Categories
ಚಿಕ್ಕಮಗಳೂರು

ಅದ್ದೂರಿಯಾಗಿ ತೆರೆಕಂಡ ಲಹರಿ ನೃತ್ಯೋತ್ಸವಂ-2024

ಅದ್ದೂರಿಯಾಗಿ ತೆರೆಕಂಡ ಲಹರಿ ನೃತ್ಯೋತ್ಸವಂ-2024
– ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗೆ ಜನವೋ ಜನ
– ಇತಿಹಾಸದಲ್ಲೇ ಪ್ರಥಮ ರಾಜ್ಯಮಟ್ಟದ ಕಾರ್ಯಕ್ರಮವೆಂಬ ಹೆಗ್ಗಳಿಕೆ

NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಕಾರ್ಯಕ್ರಮ ಅದ್ದೂರಿಯಾಗಿ ಸಮಾರೋಪಗೊಂಡಿತು. ನಾಟ್ಯ ವೈಭವ ನೃತ್ಯ ಅಕಾಡೆಮಿ ಸಂಯೋಜಿಸಿದ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ನೃತ್ಯ ತಂಡಗಳು ವಿವಿಧ ಪ್ರಕಾರಗಳಲ್ಲಿ ಸ್ಪರ್ಧಿಸಿ ಬಹುಮಾನವನ್ನು ಪಡೆದವು. ಎರಡನೇ ದಿನ ಸ್ಥಳೀಯ ಮಕ್ಕಳಿಗೆ ರಾಧಾಕೃಷ್ಣ ವೇಷ ಸ್ಪರ್ಧೆ ಹಾಗೂ ನಾಟ್ಯ ವೈಭವ ನೃತ್ಯ ಅಕಾಡೆಮಿ ತಂಡದ ಕಲಾವಿದರಿಂದ ನೃತ್ಯ ಕಾರ್ಯಕ್ರಮಗಳ ಪ್ರದರ್ಶನವಿತ್ತು. ಒಟ್ಟಾರೆಯಾಗಿ ಒಂದು ಅಚ್ಚುಕಟ್ಟಾದ ಅದ್ದೂರಿ ಕಾರ್ಯಕ್ರಮದ ಆಯೋಜನೆಗೆ ಸ್ಥಳೀಯರಿಂದ ಮೆಚ್ಚುಗೆ ಗಳಿಸಿದ್ದಲ್ಲದೇ, ಶೃಂಗೇರಿಯ ಇತಿಹಾಸದಲ್ಲೇ ಪ್ರಥಮ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಎರಡು ದಿನಗಳ ಅದ್ದೂರಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ,ಎಲ್ಲಾ ಸಂಘ-ಸಂಸ್ಥೆಗಳಿಗೂ ಅಕಾಡೆಮಿಯ ಸ್ಥಾಪಕರು ಕಾರ್ಯಕ್ರಮದ ಆಯೋಜಕರೂ ಆದ ಸುನೀತಾ ನವೀನ್‌ ಗೌಡ ಧನ್ಯವಾದ ತಿಳಿಸುವುದರೊಂದಿಗೆ ಕೆಲವೇ ದಿನಗಳಲ್ಲಿ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯನ್ನು ಶೃಂಗೇರಿಯಲ್ಲಿ ಆಯೋಜಿಸಿ ಬೇರೆಬೇರೇ ರಾಜ್ಯಗಳ ಕಲಾವಿದರಿಗೆ ವೇದಿಕೆ ನೀಡುವ ಯೋಜನೆಯನ್ನು ಪ್ರಸ್ತಾಪಿಸಿದರು.

Categories
ಮಲ್ನಾಡ್

ಕಾಂಗ್ರೇಸ್ ಸರ್ಕಾರದ ವಿರುದ್ಧ ಶೃಂಗೇರಿಯಲ್ಲಿ ಗುಡುಗಿದ ಬಿಜೆಪಿ!

ಕಾಂಗ್ರೇಸ್ ಸರ್ಕಾರದ ವಿರುದ್ಧ ಶೃಂಗೇರಿಯಲ್ಲಿ ಗುಡುಗಿದ ಬಿಜೆಪಿ!
– ರೈತರ ಒತ್ತುವರಿ ತೆರುವು ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾದ ನೂರಾರು ರೈತರು
– ಕೊಪ್ಪ, ಎನ್. ಆರ್. ಪುರದಲ್ಲಿ ಶೀಘ್ರದಲ್ಲಿ ಪ್ರತಿಭಟನೆ?

NAMMUR EXPRESS NEWS
ಶೃಂಗೇರಿ: ರಾಜ್ಯ ಸರ್ಕಾರದ ರೈತರ ಒತ್ತುವರಿ ತೆರವು ವಿರುದ್ಧ ಶೃಂಗೇರಿ ತಾಲೂಕು ಬಿಜೆಪಿ ಕರೆಕೊಟ್ಟಿದ್ದ ಬೃಹತ್ ಪ್ರತಿಭಟನೆಯಲ್ಲಿ ನೂರಾರು ರೈತರು,ಕಾರ್ಯಕರ್ತರು ಭಾಗಯಾಗಿ ರಾಜ್ಯ ಸರ್ಕಾರ ಹಾಗೂ ಕ್ಷೇತ್ರದ ಶಾಸಕರ ವಿರುದ್ಧ ಪ್ರತಿಭಟಿಸಿದರು.
ಶೃಂಗೇರಿ ಮುಖ್ಯ ಬಸ್ ನಿಲ್ದಾಣದಿಂದ ಸಂತೆ ಮಾರುಕಟ್ಟೆಯವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಶಾಸಕರಾದ ಡಿ.ಎನ್ ಜೀವರಾಜ್, ಭಾಜಪಾ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಪುಣ್ಯಪಾಲ್,ತಾಲೂಕು ಭಾಜಪಾ ಅಧ್ಯಕ್ಷರಾದ ಉಮೇಶ್ ತಲಗಾರು,ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಸೇರಿದಂತೆ ಬಿಜೆಪಿ,ಜೆಡಿಎಸ್ ಕಾರ್ಯಕರ್ತರು,ರೈತರು ಮಳೆಯನ್ನು ಲೆಕ್ಕಿಸದೇ ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ರೈತರ ಪರ ದನಿ

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪುಣ್ಯಪಾಲ್‌, ಸರ್ಕಾರ ಕೇವಲ ಹಗರಣಗಳಲ್ಲಿ ಾಗೂ ಹಗರಣಗಳನ್ನು ಮು್ಚಿಹಾಕುವುದರಲ್ಲಿ ಮುಳುಗಿದ್ದು,ಬಡ ಜನರ ಅನುದಾನದ ಹಣದಲ್ಲಿ ಭ್ರಷ್ಟಾಚಾರ ಮಾಡಿ ಜನರಿಗೆ ದ್ರೋಹ ಮಾಡಿದೆ. ಸಾಲದೆಂಬಂತೆ ಹಲವು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸಿಕೊಂಡಬಂದ ರೈತರ ಜಮೀನನ್ನು ಒತ್ತುವರಿ ಹೆಸರಿನಲ್ಲಿ ರೈತರ ಬದುಕಿಗೆ ಬೆಂಕಿ ಇಡುವ ಕೆಲಸ ಮಾಡುತ್ತಿದೆ.ತಕ್ಷಣವೇ ಕ್ಷೇತ್ರದ ಶಾಸಕರು ಕ್ಷೇತ್ರದ ರೈತರ ಪರವಾಗಿ ನಿಂತು ಒತ್ತುವರಿ ತೆರವು ಆದೇಶವನ್ನು ವಿರೋಧಿಸಬೇಕು ಎಂದರು.

ಶಾಸಕರ ವಿರುದ್ದ ಗುಡುಗಿದ ಜೀವರಾಜ್!

ಮಾಜಿ ಶಾಸಕ ಡಿ.ಎನ್ ಜೀವರಾಜ್ ಮಾತನಾಡಿ, ಇಂತಹ ವಿಷಯದಲ್ಲಿ ರಾಜಕೀಯ ಮಾಡದೇ ಶಾಸಕರು ರೈತರ ಪರ ನಿಲ್ಲಬೇಕು. ರೈತರ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು. ಹಾಗೇನಾದರು ತೆರವಿಗೆ ಅಧಿಕಾರಿಗಳು ಬಂದರೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ರಾಜಕೀಯ ಮಾಡದೇ ರೈತರ ಪರವಾಗಿ ನಿಲ್ಲುತ್ತೇವೆ. ಕೆರೆಕಟ್ಟೆಯಲ್ಲಿ ತಲೆತಲಾಂತರದಿಂದ ಜನರು ವಾಸಿಸುತ್ತಿದ್ದು ಈಗ ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಅವರಿಗೆ ಸೂಕ್ತ ಪರಿಹಾರಿ ನೀಡಿ ಅವರ ಮುಂದಿನ ಜೀವನಕ್ಕೆ ನೆರವಾಗಿ ನಂತರ ತೆರವು ಕಾರ್ಯಕ್ಕೆ ಮುಂದಾಗಬೇಕು.ಅವರ ಬೆಳೆಗೆ ಗ್ರೇಡ್1 ಮಾನ್ಯತೆ ನೀಡಿ ಪರಿಹಾರ ನೀಡಬೇಕು ಎಂದರು.
ಶಾಸಕರೇ ಆದೇಶಗಳನ್ನು ಕಳಿಸಿ,ಸುಳ್ಳು ಹೇಳಬೇಡಿ ಕಸ್ತೂರಿರಂಗನ್ ಯೋಜನೆಯ ಆಧಾರದಲ್ಲಿ ಈ ತೆರವು ಪ್ರಕ್ರಿಯೆ ನಡೆಯುತ್ತಿಲ್ಲ ಕಸ್ತೂರಿ ರಂಗನ್ ವರದಿಗೂ ಈ ಒತ್ತುವರಿ ತೆರವು ಆದೇಶಕ್ಕೂ ಸಂಬಂಧವಿಲ್ಲ. ಕಾಂಗ್ರೇಸ್ ಸರ್ಕಾರ,ಸಚಿವರು, ಶಾಸಕರು,ಸ್ಥಳೀಯ ನಾಯಕರು ಜನರ ಿಕ್ಕು ಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಮಲೆನಾಡಿಗರನ್ನು ಬದುಕಲು ಬಿಡಿ. ನಿಮ್ಮ ಸರ್ಕಾರಕ್ಕೆ ನಿಜಕ್ಕೂ ಕೃತಕ ಕಾಡುಗಳನ್ನು ಅಭಿವೃದ್ದಿ ಪಡಿಸುವ ಉದ್ದೇಶವಿದ್ದರೆ ಬಯಲು ಸೀಮೆಯಲ್ಲೂ ಅರಣ್ಯ ಇಲಾಖೆಯ ಜಾಗಗಳಿವೆ ಅಲ್ಲಿ ಪ್ಲಾಂಟೇಷನ್ ಅಭಿವೃದ್ಧಿಪಡಿಸಿ ಅದನ್ನು ಬಿಟ್ಟು ನೈಸರ್ಗಿಕವಾಗಿ ಕಾಡು ಬೆಳೆಯುವ ಈ ಭಾಗದಲ್ಲಿ ಪ್ಲಾಂಟೇಷನ್‌ನ್ನು ಬೆಳೆಸುವ ಅವಶ್ಯಕತೆಯಿಲ್ಲ. ರೈತರಿಂದ ಇಷ್ಟೆಲ್ಲ ಪ್ರತಿಭಟನೆ ವಿರೋಧ ವ್ಯಕ್ತವಾಗುತ್ತಿದ್ದರೂ ಅರಣ್ಯ ಸಚಿವರು ರೈತರ ವಿರುದ್ಧವಾದ ಆದೇಶವನ್ನು ಹೊರಡಿಸುತ್ತಿರುವುದು ಸರಿಯಲ್ಲ. ಈ ಕೂಡಲೇ ಇಂತಹ ಆದೇಶಗಳನ್ನು ಸ್ಥಗಿತಗೊಳಿಸಬೇಕು ಇಲ್ಲವಾದಲ್ಲಿ ಕೊಪ್ಪ,ಎನ್ ಆರ್ ಪುರ ನಂತರ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿದರು.
ಸ್ಥಳಕ್ಕೆ ತಹಶೀಲ್ದಾರ್ ಹಾಗೂ ವಲಯಾರಣ್ಯಾಧಿಕಾರಿಗಳನ್ನು ಕರೆಸಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Categories
ಕರಾವಳಿ

ಕರಾವಳಿಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ!

ಕರಾವಳಿಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ!
– ಉಡುಪಿಯಲ್ಲಿ ಈ ಭಾರಿ ಕೃಷ್ಣನಿಗೆ ನೂರ ಎಂಟು ಬಗೆಯ ವೆರೈಟಿ ಉಂಡೆ!
– 2 ದಿನದ ಹಬ್ಬದ ಸಡಗರ: ಮೊಸರು ಕುಡಿಕೆ ಒಡೆಯುವ ಸಂಭ್ರಮ

NAMMUR EXPRESS NEWS
ಉಡುಪಿ/ಮಂಗಳೂರು: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಭಗವಂತ ಕೃಷ್ಣ ಜನಿಸಿದ ಈ ದಿನವನ್ನು ಇಡೀ ದೇಶವು ಸಂಭ್ರಮಿಸುತ್ತದೆ. ಮನೆಯಲ್ಲಿ ಪುಟ್ಟ ಮಕ್ಕಳಿದ್ದರಂತೂ ಆ ಮನೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ದುಪ್ಪಟ್ಟು. ಮಕ್ಕಳಿಗೆ ಕೃಷ್ಣ ಅಥವಾ ರಾಧೆಯ ವೇಷಭೂಷಣ ಹಾಕಿ ಕಣ್ತುಂಬಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.
ಮನೆ ಮನೆಗಳಲ್ಲಿ ನಾನಾಬಗೆಯ ತಿಂಡಿತಿನಿಸು. ಪ್ರತಿದಿನ ಬಾಗಿಲು ಮುಚ್ಚಿ ಸರ್ರನೇ ಕೇಲಸೆಕ್ಕೆದ್ದು ಪರಾರಿಯಾಗುವ ಪ್ರತಿಯೊಬ್ಬರು ಈ ದಿನ ಮನೆಯಲ್ಲೇ ಕುಳಿತು ಆರಾಧಿಸುವ ಹಬ್ಬ . ಕರಾವಳಿ ಕಡೆಗಳಲ್ಲಿ ಕೃಷ್ಣಾಷ್ಟಮಿ ಎಂದಾಗ ನೆನಪಾಗುಹುದು ಎಲೆಗಳಲ್ಲಿ ಮಾಡುವ ಗುಂಡ, ಕೊಟ್ಟಿಗೆ, ಮೂಡೆ ಹಾಹಾ!!!….ಮನೆಯಲ್ಲಂತೂ ಸೌಟು, ಮಕ್ಿಗಳದೇ ಸದ್ದು.. ಈ ದಿನ ಕರಾವಳಿಯ ಮಕ್ಕಳಿಗೆ ಎಲ್ಲಿಲ್ಲದ ಸಡಗರ ಕೃಷ್ಣಾ, ರಾಧಾ, ಶಾಮಾ ಭೀಮ, ಯಶೋಧ ಹೀಗೆ ನನಾ ತರಹದ ಅಲಂಕಾರ. ಮಧ್ಯಾಹ್ನ ಬಾಳೆಎಲೆಯಲ್ಲಿ ಸುತ್ತ ಮಸಿ ಪಾತ್ರೆ.. ಮೂರು ನಾಲ್ಕು ಬಗೆಯ ಪದಾರ್ಥವನ್ನಿಟ್ಟು ಭರ್ಜರಿ ಭೋಜನ.
ಜನ್ಮಾಷ್ಟಮಿ ಕಾರ್ಯಕ್ರಮ ಸಂಭ್ರಮಾಚರಣೆಯಾಗಿ ಮೊಸರು ಕುಡಿಕೆ ಉತ್ಸವ ನಡೆಯುತ್ತದೆ. ಬಣ್ಣಗಳ ನೀರನ್ನು ಹಾಕಿದ ಮಡಕೆಗಳನ್ನು ಎತ್ತರದಲ್ಲಿ ಕಟ್ಟಿ ಅದನ್ನು ಯುವಕರು ಒಬ್ಬರ ಮೇಲೊಬ್ಬರು ಹತ್ತಿ ಒಡೆಯುವ ಈ ಉತ್ಸವ ಮಂಗಳೂರಿನಲ್ಲಿ ಸಂಭ್ರಮದಿಂದ ನಡೆಯುತ್ತದೆ. ಹೀಗೆ ಕರಾವಳಿಯಲ್ಲಿ ಹಲವಾರು ರೀತಿಯಲ್ಲಿ ರಾರಾಜಿಸುವ ಕೃಷ್ಣನ ಹಬ್ಬ ಮನೋಹರವಾಗಿರುತ್ತದೆ.

ಉಡುಪಿಯಲ್ಲಿ ಪೀತಾಂಬರಧಾರಿಯ ಆರಾಧನೆ!

ಉಡುಪಿಯಲ್ಲಿ ಕೃಷ್ಣ ನಗರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ನಡೆಯುತ್ತಿದ್ದು, 108 ಬಗೆಯ ತಿಂಡಿ ತಿನಿಸು ಸಜ್ಜಾಗಿದೆ.ಮಂಗಳವಾರ ಆ. 27ರಂದು ಶ್ರೀಕೃಷ್ಣಲೀಲೋತ್ಸವ ಆಚರಣೆಗೆ ತಯಾರಿಯಾಗುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯು ಭಕ್ತರು ಹಾಗೂ ಸಾರ್ವಜನಿಕರ ಕೇಂದ್ರ ಬಿಂದುವಾಗಿದೆ. ಇಲ್ಲಿ ಗೋಕುಲ ವಾಸಿ ದೇವಕಿ ನಂದನ ಆರಾಧನೆ ನಡೆಯುತ್ತಿದೆ.
ಸಂಭ್ರಮದ ಶ್ರೀ ಕೃಷ್ಣಾಷ್ಟಮಿ ಮತ್ತು ವೈಭವದ ಶ್ರೀ ಕೃಷ್ಣಲೀಲೋತ್ಸವ, ಮೊಸರುಕುಡಿಕೆ ಹಬ್ಬಗಳು ನಡೆಯುತ್ತಿದೆ. ಈ ಎರಡು ದಿನಗಳ ಹಬ್ಬಕ್ಕಾಗಿ ಉಡುಪಿಯಲ್ಲಿ ವಾರದಿಂದಲೇ ಸಿದ್ಧತೆಗಳು ನಡೆಯುತ್ತಿವೆ. ಕೃಷ್ಣಮಠ ತಳಿರು ತೋರಣ, ಹೂವುಗಳಿಂದ ಶೃಂಗಾರಗೊಂಡಿತ್ತು. ರಥಬೀದಿಯಲ್ಲಿ ಮೊಸರುಕುಡಿಕೆ ಅಥವಾ ವಿಟ್ಲಪಿಂಡಿ ಉತ್ಸವಕ್ಕೆ ಗುರ್ಜಿಗಳು ಸ್ಥಾಪನೆಗೊಂಡಿವೆ, ರಥಗಳು ಕೃಷ್ಣನ ಉತ್ಸವಕ್ಕೆ ಸಿದ್ಧವಾಗಿವೆ.
ದಕ್ಷಿಣ ಕನ್ನಡದಲ್ಲಿ ಮನೆಯಲ್ಲೇ ಕುಳಿತು ಕೃಷ್ಣಜನ್ಮಷ್ಟಮಿ ಹಬ್ಬ ಆಚರಿಸಿದರೆ ಉಡುಪಿಯಲ್ಲಿ ಮಂದಿರಕ್ಕೆ ತೆರಳಿ ಈ ಹಬ್ಬವನ್ನು ಆಚರಿಸುತ್ತಾರೆ. ಬಾಲಕೃಷ್ಣನಿಗೆ ಅರ್ಪಿಸುವುದಕ್ಕಾಗಿ ಕೃಷ್ಣಮಠದ ಪಾಕಶಾಲೆಯಲ್ಲಿ 108 ಬಗೆಯ ಲಡ್ಡುಗಳು ಮತ್ತು ಲಕ್ಾಂತರ ಸಂಖ್ಯೆಯಲ್ಲಿ ಚಕ್ಕುಲಿ ತಯಾರಿಸಲಾಗಿದ್ದು, ಇವುಗಳನ್ನು ಇಂದು ರಾತ್ರಿ ಮಹಾಪೂಜೆಯ ಸಂದರ್ಭದಲ್ಲಿ ಕೃಷ್ಣನಿಗೆ ಅರ್ಪಿಸಿ, ನಾಳೆ ಭಕ್ತರಿಗೆ ವಿತರಿಸಲಾಗುತ್ತದೆ.
ಕೃಷ್ಣ ಭಕ್ತರು ದಿನವಿಡೀ ಉಪವಾಸವಿದ್ದು, ಕೃಷ್ಣನ ಭಜನೆ, ಪಾರಾಯಣಗಳಲ್ಲಿ ಕಳೆಯಲಿದ್ದಾರೆ. ಕೃಷ್ಣಮಠದಲ್ಲಿ ದಿನವಿಡೀ ಮುದ್ದುಕೃಷ್ಣ – ಮುದ್ದು ರಾಧೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉಡುಪಿ ನಗರದಲ್ಲಂತೂ ಹತ್ತಿಪ್ಪತ್ತಕ್ಕೂ ಹೆಚ್ಚು ಹುಲಿವೇಷಧಾರಿ ತಂಡಗಳು ಕುಣಿದು ಕುಪ್ಪಳಿಸಿ ಜನರಿಗೆ ಮನರಂಜನೆ ನೀಡಲಿದ್ದಾರೆ.

Categories
ಮಲ್ನಾಡ್

2025ರಲ್ಲಿ ಇಸ್ರೋದಿಂದ ನಭಾಕ್ಕೆ ಗಗನಯಾನ ನೌಕೆ

2025ರಲ್ಲಿ ಇಸ್ರೋದಿಂದ ನಭಾಕ್ಕೆ ಗಗನಯಾನ ನೌಕೆ
– ಗಗನಯಾನಕ್ಕೆ ಸಿದ್ಧವಾಗಿವೆ ಧಾರವಾಡ ಕೃಷಿ ವಿವಿಯ ನೊಣಗಳು!
– ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆಯಲು ಧಾರವಾಡ ಕೃಷಿ ವಿವಿ ಸಿದ್ಧ
– ಒಂದು ವೇಳೆ ಸಂಶೋಧನೆ ಯಶಸ್ವಿಯಾದರೆ ಮತ್ತೊಂದು ಮೈಲಿಗಲ್ಲು ಸ್ಥಾಪನೆ

NAMMUR EXPRESS NEWS
ಧಾರವಾಡ: ಗಗನಯಾನಕ್ಕೆ ಧಾರವಾಡದ ಕೃಷಿ ವಿವಿಯ ನೊಣಗಳು ಸಿದ್ಧವಾಗಿವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೊಣದ ಕಿಟ್ ಗಗನಯಾನ ನೌಕೆಯಲ್ಲಿ ಅಧ್ಯಯನಕ್ಕೆ ಹೋಗಲಿದ್ದು, ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆಯಲು ಧಾರವಾಡ ಕೃಷಿ ವಿವಿ ಸಿದ್ಧವಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಜೈವಿಕಶಾಸ್ತ್ರ ವಿಭಾಗದಿಂದ ನೊಣದ ಕಿಟ್ ತಯಾರಿಯಾಗಿದೆ. ವಿವಿಯ ವಿಜ್ಞಾನಿ ರವಿಕುಮಾರ್ ಹೊಸಮನಿರಿಂದ ವಿಶೇಷ ಪ್ರಯೋಗ ನಡೆಯಲಿದೆ. ದೇಶದ 75 ಕೃಷಿ ವಿವಿಗಳ ಪೈಕಿ ಧಾರವಾಡ ಕೃವಿ ವಿವಿ ಆಯ್ಕೆಯಾಗಿದೆ. 2025ರಲ್ಲಿ ಇಸ್ರೋದಿಂದ ನಭಾಕ್ಕೆ ಗಗನಯಾನ ನೌಕೆ ಹೋಗಲಿದ್ದು, ನೌಕೆಯಲ್ಲಿ 15 ಹಣ್ಣಿನ ನೊಣಗಳಿರುವ ಕಿಟ್ ತೆರಳಲಿದೆ. ಹಣ್ಣಿನ ನೊಣಕ್ಕೂ ಮನುಷ್ಯನ ದೇಹರಚನೆಗೂ ಹೋಲಿಕೆ ಹಿನ್ನೆಲೆಯಲ್ಲಿ ಬಾಹ್ಯಾಕಾಶದಲ್ಲಿ ನೊಣಗಳಲ್ಲಿ ಆಗುವ ಬದಲಾವಣೆ ಬಗ್ಗೆ ಅಧ್ಯಯನ ನಡೆಯಲಿದೆ. ಗಗನ ಯಾತ್ರಿಗಳು ಬಾಹ್ಯಾಕಾಶದಲ್ಲಿ ಇರುವಾಗ ಬಹಳಷ್ಟು ಮಂದಿಗೆ ಕಿಡನಿ ಸ್ೋನ್ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಇದನ್ನು ಬಗೆಹರಿಸಲು ಬಾಹ್ಯಾಕಾಶದಲ್ಲಿ ನೊಣಗಳ ಅಧ್ಯಯನ ನಡೆಸಲಿದ್ದಾರೆ. ಈ ಫಲಿತಾಂಶ ಮಾನವಸಹಿತ ಬಾಹ್ಯಾಕಾಶಯಾನಕ್ಕೆ ಸಹಕಾರ ನೀಡಲಿದೆ. ಅನ್ಯಗ್ರಹವಾಸದ ವೇಳೆ ಆಹಾರ ಪೂರೈಕೆ, ಸಂರಕ್ಷಣೆಗೆ ನೆರವು ನೀಡಲಾಗುತ್ತದೆ.

ಬಾಹ್ಯಾಕಾಶದ ಶೂನ್ಯ ಗುರುತ್ತದಲ್ಲಿ 7 ದಿನ ಗಗನ ನೌಕೆ ಸುತ್ತಾಟ ಇರಲಿದ್ದು, ನೌಕೆ ಯಾನದಲ್ಲಿ ನೊಣಗಳಿಂದ ಕಿಟ್‌ನಲ್ಲೇ ಸಂತಾನೋತ್ಪತ್ತಿ ಮಾಡಲಿದೆ. ಕೃಷಿ ವಿವಿಯ ವಿಜ್ಞಾನಿಗಳು ಇಸ್ರೋದೊಂದಿಗೆ ಕೈ ಜೋಡಿಸಿದ್ದಾರೆ. ಇನ್ನೂ ಇದೆ ಮೊದಲ ಬಾರಿಗೆ ಗಗನಯಾನ ಅಧ್ಯಯನಕ್ಕೆ ಕೃಷಿ ವಿಜ್ಞಾನಿಗಳ ಬಳಕೆ ಮಾಡಲಾಗುತ್ತಿದೆ. ಇದು ಕೃಷಿ ವಿವಿಯ ವಿಜ್ಞಾನಿಗಳ ಹಿರಿಮೆ‌ ಹೆಚ್ಚಿಸಿದೆ. ಒಂದು ವೇಳೆ ಈ ಸಂಶೋಧನೆ ಯಶಸ್ವಿಯಾದರೆ ಮತ್ತೊಂದು ಮೈಲಿಗಲ್ಲು ಸ್ಥಾಪನೆ ಮಾಡಿದಂತೆ ಆಗುತ್ತದೆ. ಇಡೀ ವಿಶ್ವದಲ್ಲಿ ಯಾರೂ ಮಾಡಿರದ ಸಾಧನೆ ಮಾಡಲು ಕೃಷಿ ವಿವಿ ಹೊರಟಿದೆ.

Categories
ಕಾರ್ಕಳ

ಕೆಸರುಡೊಂಜಿ ದಿನದಲ್ಲಿ ಆಟ ಆಡಿ ಮಕ್ಕಳ ಸಂಭ್ರಮ!

ಕೆಸರುಡೊಂಜಿ ದಿನದಲ್ಲಿ ಆಟ ಆಡಿ ಮಕ್ಕಳ ಸಂಭ್ರಮ!
– ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ
– ಮಣ್ಣು ಕೇವಲ ಕೆಸರಲ್ಲ. ಬದಲಾಗಿ ಅದು ಬದುಕಿನ ಬುತ್ತಿ: ಅಶ್ವಥ್ ಎಸ್ ಎಲ್

NAMMUR EXPRESS NEWS
ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಹಿರ್ಗಾನದಲ್ಲಿ ಕೆಸರುಡೊಂಜಿ ದಿನದಲ್ಲಿ ಆಟ ಆಡಿ ಮಕ್ಕಳ ಸಂಭ್ರಮಪಟ್ಟರು.
ಫಲವತ್ತಾದ ಮಣ್ಣೇ ಶ್ರೇಷ್ಠ ಸಂಪತ್ತು. ಆ ಮಣ್ಣಿನೊಂದಿಗೆ ನಮಗೆ ಅವಿನಾಭಾವ ಸಂಬಂಧ ಇದ್ದಾಗ ಮಾತ್ರ ಕೆಸರೆಂಬುದು
ಆಪ್ತವಾಗುತ್ತಾ ಹೋಗುತ್ತದೆ. ರೈತನೇ ದೇಶವನ್ನು ಕಟ್ಟಬಲ್ಲವನು. ರೈತಾಪಿ ವರ್ಗ ನಿಷ್ಕ್ರಿಯವಾದರೆ ಬದುಕೇ ಇಲ್ಲ. ಆದ್ದರಿಂದ
ವಿದ್ಯಾರ್ಥಿಗಳು ರೈತರ ಕಷ್ಟ, ಕೃಷಿಯಿಂದ ಸಿಗುವ ಆನಂದ ಅನುಭವದ ಮೂಲಕ ಪಡೆಯಬೇಕು ಎಂದು ಹಿರ್ಗಾನ ಗ್ರಾಮ ಪಂಚಾಯತ್
ಮಾಜಿ ಅಧ್ಯಕ್ಷರಾದ ಸಂತೋಷ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪಶು ವೈದ್ಯರಾದ ಸಾಣರಿನ ್ಞಾನದೇವ ಅವರು ಇಂದು ಜಗತ್ತೇ
ವಿಷಮಯವಾಗುತ್ತಿದೆ. ಆಹಾರ ಪದಾರ್ಥಗಳೆಲ್ಲ ಕಲುಷಿತಗೊಂಡಿವೆ. ಇಂದಿನ ತುರ್ತು ಅಗತ್ಯ ಸಂಪೂರ್ಣ ಸಾವಯವ ಪ್ರಧಾನವಾದ
ಕೃಷಿ ನಡೆಸುವುದಾಗಿದೆ. ಕೃಷಿ ಕಷ್ಟಕರವಾದರೂ ಅದನ್ನು ಇಷ್ಟಪಟ್ಟು ಮಾಡಬೇಕಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವಥ್ ಎಸ್ ಎಲ್ ಮಾತನಾಡಿ, ಕೃಷಿ ಮೂಲವೇ ನಾಗರಿಕತೆಯ ಮೂಲ. ಮಣ್ಣು ಕೇವಲ ಕೆಸರಲ್ಲ. ಬದಲಾಗಿ ಅದು ಬದುಕಿನ ಬುತ್ತಿ. ಆಹಾರ ಪದ್ಧತಿ ಕೆಟ್ಟು ಹಿಂದಿನವರ ಆಹಾರ ಕ್ರಮ ಶ್ರೇಷ್ಠವೆಂಬುದನ್ನು ಅರಿಯಬೇಕಾಗಿದೆ ಎಂದರು.
ಸಹ ಸಂಸ್ಥಾಪಕರಾದ ಡಾ.ಬಿ.ಗಣನಾಥ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ
ವಿದ್ಯಾರ್ಥಿಗಳಿಗೆ ಜೀವನ ಕಲಿಕೆಯನ್ನು ರೂಢಿಸಿ ಕೃಷಿ ಚಟುವಟಿಕೆ ನಡೆಸುವ ಮೂಲಕ ಬದುಕಿನ ಪಾಠ ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳು
ಮಣ್ಣಿನ ಮಕ್ಕಳಾಗಬೇಕೆಂದು ಕರೆ ನೀಡಿದರು.
ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ .ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಕೃಷಿಕರಾದ ದಿನೇಶ್ ನಾಯಕ್ ಮತ್ತು ವಸಂತ ಪೂಜಾರಿ ಇವರನ್ನು
ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತುಳುನಾಡಿನ ವಿಶೇಷ ತಿಂಡಿ ತಿನಿಸುಗಳನ್ನು ಪರಿಚಯಿಸಲಾಯಿತು. ಸಭಾ ಕಾರ್ಯಕ್ರಮದ ನಂತರ
ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಉಪನ್ಯಾಸಕ ವರ್ಗದವರು,
ಊರ ಗಣ್ಯರು ಭಾಗವಹಿಸಿದ್ದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್. ಕೆ. ಕಾರ್ಯಕ್ರಮ ನಿರೂಪಿಸಿದರು. ಎನ್ ಎಸ್ ಎಸ್
ಸಂಯೋಜನಾಧಿಕಾರಿ ಉಮೇಶ್ ವಂದಿಸಿದರು.

ಸಮಾರೋಪ ಸಮಾರಂಭ

ಹಸಿರೊಡನೆ ಕಲಿಕೆಯ ಕಲರವ ಕ್ರಿಯೇಟಿವ್ ಕೆಸರ್ಡೊಂಜಿ ದಿನ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಸಂಪನ್ಮೂಲ
ವ್ಯಕ್ತಿಗಳಾಗಿ ಆಗಮಿಸಿದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಬಂಟ್ಸ್ ಕೋ ಆಪರೇಟಿವ್
ಸೊಸೈಟಿ ಜೋಡುರಸ್ತೆ, ಕಾರ್ಕಳ ಇಲ್ಲಿನ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಮುನಿಯಾಲು ಅವರು ಮಾತನಾಡಿ ಕೃಷಿ
ನಮ್ಮ ಮೂಲ ಸಂಸ್ಕೃತಿ ಎಂದು ತಿಳಿಸಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಕೆ ಯೋಗೀಶ್ ಕಿಣಿ, ಮುಖ್ಯೋಪಾಧ್ಯಾಯರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಲಾಯಿ ಬಾಕ್ಯಾರು, ತೆಳ್ಳಾರು ಇವರು ಕ್ರಿಯೇಟಿವ್ ಕಾಲೇಜಿನ ಸೃಜನಾತ್ಮಕ ಚಟುವಟಿಕೆಗಳ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕೃಷಿಯ ಮಹತ್ವವನ್ನು ಕುರಿತು
ತಿಳಿಸಿಕೊಟ್ಟರು. ಸಮಾರಂಭದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರುಗಳಾದ ಡಾ. ಬಿ ಗಣನಾಥ ಶೆಟ್ಟಿ, ಆದರ್ಶ ಎಂ. ಕೆ
ಉಪಸ್ಥಿತರಿದ್ದರು. ಹಿಂದಿ ಭಾಷಾ ಮುಖ್ಯಸ್ಥರಾದ ವಿನಾಯಕ ಜೋಗ್ ರವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು
ನಡೆಸಿಕೊಟ್ಟರು. ಡಾ. ಬಿ ಗಣನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಊರ ನಾಗರಿಕರು
ಭಾಗವಹಿಸಿದ್ದರು. ಕನ್ನಡ ಭಾಷಾ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕ್ಷಣಗಣನೆ

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕ್ಷಣಗಣನೆ
– ಯಾರಿಗೆ ಒಲಿಯುತ್ತೆ ಪ.ಪಂ. ಅಧ್ಯಕ್ಷಗಿರಿ?: ಒಂದು ಸ್ಥಾನಕ್ಕೆ ಒಂಭತ್ತು ಆಕಾಂಕ್ಷಿ ಸ್ಪರ್ಧೆ?
– ಕೊನೆ ಗಳಿಗೆಯಲ್ಲಿ ನಾಯಕರ ಮಾತಿಗೆ ಒಪ್ತಾರಾ ಸದಸ್ಯರು?

NAMMUR EXPREES NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಯ ಮುಂದಿನ 26 ತಿಂಗಳಿಗೆ ಅಧ್ಯಕ್ಷಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದ್ದು, ಆಗಸ್ಟ್ 27ರ ಮಂಗಳವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.
ಪ.ಪಂ.ನಲ್ಲಿ ಬಹುಮತ ಇರುವ ಕಾಂಗ್ರೆಸ್‌ ಒಂಭತ್ತು ಕೌನ್ಸಿಲರ್‌ಗಳು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ರಮೇಶ್, ಶಬ್ನಂ ಅವರಿಗೆ ಅವಧಿ ಹಂಚಿಕೆಯಾಗುವ ಸಾಧ್ಯತೆ ಇದೆ.

20 ವರ್ಷಗಳ ಬಳಿಕ ಬಹುಮತ ಪಡೆದ ಕಾಂಗ್ರೆಸ್

20 ವರ್ಷಗಳ ನಂತರ ಕಾಂಗ್ರೆಸ್ ಇಲ್ಲಿ ಬಹುಮತ ಪಡೆದಿದೆ. ಆಗಸ್ಟ್ 27ರಂದು ಚುನಾವಣೆಗೂ ಮುನ್ನ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಕಿಮ್ಮನೆ-ಆರ್‌ಎಂಎಂ ನೇತೃತವಲ್ಲಿ ಪಕ್ಷದ ಹಿರಿಯರು ಹಾಗೂ ಕಾಂಗ್ರೆಸ್ ಕೌನ್ಸಿಲರ್‌ಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಒಮ್ಮತದ ನಿರ್ಧಾರವಾಗುತ್ತೋ? ಅಧಿಕಾರ ಹಂಚಿಕೆ ಸೂತ್ರ ರೂಪುಗೊಳ್ಳುತ್ತೋ? ಅಥವಾ ಭಿನ್ನಾಭಿಪ್ರಾಯ ಸ್ಫೋಟವಾಗುತ್ತೋ ಎಂಬ ಕುತೂಹಲವಿದೆ.

ರೇಸ್ ಅಲ್ಲಿ ಯಾರು ಯಾರು?

ಹಿರಿಯ ಸದಸ್ಯ ರೆಹಮತ್ ಉಲ್ಲಾ ಅಸಾದಿ, ಜಯಪ್ರಕಾಶ್ ಶೆಟ್ಟಿ, ಮೊದಲ ಬಾರಿಗೆ ಗೆದ್ದರೂ ತಮ್ಮ ಕ್ರಿಯಾಶೀಲತೆಯಿಂದ ಗಮನ ಸೆಳೆದ ರತ್ನಾಕರ್ ಶೆಟ್ಟಿ ಈಗಾಗಲೇ ವರಿಷ್ಟರ ಬಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದರೂ ಸಾಮಾನ್ಯ ಕ್ಷೇತ್ರದಿಂದ ಗೆದ್ದ ಮಂಜುಳಾ ನಾಗೇಂದ್ರ ಕಾಂಗ್ರೆಸ್ ಪಕ್ಷ ಎಸ್‌ಸಿ ಸಮುದಾಯಕ್ಕೆ ಈ ಬಾರಿ ಅವಕಾಶ ಕಲ್ಪಿಸಿ ಸಾಮಾಜಿಕ ನ್ಯಾಯ ಪಾಲಿಸಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಅದೇ ರೀತಿ ಎಸ್‌ಟಿ ಸಮುದಾಯದ ಬಿ.ಗಣಪತಿ ಕಳೆದ 40 ವರ್ಷಗಳಿಂದ ಪಟ್ಟಣ ಪಂಚಾಯ್ತಿಯಲ್ಲಿ ಎಸ್‌ಟಿ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಕಾಂಗ್ರೆಸ್ ಪರಿಶಿಷ್ಟ ಪಂಗಡಕ್ಕೊಂದು ಅವಕಾಶ ನೀಡಬೇಕು. ನಾನು ಜಾತಿ-ಮೀಸಲಾತಿಯನ್ನು ಹೊರತು ಪಡಿಸಿಯೂ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಎಂಬ ವಾದವನ್ನು ಬಿ.ಗಣಪತಿ ಮಂಡಿಸುತ್ತಾರೆ. ನಮೃತ್, ಗೀತಾ ರಮೇಶ್, ಶಬ್ದಂ, ಸುಶೀಲಾ ಶೆಟ್ಟಿ ಅವರುಗಳೂ ಅರ್ಹರಿದ್ದಾರೆ.

–ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ಕಾರ್ಯಕರ್ತರ ಸಭೆ

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಂಬಂಧ ಮಹತ್ವದ ಚರ್ಚೆ ನಡೆಸುವ ಸಲುವಾಗಿ 27-8-2024 ಂದು ಮಂಗಳವಾರ, ಬೆಳ್ಗೆ 10 ಗಂಟೆಗೆ ಕಾಂಗ್ರೆಸ್ ಕಚೇರಿ (ಗಾಂಧಿ ಭವನ)ಯಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಅಧ್ಯಕ್ಷತೆಯನ್ನು ಕಾಂಗ್ರೆಸ್ ರಾಜ್ಯ ನಾಯಕರು, ಮಾಜಿ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ್ ವಹಿಸಲಿದ್ದಾರೆ. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಆರ್. ಪ್ರಸನ್ನ ಕುಮಾ‌ರ್, ಪಕ್ಷದ ನಾಯಕರಾದ ಎಂಎಡಿಬಿ ಅಧ್ಯಕ್ಷರಾದ ಡಾ. ಆರ್.ಎಂ. ಮಂಜುನಾಥ್ ಗೌಡರು, ಕೆಪಿಸಿಸಿ ವೀಕ್ಷಕರು ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀ ರಾಮೋಜಿ ಗೌಡ, ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀ ಕಲಗೋಡು ರತ್ನಾಕರ್ ಸೇರಿದಂತೆ ಪಕ್ಷದ ವರಿಷ್ಠರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರುಗಳು ಜನಪ್ರತಿನಿಧಿಗಳು, ಸರ್ಕಾರದ ನಾಮ ನಿರ್ದೇಶನ ಸದಸ್ಯರುಗಳು, ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಭಾಗವಹಿಸಬೇಕೆಂದು ಕೋರಲಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಬಾಲ ಭಾರತಿಯಿಂದ ರಕ್ಷಾ ಬಂಧನ್

ತೀರ್ಥಹಳ್ಳಿಯಲ್ಲಿ ಬಾಲ ಭಾರತಿಯಿಂದ ರಕ್ಷಾ ಬಂಧನ್
– ಭಾರತೀಯ ಯೋಗ ಶಿಕ್ಷಣ ಸಮಿತಿಯಿಂದ ಮಕ್ಕಳ ಶಿಬಿರ
– 150ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಉಚಿತ ಶಿಕ್ಷಣ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರೇರಣದಲ್ಲಿ ಬಾಲಭಾರತಿ ಮಕ್ಕಳ ವಿಕಾಸ ಶಿಬಿರದಲ್ಲಿ ಭಾನುವಾರ ರಕ್ಷಾ ಬಂಧನ್ ಕಾರ್ಯಕ್ರಮವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲ್ಲೂಕು ವಿಸ್ತಾರಕ್ ವೆಂಕಟೇಶ್ ಜೀ ಅವರು ಭಾಗವಹಿಸಿದ್ದರು. ರಾಷ್ಟ್ರ ಸೇವಿಕಾ ಸಮಿತಿಯ ತಾಲ್ಲೂಕು ಸಂಪರ್ಕ ಪ್ರಮುಖ್ ವಾಣಿ ನಿರಂಜನ್ ರಾವ್ ಅವರು ಶಿಬಿರದ ಮಕ್ಕಳಿಗೆ ರಕ್ಷಾ ಬಂಧನದ ಮಹತ್ವ ತಿಳಿಸಿ ರಕ್ಷಾ ಬಂಧನದ ಶ್ಲೋಕ ಮತ್ತು ರಕ್ಷಾ ಗೀತೆಯನ್ನು ಹೇಳಿಕೊಟ್ಟರು.
ಯೋಗ ಶಿಕ್ಷಕರಾದ ಯಶೋಧ ಕೃಷ್ಣಮೂರ್ತಿ ಅವರು ಯೋಗ ಮತ್ತು ಪ್ರಾಣಾಯಾಮದ ಅಭ್ಯಾಸವನ್ನು ಮಾಡಿಸಿದರು. ರಾಜರಾಜೇಶ್ವರಿ ನೃತ್ಯ ಕಲಾ ಶಿಕ್ಷಣದ ಮುಖಸ್ಥರಾದ ಅರುಂಧತಿ ಭಟ್ ಅವರು ನೃತ್ಯವನ್ನು ಹೇಳಿಕೊಟ್ಟರು.ಪ್ರಸ್ತುತ ಇಟಲಿಯ ಮಿಲಾನ್ ನಲ್ಲಿ ಎಂ ಎಸ್ ಅಭ್ಯಾಸ ಮಾಡುತ್ಿರುವ ಸಂಗೀತಗಾರ್ತಿ, ಚಿತ್ರಕಲಾಗಾರ್ತಿ ಹಾಗೂ ಭರತನಾಟ್ಯ ಕಲಾವಿದೆಯಾದ ರಚನ ಅವರು ನೈತಿಕ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟರು. ಕುಶಾವತಿ ನಿವಾಸಿಯಾದ ಶೋಭ ಪ್ರಶಾಂತ್, ರೇಣುಕ ಸದಾಶಿವ ಮತ್ತು ಸವಿನ ಪ್ರಶಾಂತ್ ಅವರು ಮಕ್ಕಳಿಗೆಲ್ಲಾ ಆಟಗಳನ್ನು ಆಡಿಸುವಲ್ಲಿ ಯಶಸ್ವಿಯಾದರು.
ಅಕ್ಟೋಬರ್ 10 ರಂದು ಬಾಲಭಾರತಿ ಶಿಬಿರವು ಯಶಸ್ವಿಯಾಗಿ ಮೂರನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಲಿದ್ದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಯೋಗ ಶಿಕ್ಷಣ, ಸಂಸ್ಕೃತ ಶಿಕ್ಷಣ, ನೈತಿಕ ಶಿಕ್ಷಣ, ಲಲಿತಕಲಾ ಶಿಕ್ಷಣ, ದೈಹಿಕ ಶಿಕ್ಷಣವನ್ನು ನುರಿತ ಅನುಭವಿ ತರಬೇತುದಾರರಿಂದ ನೀಡಲಾಗುತ್ತಿದ್ದು ಈ ವರೆಗೂ ಸುಮಾರು ,150ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಉಚಿತವಾಗಿ ಮಕ್ಕಳಿಗೆ ಶಿಕ್ಷಣವನ್ನು ನೀಡಿರುತ್ತಾರೆ.
ಬಾಲಭಾರತಿ ಶಿಬಿರವು ಭಾರತೀಯ ಯೋಗ ಶಿಕ್ಷಣ ಸಮಿತಿ ತೀರ್ಥಹಳ್ಳಿಯ ಸಹಯೋಗದೊಂದಿಗೆ ನಡೆಯುತ್ತಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೀರ್ಥಹಳ್ಳಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸಹಕಾರದಿಂದ ಈ ವರೆಗೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರಲು ಸಹಕಾರಿಯಾಗಿದೆ.

Categories
ಶಿವಮೊಗ್ಗ

ವಿದ್ಯಾಧರ ಗುರುಶಕ್ತಿ ಅವರು ಶಿಮೂಲ್ ಸಾರಥಿ!

ವಿದ್ಯಾಧರ ಗುರುಶಕ್ತಿ ಅವರು ಶಿಮೂಲ್ ಸಾರಥಿ!
– ಎರಡನೇ ಬಾರಿಗೆ ನೂತನ ಅಧ್ಯಕ್ಷರಾಗಿ ಆಯ್ಕೆ, ಉಪಾಧ್ಯಕ್ಷರಾಗಿ ಚೇತನ್ ಎಸ್ ನಾಡಿಗರ್
– ಕಾಂಗ್ರೆಸ್ ಅಧಿಕಾರ ಹಿಡಿದ ಶಿಮೂಲ್, ಆರ್.ಎಂ, ಬೇಳೂರು ನೇತೃತ್ವದಲ್ಲಿ ಆಯ್ಕೆ

NAMMUR EXPRESS NEWS
ಶಿವಮೊಗ್ಗ: ಕಾಂಗ್ರೆಸ್ ಮುಖಂಡರು, ಬ್ರಾಹ್ಮಣ ಸಮಾಜದ ರಾಜ್ಯ ಯುವ‌ ನಾಯಕರಾದ ವಿದ್ಯಾಧರ ಗುರುಶಕ್ತಿ ಅವರು ಪ್ರತಿಷ್ಠಿತ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ ಶಿಮೂಲ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಹೊಸನಗರದಿಂದ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ವಿದ್ಯಾಧರ ಗುರುಶಕ್ತಿ ಇವರು ( ಶಿಮುಲ್) ಗೆ ಮೂರನೇ ಬಾರಿ ನಿರ್ದೇಶಕರಾಗಿದ್ದರು. ಎರಡನೇ ಬಾರಿ ಅಧ್ಯಕ್ಷರಾಗಿ ಅವಿರೋಧವಾಗಿ ವಿಧ್ಯಾಧರ್ ಗುರುಶಕ್ತಿ ಹಾಗೂ ಉಪಾಧ್ಯಕ್ಷರಾಗಿ ದಾವಣಗೆರೆಯ ಚೇತನ್ ಎಸ್ ನಾಡಿಗರ್ ಇವರು ಕೂಡ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಕೂಡ ವಿದ್ಯಾಧರ ಗುರುಶಕ್ತಿ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ರಾಜ್ಯ ಕಾಂಗ್ರೆಸ್ ನಾಯಕರುಗಳ ಮಾರ್ಗದರ್ಶನದಲ್ಲಿ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಸಾಗರ ಕ್ಷೇತ್ರದ ಜನಪ್ರಿಯ ಶಾಸಕರು ಗೋಪಾಕೃಷ್ ಬೇಳೂರು ಮತ್ತು ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಮತ್ತು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಶಿಮೂಲ್ ನಿರ್ದೇಶಕರಾದ ಡಾ ಆರ್ ಎಂ ಮಂಜುನಾಥಗೌಡ ಅವರ ಸಾರಥ್ಯದಲ್ಲಿ ಎಲ್ಲಾ ನಿರ್ದೇಶಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಷ್ಠಿತ ಈ ಒಕ್ಕೂಟದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಗೆದ್ದುಕೊಂಡಿದ್ದಾರೆ.

Categories
ಕರಾವಳಿ

ಬೆಳ್ತಂಗಡಿ ನಿವೃತ್ತ ಶಿಕ್ಷಕನ ಕೊಲೆ ಮಾಡಿದ್ದು ಅಳಿಯ, ಮೊಮ್ಮಗ!

ಬೆಳ್ತಂಗಡಿ ನಿವೃತ್ತ ಶಿಕ್ಷಕನ ಕೊಲೆ ಮಾಡಿದ್ದು ಅಳಿಯ, ಮೊಮ್ಮಗ!
– ಆಸ್ತಿ ಪಾಲು ಮಾಡಿ ಕೊಡದ ಕಾರಣಕ್ಕೆ ಕೊಲೆ
– ಸುಳಿವು ನೀಡಿದ ಊಟ ಮಾಡಿ ಬಿಸಾಕಿದ ಬಾಳೆ ಎಲೆ!
!

NAMMUR EXPRESS NEWS
ಬೆಳ್ತಂಗಡಿ: ನಿವೃತ್ತ ಶಿಕ್ಷಕ ಕೊಲೆ ಪ್ರಕರಣ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಬಂಧಿಸಿದ್ದು, ಮಗಳ ಗಂಡ ಹಾಗೂ ಮಗಳ ಮಗನೆ ಹಂತಕರಾಗಿದ್ದಾರೆ.
ಮಗಳಿಗೆ ಆಸ್ತಿ- ಜಾಗ ಪಾಲು ಮಾಡಿ ಕೊಡದೇ ಇರುವ ಕಾರಣದಿಂದ ಕುಟುಂಬ ಸದಸ್ಯರಾದ ಅಳಿಯ ಮತ್ತು ಮೊಮ್ಮಗ ಸೇರಿ ಬಾಲಕೃಷ್ಣ ಭಟ್ ಅವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹಂತಕರಿಬ್ಬರನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಧರ್ಮಸ್ಥಳ ಪೊಲೀಸರು ಮೊಬೈಲ್, ಸಿಸಿ ಕ್ಯಾಮರ ಹಾಗೂ ವಿವಿಧ ಟೆಕ್ನಿಕಲ್‌ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೊಲೆಯಾದ ಬಾಲಕೃಷ್ಣ ಭಟ್(83) ಅವರ ಮಗಳ ಗಂಡ(ಆಳಿಯ) ರಾಘವೇಂದ್ರ ಕೆಧಿಲಾಯ(53) ಮತ್ತು ಮಗಳ ಮಗ (ಮೊಮ್ಮಗ) ಮುರುಳಿಕೃಷ್ಣ(20) ಎಂಬಾತನನ್ನು ಆ.24 ರದು ಕಾಸರಗೋಡು ಮನೆಯಲ್ಲಿ ಬಂಧಿಸಿದ್ದಾರೆ.
ಮೊದಲಿಗೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಬಾಲಕೃಷ್ಣ ಭಟ್ ಅವರನ್ನು ಆಸ್ತಿ ಹಾಗೂ ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆಳಿಯನ ಜೊತೆ ಬಂದಿದ್ದ ಮೊಮ್ಮಗ ಮೊದಲು ಮಾರಕಾಸ್ತ್ರದಿಂದ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದು ಆರೋಪಿಗಳಿಬ್ಬರನ್ನು ಕೋರ್ಟ್ ರಜೆ ಇರುವ ಕಾರಣದಿಂದ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಆ.24 ರಂದು ಸಂಜೆ ಹಾಜರುಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆ.27 ರಂದು ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ.

ಜೀವ ತೆಗೆದ ಚಿನ್ನ!

ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದ ಪತ್ನಿ ದಿ.ಯು.ಲೀಲಾ(75) ಅವರ ಚಿನ್ನವನ್ನು ಮಗಳಾದ ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದರು. ಇದೇ ಕಾರಣದಿಂದ ಬೇಸರಗೊಂಡಿದ್ದ ಬಾಲಕೃಷ್ಣ ಭಟ್ ಮಗಳು ವಿಜಯಲಕ್ಷ್ಮಿಯ ಗಂಡ ಕೃಷಿಕ ಹಾಗೂ ಜ್ಯೋತಿಷಿಯಾಗಿರುವ ರಾಘವೇಂದ್ರ ಕೆಧಿಲಾಯ(53) ಮತ್ತು ಮಗ ಮುರಳಿ ಕೃಷ್ಣ (20) ಹತ್ಯೆ ಮಾಡುವ ಯೋಜನೆ ರೂಪಿಸಿದ್ದಾರೆ. ಅಪ್ಪ-ಮಗ ಸೇರಿಕೊಂಡು ಕಾಸರಗೋಡು ಮನೆಯಿಂದ ಮಾರಕಾಸ್ತ್ರ ರೆಡಿ ಮಾಡಿಕೊಂಡು ನೇರ ವಿಜಯಲಕ್ಷ್ಮಿಯ ಸ್ಕೂಟರ್‌ನಲ್ಲಿ ರಾಘವೇಂದ್ರ ಕೆಧಿಲಾಯ ಮತ್ತು ಸ್ನೇಹಿತನ ಬೈಕ್ ನಲ್ಲಿ ಮುರುಳಿಕೃಷ್ಣ ಬಂದು ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದು ಸ್ಕೂಟರಿನಲ್ಲಿಯೇ ಅಪ್ಪ-ಮಗ ಬೆಳಾಲಿಗೆ ಬಂದು ಬಾಲಕೃಷ್ಣ ಭಟ್ ಮನೆ ಸೇರಿದ್ದಾರೆ. ಬಳಿಕ ಮಾವ ಮಾಡಿದ ಊಟ ಮಾಡಿ, ಚಾ ಕುಡಿದು ಮಾತನಾಡುತ್ತಿರುವಾಗಲೇ ಆಯುಧದಿಂದ ಮೊಮ್ಮಗ ಮುರುಳಿಕೃಷ್ಣ ಹಿಂಬದಿಯ ಕುತ್ತಿಗೆಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ ತಪ್ಪಿಸಿಕೊಂಡು ಮನೆಯ ಅಂಗಳಕ್ಕೆ ಬಂದಾಗ ಮತ್ತೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಅದಕ್ಕೆ ನಳ್ಳಿ ನೀರಿನ ಕೆಳಗೆ ಹಾಕಿದ್ದ ಹಾಸು ಕಲ್ಲು ತಲೆಯ ಮೇಲೆ ಇಟ್ಟು ಬಳಿಕ ಅಲ್ಲಿಂದ ಕೊಲೆಗಾರ ಅಳಿಯ-ಮೊಮ್ಗ ೇರ ಸ್ಕೂಟ‌ರ್ ಮೂಲಕ ಕಾಸರಗೋಡು ಮನೆ ಸೇರಿದ್ದಾರೆ. ಬಾಲಕೃಷ್ಣ ಭಟ್ ಅವರನ್ನು ಪತಿ- ಮಗ ಸೇರಿ ಕೊಲೆ ಮಾಡುವುದು ಅಥವಾ ಕೊಲೆ ಮಾಡಿದ್ದಾರೆ ಎಂದು ಪತ್ನಿ ವಿಜಯಲಕ್ಷ್ಮಿಗೆ ತಿಳಿದಿರಲಿಲ್ಲ. ಧರ್ಮಸ್ಥಳ ಪೊಲೀಸರು ಕಾಸರಗೋಡು ಮನೆಗೆ ಬಂದು ಪತಿ- ಮಗನನ್ನು ವಶಕ್ಕೆ ಪಡೆದ ಬಳಿಕ ಕೊಲೆ ಮಾಡಿದ ರಹಸ್ಯ ಬಯಲಾಗಿದೆ.

ಎರಡನೆ ಕೊಲೆ ಮೀಸ್!

ಬಾಲಕೃಷ್ಣ ಭಟ್ ಜೊತೆ ಕಿರಿಯ ಮಗ ಸುರೇಶ್ ಭಟ್ ನನ್ನು ಕೂಡ ಕೊಲೆ ಮಾಡಲು ಯೋಜನೆ ರೂಪಿಸಿ ಬಂದಿದ್ದರು. ಹಾಗೂ ಬಾಲಕೃಷ್ಣ ಭಟ್ ಕೊಲೆ ಬಳಿಕ ಸುರೇಂದ್ರ ಭಟ್ ಬರುವಿಕೆಗಾಗಿ ಸ್ವಲ್ಪ ಸಮಯ ಮನೆಯಲ್ಲಿ ಕಾದು ಕುಳಿತ್ತಿದ್ದರು. ಆದ್ರೆ ಬಾರದೆ ಇದ್ದಾಗ ಬಾಲಕೃಷ್ಣ ಭಟ್ ಅವರ 50 ಸಾವಿರದ ಎರಡು ಬಾಂಡ್ ಪೇಪರ್ ಹಾಗೂ ಕೆಲವು ದಾಖಲೆಗಳನ್ನು ಕಪಾಟಿನಿಂದ ಹಂತಕರು ತೆಗೆದುಕೊಂಡು ಬಂದ ದಾರಿಯಲ್ಲಿ ವಾಪಸ್ ತಮ್ಮ ಮನೆಗೆ ಸ್ಕೂಟರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಕುಟುಂಬದ ಹಿನ್ನೆಲೆ ಏನು?

ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್‌ಗೆ ಒಟ್ಟು ಮೂರು ಜನ ಮಕ್ಕಳು. ಮೊದಲ ಮಗ ಹರೀಶ್ ಭಟ್ ಬೆಂಗಳೂರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಎರಡನೇ ಮಗಳು ವಿಜಯಲಕ್ಷ್ಮಿ(49) ಇವರನ್ನು 22 ವರ್ಷದ ಹಿಂದೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮುಲ್ಲೇರಿಯಲ್ಲಿ ಕೃಷಿ ಹಾಗೂ ಜ್ಯೋತಿಷಿಯಾಗಿರುವ ರಾಘವೇಂದ್ರ ಕೆಧಿಲಾಯ(53) ಇವನಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ ಇವರಲ್ಲಿ ಮೊದಲ ಮಗ ಮುರಳಿಕೃಷ್ಣ (20) ಹಾಗೂ ಪಿಯುಸಿ ಓದುತ್ತಿರುವ ಮಗಳು ಇದ್ದಾರೆ. ಕಿರಿಯ ಮಗ ಸುರೇಶ್ ಭಟ್(48) ಅವಿವಾಹಿತನಾಗಿದ್ದು ಪುತ್ತೂರಿನಲ್ಲಿ ರಿಲಯನ್ಸ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುಳಿವು ನೀಡಿದ ಊಟ ಮಾಡಿ ಬಿಸಾಕಿದ ಬಾಳೆ ಎಲೆ!

ಕೊಲೆ ಬಳಿಕ ಮಂಗಳೂರು ಶ್ವಾನ ದಳ ತಂಡ ಘಟನಾ ಸ್ಥಳಕ್ಕೆ ಬಂದು ಮನೆಯೊಳಗಿಂದ ಆರೋಪಿಗಳ ಸುಳಿವಿಗಾಗಿ ವಾಸನೆ ಹಿಡಿದು ಅಂಗಳ, ಕೊಲೆಯಾಗಿ ಬಿದ್ದ ಜಾಗ ಹಾಗೂ ಊಟ ಮಾಡಿ ಬಾವಿ ಬಳಿ ತೆಂಗಿನ ಬುಡ್ಕ ಬಿಸಾಕಿದ ಎರಡು ಬಾಳೆ ಎಲೆ ಕಡೆಗೆ ಹೋಗಿ ಸುಳಿವು ನೀಡಿತ್ತು. ಬಳಿಕ ಅಲ್ಲಿಂದ ಆರೋಪಿಗಳು ರಸ್ತೆಗೆ ಹೋಗಿರುವ ಬಗ್ಗೆ ಸುಳಿವು ನೀಡಿತ್ತು ಪೊಲೀಸ್‌ ಇಲಾಖೆಯ ಶ್ವಾನ ಬ್ರೇವ್. ಪೊಲೀಸರಿಗೆ ಅಲ್ಲಿಯೇ ಮೊದಲ ಸುಳಿವು ಕುಟುಂಬದೊಳಗಿನವರೆ ಮನೆಗೆ ಬಂದು ಊಟ ಮತ್ತು ಚಾ ಕುಡಿದು ಕೃತ್ಯ ಎಸಗಿರುವ ಬಗ್ಗೆ ಗೊತ್ತಾಗಿದೆ. ಇದರಿಂದ ಕುಟುಂಬದ ಎಲ್ಲ ಸದಸ್ಯರ ಮೊಬೈಲ್‌ ನಂಬ‌ರ್ ಪಡೆದು ಕಾರ್ಯಾಚರಣೆ ನಡೆಸಿದಾಗ ಆಳಿಯ ಮತ್ತು ಮೊಮ್ಮಗ ಸಿಕ್ಕಿ ಬಿದ್ದಿದ್ದಾರೆ.

ಅಜ್ಜನ ಶವ ನೋಡಲು ಬಾರದ ಮೊಮ್ಮಗ!

ಬಾಲಕೃಷ್ಣ ಭಟ್ ಕೊಲೆ ಬಳಿಕ ಬೆಳಾಲು ಮನೆಗೆ ಆ.21 ರಂದು ಮಧ್ಯಾಹ್ನದ ಬಳಿಕ ಮೃತದೇಹ ನೋಡಲು ಮಗಳು ವಿಜಯಲಕ್ಷ್ಮಿ ಮತ್ತು ಆಳಿಯ ರಾಘವೇಂದ್ರ ಕೆಧಿಲಾಯ ಕಾರಿನಲ್ಲಿ ಬಂದಿದ್ದರು. ಮೊಮ್ಮಗ ಮುರುಳಿಕೃಷ್ಣ ಮಾತ್ರ ಬಂದಿರಲ್ಲಿಲ್ಲ. ವಿಚಾರಣೆಯಲ್ಲಿ ಬಾಲಕೃಷ್ಣ ಭಟ್ ಅವರನ್ನು ತಾವು ತಂದಿದ್ದ ಮಾರಕಾಸ್ತ್ರದಿಂದ ರಾಘವೇಂದ್ರ ಕೆಧಿಲಾಯ ಮಗ ಮುರುಳಿಕೃಷ್ಣ ಮಾತ್ರ ಕೊಚ್ಚಿ ಕೊಲೆ ಮಾಡಿದ್ದು ಇದನ್ನು ತಂದೆ ರಾಘವೇಂದ್ರ ಕೆಧಿಲಾಯ ನೋಡುತ್ತಾ ನಿಂತಿದ್ದ. ಬಳಿಕ ಕಪಾಟಿನಲ್ಲಿದ್ದ ದಾಖಲೆ ಪತ್ರ ಹಾಗೂ ಬಾಂಡ್ ಪೇಪ‌ರ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಪೊಲೀಸರ ಬಗ್ಗೆ ಮೆಚ್ಚುಗೆ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್.ಎನ್ ಮಾರ್ಗದರ್ಶನಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಸಬ್‌ ಇನ್ಸೆಕ್ಟರ್ ಕಿಶೋರ್.ಪಿ, ಸಬ್ ಇನ್ಸೆಕ್ಟರ್ ಸಮರ್ಥ್.ಆರ್.ಗಾಣಿಗೇರಾ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Categories
ಬೆಂಗಳೂರು

ಮಳೆ, ಬಿಸಿಲು: ಎಲ್ಲೆಡೆ ಜ್ವರ, ಶೀತ.. ಹುಷಾರು!

ಮಳೆ, ಬಿಸಿಲು: ಎಲ್ಲೆಡೆ ಜ್ವರ, ಶೀತ.. ಹುಷಾರು!
– ಟೈಫಾಯಿಡ್, ಜಾಂಡಿಸ್, ಜ್ವರ ಹೆಚ್ಚಳ
– ಆರೋಗ್ಯದ ಬಗ್ಗೆ ಇರಲಿ ಎಚ್ಚರ ಎಚ್ಚರ

NAMMUR EXPRESS NEWS
ಬೆಂಗಳೂರು: ಮಳೆ, ಬಿಸಿಲಿನ ಆಟ ಕಳೆದೊಂದು ತಿಂಗಳಿನಿಂದ ಎಲ್ಲೆಡೆ ಕಾಣುತ್ತಿದೆ. ಮಳೆ ಬಿಸಿಲು ಕಾರಣ ಅನೇಕ ರೋಗಗಳು ಉಲ್ಬಣಗೊಳ್ಳುತ್ತಿವೆ.
ಈಗಾಗಲೇ ರಾಜ್ಯದ ಎಲ್ಲೆಡೆ ಮಳೆ ಬಿಸಿಲಿನ ಆಟ ನಡೆಯುತ್ತಿದೆ. ಇದು ಜನರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿದೆ.
ಟೈಫಾಯಿಡ್, ಜಾಂಡಿಸ್, ಜ್ವರ, ಶೀತ ಹೆಚ್ಚಳವಾಗುತ್ತಿದೆ. ಹೀಗಾಗಿ ಆರೋಗ್ಯದ ಬಗ್ಗೆ ಜನ ಎಚ್ಚರಿಕೆ ವಹಿಸಬೇಕಿದೆ. ಇನ್ನು ಈ ಕಾರಣ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.