Categories
ಚಿಕ್ಕಮಗಳೂರು ಶಿವಮೊಗ್ಗ

ಟಾಪ್ ನ್ಯೂಸ್ ಕರ್ನಾಟಕ

ಟಾಪ್ ನ್ಯೂಸ್ ಕರ್ನಾಟಕ

ಒಂದೂವರೆ ತಿಂಗಳಿಂದ ಕರೆಂಟ್ ಇಲ್ಲ.. ಮೊಬೈಲ್ ಚಾರ್ಜ್ ಇಲ್ಲ!
– ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಸಮಸ್ಯೆ

– ಬಳ್ಳಾರಿ: ಸಂಡೂರಿನ ರಾಮನಮಲೈನ ಅರಣ್ಯದಲ್ಲಿ ಗಣಿ ಸದ್ದು?
– ಶಿವಮೊಗ್ಗ: ತ್ಯಾವರೆಕೊಪ್ಪ ಸಿಂಹಧಾಮದ ಸಿಂಹ ಆರ್ಯ ಸಾವು
– ರಾಮನಗರ: ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಆತ್ಮಹತ್ಯೆ!

ಚಿಕ್ಕಮಗಳೂರು: ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ತಪ್ಪಲಿನ ಜನತೆ ಈ ವರ್ಷ ಧಾರಾಕಾರ ಮಳೆಯಿಂದ ಕಂಗೆಟ್ಟು ಹೋಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ಅತ್ತಿಗುಂಡಿ ಕುಗ್ರಾಮ ಕಳೆದ 45 ದಿನಗಳಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಬದುಕುವಂತಾಗಿದೆ. ಇನ್ನು ಮೊಬೈಲ್ ಚಾರ್ಜ್ ಮಾಡಲಾಗದೆ ಇದೀಗ ಹತ್ತಾರು ಗ್ರಾಮಗಳು ಜನ ಸಂಪರ್ಕ ಕಳೆದುಕೊಂಡಿವೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಇರುವ ಈ ಕುಗ್ರಾಮದ ಸುತ್ತಮುತ್ತ ಕಳೆದ ಒಂದೂವರೆ ತಿಂಗಳಿನಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಳ್ಳಯ್ಯನಗಿರಿಯ ಮಳೆಗೆ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಅತ್ತಿಗುಂಡಿ ಮಾರ್ಗದಲ್ಲಿ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ

ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಸಿಂಹ ಆರ್ಯ ಸಾವು

ಶಿವಮೊಗ್ಗ : ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ – ಸಿಂಹಧಾಮದ ಗಂಡು ಸಿಂಹ ಆರ್ಯ ಸೋಮವಾರ(ಆ.4) ಮೃತಪಟ್ಟಿದೆ. ಬಹುಅಂಗಾಗಂಗ ವೈಫಲ್ಯದಿಂದ ಬಳಲುತ್ತಿದ್ದ ಆರ್ಯನಿಗೆ ಹುಲಿ -ಸಿಂಹಧಾಮದ ವೈದ್ಯ ಡಾ.ಮುರಳಿ ಮನೋಹರ್ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.18.5 ವರ್ಷದ ಆರ್ಯ ಹುಲಿ – ಸಿಂಹಧಾಮದಲ್ಲಿರುವ ಸಿಂಹಗಳಲ್ಲಿಯೇ ಅತ್ಯಂತ ಹಿರಿಯನಾಗಿದ್ದ. 2008 ರಲ್ಲಿ ಮೈಸೂರು ಮೃಗಾಲಯದಿಂದ ಆರ್ಯನನ್ನು ಶಿವಮೊಗ್ಗಕ್ಕೆ ಕರೆತರಲಾಗಿತ್ತು.

ಸಂಡೂರಿನ ರಾಮನಮಲೈನ ಅರಣ್ಯದಲ್ಲಿ ಗಣಿ ಸದ್ದು?

ಬಳ್ಳಾರಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂಡೂರು ತಾಲ್ಲೂಕಿನ ರಾಮನಮಲೈ ಅರಣ್ಯ ಪ್ರದೇಶದ ರಾಮಗಢದಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸಲು ಉದ್ದೇಶಿಸಿದೆ. ಗಣಿಗೆ ಅನುಮತಿ ಪಡೆಯುವ ಪ್ರಕ್ರಿಯೆ ಭಾಗವಾಗಿ ಇತ್ತೀಚೆಗೆ ಪರಿಸರ–ಸಾರ್ವಜನಿಕ ಆಲಿಕೆ ಸಭೆ ನಡೆದಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಆತ್ಮಹತ್ಯೆ!

ರಾಮನಗರ: ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್‌ ಅಧಿಕಾರಿ`ತಿಮ್ಮೇಗೌಡ’ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.ರಾಮನಗರ ಜಿಲ್ಲೆಯ ಬಿಡಿದಿ ಬಳಿ ಪೊಲೀಸ್ ಇನ್ಸ್ ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಿಮ್ಮೇಗೌಡರು ಬೆಂಗಳುರು ಸಿಸಿಬಿ ಆರ್ಥಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ತನಿಖೆ ನಡೆಯುತ್ತಿದೆ.

Categories
ಕರಾವಳಿ ಮಲ್ನಾಡ್

ನಾಟಿ ಸೊಬಗು: ಹಸಿರಾದ ಗದ್ದೆಗಳು!

ನಾಟಿ ಸೊಬಗು: ಹಸಿರಾದ ಗದ್ದೆಗಳು!
– ಮಲೆನಾಡು, ಕರಾವಳಿಯಲ್ಲಿ ಭತ್ತದ ನಾಟಿ ವೈಭವ
– ಮಳೆ ನಡುವೆ ಹಸಿರು ಹೊದ್ದಿರುವ ಗದ್ದೆಗಳು
– ನಾಟಿ ಮಾಡುವ ಕೆಲಸ ಎಷ್ಟು ಖುಷಿ ಗೊತ್ತಾ?

NAMMUR EXPRESS NEWS
ಮಳೆ ಧರೆಗೆ ಉರುಳುತ್ತಿದಂತೆ ಹಸಿರ ಹೊದಿಕೆಯ ಪ್ರಾಕೃತಿಕ ಸೌಂದರ್ಯದಲ್ಲಿ ಮಲೆನಾಡು ಚಿಗುರಿ ಮೈದುಂಬಿಕೊಳ್ಳತ್ತೆ. ಮಲೆನಾಡ ಪ್ರಕೃತಿ ಸಿರಿಯು ಒತ್ತಡದ ಬದುಕಿನಲ್ಲಿ ಸಿಲುಕಿದ ಮನಸ್ಸಿಗೆ ಮುದ ನೀಡಿ,ಹೊಸ ಉತ್ಸಾಹ ನೀಡುತ್ತೆ. ಇದೀಗ ಮಳೆ ನಡುವೆ ಎಲ್ಲಾ ಕಡೆ ನಾಟಿ ಕೆಲಸ ನಡೆಯುತ್ತಿದೆ.
ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ ಭತ್ತ ಬೆಳೆಯುವ ಭಾಗಗಳು.
ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ಮಲೆನಾಡು ಹಾಗೂ ಬಯಲು ಸೀಮೆಯ ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದೆ.
ಕರಾವಳಿ,ಮಲೆನಾಡಿನ ನಿಸರ್ಗದ ರಮ್ಯತೆಯ ಮಧುರವಾದ ಮನೋಲ್ಲಾಸ ನೀಡುವುದು ಮಲೆನಾಡಿನ ನಾಟಿ ಮಾಡುವ ಕೃಷಿ ಪದ್ಧತಿ.
ಆಧುನಿಕತೆ ಎಷ್ಟೇ ಮುಂದುವರೆದಿದ್ದರೂ ಕೂಡ, ಅಂದಿನ ಸಂಪ್ರದಾಯದ ಚೌಕಟ್ಟುಗಳ ಬೇರು ಇನ್ನೂ ಜೀವಂತವಾಗಿದೆ .
ಮೊದಲು ಪುರುಷ ಹಾಗೂ ಮಹಿಳೆಯರು ಸೇರಿ ನಾಟಿ ಮಾಡುವ ಪದ್ಧತಿ ಇತ್ತು. ಪ್ರಸ್ತುತ ಆಧುನಿಕಯುಗದಲ್ಲಿ ಯಂತ್ರಗಳು ಬಂದರೂ ಕೂಡ ರೈತಾಪಿ ವರ್ಗದ ಮಹಿಳೆಯರು ಗದ್ದೆಯಲ್ಲಿ ಕೈಯಿಂದ ಸಸಿ ನೆಟ್ಟು ನಾಟಿ ಮಾಡುತ್ತಾರೆ
ನಾಟಿ ಹಾಡು, ಜನಪದ ಹಾಡು, ಸೋಬಾನೆ ಸೊಗಡು ಸೋಬಾನೆ ಪದ ಹಾಡುತ್ತಾ ಭತ್ತ ನಾಟಿ ಮಾಡುತ್ತಾರೆ. ಮನಸ್ಸಿನ ಉಲ್ಲಾಸಕ್ಕಾಗಿ ಈ ರೀತಿ ಜನಪದ ಹಾಡುಗಳನ್ನು ಹಾಡುವ ಪದ್ಧತಿ ಹಿಂದಿನ ದಿನಗಳಲ್ಲಿ ಮಹಿಳೆಯರು ರೂಡಿಸಿಕೊಂಡು ಬಂದಿದ್ದರು.
ಮಳೆಯನ್ನ ಕೂಡ ಲೆಕ್ಕಿಸದೆ ಕೆಲಸಗಾರರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ನಾಟಿ ಮಾಡುವ ವೇಳೆ ಆಗುವ ಅನುಭವ ಯಾರಿಂದಲೂ ಪಡೆಯಲು ಸಾಧ್ಯವಾಗದೇ ಆ ಸುಂದರ ಕ್ಷಣವನ್ನು ಅನುಭವಿಸುವುದೇ ಚೆಂದ ಎನ್ನುತ್ತಾರೆ ನಮ್ಮ ಕರಾವಳಿ ಹಾಗೂ ಮಲೆನಾಡಿಗರು.
ಈ ವೀಡಿಯೋ ನೋಡಿ ನಿಮಗೂ ಕೂಡಾ ನಮ್ಮ ಮಲೆನಾಡ ಶೈಲಿಯ ನಾಟಿ ಮಾಡ್ಬೇಕು ಎಂದು ಅನ್ಸಿದ್ರೆ. ಒಮ್ಮೆ ನಮ್ಮ ನಾಟಿ ಗದ್ದೆಗೆ ಭೇಟಿ ನೀಡಿ ಆಹ್ಲಾದಕರ ಅನುಭವ ಪಡೆಯಿರಿ.

Categories
ಮಾಹಿತಿ ಸುದ್ದಿ

ಚಿಕನ್ ದರ ಇಳಿಕೆ?!

ಚಿಕನ್ ದರ ಇಳಿಕೆ?!
– ಶ್ರಾವಣ ಮಾಸ ಹಿನ್ನೆಲೆ ಇಳಿಕೆ
– 150ರೂ. ಗೆ ಇಳಿಯುತ್ತಾ ಚಿಕನ್ ದರ?

NAMMUR EXPRESS NEWS
ಶ್ರಾವಣ ಮಾಸ ಆರಂಭವಾಗಿದ್ದರಿಂದ ಚಿಕನ್ ಬೆಲೆ ತೀವ್ರವಾಗಿ ಇಳಿಕೆಯಾಗಿದೆ. ಕೆಲವು ಕಡೆ ಸೋಮವಾರ ಕೋಳಿ ಮಾಂಸದ ಬೆಲೆ 180 ರೂ.ಗೆ ಇಳಿದಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಒಂದು ಕೆಜಿ ಚಿಕನ್ ಬೆಲೆ ರೂ. ಇದನ್ನು 150 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಚಿಕನ್ ಬೆಲೆ ಹಠಾತ್ ಕುಸಿತಕ್ಕೆ ಮುಖ್ಯ ಕಾರಣ ಶ್ರಾವಣ ಮಾಸ. ಆಷಾಢ ಮಾಸವು ಭಾನುವಾರ ಕೊನೆಗೊಂಡು ಸೋಮವಾರದಿಂದ ಶ್ರಾವಣ ಮಾಸ ಆರಂಭವಾಗಿದೆ. ಇದರೊಂದಿಗೆ ಇಂದಿನಿಂದ ಶ್ರಾವಣ ಮಾಸ ವ್ರತಗಳು ಆರಂಭವಾಗುತ್ತಿವೆ. ಈ ಹಿನ್ನೆಲೆ ಕೆಲವರು ಶ್ರಾವಣ ಮಾಸ ಮುಗಿಯುವವರೆಗೆ ಮನೆಗಳಿಗೆ ಮಾಂಸವನ್ನು ತರುವುದನ್ನು ನಿಲ್ಲಿಸುತ್ತಾರೆ. ಇದರ ಭಾಗವಾಗಿ, ಕೋಳಿ ಮಾಂಸದ ಬೆಲೆ ತೀವ್ರವಾಗಿ ಕುಸಿದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಬೆಂಗಳೂರು ಸೇರಿದಂತೆ ಹಲವು ಕಡೆ ಚಿಕನ್ 180-200 ರೂಗೆ ಚಿಕನ್ ಮಾರಾಟವಾಗುತ್ತಿದೆ. 2-3 ದಿನಗಳಲ್ಲಿ ಎಲ್ಲಾ ಕಡೆ ಚಿಕನ್ ದರ 180 ಕ್ಕೆ ಇಳಿಕೆ ಆಗುವ ಸಾಧ್ಯತೆಯಿದೆ

Categories
ಕರಾವಳಿ ಮಲ್ನಾಡ್

ತಿಂಗಳ ಬಳಿಕ ಬಿಸಿಲು ನೋಡಿದ ಕರಾವಳಿ, ಮಲೆನಾಡು..!

ತಿಂಗಳ ಬಳಿಕ ಬಿಸಿಲು ನೋಡಿದ ಕರಾವಳಿ, ಮಲೆನಾಡು..!
– ಒಂದು ತಿಂಗಳ ಮಳೆ ಆರ್ಭಟಕ್ಕೆ ನಲುಗಿದ ಜನ
– ಅಡಿಕೆ ಮರದಿಂದ ಉದುರುತ್ತಿರುವ ಅಡಿಕೆ ಕಾಯಿ
– ಈಗ ಜನ ಜೀವನ ಸಹಜತೆಯತ್ತ: ಆದ್ರೂ ಮಳೆ ಅಲರ್ಟ್

NAMMUR EXPRESS NEWS
ಮಲೆನಾಡು/ಕರಾವಳಿ: ತಿಂಗಳ ಬಳಿಕ ಕರಾವಳಿ, ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಬಿಸಿಲಿನ ಛಾಯೆ ಕಾಣಿಸುತ್ತಿದೆ.
ಒಂದು ತಿಂಗಳಿಂದ ಸುರಿದ ಭಾರೀ ಮಳೆಗೆ ನಲುಗಿದ ಜನ ಇನ್ನು ಅದರ ಆರ್ಭಟದಿಂದ ಹೊರ ಬಂದಿಲ್ಲ.
ಎಲ್ಲಾ ನದಿ ಹಳ್ಳಗಳು ತುಂಬಿವೆ. ಆಣೆಕಟ್ಟುಗಳು ತುಂಬಿವೆ. ಶಾಲೆ ಕಾಲೇಜುಗಳಿಗೆ ಸುಮಾರು 10-15 ದಿನ ರಜೆ ಘೋಷಣೆ ಆಗಿತ್ತು. ಮಲೆನಾಡು ಹಾಗೂ ಕರಾವಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ.
ರಸ್ತೆ, ಸೇತುವೆಗಳು ಕುಸಿದಿವೆ. ಇದೀಗ ಬಿಸಿಲಿನ ಕಾರಣ ಎಲ್ಲಾ ಕೆಲಸಗಳು ಶುರುವಾಗಿದೆ. ಜನ ಜೀವನ ಮತ್ತೆ ಸಹಜ ಸ್ಥಿತಿಗೆ ಬರುತ್ತಿದೆ.

ಅಡಿಕೆ ಮರದಿಂದ ಉದುರುತ್ತಿರುವ ಅಡಿಕೆ ಕಾಯಿ

ಮಲೆನಾಡು, ಕರಾವಳಿ ಭಾಗದ ಜೀವನ ಆಧಾರ ಬೆಳೆ ಅಡಿಕೆ ಕಾಯಿ ಭಾರೀ ಮಳೆ ಕಾರಣ ಉದುರುತ್ತಿವೆ. ಇದು ರೈತರನ್ನು ಕಂಗಾಲು ಮಾಡಿದೆ. ತೋಟಗಳಲ್ಲಿ ಕಾಯಿಗಳು ಉದುರಿದ್ದು ಇನ್ನು ಮಳೆ ಬಂದರೆ ಮತ್ತಷ್ಟು ಹಾನಿ ಸಂಭವಿಸಲಿದೆ.

ಈಗ ಜನ ಜೀವನ ಸಹಜತೆಯತ್ತ: ಆದ್ರೂ ಮಳೆ ಅಲರ್ಟ್

ಮಳೆ ಇನ್ನು ಬರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಬೀಳಲಿದೆ ಎಂದು ಹೇಳಲಾಗಿದೆ. ಹಾಗಾದರೆ ಮತ್ತಷ್ಟು ಹಾನಿ ಸಂಭವಿಸಲಿದೆ.

Categories
ತೀರ್ಥಹಳ್ಳಿ

ಭೀಮನಕಟ್ಟೆಯಲ್ಲಿ ಭೀಮನ ಅಮಾವಾಸ್ಯೆ!

ಭೀಮನಕಟ್ಟೆಯಲ್ಲಿ ಭೀಮನ ಅಮಾವಾಸ್ಯೆ!
– ನೂರಾರು ದಂಪತಿಗಳಿಂದ ಭೀಮೇಶ್ವರನಿಗೆ ಪೂಜೆ

ಆರಗ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮಹೇಂದ್ರ ನಿವೃತ್ತಿ
– ಸೇವೆಯಿಂದ ನಿವೃತ್ತರಾದ ಸಂದರ್ಭದಲ್ಲಿ ಬೀಳ್ಕೊಡುಗೆ

ಕಳಪೆ ಮಾಂಸ: ತಪ್ಪಿಸ್ಥರ ಮೇಲೆ ಕ್ರಮಕ್ಕೆ ತೀರ್ಥಹಳ್ಳಿಯಲ್ಲಿ ಹೋರಾಟ
– ಹಿಂದೂ ಸಂಘಟನೆಗಳ ಪ್ರಮುಖರಿಂದ ತಹಸೀಲ್ದಾರ್ ಮನವಿ

NAMMUR EXPRESS NEWS
ತೀರ್ಥಹಳ್ಳಿ: ಆರಗದ ಯೂನಿಯನ್ ಬ್ಯಾಂಕ್ ನಲ್ಲಿ ಸುಮಾರು 34 ವರ್ಷಗಳ ಸುಧೀರ್ಘ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಮಹೇಂದ್ರ ಅವರು ಜುಲೈ 31ರಂದು ಸೇವೆಯಿಂದ ನಿವೃತ್ತರಾದರು.
ಆರಗ ಯೂನಿಯನ್ ಬ್ಯಾಂಕ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು,ಆರಗ ಗ್ರಾಮಸ್ಥರುಗಳು ನಿವೃತ್ತರಾದ ಮಹೇಂದ್ರರವರಿಗೆ ದಂಪತಿ ಸಮೇತ ಶಾಲು ಹೊದಿಸಿ ಫಲ ಪುಷ್ಪಗಳನ್ನು ನೀಡಿ ಗೌರವಿಸಿ ಶುಭ ಹಾರೈಸಿದರು.
ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಮಸ್ಥರ ಗೌರವ ಸ್ವೀಕರಿಸಿ ಮಾತನಾಡಿದ ಮಹೇಂದ್ರ ಪ್ರಾಮಾಣಿಕವಾಗಿ ಕೆಲಸ ಮಾಡಿ ನಿವೃತ್ತಿ ಹೊಂದುತ್ತಿರುವ ತೃಪ್ತಿ ನನಗಿದ್ದು, ಬ್ಯಾಂಕ್ ಸೇವೆಯನ್ನು ಗ್ರಾಮದ ಪ್ರತಿಯೊಬ್ಬರಿಗೂ ತಲುಪಲು ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು.
ಈ ಸಮಾರಂಭದಲ್ಲಿ ಗ್ರಾಹಕರಾದ ಎಚ್ಎಸ್ ವೆಂಕಟೇಶ್ ಶಾಸ್ತ್ರಿ, ಎಸ್ ಎನ್ ಮಂಜುನಾಥ್ ,ಬ್ಯಾಂಕಿನ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

ಕಳಪೆ ಮಾಂಸ: ತಪ್ಪಿಸ್ಥರ ಮೇಲೆ ಕ್ರಮಕ್ಕೆ ತೀರ್ಥಹಳ್ಳಿಯಲ್ಲಿ ಹೋರಾಟ

ಬೆಂಗಳೂರಿಗೆ ಅಕ್ರಮ ಮತ್ತ ಕಳಪೆ ಮಾಂಸವನ್ನು ಸರಬುರಾಜು ಮಾಡುವವರ ಮೇಲೆ ಕ್ರಮ ಜರುಗಿಸಬೇಕು ಮತ್ತು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಮಾಡಿದ ಎಸಿಪಿ ಚಂದನ್ ಕುಮಾರರವರನ್ನು ಅಮಾನತು ಮಾಡಿ ಮತ್ತು ರಾಮನಗರದ ಹೆಸರನ್ನು ’ದಕ್ಷಿಣ ಬೆಂಗಳೂರು’ ಎಂದು ಮರುನಾಮಕರಣ ಮಾಡಬಾರದ ಎಂದು ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ತೀರ್ಥಹಳ್ಳಿಯ ತಹಶಿಲ್ದಾರರಿಗೆ ಮನವಿ ಮಾಡಲಾಯಿತು.
ಸಾಗರದ ತಹಶಿಲ್ದಾರರಿಗೆ ಮತ್ತು ತೀರ್ಥಹಳ್ಳಿಯಲ್ಲಿ ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್ ರವರಾದ ಜಕ್ಕಣ್ಣ ಗೌಡರ್ ಇವರ ಮುಖಾಂತರ ರಾಜ್ಯಪಾಲರಿಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಮನವಿ ನೀಡಲಾಯಿತು. ಅಕ್ರಮ ಮಾಂಸ ಮಾರಾಟಮಾಡುವವರನ್ನು ಬಂಧನ ಮಾಡಬೇಕು ಮತ್ತು ಈ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹ ಮಾಡಲಾಯಿತು. ರಾಜ್ಯ ಸರಕಾರವು ರಾಮನಗರ ಜಿಲ್ಲೆಯನ್ನು ’ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ಹೋರಟಿರುವ ನಿರ್ಧಾರವು ಅತ್ಯಂತ ಖಂಡನೀಯವಾಗಿದೆ. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಆಗ್ರಹ ಮಾಡಲಾಯಿತು.
ತೀರ್ಥಹಳ್ಳಿಯಲ್ಲಿ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯರಾದ ಮೋಹನ್ ಕೆರೋಡಿ, ನಿವೃತ್ತ ದೈಹಿಕ ಶಿಕ್ಷಕರಾದ ಕಿರಣ್ ಕುಮಾರ್, ಹಿಂದೂ ಜಾಗರಣ ವೇದಿಕೆಯ ಸಂಯೋಜಕರಾದ ರಾಘವೇಂದ್ರ, ಹಿಂದೂ ಜನ ಜಾಗೃತಿ ಸಮಿತಿಯ ಹರೀಶ್ ಗೌಡ ಹಾಗೂ ಧರ್ಮಪ್ರೇಮಿಗಳಾದ ಅವಿನಾಶ್ ಭಟ್, ನಾರಾಯಣಗೌಡ, ಕಾಂತೇಶ ಪ್ರಭು, ರಾಜೇಂದ್ರ, ಇನ್ನಿತರರು ಉಪಸ್ಥಿತರಿದ್ದರು.

ತೀರ್ಥಹಳ್ಳಿ: ಭೀಮನಕಟ್ಟೆಯಲ್ಲಿ ಭೀಮನ ಅಮಾವಾಸ್ಯೆ

ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆಯಲ್ಲಿ ಭೀಮನ ಅಮಾವಾಸ್ಯೆ ಆಚರಣೆ ಮಾಡಲಾಯಿತು. ನೂರಾರು ದಂಪತಿಗಳು ಹಾಗೂ ಭಕ್ತರು ಪೂಜೆ ಮಾಡಿದರು. ಮಳೆ ಕೊಂಚ ಬಿಟ್ಟಿದ್ದರಿಂದ ಜನ ಹೆಚ್ಚು ಸೇರಿದ್ದರು.

Categories
ಕರಾವಳಿ

ಕಾರ್ಕಳದ ಮರ್ಣೆಯಲ್ಲಿ ಕೆಸರುಡು ಒಂಜಿ ದಿನ ಸಂಭ್ರಮ!

ಕಾರ್ಕಳದ ಮರ್ಣೆಯಲ್ಲಿ ಕೆಸರುಡು ಒಂಜಿ ದಿನ ಸಂಭ್ರಮ!
– ವಿಷ್ಣು ಪ್ರೆಂಡ್ಸ್ ಅಜೆಕಾರು, ಶ್ರೀ ವಿಷ್ಣು ಮಹಿಳಾ ಘಟಕ ಅಜೆಕಾರು ಮರ್ಣೆ ಸಹಯೋಗ
– ಕೆಸರಲ್ಲಿ ಆಟ ಆಡಿ ಸಂಭ್ರಮಿಸಿದ ಜನ

NAMMUR EXPRESS NEWS
ಕಾರ್ಕಳ: ಶ್ರೀ ವಿಷ್ಣು ಪ್ರೆಂಡ್ಸ್ ಅಜೆಕಾರು ಮತ್ತು ಶ್ರೀ ವಿಷ್ಣು ಮಹಿಳಾ ಘಟಕ ಅಜೆಕಾರು ಮರ್ಣೆ ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ಬಾಂಧವರಿಗೆ “ಕೆಸರುಡು ಒಂಜಿ ದಿನ” ಕಾರ್ಯಕ್ರಮ ನಡೆಯಿತು.
ಅಜೆಕಾರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಗದ್ದೆಯಲ್ಲಿ ನಡೆದಿದ್ದು, ಈ ವೇದಿಕೆಯಲ್ಲಿ ವೇದಮೂರ್ತಿ ಕೃಷ್ಣ ಮೂರ್ತಿ ಭಟ್ ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕಾಯದರ್ಶಿ ಬಾಸ್ಕರ ಶೆಟ್ಟಿ ಕುಂಠಿನಿ, ತುಳುನಾಡ ತುಡರ್ ನಮ್ಮ ತುಳುನಾಡ್ ಟ್ರೆಸ್ಟ್ ರಾಜ್ಯ ಸಂಚಾಲಕರು ಕೀತಿ೯ ಕಾಕ೯ಳ ,ಪ್ರಶಾಂತ್ ಶೆಟ್ಟಿ ಕುಂಠಿನಿ,ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹರೀಶ್ ನಾಯಕ್, ಮಹಿಳಾ ಪ್ರಮುಖರಾದ ಶ್ರೀಮತಿ ವಿದ್ಯಾ ಪೈ, ಅಜೆಕಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷರಾದ ಬೋಜ ಮಡಿವಾಳ, ಭಜನಾ ಮಂಡಳಿಯ ಕೋಶಾಧಿಕಾರಿ ಡಾ.ಜನಾರ್ದನ ನಾಯಕ್, ಹಿಂದೂ ಸಂಘಟನಾ ಮುಖಂಡ ರತ್ನಾಕರ ಅಮೀನ್, ಕೆಸರುಡು ಒಂಜಿ ದಿನ ಈ ಕಾರ್ಯಕ್ರಮದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಜನಪ್ರಿಯ ರೈಸ್ ಮಿಲ್ ಮಂಜುನಾಥ್ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು. ಗ್ರಾಮಸ್ಥರು ಸಂಭ್ರಮದಿಂದ ಭಾಗವಹಿಸಿದ್ದರು.

Categories
ಶಿವಮೊಗ್ಗ

ಭದ್ರಾ ನದಿಗೆ ಹಾರಿದ ಇಬ್ಬರು ಯುವಕರು.!

ಭದ್ರಾ ನದಿಗೆ ಹಾರಿದ ಇಬ್ಬರು ಯುವಕರು.!
– ಭದ್ರಾವತಿಯ ಹಳೆ ಸೇತುವೆ ಬಳಿ ನಡೆದ ದುರಂತ
– ಓರ್ವನ ಮೃತದೇಹಪತ್ತೆ, ಮತ್ತೋರ್ವನಿಗಾಗಿ ತೀವ್ರಶೋಧ

NAMMUR EXPRESS NEWS
ಶಿವಮೊಗ್ಗ: ಭದ್ರಾ ನದಿಗೆ ಹಾರಿ ಇಬ್ಬರಲ್ಲಿ ಒಬ್ಬರ ಮೃತ ದೇಹ ಪತ್ತೆಯಾದರೆ ಮತ್ತೊಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ.
ಭದ್ರ ನದಿಗೆ ಭಾನುವಾರ ಇಬ್ಬರು ಹಾರಿದ್ದು ಇದರಲ್ಲಿ ರಾಜು ಎಂಬುವರಿಗಾಗಿ ತೀವ್ರಶೋಧ ನಡೆದಿದೆ. ಮತ್ತೋರ್ವನ ಮೃತ ದೇಹ ಪತ್ತೆಯಾಗಿದೆ. ನಗರ ಸಭೆಯ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು ಆತನನ್ನ ಕುಣಿಗಲ್ ಮೂಲದವನು ಎಂದು ಹೇಳಲಾಗುತ್ತಿದೆ. ಭದ್ರಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದ ಹಳೆ ಸೇತುವೆ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆ ನಿವಾಸಿ ಹಾಗೂ ಮೆಸ್ಕಾಂ ಸಿಬ್ಬಂದಿ ರಾಜು (34) ಎಂದು ಗುರುತಿಸಲಾಗಿದೆ. ಅಣ್ಣನ ಮಗನ ಮೊಬೈಲ್ ಗೆ ಮೆಸೇಜ್ ಮಾಡಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್ ಮೆಸೇಜ್ ಬರೆದಿಟ್ಟು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಾಜು ಅವರ ಮೃತದೇಹಕ್ಕಾಗಿ ಭದ್ರಾ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಅದರಂತೆ ಮೊಬೈಲ್‌ ಮತ್ತು ಪರ್ಸ್ ಅನ್ನು ಭದ್ರಾವತಿಯ ಒಲ್ಡ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಸೇತುವೆ ಮೇಲೆ ಇಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮೃತ ದೇಹ ಭದ್ರಾವತಿ ನಗರ ಸಭೆ ಎದುರು ಪತ್ತೆಯಾಗಿದೆ. ಈತ ಕುಣಿಗಲ್ ಕಡೆಯವನು ಎಂದು ಹೇಳಲಾಗುತ್ತಿದೆ.

Categories
ಕುಂದಾಪುರ

ಪತ್ನಿಯ ಕುತ್ತಿಗೆ ಕಡಿದು ಕುಣಿಯುತ್ತಿದ್ದ ಗಂಡ ಅರೆಸ್ಟ್!

ಪತ್ನಿಯ ಕುತ್ತಿಗೆ ಕಡಿದು ಕುಣಿಯುತ್ತಿದ್ದ ಗಂಡ ಅರೆಸ್ಟ್!
– ಕುಂದಾಪುರದ ಬನ್ನೂರಿನಲ್ಲಿ ನಡೆದ ವಿಚಿತ್ರ ಘಟನೆ: ದೆವ್ವ ಬಂದಂತೆ ನರ್ತನ: ಅಶ್ರುವಾಯು ಪ್ರಯೋಗ ಮಾಡಿ ಬಂಧನ
– ಮಣಿಪಾಲ ಲಾಡ್ಜ್‌ ನಲ್ಲಿ ವೇಶ್ಯಾವಾಟಿಕೆ, ಪೊಲೀಸ್‌ ದಾಳಿ
– ಕುಂದಾಪುರ, ಮೂಡಬಿದಿರೆಯಲ್ಲಿ ನೆರೆ ಹಾನಿ ಪರಿಶೀಲನೆ

NAMMUR EXPRESS NEWS
ಕುಂದಾಪುರ: ಪತ್ನಿಯ ಕುತ್ತಿಗೆ ಕಡಿದು ಕೊಲೆಗೆ ಯತ್ನಿಸಿ ಪತಿ ಸಂಭ್ರಮಿಸಿದ ಘಟನೆ ಶನಿವಾರ ರಾತ್ರಿ ಕಂಡೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಬನ್ನೂರಿನಲ್ಲಿ ನಡೆದಿದೆ.
ಸಾಗರದ ಸೊರಬ ತಾಲೂಕಿನ ಅನಿತಾ (38) ಎಂಬಾಕೆಯೇ ಮಾರಣಾಂತಿಕ ಹಲ್ಲೆಗೊಳಗಾದವಳು. ಆಕೆಯ ಪತಿ ಲಕ್ಷ್ಮಣ (40) ಎಂಬಾತನೇ ಆರೋಪಿ. ಈ ಕುಟುಂಬವು ಇಲ್ಲಿನ ಬಸೂರು ಕಾಶಿ ಮಠಕ್ಕೆ ಸಂಬಂಧಿಸಿದ ರೆಸಿಡೆನ್ಸಿಯಲ್ ಬ್ಲಾಕ್‌ ಬಾಡಿಗೆ ಮನೆಯ ಒಂದನೇ ಮನೆಯಲ್ಲಿ ಬಾಡಿಗೆಗೆ ಸೊರಬ ತಾಲೂಕಿನ ಮೂಲದ ಲಕ್ಷ್ಮಣ ಹಾಗೂ ಅನಿತಾ ದಂಪತಿ ವಾಸಿಸುತ್ತಿದ್ದರು. ಕಾಶಿ ಮಠದ ತೋಟ ನೋಡಿಕೊಳ್ಳಲೆಂದು ಅವರು 4 ತಿಂಗಳ ಹಿಂದೆ ಬಂದಿದ್ದರು.
ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಗಂಡ ಹೆಂಡತಿ ಗಲಾಟೆ ನಡೆದು ಕುಡಿದ ಮತ್ತಿನಲ್ಲಿದ್ದ ಲಕ್ಷ್ಮಣ ತನ್ನ ಪತ್ನಿಯ ಕುತ್ತಿಗೆಗೆ
ಕಡಿದು ಮಾರಣಾಂತಿಕ ಹಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಪತ್ನಿ ಅನಿತಾ ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಇತ್ತ ಪತಿ ಲಕ್ಷ್ಮಣ ಮನೆಯ ಬಾಗಿಲು ಚಿಲಕ ಹಾಕಿಕೊಂಡು ಹಾಲ್ ನಲ್ಲಿ ಕತ್ತಿ ಹಿಡಿದು ಕುಣಿಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಮನೆಯ ಕಿಟಕಿ ಒಡೆದು ಅಡುಗೆ ಕೋಣೆಗೆ ನುಗ್ಗಿ ಗಂಭೀರ ಸ್ಥಿತಿಯಲ್ಲಿದ್ದ ಅನಿತಾಳನ್ನು ಹೊರತಂದು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆರೋಪಿ ಮಾತ್ರ ದೆವ್ವ ಮೈಮೇಲೆ ಬಂದವನಂತೆ ಕತ್ತಿ ಹಿಡಿದು ಕುಣಿಯುತ್ತಿದ್ದ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿ ಒಂದೂವರೆ ಗಂಟೆಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಕಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರದಲ್ಲಿ ಅಪಘಾತ ; ಸವಾರ ಸ್ಥಳದಲ್ಲೇ ಸಾವು

ಕುಂದಾಪುರ : ಟ್ರಕ್ ಡಿಕ್ಕಿ ಹೊಡೆದು ದ್ವಿ ಚಕ್ರ ಸವಾರನೊಬ್ಬ ಮೃತಪಟ್ಟ ಘಟನೆ ಗೋಳಿಯಂಗಡಿಯ ಹಾಲಾಡಿ ಸಮೀಪ ನಡೆದಿದೆ.
ನಾಗರಾಜ್ (41) ಮೃತ ದುರ್ದೈವಿ. ನಾಗರಾಜ್ ಅವರು ತಮ್ಮ ಸ್ಕೂಟರ್‌ನಲ್ಲಿ ಕುಂದಾಪುರ ಕಡೆಗೆ ಹೋಗುತ್ತಿದ್ದಾಗ ಗೋಳಿಯಂಗಡಿಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಟ್ರಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ನಾಗರಾಜ್ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಟ್ರಕ್ ನ ಹಿಂಬದಿ ಎಡಚಕ್ರ ಅವರ ತಲೆಯ ಮೇಲೆ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಮಳೆಗೆ ಮನೆಗೆ ಹಾನಿ ಸ್ಥಳಕ್ಕೆ ಶಾಸಕ ಕಿರಣ ಕುಮಾ‌ರ್ ಕೊಡ್ಲಿ ಭೇಟಿ

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಯಡ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲ್ತಾರು ಶಂಕ‌ರ್ ಮರಕಾಲ ಅವರ ಮನೆಗೆ ಭಾರಿ ಗಾಳಿ ಮಳೆಗೆ ಮನೆ ಸಂಪೂರ್ಣ ಹಾನಿಯಾಗಿ ಸಾಕಷ್ಟು ನಷ್ಟ ಸಂಭವಿಸಿದ್ದಾರೆ.
ಸ್ಥಳಕ್ಕೆ ಕುಂದಾಪುರ ಶಾಸಕರಾದ ಎ.ಕಿರಣ್ ಕುಮಾ‌ರ್ ಕೊಡ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತುರ್ತಾಗಿ ಪರಿಹಾರ ಬಿಡುಗಡೆ ಮಾಡುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಸದಸ್ಯರಾದ ಗೌತಮ್ ಹೆಗ್ಡೆಸಚಿನ್ ಹಾಗೂ ಗ್ರಾಮಸ್ಥರು ಅಧಿಕಾರಿಗಳು ಉಪಸಿದ್ದರಿದ್ದರು.

ಮಣಿಪಾಲ ಲಾಡ್ಜ್‌ ನಲ್ಲಿ ವೇಶ್ಯಾವಾಟಿಕೆ, ಪೊಲೀಸ್‌ ದಾಳಿ

ಉಡುಪಿ: ಮಹಿಳೆಯನ್ನು ಬಲವಂತವಾಗಿ ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಉಡುಪಿ 80 ಬಡಗಬೆಟ್ಟು ಗ್ರಾಮದ ಖಾಸಗಿ ಲಾಡ್ಜ್ ವೊಂದಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದು, ಲಾಡ್ಜ್ ರೂಮ್‌ನಲ್ಲಿದ್ದ ಪಶ್ಚಿಮ ಬಂಗಾಲ ಮೂಲದ ಬೆಂಗಳೂರಿನಲ್ಲಿ ವಾಸವಿರುವ ಸಂತ್ರಸ್ತ ಯುವತಿಯನ್ನು ರಕ್ಷಿಸಲಾಗಿದೆ.
ಈಕೆಯಿಂದ ಕೃತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು, ಸಂತ್ರಸ್ತೆ ನೀಡಿರುವ ಮಾಹಿತಿಯಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆ: ಗುಡ್ಡ ಕುಸಿದ ಸ್ಥಳಕ್ಕೆ ಮಾಜಿ ಸಚಿವ ಅಭಯಚಂದ್ರ ಭೇಟಿ

ಮೂಡುಬಿದಿರೆ: ಪಾಲಡ್ಕ – ಕಲ್ಲಮುಂಡ್ಯೂರು
ಕೂಡು ರಸ್ತೆಯ ಗುಂಡ್ಯಡ್ಕ ಎಂಬಲ್ಲಿ ವಿಪರೀತ ಮಳೆಯಿಂದಾಗಿ ಶನಿವಾರ ರಸ್ತೆಯ ಬದಿಯಲ್ಲಿದ್ದ ಗುಡ್ಡ ಜರಿದು ಬಿದ್ದು, ಜನರು ನಡೆದಾಡುವ ಹಾಗೂ ವಾಹನ ಸಂಚರಿಸುವ ರಸ್ತೆಯು ಸಂಪೂರ್ಣ ಹಾಳಾಗಿದ್ದ ಸ್ಥಳಕ್ಕೆ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಭಾನುವಾರ ಭೇಟಿ ನೀಡಿದರು.ಪಾಲಡ್ಕ ಪಂಚಾಯತ್‌ ಉಪಾದ್ಯಕ್ಷ ಪ್ರವೀಣ್‌ ಸಿಕ್ವೆರಾ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ನಲೇರಿಯನ್ ಸಿಕ್ವೆರಾ, ಸ್ಥಳೀಯರಾದ ಆಂದ್ರೂ ಡಿಸೋಜಾ, ವಾಸುದೇವ ನಾಯಕ್‌, ಮ್ಯಾಕ್ಸಿಂ ಲೋಬೊ, ರಾಘವೇಂದ್ರ ಭಟ್, ಸುಧೀರ್ ಭಟ್, ವಾಸುದೇವ ಭಟ್, ಉದಯ ಶೆಟ್ಟಿ, ಪ್ರಮೋದ್‌ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮೊದಲ ಶ್ರಾವಣ ಸೋಮವಾರ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ಕುಟುಂಬ ಸದಸ್ಯರ ಸಲಹೆಯಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಇಂದು ಅನಿರೀಕ್ಷಿತ ಆದಾಯದ ಮೂಲಗಳಿಂದ ಧನಲಾಭವಿದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ.

** ವೃಷಭ ರಾಶಿ :
ವ್ಯವಹಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಇಂದು ನೀವು ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹಣದ ಒಳಹರಿವು ಹೆಚ್ಚಾಗುತ್ತದೆ. ಪೂರ್ವಿಕರ ಆಸ್ತಿಯಿಂದ ಸಂಪತ್ತು ವೃದ್ಧಿಯಾಗಲಿದೆ. ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಿ ಮತ್ತು ಕಚೇರಿಯಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ.

** ಮಿಥುನ ರಾಶಿ
ಬಹಳ ದಿನಗಳಿಂದ ಬಾಕಿ ಇರುವ ಹಣ ವಾಪಸ್ ಬರುತ್ತದೆ. ವೃತ್ತಿಪರ ಜೀವನದಲ್ಲಿ ಹಿರಿಯರ ಸಲಹೆಗಳು ಪ್ರಯೋಜನಕಾರಿಯಾಗುತ್ತವೆ. ವೃತ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುವಿರಿ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನ ಇರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಇರುತ್ತದೆ.

** ಕರ್ಕಾಟಕ ರಾಶಿ :
ಇಂದು ಲೆಕ್ಕವಿಲ್ಲದಷ್ಟು ಆದಾಯದ ಮೂಲಗಳಿಂದ ಆರ್ಥಿಕವಾಗಿ ಲಾಭ ಪಡೆಯುತ್ತಾರೆ. ಹೊಸ ತಂತ್ರದೊಂದಿಗೆ ಮಾಡಿದ ಕೆಲಸಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ನೀವು ಹಿರಿಯ ಸಹೋದರ ಸಹೋದರಿಯರಿಂದ ಬೆಂಬಲವನ್ನು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ.

** ಸಿಂಹ ರಾಶಿ :
ನೀವು ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಹೂಡಿಕೆ ಆಯ್ಕೆಗಳ ಮೇಲೆ ನಿಗಾ ಇರಿಸಿ. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯ ಮಾಡಬೇಡಿ. ಹೊಸ ವ್ಯವಹಾರ ಒಪ್ಪಂದಕ್ಕೆ ಸಹಿ ಮಾಡುವ ಮೊದಲು, ದಾಖಲೆಗಳ ವಿವರಗಳನ್ನು ಎಚ್ಚರಿಕೆಯಿಂದ ಓದಿ. ಕುಟುಂಬದವರ ಬೆಂಬಲದಿಂದ ಹಣ ಗಳಿಸುವ ಹೊಸ ಮೂಲಗಳು ಸೃಷ್ಟಿಯಾಗುತ್ತವೆ.

** ಕನ್ಯಾ ರಾಶಿ :
ಹೊಸ ಹೂಡಿಕೆ ಅವಕಾಶಗಳಿಂದ ಆರ್ಥಿಕ ಲಾಭಗಳಿರುತ್ತವೆ. ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುವಿರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಹೊಸ ಮನೆಯನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಸಾಧ್ಯತೆಗಳಿವೆ. ನಿಜವಾದ ಜೀವನ ಸಂಗಾತಿಗಾಗಿ ಒಂಟಿ ಜನರ ಹುಡುಕಾಟ ಪೂರ್ಣಗೊಳ್ಳುತ್ತದೆ. ಕಚೇರಿಯಲ್ಲಿ ತುಂಬಾ ಬಿಡುವಿಲ್ಲದ ವೇಳಾಪಟ್ಟಿ ಇರುತ್ತದೆ.

** ತುಲಾ ರಾಶಿ :
ಇಂದು ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರು. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿಗೆ ಸುವರ್ಣಾವಕಾಶಗಳಿರುತ್ತವೆ. ಸಂಬಂಧಿಕರೊಂದಿಗೆ ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿರಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಅವಕಾಶವಿರುತ್ತದೆ. ರಿಯಲ್ ಎಸ್ಟೇಟ್ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇಂದು ಉತ್ತಮ ದಿನವಾಗಿದೆ.

** ವೃಶ್ಚಿಕ ರಾಶಿ :
ಇಂದು ದಿನವು ಏರಿಳಿತಗಳಿಂದ ಕೂಡಿರುತ್ತದೆ. ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ಆದರೆ ಬೇಡವಾದ ಆಲೋಚನೆಗಳಿಂದ ಮುನ್ನಡೆಯಿರಿ. ಮೂಡ್ ಸ್ವಿಂಗ್‌ಗಳಿಂದ ಸಂಬಂಧಗಳಲ್ಲಿ ಸಮಸ್ಯೆಗಳಿರಬಹುದು. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಸಾಧ್ಯ. ಇಂದು ನೀವು ಕಚೇರಿ ಕೆಲಸವನ್ನು ಸುಲಭವಾಗಿ ನಿರ್ವಹಿಸಬಹುದು.

** ಧನಸ್ಸು ರಾಶಿ :
ಹಳೆಯ ಆಸ್ತಿಯಿಂದ ಆರ್ಥಿಕ ಲಾಭವಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪೋಷಕರ ಆರೋಗ್ಯದ ಕಡೆ ಗಮನ ಕೊಡಿ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಬಾಸ್ ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ದೂರ ಪ್ರಯಾಣದ ಅವಕಾಶವಿರುತ್ತದೆ. ಹೊಸ ಆಸ್ತಿ ಖರೀದಿ ಕಾರ್ಯ ಸುಲಭವಾಗಿ ಮುಗಿಯಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಪಾರ ಯಶಸ್ಸನ್ನು ಸಾಧಿಸುವರು.

** ಮಕರ ರಾಶಿ :
ಆದಾಯದಲ್ಲಿ ಹೆಚ್ಚಳವಾಗಲಿದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಹೊಸ ಯೋಜನೆಗೆ ಜವಾಬ್ದಾರಿ ಸಿಗಲಿದೆ. ವೃತ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುವಿರಿ. ಧಾರ್ಮಿಕ ಕಾರ್ಯಕ್ರಮಗಳನ್ನು ಮನೆಯಲ್ಲಿ ಆಯೋಜಿಸಬಹುದು. ಕೆಲವರು ಪ್ರವಾಸವನ್ನು ಯೋಜಿಸಬಹುದು. ಇದು ಕೌಟುಂಬಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ.

** ಕುಂಭ ರಾಶಿ :
ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುವಿರಿ. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ಗೊಂದಲ ಉಂಟಾಗಲಿದೆ. ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಾಧ್ಯ. ಹೊಸ ಆದಾಯದ ಮೂಲಗಳಿಂದ ಹಣ ಬರಲಿದೆ. ಭೌತಿಕ ಸೌಕರ್ಯಗಳಲ್ಲಿ ಜೀವನ ನಡೆಸುವಿರಿ.

** ಮೀನ ರಾಶಿ :
ಹಣದ ಒಳಹರಿವು ಹೆಚ್ಚಾಗುತ್ತದೆ. ಆದಾಯದಲ್ಲಿ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ದಿನ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ದೂರ ಪ್ರಯಾಣವಿರಬಹುದು. ಸಂಪತ್ತು ಮತ್ತು ಆಸ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ನೀವು ಪಡೆಯುತ್ತೀರಿ. ಅವಿವಾಹಿತರಿಗೆ ಇಂದು ಪ್ರಸ್ತಾವನೆ ಬರಬಹುದು.

Categories
ದಾವಣಗೆರೆ

ವಿದ್ಯಾರ್ಥಿಗಳಿಗಾಗಿ 114 ಕೋಟಿ ಹಣ ಮೀಸಲಿಟ್ಟ ಡಾ.ವೀರೇಂದ್ರ ಹೆಗ್ಗಡೆ

ವಿದ್ಯಾರ್ಥಿಗಳಿಗಾಗಿ 114 ಕೋಟಿ ಹಣ ಮೀಸಲಿಟ್ಟ ಡಾ.ವೀರೇಂದ್ರ ಹೆಗ್ಗಡೆ
– 97 ಸಾವಿರ ವಿದ್ಯಾರ್ಥಿಗಳಿಗೆ 114 ಕೋಟಿ ಹಣವನ್ನು ಸುಜ್ಞಾನನಿ ದೇವಿ ಶಿಷ್ಯವೇತನ
– ಹೊಸದುರ್ಗದಲ್ಲಿ ಶಿಷ್ಯವೇತನ ಕಾರ್ಯಕ್ರಮದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಣೆ

NAMMUR EXPRESS NEWS
ಹೊಸದುರ್ಗ: ಹೊಸದುರ್ಗ ಈ ಬಾರಿಯ ವೃತ್ತಿಪರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ರಾಜ್ಯದಾದ್ಯಂತ 97 ಸಾವಿರ ವಿದ್ಯಾರ್ಥಿಗಳಿಗೆ 114 ಕೋಟಿ ಹಣವನ್ನು ಸುಜ್ಞಾನನಿ ದೇವಿ ಶಿಷ್ಯವೇತನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮೀಸಲಿರಿಸಿದ್ದಾರೆ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಭವಿಷ್ಯದ ವಿದ್ಯಾಭ್ಯಾಸಕ್ಕಾಗಿ ಈ ಹಣವನ್ನು ವಿನಿಯೋಗಗಿಸಲಾಗುವುದು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಿರಿಯೂರು ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ ತಿಳಿಸಿದರು..
ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕಚೇರಿಯಲ್ಲಿ ನಡೆದ ಸುಜ್ಞಾನ ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ನೀಡಿ ಮಾತನಾಡಿದ ಅವರು ಪ್ರತಿ ತಿಂಗಳಿಗೆ ಒಂದು ಸಾವಿರದಂತೆ 12,000 ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧರ್ಮಸ್ಥಳ ಸಂಸ್ಥೆ ನೀಡುತ್ತಾ ಬಂದಿದೆ. ನಮ್ಮ ಮನೆಯ ಒಂದು ಮಗು ವಿದ್ಯಾಭ್ಯಾಸ ಮಾಡಿ ಮುಂದೆ ಬಂದಾಗ ಒಂದು ಕುಟುಂಬದ ನೆಮ್ಮದಿಯ ಜೀವನಕ್ಕೆ ದಾರಿಯಾಗಬಲ್ಲದು. ವಿದ್ಯಾರ್ಥಿಗಳು ಮನಸ್ಸು ಮಾಲಿನ್ಯ ಮಾಡಿಕೊಳ್ಳದೆ ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟು ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ತುಂಬಿನಕೆರೆ ಬಸವರಾಜ್ ಮಾತನಾಡಿ, ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ನಾವು ನಾವು ಹಾಕುವ ಪುನಹ ಉತ್ತರ ಅಭಿಯೋಗಕ್ಕಾಗಿ ಸಹಾಯ ಮಾಡುವ ವ್ಯಕ್ತಿ ಪ್ರಪಂಚದಲ್ಲಿ ಯಾರಾದರೂ ಇದ್ದರೆ ಅದು ವಿರೇಂದ್ರ ಹೆಗ್ಗಡೆಯವರು, ಅದು ಧರ್ಮಸ್ಥಳ ಮಾತ್ರ. ಸಮಾಜದ ರೈತರ, ದೀನ ದುರ್ಭಲರ ಮಹಿಳೆಯರ ವಿಧ್ಯಾರ್ಥಿಗಳ ಏಳಿಗೆಗಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಪ್ರಾಮಾಣಿಕವಾಗಿ ಅನುಷ್ಠಾನ ಮಾಡುತ್ತಿರುವ ವಿರೇಂದ್ರ ಹೆಗ್ಗಡೆಯವರ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.
ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ.ಎಸ್ ಸ್ವಾಗತಿಸಿ, ಕುಮಾರಿ ಪ್ರತಿಭಾ ನಿರೂಪಿಸಿ, ಚಿಕ್ಕನಾಗಪ್ಪ ವಂದಿಸಿದರು. ಮಂಜೂರಾತಿ ಪತ್ರ ಪಡೆದುಕೊಂಡ ವಿಧ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.