Categories
ಕರಾವಳಿ

ವ್ಯಕ್ತಿಯ ಜೀವ ತೆಗೆದ ಎಳೆನೀರು!

ಕರಾವಳಿ ಕ್ರೈಂ ಸುದ್ದಿಗಳು

ವ್ಯಕ್ತಿಯ ಜೀವ ತೆಗೆದ ಎಳೆನೀರು!
– ಶಿರ್ವ: ಎಳೆನೀರು ಕೊಯ್ಯುವ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ದುರ್ಮರಣ
– ಕಾರ್ಕಳ: ಮದ್ಯದ ನಶೆಯಲ್ಲಿ ರಸ್ತೆ ಮಧ್ಯೆ ಮಲಗಿದ ವ್ಯಕ್ತಿ
– ಬೆಳ್ತಂಗಡಿ, ಉಡುಪಿ: ಕೋಳಿ ಅಂಕ, ಗ್ಯಾಂಗ್ ಅರೆಸ್ಟ್
– ಬಂಟ್ವಾಳ: ಬೈಕ್ ನಡುವೆ ಅಪಘಾತದಲ್ಲಿ ನಾಲ್ವರು ಆಸ್ಪತ್ರೆಗೆ
NAMMUR EXPRESS NEWS
ಉಡುಪಿ: ಎಳೆನೀರು ಕೊಯ್ಯುವ ವೇಳೆ ವಿದ್ಯುತ್‌ ತಗುಲಿ ಕೂಲಿಕಾರ್ಮಿಕರೋರ್ವರು ಮೃತಪಟ್ಟ ಘಟನೆ ಶಿರ್ವ ನಡೀಬೆಟ್ಟು ಎಂಬಲ್ಲಿ ಆ.8ರಂದು ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ನಡೀಬೆಟ್ಟು ಪನಿಮಾರ್‌ ಮನೆಯ ಕೆಲಸದಾಳು ಸುರೇಶ್ ಶೆಟ್ಟಿ(68) ಎಂದು ಗುರುತಿಸಲಾಗಿದೆ. ಇವರು ಕಬ್ಬಿಣದ ಸಲಾಕೆಯಿಂದ ಸೀಯಾಳ ತೆಗೆಯಲು ಹೋಗಿದ್ದರು. ಈ ವೇಳೆ ತೋಟದಲ್ಲಿರುವ ಹೈ ಟೆನ್ನನ್ ವಯ‌ರ್ ಕಬ್ಬಿಣದ ಸಲಾಕೆಗೆ ತಗಲಿ ಈ ಅವಘಡ ಸಂಭವಿಸಿದೆ.
ಈ ಸಂದರ್ಭದಲ್ಲಿ ಮನೆಯ ಮಾಲೀಕ ದೇವಸ್ಥಾನಕ್ಕೆ ಹೋಗಿದ್ದರು ಎನ್ನಲಾಗಿದೆ.

ಬೆಳ್ತಂಗಡಿ : ಅಕ್ರಮ ಕೋಳಿ ಅಂಕ: ಐವರು ಅರೆಸ್ಟ್!

ಬೆಳ್ತಂಗಡಿ: ಅಕ್ರಮ ಕೋಳಿ ಅಂಕ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ 5 ಮಂದಿಯನ್ನು ದಸ್ತಗಿರಿ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕು, ಬಂದಾರು ಗ್ರಾಮದ ಪೇರಲ್ಲಪಲ್ಕೆ ಗುಡ್ಡದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ದೇವಪ್ಪ, ಉಮ್ಮನ ಗೌಡ, ಪರಮೇಶ್ವರ, ರಾಮಣ್ಣ, ಬಾಲಕೃಷ್ಣ ಎಂದು ಹೆಸರಿಸಲಾಗಿದೆ. ಪೇರಲ್ಲಪಲ್ಕೆ ಎಂಬಲ್ಲಿನ ಗುಡ್ಡೆಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್‌ ಠಾಣಾ ಪಿಎಸ್ಸೆ ಕಿಶೋ‌ರ್ ಪಿ ಅವರ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.

ಉಡುಪಿ: ಅಂಕ ಆಡುತ್ತಿದ್ದವರು ಪರಾರಿ: 9 ಕೋಳಿಗಳ ವಶ

ಉಡುಪಿ:ಅಂಬಲಪಾಡಿ ಎಂಬಲ್ಲಿ ಅನುಮತಿ ಇಲ್ಲದೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಉಡುಪಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 9 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಕಂಡ ಸ್ಥಳೀಯರು ಹಾಗೂ ಜೂಜುಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾರಿ ಹಬ್ಬದ ಹಿನ್ನೆಲೆಯಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಆದರೆ ಈ ಬಾರಿ ಕೋಳಿ ಅಂಕವನ್ನು ಅನುಮತಿ ಇಲ್ಲದೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಕೋಳಿ ಅಂಕಕ್ಕೆ ದಾಳಿ ನಡೆಸಿ ಕೋಳಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಕಳ: ಬೈಕ್-ಟೆಂಪೋ ಡಿಕ್ಕಿ: ಯುವ ಉದ್ಯಮಿ ಸಾವು

ಕಾರ್ಕಳ: ಕಾರ್ಕಳದ ಮಿಯಾರು ಬಳಿಯ ನಲ್ಲೂರು ಬಸದಿ ತಿರುವಿನಲ್ಲಿ ಸಂಭವಿಸಿದ ಬೈಕ್-ಟೆಂಪೋ ನಡುವಿನ ಅಪಘಾತದಲ್ಲಿ ಯುವ ಉದ್ಯಮಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಪಟ್ಟ ಉದ್ಯಮಿ ಕಾಶಿನಾಥ್ (38) ಮೃತರು.ಕಲ್ಯಾದ ಹಾಳೆಕಟ್ಟೆಯಲ್ಲಿ ಸಲೂನ್‌ ಅಂಗಡಿ ಹೊಂದಿದ್ದ ಅವರು ರಾತ್ರಿ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬಸದಿ ತಿರುವಿನಲ್ಲಿ ಮನೆ ಕಡೆಗೆ ಬೈಕ್ ತಿರುಗಿಸುವಾಗ ಎದುರಿನಿಂದ ವೇಗವಾಗಿ ಬಂದ ಟೆಂಪೋವೊಂದು ಢಿಕ್ಕಿ ಹೊಡೆದಿದೆ ಎಂದು ಎನ್ನಲಾಗಿದೆ.

ಬಂಟ್ವಾಳ: ಬೈಕ್ ನಡುವೆ ಅಪಘಾತದಲ್ಲಿ ನಾಲ್ವರು ಆಸ್ಪತ್ರೆಗೆ

ಬಂಟ್ವಾಳ: ಸ್ಕೂಟರುಗಳ ಮಧ್ಯೆ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಕುಕ್ಕಿಪ್ಪಾಡಿ ಗ್ರಾಮದ ಸಿದ್ದಕಟ್ಟೆ ಬಿ ಎಸ್ ಎನ್ ಎಲ್ ಟವರ್ ಬಳಿ ಸೋಮವಾರ ಸಂಜೆ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ನಿವಾಸಿ ಜೆಪ್ರಿ ಜೀವನ್ ಬರೆಟ್ರೊ ಅವರು ತನ್ನ ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ಸಿದ್ದಕಟ್ಟೆ ಎಂಬಲ್ಲಿ ಇನ್ನೊಂದು ಸ್ಕೂಟರ್ ಚಾಲಕ ಇಬ್ಬರು ಸಹಸವಾರರನ್ನು ಕುಳ್ಳಿರಿಸಿಕೊಂಡು ನಿರ್ಲಕ್ಷ್ಯದ ಚಾಲನೆ ಮಾಡಿ ಬಂದು ಜೀವನ್ ಅವರ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಕಾರ್ಕಳ: ಮದ್ಯದ ನಶೆಯಲ್ಲಿ ರಸ್ತೆ ಮಧ್ಯೆ ಮಲಗಿದ ವ್ಯಕ್ತಿ!

ಕಾರ್ಕಳ : ಐತಿಹಾಸಿಕ ಅನಂತಶಯನ ದೇವಸ್ಥಾನದ ಎದುರುಗಡೆಯ ರಸ್ತೆಯಲ್ಲಿ ಕಡುಕನೊಬ್ಬ ಸಾರ್ವಜನಿಕ ರಸ್ತೆಯಲ್ಲಿ ಮಲಗಿ ಅವಾಂತರ ಸೃಷ್ಠಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆಸಿದೆ.
ಬಿಳಿ ಶರ್ಟ್ ಹಾಗೂ ಕಾವಿ ಲುಂಗಿ ಧರಿಸಿಕೊಂಡಿದ ವ್ಯಕ್ತಿ ಅನಂತಶಯನ ದೇವಸ್ಥಾನ ಎದುರುಗಡೆಯಲ್ಲಿ ಇರುವ ಸ್ವಾತಂತ್ರ್ಯ ಚಳುವಳಿ ಕಟ್ಟೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಉತ್ತರ ದಿಕ್ಕಿ ತಲೆ ಇಟ್ಟು ಮಲಗಿದ್ದನು.
ಕುಡುಕನ ಅವಾಂತರಕ್ಕೆ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ವಾಹನ ಚಾಲಕರು ನಿಯಂತ್ರಣ ಕಳೆದು ಕೊಂಡಿದ್ದರೆ ಆ ಪ್ರದೇಶದಲ್ಲಿ ಅನಾಹುತವೇ ನಡೆಯುತ್ತಿತ್ತು. ತುಂತುರು ಮಳೆಯ ಸಿಂಚನದಲ್ಲಿ ಪುಟ್ ಪಾತ್ ನಲ್ಲಿ ಮಲಗಿದ್ದ ಕುಡುಕ ಮದ್ಯದ ನಶೆ ಇಳಿಯುತ್ತಿದ್ದಂತೆ ಒದ್ದೆ ಬಟ್ಟೆಯಲ್ಲಿ ಅಲ್ಲಿಂದ ಹೆಜ್ಜೆ ಹಾಕಿ ಬೇರೆಡೆಗೆ ಹೊರಟು ಹೋಗಿದ್ದಾನೆ.
ರಸ್ತೆಯಲ್ಲಿ ಮಲಗಿದ್ದ ಕುಡುಕನ ಅವಾಂತರದ ದೃಶ್ಯಾವಳಿಯನ್ನು ವಕೀಲ ಅನಿಲ್ ಕುಮಾ‌ರ್ ನಿಟ್ಟೆ ಅವರು ತನ್ನ ಮೊಬೈಲ್ ನಲ್ಲಿ ಫೋಟೋ ಸೆರೆ ಹಿಡಿದಿದ್ದರು.

Categories
ಮಾಹಿತಿ ಸುದ್ದಿ

ನಾಗರಪಂಚಮಿ ವಿಶೇಷ ಏನು?

ನಾಗರಪಂಚಮಿ ವಿಶೇಷ ಏನು?
– ನಾಗರ ಪಂಚಮಿ ಆಚರಣೆ ಹೇಗೆ?
– ನಾಗನ ಪೂಜೆಯಿಂದ ಏನೇನು ಲಾಭ?

NAMMUR EXPRESS NEWS
ನಾಗರ ಪಂಚಮಿ ಹಬ್ಬವನ್ನು ಕರ್ನಾಟಕದಾದ್ಯಂತ ಸಂಭ್ರಮದಿಂದ ಆಚರಿಸಲಾಗತ್ತೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು (ಪಂಚಮಿ) ಈ ಬಾರಿ ಆಗಸ್ಟ್ 9, 2024 ರಂದು ಆಚರಿಸಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ವರಮಹಾಲಕ್ಷ್ಮಿ ಹಬ್ಬ, ಕೃಷ್ಣಜನ್ಮಾಷ್ಟಮಿ, ಗೌರಿ ಗಣೇಶ ಹಬ್ಬ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಆರಂಭವಾಗುತ್ತವೆ.
ಕರ್ನಾಟಕ ನಾಗಬನಗಳ ಪ್ರದೇಶವಾಗಿದ್ದು, ಕರ್ನಾಟಕದಲ್ಲಿ ನಾಗಬನಗಳ ಹತ್ತಿರ ನಾಗದೇವತೆಯ ಮೂರ್ತಿಯನ್ನು ಸ್ಥಾಪಿಸಿ ಅದರ ಪೂಜೆಯನ್ನು ಮಾಡುವ ಪರಂಪರೆಯಿದೆ. ಮನೆಗಳ ಹತ್ತಿರದಲ್ಲಿಯೇ ನಾಗಬನಗಳಿದ್ದರೂ, ಅವುಗಳಿಂದ ಯಾರಿಗೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂಬುದೇ ವಿಶೇಷನೀಯ . ನಾಗರಪಂಚಮಿಯು ನಾಗದೇವತೆಯ ಮಹತ್ವಪೂರ್ಣ ಹಬ್ಬವಾಗಿದ್ದು ಈ ದಿನ ದೇಶದೆಲ್ಲೆಡೆ ನಾಗಗಳ ಪೂಜೆಯನ್ನು ಮಾಡುತ್ತಾರೆ.
ನಾಗರಪಂಚಮಿ ಎಂದರೆ ಒಡಹುಟ್ಟಿದವರ ಹಬ್ಬ. ಹೆಣ್ಣು ಮಕ್ಕಳ ಹಬ್ಬ. ನಾಗಪ್ಪನಿಗೆ ಹಾಲು ಎರೆದು ಆಚರಿಸುವ ಹಬ್ಬವಾಗಿದೆ. ಈ ಹಬ್ಬಕ್ಕೆ ಗರುಡ ಪಂಚಮಿ ಎಂಬ ಹೆಸರು ಕೂಡ ಇದೆ. ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗರಕಲ್ಲಿಗೆ ಅಥವಾ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಲಾಗುತ್ತದೆ. ನಾಗಪ್ಪನಿಗೆ ಹಲವು ವಿಧದ ಉಂಡೆಗಳು, ಕರಿ ಎಳ್ಳಿನಿಂದ ಮಾಡಿದ ಉಂಡೆ, ಚಿಗಳಿ ತಂಬಿಟ್ಟು, ಹಸಿ ಅಕ್ಕಿ ಮತ್ತು ಬೆಲ್ಲ ಬೆರೆಸಿ ಮಾಡಿದ ತಂಬಿಟ್ಟಿನ ನೈವೇದ್ಯವನ್ನು ಮಾಡಲಾಗುತ್ತದೆ.
ಪುರಾಣ ಕತೆಯೊಂದರ ಪ್ರಕಾರ ಹಾವು ಕಚ್ಚಿ ಮಡಿದ ತನ್ನ ಸಹೋದರನನ್ನು ಸಹೋದರಿಯೊಬ್ಬಳು ಬದುಕಿಸಿಕೊಂಡ ದಿನ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಾಗಿತ್ತು. ಹಾವನ್ನು ಭಕ್ತಿಭಾವದಿಂದ ಪೂಜಿಸಿ ತನ್ನ ಅಣ್ಣನನ್ನು ತಂಗಿ ಬದುಕಿಸಿಕೊಂಡ ದಿನವಾಗಿದ್ದರಿಂದ ಈ ದಿನವನ್ನು ಭ್ರಾತೃತ್ವದ ಸಂಕೇತವಾಗಿಯೂ ಕೆಲವೆಡೆ ಆಚರಿಸಲಾಗುತ್ತದೆ.
ಜನಮೇಜಯ ಎಂಬ ರಾಜ ತನ್ನ ತಂದೆ ಪರೀಕ್ಷಿತನ ಸಾವಿಗೆ ಹಾವು ಕಾರಣ ಎಂದು ತಿಳಿದು ಭೂಲೋಕದಲ್ಲಿರುವ ಸರ್ಪಸಂಕುಲವನ್ನೆಲ್ಲ ನಾಶ ಮಾಡುವ ಶಪಥ ಮಾಡಿ, ಸರ್ಪಯಜ್ಞ ಮಾಡಲು ಹೊರಡುತ್ತಾನೆ. ಆದರೆ ಪ್ರಾಣಿ ಹಿಂಸೆ ಮಹಾಪಾಪ ಎಂಬುದನ್ನು ಸಂತರೊಬ್ಬರ ಹಿತವಚನದಿಂದ ಅರಿತ ಜನಮೇಜಯ ಸರ್ಪಯಜ್ಞವನ್ನು ಹಿಂದೆಗೆದುಕೊಳ್ಳುತ್ತಾನೆ. ಹೀಗೆ ಜನಮೇಜಯ ಸರ್ಪಯಜ್ಞವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಆದ್ದರಿಂದ ಈ ದಿನವನ್ನು ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ ಎಂಬ ಪ್ರತೀತಿಯೂ ಇದೆ.
ಶ್ರೀಕೃಷ್ಣನ ನೆನಪು ನಾಗರ ಪಂಚಮಿಗೂ ಭಗವಾನ್ ಶ್ರೀಕೃಷ್ಣನಿಗೂ ಸಂಬಂಧವಿದೆ ಎಂದು ಹೇಳಲಾಗುತ್ತೆ.  ಪುರಾಣ ಕತೆಯೊಂದರ ಪ್ರಕಾರ ಬಾಲ ಕೃಷ್ಣ ಯಮುನಾ ನದಿ ತೀರದಲ್ಲಿ ಆಟವಾಡುತ್ತಿದ್ದಾಗ ನದಿಯಲ್ಲಿ ಜಾರಿ ಬೀಳುತ್ತಾನೆ. ಕೃಷ್ಣ ನದಿಗೆ ಬಿದ್ದ ಸಂದರ್ಭದಲ್ಲಿ ಕಾಳಿಯಾ ಎಂಬ ಹಾವೊಂದು ಆತನ ಮೇಲೆ ದಾಳಿ ನಡೆಸುತ್ತದೆ. ಆದರೆ ದೈವತ್ವದ ಸ್ವರೂಪವಾಗಿದ್ದ ಶ್ರೀಕೃಷ್ಣ ಕಾಳಿಯಾನನ್ನು ಮಣಿಸುತ್ತಾನೆ. ಈತ ಸಾಮಾನ್ಯ ಮಗುವಲ್ಲ ಎಂಬುದನ್ನು ಅರಿತ ಕಾಳಿಯ ಹಾವು ತನ್ನನ್ನು ಬಿಟ್ಟುಬಿಡುವಂತೆ ಕೃಷ್ಣನಲ್ಲಿ ಬೇಡುತ್ತದೆ. ಆಗ ಜನರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ವಚನ ಪಡೆದು, ಶ್ರೀಕೃಷ್ಣ ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗೆ ಕೃಷ್ಣನು ಕಾಳಿಯಾ ಹಾವನ್ನು ಸೋಲಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಕಾಳಜಿಯನ್ನು ಕೃಷ್ಣ ಮಣಿಸಿದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ.

ನಾಗರ ಪಂಚಮಿಯಂದು ಉಪವಾಸ ?

ಪುರಾಣ ಕತೆಯೊಂದರಲ್ಲಿ ಸತ್ಯೇಶ್ವರಿ ಎಂಬ ದೇವಿಯೊಬ್ಬಳು ನಾಗರಪಂಚಮಿಯ ಹಿಂದಿನ ದಿನ ಮೃತನಾದ ತನ್ನ ಸಹೋದರನನ್ನು ನೆನೆದು, ನಾಗರಪಂಚಮಿಯ ದಿನ ಅನ್ನ-ನೀರು ಬಿಟ್ಟು ಉಪವಾಸ ಮಾಡಿದಳು. ಇಂದಿಗೂ ನಾಗರ ಪಂಚಮಿಯ ದಿನ ಸಹೋದರನ ಒಳಿತಿಗಾಗಿ ಸಹೋದರಿಯರು ಉಪವಾಸ ಮಾಡುವ ಪರಿಪಾಠವಿದೆ.

ಪೂಜೆ ಮಾಡುವುದು ಹೇಗೆ?
ಈ ದಿನ ಚಂದನ ಅಥವಾ ಅರಿಶಿಣದಿಂದ ಮಣೆ ಮೇಲೆ ನವನಾಗಗಳ ಆಕೃತಿ ಬರೆದು ಪೂಜೆ ಮಾಡುವ ಪದ್ಧತಿ ಇದೆ. ಇಲ್ಲವೆಂದರೆ ನಾಗರ ಕಲ್ಲು, ಅಥವಾ ನಾಗದೇವನ ಚಿತ್ರಕ್ಕೆ ಪೂಜೆ ಮಾಡಬಹುದು. ಈ ದಿನ, ನಾಗದೇವನಿಗೆ ಅರಳು ಮತ್ತು ಹಾಲನ್ನು ನೈವೇದ್ಯವೆಂದು ಅರ್ಪಿಸಬೇಕು. ನಾಗದೇವನಿಗೆ ಈ ದಿನ ಧೂರ್ವೆಯನ್ನು ಸಹ ಅರ್ಪಿಸಲಾಗುತ್ತದೆ.

ಯಾವುದಕ್ಕೆ ನಿಷೇಧ?
ನಾಗರ ಪಂಚಮಿಯ ದಿನ ಹಲವು ಕೆಲಸಗಳಿಗೆ ನಿಷೇಧವಿದೆ. ಈ ದಿನ ಏನನ್ನೂ ಹಚ್ಚಬಾರದು, ಕತ್ತರಿಸಬಾರದು. ಎಣ್ಣೆಯಲ್ಲಿ ಯಾವ ಪದಾರ್ಥವನ್ನೂ ಕರಿಯುವಂತಿಲ್ಲ, ಕರಿದ ಖಾದ್ಯ ನಿಷಿದ್ಧ, ಹಾಗೆಯೇ ಭೂಮಿಯನ್ನು ಅಗಿಯಬಾರದು ಎಂಬ ನಿಯಮವೂ ಕೆಲವೆಡೆ ಆಚರಣೆಯಲ್ಲಿದೆ.

ಮಲೆನಾಡ ಬಳಿ ಆಚರಣೆ ಹೇಗಿದೆ?
ಸಿಹಿ ತಿನಿಸು ನಾಗರ ಪಂಚಮಿ ದಿನ ಪಾಯಸದಂಥ ಸಿಹಿಖಾದ್ಯ ಮಾಡಿ ಸೇವಿಸುತ್ತಾರೆ. ಖರಿದ ಖ್ಯಾದ್ಯ ವರ್ಜ್ಯವಾಗಿರುವುದರಿಂದ ಮಲೆನಾಡ ಭಾಗಗಳಲ್ಲಿ ಹಲಸಿನ ಬೀಜದಿಂದ ಸಿಹಿ ತಯಾರಿಸಿ ಸೇವಿಸುವ ಪರಿಪಾಠವೂ ಇದೆ.

ಮಾನವರಿಗೆ ನಾಗಗಳಿಂದಾಗುವ ಉಪಕಾರ ?

ಸಮುದ್ರಮಂಥನದ ನಂತರ ನಾಗಗಳ ಏಳು ವಂಶಗಳು ನಿರ್ಮಾಣವಾದವು. ಅವುಗಳಲ್ಲಿನ ಆರು ವಂಶಗಳು ‘ನಾಗಲೋಕಕ್ಕೆ’ ಹೋದವು; ಕೇವಲ ‘ಮಣಿಪ್ರಸಾದ’ವೆಂಬ ಹೆಸರಿನ ನಾಗನ ವಂಶವು ಪೃಥ್ವಿಯ ಮೇಲೆ ಉಳಿಯಿತು. ಅವು ವಾತಾವರಣದಲ್ಲಿನ ರಜ-ತಮ ಮತ್ತು ಕಪ್ಪು ಶಕ್ತಿಯನ್ನು ಸೆಳೆದುಕೊಂಡು ತಮ್ಮಲ್ಲಿ ವಿಷರೂಪದಲ್ಲಿ ಇಟ್ಟುಕೊಳ್ಳುತ್ತವೆ. ಇದರಿಂದ ಪೃಥ್ವಿಯ ಮೇಲಿನ ವಾತಾವರಣವು ಶುದ್ಧವಾಗುವುದರಿಂದ ಮಾನವನಿಗೆ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ.

ನಾಗನ ಪೂಜೆಯನ್ನು ಹೇಗೆ ಮಾಡಬೇಕು?

ನಾಗರಪಂಚಮಿಯ ದಿನ ಪ್ರತ್ಯಕ್ಷ ನಾಗನ ಪೂಜೆಯನ್ನು ಮಾಡುವುದು ಹೆಚ್ಚು ಲಾಭದಾಯಕವಾಗಿದೆ. ಆದರೆ ನಾಗನು ಉಪಲಬ್ಧನಿಲ್ಲದಿದ್ದರೆ ಅರಿಶಿನ ಅಥವಾ ರಕ್ತಚಂದನದಿಂದ ಮರದ ಮಣೆಯ ಮೇಲೆ ನವನಾಗಗಳ (ಒಂಬತ್ತು ನಾಗಗಳ) ಆಕೃತಿಗಳನ್ನು ಬಿಡಿಸಬೇಕು. ಈ ನವನಾಗಗಳ ಪೂಜೆಯನ್ನು ಮಾಡಿ ಅವರಿಗೆ ಹಾಲು-ಅರಳಿನ ನೈವೇದ್ಯವನ್ನು ಅರ್ಪಿಸಬೇಕು.

ನಾಗರಪಂಚಮಿ ಹಬ್ಬದ ಫಲ

ನಾಗರಪಂಚಮಿಯ ದಿನ ಭಾವಪೂರ್ಣವಾಗಿ ನಾಗಪೂಜೆಯನ್ನು ಮಾಡುವ ಸ್ತ್ರೀಯರಿಗೆ ಶಕ್ತಿತತ್ತ್ವ ಪ್ರಾಪ್ತವಾಗುತ್ತದೆ. ಹಾಗೆಯೇ ಯಾವ ಸ್ತ್ರೀಯರು ನಾಗನನ್ನು ಸಹೋದರನೆಂಬ ಭಾವದಿಂದ ಪೂಜಿಸುತ್ತಾರೆಯೋ, ಅವರ ಸಹೋದರರ ಆಯುಷ್ಯವು ವೃದ್ಧಿಯಾಗುತ್ತದೆ.ಒಟ್ಟಾರೆಯಾಗಿ ನಾಗ ಪಂಚಮಿ ಹಬ್ಬವನ್ನೂ ತನ್ನದೇ ಆದ ವೈಶಿಷ್ಟ್ಯತೆಗಳೊಂದಿಗೆ ವಿಭಿನ್ನ ಸಂಪ್ರದಾಯದ ಆಚರಣೆಯು ಮೂಲಕ ಭಕ್ತಿ ಭಾವದಿಂದ ಪೂಜಿಸಲಾಗತ್ತೆ.

ಸರ್ವರಿಗೂ ನಾಗರ ಪಂಚಮಿ ಶುಭಾಶಯಗಳು

Categories
ರಾಜ್ಯ

ರಾಜಧಾನಿಯಲ್ಲಿ ಮಧ್ಯರಾತ್ರಿಯೂ ಬ್ಯುಸಿನೆಸ್!

ರಾಜಧಾನಿಯಲ್ಲಿ ಮಧ್ಯರಾತ್ರಿಯೂ ಬ್ಯುಸಿನೆಸ್!
– ಹೋಟೆಲ್,ರೆಸ್ಟೋರೆಂಟ್, ಬಾರ್ ಮಾಲೀಕರಿಗೆ ಗುಡ್ ನ್ಯೂಸ್
– ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ
– ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕೃತ ಆದೇಶ ಜಾರಿ

NAMMUR EXPRESS NEWS
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇನ್ನು ಮುಂದೆ ಮಧ್ಯರಾತ್ರಿ ಒಂದು ಗಂಟೆಯವರೆಗೆ ಬಾರ್ ಹೋಟೆಲ್ ರೆಸ್ಟೋರೆಂಟ್ ಸೇರಿದಂತೆ ವಾಣಿಜ್ಯ ವಹಿವಾಟಿಗೆ ಅವಕಾಶವನ್ನು ನೀಡಿ ಸರ್ಕಾರ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ.
ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾರ್, ರೆಸ್ಟೋರೆಂಟ್, ಹೋಟೆಲ್ ಸೇರಿದಂತೆ ವಾಣಿಜ್ಯ ವಹಿವಾಟಿಗೆ ಅವಕಾಶ ಕೋರಿ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಆದರೆ ಬೆಂಗಳೂರಿನಲ್ಲಿ ಮಾತ್ರ ಸದ್ಯ ಅವಕಾಶವನ್ನು ನೀಡಲಾಗಿದ್ದು, ಮುಂಜಾನೆ 6 ರಿಂದ ತಡರಾತ್ರಿ 1 ಗಂಟೆಯವರೆಗೆ ತೆರೆಯಲು ನಗರಾಭಿವೃದ್ಧಿ ಇಲಾಖೆಯಿಂದ ಆದೇಶ ಹೊರಬಿದ್ದಿದೆ.
ರಾತ್ರಿ ಒಂದು ಗಂಟೆಯವರೆಗೆ ಹೋಟೆಲ್ ಅವಕಾಶ ನೀಡಿರುವ ಹಿನ್ನೆಲೆ ರಾಜ್ಯ ಸರ್ಕಾರದ ಆದೇಶವನ್ನು ಹೋಟೆಲ್ ಅಸೋಸಿಯೇಷನ್ ಸ್ವಾಗತ ಸರ್ಕಾರದ ಆದೇಶವನ್ನು ನಾವು ಸ್ವಾಗತಿಸಿದ್ದು ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತೆ ಎಂದು ರಾಜ್ಯ ಹೋಟೆಲ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೊಳ್ಳ ಹೇಳಿಕೆಯನ್ನು ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಬಹುದಿನದ ಬೇಡಿಕೆ ಕೊನೆಗೂ ಈಡೇರಿದೆ . ಈ ಹಿಂದೆ ಬೆಳಗ್ಗೆ 9:00 ರಿಂದ ಮಧ್ಯರಾತ್ರಿ ಒಂದು ಗಂಟೆಯವರೆಗೆ ಕಮಿಷನರೇಟ್ (ಸಿಟಿ ಸೆಂಟರ್) ವ್ಯಾಪ್ತಿಯಲ್ಲಿ ಬರುವ ಬಾರ್ ಅಂಡ್ ರೆಸ್ಟೋರೆಂಟ್ ಗೆ ಮಾತ್ರ ಅವಕಾಶವಿತ್ತು. ಆದರೆ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೂ ರಾತ್ರಿ ಒಂದು ಗಂಟೆಯವರೆಗೂ ವ್ಯಾಪಾರ ವ್ಯವಹಾರಕ್ಕೆ ಸಮಯ ವಿಸ್ತರಿಸಿದ್ದರಿಂದ ಬಿಬಿಎಂಪಿ ಲಿಮಿಟ್ಸ್ ನಲ್ಲಿ ಬಾರ್ ಮಾಲೀಕರ ವ್ಯಾಪಾರಕ್ಕೆ ಅನುಕೂಲವಾಗಲಿದೆ.

Categories
ಕರಾವಳಿ ಮಲ್ನಾಡ್

ಒತ್ತುವರಿ ತೆರವು ವಿರುದ್ಧ ಇದೀಗ ಜನಾಂದೋಲನ!

ಒತ್ತುವರಿ ತೆರವು ವಿರುದ್ಧ ಇದೀಗ ಜನಾಂದೋಲನ!
– ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರಕ್ಕೆ ಪತ್ರ?
– ರೈತರು, ಬಡವರ ಬದುಕು ಬೀದಿಗೆ ತಳ್ಳದಿರಿ: ಒತ್ತಾಯ

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತನ್ನ ಗ್ರಾಮದ ರೈತರ ಹಿತದೃಷ್ಟಿಯಿಂದ ಮಾಡದಿರುವಂತೆ ಗ್ರಾಮ ಪಂಚಾಯ್ತಿ ವತಿಯಿಂದ ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆಯವರಿಗೆ ಮನವಿ ಪತ್ರ ಸಲ್ಲಿಕೆಯಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪಂಚಾಯ್ತಿಗಳಿಂದ ಮನವಿ ಸಲ್ಲಿಕೆಯಾಗಿದ್ದು ಕ್ರಮೇಣ ಜಿಲ್ಲೆಯ ಎಲ್ಲಾ ಪಂಚಾಯ್ತಿಗಳಿಗೆ ವಿಸ್ತರಣೆಗೊಂಡರೂ ಅಚ್ಚರಿಯಿಲ್ಲ.

ಮನವಿಯಲ್ಲಿ ಏನಿದೆ..?

ಸರ್ಕಾರದ ಆದೇಶದಂತೆ ಒತ್ತುವರಿ ತೆರವಿಗೆ ಮುಂದಾದಲ್ಲಿ ರೈತರ ಮತ್ತು ಕಾರ್ಮಿಕರ ಬದುಕು ಬೀದಿಗೆ ಬೀಳಲಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ಕೃಷಿ ಭೂಮಿಗೆ ಈವರೆಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿದೆ 50,53,57,94C ಪಾರಂಪರಿಕ ಅರಣ್ಯ ಹಕ್ಕು ಅನ್ವಯ ಯಾವುದೇ ಹಕ್ಕುಪತ್ರ ಮಂಜೂರು ಮಾಡಿಲ್ಲ. ಅನಧಿಕೃತ ಹೋಂ ಸ್ಟೇ,ರೆಸಾರ್ಟ್,ಬಡಾವಣೆಗಳು ನಮ್ಮ ಗ್ರಾ ಪಂ ವ್ಯಾಪ್ತಿಯಲ್ಲಿ ಇಲ್ಲ ಆದರೆ ಹಕ್ಕಪತ್ರ ಇಲ್ಲದೆ ಸಾಗುವಳಿ ಕೃಷಿ. ಭೂಮಿಯಲ್ಲಿ ರೈತರು ಅಡಿಕೆ,ಕಾಫಿ,ಏಲಕ್ಕಿ,ಕಾಳುಮೆಣಸು ಬೆಳೆದಿದ್ದಾರೆ ಮತ್ತು ವಾಸ ಮಾಡಲು ಮನೆಗಳನ್ನ ರಚಿಸಿಕೊಂಡು ಮನೆಯ ಸುತ್ತ ಜೀವನೋಪಾಯಕ್ಕಾಗಿ ಕೃಷಿ ನಡೆಸಿಕೊಂಡು ಬಂದಿರುತ್ತಾರೆ ಹಾಗಾಗಿ ರೈತರ ಸಾಗವಳಿ ಭೂಮಿಯನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ವಶಪಡಿಸಿಕೊಳ್ಳದಂತೆ ರೈತರು ಹಾಗೂ ಕಾರ್ಮಿಕರ ಹಿತ ಕಾಪಾಡಬೇಕು.. ಇಲ್ಲದೇ ಹೋದರೆ ಕೃಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ರೈತರು ಹಾಗೂ ಕಾರ್ಮಿಕರ ಬದುಕು ಬೀದಿಗೆ ಬೀಳುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಒತ್ತುವರಿಯನ್ನು ತೆರವುಗೊಳಿಸದೇ ಈ ಮನವಿಯನ್ನು ಪುರಸ್ಕರಿಸಬೇಕೆಂದು ಗ್ರಾಮ ಪಂಚಾಯ್ತಿ ಹಾಗೂ ಗ್ರಾಮಸ್ಥರ ಪರವಾಗಿ ನಿಮ್ಮಲ್ಲಿ ವಿನಂತಿಸುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ನಿಮಗೆ ಮಾನಸಿಕ ನೆಮ್ಮದಿ ಸಿಗಲಿದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಪ್ರೀತಿ ಪಾತ್ರರೊಂದಿಗಿನ ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಇಂದು ಮನೆಗೆ ಅತಿಥಿ ಬರಬಹುದು. ಆಸ್ತಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಇಂದು ಉತ್ತಮ ದಿನ. ಕೆಲವರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬಹುದು.

** ವೃಷಭ ರಾಶಿ :
ಆರೋಗ್ಯದ ಬಗ್ಗೆ ಕಾಳಜಿ ಇರಬಹುದು, ಆದರೆ ಗಂಭೀರವಾದ ಸಮಸ್ಯೆ ಏನೂ ಇರುವುದಿಲ್ಲ. ಆದರೂ ಮನಸ್ಸು ಗೊಂದಲಮಯವಾಗಿರುತ್ತದೆ. ಅಜ್ಞಾತ ಭಯವು ನಿಮ್ಮನ್ನು ಕಾಡುತ್ತದೆ. ಹೂಡಿಕೆಯಿಂದ ಆರ್ಥಿಕ ನಷ್ಟದ ಲಕ್ಷಣಗಳಿವೆ. ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಎಲ್ಲಾ ಕೆಲಸಗಳು ಮಧ್ಯಂತರವಾಗಿ ನಡೆಯುತ್ತವೆ. ದೂರ ಪ್ರಯಾಣದ ಅವಕಾಶವಿರುತ್ತದೆ.

** ಮಿಥುನ ರಾಶಿ
ಉದ್ಯಮಿಗಳಿಗೆ ಹೊಸ ಸ್ಥಳದಲ್ಲಿ ವ್ಯಾಪಾರ ಪ್ರಾರಂಭಿಸಲು ಅವಕಾಶ ಸಿಗಬಹುದು. ಹೊಸ ಆಸ್ತಿ ಖರೀದಿಗೆ ಇಂದು ಶುಭ ದಿನ. ವಿದ್ಯಾರ್ಥಿಗಳು ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ. ಉನ್ನತ ಶಿಕ್ಷಣ ಪಡೆಯಲು, ಪ್ರತಿಷ್ಠಿತ ಕಾಲೇಜಿನಲ್ಲಿ ಸುಲಭವಾಗಿ ಪ್ರವೇಶ ಪಡೆಯಬಹುದು. ಕೆಲವು ಜನರು ಹೊಸ ಸಾಧನಗಳು ಅಥವಾ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದು.

** ಕರ್ಕಾಟಕ ರಾಶಿ :
ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಸಂಪತ್ತು ವೃದ್ಧಿಯಾಗಲಿದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಹೊಸ ಕೆಲಸಗಳ ಜವಾಬ್ದಾರಿ ಸಿಗಲಿದೆ. ಕೆಲವರು ಇಂದು ಆಸ್ತಿಯನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ. ಪ್ರೇಮ ಸಂಬಂಧಗಳಲ್ಲಿ ಮಧುರತೆ ಇರುತ್ತದೆ.

** ಸಿಂಹ ರಾಶಿ :
ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗಲಿವೆ. ಹೊಸ ಕಾರ್ಯಗಳಿಗೆ ಜವಾಬ್ದಾರಿ ಸಿಗಲಿದೆ. ನೀವು ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯಬೇಕಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದ ಸದಸ್ಯರ ವಿವಾಹವನ್ನು ನಿಶ್ಚಯಿಸಬಹುದು. ಇಂದು ದೂರದ ಪ್ರಯಾಣವನ್ನು ತಪ್ಪಿಸಿ. ಸಿಂಹ ರಾಶಿಯ ಮಕ್ಕಳು ಏಕಾಗ್ರತೆಯ ಕೊರತೆಯನ್ನು ಅನುಭವಿಸಬಹುದು.

** ಕನ್ಯಾ ರಾಶಿ :
ಇಂದು ಹೊಸ ವಾಹನ ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್ ಖರೀದಿಸಲು ಯೋಜಿಸಬಹುದು. ತಮ್ಮ ಉದ್ಯೋಗಗಳನ್ನು ಬದಲಾಯಿಸಲು ಬಯಸುವ ಜನರಿಗೆ ಸಿಹಿ ಸುದ್ದಿ ಸಿಗಬಹುದು. ಇಂದು, ಕುಟುಂಬ ಸದಸ್ಯರ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳು ಒಳ್ಳೆಯ ಸುದ್ದಿ ಪಡೆಯಬಹುದು

** ತುಲಾ ರಾಶಿ :
ನಿಮ್ಮಲ್ಲಿ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಕೆಲವರಿಗೆ ಹೊಸ ಆಸ್ತಿ ಖರೀದಿಗೆ ಆಫರ್‌ಗಳು ಬರಲಿವೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಇಂದು ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಪ್ರೀತಿಯ ಜೀವನದಲ್ಲಿ ಸಂತೋಷ ಇರುತ್ತದೆ.

** ವೃಶ್ಚಿಕ ರಾಶಿ :
ನೀವು ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರಾಗಿರುತ್ತೀರಿ. ಆದರೆ ಹೂಡಿಕೆ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಕಚೇರಿಯಲ್ಲಿ ಕೆಲವು ಕೆಲಸಗಳನ್ನು ಮತ್ತೆ ಮಾಡಬೇಕಾಗಬಹುದು. ಕೆಲವರಿಗೆ ಮನೆ ರಿಪೇರಿ ಕೆಲಸ ತಲೆ ನೋವಾಗಬಹುದು. ನಿಮ್ಮ ದೈನಂದಿನ ದಿನಚರಿಯಿಂದ ವಿರಾಮ ತೆಗೆದುಕೊಳ್ಳಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ.

** ಧನಸ್ಸು ರಾಶಿ :
ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ನೀವು ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆದಾಯದಲ್ಲಿ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹಣ ಉಳಿತಾಯದತ್ತ ಗಮನ ಹರಿಸಿ.

** ಮಕರ ರಾಶಿ :
ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಂಪತ್ತು ವೃದ್ಧಿಯಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲವರು ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸಬಹುದು. ಇಂದು ನೀವು ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿವಾದಗಳಿಂದ ಪರಿಹಾರವನ್ನು ಪಡೆಯುತ್ತೀರಿ.

** ಕುಂಭ ರಾಶಿ :
ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಕಾಣುವಿರಿ. ಕೆಲಸದ ಸ್ಥಳದಲ್ಲಿ ಉತ್ತಮ ಪ್ರಗತಿಯು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುತ್ತದೆ. ಇಷ್ಟೇ ಅಲ್ಲ, ನೀವು ಹಿರಿಯರಿಂದ ಆಶಿರ್ವಾದವನ್ನು ಪಡೆಯಬಹುದು, ಮನೆಗೆ ದೊಡ್ಡ ವಸ್ತುವನ್ನು ಖರೀದಿಸುವ ಸಾಧ್ಯತೆಯಿದೆ. ವೈವಾಹಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಪ್ರೇಮ ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಆಕರ್ಷಣೆಯು ಹೆಚ್ಚಾಗುತ್ತದೆ.

** ಮೀನ ರಾಶಿ :
ನೀವು ಹಳೆಯ ಕಾಯಿಲೆಗಳಿಂದ ಪರಿಹಾರವನ್ನು ಪಡೆಯಬಹುದು. ಕುಟುಂಬದ ಸದಸ್ಯರು ನಿಮಗೆ ಹೆಮ್ಮೆ ಅನಿಸಬಹುದು. ಕೆಲವರು ವಿದೇಶಿ ಪ್ರವಾಸಕ್ಕೆ ಹೋಗಬಹುದು. ಬಿಲ್ಡರ್‌ಗಳು ಮತ್ತು ಪ್ರಾಪರ್ಟಿ ಡೀಲರ್‌ಗಳಿಗೆ ದಿನವು ಅನುಕೂಲಕರವಾಗಿದೆ. ವಿದೇಶದಲ್ಲಿ ಅಧ್ಯಯನ ಮಾಡುವ ಅವಕಾಶ ಸಿಗುತ್ತದೆ. ಜೀವನದಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಿ.

Categories
ಚಿಕ್ಕಮಗಳೂರು

ಚಿಕ್ಕಮಗಳೂರಲ್ಲಿ ಚರಂಡಿಗೆ ಮಹಿಳೆ ಬಲಿ!

 

ಚಿಕ್ಕಮಗಳೂರಲ್ಲಿ ಚರಂಡಿಗೆ ಮಹಿಳೆ ಬಲಿ!

– ಸಾಗರದಲ್ಲಿ ಹೆಚ್ಚಿದ ಕಳ್ಳರು!
– ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಳುವಿಗೆ ಯತ್ನ
– ಮನೆಯ ಮುಂಬಾಗಿಲು ಮುರಿದು ಕಳ್ಳತನ
– ಶಿವಮೊಗ್ಗ : ಬೈಕ್ ಡಿಕ್ಕಿಯಾಗಿ ಯುವತಿ ಸಾವು
– ಶಿವಮೊಗ್ಗ: ಯುವಕರಿಂದ ಕಾರು ಚಾಲಕನಿಗೆ ಮನಸೋ ಇಚ್ಛೆ ಹಲ್ಲೆ
– ತೀರ್ಥಹಳ್ಳಿ: ಮಾತ್ರೆ ತಿಂದ ವಿದ್ಯಾರ್ಥಿನಿಯರು ಅಸ್ವಸ್ಥ

NAMMUR EXPRESS NEWS
ಚಿಕ್ಕಮಗಳೂರು: ನಗರದ 27ನೇ ವಾರ್ಡ್‌ನಲ್ಲಿ ಮಹಿಳೆಯೊಬ್ಬರು ಆಳವಾದ ಚರಂಡಿಗೆ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಕಾಳಿದಾಸ ನಗರದ ಶಾಂತಮ್ಮ ಮೃತ ಮಹಿಳೆ. ಪದೇ ಪದೇ ಇದೇ ಘಟನೆ ಮರುಕಳಿಸಿದರೂ ಎಚ್ಚೆತ್ತುಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದೆ.ಈ ಹಿಂದೆ ಕೂಡ ಇದೇ ಸ್ಥಳದಲ್ಲಿ ಆಟವಾಡುತ್ತಿದ್ದ ಮಕ್ಕಳು ಹಾಗೂ ಜಾನುವಾರುಗಳು ಚರಂಡಿಗೆ ಬಿದ್ದಿವೆ. ಇಷ್ಟಾದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆಗಮನಹರಿಸದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಗರದಲ್ಲಿ ಹೆಚ್ಚಿದ ಕಳ್ಳರು!

ಸಾಗರ : ಆನಂದಪುರ ನರಸೀಪುರದ ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ರಾತ್ರಿ ನಡೆದಿದೆ. ದೇವಾಲಯದ ಬೀಗ ಮುರಿಯಲು ಯತ್ನಿಸಿ ತಿರುಚಿದ್ದಾರೆ. ಕಿಟಕಿ ಬಾಗಿಲು ತೆರೆದು ಸರಳುಗಳನ್ನು ಬಗ್ಗಿಸಲಾಗಿದೆ. ದೇವಾಲಯ ಊರಿನ ಒಳಗೆ ಇರುವ ಕಾರಣ ಬೀಗ ಒಡೆಯುವ ಶಬ್ದ ಗ್ರಾಮಸ್ಥರಿಗೆ ಕೇಳಿಸಬಹುದು ಎಂದು ಹೆದರಿ ಕಳ್ಳರು ಪರಾರಿಯಾಗಿದ್ದಾರೆ. ಬೆಳಗ್ಗೆ ಅರ್ಚಕರು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

– ಶಿವಮೊಗ್ಗ : ಬೈಕ್ ಡಿಕ್ಕಿಯಾಗಿ ಯುವತಿ ಸಾವು

ಶಿವಮೊಗ್ಗ : ಬೈಕ್ ಡಿಕ್ಕಿಯಾಗಿ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಬಿ ಆರ್ ಪಿಯಲ್ಲಿ ಸಂಭವಿಸಿದೆ. ಭದ್ರಾ ರಿವ‌ರ್ ಪ್ರಾಜೆಕ್ಟ್ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ರಂಗನಾಥಪುರದ ಸುಕನ್ಯಾ ಎನ್ನುವವರು ಮೃತರು. ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದೆ. ಅಲ್ಲದೆ ಅವರ ಮೈಮೇಲೆ ಬೈಕ್‌ ಹರಿದಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಯುವತಿ ಸಾವನ್ನಪ್ಪಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಟೈಪಿಸ್ಟ್ ಆಗಿದ್ದ ಸುಕನ್ಯಾ ತಮ್ಮ ಕೆಲಸಗಳನ್ನ ಮುಗಿಸಿಕೊಂಡು ಬ್ಯಾಂಕ್‌ಗೆ ಹೋಗುತ್ತಿದ್ದರು. ಈ ವೇಳೆ ಬೈಕ್‌ವೊಂದು ಡಿಕ್ಕಿಯಾಗಿ ಘಟನೆ ಸಂಭವಿಸಿದೆ.

– ಸಾಗರ: ಮನೆಯ ಮುಂಬಾಗಿಲು ಮುರಿದು ಕಳ್ಳತನ

ಸಾಗರ : ಸಮೀಪದ ಹಿರೇಬಿಲಗುಂಜಿ ಗ್ರಾ ಪಂ ವ್ಯಾಪ್ತಿಯ ಹೊಸಂತೆ ಗ್ರಾಮದಲ್ಲಿ ಶಿನೋಜ್ ಅವರ ಮನೆಯಲ್ಲಿ ಕಳ್ಳತನ ಆಗಿದೆ. ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಮುಂಬಾಗಿಲು ಬೀಗ ಮುರಿದು ಒಳನುಗ್ಗಿ ಮನೆಯೊಳಗೆ ರೂಮ್ ಗಾಡ್ರೆಜ್ ಬೀಗ ತೆಗೆದು ವಸ್ತು ಗಳನ್ನೆಲ್ಲ ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿದೆ ಗಾಡ್ರೆಟ್ನಲ್ಲಿದ್ದ ಸುಮಾರು 73 ಗ್ರಾಂನಷ್ಟು ಬಂಗಾರದ ಒಡವೆಗಳನ್ನು ಹಾಗೂ 18000 ನಗದು ಹಣ ಕಳ್ಳತನ ಮಾಡಲಾಗಿದೆ ಎಂದು ಶಿನೋಜ್ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮನೆಯೊಡತಿ ನಿಜಿ ಶಿನೋಜ್ ತಾಯಿ ಮನೆಗೆ ತೆರಳಿದ್ದರು ವಾಪಸ್ಸು ಮದ್ಯಾಹ್ನದ ಸಮಯದಲ್ಲಿ ಮನೆಗೆ ಬಂದಾಗ ಮನೆಯ ಬೀಗ ಒಡೆದು ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅನಂದಪುರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ಕ್ಯಾಲ್ಸಿಯಂ ಮಾತ್ರೆ ಸೇವಿಸಿದ 15 ವಿದ್ಯಾರ್ಥಿನಿಯರು ಅಸ್ವಸ್ಥ

ತೀರ್ಥಹಳ್ಳಿ : ತಾಲೂಕಿನ ಸೊಪ್ಪುಗುಡ್ಡೆಯಲ್ಲಿರುವ ಬಾಲಕಿಯರ
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಲ್ಸಿಯಂ ಮಾತ್ರೆ ಸೇವಿಸಿ 15 ಜನ ವಿದ್ಯಾರ್ಥಿನಿಯರು ವಾಂತಿ – ಬೇದಿ ಯಾಗಿ ಅಸ್ವಸ್ಥರಾದ ಘಟನೆ ನಡೆಸಿದೆ. ಪ್ರಿನ್ಸಿಪಾಲ್ ಶೇಷಗಿರಿಯವರಿಗೆ ವೈದ್ಯರು ಸೂಚಿಸಿದಂತೆ ಕ್ಯಾಲ್ಸಿಯಂ ಮಾತ್ರೆ ವಿದ್ಯಾರ್ಥಿಗಳಿಗೆ ನೀಡಲು ಹೇಳಿದ್ದು ಅದರಂತೆ ಮದ್ಯಾಹ್ನದ ಊಟದ ನಂತರ ಸೇವಿಸಲು ಮೊದಲೆ ತಿಳಿಸಲಾಗಿತ್ತು ಆದರೆ ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಇಲ್ಲದಿರುವುದರಿಂದ ಊಟಕ್ಕೆ ಮೊದಲೇ ಮಾತ್ರೆ ಸೇವಿಸಿದ್ದು ಈ ಅನಾರೋಗ್ಯಕ್ಕೆ ಕಾರಣವಾಗಿದೆ. ಕೂಡಲೇ ವೈದ್ಯರನ್ನು ಸಂಪರ್ಕಿಸಿದ್ದಾರೆ.

ಶಿವಮೊಗ್ಗ: ಯುವಕರಿಂದ ಕಾರು ಚಾಲಕನಿಗೆ ಮನಸೋ ಇಚ್ಛೆ ಹಲ್ಲೆ

ಶಿವಮೊಗ್ಗ: ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಯುವಕರ ಗುಂಪೊಂದು ಕಾರನ್ನು ಅಡ್ಡಗಟ್ಟಿ ಒಳಗಿದ್ದ ವ್ಯಕ್ತಿಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಸೋಮಿನಕೊಪ್ಪದ ನವೀನ್ ಕುಮಾರ್ ಎಂಬುವವರು ಗಾಯಗೊಂಡಿದ್ದಾರೆ. ಜು.28ರಂದು ರಾತ್ರಿ ನವೀನ್ ಕುಮಾರ್ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಎಂಆರ್‌ಎಸ್ ಸರ್ಕಲ್ ಬಳಿ ಎರಡು ಬೈಕ್‌ಗಳನ್ನು ಓವರ್‌ಟೇಕ್ ಮಾಡಿದ್ದರು. ಆ ಬೈಕಿನಲ್ಲಿದ್ದವರು ಕಾರನ್ನು ಬೆನ್ನಟ್ಟಿ ಬಂದು ಮಲವಗೊಪ್ಪದ ಬಳಿ ಅಡ್ಡಗಟ್ಟಿ ನವೀನ್ ಕುಮಾ‌ರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಆರೋಪಿಸಲಾಗಿದೆ. ಕಾರನ್ನು ಚಲಾಯಿಸಿಕೊಂಡು ತೆರಳಿದ್ದ ನವೀನ್ ಕುಮಾರ್ ಅವರನ್ನು ನಾಲೈದು ಬೈಕುಗಳಲ್ಲಿ ಪುನಃ ಯುವಕರ ಗುಂಪು ಬೆನ್ನಟ್ಟಿತ್ತು ಎಂದು ಆರೋಪಿಸಲಾಗಿದೆ. ಬಿದರೆ ಕ್ರಾಸ್ ಬಳಿ ಅಡ್ಡಗಟ್ಟಿ ನವೀನ್ ಕುಮಾರ್ ಅವರನ್ನು ಕಾರಿನಿಂದ ಕೆಳಗೆಳೆದು ಹಲ್ಲೆ ನಡೆಸಲಾಗಿದೆ. ಈ ವೇಳೆ ಚಿನ್ನದ ಸರ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಶಿವಮೊಗ್ಗ

ಶಿಮೂಲ್: ಆರ್ ಎಂ. ಅವಿರೋಧ ಆಯ್ಕೆ

ಶಿಮೂಲ್: ಆರ್ ಎಂ. ಅವಿರೋಧ ಆಯ್ಕೆ
– ವಿದ್ಯಾಧರ್ ಗುರುಶಕ್ತಿ ಕೂಡ ಅವಿರೋಧ ಆಯ್ಕೆ
– ಇಬ್ಬರು ನಿರ್ದೇಶಕರಿಗೂ ಶುಭಾಶಯಗಳು

NAMMUR EXPRESS NEWS
ಶಿವಮೊಗ್ಗ. ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಶಿಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ. ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಲಿ ನಿರ್ದೇಶಕರು ಹಾಗೂ ಉದ್ಯಮಿಗಳೂ ಆದ ವಿದ್ಯಾಧರ್ ಗುರುಶಕ್ತಿ ಕೂಡ ಆಯ್ಕೆಯಾಗಿದ್ದಾರೆ. ಆ.14ಕ್ಕೆ ನಿರ್ದೇಶಕರ ಚುನಾವಣೆ ನಡೆಯಲಿದೆ.

ಅವಿರೋಧವಾಗಿ ಆಯ್ಕೆಯಾದ ಇಬ್ಬರು ಸಹಕಾರಿ ನಾಯಕರಿಗೆ ಶುಭಾಶಯಗಳು

Categories
ತೀರ್ಥಹಳ್ಳಿ ಶಿವಮೊಗ್ಗ

ಬಿಜೆಪಿ ಪಾದಯಾತ್ರೆಯಲ್ಲಿ ಕುಕ್ಕೆ ಪ್ರಶಾಂತ್ & ಟೀಂ ಹೆಜ್ಜೆ

ಬಿಜೆಪಿ ಪಾದಯಾತ್ರೆಯಲ್ಲಿ ಕುಕ್ಕೆ ಪ್ರಶಾಂತ್ & ಟೀಂ ಹೆಜ್ಜೆ
– ಶಿವಮೊಗ್ಗ ಜಿಲ್ಲೆ ಯುವ ಬಿಜೆಪಿ ನಾಯಕತ್ವ: ನೂರಾರು ಮಂದಿ ನಡಿಗೆ
– ವಿಜಯೇಂದ್ರ ಸೇರಿ ಎಲ್ಲಾ ನಾಯಕರ ಜತೆ ಪಾದಯಾತ್ರೆಗೆ ಸಾಥ್

NAMMUR EXPRESS NEWS
ತೀರ್ಥಹಳ್ಳಿ/ ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮೂಡಾ ಮತ್ತು ವಾಲ್ಮೀಕಿ ನಿಗಮದ ಹಣ ದುರುಪಯೋಗದ ಹಗರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ವತಿಯಿಂದ ನಡೆಯುತ್ತಿರುವ ಮೈಸೂರು ಚಲೋ ಪಾದಯಾತ್ರೆಯ 5ನೇ ದಿನವಾದ ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಆದ ಪ್ರಶಾಂತ್ ಕುಕ್ಕೆ ನಿರಂತರವಾಗಿ 5ನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಪಾದಯಾತ್ರೆಯ ನಡುವೆ ರಾಜ್ಯದ ಹಲವಾರು ಮುಖಂಡರು ಹಾಗೂ ನಾಯಕರೊಂದಿಗೆ ಹೆಜ್ಜೆ ಹಾಕುತ್ತಿರುವ ಯುವ ನಾಯಕ ಪ್ರಶಾಂತ್ ಕುಕ್ಕೆ ಅವರು ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಯುವ ಮೋರ್ಚಾ ರಾಜ್ಯಾಧ್ಯಕ್ಷ ದೀರಜ್ ಮುನಿರಾಜು, ಮಾಜಿ ಸಚಿವರಾದ ಅಶ್ವಥ್ ನಾರಾಯಣ್ ಮಾಜಿ ಸಂಸದ ಮುನಿಸ್ವಾಮಿಯವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ

ಶಿವಮೊಗ್ಗ ಜಿಲ್ಲೆ ಯುವ ಬಿಜೆಪಿ ಚಟುವಟಿಕೆ ನಡಿಗೆ

ಶಿವಮೊಗ್ಗ ಜಿಲ್ಲಾ ಯುವಮೋರ್ಚಾದ ಸದಸ್ಯರು ಸಕ್ರೀಯವಾಗಿ ಮೈಸೂರು ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅದರ ನೇತೃತ್ವವನ್ನು ಯುವ ನೇತಾರ ಪ್ರಶಾಂತ್ ಕುಕ್ಕೆ ವಹಿಸಿದ್ದಾರೆ.
ಮೈಸೂರು ಚಲೋ ಆರಂಭವಾದಾಗಿಂದ ಈ ದಿನದವರೆಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡು ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಪ್ರತಿನಿಧಿಯಾಗಿ ಪಾದಯಾತ್ರೆಯಲ್ಲಿ ಭಾಗಿಯಾದ ಯುವ ನಾಯಕ ಪ್ರಶಾಂತ್ ಕುಕ್ಕೆ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ,ವೈ, ವಿಜಯೇಂದ್ರ ಅವರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ಶಿವಮೊಗ್ಗ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಯಶಸ್ವಿ ಕಡ್ತುರ್,ಮುಳಬಾಗಿಲು ಗ್ರಾಮ ಪಂಚಾಯಿತಿ ಸದಸ್ಯರಾದ ಅಭಿಲಾಶ್ ಬಾಳೆಕೊಪ್ಪ
ಬಸವಾನಿ ಶ್ರೀಕಾಂತ್, ಕೊಂಡ್ಲುರ್ ಅಭಿನಯರಾಜ್,ಸುದರ್ಶನ್ ಬಾಳೆಕೊಪ್ಪ, ಅಭಿಲಾಷ್ ಹೊಸನಗರ,ದಿನೇಶ್ ಕುಂಟಿಗೆ ,ನಿತಿನ್ ಯಡೂರು ಪಾದಯಾತ್ರೆಯಲ್ಲಿ ಸತತ 5 ದಿನಗಳಿಂದ ಪಾಲ್ಗೊಂಡಿದ್ದಾರೆ.

ತೀರ್ಥಹಳ್ಳಿಯಿಂದ ಪ್ರತಿ ಹೋಬಳಿಯಿಂದ ಬಸ್

ತೀರ್ಥಹಳ್ಳಿ ತಾಲೂಕಿನ ಪ್ರತಿ ಹೋಬಳಿಯಿಂದ ಬಸ್ ಹೋಗಿವೆ. ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಭಾಗಿಯಾಗಿದ್ದಾರೆ.

Categories
ರಾಜ್ಯ

ಉಡುಪಿಯಲ್ಲಿ ಹಾಡುಹಗಲೇ ಕಾರಲ್ಲಿ ಕಾಮದಾಟ!

ಟಾಪ್ ನ್ಯೂಸ್ ಕರ್ನಾಟಕ

ಉಡುಪಿಯಲ್ಲಿ ಹಾಡುಹಗಲೇ ಕಾರಲ್ಲಿ ಕಾಮದಾಟ!

– ಕಾರು ನೋಡಿ ರೆಡ್ ಹ್ಯಾಂಡಾಗಿ ಜನರ ಕೈಗೆ ಸಿಕ್ಕಿ ಬಿದ್ದ ಜೋಡಿ
– ಬೆಂಗಳೂರು: 15 ವರ್ಷದ ಬಾಲಕಿ ಮೇಲೆ ರೀಲ್ಸ್ ಮಾಡಿ ಫೋಸ್ ಕೊಡುತ್ತಿದ್ದವನಿಂದ ರೇಪ್!
– ದೇಗುಲದಲ್ಲಿ ದರ್ಶನ್‌ ಫೋಟೋ ಇಟ್ಟು ಪೂಜೆ; ಅರ್ಚಕ ಅಮಾನತು!
– ಗುಪ್ತಾಂಗದಲ್ಲಿ ಮೊಬೈಲ್ ಇಟ್ಟುಕೊಂಡು ಪರೀಕ್ಷೆ ನಕಲು!

NAMMUR EXPRESS NEWS
ಉಡುಪಿ: ಹಾಡಹಗಲೇ ಜೋಡಿಯೊಂದು ಕಾರಿನಲ್ಲಿ ಕಾಮದಾಟದಲ್ಲಿ ತೊಡಗಿದ್ದ ಘಟನೆ ಉಡುಪಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ಬುಧವಾರ ನಡೆದಿದೆ.
ಕಾರಿನ ಗಾಜಿಗೆ ಪರದೆ ಅಳವಡಿಸಿ ಕಾರಿನ ಒಳಗೆ ಕುಲ್ಲಂಕುಲ್ಲಾ ಆಟದಲ್ಲಿ ಜೋಡಿ ತೊಡಗಿತ್ತು. ಕಾರು ಅಲ್ಲಾಡುತ್ತಿರುವುದರಿಂದ ಸಂಶಯಗೊಂಡ ಜನರು, ಕಾರನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಕಾರಿನ ಒಳಗಡೆ ಜೋಡಿ ಪತ್ತೆಯಾಗಿದೆ. ಈ ವೇಳೆ ಜೋಡಿ ಜನರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದೆ.
ನಗರದ ಮಧ್ಯಭಾಗದಲ್ಲಿ ಅನೈತಿಕ ಚಟುಚಟಿಕೆ ನಡೆಸಿದ್ದಕ್ಕೆ ಜೋಡಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಉಡುಪಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರೀಲ್ಸ್ ಮಾಡಿ ಫೋಸ್ ಕೊಡುತ್ತಿದ್ದವನಿಂದ ರೇಪ್!

ಬೆಂಗಳೂರಲ್ಲಿ ಕಾಮುಕರ ಅಟ್ಟಹಾಸ ಮಿತಿ ಮೀರುತ್ತಿದ್ದು, ಯುವಕನೋರ್ವ 15 ವರ್ಷದ ಶಾಲಾ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಫೋಸ್ ಕೊಡುತ್ತಿದ್ದ ಸಾದ್ ಮುಸೈಬ್ರಾ ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
15 ವರ್ಷದ ಶಾಲಾ ಬಾಲಕಿಯನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಬಂದು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.
ಬಾಲಕಿ ತಂದೆಗೆ ಬೆದರಿಕೆಯೊಡ್ಡಿ ಬಾಲಕಿಯನ್ನು ಪದೇ ಪದೇ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಬಾಲಕಿ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಳು ಎನ್ನಲಾಗಿದೆ.ಸದ್ಯ ಬಾಲಕಿ ಪೋಷಕರು ನೀಡಿದ ದೂರಿನ ಮೇರೆಗೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇಗುಲದಲ್ಲಿ ದರ್ಶನ್‌ ಫೋಟೋ ಇಟ್ಟು ಪೂಜೆ; ಅರ್ಚಕ ಅಮಾನತು!

ಅಭಿಮಾನಿಗಳು ದರ್ಶನ್ ಬಿಡುಗಡೆಗಾಗಿ ಪೂಜೆ- ಪುನಸ್ಕಾರಗಳ ಮೊರೆ ಹೋಗಿದ್ದಾರೆ. ಹಾಗೆಯೇ ಅರ್ಚಕನೋರ್ವ ಒಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದಲ್ಲೇ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿ ಕೆಲಸ ಕಳೆದುಕೊಂಡಿದ್ದಾನೆ.
ಬಳ್ಳಾರಿಯ ಕುರುಗೋಡಿನ ಬಸವೇಶ್ವರ ದೇಗುಲದಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದಕ್ಕೆ ಅರ್ಚಕ ಮಲ್ಲಿ ಎನ್ನುವರನ್ನು ಧಾರ್ಮಿಕ ದತ್ತಿ ಇಲಾಖೆ ಅಮಾನತು ಮಾಡಿದೆ. ಅಲ್ಲದೇ ಈ ಘಟನೆಯ ವಿಚಾರಣೆ ಮುಗಿಯುವವರೆಗೂ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದೆ ಎನ್ನಲಾಗಿದೆ.

 

ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಬೀರ್ಭುಮ್‌ನ ಸೂರಿಯ ಬೆನಿಮಾಧಬ್ ಇನ್ಸಿಟ್ಯೂಷನ್‌ನಲ್ಲಿ ಎಎನ್‌ಎಂ ಮತ್ತು ಜಿಎನ್‌ಎಂ ನರ್ಸಿಂಗ್ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ನಡೆಯುತ್ತಿತ್ತು. ಮಾಲ್ದಾದ ಕೆಲವು ವಿದ್ಯಾರ್ಥಿಗಳು ಸೂರಿಯ ಬೆನಿಮಾಧಬ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದರು. ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್ ಫೋನ್ ಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು.
ಪ್ರತಿಯೊಬ್ಬರನ್ನು ಸರಿಯಾಗಿ ಪರಿಶೀಲನೆ ನಡೆಸಿಯೇ ಮಹಿಳಾ ಸೆಕ್ಯುರಿಟಿ ಗಾರ್ಡ್‌ಗಳು ಪರೀಕ್ಷಾ ಕೊಠಡಿಗೆ ಹೋಗಲು ಅನುಮತಿಸುತ್ತಿದ್ದರು. ಪರಿಶೀಲನೆ ವೇಳೆ ಹಲವರ ಬಳಿ ಮೊಬೈಲ್‌, ಕಾಪಿ ಚೀಟಿ ಪತ್ತೆಯಾಗಿತ್ತು. ತಕ್ಷಣ ಅವರಿಂದ ಅದನ್ನು ಸೀಜ್ ಮಾಡಿ ಅವರನ್ನು ಪರೀಕ್ಷ ಕೊಠಡಿಗೆ ಕಳುಹಿಸಲಾಗಿತ್ತು. ಆದರೆ ಇನ್ನು ಕೆಲವರು ಸಿಬ್ಬಂದಿಗಳ ಕಣ್ಡಪ್ಪಿಸಿ ಪರೀಕ್ಷೆ ಬರೆಯಲು ಮುಂದಾಗಿದ್ದರು.
ಆದರೆ ಪರೀಕ್ಷೆಗಳು ಪ್ರಾರಂಭವಾದ ತಕ್ಷಣ, ಕೊಠಡಿಯೊಳಗೆ ಕೆಲವು ಭದ್ರತಾ ಸಿಬ್ಬಂದಿಗಳಿಗೆ ಮೊಬೈಲ್ ಬಳಕೆ ಅನುಮಾನ ಬಂದಿತು. ನಂತರ ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಮತ್ತೊಂದು ಸಭಾಂಗಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಒಬ್ಬೊಬ್ಬರನ್ನೇ ವಿಚಾರಣೆಗೆ ಒಳಪಡಿಸಿ ತಪಾಸಣೆ ನಡೆಸಲಾಯಿತು. ಮೆಟಲ್ ಡಿಟೆಕ್ಟರ್ ಗಳ ಮೂಲಕ ದೇಹವನ್ನು ಹುಡುಕುತ್ತಿದ್ದಂತೆ, ಕೆಲ ವಿದ್ಯಾರ್ಥಿನಿಯರು ತಮ್ಮ ಗುಪ್ತಾಂಗದಲ್ಲಿ ಮೊಬೈಲ್ ಇಟ್ಟುಕೊಂಡು ಬಂದಿದ್ದೂ ಪತ್ತೆಯಾಯಿತು.

Categories
Uncategorized

ತೂಕ ಇಳಿಸದೇ ಭಾರತಕ್ಕೆ ಮಿಸ್ ಆಯ್ತು ಚಿನ್ನ!

ತೂಕ ಇಳಿಸದೇ ಭಾರತಕ್ಕೆ ಮಿಸ್ ಆಯ್ತು ಚಿನ್ನ!
– ಭಾರತಕ್ಕೆ ಒಲಿಂಪಿಕ್ಸಲ್ಲಿ ಶಾಕ್: ಚಿನ್ನದ ಕನಸು ಭಗ್ನ!
– ಕುಸ್ತಿ ಫೈನಲ್‌ನಲ್ಲಿ ವಿನೇಶ್ ಫೋಗಟ್ ಅನರ್ಹ
– 100 ಗ್ರಾಂ ಹೆಚ್ಚಿನ ತೂಕ ಇದ್ದುದ್ದಕ್ಕೆ ಅನರ್ಹ

NAMMUR EXPRESS NEWS
ಪ್ಯಾರೀಸ್ : ಇಡೀ ಭಾರತದ ನೂರು ಕೋಟಿ ಜನ ಕನಸು ಕಂಡಿದ್ದ ಭಾರತದ ಕುಸ್ತಿ ವಿಭಾಗದ ಚಿನ್ನದ ಪದಕ ಕನಸು ಆಗಿಯೇ ಉಳಿದಿದೆ.
ತೂಕ ಇಳಿಸದೇ ಕುಸ್ತಿ ಫೈನಲ್‌ನಲ್ಲಿ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. 100 ಗ್ರಾಂ ಹೆಚ್ಚಿನ ತೂಕ ಇದ್ದುದ್ದಕ್ಕೆ ಅನರ್ಹಗೊಳಿಸಲಾಗಿದೆ.
ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿದ್ದಾರೆ. ವಾಸ್ತವವಾಗಿ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ ಅವರ ತೂಕವು ನಿಗದಿತ ಮಿತಿಗಿಂತ 100 ಗ್ರಾಂ ಹೆಚ್ಚಿರುವುದು ಕಂಡುಬಂದಿದೆ. ನಿಯಮಗಳ ಪ್ರಕಾರ, ಯಾವುದೇ ಕುಸ್ತಿಪಟುವಿಗೆ ಯಾವುದೇ ವಿಭಾಗದಲ್ಲಿ 100 ಗ್ರಾಂ. ಹೆಚ್ಚುವರಿ ತೂಕದ ಭತ್ಯೆ ನೀಡಲಾಗುತ್ತದೆ. ಆದರೆ ವಿನೇಶ್ ಅವರ ತೂಕ ಇದಕ್ಕಿಂತ ಹೆಚ್ಚಿದೆ. ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
ಫೈನಲ್ ಸ್ಪರ್ಧೆಗೂ ಮುನ್ನ ವಿನೇಶ್ ಫೋಗಟ್ ಅನರ್ಹಗೊಂಡಿರುವುದರಿಂದಾಗಿ ಇದೀಗ 50 ಕೆ.ಜಿ. ವಿಭಾಗದಲ್ಲಿ ಯಾವುದೇ ಕುಸ್ತಿಪಟು ಬೆಳ್ಳಿ ಪದಕ ಪಡೆಯಲು ಸಾಧ್ಯವಾಗುವುದಿಲ್ಲ. ಉಳಿದಂತೆ ಈ ವಿಭಾಗದಲ್ಲಿ ವಿನೇಶ್ ಅವರೊಂದಿಗೆ ಫೈನಲ್‌ನಲ್ಲಿ ಸ್ಪರ್ಧಿಸಬೇಕಿದ್ದ ಅಮೆರಿಕದ ಕುಸ್ತಿಪಟುಗೆ ಚಿನ್ನದ ಪದಕ ಸಿಗಲಿದೆ.