕೆ ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‌ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

– ಬೆಳಗಾವಿ: ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಳಗಾವಿ: ಜಿಲ್ಲೆಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಖನಗಾಂವ ಗ್ರಾಮದ ಕೆ.ಎಚ್.ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕೆಸ್‌ಆರ್‌ಟಿಸಿ ಬಸ್‌ ಮತ್ತು ಬೈಕ್‌ ಡಿಕ್ಕಿಯಾಗಿ ಈ ಅವಘಡ ನಡೆದಿದೆ. ಮೃತರನ್ನು ಸುಳೇಬಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ (29) ಎಂದು ಗುರುತಿಸಲಾಗಿದೆ. ಬೆಳಗಾವಿ ಕಡೆಗೆ ಬರುತ್ತಿದ್ದ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ವಿಠ್ಠಲ ದತ್ತಾ ಲೋಕರೆ 30 ಅಡಿ ದೂರದ ಹೊಲಕ್ಕೆ ಹಾರಿ ಬಿದ್ದಿದ್ದರು. ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಕೂಡ ಪಲ್ಟಿ ಹೊಡೆದಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

– ಮೈಸೂರಿನ ಗುಜರಿ ಗೋಡೌನ್​ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ

ಮೈಸೂರು: ಗುಜರಿಯ ಗೋಡೌನ್‌ನಲ್ಲಿ ವಿಷಕಾರಿ ಅನಿಲ ಸೋರಿಕೆ‌ಯಾಗಿ 30 ಮಂದಿ ಅಸ್ವಸ್ಥಗೊಂಡ ಘಟನೆ ಮೈಸೂರಿನಲ್ಲಿ ಸಂಭವಿಸಿದೆ. ಮೈಸೂರಿನ ಹಳೆ ಕೆಸರೆಯ ಗುಜರಿ ಅಂಗಡಿಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಆರಂಭದಲ್ಲಿ ಶೆಡ್​ನಲ್ಲಿ ಕೆಲಸ ಮಾಡುತ್ತಿದ್ದ ಐವರು ಅಸ್ವಸ್ಥಗೊಂಡರೆ ಬಳಿಕ ಸುತ್ತಲಿನ ಗ್ರಾಮಸ್ಥರೂ ಆರೋಗ್ಯ ಸಮಸ್ಯೆ ಎದುರಿಸಿ ಆಸ್ಪತ್ರೆ ಸೇರಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ ವಿಷಾನಿಲ ಸೋರಿಕೆಯಾಗಿತ್ತು. ಮೊದಲು ಗುಜರಿ ಗೋಡೌನ್​ನಲ್ಲಿ ಕೆಲಸ ಮಾಡುತ್ತಿದ್ದವರು ಅಸ್ವಸ್ಥಗೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಳಿಕ ಗ್ರಾಮಸ್ಥರಿಗೆ ಕೆಮ್ಮು, ವಾಂತಿ ಶುರುವಾಗಿದೆ. ಅಸ್ವಸ್ಥಗೊಂಡಿರುವ 30 ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೈಸೂರಿನ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ಗುಜರಿ ಗೋಡೌನ್​ನಲ್ಲಿ ಘಟನೆ ಸಂಭವಿಸಿದೆ. ಅನಿಲ ಗೋಡೌನ್​ನಿಂದ ಹೊರಕ್ಕೆ ಬಂದು ಕೆಸರೆ ಗ್ರಾಮದಲ್ಲಿ ಹರಡಿದಿಎ. ಕೆಸರೆ ಗ್ರಾಮಸ್ಥರಲ್ಲೂ ಉಸಿರಾಟದ ತೊಂದರೆ, ಕೆಮ್ಮು ಕಾಣಿಸಿಕೊಂಡು ಪರದಾಡಿದ್ದಾರೆ. ಎನ್.ಆರ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದೆ. ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

– ಗದಗ : ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ

ಗದಗ: ವಾಟ್ಸ್ಆ್ಯಪ್‌ ಗ್ರೂಪ್‌ಗೆ ಬಂದಿದ್ದ ಮೆಸೇಜ್‌ವೊಂದನ್ನು ತೆರೆದು ನೋಡಿದ ವ್ಯಾಪಾರಿಯೊಬ್ಬರು ತಮ್ಮ ಖಾತೆಯಲ್ಲಿದ್ದ ಮೂರೂವರೆ ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಸೈಬರ್‌ ವಂಚಕರು ಹಣ ಲಪಟಾಯಿಸಿದ್ದಾರೆ. ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅನಿಲ್‌ ಮಲ್ಲಪ್ಪ ಚಿನ್ನಾಪುರ ಎಂಬುವವರೇ ಸೈಬರ್‌ ವಂಚನೆಗೆ ಒಳಗಾದ ವ್ಯಕ್ತಿ. ನಗರದ ಜಿ.ಎಸ್. ಪಾಟೀಲ್‌ ಲೇಔಟ್‌ನಲ್ಲಿ ವಾಸವಾಗಿರುವ ಇವರು, ಮೊದಲು ಜಿ.ಎಸ್. ಪಾಟೀಲ್‌ ಲೇಔಟ್‌ ವಾಟ್ಸ್ಆ್ಯಪ್‌ ಗ್ರೂಪ್‌ನಲ್ಲಿ ಯುನಿಯನ್ ಬ್ಯಾಂಕ್‌ನ ಎಪಿಕೆ ಹೆಸರಿನಲ್ಲಿ ಬಂದಿದ್ದ ಲಿಂಕ್ ಮೆಸೇಜ್ ಅನ್ನು ತೆರದು ನೋಡಿದ್ದಾರೆ. ಇದಾದ ಬಳಿಕ ಮರುದಿನ ಫೋನ್‌ ಕರೆಯೊಂದು ಬಂದಿದೆ. ಯೂನಿಯನ್ ಬ್ಯಾಂಕ್ ಮುಖ್ಯಸ್ಥ ಎಂದು ಕರೆ ಮಾಡಿದ ವ್ಯಕ್ತಿಯು, ನಿಮ್ಮ ಬ್ಯಾಂಕ್ ಖಾತೆ ಡಿಆಕ್ಟಿವೇಟ್‌ ಆಗಿದೆ ಎಂದು ಕೆಲವು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದಾದ ಅರ್ಧಗಂಟೆಯಲ್ಲೇ ಅನಿಲ್‌ ಅವರ ಯೂನಿಯನ್‌ ಬ್ಯಾಂಕ್‌ ಖಾತೆಯಿಂದ ಮೊದಲ ಹಂತದಲ್ಲಿ 50 ಸಾವಿರ ರೂ, 2ನೇ ಹಂತದಲ್ಲಿ 2,25,000 ರೂ. ಹೀಗೆ ಒಟ್ಟು 3,74,998 ರೂಗಳನ್ನು ಸೈಬರ್‌ ವಂಚಕರು ಎಗರಿಸಿದ್ದಾರೆ. ಸೈಬರ್‌ ವಂಚನೆಗೆ ಒಳಗಾದ ಅನಿಲ್ ನಗರದ ರಾಜೀವ್‌ ಗಾಂಧಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ಖಾತೆಯಿಂದ ಎಗರಿಸಿದ ಹಣ‌ವು ತಮಿಳುನಾಡು ಹಾಗೂ ಬಾಂಗ್ಲಾದೇಶದ ಬ್ಯಾಂಕ್‌ ಖಾತೆಗಳಿಗೆ‌ ಜಮೆ ಆಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ.

– ಧಾರವಾಡ: ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ

ಧಾರವಾಡ: ಹಿರಿಯ ಜೀವಿಯೊಬ್ಬರು ಮಳೆ ಬರುವಾಗಲೇ ತಪಸ್ಸಿಗೆ ಕುಳಿತ ಘಟನೆ ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಎದುರು ನಡೆದಿದೆ. ಜೋರಾಗಿ ಬರುತ್ತಿದ್ದ ಮಳೆಯಲ್ಲಿ ನಡು ರಸ್ತೆಯಲ್ಲಿಯೇ ಕಣ್ಣು ಮುಚ್ಚಿ ಕುಳಿತ ವೃದ್ಧ, ಒಂಚೂರು ಅಲುಗಾಡದೆ ತಪಸ್ಸು ಮಾಡಿದ್ದಾರೆ. ಇನ್ನೂ ಈ ದೃಶ್ಯವನ್ನು ಓರ್ವ ಯುವಕನ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

Categories
ಆರೋಗ್ಯ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಮಲ್ನಾಡ್ ಟಾಪ್ ನ್ಯೂಸ್..!

ಮಲ್ನಾಡ್ ಟಾಪ್ ನ್ಯೂಸ್..!

– ತೀರ್ಥಹಳ್ಳಿ: ಸರ್ಕಾರಿ ಆಸ್ಪತ್ರೆಯ ವೈದ್ಯರ ಮನೆಯಲ್ಲಿ ಕಳ್ಳತನ.!
– ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಟೆಂಡರ್
– ಹೋಟೆಲ್ ನಲ್ಲಿ ಗ್ರಾಹಕರ ಹಣದ ಬ್ಯಾಗ್‌ ಲಪಟಾಯಿಸಿದ ಸರ್ವರ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಯೋಗಿಮಳಲಿ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಕಾರ್ತಿಕ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಯೋಗಿಮಳಲಿಯ ಸಿ.ಕೆ ಸರ್ಕಲ್ ಹತ್ತಿರ ಮನೆಯಲ್ಲಿ ವಾಸವಾಗಿದ್ದು, ಜೂ.6ರ ರಾತ್ರಿ ಮನೆಯಲ್ಲಿದ್ದ ನಗದು ಮತ್ತು ಬಂಗಾರ ಕಳ್ಳತನವಾಗಿದೆ. ಹಾಗೂ ಇದೇ ದಿನ ರಾತ್ರಿ ಕೋಣಂದೂರು ಸಿ.ಕೆ ಸರ್ಕಲ್‌ನಲ್ಲಿ ಬೈಕ್ ಸಹ ಕಳ್ಳತನವಾಗಿದೆ.

ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸಾಗರ ತಾಲೂಕು ಕಚೇರಿ ಅಟೆಂಡ‌ರ್!

ಶಿವಮೊಗ್ಗ: ಲಂಚ ಸ್ವೀಕರಿಸುವ ವೇಳೆ ಅಟೆಂಡ‌ರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಸಾಗರ ತಾಲೂಕು ಕಚೇರಿಯ ದಾಖಲಾತಿ ವಿಭಾಗದ ಆ‌ರ್.ಆರ್.ಟಿ ಶಾಖೆಯ ಅಟೆಂಡರ್‌ ಬಸವರಾಜ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ. ಸಾಗರದ ಬಳಸಗೋಡು ಗ್ರಾಮದ ವ್ಯಕ್ತಿಯೊಬ್ಬರ ಜಮೀನಿನ ಆ‌ರ್.ಟಿ.ಸಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಅವರ ಸ್ನೇಹಿತ ಅಸೀಬ್ ಎನ್ನುವವರು ತಾಲೂಕು ಕಚೇರಿಗೆ ತೆರಳಿ ಅಟೆಂಡರ್‌ ಬಸವರಾಜ್ ಅವರ ಬಳಿ ಆರ್‌ಟಿಸಿಗೆ ಬೇಡಿಕೆ ಇಟ್ಟಿದ್ದರು. ಮೊದಲು ಬಸವರಾಜ್ ದಾಖಲಾತಿ ಜೆರಾಕ್ಸ್‌ ಹಾಗೂ ಚಲನ್‌ಗೆ 1500 ರೂ ಲಂಚ ಸ್ವೀಕರಿಸಿದ್ದಾರೆ. ಈ ವೇಳೆ ಶಿರಸ್ತೆದಾರರಿಗೆ ನೀಡಲು ಮತ್ತೆ 2,000 ಡಿಮ್ಯಾಂಡ್ ಮಾಡಿದ್ದಾರೆ. ಮೊದಲು ಲಂಚ ನೀಡುವಾಗ ವಿಡಿಯೋ ಮಾಡಿ ಇಟ್ಟುಕೊಂಡಿದ್ದ ದೂರುದಾರ ಬಳಿಕ ಮತ್ತೆ ಲಂಚ ನೀಡುವ ಮೊದಲು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಟೆಂಡ‌ರ್ ಬಸವರಾಜ್ 2000 ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್‌ ಈಶ್ವ‌ರ್ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಆರೋಪಿ ಬಸವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ಹೋಟೆಲ್ ನಲ್ಲಿ ಗ್ರಾಹಕರ ಹಣದ ಬ್ಯಾಗ್‌ ಲಪಟಾಯಿಸಿದ ಸರ್ವರ್

ಶಿವಮೊಗ್ಗ: ಶಿವಮೊಗ್ಗ ನಗರದ ಬೈಟ್‌ ಹೊಟೆಲಿನಲ್ಲಿ ಗ್ರಾಹಕ ಬಿಟ್ಟು ಹೋದ 4 ಲಕ್ಷ ರೂ. ಇದ್ದ ಹಣದ ಚೀಲವನ್ನು ಅಲ್ಲಿನ ಸರ್ವ‌ರ್ ಎತ್ತಿಕೊಂಡು ಹೋದ ಘಟನೆ ಸಂಭವಿಸಿದ್ದು, ಆತನನ್ನು ಬಂಧಿಸಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರ ತಾಲೂಕು ಜಂಬಾನಿ ಗ್ರಾಮದ ವಾಸಿ ಲೋಕೇಶ್ ಎನ್ನುವವರು ತನ್ನ ಸ್ನೇಹಿತನೊಂದಿಗೆ ಹೋಟೇಲ್ ನಲ್ಲಿ ಊಟ ಮಾಡುತ್ತಿದ್ದಾಗ 4 ಲಕ್ಷ ರೂ. ಇದ್ದ ಚೀಲವನ್ನು ಟೇಬಲ್ ಮೇಲೆ ಇಟ್ಟಿದ್ದರು.

ಅವಸರದಲ್ಲಿ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಸ್ವಲ್ಪ ಸಮಯದ ನಂತರ ಕಾರಿನಲ್ಲಿ ಬ್ಯಾಗ್‌ ಇಲ್ಲದೇ ಇರುವುದು ಕಂಡುಬಂದಿದ್ದು, ವಾಪಾಸ್‌ ಹೋಟೇಲ್ ಗೆ ಬಂದು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಹೋಟೇಲ್ ನಲ್ಲಿ ಸರ್ವರ್ ಕೆಲಸ ಮಾಡುವ ಹೇಮಂತ್ ಕುಮಾ‌ರ್ ಎಂಬುವವನು ಬ್ಯಾಗ್ ನ್ನು ತೆಗೆದು ನೋಡಿ ಸ್ಟೋ‌ರ್ ರೂಮಿನಲ್ಲಿ ಇಡುವ ದೃಶ್ಯಾವಳಿ ಕಂಡುಬಂದಿತು. ಪೋನ್ ಮಾಡಿ ಆತನಿಗೆ ಹಣದ ಬ್ಯಾಗ್ ನ ಬಗ್ಗೆ ವಿಚಾರ ಮಾಡಿದಾಗ ಯಾವುದೇ ಬ್ಯಾಗ್, ನಗದು ಹಣ ನಾನು ತೆಗೆದುಕೊಂಡಿಲ್ಲವೆಂದು ಹೇಳಿ ಫೋನ್ ಕಟ್ ಮಾಡಿದ್ದನು. ಅಲ್ಲದೆ ಬೆಳಿಗ್ಗೆ ಹೊಟೇಲ್ ನ ಕೆಲಸಕ್ಕೂ ಕೂಡ ಬಂದಿಲಯರಲಿಲ್ಲ. ಆದ್ದರಿಂದ ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಹೇಮಂತ್ ಕುಮಾರ್ ಈತನ ಮೇಲೆ ಪ್ರಕರಣ ದಾಖಲಿಸಿದ್ದರು.

Categories
ಚುನಾವಣಾ ಸುದ್ದಿ ರಾಜಕೀಯ ರಾಷ್ಟ್ರೀಯ ವಾರ್ತೆ

ಮೋದಿ ಪದಗ್ರಹಣಕ್ಕೆ ದೇಶದ ಕಾತುರ!

ಮೋದಿ ಪದಗ್ರಹಣಕ್ಕೆ ದೇಶದ ಕಾತುರ!

– ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ: ಭಾರೀ ಪೊಲೀಸ್‌ ಬಂದೋಬಸ್ತ್

NAMMUR EXPRESS NEWS
ನವದೆಹಲಿ: ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಲುವಾಗಿ ಭಾರೀ ಭದ್ರತೆ ಕಲ್ಪಿಸಲು ಸಿದ್ಧತೆ ನಡೆದಿದೆ.

ರಾಷ್ಟ್ರಪತಿ ಭವನದ ಸುತ್ತ ಅರೆಸೇನಾ ಪಡೆ ಸಿಬ್ಬಂದಿ, ಎನ್‌ಎಸ್‌ಜಿ ಕಮಾಂಡೋಗಳು, ಡ್ರೋನ್ ಗಳು ಮತ್ತು ಸೈಪರ್‌ಗಳ ಬಹು ಹಂತದ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ಕ್ (ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ) ರಾಷ್ಟ್ರಗಳ ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.

ಪ್ರಮಾಣ ವಚನದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಅವರ ಹೋಟೆಲ್‌ಗಳಿಂದ ರಾಷ್ಟ್ರಪತಿ ಭವನಕ್ಕೆ ತೆರಳಲು ಮತ್ತು ಹಿಂತಿರುಗಲು ನಿಗದಿತ ಮಾರ್ಗವನ್ನು ಸೂಚಿಸಲಾಗುತ್ತದೆ.

ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಸ್ ಮತ್ತು ಸೆಶೆಲ್ಸ್‌ನ ಉನ್ನತ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ನಗರದ ಲೀಲಾ, ತಾಜ್, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್‌ಗಳಲ್ಲಿ ಈಗಾಗಲೇ ಭದ್ರತೆ ಕೈಗೊಳ್ಳಲಾಗಿದೆ. ರಾಷ್ಟ್ರಪತಿ ಭವನದ ಆವರಣದ ಒಳಗೆ ಮತ್ತು ಹೊರಗೆ ಮೂರು ಹಂತದ ಭದ್ರತೆಯನ್ನು ಹೊಂದಿರುತ್ತದೆ. ದೆಹಲಿ ಪೊಲೀಸ್‌ ಸಿಬ್ಬಂದಿಯನ್ನು ಹೊರ ಆವರಣದಲ್ಲಿ ನಿಯೋಜಿಸಲಾಗುವುದು ಮತ್ತು ಅರೆಸೇನಾ ಸಿಬ್ಬಂದಿಯನ್ನು ಭವನದ ಆಂತರಿಕ ಭದ್ರತೆಗೆ ನಿಯೋಜಿಸಲಾಗಿದೆ. ದೆಹಲಿ ಸಶಸ್ತ್ರ ಪೊಲೀಸ್‌ (ಡಿಎಪಿ) ಜವಾನರು ಸೇರಿದಂತೆ ಸುಮಾರು 2500 ಪೊಲೀಸ್‌ ಸಿಬ್ಬಂದಿಯನ್ನು ಸ್ಥಳದ ಸುತ್ತಲೂ ನಿಯೋಜಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ಕರ್ನಾಟಕದಲ್ಲಿ ಮುಂಗಾರು ಮಳೆ..!

ಕರ್ನಾಟಕದಲ್ಲಿ ಮುಂಗಾರು ಮಳೆ..!

– ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತ
– ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ

NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ವ್ಯಾಪಿಸತೊಡಗಿದ್ದು,ಶುಕ್ರವಾರ ಸಂಜೆ ಇಂದು ಬೆಳಗ್ಗೆ ತನಕ ಸುರಿದ ಮಳೆಗೆ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿವಿಧ ರೀತಿಯ ಅನಾಹುತ, ಅವಾಂತರಗಳಾಗಿವೆ. ವಿಜಯಪುರದ ಡೋಣಿ ನದಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿ ಸೇತುವೆ ಮೇಲೆ ಹರಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿತು. ಸವದತ್ತಿ ದೇವಸ್ಥಾನ ಮತ್ತು ಗೋಕರ್ಣದ ಮಹಾಬಲೇಶ್ವರ ದೇಗುಲದೊಳಗೆ ನೀರು ನುಗ್ಗಿದೆ. ಶಿವಮೊಗ್ಗ ಜಿಲ್ಲೆ ಆಗುಂಬೆ ಸಮೀಪ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆಯೂ ನಡೆದಿದೆ. ಇನ್ನೊಂದೆಡೆ, ದಾರವಾಡದ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ಧಾರಾಕಾರ ಮಳೆಗೆ ಜಪಕ್ಕೆ ಕುಳಿತ ವಿಡಿಯೋ ವೈರಲ್ ಆಗಿತ್ತು. ಕಲಬುರಗಿ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಲವಾರು ಜಾನುವಾರುಗಳು ಮೃತಪಟ್ಟಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಗಿತ್ತು. ಇದೇ ರೀತಿ, ಉತ್ತರಕನ್ನಡ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಬೆಳಗಾವಿ, ತುಮಕೂರು, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಬೆಂಗಳೂರು, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗಿದೆ.

ಗೋಕರ್ಣ, ಸವದತ್ತಿ ದೇವಾಲಯಗಳಿಗೆ ನುಗ್ಗಿದ ಮಳೆ ನೀರು:

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳವಾಗಿರುವ ಗೋಕರ್ಣದಲ್ಲಿ ಧಾರಾಕಾರ ಮಳೆ ಸುರಿದ ಕಾರಣ ಸಂಗಮ ನಾಲಾದ ಮೂಲಕ ಸಮುದ್ರ ಸೇರುವ ಮಳೆ ನೀರು ಮಹಾಬಲೇಶ್ವರ ಮಂದಿರದ ಸೋಮಸೂತ್ರದಿಂದ ಗರ್ಭ ಗುಡಿಗೆ ನುಗ್ಗಿತ್ತು. ಇದರಿಂದಾಗಿ ನಿನ್ನೆ ರಾತ್ರಿ ಭಕ್ತರಿಗೆ ಕೊಂಚ ತೊಂದರೆಯಾಗಿತ್ತು. ಗೋಕರ್ಣ ಮಂದಿರದ ಸಿಬ್ಬಂದಿ ಸತತ ಎರಡು ಗಂಟೆ ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನು (ಮರಳ ದಿನ್ನೆ) ಕಡಿದು ನೀರು ಸರಾಗವಾಗಿ ಹೋಗುವಂತೆ ಮಾಡಿದ ಬಳಿಕ ದೇವಸ್ಥಾನದಲ್ಲಿ ನೀರಿನ ಪ್ರಮಾಣ ಇಳಿಕೆಯಾಯಿತು. ಇನ್ನೊಂದೆಡೆ, ಬೆಳಗಾವಿ ಜಿಲ್ಲೆಯಲ್ಲಿ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು ಸವದತ್ತಿ ತಾಲೂಕಿನ ಯಲ್ಲಮ್ಮ ಗುಡ್ಡದಲ್ಲಿ ದೇವಸ್ಥಾನಕ್ಕೂ ಮಳೆ ನೀರು ನುಗ್ಗಿದೆ. ಇದರಿಂದಾಗಿ ಭಕ್ತರು ಪರದಾಡಬೇಕಾಯಿತು.

Categories
ಕರಾವಳಿ ಮಂಗಳೂರು

ಡ್ರಾಮಾ ಜೂನಿಯರ್ಸ್ ಚಾಂಪಿಯನ್ ಆದ ರಿಷಿಕಾ ಕುಂದೇಶ್ವರ!

ಡ್ರಾಮಾ ಜೂನಿಯರ್ಸ್ ಚಾಂಪಿಯನ್ ಆದ ರಿಷಿಕಾ ಕುಂದೇಶ್ವರ!

– ರಾಜ್ಯದಲ್ಲೇ ಕರಾವಳಿ ಹುಡುಗಿ ಟ್ಯಾಲೆಂಟ್ ನೋಡಿ ಮೆಚ್ಚುಗೆ
– ಮಂಗಳೂರು ಎಸ್ ಡಿ ಎಮ್ ಶಾಲೆಯ ವಿದ್ಯಾರ್ಥಿನಿ ಸಾಧನೆ

NAMMUR EXPRESS NEWS

ಮಂಗಳೂರು: ಜೀ ಕನ್ನಡ ವಾಹಿನಿಯ ಅತ್ಯಂತ ಪ್ರತಿಷ‍್ಠಿತ ಕಾಮಿಡಿ ಶೋ ಡ್ರಾಮಾ ಜೂನಿಯರ್‌ ಸೀಸನ್‌ 5 ತೆರೆ ಬಿದ್ದಿದೆ. ಈ ಸೀಸನ್ ವಿನ್ನರ್ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ ಮತ್ತು ಕುಣಿಗಲ್ ವಿಷ್ಣು ಜಂಟಿಯಾಗಿ ಟ್ರೋಫಿ ಗೆದ್ದಿದ್ದಾರೆ.

ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳೊಂದಿಗೆ ರಿಷಿಕಾ ಫೈನಲ್‌ಗೆ ಲಗ್ಗೆ ಹಾಕಿದ್ದರು. ರಿಷಿಕಾ ಕರಾವಳಿಯ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ.
ಮಂಗಳೂರು ಎಸ್ ಡಿ ಎಮ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ ರಿಷಿಕಾ ಕುಂದೇಶ್ವರ ಈಗ ಬೇಬಿ ಸ್ಟಾರ್ ಆಗಿದ್ದಾರೆ.

Categories
ಚಿಕ್ಕಮಗಳೂರು ತೀರ್ಥಹಳ್ಳಿ ಬೆಂಗಳೂರು ರಾಜಕೀಯ ಶಿವಮೊಗ್ಗ ಸಾಗರ

ಮಲೆನಾಡಲ್ಲಿ ಸಂಘಟನೆ ಮರೆತ ಕಾಂಗ್ರೆಸ್ ಮುಖಂಡರು, ನಾಯಕರು.!?

ಮಲೆನಾಡಲ್ಲಿ ಸಂಘಟನೆ ಮರೆತ ಕಾಂಗ್ರೆಸ್ ಮುಖಂಡರು, ನಾಯಕರು.!?

– ಶಿವಮೊಗ್ಗ, ಉಡುಪಿ ಚಿಕ್ಕಮಗಳೂರು 2 ಜಿಲ್ಲೆಗಳಲ್ಲೂ ಕಾಂಗ್ರೆಸ್ ಹೀನಾಯ ಸೋಲು
– ಪರಿಷತ್ ಚುನಾವಣೆಯಲ್ಲೂ ಕೂಡ ನೀರಸ ವಿಫಲ
– ದೇಶದಲ್ಲಿ ಸಕ್ಸಸ್ ಆದ್ರು ಮಲೆನಾಡಿನಲ್ಲಿ ಸಂಘಟನೆ ಕುಗ್ಗಿತೇ?
– ಮಧು ಬಂಗಾರಪ್ಪ, ಕಾಂಗ್ರೆಸ್ ಶಾಸಕರು, ನಾಯಕರ ಪ್ಲಾನ್ ಫೇಲ್

NAMMUR EXPRESS NEWS
ಶಿವಮೊಗ್ಗ/ಚಿಕ್ಕಮಗಳೂರು: ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಮಲೆನಾಡಲ್ಲಿ ಕಾಂಗ್ರೆಸ್ ಹೀನಾಯ ಕಂಡಿದೆ.
ಕಾಂಗ್ರೆಸ್ ನಾಯಕರಾದ ಮಧು ಬಂಗಾರಪ್ಪ ಇದ್ದು ಕೂಡ ಹಾಗೂ ಮೂರು ಮಂದಿ ಶಾಸಕರು ಇದ್ದರೂ ಕೂಡ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆಲುವು ಪಡೆದುಕೊಂಡಿದೆ. ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಅಲ್ಲಿ ಕಾಂಗ್ರೆಸ್ ನೆಲಕಚ್ಚಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕೂಡ ಎರಡು ಸ್ಥಾನ ಬಿಜೆಪಿ ಮೈತ್ರಿ ಪಡೆದುಕೊಂಡಿದೆ.
ಬಿವೈ ರಾಘವೇಂದ್ರ 4ನೇ ಬಾರಿಗೆ ಬಾರಿ ಬಹುಮತದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದೀಗ ಎಲ್ಲೆಡೆ ಎದ್ದಿರುವಂತಹ ಪ್ರಶ್ನೆ ಕಾಂಗ್ರೆಸ್ ನಾಯಕರು, ಮುಖಂಡರ ನಡುವೆ ಸಂಘಟನೆ ಕೊರತೆ!.

ಹೌದು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ನಡುವೆಯೂ ಕಾಂಗ್ರೆಸ್ ಶಿವಮೊಗ್ಗ ಜಿಲ್ಲೆಯಲ್ಲಿ ಗೆಲ್ಲುವಲ್ಲಿ ವಿಫಲವಾಗಿದೆ. ಜೊತೆಗೆ ತನ್ನ ಸಹೋದರಿಯನ್ನು ಗೆಲ್ಲಿಸಿಕೊಂಡು ಬರಲು ಮಧು ಬಂಗಾರಪ್ಪ ವಿಫಲರಾಗಿದ್ದಾರೆ. ಸಂಘಟನೆಯ ಕೊರತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜನರ ನಡುವೆ ಸಂಪರ್ಕ ಸಾಧಿಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಈ ಹೊಣೆಯನ್ನು ಎಲ್ಲಾ ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಮುಖಂಡರು, ನಾಯಕರು ಹೊರಬೇಕಿದೆ.

ಶಾಸಕರ ಊರಲ್ಲೂ ಬಿಜೆಪಿ ಲೀಡ್

ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ, ಸೊರಬದಲ್ಲಿ ಮಧು ಬಂಗಾರಪ್ಪ, ಭದ್ರಾವತಿಯಲ್ಲಿ ಸಂಗಮೇಶ್ ಸೇರಿದಂತೆ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಪ್ರಮುಖ ನಾಯಕರಿದ್ದಾರೆ. ಇನ್ನು ಸಹಕಾರಿ ಕ್ಷೇತ್ರದ ನಾಯಕರಾದ ಮಂಜುನಾಥಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಹೀಗೆ ಅನೇಕ ನಾಯಕರ ದಂಡೆ ಇದ್ದರೂ, ಕಾಂಗ್ರೆಸ್ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಲೀಡ್ ಪಡೆಯಲು ಸಾಧ್ಯವಾಗಿಲ್ಲ. ಈ ಪ್ರಶ್ನೆ ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ.

ಇತ್ತ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಫೇಲ್!

ಚಿಕ್ಕಮಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದರೂ ಕೂಡ ಇಲ್ಲಿ ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಬರಲಿಲ್ಲ, ಎಲ್ಲಾ ಕಡೆ ಕೋಟ ಶ್ರೀನಿವಾಸ್ ಪೂಜಾರಿಯವರು ಲೀಡ್ ಪಡೆದುಕೊಂಡಿದ್ದು, ಅದ್ಭುತವಾಗಿ ಗೆಲುವು ಸಾಧಿಸಿದ್ದಾರೆ. ಇವರು ಕೂಡ ಸುಮಾರು 2,59,175 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಜೊತೆಗೆ ಎಲ್ಲಾ ತಾಲೂಕು ಕ್ಷೇತ್ರಗಳಲ್ಲೂ ಮುನ್ನಡೆ ಪಡೆದುಕೊಂಡಿದ್ದಾರೆ. ಇಲ್ಲಿ ಕೂಡ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಪ್ರಮುಖ ನಾಯಕರು ಇದ್ದಾರೆ. ಆದರೆ ಸಂಘಟನೆ ಫೇಲ್ ಆಗಿದೆ.

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ!

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಅನೇಕ ಅವಕಾಶಗಳಿದ್ದರೂ ಪಕ್ಷ ಬಲವರ್ಧನೆ ಆಗುತ್ತಿಲ್ಲ. ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ನಡುವೆ ಗೊಂದಲವಿದೆ. ಜೊತೆಗೆ ಎರಡನೇ ಹಂತ ಹಾಗೂ ಮೊದಲನೇ ಹಂತದ ನಾಯಕರ ನಡುವೆ ಅಂತರ ಕಾಯ್ದುಕೊಳ್ಳಲು ಎರಡು ಪ್ರಮುಖ ನಾಯಕರು ಪ್ಲಾನ್ ಮಾಡುತ್ತಿದ್ದಾರೆ. ಇದರಿಂದಾಗಿ ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ ಎಂಬ ಕಾರ್ಯಕರ್ತರ ಅಳಲು ಈಗ ಕೇಳಿಬಂದಿದೆ. ಕಾರ್ಯಕರ್ತರು ತಮ್ಮ ಕೆಲಸ ಮಾಡುತ್ತಿದ್ದರು, ನಾಯಕರ ಆಜ್ಞೆಯನ್ನು ಕಾಯಬೇಕಿದೆ ಹೀಗಾಗಿ ಮಲೆನಾಡಿನಲ್ಲಿ ಕಾಂಗ್ರೆಸ್ ಬ್ರೇಕ್ ಫೇಲ್ ಆಗಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎಷ್ಟು ಲೀಡ್?

ಚಿಕ್ಕಮಗಳೂರು: ವಿಧಾನಸಭಾ ಕ್ಷೇತ್ರದಲ್ಲಿ ಕೋಟ
ಶ್ರೀನಿವಾಸ ಪೂಜಾರಿ ಅವರು 92,788 ಮತಗಳನ್ನು ಪಡೆದರೆ
ಕೆ. ಜಯಪ್ರಕಾಶ್ ಹೆಗ್ಡೆಯವರು 68,995 ಮತಗಳನ್ನು ಗಳಿಸಿದ್ದು, ಪೂಜಾರಿಯವರು 23,793 ಮತಗಳ ಅಂತರ ಸಾಧಿಸಿದ್ದಾರೆ.

ತರೀಕೆರೆ: ಕೋಟ ಶ್ರೀನಿವಾಸ ಪೂಜಾರಿಯವರು 80,995 ಮತಗಳನ್ನು ಗಳಿಸಿದರೆ ಕೆ. ಜಯಪ್ರಕಾಶ್ ಹೆಗ್ಡೆ ಅವರು 60,314 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಲೀಡ್ 20,681 ಮತಗಳು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲೆಲ್ಲಿ ಲೀಡ್?

ಶಿವಮೊಗ್ಗದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ರಾಘವೇಂದ್ರ ಅವರು 7,78,721, ಗೀತಾ ಶಿವರಾಜ್ ಕುಮಾರ್ 5,35,006, ಈಶ್ವರಪ್ಪ 30,050 ಮತ ಗಳಿಸಿದ್ದು, ರಾಘವೇಂದ್ರ 2,43,715 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ : ಬಿ ವೈ ರಾಘವೇಂದ್ರ ಅವರು 106243 ಮತಗಳನ್ನು ಗಳಿಸಿದ್ದರೆ, ಗೀತಾ ಶಿವರಾಜ್ ಕುಮಾರ್ ಅವರು 66575 ಮತಗಳನ್ನು ಗಳಿಸಿದ್ದಾರೆ, ಕೆಎಸ್ ಈಶ್ವರಪ್ಪ ಅವರು 555 ಮತಗಳನ್ನು ಗಳಿಸಿದ್ದು ಇಲ್ಲಿ ಬಿ ವೈ ರಾಘವೇಂದ್ರ ಅವರ ಲೀಡ್ 39668 ಆಗಿದೆ.

ಭದ್ರಾವತಿ : ಭದ್ರಾವತಿಯಲ್ಲಿ ಬಿ ವೈ ರಾಘವೇಂದ್ರ ಅವರು 84208 ಮತಗಳನ್ನು ಗಳಿಸಿದ್ದು ಗೀತಾ ಶಿವರಾಜ್ ಕುಮಾರ್ ಅವರು 65105 ಮತಗಳಿದ್ದಾರೆ, ಕೆಎಸ್ ಈಶ್ವರಪ್ಪನವರು 3267 ಮತ ಗಳಿಸಿದ್ದಾರೆ. ಬಿ ವೈ ರಾಘವೇಂದ್ರ ಅವರ ಲೀಡ್ 19103 ಆಗಿದೆ.

ತೀರ್ಥಹಳ್ಳಿ: ಬಿ ವೈ ರಾಘವೇಂದ್ರ ಅವರು 92993 ಮತಗಳಿಸಿದು ಗೀತಾ ಶಿವರಾಜ್ ಕುಮಾರ್ ಅವರು 57444 ಮತಗಳಿಸಿದ್ದು ಕೆ ಎಸ್ ಈಶ್ವರಪ್ಪನವರು 2529 ಮತಗಳಿಸಿದ್ದಾರೆ. ಇಲ್ಲಿಗೆ ಬಿ ವೈ ರಾಘವೇಂದ್ರ ಅವರ ಲೀಡ್ 35549 ಆಗಿದೆ.

ಶಿಕಾರಿಪುರ: ಬಿ ವೈ ರಾಘವೇಂದ್ರ ಅವರು 87153 ಮತಗಳಿಸಿದು ಗೀತಾ ಶಿವರಾಜ್ ಕುಮಾರ್ ಅವರು 75672 ಮತ ಗಳಿಸಿದ್ದು, ಕೆಎಸ್ ಈಶ್ವರಪ್ಪನವರು 1969 ಮತಗಳಿಸಿದ್ದಾರೆ. ಬಿ ವೈ ರಾಘವೇಂದ್ರ ಅವರ ಲೀಡ್ 11483 ಆಗಿದೆ.

ಸೊರಬ : ಬಿವೈ ರಾಘವೇಂದ್ರ ಅವರು 88170 ಮತಗಳಿಸಿದು ಗೀತಾ ಶಿವರಾಜ್ ಕುಮಾರ್ ಅವರು 70233 ಮತಗಳಿಸಿದ್ದು ಕೆ ಎಸ್ ಈಶ್ವರಪ್ಪನವರು 415 ಮತಗಳಿಸಿದ್ದಾರೆ.ಇಲ್ಲಿಗೆ ಬಿ ವೈ ರಾಘವೇಂದ್ರ ಅವರ ಲೀಡ್ 17937 ಆಗಿದೆ.

ಸಾಗರ : ಬಿ ವೈ ರಾಘವೇಂದ್ರ ಅವರು 95209 ಮತಗಳಿಸಿದ್ದು ಗೀತಾ ಶಿವರಾಜ್ ಕುಮಾರ್ ಅವರು 68690 ಮತಗಳಿಸಿದ್ದು ಕೆ ಎಸ್ ಈಶ್ವರಪ್ಪನವರು 778 ಮತಗಳಿಸಿದ್ದಾರೆ. ಇಲ್ಲಿಗೆ ಬಿ ವೈ ರಾಘವೇಂದ್ರ ಅವರ ಲೀಡ್ 26519 ಆಗಿದೆ.

ಬೈಂದೂರು : ಬಿ ವೈ ರಾಘವೇಂದ್ರ ಅವರು 115486 ಮತ ಗಳಿಸಿದ್ದು, ಗೀತಾ ಶಿವರಾಜಕುಮಾರ್ ಅವರು 58724 ಮತಗಳಿಸಿದ್ದು ಕೆ ಎಸ್ ಈಶ್ವರಪ್ಪನವರು 3292 ಮತಗಳಿದ್ದಾರೆ, ಇಲ್ಲಿಗೆ ಬಿ ವೈ ರಾಘವೇಂದ್ರ ಅವರ ಲೀಡ್ 56762 ಆಗಿದೆ.

Categories
ಸಿನಿಮಾ

ಮಾಧ್ಯಮ ರತ್ನ ರಾಮೋಜಿ ರಾವ್ ಇನ್ನಿಲ್ಲ!

ಮಾಧ್ಯಮ ರತ್ನ ರಾಮೋಜಿ ರಾವ್ ಇನ್ನಿಲ್ಲ!

– ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್‌ ನಿಧನ!
– ಮನೋರಂಜನಾ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಖ್ಯಾತಿ
– ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ನಿಧನ
– ಲಕ್ಷ ಲಕ್ಷ ಜನರಿಗೆ ಅನ್ನದಾತರಾಗಿದ್ದ ರಾಮೋಜಿರಾವ್

NAMMUR EXPRESS NEWS
ಹೈದರಾಬಾದ್: ಮಾಧ್ಯಮ ದಿಗ್ಗಜ ರಾಮೋಜಿ ರಾವ್‌ (87) ಶನಿವಾರ ನಿಧನರಾಗಿದ್ದಾರೆ. ಹೈದರಾಬಾದ್‌ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ. ರಾಮೋಜಿ ಫಿಲ್ಮ್ ಸಿಟಿ ಸೇರಿದಂತೆ ರಾಮೋಜಿ ಸಮೂಹ ಸಂಸ್ಥೆಗಳ ಒಡೆತನದಿಂದ ಅವರು ಮನೋರಂಜನಾ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದರು.ಇತ್ತೀಚಿಗಷ್ಟೇ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಸ್ಟಂಟ್‌ ಅಳವಡಿಕೆ ಮಾಡಲಾಗಿತ್ತು.

ಚಿತ್ರರಂಗದ ಗಣ್ಯರೂ ಸೇರಿದಂತೆ, ರಾಜಕಾರಣಿಗಳು, ಸೆಲೆಬ್ರಿಟಿಗಳು ಇಂದು ರಾಮೋಜಿ ರಾವ್‌ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ. ಈನಾಡು, ಈಟಿವಿ, ಈಟಿವಿ ಭಾರತ್‌, ಮಾರ್ಗದರ್ಶಿ ಚಿಟ್‌ ಫಂಡ್‌ ಮುಂತಾದ ಸಂಸ್ಥೆಗಳು ಅವರ ಒಡೆತನದಲ್ಲಿದೆ.

Categories
ಬೆಂಗಳೂರು

ಸರ್ಕಾರಿ ಬಸ್ ಪ್ರಯಾಣ ಇನ್ನು ದುಬಾರಿ!?

ಸರ್ಕಾರಿ ಬಸ್ ಪ್ರಯಾಣ ಇನ್ನು ದುಬಾರಿ!?

– ಶೀಘ್ರವೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆ
– ಶೇ.10ರಿಂದ 15 ರಷ್ಟು ಹೆಚ್ಚಳವಾಗುವ ಸಾಧ್ಯತೆ
– ಶಕ್ತಿ ಯೋಜನೆ ಕೊಟ್ರು ಇನ್ನು ಜನತೆಗೆ ಶಾಕ್!

NAMMUR EXPRESS NEWS

ಬೆಂಗಳೂರು: ಕೆ.ಎಸ್.ಆರ್. ಟಿ.ಸಿ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ. ಶೀಘ್ರವೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಶೇ.10ರಿಂದ 15 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ವರ್ಷದಿಂದ ವರ್ಷಕ್ಕೆ ಡೀಸೆಲ್, ಬಿಡಿ ಭಾಗಗಳ ದರ ಹೆಚ್ಚಳ, ಸಿಬ್ಬಂದಿ ವೇತನ ಹೆಚ್ಚಳ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಖರ್ಚು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಸ್‌ ಟಿಕೆಟ್ ದರ ಹೆಚ್ಚಳಕ್ಕೆ ಸಾರಿಗೆ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಶಕ್ತಿ ಯೋಜನೆ ಮಹಿಳೆಯರಿಗೆ ಫ್ರೀ ಇದ್ದರೂ ಕೂಡ ಬೆಲೆ ಹೆಚ್ಚಳ ಪ್ರಯಾಣಿಕರಿಗೆ ಶಾಕ್ ನೀಡಲಿದೆ.
ಸಾರಿಗೆ ಬಸ್ ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ ಚರ್ಚೆಗಳು ಶುರುವಾಗಿದ್ದು, ನಿಗಮಗಳಿಂದ ಪ್ರಸ್ತಾವನೆ ಬಂದರೆ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರವೂ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

Categories
ಮಂಗಳೂರು ರಾಜ್ಯ ರಾಷ್ಟ್ರೀಯ ವಾರ್ತೆ

ಟಾಪ್ 3 ನ್ಯೂಸ್

ಟಾಪ್ 3 ನ್ಯೂಸ್

– ರಾಹುಲ್ ಗಾಂಧಿಗೆ 75 ಲಕ್ಷ ಶೂರಿಟಿ ಕೊಟ್ಟ ಡಿಕೆ ಸುರೇಶ್!
– ಚಂದನ್ ಶೆಟ್ಟಿ – ನಿವೇದಿತಾ ಡೈವೋರ್ಸ್
– ಲೋಕ ಸಭೆಗೆ ಅಟ್ಯಾಕ್ ಭೀತಿ: ಅರೆಸ್ಟ್!

NAMMUR EXPRESS NEWS
ಬೆಂಗಳೂರು: ಭ್ರಷ್ಟಾಚಾರ ಕುರಿತು ದಿನಪತ್ರಿಕೆಗಳಿಗೆ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬೆಂಗಳೂರಿನ 42ನೇ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಷರತ್ತು ಬದ್ಧ ಜಾಮೀನು ನೀಡಿದೆ. ಜೊತೆಗೆ ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ಅವರು 75 ಲಕ್ಷ ಮೌಲ್ಯದ ಆಸ್ತಿದ ದಾಖಲೆಯನ್ನ ಶ್ಯೂರಿಟಿ ಆಗಿ ನೀಡಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಕೋರ್ಟ್‌ಗೆ ಖುದ್ದು ಹಾಜರಾಗಲು ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದರು. ಕೋರ್ಟ್ ವಿಚಾರಣೆಗೆ ಹಾಜರಾಗಲು ರಾಹುಲ್ ಸಹಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸಮನ್ಸ್‌ ಜಾರಿ ಮಾಡಿತ್ತು. ಜೂ.1ರಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದರು. ರಾಹುಲ್‌ಗಾಂಧಿ 3ನೇ ಸಮನ್ಸ್‌ಗೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಧೀಶರು ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿದ್ದರು. ಇಂದು ವಿಚಾರಣೆಗೆ ಹಾಜರಾದ ರಾಹುಲ್ ಗೆ ಕೋರ್ಟ್ ಕಂಡೀಷನಲ್ ಬೇಲ್ ನೀಡಿದೆ. ಬೇಲ್‌ ಪಡೆದ ರಾಹುಲ್ ಮತ್ತೆ ದೆಹಲಿಗೆ ವಾಪಸ್ಸಾಗಿದ್ದಾರೆ.

ನಕಲಿ ಆಧಾ‌ರ್ ಕಾರ್ಡ್ ಬಳಸಿ ಸಂಸತ್‌ ಎಂಟ್ರಿಗೆ ಯತ್ನ..!

ಸಂಸತ್ ನುಗ್ಗಿ ಯುವಕರು ಸ್ಮೋಕ್ ಬಾಂಬ್ ಸಿಡಿಸಿ ದಾಂದಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಒಂದು ಘಟನೆ ಸ್ವಲ್ಪದರಲ್ಲೇ ತಪ್ಪಿದೆ. ನಕಲಿ ಆಧಾರ್ ಕಾರ್ಡ್ ಬಳಸಿ ಸಂಸತ್‌ ಭವನಕ್ಕೆ ಎಂಟ್ರಿ ಕೊಡಲು ಯತ್ನಿಸಿದ್ದ ಮೂವರನ್ನು ಭದ್ರತಾ ಪಡೆ ಅರೆಸ್ಟ್ ಮಾಡಿದೆ. ಇನ್ನು ಬಂಧಿತರನ್ನು ಖಾಸಿಂ, ಮೋನೀಶ್ ಮತ್ತಿ ಸೋಯೆಬ್ ಎಂದು ಗುರುತಿಸಲಾಗಿದೆ.

ಗುರುವಾರ ಭದ್ರತಾ ಸಿಬ್ಬಂದಿ ನಿತ್ಯ ನಡೆಸುವಂತೆ ತಪಾಸಣೆ ವೇಳೆ ಈ ಮೂರು ಕಾರ್ಮಿಕರು ನಕಲಿ ಆಧಾರ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ. ಸಂಸತ್ ಭವನದ ಎದುರು ನಿಯೋಜನೆಗೊಂಡಿರುವ CISF ಭದ್ರತಾ ಸಿಬ್ಬಂದಿ ಮೂವರನ್ನು ತಪಾಸಣೆ ನಡೆಸಿದಾಗ ಇವರ ಬಳಿ ನಕಲಿ ಆಧಾರ್ ಕಾರ್ಡ್ ಇರುವುದು ಕಂಡು ಬಂದಿದ್ದು, ತಕ್ಷಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳ ವಿರುದ್ಧ ಫೋರ್ಜರಿ ಮತ್ತು ವಂಚನೆ ಪ್ರಕರಣ ದಾಖಲಿಸಿ ತನಿಖೆಗೊಳಪಡಿಸಲಾಗಿದೆ. ಇದರ ಬೆನ್ನಲ್ಲೇ CISF ಸಿಬ್ಬಂದಿ ಹಾಗೂ ದಿಲ್ಲಿ ಪೊಲೀಸರು ಸಂಸತ್ ಭವನದ ಸಂಪೂರ್ಣ ಭದ್ರತೆಯನ್ನು ಮರುಪರಿಶೀಲಿಸಿದ್ದಾರೆ.

ಇನ್ನು ಈ ಮೂವರು ನೌಕರರು ಡೀ ವೀ ಪ್ರಾಜೆಕ್ಟ್ ಲಿಮಿಟೆಡ್‌ ನಿಯೋಜಿಸಿರುವ ಗುತ್ತಿಗೆ ನೌಕರರಾಗಿದ್ದು, ಇವರು ಸಂಸತ್ ಭವನದ ಒಳಗೆ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಐಪಿಸಿ ಸೆಕ್ಷನ್‌ಗಳು 465 (ನಕಲಿ), 419 (ವ್ಯಕ್ತಿತ್ವದಿಂದ ವಂಚನೆ), 120B (ಅಪರಾಧದ ಪಿತೂರಿ), 471 (ನಕಲಿ ದಾಖಲೆಯನ್ನು ಅಸಲಿ ಎಂದು ಬಳಸುವುದು), ಮತ್ತು 468 (ವಂಚನೆಯ ಉದ್ದೇಶಕ್ಕಾಗಿ ನಕಲಿ) ಅಡಿಯಲ್ಲಿ ಮೂವರ ಮೇಲೂ ಎಫ್ ಐಆರ್ ದಾಖಲಿಸಲಾಗಿದೆ.

ವಿಚ್ಛೇದನ ಪಡೆದ ಚಂದನ್ ಶೆಟ್ಟಿ, ನಿವೇದಿತಾ ಗೌಡ?

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿರುವ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ . ವೃತ್ತಿಜೀವನದ ಒಳಿತಿನ ದೃಷ್ಟಿಯಿಂದ ಅವರು ಡಿವೋರ್ಸ್ ಪಡೆಯಲು ನಿರ್ಧರಿಸಿದ್ದಾರೆ.

ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸಂಸಾರದಲ್ಲಿ ಬಿರುಕು ಮೂಡಿದೆ. ಜೂ 7ಕ್ಕೆ ಅವರು ಡೈವೋರ್ಸ್ ಅರ್ಜಿ ಸಲ್ಲಿಸಿದ್ದು, ಅವರು ಡಿವೋರ್ಸ್ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.