Categories
ರಾಜ್ಯ

ಶ್ರಾವಣ ಮಾಸ ಬಂತು..ಸಾಲು ಸಾಲು ಹಬ್ಬಗಳ ಸಂಭ್ರಮ!

ಶ್ರಾವಣ ಮಾಸ ಬಂತು..ಸಾಲು ಸಾಲು ಹಬ್ಬಗಳ ಸಂಭ್ರಮ!
– ಹಬ್ಬಗಳಿಗೆ ಸಿದ್ದವಾದ ಜನ: ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆ
– ದೇಗುಲಗಳು ಹಬ್ಬದ ಆಚರಣೆಗೆ ಸಜ್ಜು

NAMMUR EXPRESS NEWS
ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮಿ, ಶ್ರಾವಣ ಶನಿವಾರ, ಗೌರಿ – ಗಣೇಶ ಚತುರ್ಥಿಗಳು ಒಂದರ ಮೇಲೊಂದು ಹಬ್ಬಗಳು ಸಾಲು ಸಾಲಾಗಿ ಬರಲಿವೆ. ಈಗಾಗಲೇ ಹಬ್ಬಕ್ಕೆ ಜನ ಸಿದ್ಧವಾಗುತ್ತಿದ್ದಾರೆ.
ಹಬ್ಬದ ಅವಧಿಯಲ್ಲಿ ತರಕಾರಿ, ಹೂ, ಹಣ್ಣುಗಳಿಗೆ ಬೇಡಿಕೆ ಹೆಚ್ಚು. ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಕ್ಯಾರೆಟ್, ಬಿಟ್ರೋಟ್ ಬೆಲೆ ವಿಪರೀತ ಜಾಸ್ತಿಯಾಗಿದೆ. ಇದರಿಂದ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಶಾಕ್ ಬೀಳಲಿದೆ.
ಶ್ರಾವಣ ಮಾಸ ಆರಂಭವಾಗಿ ಹೂ, ಹಣ್ಣು, ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದ್ದು ಕಳೆದ ವಾರಕ್ಕಿಂತ ಈ ವಾರ ತರಕಾರಿಗಳ ಬೆಲೆ 10 ರಿಂದ 20 ರೂಪಾಯಿ ಏರಿಕೆಯಾದರೆ ಹೂವಿನ ಬೆಲೆ 200 ರೂಪಾಯಿಯಷ್ಟು ಏರಿಕೆ ಮಾಡಿದ್ದಾರೆ.

ಈಗ ಬೆಲೆ ಅಂದಾಜು ಎಷ್ಟಿದೆ?

ತರಕಾರಿಗಳ ಬೆಲೆ:

ನಾಟಿ ಬೀನ್ಸ್ 100
ಟೊಮೆಟೊ 50
ಬಿಳಿ ಬದನೆ. 120
ಮೆಣಸಿನಕಾಯಿ 80
ನುಗ್ಗೆಕಾಯಿ 200
ಊಟಿ ಕ್ಯಾರೆಟ್ 200
ನವಿಲುಕೋಸು. 60
ಮೂಲಂಗಿ. 60
ಹೀರೇಕಾಯಿ 80
ಆಲೂಗಡ್ಡೆ 60
ಈರುಳ್ಳಿ 60
ಕ್ಯಾಪ್ತಿಕಂ. 85
ಹಾಗಲಕಾಯಿ. 85
ಕೊತ್ತಂಬರಿ ಸೊಪ್ಪು 70
ಶುಟಿ . 185
ಬೆಳ್ಳುಳ್ಳಿ. 350
ಪಾಲಕ್, 46
ಪುದಿನ 92
ನಾಟಿ ಬಟಾಣಿ 300
ಫಾರಂ ಬಟಾಣಿ 200

ಹಣ್ಣುಗಳ ಬೆಲೆ:
ಸೇಬು 350, ದ್ರಾಕ್ಷಿ 300, ಮೂಸಂಬಿ 140, ಸಪೋಟ 200, ಡ್ರಾಗಾನ್ ಪ್ರೋಟ್ 200, ಬಟರ್ ಪ್ರೋಟ್ 250, ಏಲಕ್ಕಿ ಬಾಳೆಹಣ್ಣು 80, ಪೊಪ್ಪಾಯ 50, ಕಲ್ಲಂಗಡಿ 50, ಅನಾನಸ್ 120, ಕಿವಿ ಪ್ರೋಟ್ 120, ಕಿತ್ತಳೆ 200

ಹೂಗಳ ದರ:
ಸೇವಂತಿಗೆ 250, ಗುಲಾಬಿ 200, ಅಣಗಲು 200, ಸುಗಂದರಾಜ 100, ಮಲ್ಲಿಗೆ 300, ಕನಕಾಂಬರ 300, ಚೆಂಡೂ ಹೂ 20, ತುಳುಸಿ 40, ವೈಟ್ ಸೇವಂತಿಗೆ 150, ಹಳದಿ ಸೇವಂತಿಗೆ ಮೊಳಕ್ಕೆ 250, ಕಾಕಡ ಕೆಜಿಗೆ 400, ಸಂಪಿಗೆ 200 ರೂ. ಗೆ ಮಾರಾಟ ಮಾಡಲಾಗುತ್ತಿದೆ.

Categories
ಮಲ್ನಾಡ್ ರಾಜ್ಯ

12 ವರ್ಷಗಳ ಬಳಿಕ ಮಂಗಳೂರು ಹೋಂ ಸ್ಟೇ ಪ್ರಕರಣದ ತೀರ್ಪು

12 ವರ್ಷಗಳ ಬಳಿಕ ಮಂಗಳೂರು ಹೋಂ ಸ್ಟೇ ಪ್ರಕರಣದ ತೀರ್ಪು
– ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯದ ಆದೇಶ
– ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಗೆ ಬಿಗ್ ರಿಲೀಫ್

NAMMUR EXPRESS NEWS
ಮಂಗಳೂರು: ಭಾರೀ ಕೋಲಾಹಲ ಎಬ್ಬಿಸಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದು, ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣ ನಡೆದು 12 ವರ್ಷಗಳ ಬಳಿಕ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಕೊರತೆಯಿಂದ ಬಗ್ಗೆ ಸಾಕ್ಷ್ಯಾಧಾರಗಳ ಆರೋಪಿಗಳು ದೋಷ ಮುಕ್ತರಾಗಿದ್ದಾರೆ ಎಂದು ಮಂಗಳೂರು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ತೀರ್ಪು ನೀಡಿದ್ದಾರೆ.
2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ಮೇಲೆ ದಾಳಿ ನಡೆದಿತ್ತು. ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಈ ದಾಳಿ ನಡೆಸಿದ್ದರು ಎಂದು ಅಪಾದಿಸಲಾಗಿತ್ತು.
ಏನಿದು ಘಟನೆ?
ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ- ಯುವತಿಯರ ಮೇಲೂ ತಂಡ ದಾಳಿ ಮಾಡಿತ್ತು ಎಂದು ಮಂಗಳೂರು ಗ್ರಾಮಾಂತರ ಪೊಲೀಸರು 44 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಒಟ್ಟು 44 ಆರೋಪಿಗಳ ಪೈಕಿ ಮೂವರು ಇದುವರೆಗೆ ಸಾವನ್ನಪ್ಪಿದ್ದರು.ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಸೇರ್ಪಡೆಗೊಂಡಿದ್ದ ಪತ್ರಕರ್ತ ನವೀನ್ ಸೂರಿಂಜೆಯನ್ನು ನ್ಯಾಯಾಲಯ ಪ್ರಕರಣದಿಂದ ಕೈಬಿಟ್ಟಿತ್ತು. ಇಂದು ಮಂಗಳವಾರ ಉಳಿದ 40 ಆರೋಪಿಗಳನ್ನ ದೋಷ ಮುಕ್ತಗೊಳಿಸಿ ಕೋರ್ಟ್ ತೀರ್ಪು ನೀಡಿದೆ. ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿತ್ತು. 12 ವರ್ಷಗಳ ಬಳಿಕ ಮಂಗಳೂರು ಕೋರ್ಟ್ ನಿಂದ ಅಂತಿಮ ತೀರ್ಪು ಪ್ರಕಟವಾಗಿದೆ.

Categories
ಮಲ್ನಾಡ್

ಮರೆಯಾದ ಮುರುಗನ ಕಾಯಿ!

ಮರೆಯಾದ ಮುರುಗನ ಕಾಯಿ!
– ಅನೇಕರಿಗೆ ಬದುಕು ನೀಡಿದ್ದ ಕಾಡು ಕಾಯಿ
– ಎಣ್ಣೆಗೂ ಸೈ.. ಹುಳಿಗೂ ಸೈ.. ಕೈ ಕಾಸಿಗೂ ಸೈ
– ದುಡ್ಡಿಗಾಗಿ ಮರಗಳ ನಾಶ: ಅಳಿವಿನತ್ತ ಮರ!

NAMMUR EXPRESS NEWS
ಮಲೆನಾಡು: ಮಳೆಗಾಲದಲ್ಲಿ ಮಲೆನಾಡಿನಲ್ಲಿ ಮಳೆ ಹಾಗೂ ಶೀತ ವಾತಾವರಣವಿರುತ್ತದೆ ಮಳೆಗಾಲದಲ್ಲಿ ಹಲಸಿನಸ್ವಾಳೆ. ಅಮಟೆ ಕಾಯಿ ,ಮಾವಿನ ಕಾಯಿ, ಕಳಲೆ ,ಕೆಸ. ಕೆಸುವಿನಗಡ್ಡೆ, ಸಾಮ್ರಾಣಿಗಡ್ಡೆ,ವಾಟೆಹುಳಿ ,ಪುರ್ನಪುಳಿ,ಜೀರಕನಹುಳಿ,
ಮುರುಗನಹುಳಿ, ಕಾಕಿ ಸೊಪ್ಪು, ಬ್ರಾಹ್ಮೀ,ಹೂನಗಾನೆ ಸೊಪ್ಪುಗಳನ್ನು ತಿನ್ನುಲು ಪ್ರಶಸ್ತ ಸಮಯ ಅದರಲ್ಲಿ ಸಾಂಬಾರು ಪದಾರ್ಥವಾಗಿ ಬಳಸುವ ಮುರುಗನ ಹುಳಿಯೂ ಒಂದು. ಆದರೆ ಇದು ಇತ್ತಿಚಿಗೆ ಕಣ್ಮರೆಯಾಗುತ್ತಾ ಬಂದಿದೆ
ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಮುರುಗನ ಹಣ್ಣಿನ ವೈಜ್ಞಾನಿಕ ಹೆಸರು’ ಗಾರ್ಸಿನಿಯ ಕಾಂಬೋಜಿಯ’. ಇದನ್ನು ಪ್ರಾದೇಶಿಕವಾಗಿ ಮುರುಗನ ಹುಳಿ,ಮಲಬಾರ್ ಹುಣಸೇ ಹಣ್ಣು,ಕುಡಂಪುಳಿ,ಉಪ್ಪೇಜ್,(ಉಪ್ಪಾಗೆ),ಕಾಚಂಪುಳಿ ಎಂದೆಲ್ಲಾ ಕರೆಯುವರು.
ತಿಳಿ ಹಸಿರು ಮತ್ತು ಹಳದಿ ಬಣ್ಣದಲ್ಲಿರುವ ಈ ಹಣ್ಣು ಸಿಹಿಗುಂಬಳ ಆಕೃತಿಯಲ್ಲಿರುವ ಚಿಕ್ಕಹಣ್ಣು ಜೂನ್-ಜುಲೈನಲ್ಲಿ ಹಣ್ಣಾಗುತ್ತದೆ ರಸವನ್ನು ಹಿಂಡಿ ತೆಗೆದು ಕುದಿಸಿಡುತ್ತಾರೆ. ಮಲೆನಾಡಿನಲ್ಲಿ ಮತ್ತು ಕೇರಳದಲ್ಲಿ ಮೀನು ಸಾರಿಗೆ ಹೆಚ್ಚಾಗಿ ಬಳಸುತ್ತಾರೆ. ಸಿಪ್ಪೆಯನ್ನು ಬಿದಿರಿನಿಂದ ಹೆಣೆದ ತಟ್ಟಿಗಳ ಮೇಲೆ ಒಣಗಿಸಿ ಇಡುತ್ತಾರೆ ಸಿಪ್ಪೆಯು ಸಾಂಬಾರ್ ಮಾಡಲು ಬಳಸಲಾಗುವುದು. ಬೀಜದಿಂದ ಬರುವ ಎಣ್ಣೆ ಅಡುಗೆ ಮಾಡಲು ಬಳಸುತ್ತಾರೆ. ಇದರ ಹುಳಿ ಮತ್ತು ಹಣ್ಣಿನ ಒಣಗಿಸಿದ ಸಿಪ್ಪೆಗೆ ಬಹಳ ಬೇಡಿಕೆಯಿದೆ. ಬಹುಪಯೋಗಿ ಸಸ್ಯಗಳಲ್ಲಿ ಇದು ಸಹ ಒಂದು. ಮಳೆಗಾಲದಲ್ಲಿ ಜನರಿಗೆ ಆಹಾರದ ಉತ್ಪನ್ನವಾಗಿಯೂ ಆದಾಯದ ಮೂಲವೂ ಆಗಿದೆ. ಅನೇಕರು ಇದರಿಂದಲೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಮುರುಗನ ಹಣ್ಣು ಮಧ್ಯಮ ವರ್ಗದ ಜನರ ಆಶಾಕಿರಣ. ಒಣಸಿದ ಮುರುನ ಹುಳಿ ಕೆಜಿಗೆ 50 ರೂ ಇದ್ದ ಈ ಸಸ್ಯ ಈಗ ಅವನತಿ ಹತ್ತಿರದಲ್ಲಿದೆ.

ದುಡ್ಡಿಗಾಗಿ ಮರಗಳ ನಾಶ: ಅಳಿವಿನತ್ತ ಮರ!

ಇಷ್ಟೆಲ್ಲಾ ಉಪಯೋಗಕಾರಿಯಾದ ಸಸ್ಯ ಈಗ ಮನುಷ್ಯನ ಅತಿಯಾದ ಚಟುವಟಿಕೆಗಳಿಂದ ಕಣ್ಮರೆಯಾಗುತ್ತಿದೆ. ಕಾಡಿನಲ್ಲಿ ಸಿಗುತ್ತಿದ್ದ ತಾಜಾ ಹುಳಿ ಈಗ ಆನ್ಲೈನ್ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವಂತಾಗಿದೆ ಎಲೆಮರೆ ಕಾಯಿಯಂತಿರುವ ಇಂತಹ ಔಷದೀಯ ಸಸ್ಯಗಳ ಬಗ್ಗೆ ಮುಂದಿನ ಪೀಳಿಗೆಯವರಿಗೂ ತಿಳಿಸಿ ಅವುಗಳನ್ನು ಕಾಪಾಡುವುದು ಸಹ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಮುರುಗನ ಹುಳಿಯ ಉಪಯೋಗಗಳು ಇವೆ..

-ಭಾರತೀಯ ಆರ್ಯ ವೇದ ಪದ್ದತಿಯಲ್ಲಿ ಹುಳಿ ರುಚಿಯನ್ನು ಹೊಂದಿರುವ ಈ ಹಣ್ಣು ಜೀರ್ಣಕಾರಿ ಅಸ್ವಸ್ಥತೆಗಳಿಗೆ ಸಹಾಯಕಾರಿ ಎಂದು ಹೇಳಿದೆ
-ದೇಹದಲ್ಲಿರುವ ಕೊಲೆಸ್ಟ್ರಾಲನ್ನು ನಿಯಂತ್ರಣ ಮಾಡುತ್ತದೆ
-ಚಯಾಪಚಯ ಕ್ರಿಯೆ ಸರಾಗವಾಗಿ ನಡೆಯಲು ಸಹ ಕಾರಿಯಾಗಿದ್ದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
– ಯಕೃತ್ ಮತ್ತು ಹೃದಯವನ್ನು ಕಾಯಿಲೆಗಳಿಂದ ಕಾಪಾಡುತ್ತದೆ
-ಸಂಧಿವಾತದಿಂದ ಉಂಟಾದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ

ನೀವೂ ಇದನ್ನು ಬಳಸಿದ್ರಾ… ಖರ್ಚಿಗೆ ಕಾಸು ಮಾಡಿಕೊಂಡಿದ್ರಾ?

ಕಾಮೆಂಟ್ ಮಾಡಿ

Categories
ಕರಾವಳಿ ಮಂಗಳೂರು

ಮಂಗಳೂರಲ್ಲಿ ಬಾಲಕಿಯ ಕೊಲೆ!?

ಮಂಗಳೂರಲ್ಲಿ ಬಾಲಕಿಯ ಕೊಲೆ!?
– ಚಿಕ್ಕಪ್ಪನ ಮನೆಗೆ ಬಂದು ಸಾವು: ಪೊಲೀಸ್ ತನಿಖೆ
– ಮಂಗಳೂರು ಹೊರವಲಯದ ಜೋಕಟ್ಟೆಯಲ್ಲಿ ಘಟನೆ
– ಕಾರವಾರ-ಗೋವಾ ಸಂಪರ್ಕ ಸೇತುವೆ ಕುಸಿತ: ನದಿಗೆ ಬಿದ್ದ ಲಾರಿ!

NAMMUR EXPRESS NEWS
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೃತದೇಹ ಪತ್ತೆಯಾದ ಘಟನೆ ನಗರದ ಹೊರವಲಯದ ಜೋಕಟ್ಟೆಯಲ್ಲಿ ನಡೆದಿದೆ.
ಮೃತ ಬಾಲಕಿಯು ಬೆಳಗಾವಿ ಮೂಲದವಳಾಗಿದ್ದು, ನಾಲ್ಕು ದಿನಗಳ ಹಿಂದೆ ಚಿಕಿತ್ಸೆಯ ಹಿನ್ನೆಲೆಯಲ್ಲಿ ಜೋಕಟ್ಟೆಯಲ್ಲಿನ ತನ್ನ ದೊಡ್ಡಪ್ಪ ಹನುಮಂತು ಮನೆಗೆ ಬಂದು ನೆಲೆಸಿದ್ದಳು.
ಹನುಮಂತು ಮತ್ತು ಕುಟುಂಬ ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಮಂಗಳವಾರ ಮನೆಯಲ್ಲಿದ್ದ ಎಲ್ಲರೂ ಕೂಲಿ ಕೆಲಸಕ್ಕೆ ತೆರಳಿದ್ದು, ಬಾಲಕಿ ಮಾತ್ರ ಇದ್ದಳು. ಈ ವೇಳೆ ಊರಿನಿಂದ ಬಾಲಕಿಯ ತಾಯಿ ನೆರೆ ಮನೆಗೆ ಕರೆ ಮಾಡಿ ಬಾಲಕಿಗೆ ಫೋನ್ ಕೊಡುವಂತೆ ಹೇಳಿದ್ದಳು. ಬಾಲಕಿಗೆ ಫೋನ್ ಕೊಡಲು ನೆರೆಮನೆಯವರು ತೆರಳಿದ ವೇಳೆ ಬಟ್ಟೆಯಿಂದ ಕತ್ತು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಉಪಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕೈ ನೋವಿನ ಚಿಕಿತ್ಸೆ ಪಡೆಯಲು ಬಂದಿದ್ದಳು!

ಕಳೆದ 4 ದಿನಗಳ ಹಿಂದೆ ತಮ್ಮನ ಮಗಳಾದ 13 ವರ್ಷದ ಬಾಲಕಿಯು ಕೈನೋವಿನ ಚಿಕಿತ್ಸೆ ಪಡೆಯಲು ಬೆಳಗಾವಿಯಿಂದ ಬಂದು ಉಳಿದುಕೊಂಡಿದ್ದಳು. ಈ ಘಟನೆ ಇದೀಗ ಮಂಗಳೂರನ್ನು ಬೆಚ್ಚಿ ಬೀಳಿಸಿದೆ. ಪೊಲೀಸ್ ತನಿಖೆ ನಡೆಯುತ್ತಿದೆ.

ಕಾರವಾರ-ಗೋವಾ ಸಂಪರ್ಕ ಸೇತುವೆ ಕುಸಿತ: ನದಿಗೆ ಬಿದ್ದ ಲಾರಿ!

ಉತ್ತರ ಕನ್ನಡ: ಕಾರವಾರ ನಗರದ ಕೋಡಿಭಾಗ್ ನಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ 41 ವರ್ಷಗಳ ಹಳೆ ಸೇತುವೆ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಒಮ್ಮಿಂದ ಒಮ್ಮೆಲೆ ಕುಸಿದು ಬಿದ್ದ ಘಟನೆ ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್ ಬಳಿ ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಿದ್ದ ಸೇತುವೆ ಕುಸಿದಿದೆ. ಈ ವೇಳೆ ಸೇತುವೆ ಮೇಲೆ ಲಾರಿ ಚಾಲನೆ ಮಾಡ್ತಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಬಾಲ್ ಮುರುಗನ್(37) ಸಮೇತ ಖಾಲಿ ಟ್ರಕ್ ನದಿಗೆ ಬಿದ್ದಿದೆ. ಕಾಳಿ ನದಿಯಲ್ಲಿ ಬಿದ್ದ ಲಾರಿಯ ಮುಂಭಾಗದ ಗ್ಲಾಸ್‌ ಒಡೆದು ಕ್ಯಾಬಿನ್ ಮೇಲೆ ನಿಂತು ಚಾಲಕ ಬಾಲ ಮುರುಗನ್ ರಕ್ಷಣೆಗೆ ಕೂಗಿದ್ದರು. ಸದ್ಯ ಬೀಟ್ ಪೊಲೀಸರ ಮುಂಜಾಗೃತೆಯಿಂದ ಲಾರಿ ಚಾಲಕನ ಪ್ರಾಣ ಉಳಿದಿದೆ.
ಪೊಲೀಸರ ತಂಡ ನದಿಗೆ ಇಳಿದು ಚಾಲಕನನ್ನು ರಕ್ಷಿಸಿದ್ದಾರೆ. ಸ್ಥಳೀಯ ಮೀನುಗಾರರು ಹಾಗೂ ಪೊಲೀಸ್‌ ಸಿಬ್ಬಂದಿ ಸೇರಿ ಬೋಟ್ ಮೂಲಕ ಲಾರಿ ಚಾಲಕನನ್ನ ರಕ್ಷಿಸಿದ್ದಾರೆ. ಗೋವಾದಿಂದ ಹುಬ್ಬಳ್ಳಿ ಕಡೆ ಮಧ್ಯರಾತ್ರಿ ತೆರಳುತಿದ್ದ ತಮಿಳುನಾಡು ಮೂಲದ ಟ್ರಕ್ ಸೇತುವೆ ಮೇಲೆ ತೆರಳುತಿದ್ದಂತೆ ಮೊದಲ ಭಾಗ ಕುಸಿದಿದೆ ನಂತರ ಮೂರು ಕಡೆ ಕುಸಿದಿದೆ. ಸದ್ಯ ಟ್ರಕ್ ಚಾಲಕನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಜೀವನದಲ್ಲಿ ಕೆಲವು ಅಪಾಯಗಳು ಸಹ ಎದುರಾಗಬಹುದು. ಆದರೆ ಹೆದರಬೇಡಿ, ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ನಿಮಗೆ ಇಂದು ಸಿಗುವ ಹೊಸ ಅವಕಾಶಗಳಿಂದ ಖಂಡಿತ ಯಶಸ್ಸು ಸಿಗಲಿದೆ. ಹಣಕಾಸಿನ ಪರಿಸ್ಥಿತಿಯು ಬಲವಾಗಿರುತ್ತದೆ.

** ವೃಷಭ ರಾಶಿ :
ನಿಮ್ಮ ಪರಿಶ್ರಮದ ಫಲವನ್ನು ಪಡೆಯಬಹುದು. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ. ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಲು ಹಿಂಜರಿಯಬೇಡಿ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಮೆಚ್ಚಿ ಹೋಗಳಬಹುದು.

** ಮಿಥುನ ರಾಶಿ
ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯಬಹುದು. ನಿಮ್ಮ ವೃತ್ತಿ ಜೀವನದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗಲಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆಗಳಿವೆ.

** ಕರ್ಕಾಟಕ ರಾಶಿ :
ನಿಮಗೆ ಭೌತಿಕ ಸೌಕರ್ಯಗಳು ಮತ್ತು ಸಂಪತ್ತು ಹೆಚ್ಚಾಗಬಹುದು. ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುವ ಲಕ್ಷಣಗಳಿವೆ. ಮನೆಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಬಹುದು. ಮನೆ ನಿರ್ವಹಣೆಗೆ ಹಣ ಖರ್ಚು ಮಾಡಬಹುದು.

** ಸಿಂಹ ರಾಶಿ :
ಶತ್ರುಗಳ ಮೇಲೆ ಜಯ ದೊರೆಯಲಿದೆ. ಕೆಲಸದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ. ಬಹಳ ದಿನಗಳಿಂದ ನಿಮಗೆ ಬರಬೇಕಿದ್ದ ಹಣ ವಾಪಸ್ ಬರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ವೃತ್ತಿಪರ ಯಶಸ್ಸನ್ನು ಪಡೆಯುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಅಡಚಣೆ ಉಂಟಾಗಬಹುದು.

** ಕನ್ಯಾ ರಾಶಿ :
ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ನೀವು ಐಷಾರಾಮಿ ಜೀವನವನ್ನು ಅನುಭವಿಸಲಿದ್ದೀರಿ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಕೆಲಸದ ಸ್ಥಳದಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಇಂದು, ಹೊಸ ಆದಾಯದ ಮೂಲದಿಂದ ಧನ ಲಾಭವಿದೆ.

** ತುಲಾ ರಾಶಿ :
ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಪೋಷಕರ ಆರೋಗ್ಯದ ಕಡೆ ಗಮನ ಕೊಡಿ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಇಂದು, ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು.

** ವೃಶ್ಚಿಕ ರಾಶಿ :
ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸಗಳಿಂದ ಹಣಕಾಸಿನ ಲಾಭದ ಹೊಸ ಮೂಲಗಳು ಸೃಷ್ಟಿಯಾಗಬಹುದು. ನೀವು ಪಿತ್ರಾರ್ಜಿತ ಆಸ್ತಿ ಪಡೆಯಬಹುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

** ಧನಸ್ಸು ರಾಶಿ :
ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ದೊರೆಯಬಹುದು. ಕೆಲಸದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸುತ್ತೀರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಆದಾಯ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ,

** ಮಕರ ರಾಶಿ :
ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿವೆ. ಆದಾಯದ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗಬಹುದು, ಆದರೆ ಅತಿಯಾದ ಖರ್ಚುಗಳಿಂದ ಮನಸ್ಸು ತೊಂದರೆಗೊಳಗಾಗಬಹುದು. ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ.

** ಕುಂಭ ರಾಶಿ :
ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ವೃತ್ತಿ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕಚೇರಿ ರಾಜಕೀಯದಿಂದ ದೂರವಿರಿ ಮತ್ತು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ.

** ಮೀನ ರಾಶಿ :
ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಬಹುದು. ಉದ್ಯೋಗದಲ್ಲಿ ಪ್ರಗತಿಗೆ ಸುವರ್ಣಾವಕಾಶಗಳು ದೊರೆಯಲಿವೆ. ಆದರೆ ಇಂದು, ನಿಮ್ಮ ಭಾವನೆಗಳಲ್ಲಿ ಏರುಪೇರಾಗಬಹುದು.

Categories
ಕರಾವಳಿ ಮಲ್ನಾಡ್

ಶೃಂಗೇರಿಯಲ್ಲಿ ನಾಪತ್ತೆಯಾಗಿದ್ದ ಜ್ಯೋತಿಷಿ ಉಡುಪಿಯಲ್ಲಿ ಪತ್ತೆ..!

ಶೃಂಗೇರಿಯಲ್ಲಿ ನಾಪತ್ತೆಯಾಗಿದ್ದ ಜ್ಯೋತಿಷಿ ಉಡುಪಿಯಲ್ಲಿ ಪತ್ತೆ..!
– ಕಾರಿನ ಬಳಿ ಹೋಗಿದ್ದ ಜ್ಯೋತಿಷಿ ನಾಪತ್ತೆ ಆಗಿದ್ದು ಹೇಗೆ?
– ಕಾಣೆಯಾದ ಕಥೆಯೇ ರೋಚಕ: ಮಾಯ ಆಗಿದ್ರಾ?

NAMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಸನ್ಮಾನ ಸ್ವೀಕರಿಸಲು ಬಂದಿದ್ದ ಆಂಧ್ರ ಪ್ರದೇಶದ ಖ್ಯಾತ ಜ್ಯೋತಿಷಿಗಳೊಬ್ಬರು ಕೆಲವು ದಿನಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದರು. ಈ ಘಟನೆ ಅವರ ಕುಟುಂಬಸ್ಥರಲ್ಲಿ ಹಾಗೂ ಶೃಂಗೇರಿ ಜನತೆಯಲ್ಲಿ ತೀವ್ರ ಆತಂಕವನ್ನುಂಟು ಮಾಡಿತ್ತು. ಜ್ಯೋತಿಷಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಪೋಲೀಸರು ಅವರನ್ನು ಉಡುಪಿಯಲ್ಲಿ ಪತ್ತೆ ಹಚ್ಚಿದ್ದಾರೆ. ಕಾಣೆಯಾದ ದಿನದಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಇದರಿಂದ ಪೋಲೀಸರಿಗೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ನಂತರ ಉಡುಪಿಗೆ ಬಂದಾಗ ಮೊಬೈಲ್ ಆನ್ ಆಗಿದ್ದು ಆಗ ಅವರನ್ನು ಸಂಪರ್ಕಿಸಿ ಕರೆತರಲಾಗಿದೆ.
ಶೃಂಗೇರಿಗೆ ಬಂದವರು ಉಡುಪಿಗೆ ಹೋಗಿದ್ದು ಯಾಕೆ ಅವರಿಗೆ ಗೊತ್ತಿಲ್ಲ., ಶೃಂಗೇರಿಯಲ್ಲಿ ತನ್ನ ಕಾರಿನ ಬಳಿ ಹೋದ ಜ್ಯೋತಿಷಿಗಳು ದಿಢೀರ್ ನಾಪತ್ತೆಯಾಗಿ ಉಡುಪಿಯಲ್ಲಿ ಪತ್ತೆಯಾಗಿದ್ದು ರೋಚಕ ಸಂಗತಿಯಾಗಿದೆ. ಸಿಕ್ಕ ಜ್ಯೋತಿಷಿಗಳನ್ನ ಪ್ರಶ್ನಿಸಿದಾಗ ಏನಾಯಿತು,ಹೇಗೆ ಇಲ್ಲಿಯವರೆಗೆ ಬಂದೆ ಯಾವುದೂ ಗೊತ್ತಿಲ್ಲ,ಏನೂ ನೆನಪಿಲ್ಲ ಎಂದು ಉತ್ತರಿಸಿದ್ದಾರೆ.
ಆಗಂಬೆ-ಹೆಬ್ರಿ ಮೂಲಕ ಧರ್ಮಸ್ಥಳ- ಸುಬ್ರಮಣ್ಯ ದೇವಾಲಯಗಳಿಗೆ ಹೋಗಿ ಅಲ್ಲಿಂದ ಉಡುಪಿಗೆ ಬಂದು ತಮ್ಮ ಮೊಬೈಲ್ ನೋಡಿದ್ದಾರೆ. ಮೊಬೈಲ್ ಒಡೆದಿದ್ದು ಆನ್ ಆಗಿರುವುದಿಲ್ಲ. ಅಲ್ಲೇ ಒಂದು ಹೊಸ ಮೊಬೈಲ್ ಖರೀದಿಸಿ ಆನ್ ಮಾಡಿದಾಗ ಪೋಲೀಸರ ಸಂಪರ್ಕಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಇದೆ. ಜ್ಯೋತಿಷಿಗಳು ಸಿಕ್ಕಿದ್ದಾರೆ ಆದರೆ ಅವರು ಚಲಿಸಿ ಕೊನೆಗೆ ಪತ್ತೆಯಾದ ರೀತಿ ಒಂಥರಾ ಆಶ್ಚರ್ಯವನ್ನುಂಟು ಮಾಡಿದೆ.

Categories
ಶಿವಮೊಗ್ಗ

ನೋಡ ನೋಡುತ್ತಾ ಸರ್ಕಾರಿ ಬಸ್ ಭಸ್ಮ!

ನೋಡ ನೋಡುತ್ತಾ ಸರ್ಕಾರಿ ಬಸ್ ಭಸ್ಮ!
– ಸಾಗರದಲ್ಲಿ ನಡೆದ ಘಟನೆ: 12 ಪ್ರಯಾಣಿಕರು ಪಾರು
– ಶಿವಮೊಗ್ಗ: ಮಹಿಳೆಗೆ ವಂಚನೆ: ಬಿಜೆಪಿ ಯುವ ನಾಯಕ ಅರೆಸ್ಟ್!
– ಗೋಬಿ ಮಂಚೂರಿಗೆ ಹಾನಿಕಾರಕ ಕಲರ್: ಎಚ್ಚರಿಕೆ

NAMMUR EXPRESS NEWS
ಸಾಗರ: ಭಟ್ಕಳದಿಂದ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್‌ ಬೆಂಕಿಗಾಹುತಿಯಾಗಿದ್ದು ದುರಂತ ತಪ್ಪಿದೆ.
ಪ್ರಯಾಣಿಕರನ್ನು ಹೊತ್ತು ಸಾಗುತಿದ್ದ ಸಾರಿಗೆ ಬಸ್ ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಮಂಗಳವಾರ ಬೆಳಿಗ್ಗೆ ಬೆಂಕಿಗೆ ಆಹುತಿ ಆಗಿದೆ.
ಭಟ್ಕಳದಿಂದ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಬರುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಎಚ್ಚೆತ್ತ ಬಸ್ಸು ಚಾಲಕ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ.
ಬಸ್ಸಿನಲ್ಲಿ ಸುಮಾರು 12 ಜನ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ.

ಮಹಿಳೆಗೆ ವಂಚನೆ: ಬಿಜೆಪಿ ಯುವ ನಾಯಕ ಅರೆಸ್ಟ್!

ಶಿವಮೊಗ್ಗ: ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಹಣ ಪಡೆದು ಹಿಂತಿರುಗಿಸದ ಹಿನ್ನೆಲೆ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಶರತ್ ಕಲ್ಯಾಣಿ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆ ಶಿವಮೊಗ್ಗ ಪೊಲೀಸರು ವಿಜಯಪುರದಲ್ಲಿ ಶರತ್‌ ಕಲ್ಯಾಣಿಯನ್ನು ಬಂಧಿಸಿದ್ದಾರೆ.
‘ಫೇಸ್‌ಬುಕ್‌ನಲ್ಲಿ ಶರತ್ ಕಲ್ಯಾಣಿ ತನ್ನನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು, ಹಣವನ್ನು ಕೂಡ ಪಡೆದಿದ್ದ. ಹಣ ಹಿಂತಿರುಗಿಸುವಂತೆ ಕೇಳಿದಾಗ ಸಂಪರ್ಕ ಬಿಟ್ಟಿದ್ದ. ಹಾಗಾಗಿ ಶರತ್ ಕಲ್ಯಾಣಿಯ ಮನೆಗೆ ಹೋದಾಗ ಆತನಿಗೆ ಮದುವೆಯಾಗಿರುವುದು ಗೊತ್ತಾಯಿತು. ಈ ಸಂದರ್ಭ ತನ್ನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿದ್ದಾನೆ’ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು.

ಗೋಭಿ ಮಂಚೂರಿಗೆ ಹಾನಿಕಾರಕ ಕಲರ್: ಎಚ್ಚರಿಕೆ

ತೀರ್ಥಹಳ್ಳಿ: ಗೋಭಿ ಮಂಚೂರಿ, ಕಬಾಬ್ ಹಾಗೂ ಇನ್ನಿತರೆ ಆಹಾರ ಪದಾರ್ಥಗಳಿಗೆ ಹಾನಿಕಾರಕ ಕಲರ್ ಬಳಕೆ ನಿಷೇಧ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರದ ಆದೇಶವಿರುವ ಹಿನ್ನಲೆ ತೀರ್ಥಹಳ್ಳಿ ಪ.ಪಂ.ಮುಖ್ಯಾಧಿಕಾರಿ ಡಿ.ನಾಗರಾಜ್‌, ಆರೋಗ್ಯಾಧಿಕಾರಿ ಭದ್ರಾವತಿ ರಮೇಶ್ ಹಾಗೂ ಸಿಬ್ಬಂದಿಗಳು ಹೋಟೆಲ್, ತಿಂಡಿಗಾಡಿಗಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಹಲವರು ‘ಕಲರ್’ ಉಪಯೋಗಿಸಿದ್ದು ಕಂಡು ಬಂತು. ಅಂತವರಿಗೆ ಅಂತಿಮ ಎಚ್ಚರಿಕೆ ನೀಡಿದ ಪ.ಪಂ.ಇನ್ನೊಮ್ಮೆ ಈ ರೀತಿ ಕಲರ್, ಹಾನಿಕಾರಕ ರಾಸಾಯನಿಕ ಬಳಸಿದ್ದು ಕಂಡಲ್ಲಿ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು.

Categories
ತೀರ್ಥಹಳ್ಳಿ

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಹೋರಾಟಕ್ಕೆ ಸಜ್ಜು!

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಹೋರಾಟಕ್ಕೆ ಸಜ್ಜು!
– ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಆರಗ ಜ್ಞಾನೇಂದ್ರ ಅವರಿಗೆ ಮನವಿ
– ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವ ಕುರಿತು ಹೋರಾಟ

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಬಹುದಿನಗಳ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮಟ್ಟದ ಹೋರಾಟದ ರೂಪರೇಷೆಗಳು ಸಿದ್ಧಗೊಳ್ಳುತ್ತಿವೆ.
2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಇದರಿಂದ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು, ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡುವ ಕುರಿತು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವ ಕುರಿತು ಈಗಾಗಲೇ ಶಿಕ್ಷಕ ಸಂಘ ಹೋರಾಟಕ್ಕೆ ಸಜ್ಜುಗೊಂಡಿದೆ.
ಸರ್ಕಾರ ಹಾಗೂ ಸಂಬಂಧಿಸಿದವರಲ್ಲಿ ನ್ಯಾಯಯುತವಾಗಿ ಒತ್ತಾಯಿಸುವುದೇನೆಂದರೆ, ಕರ್ನಾಟಕ ರಾಜ್ಯವು ಶಾಲಾ ಶಿಕ್ಷಣದಲ್ಲಿ ಅನೇಕ ಹೊಸ ಉಪಕ್ರಮಗಳನ್ನು ತರುವುದರ ಮೂಲಕ ದೇಶದಲ್ಲಿ ಮಾದರಿಗಳನ್ನು ನಿರ್ಮಿಸಿದೆ. ಕಾಲಕಾಲಕ್ಕೆ ಆಗುವ ಶೈಕ್ಷಣಿಕ ಬದಲಾವಣೆಗಳನ್ನು ನಮ್ಮ ರಾಜ್ಯದಲ್ಲೂ ಶಾಲಾ ಶಿಕ್ಷಣ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿರುವುದು ಶ್ಲಾಘನೀಯ. ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 1,88,532 ಶಿಕ್ಷಕರಲ್ಲಿ ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು. ಸಹ ಶಿಕ್ಷಕರು, ವಿಶೇಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾ 1 ರಿಂದ 7, 1 ರಿಂದ 8ನೇ ತರಗತಿಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ.
NCTE ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮವನ್ನು ಬದಲಾಯಿಸಿ, ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ರಿತು ವಿಶೇಷ ರಾಜ್ಯ ಪತ್ರವನ್ನು ಪತ್ರ ಸಂಖ್ಯೆ:434 ದಿನಾಂಕ:20-05-2017ರಂದು ಹೊರಡಿಸಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದವನ್ನು ಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5ಕ್ಕೆ 1,12,467 ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು 6 ರಿಂದ 8ಕ್ಕೆ 51,781 ಎಂದು ವೃಂದವಾರು ಹುದ್ದೆಗಳನ್ನು ಮಂಜೂರಿಸಿ ಆದೇಶಿಸಿದೆ. ತತ್ಪರಿಣಾಮವಾಗಿ 2016ಕ್ಕಿಂತ ಮೊದಲು 1 ರಿಂದ 7, 1 ರಿಂದ 8 ವೃಂದಕ್ಕೆ ನೇಮಕಾತಿಯಾದ ಎಲ್ಲಾ ಸಹ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5 ಎಂದು ಪರಿಗಣಿಸಿದ್ದು, ಶಿಕ್ಷಕರಿಗೆ ತೀವ್ರ ಅನ್ಯಾಯವಾಗಿದೆ.
ಉಲ್ಲೇಖ (1)ರ 2017ರ ಹೊಸ ವೃಂದಬಲ ನಿಗದಿಯಾಗುವವರೆಗೆ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ವೃಂದಕ್ಕೆ ನಿಯಮಿತವಾಗಿ ಬಡ್ತಿ ನೀಡುವಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ 2017ರ ಹೊಸ ವೃಂದಬಲ ನಿಗದಿಯಿಂದಾಗಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವಾಗ ಗೊಂದಲಗಳು ಉಂಟಾದುದ್ದನ್ನು ನಮ್ಮ ಸಂಘಟನೆಯು ಬಲವಾಗಿ ತಿಳಿಸುತ್ತಾ ಬಂದಿದ್ದರೂ, ಅದನ್ನು ಪರಿಹರಿಸದೇ, ಮುಂದೂಡುತ್ತಾ ಬರಲಾಗಿದೆ. ಈಗ ಅದನ್ನು ಖಂಡಿಸಿ ಸಂಘವು ಹೋರಾಟಕ್ಕೆ ಕರೆ ನೀಡಿದ್ದು ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದೆ.
ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ಸೇರಿದಂತೆ ಹಲವರು ಇದ್ದರು.

Categories
ತೀರ್ಥಹಳ್ಳಿ

ಹೊದಲ ಶಾಲೆ ಹಳೆ ವಿದ್ಯಾರ್ಥಿ, ಉದ್ಯಮಿ ಎಚ್.ಜಿ. ಚಂದ್ರಶೇಖರ್ ಅವರಿಗೆ ಡಾಕ್ಟರೇಟ್

ತೀರ್ಥಹಳ್ಳಿ ಪ್ರಮುಖ ಸುದ್ದಿಗಳು
ಹೊದಲ ಶಾಲೆ ಹಳೆ ವಿದ್ಯಾರ್ಥಿ, ಉದ್ಯಮಿ ಎಚ್.ಜಿ. ಚಂದ್ರಶೇಖರ್ ಅವರಿಗೆ ಡಾಕ್ಟರೇಟ್
– ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೇವಾಭಾರತಿ ಮಕ್ಕಳ ಸಾಧನೆ

– ತೀರ್ಥಹಳ್ಳಿ ವಿದ್ಯಾರ್ಥಿನಿ ನಿಶಿಕಾ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ

ಹೊದಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ರೋಟರಿ, ರೆಡ್ ಕ್ರಾಸ್ ಹಾಗೂ ಟೂಡ ಮಾಜಿ ಅಧ್ಯಕ್ಷರು , ಪ್ರಸಿದ್ಧ ಕೈಗಾರಿಕೋದ್ಯಮಿಗಳೂ, ಕೊಡುಗೈದಾನಿಗಳೂ ಆದ ಎಚ್.ಜಿ. ಚಂದ್ರಶೇಖರ್ ಅವರಿಗೆ ತುಮಕೂರು ವಿಶ್ವವಿಧ್ಯಾಲಯವು, ಆಗಸ್ಟ್ ಏಳರಂದು ನಡೆಯುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸುವುದಾಗಿ ಘೋಷಿಸಿದೆ. ಹೆಚ್.ಜಿ. ಚಂದ್ರಶೇಖರ್ ಅವರಿಗೆ ತೀರ್ಥಹಳ್ಳಿ ಜನತೆಯ ಪರವಾಗಿ ಅಭಿನಂದನೆಗಳು.

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೇವಾಭಾರತಿ ಮಕ್ಕಳ ಸಾಧನೆ

ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ನಡೆದ ವಿದ್ಯಾಭಾರತಿಯ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೇವಾಭಾರತಿಯ ವಿದ್ಯಾರ್ಥಿಗಳು 2
ಸ್ಪರ್ಧೆಗಳಲ್ಲಿ ಪ್ರಥಮ, ಎರಡು ಸ್ಪರ್ಧೆಗಳಲ್ಲಿ ದ್ವಿತೀಯ
ಹಾಗೂ ನಾಲ್ಕು ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಗಳಿಸಿ ಶಾಲೆಗೆ
ಕೀರ್ತಿ ತಂದಿರುತ್ತಾರೆ. ವಿಜೇತರಿಗೆ ಮತ್ತು ಕಲಿಸಿದ ಗುರುಗಳಿಗೆ ಸೇವಾಭಾರತಿ ವಿದ್ಯಾಕೇಂದ್ರವು ಅಭಿನಂದನೆಯನ್ನು ಸಲ್ಲಿಸಿದೆ ಹಾಗೂ
ರಾಜ್ಯಮಟ್ಟದಲ್ಲೂ ಉತ್ತಮ ಸಾಧನೆ ಮಾಡಲಿ ಎಂದು ಶುಭ
ಹಾರೈಸಿದೆ.

ವಿಜೇತರು
ಶ್ರವಂತಿ.ಜೆ.ಎಸ್ ಹರ್ಡಲ್ಸ್-ಪ್ರಥಮ, ಹೈ ಜಂಪ್ -ತೃತೀಯ.
ನಿಶಿಕಾ.ಎಸ್- ಲಾಂಗ್ ಜಂಪ್-ದ್ವಿತೀಯ, 100ಮೀ ಓಟ-ತೃತೀಯ..
ಅನನ್ಯ ಎಂ.ಜೆ- 600ಮೀ ಓಟ-ಪ್ರಥಮ, ಸಾನ್ವಿ ಬಿ.ಎಸ್- ಹೈಜಂಪ್-ದ್ವಿತೀಯ, ಅದ್ವೈತ್.ಕೆ.ಎಸ್- ಶಾಟ್ ಪುಟ್-ತೃತೀಯ..
ಪ್ರಥಮ್.ಬಿ.ಆರ್ ಹರ್ಡಲ್ಸ್-ತೃತೀಯ.

ತೀರ್ಥಹಳ್ಳಿ ವಿದ್ಯಾರ್ಥಿನಿ ನಿಶಿಕಾ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ

ತೀರ್ಥಹಳ್ಳಿ ಬಂಟ ಸಮುದಾಯದ ಸೊಪ್ಪುಗುಡ್ಡೆ ಸುರೇಶ್ ಶೆಟ್ಟಿ ಮತ್ತು ಮಾಲತಿ ಶೆಟ್ಟಿ ದಂಪತಿಗಳ ಮಗಳಾದ ಕುಮಾರಿ ನಿಶಿಕಾ ಶೆಟ್ಟಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆದ್ದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ದಿನಾಂಕ 4.8.2024ರ ಭಾನುವಾರ ಶಿವಮೊಗ್ಗದ ನೆಹರು ಸ್ಟೇಡಿಯಂನಲ್ಲಿ ನಡೆದ ವಿದ್ಯಾ ಭಾರತಿ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿಯ ಪ್ರತಿಷ್ಠಿತ ಸೇವಾ ಭಾರತಿ ಶಾಲೆಯ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕುಮಾರಿ ನಿಶಿಕಾ ಶೆಟ್ಟಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಲಾಂಗ್ ಜಂಪ್ ನಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ 100 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ಬೀದರ್ ನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.

Categories
ಕರಾವಳಿ ಕುಂದಾಪುರ

ವಿಶ್ವ ಕುಂದಾಪುರ ದಿನ ಆಚರಿಸಿದ ಬಾರ್ಕೂರು ರೋಟರಿ ಕ್ಲಬ್!

ವಿಶ್ವ ಕುಂದಾಪುರ ದಿನ ಆಚರಿಸಿದ ಬಾರ್ಕೂರು ರೋಟರಿ ಕ್ಲಬ್!
– ಆಸಾಡಿಯಂಗೆ ಒಂದು ದಿನ ಕಾರ್ಯಕ್ರಮದಲ್ಲಿ ಗಮನ ಸೆಳೆದ ವೇದಿಕೆ
– ಮನು ಹಂದಾಡಿ ಸೇರಿ ಅನೇಕ ಗಣ್ಯರ ಸಮಾಗಮ

NAMMUR EXPRESS NEWS
ಬ್ರಹ್ಮಾವರ: ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯನ್ನು ಬಾರ್ಕೂರು ರೋಟರಿ ಕ್ಲಬ್ ಇವರ ಆಶ್ರಯದಲ್ಲಿ ಬಾರ್ಕೂರು ರೋಟರಿ ಭವನದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಆಸಾಡಿಯಂಗೆ ಒಂದು ದಿನ ಕಾರ್ಯಕ್ರಮವನ್ನು ಬಹಳ ವಿಭಿನ್ನವಾಗಿ ಆಚರಿಸಲಾಗಿದ್ದು, ಸಿರಿ ಓಲೆ ತಳಿರು ತೋರಣಗಳಿಂದ ಕಲಾತ್ಮಕವಾಗಿ ರಚಿಸಲ್ಪಟ್ಟ ಸುಂದರ ವೇದಿಕೆಯಲ್ಲಿ ದೀಪ ಬೆಳಗಿಸಿ ತೆಂಗಿನ ಹೂ ಗೊನೆಯನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ವೇದಿಕೆಯ ಮುಂಭಾಗದಲ್ಲಿ ಬಾರ್ಕೂರಿನ ಪ್ರಸಿದ್ಧ ರಂಗವಲ್ಲಿ ಕಲಾವಿದೆ ವಿಶಾಲಮಹೇಶ್ ಪೂಜಾರಿ ಅವರು ರಂಗವಲ್ಲಿ ರಚಿಸಿದ ಕುಂದಾಪ್ರ ಕನ್ನಡದ ಲೋಗೋ ಹಾಗೂ ಕೂಡ್ಲಿ ಶ್ರೀ ಸುದರ್ಶನ ಉಡುಪರ ಸಂಗ್ರಹದಲ್ಲಿರುವ ಬಹಳ ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಗೃಹಬಳಕೆಯ ಹಾಗೂ ಕಲಾತ್ಮಕ ವಸ್ತುಗಳನ್ನು ಬಹಳ ಸುಂದರವಾಗಿ ಅಚ್ಚುಕಟ್ಟಾಗಿ ಜೋಡಿಸಿದ್ದು ನೆರೆದವರ ಮನಸೆಳೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆರ್ಗಮಿಸಿದ ಆರ್. ಎ ಸಾಮಗ ,ಮುಖ್ಯ ಅತಿಥಿಗಳಾದ ಕುಂದಗನ್ನಡದ ರಾಯಭಾರಿ ಶ್ರೀ ಮನು ಹಂದಾಡಿ,ಶಾಂತರಾಮ ಶೆಟ್ಟಿ, (ಅಧ್ಯಕ್ಷರು ಬಾರ್ಕೂರು ಗ್ರಾಮ ಪಂಚಾಯತ್ ಪ್ರಕಾಶ್ ಶೆಟ್ಟಿ ( ಅಧ್ಯಕ್ಷರು ಯಡ್ತಾಡಿ ಗ್ರಾಮ ಪಂಚಾಯತ್ ) ಅಲ್ವಿನ್ ಅಂದ್ರಾದೆ ( ಮಾಜಿ ಅಧ್ಯಕ್ಷರು ರೋಟರಿ ಬ್ರಹ್ಮಾವರ ) ರಾಜಾರಾಮ್ ಶೆಟ್ಟಿ( ಮಾಲಕರು ಆಶ್ರಯ ಹೋಟೆಲ್ ) ಸತೀಶ್ ಪೂಜಾರಿ ಬೆಣ್ಣೆಕುದ್ರು (ಪ್ರೋ. ಗ್ಲೋಬಲ್ ಕ್ವಾಯರ್ ಇಂಡಸ್ಟ್ರೀಸ್ ಬೆಣ್ ಅವರು ಭಾಗವಹಿಸಿ ಮಾತನಾಡಿದರು.