Categories
ಬೆಂಗಳೂರು

ದರ್ಶನ್ ಮೋಜು ಮಸ್ತಿ: ಈಗ ಮತ್ತೆ ಸಂಕಷ್ಟದತ್ತ!

ದರ್ಶನ್ ಮೋಜು ಮಸ್ತಿ: ಈಗ ಮತ್ತೆ ಸಂಕಷ್ಟದತ್ತ!
– ಮೊಬೈಲ್, ಸಿಗರೇಟ್: ಜೈಲು ಅಧಿಕಾರಿಗಳ ತಲೆ ದಂಡ
– ಕೊಲೆ ಕೇಸ್ ಸಿಬಿಐ ತನಿಖೆಗೆ ರೇಣುಕಾಸ್ವಾಮಿ ತಂದೆ ಪಟ್ಟು!

NAMMUR EXPRESS NEWS
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ನಟ ದರ್ಶನ್ ರೌಡಿ ಶೀಟರ್‌ಗಳೊಂದಿಗೆ ಬಿಂದಾಸ್ ಆಗಿ ಟೀ ಸೇವಿಸುತ್ತಾ, ಸಿಗರೇಟ್ ಸೇವನೆ ಮಾಡುತ್ತಿರುವ ಫೋಟೋ ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಈ ನಡುವೆ ಪೊಲೀಸ್ ಇಲಾಖೆ ಜೈಲು ಅಧಿಕಾರಿಗಳ ವಿರುದ್ಧ ತನಿಖೆಗೆ ಅದೇಶಿಸಿದ್ದಾರೆ.
ದುಡ್ಡು ಕೊಟ್ಟರೆ ಜೈಲು ರೆಸಾರ್ಟ್ ವಾತಾವರಣ ಕಲ್ಪಿಸಿಕೊಡುತ್ತೆ ಎಂಬುದಕ್ಕೆ ಈ ಫೋಟೋ ಸದ್ಯ ಸಾಕ್ಷಿಯಾಗಿದೆ.
ಜೈಲು ಅಧಿಕಾರಿಗಳ ಸಪೋರ್ಟ್ ಇದ್ದುದರಿಂದಲೇ ದರ್ಶನ್ ಅವರು ಜಾಲೊಯಾಗಿ ಕಾಫಿ ಕುಡಿಯುತ್ತ, ಕೈಯಲ್ಲಿ ಸಿಗರೇಟ್ ಹಿಡಿದಿರೋ ಫೋಟೋ ಹರಿದಾಡುತ್ತಿದೆ. ಅಷ್ಟೇ ಅಲ್ಲ, ವಿಡಿಯೋ ಕಾಲ್ ಮಾಡಿದ್ದ ವ್ಯಕ್ತಿ ಜೊತೆಗೂ ದರ್ಶನ್ ಮಾತಾಡಿರುವ ವಿಯೋ ವೈರಲ್ ಆಗಿದೆ.
ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವ ದರ್ಶನ್ ಪ್ರಕರಣ ಗಂಭೀರ ಆಗುತ್ತಿದೆ. ಅತ್ತ ಜೈಲು ಅಧಿಕಾರಿಯ ತಲೆದಂಡ ಕೂಡ ಆಗುತ್ತಾ? ಕಾದು ನೋಡಬೇಕಿದೆ.
ತನಿಖೆಗೆ ಆದೇಶ: ಆಂತರಿಕ ತನಿಖೆ ಮಾಡುವಂತೆ ಇದೀಗ ಪರಪ್ಪನ ಅಗ್ರಹಾರದ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ. ಇದರಿಂದ ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ರೌಡಿಗಳ ಜೊತೆ ದರ್ಶನ್ ಬಿಂದಾಸ್ ಆಗಿ ಹೇಗೆ ಇದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿ. ಸಿಸಿಟಿವಿ ಸಾಕ್ಷ್ಯಾಗಳನ್ನು ಸಂಗ್ರಹಿಸಿ, ಜೈಲು ಅಧಿಕಾರಿಗಳನ್ನು ವಿಚಾರಿಸಿ ವರದಿ ನೀಡಬೇಕು ಎಂದು ಪೊಲೀಸ್‌ ಅಧಿಕಾರಿಗಳಾದ ಆನಂದ ರೆಡ್ಡಿ ಮತ್ತು ಸೋಮಶೇಖ‌ರ್ ಅವರಿಗೆ ಆದೇಶ ಮಾಡಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಅಧಿಕಾರಿಗಳು ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ

ಸಿಬಿಐ ತನಿಖೆಗೆ ರೇಣುಕಾಸ್ವಾಮಿ ತಂದೆ ಪಟ್ಟು!

ಚಿತಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ
ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್, ಜೈಲಿನಲ್ಲಿ ಸಹಚರರ ಜೊತೆಗೆ ಕಾಫಿ ಮಗ್ ಹಾಗೂ ಸಿಗರೇಟ್ ಹಿಡಿದು ಹರಟೆ ಹೊಡೆಯುತ್ತಾ ಕುಳಿತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ರೇಣುಕಸ್ವಾಮಿ ತಂದೆ ಶಿವನಗೌಡರು ಕಣ್ಣಿರಿಟ್ಟು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಗನನ್ನು ಕಳೆದುಕೊಂಡು ದಿನದಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ. ನಮ್ಮ ಸೊಸೆ ಮುಖ ನೋಡಿದಾಗ ಸಂಕಟ ಆಗುತ್ತೆ. ಇಂತಹ ಹೊತ್ತಿನಲ್ಲಿ ಈ ಪೋಟೋ ನೋಡಿದಾಗ ಹೊಟ್ಟೆ ಉರಿಯುತ್ತಿದೆ. ತಪ್ಪು ಮಾಡಿರುವ ಭಾವನೆಯೇ ಇಲ್ಲದಂತೆ ಕುಳಿತಿದ್ದಾರೆ. ಇದನ್ನೆಲ್ಲಾ ನೋಡಿದಾಗ ಸಿಬಿಐ ತನಿಖೆ ಅನಿವಾರ್ಯ ಅನ್ನಿಸುತ್ತಿದೆ ಎಂದಿದ್ದಾರೆ.

7 ಮಂದಿ ಅಧಿಕಾರಿಗಳ ಅಮಾನತು

ದರ್ಶನ್ ಜೈಲಲ್ಲಿ ಮೋಜು ಪ್ರಕರಣದಲ್ಲಿ 7 ಮಂದಿಯ ತಲೆ ದಂಡವಾಗಿದೆ.ಶರಣಬಸವ ಅಮೀನ್ ಗಡ, ಪುಟ್ಟಸ್ವಾಮಿ, ಖಂಡೇವಾಲಾ, ಶ್ರೀಕಾಂತ್, ವೆಂಕಪ್ಪ, ವಾರ್ಡ‌ರ್ ಬಸಪ್ಪ, ಸಂಪತ್ ಸರಿದಂತೆ ಏಳು ಮಂದಿಯನ್ನು ಅಮಾನತು ಮಾಡಲಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಜೈಲಿನ ಹಿರಿಯ ಅಧಿಯಕಾರಿಗಳ ಬಗ್ಗೆ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.ಈ ಪ್ರಕರಣದಲ್ಲಿ ಜೈಲಿನ ಹಿರಿಯ ಅಧಿಕಾರಿಗಳು ಶಾಮೀಲು ಆಗಿರುವುದು ಗೊತ್ತಾದರೆ ಅವರನ್ನು ಕೂಡ ಅಮಾನತು ಮಾಡುತ್ತೇವೆ ಎಂದು ಹೇಳಿದರು. ಪೊಲೀಸ್‌ ಅಧಿಕಾರಿಗಳ ವಿರುದ್ಧ ಗರಂ ಆಗಿ ತನಿಖೆಗೆ ಸೂಚನೆ ನೀಡಿದ್ದಾರೆ.

Categories
ಚಿಕ್ಕಮಗಳೂರು

ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಬೆಂಕಿ: ಕಾರು ಭಸ್ಮ!

ಟಾಪ್ ನ್ಯೂಸ್ ಮಲ್ನಾಡ್

ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಬೆಂಕಿ: ಕಾರು ಭಸ್ಮ!
– ಶೃಂಗೇರಿಯ ಹೊಳೆಕೊಪ್ಪದಲ್ಲಿ ನಡೆದ ಘಟನೆ
– ಹೊಸನಗರ-ನಗರದಲ್ಲಿ ಕಾಡುಕೋಣಗಳ ಕಾಟ!
– ಸೊರಬ: ಅಡಿಕೆ ಮರಕ್ಕೆ ಔಷಧಿ ಹೊಡೆಯುವಾಗ ಸಾವು

NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಹೊಳೆಕೊಪ್ಪದಲ್ಲಿ ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ. ಕಾರಿನ ಗ್ಯಾಸ್ ಟ್ಯಾಂಕ್ ಸಿಡಿದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಹೊಸನಗರದಲ್ಲಿ ಕಾಡುಕೋಣಗಳ ಕಾಟ!

ಹೊಸ ನಗರ: ನಗರ ಭಾಗದ ಹಳ್ಳಿಗಳಲ್ಲಿ ಕಾಡುಕೋಣದ ಕಾಟ ಜಾಸ್ತಿ ಆಗಿದೆ. ರೈತರು ಬೆಳೆದ ಬೆಳೆಯನ್ನು ನಾಶಮಾಡುತ್ತಿವೆ.ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ರೈತರು ಅಗ್ರಹಿಸಿದ್ದಾರೆ. ಕೊಳೆರೋಗದಿಂದ ಅಡಿಕೆ ಉದುರುತ್ತಿದೆ. ಇನ್ನೊಂದೆಡೆ ಕಾಡುಕೋಣ ತೋಟ ನಾಶಮಾಡುತ್ತಿವೆ. ಹಾಗೆ ಕಷ್ಟ ಟ್ಟು ರೈತ ಗದ್ದೆ ನಾಟಿ ಮಾಡಿದರೆ ಅದು ಕಾಡುಕೋಣಗಳ ಪಾಲಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.

ಅಡಿಕೆ ಮರಕ್ಕೆ ಔಷಧಿ ಹೊಡೆಯುವಾಗ ಸಾವು

ಸೊರಬ: ಅಡಿಕೆ ಮರಗಳಿಗೆ ಔಷಧ ಸಿಂಪಡಿಸುವ ವೇಳೆ ವಿದ್ಯುತ್‌ ಪ್ರವಹಿಸಿ ರೈತ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೊರಬ ತಾಲೂಕು ಓಟೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಅಡಿಕೆ ಮರಗಳ ಹಿಂಗಾರಕ್ಕೆ ಕೊಳೆ ಔಷಧ ಸಿಂಪಡಿಸುವಾಗ ವಿದ್ಯುತ್‌ ತಂತಿಗೆ ಕೊಳೆ ಔಷಧ ತಗುಲಿದೆ. ಅದರಿಂದ ವಿದ್ಯುತ್‌ ಪ್ರವಹಿಸಿ ಆನವಟ್ಟಿ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶ್ರೀಕಾಂತ (35) ಮೃತಪಟ್ಟಿದ್ದಾರೆ.

Categories
ಚಿಕ್ಕಮಗಳೂರು

ಮತ್ತೆ ಒತ್ತುವರಿ ತೆರವು ವಿರುದ್ಧ ಹೋರಾಟ!

ಮತ್ತೆ ಒತ್ತುವರಿ ತೆರವು ವಿರುದ್ಧ ಹೋರಾಟ!
– ಶೃಂಗೇರಿಯಲ್ಲಿ ಬೃಹತ್ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ
– ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ

NAMMUR EXPRESS NEWS
ಶೃಂಗೇರಿ: ರಾಜ್ಯ ಸರ್ಕಾರದ ರೈತರ ಒತ್ತುವರಿ ತೆರವು ಆದೇಶ ವಿರೋಧಿಸಿ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಶೃಂಗೇರಿ ಕ್ಷೇತ್ರ ಬಂದ್ ಹಾಗೂ ಬೃಹತ್ ಪ್ರತಿಭಟನೆಯ ನಂತರವೂ ಸರ್ಕಾರ ರೈತರ ಒತ್ತುವರಿ ತೆರವಿಗೆ ಮುಂದಾಗಿರುವ ಸರ್ಕಾರದ ವಿರುದ್ಧ ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಿದ್ದಗೊಂಡಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಂಗಳೂರು ಇವರು ಎಲ್ಲಾ ಡಿಎಫ್ಓ ಗಳಿಗೆ ನೀಡಿದ ಆದೇಶ ಖಂಡಿಸಿ ಮಾಜಿ ಶಾಸಕ ಡಿ.ಎನ್ ಜೀವರಾಜ್ ಆಕ್ರೋಶ ವ್ಯಕ್ತಪಡಿಸಿ ಇಂದು ಆಗಸ್ಟ್ 26 ರ ಬೆಳಿಗ್ಗೆ 10:30 ಸೋಮವಾರದಂದು ಶೃಂಗೇರಿ ತಾಲೂಕು ಬಿಜೆಪಿ ನೇತೃತ್ವದಲ್ಲಿ ಕರೆಕೊಟ್ಟಿರುವ ಬೃಹತ್ ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲಾ ರೈತ ಬಾಂಧವರು,ರೈತ ಪರ ಸಂಘಟನೆಗಳು,ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕರೆ ನೀಡಿದರು. ಪ್ರತಿಭಟನಾ ಮೆರವಣಿಗೆ ಪ್ಟಣದ ುಖ್ಯ ಬಸ್ ನಿಲ್ದಾಣದಿಂದ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಾಗಿ ಸಂತೆ ಮಾರುಕಟ್ಟೆಯಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಶೃಂಗೇರಿ ತಾಲೂಕು ಬಿಜೆಪಿ ತಿಳಿಸಿದೆ.

Categories
ಹಬ್ಬಗಳು

ಕೃಷ್ಣನನಿಗಿಂದು ಜನ್ಮಾಷ್ಟಮಿ: ಎಲ್ಲೆಡೆ ಮಕ್ಕಳ ಸಂಭ್ರಮ

ಕೃಷ್ಣನನಿಗಿಂದು ಜನ್ಮಾಷ್ಟಮಿ: ಎಲ್ಲೆಡೆ ಮಕ್ಕಳ ಸಂಭ್ರಮ
– ಇಸ್ಕಾನ್, ಉಡುಪಿ ಸೇರಿ ಕೃಷ್ಣ ದೇವಾಲಯಗಳಲ್ಲಿ ಪೂಜೆ
– ಕೃಷ್ಣ ರಾಧೆ ವೇಷ ಸ್ಪರ್ಧೆ: ಸಮಸ್ತ ಜನತೆಗೆ ಶುಭಾಶಯಗಳು

NAMMUR EXPRESS NEWS
ಬಾಲಕನಾಗಿದ್ದಾಗ ಕೃಷ್ಣನ ತುಂಟತನದ ಆಟ ಯೌವನದ ಕೃಷ್ಣಲೀಲೆ ಕುರುಕ್ಷೇತ್ರದಲ್ಲಿ ಬುದ್ಧಿವಂತಿಕೆ ಕೃಷ್ಣನನ್ನು ಹೀಗೆ ಎಂದು ವರ್ಣಿಸಲಸಾಧ್ಯ ಕೃಷ್ಣ ನೋಡಲು ಸ್ತ್ರೀ ಲೋಲನಂತೆ ಕಂಡರೂ ಸಹೃದಯತೆ ಗೋಪಿಕೆಯರ ಗೋವಿಂದ ಸುಭದ್ರ ದ್ರೌಪದಿಯರ ಪ್ರತಿಕ್ಷಣ ಕಾಯುವ ಪ್ರೀತಿಯ ಸಹೋದರ ಯಶೋಧೆಯ ಮುದ್ದು ಕಂದಮ್ಮಸುಧಾಮ ಅರ್ಜುನರ ಪ್ರಿಯಮಿತ್ರ ಭಕ್ತರನ್ನು ಸಲಹುವ ಭಗವಂತ .
ಬಾಲ್ಯದಿಂದಲೂ ಬೆಣ್ಣೆಯೆಂದರೇ ಬಲು ಪ್ರೀತಿ ಯಶೋಧೆ ಬೆಣ್ಣೆ ಕಡೆಯುತ್ತಿದ್ದಂತೆ ಬೆಣ್ಣೆ ಕದ್ದು ತಿನ್ನುತ್ತಿದ್ದ ಬೆಣ್ಣೆ ನಿಲುಕದಂತೆ ಕದ್ದಿಟ್ಟರು ಹುಡುಕಿ ಕದ್ದು ತಿನ್ನುತ್ತಿದ್ದವ ಗೋಕುಲದಲ್ಲಿ ಬಾಲಕೃಷ್ಣ ಕಳ್ಳಕೃಷ್ಣ , ಬೆಣ್ಣೆಕೃಷ್ಣನಾಗಿದ್ದ.
ಆಟ ಆಡುವಾಗ ಮಣ್ಣು ತಿಂದ ಎಂದು ಗದರಿಸಿ ಬಾಯ ತೆರಸಿದ ಯಶೋಧೆ ಕೃಷ್ಣನ ಬಾಯಿಯಲ್ಲಿ ವಿಶ್ವವನ್ನೇ ನೋಡಿ ಕೃಷ್ಣ ಸಾಧಾರಣ ಬಾಲಕನಲ್ಲ ಎಂದು ಅರಿತಿದ್ದಳು.
ಭಾರತ ಮೊದಲೇ ಅವತಾರ ಪುರುಷರ ನಾಡು ಇಲ್ಲಿ ಅವತಾರ ಎತ್ತಿದ್ದವರ ನೆನಪನ್ನು ಹಬ್ಬದಂತೆ ಆಚರಿಸುವ ರೂಢಿ ನಮ್ಮ ಸನಾತನ ಸಂಸ್ಕೃತಿಯದ್ದು
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುವುದು
ಕೃಷ್ಣನ ಅವತಾರವೇ ಧರ್ಮ ಸಂಸ್ಥಾಪನೆಗೆ ದುಷ್ಟರ ನಾಶಕ್ಕಾಗಿ ಮಹಾವಿಷ್ಣು ಕೃಷ್ಣನ ಅವತಾರ ತಾಳಿ ಗರ್ಭ ಪ್ರವೇಶಿಸುವಾಗಲೇ ಕೃಷ್ಣನನ್ನು ಹೊಸಕಿ ಹಾಕುವ ಹುನ್ನಾರ ನಡೆದಿತ್ತು. ವಿಧಿಲಿಖಿತ ದೇವಕಿಗೆ ಯಾವುದೇ ಅಪಾಯಗಳು ಆಗಿರಲಿಲ್ಲ ದೇವಕಿಯ ಎಂಟನೇ ಮಗನಿಂದ ಸಾವು ಎಂದು ಕಂಸನಿಗೆ ಅಶರೀರವಾಣಿಯಿಂದ ತಿಳಿದಿದ್ದರಿಂದ ಕಂಸ ದೇವಕಿ ಮತ್ತು ವಸುದೇವನನ್ನು ಸೆರೆಮನೆಯಲ್ಲಿರಿಸಿದ್ದ ಕಾರಗೃಹ ಕೊಣೆಯಲ್ಲಿ ಗುಡುಗು ಸಿಡಿಲು ಆರ್ಭಟದ ನಡುವೆಯೂ ಪ್ರಕಾಶಮಾನವಾದ ತೇಜಸ್ಸಿನಿಂದ ಕೋಣೆಯೇ ಬೆಳಗಲಾರಂಭಿಸಿ ನೀಲ ಮೇಘ ಶ್ಯಾಮನ ಜನನವಾಗಿತ್ತು ಕೃಷ್ಣ ಹುಟ್ಟುತ್ತಿದ್ದಂತೆ ಕಾರಾಗೃಹದ ಕೊಠಡಿ ತೆರೆಯಿತು. ಅಲ್ಲಿಂದ ವಸುದೇವದ ಮಗುವನ್ನು ಗೋಕುಲಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿ ಯಮುನಾ ನದಿಯ ದಡಕ್ಕೆ ಬಂದಾಗ ಕೃಷ್ಣನ ಪಾದ ಸ್ಪರ್ಶದಿಂದ ಯಮುನಾ ನದಿ ಇಭ್ಭಾಗವಾಗಿ ಹರಿಯಲಾರಂಭಿಸಿತು. ಮಳೆ ಸುರಿಯುತ್ತಿದ್ದು ಶೇಷ ನಾಗಹೆಡೆ ಬಿಚ್ಚಿ ಮಳೆಯಿಂದ ಕೃಷ್ಣನಿಗೆ ರಕ್ಷಣೆ ನೀಡಿದ್ದ ವಸುದೇವ ಗೋಕುಲದಲ್ಲಿ ಯಶೋಧೆಯೊಡನೆ ಮಗುವನ್ನು ಬಿಟ್ಟು ಬಂದಿದ್ದ. ಗೋಕುಲದಲ್ಲಿ ನಂದ ಮತ್ತು ಯುಶೋಧೆ ಮಗುವಿಗೆ” ಕೃಷ್ಣ” ಎಂದು ನಾಮಕರಣ ಮಾಡಿದರು ಅಲ್ಲಿಂದ ಕೃಷ್ಣ ಗೋಕುಲ ಕೃಷ್ಣನಾಗಿದ್ದ .
ಕಾಳಿಂಗ ಮರ್ಧನ ಮಾಡಿದವ, ಅರಿಷ್ಟಾಸುರನಿಗೆ ಬುದ್ದಿಕಲಿಸಿದವ ಬ್ರಹ್ಮನಿಗೆ ಪಾಠ ಕಲಿಸಿದ ಕೃಷ್ಣ. ಗೋವರ್ಧನ ಿರಿಯನ್ನು ಿರುಬೆರಳಲ್ಲಿ ಎತ್ತಿ ಹಿಡಿದಿವ,ಅಘಾಸುರ ಚಾಣೂರ ಕಂಸನಂತಹ ರಾಕ್ಷಸ ಗುಣದವರ ಸಂಹರಿಸಿ ಧರ್ಮ ಸಂಸ್ಥಾಪನೆಗಾಗಿ ಜನಿಸಿದ ಅವತಾರ ಪುರುಷ.
ಕೃಷ್ಣ ಎಂದರೆ ಚೇಷ್ಟೆಗೆ ಪ್ರಸಿದ್ದಿ ಸಣ್ಣ ಮಗುವಾಗಿದ್ದಾಗ ಯಶೋಧೆಯ ಮಮತೆಯ ಹೊಳೆ ಹರಿಸಿದವ, ಮಿತ್ರನಾಗಿ ಸುಧಾಮನ ದಾರಿದ್ರ್ಯಾ ಪರಿಹರಿಸಿದವ, ತಮ್ಮನಾಗಿ ಬಲರಾಮನಿಗೆ ಜೊತೆಯಾದವ, ಗೊಲ್ಲನಾಗಿ ಗೋವುಗಳ ಪರಿಪಾಲಿಸಿದವ, ಕುರುಕ್ಷೇತ್ರದ ಗೀತಪ್ರದಾಯಕ ಮೀರಾಳಿಗೆ ಮಾದವನಾಗಿ, ಭಕ್ತ ಕುಂಬಾರನಿಗೆ ವಿಠ್ಠಲನಾಗಿ, ಬೆಣ್ಣೆಕೃಷ್ಣ, ಮುದ್ದುಕೃಷ್ಣ, ನೀಲ ಕೃಷ್ಣ ನಾಗಿ ಅವರವರ ಭಾವಕ್ಕೆ ತಕ್ಕಂತೆ ಬೇರೆ ಬೇರೆ ತೆರನಾಗಿ ಅವರು ಇಷ್ಟಪಟ್ಟ ರೀತಿಯಲ್ಲೇ ಅವತಾರಗಳನ್ನು ಎತ್ತಿ ನೂರು ತಪ್ಪುಗಳನ್ನು ಮನ್ನಿಸುವ ಸಮಾಧಾನ ಗುಣದವ ಧರ್ಮ ಪರಿಪಾಲನೆ ನಿಮಿತ್ತಮಾತ್ರನಾಗಿ ಜಗತ್ತನ್ನು ನೋಡುವ ಪರಿ ಧೀನರಿಗೆ ಸಹಾಯ ನೀಡುವ ಹಸ್ತವಾಗಿ ಮಿತ್ರತ್ವಕ್ಕಾಗಿ, ಗುರುವಾಗಿ ಮಾರ್ಗದರ್ಶಿಯಾಗಿ, ಧರ್ಮಕ್ಕಾಗಿ ಶಾಸ್ತ್ರವನೆತ್ತು ಎಂದು ಹೇಳುವ ಪರಮಾತ್ಮನಾದ ಶ್ರೀ ಕೃಷ್ಣನ ಜನ್ಮದಿನವನ್ನು ಜನ್ಮಾಷ್ಟಮಿಯಾಗಿ ಆಚರಿಸುತ್ತೇವೆ.
ಈಗಾಗಲೇ ಉಡುಪಿ ಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ಎಲ್ಲಾ ಕೃಷ್ಣ ದೇವಾಲಯಗಳಲ್ಲಿ ಪೂಜೆ ನಡೆಯುತ್ತಿದೆ.
ಮಕ್ಕಳು ಸಂಭ್ರಮದಿಂದ ಕೃಷ್ಣ ರಾಧೆ ವೇಷ ಹಾಕಿದ್ದಾರೆ.

ಸಮಸ್ತ ಜನತೆಗೆ ಶುಭಾಶಯಗಳು

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಶ್ರೀಕೃಷ್ಣನ ಅನುಗ್ರಹದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಾತಿನಲ್ಲಿ ಸೌಮ್ಯತೆ ಇರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ಮನಸ್ಸಿನಲ್ಲಿ ನಕಾರಾತ್ಮಕತೆಯ ಪ್ರಭಾವ ಹೆಚ್ಚಾಗಬಹುದು. ನಿಮ್ಮ ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ. ಪ್ರಗತಿಯ ಅವಕಾಶಗಳು ಇರಬಹುದು. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ.

** ವೃಷಭ ರಾಶಿ :
ಅಧಿಕ ಖರ್ಚು ಇರುತ್ತದೆ. ಹಣದ ಕೊರತೆಯ ಪರಿಸ್ಥಿತಿ ಇನ್ನೂ ಮುಂದುವರಿಯುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಂಗಾತಿಯಿಂದ ಬೆಂಬಲವಿರುತ್ತದೆ. ಕೆಲಸದ ಸ್ಥಳದಲ್ಲಿ ನೀವು ಂದರೆಗಳನ್ನು ಎದುರಿಸಬಹುದು. ಕಠಿಣ ಪರಿಶ್ರಮ ಇರುತ್ತದೆ. ಖರ್ಚುಗಳು ಹೆಚ್ಚಾಗಬಹುದು. ಹೆಚ್ಚಿನ ಶ್ರಮ ಇರುತ್ತದೆ. ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ.

** ಮಿಥುನ ರಾಶಿ
ಇಂದು ಮಿತ್ರರ ನೆರವಿನಿಂದ ಆದಾಯ ಹೆಚ್ಚಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕುಟುಂಬದಿಂದ ಬೆಂಬಲ ಸಿಗಲಿದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ, ಆದರೆ ಪರಸ್ಪರ ಅಪಶ್ರುತಿಯನ್ನು ತಪ್ಪಿಸಿ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಧಿಕ ಖರ್ಚು ಇರುತ್ತದೆ.

** ಕರ್ಕಾಟಕ ರಾಶಿ :
ನಿಮ್ಮ ಮಾತಿನ ಪ್ರಭಾವದಿಂದ, ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗ ಪರೀಕ್ಷೆಗಳು ಮತ್ತು ಸಂದರ್ಶನಗಳು ಇತ್ಯಾದಿಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಆದಾಯ ಹೆಚ್ಚಲಿದೆ. ಕುಟುಂಬದ ಮಹಿಳೆಯಿಂದ ನೀವು ಹಣವನ್ನು ಪಡೆಯಬಹುದು. ಅತಿಯಾದ ಕೋಪವನ್ನು ತಪ್ಪಿಸಿ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ.

** ಸಿಂಹ ರಾಶಿ :
ಮನಸ್ಸು ಸಂತೋಷದಿಂದ ಕೂಡಿರುತ್ತದೆ, ಆದರೆ ಅನಗತ್ಯ ಕೋಪದಿಂದ ದೂರವಿರಿ. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ವ್ಯಾಪಾರಕ್ಕಾಗಿ ವಿದೇಶಕ್ಕೆ ಹೋಗಬಹುದು. ಆತ್ಮವಿಶ್ವಾಸ ಹೆಚ್ಚಲಿದೆ. ವ್ಯಾಪಾರವು ವೇಗವನ್ನು ಪಡೆಯಬಹುದು. ಸ್ನೇಹಿತರ ಸಹಾಯದಿಂದ ನೀವು ಉದ್ಯೋಗಾವಕಾಶಗಳನ್ನು ಪಡೆಯಬಹುದು. ತಾಳ್ಮೆ ಕಡಿಮೆಯಾಗಲಿದೆ.

** ಕನ್ಯಾ ರಾಶಿ :
ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಕೋಪವನ್ನು ತಪ್ಪಿಸಿ. ವೈದ್ಯಕೀಯ ವೆಚ್ಚಗಳು ಹೆಚ್ಚಾಗಬಹುದು. ವ್ಯಾಪಾರಕ್ಕೆ ವಿದೇಶ ಪ್ರಯಾಣ ಲಾಭದಾಯಕವಾಗಿರುತ್ತದೆ. ಪೂರ್ಣ ವಿಶ್ವಾಸ ಇರುತ್ತದೆ. ಅತಿಯಾದ ಉತ್ಸಾಹದಿಂದ ದೂರವಿರಿ. ದಾಂಪತ್ಯ ಸುಖ ಹೆಚ್ಚಲಿದೆ. ಕುಟುಂಬದಲ್ಲಿ ಗೌರವ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರುತ್ತವೆ. ಪೋಷಕರು ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು.

** ತುಲಾ ರಾಶಿ :
ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ ಜೀವನ ಅಸ್ತವ್ಯಸ್ತವಾಗುತ್ತದೆ. ಕೆಲಸದ ವ್ಯಾಪ್ತಿಯಲ್ಲಿ ಬದಲಾವಣೆಯಾಗಹುದು. ೆಲವು ಅಪರಿಚಿತ ಭಯದಿಂದ ನೀವು ತೊಂದರೆಗೊಳಗಾಗಬಹುದು. ನೀವು ನಿಮ್ಮ ಸಹೋದರರೊಂದಿಗೆ ಕೆಲವು ಧಾರ್ಮಿಕ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು. ಸಂಗಾತಿಯ ಆರೋಗ್ಯ ಸುಧಾರಿಸುತ್ತದೆ. ಭರವಸೆ ಮತ್ತು ಹತಾಶೆಯ ಮಿಶ್ರ ಭಾವನೆಗಳು ಮನಸ್ಸಿನಲ್ಲಿ ಉಳಿಯುತ್ತವೆ.

** ವೃಶ್ಚಿಕ ರಾಶಿ :
ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ತಾಯಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ವಾಹನ ಸೌಕರ್ಯದಲ್ಲಿ ಕಡಿತ ಉಂಟಾಗಬಹುದು. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು.

** ಧನಸ್ಸು ರಾಶಿ :
ನಿಮ್ಮ ಮನಸ್ಸಿನಲ್ಲಿ ಹತಾಶೆಯ ಭಾವನೆಗಳು ಇರಬಹುದು. ಧರ್ಮದ ಮೇಲಿನ ಶ್ರದ್ಧೆ ಹೆಚ್ಚಾಗುತ್ತದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಬರವಣಿಗೆ ಮತ್ತು ಬೌದ್ಧಿಕ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಆತ್ಮವಿಶ್ವಾಸ ಹೆಚ್ಚಲಿದೆ. ನೀವು ಕೆಲಸದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು. ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ.

** ಮಕರ ರಾಶಿ :
ಇಂದು ಕೆಲಸದ ವ್ಯಾಪ್ತಿಯಲ್ಲಿ ಬದಲಾವಣೆಯಾಗಬಹುದು. ಹೆಚ್ಚಿನ ಶ್ರಮ ಇರುತ್ತದೆ. ವಿದೇಶ ಪ್ರವಾಸ ಮಾಡುವ ಅವಕಾಶ ಸಿಗಬಹುದು. ಪ್ರಯಾಣ ಲಾಭದಾಯಕವಾಗಲಿದೆ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಲಿದೆ. ಮಾತಿನಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ವ್ಯಾಪಾರ ನಿಮಿತ್ತ ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ.

** ಕುಂಭ ರಾಶಿ :
ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯ ಕಡಿಮೆಯಾಗಬಹುದು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ನೀವು ಕುಟುಂಬದಿಂದ ದೂರ ಉಳಿಯಬೇಕಾಗಬಹುದು. ಖರ್ಚು ಹೆಚ್ಚಾಗಲಿದೆ. ಆದರೆ ಮನಸ್ಸು ಸಂತೋಷವಾಗಿರುತ್ತದೆ. ನೀವು ಸ್ನೇಹಿತರಿಂದ ಹೊಸ ವ್ಯವಹಾರದ ಪ್ರಸ್ತಾಪವನ್ನು ಪಡೆಯಬಹುದು. ನಿಮ್ಮ ತಂದೆಯಿಂದ ನೀವು ಆರ್ಥಿಕವಾಗಿ ಲಾಭ ಪಡೆಯಬಹುದು. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ.

** ಮೀನ ರಾಶಿ :
ಇಂದು ಸ್ವಯಂ ನಿಯಂತ್ರಣದಲ್ಲಿರಿ. ಕೋಪವನ್ನು ತಪ್ಪಿಸಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಪೂರ್ವಿಕರ ವ್ಯವಹಾರವನ್ನು ಪುನರಾರಂಭಿಸಬಹುದು. ಆಸ್ತಿಯಿಂದ ಆದಾಯ ಹೆಚ್ಚಾಗುತ್ತದೆ. ಮನಸ್ಸು ವಿಚಲಿತವಾಗಬಹುದು. ತಂದೆಯ ಸಹವಾಸ ಸಿಗಲಿದೆ. ಧಾರ್ಮಿಕ ಸ್ಥಳಕ್ಕೆ ಪ್ರವಾಸನ್ನು ೋಜಿಸಬಹುದು. ಕೋಪದ ಕ್ಷಣಗಳು ಮತ್ತು ಸಮಾಧಾನದ ಕ್ಷಣಗಳು ಇರುತ್ತವೆ.

Categories
ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ

ಶಿವಮೊಗ್ಗ ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ
– ನೂತನ ಪದಾಧಿಕಾರಿಗಳ ಆಯ್ಕೆ: ಉಪಾಧ್ಯಕ್ಷರಾಗಿ ಕೀಗಡಿ ಪುಟ್ಟಸ್ವಾಮಿ
– ಕಾರ್ಯದರ್ಶಿಯಾಗಿ ಅಶಿತ್ ಬಳಗಟ್ಟೆ, ಸಹ ಕಾರ್ಯದರ್ಶಿಯಾಗಿ ಸುಮಿತ್ರಾ ಕೇಶವಮೂರ್ತಿ, ಖಜಾಂಚಿಯಾಗಿ ಸುಂದರೇಶ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಸುದರ್ಶನ್ ತಾಯಿಮನೆ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಒಕ್ಕಲಿಗ ನಾಯಕ ಬಿ.ಎ ರಮೇಶ್ ಹೆಗ್ಡೆ ಆಯ್ಕೆ ಆಗಿದ್ದಾರೆ. ಇತ್ತೀಚಿಗೆ ಅವರು ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ.
ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಮೂಲದ ರಮೇಶ್ ಹೆಗ್ಡೆ ಅವರು, ಮೇಗರವಳ್ಳಿ ಮೂಲದವರಾಗಿದ್ದು, ಶಿವಮೊಗ್ಗದ ಹಾಲಿ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಪಾಧ್ಯಕ್ಷರಾಗಿ ಕೀಗಡಿ ಪುಟ್ಟಸ್ವಾಮಿ, ಕಾರ್ಯದರ್ಶಿಯಾಗಿ ಅಶಿತ್ ಬಲಗಟ್ಟೆ, ಸಹ ಕಾರ್ಯದರ್ಶಿಯಾಗಿ ಸುಮಿತ್ರಾ ಕೇಶವಮೂರ್ತಿ, ಖಜಾಂಚಿಯಾಗಿ ಸುಂದರೇಶ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಸುದರ್ಶ್ ತಾಯಿಮನೆ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳಿಗೆ ಎಲ್ಲಾ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.

Categories
ಬೆಂಗಳೂರು

ರಾಜಧಾನಿಯಲ್ಲಿ ಮಲೆನಾಡ ತಲ್ಲಣದ ಚರ್ಚೆ!

ರಾಜಧಾನಿಯಲ್ಲಿ ಮಲೆನಾಡ ತಲ್ಲಣದ ಚರ್ಚೆ!
– ಸಹ್ಯಾದ್ರಿ ಸಂಘ ಸೇರಿ ಮಲೆನಾಡು ಮೂಲದ ಸಂಘಟನೆಗಳ ಆಯೋಜನೆ
– ಮಲೆನಾಡಿನಲ್ಲಿ ಭೂಹಕ್ಕು ಮತ್ತು ಅರಣ್ಯ ಕಾಯ್ದೆಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿ
– ನೀವೂ ಭಾಗವಹಿಸಿ…ನಿಮ್ಮ ಸಮಸ್ಯೆ ಬಗ್ಗೆ ಚರ್ಚೆ ಮಾಡಿರಿ

NAMMUR EXPRESS NEWS
ಬೆಂಗಳೂರು: ಸಹ್ಯಾದ್ರಿ ಸಂಘ ಬೆಂಗಳೂರು ಸೇರಿ ಮಲೆನಾಡು ಮೂಲದ ಸಂಘಟನೆಗಳು ಮಲೆನಾಡಿನಲ್ಲಿ ಭೂಹಕ್ಕು ಮತ್ತು ಅರಣ್ಯ ಕಾಯ್ದೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಾರ್ಗೋಪಾಯಗಳು ಬಗ್ಗೆ ವಿಚಾರಗೋಷ್ಠಿಯನ್ನು ಆ. 25ರಂದು ಬೆಂಗಳೂರಲ್ಲಿ ಆಯೋಜಿಸಿವೆ.
ಅಧ್ಯಕ್ಷತೆಯನ್ನು ಮಾಜಿ ಗೃಹ ಸಚಿವರು ಮತ್ತು ಶಾಸಕರು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಅರಗ ಜ್ಞಾನೇಂದ್ರ, ಮುಖ್ಯ ಅತಿಥಿಗಳಾಗಿ ಟಿ. ಡಿ ರಾಜೇಗೌಡ ಅಧ್ಯಕ್ಷರು ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಬೆಂಗಳೂರು ಮತ್ತು ಶಾಸಕರು ಶೃಂಗೇರಿ ವಿಧಾನ ಸಭಾ ಕ್ಷೇತ್ರ ಭಾಗವಹಿಸಲಿದ್ದಾರೆ.
ಪ್ರಧಾನ ಭಾಷಣಕಾರರಾಗಿ ಪ್ರೊ. ಕಮ್ಮರಡಿ ಪ್ರಕಾಶ್
(ಕೃಷಿ ತಜ್ಞರು ಹಾಗೂ ಮಾಜಿ ಅಧ್ಯಕ್ಷರು ಕೃಷಿ ಬೆಲೆ ಆಯೋಗ )ಬೆಂಗಳೂರು, ಾ. ವಿಠಲ್ ಹೆಗ್ಡೆ ಕಲ್ಕುಳಿ ಶೃಂಗೇರಿ ಖ್ಯಾತ ಪರಿಸರವಾದಿಗಳು ಮತ್ತು ರೈತ ಹೋರಾಟಗಾರರು ಬಿ ಎಂ. ರಮೇಶ್ ಹೆಗ್ಡೆ ಸಾಮಾಜಿಕ ಕಾರ್ಯಕರ್ತರು ಮತ್ತು ಮಾಜಿ ಅಧ್ಯಕ್ಷರು ನಗರ ಸಭೆ, ಶಿವಮೊಗ್ಗ ಇವರು ಭಾಗಿಯಾಗಲಿದ್ದಾರೆ.
ದಿನಾಂಕ 25-08-24 ಭಾನುವಾರ,ಬೆಳಿಗ್ಗೆ 11 ಕ್ಕೆ
ಸ್ಥಳ : ಶಾಸಕರ ಭವನ ಕಟ್ಟಡ 2, ಸಮ್ಮೇಳನ ಸಭಾಂಗಣ ಬೆಂಗಳೂರು

ಯಾವ ಯಾವ ಸಂಘಟನೆಗಳ ಸಹಯೋಗ?

ಮಲೆನಾಡು ಸಂಘ, ಬೆಂಗಳೂರು | ಮಲೆನಾಡು ಮಿತ್ರ ವೃಂದ ಬೆಂಗಳೂರು | ಮಲೆನಾಡು ಹಿತರಕ್ಷಣಾ ವೇದಿಕೆ ಬೆಂಗಳೂರು ಮಲೆನಾಡು ಕ್ರೆಡಿಟ್ ಕೊ. ಅಪರೇಟಿವ್ ಸೊಸೈಟಿ ಬೆಂಗಳೂರು | ಸುವರ್ಣ ಮಲೆನಾಡು ಸಂಘ ಬೆಂಗಳೂರು ಅಡಿಕೆನಾಡು ಕೋ- ಅಪರೇಟಿವ್ ಸೊಸೈಟಿ ಬೆಂಗಳೂರು | ಆಗುಂಬೆ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಬೆಂಗಳೂರು ಇವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಲೆನಾಡಿನ ಸರ್ವರಿಗೂ ಈ ಕಾರ್ಯಕ್ರಮಕ್ಕೆ ಸ್ವಾಗತಿಸಲಾಗಿದೆ.

Categories
ಕಾರ್ಕಳ

ಗ್ಯಾಂಗ್‌ರೇಪ್‌ ಪ್ರಕರಣದ ತನಿಖೆ ಎನ್‌ಐಎಗೆ ಒಪ್ಪಿಸಲು ಪಟ್ಟು!

ಗ್ಯಾಂಗ್‌ರೇಪ್‌ ಪ್ರಕರಣದ ತನಿಖೆ ಎನ್‌ಐಎಗೆ ಒಪ್ಪಿಸಲು ಪಟ್ಟು!
– ಕಾರ್ಕಳ ಪ್ರಕರಣ: ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ
– ಅಂತಾರಾಷ್ಟ್ರೀಯ ಜಿಹಾದಿ ಡ್ರಗ್ಸ್‌ ಜಾಲ ಶಾಮೀಲಾಗಿರುವ ಶಂಕೆ

NAMMUR EXPRESS NEWS
ಕಾರ್ಕಳ : ಕಾರ್ಕಳದ ಅತ್ಯಾಚಾರ ಪ್ರಕರಣ ಇದೀಗ ಭಾರೀ ಹೋರಾಟಕ್ಕೆ ಕಾರಣವಾಗಿದೆ.
ಕುಕ್ಕುಂದೂರು ಅಯ್ಯಪ್ಪ ನಗರ ಗರಡಿ ಬಳಿ ಪರಿಶಿಷ್ಟ ಪಂಗಡದ ಯುವತಿಯನ್ನು ಕೆಲ ದುಷ್ಕರ್ಮಿಗಳು ಪುಸಲಾಯಿಸಿ, ಮಾದಕ ವಸ್ತು ಒತ್ತಾಯಪೂರ್ವಕವಾಗಿ ಸೇವಿಸುವಂತೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಕೃತ್ಯದಲ್ಲಿ ಶಾಮೀಲಾಗಿರುವ ಎಲ್ಲ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಆಗ್ರಹಿಸಿದೆ. ಈ ಘಟನೆಯಿಂದ ಸಮಾಜದಲ್ಲಿ ಮಹಿಳೆಯರಿಗೆ ಭಯದ ವಾತಾವರಣ ಉಂಟಾಗಿದ್ದು, ಈ ಜಿಹಾದಿ ಕೃತ್ಯವನ್ನು ಎಸಗಿದವರು ಕ್ರಿಮಿನಲ್ ಹಿನ್ನೆಲೆಯವರಾಗಿರುವ ಸಂಶಯವಿದೆ. ಇದೊದು ಪೂರ್ವಯೋಜಿತ ಕೃತ್ಯ ಎಂದು ಕಂಡುಬರುತ್ತದೆ. ಈ ಪೈಶಾಚಿಕ ಕೃತ್ಯದ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಇದೆ. ಹೀಗಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾದ ತನಿಖೆಗಾಗಿ ಪ್ರಕರಣವನ್ನು ರಾಷ್ಟ್ರೀ ತನಿಖಾ ದಳಕ್ಕೆ (ಎನ್‌ಐಎ)ಗೆ ಒಪ್ಪಿಸಬೇಕೆಂದು ಒತ್ತಾಯಿಸಿದೆ.
ಕಾರ್ಕಳದಲ್ಲಿ ಕಾಲೇಜು ಕ್ಯಾಂಪಸ್‌ಗಳ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವ ಬಗ್ಗೆ ಈ ಮೊದಲು ಕೂಡ ಪತ್ರಿಕೆಗಳಲ್ಲಿ ಬಂದಿರುತ್ತದೆ. ಆದರೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳದಿರುವುದು ಖೇದಕರ. ಈ ಬಗ್ಗೆ ಇಲಾಖೆ ಮೊದಲೇ ಎಚ್ಚೆತ್ತುಕೊಳ್ಳುತ್ತಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಪೊಲೀಸ್‌ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಯುವತಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದೆ.

Categories
ಉಡುಪಿ

ಉಡುಪಿ ನಗರಸಭೆ ನೂತನ ಸಾರಥಿಗಳು!

ಉಡುಪಿ ನಗರಸಭೆ ನೂತನ ಸಾರಥಿಗಳು!
– ಅಧ್ಯಕ್ಷರಾಗಿ ಬಿಜೆಪಿಯ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆಯಾಗಿ ರಜನಿ ಹೆಬ್ಬಾರ್ ಆಯ್ಕೆ
– ನೂತನ ಸಾರಥಿಗಳಿಗೆ ಅಭಿನಂದನೆಗಳು

NAMMUR EXPRESS NEWS
ಉಡುಪಿ: ಉಡುಪಿ ನಗರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷೆಯಾಗಿ ರಜನಿ ಹೆಬ್ಬಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು. ಈ ಎರಡು ಸ್ಥಾನಗಳಿಗೆ ಕ್ರಮವಾಗಿ ಗುಂಡಿಬೈಲು ವಾರ್ಡ್ ನ ಪ್ರಭಾಕರ ಪೂಜಾರಿ ಹಾಗೂ ಒಳಕಾಡು ವಾರ್ಡ್ ನ ರಜನಿ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದರು.
ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿ ಘೋಷಿಸಿದರು.
ಪ್ರಭಾಕರ ಪೂಜಾರಿ ಗುಂಡಿಬೈಲು ವಾರ್ಡ್ ನಿಂದ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ರಜಿನಿ ಹೆಬ್ಬಾರ್ ಒಳಕಾಡು ವಾರ್ಡ್ ನಿಂದ ಮೊದಲ ಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಒ್ಟು 35 ಸಂಖ್ಯಾಬಲ ಇರುವ ನಗರಸಭೆಯಲ್ಲಿ ಬಿಜೆಪಿ 32 ಹಾಗೂ ಕಾಂಗ್ರೆಸ್ 3 ಸದಸ್ಯರನ್ನು ಹೊಂದಿದೆ.
ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್‌ ಚಂದ್ರ ಅವರು ಈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

Categories
ಬೆಂಗಳೂರು

ಸರ್ಕಾರದ ಎಲ್ಲಾ ಬೋರ್ಡ್ ಕನ್ನಡ ಕಡ್ಡಾಯ

ಸರ್ಕಾರದ ಎಲ್ಲಾ ಬೋರ್ಡ್ ಕನ್ನಡ ಕಡ್ಡಾಯ
– ತೀರಾ ಅವಶ್ಯಕತೆ ಇದ್ರೆ ಮಾತ್ರ ಆಂಗ್ಲ ಬಳಕೆಗೆ ಅನುಮತಿ
– ಏನಿದು ಹೊಸ ಆದೇಶ? ಯಾಕೆ ಹೊಸ ಆದೇಶ?

NAMMUR EXPRESS NEWS
ಬೆಂಗಳೂರು: ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಪ್ರದರ್ಶಿಸುವ ಕುರಿತು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುತ್ತದೆ. ರಾಜ್ಯದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಅಧಿನಿಯಮ, 2024 ಜಾರಿಗೆ ಬಂದಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ರನ್ವಯ ಕನ್ನಡ ಭಾಷೆಯು ರಾಜ್ಯದ ಹಾಗೂ ಸ್ಥಳೀಯ ಪ್ರಾಧಿಕಾರದ ಅಧಿಕೃತ ಭಾಷೆಯಾಗಿದೆ.
ಆದುದರಿಂದ, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಇಲಾಖೆಗಳಲ್ಲಿ, ಆಯುಕ್ತಾಲಯ, ನಿರ್ದೇಶನಾಲಯ, ನಿಗಮ, ಮಂಡಳಿ, ಪ್ರಾಧಿಕಾರಗಳ ಆವರಣಗಳಲ್ಲಿನ ಹೆಸರು, ಪದನಾಮ, ಸೇವಾ ಅವಧಿಯ ನಾಮಫಲಕಗಳು, ಮಾರ್ಗಗಳ ಸೂಚನಾ ಫಲಕಗಳು, ಇನ್ನಿತರೆ ಯಾವುದೇ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಪ್ರದರ್ಶಿಸುವಂತೆ ಸೂಚಿಸಿದೆ.
ೀರಾ ಅನಿವಾರ್ಯಿದ್ದಲ್ಲಿ ಮಾತ್ರ ಕಡ್ಡಾಯವಾಗಿ ಕನ್ನಡ ಭಾಷೆಯು ಶೇಕಡ 60 ರಷ್ಟು ನಾಮಫಲಕದ ಮೇಲ್ಬಾಗದಲ್ಲಿರುವಂತೆ ಹಾಗೂ ಶೇಕಡ 40 ರಷ್ಟು ಆಂಗ್ಲಭಾಷೆಯಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ವಹಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಈಗಾಗಲೇ ಅಂಗಡಿ, ಮಳಿಗೆ ಕನ್ನಡ ಬೋರ್ಡ್ ಕಡ್ಡಾಯ

ಈಗಾಗಲೇ ರಾಜ್ಯದಲ್ಲಿ ಅಂಗಡಿ ಮಳಿಗೆಗಳಲ್ಲಿ ಕನ್ನಡ ಬೋರ್ಡ್ ಕಡ್ಡಾಯಗೊಳಿಸಲಾಗಿದೆ. ಆದರೂ ಕೆಲವೆಡೆ ಇನ್ನು ಬೋರ್ಡ್ ಕಡ್ಡಾಯವಾಗಿ ಹಾಕಿಲ್ಲ ಎಂಬ ಆರೋಪ ಕೇಳಿ ಬಂದಿದೆ.