Categories
ಚಿಕ್ಕಮಗಳೂರು

ಸುಪ್ರೀಂ ಕೋರ್ಟ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್..!!??

ಸುಪ್ರೀಂ ಕೋರ್ಟ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್..!!??
– ಚುನಾವಣಾ ಫಲಿತಾಂಶ ಮರು ಏಣಿಕೆಗೆ ಅರ್ಜಿ
– ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಸಲ್ಲಿಸಿದ್ದ ಅರ್ಜಿ

NAMMUR EXPRESS NEWS
ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಕಳೆದ ಮೂರು ವರ್ಷಗಳ ಹಿಂದೆ ಚುನಾವಣೆ ನಡೆದಿತ್ತು, ಇದರಲ್ಲಿ ಕೇವಲ ಆರು ಮತಗಳ ಅಂತರದಿಂದ ಬಿಜೆಪಿಯ ಎಂ.ಕೆ. ಪ್ರಾಣೇಶ್ ಜಯಗಳಿಸಿ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಸೋಲು ಅನುಭವಿಸಿದ್ದರು. ಈ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಗಾಯತ್ರಿಯವರು ಚುನಾವಣಾ ತಕರಾರು ಸಲ್ಲಿಸಿದ್ದು ಇದು ಸುಪ್ರೀಂ ಕೋರ್ಟ್ ಅಂಗಳ ತಲುಪಿತ್ತು, ಆದರೆ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿ ಯಾವ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದೀರಿ ಅಲ್ಲಿಯೇ ಬಗೆಹರಿಸಿಕೊಳ್ಳಿ ಎಂಬ ನಿರ್ದೇಶನದ ಮೇರೆಗೆ ಹೈಕೋರ್ಟ್‌ನಲ್ಲಿ ಸುದೀರ್ಘವಾದ ವಾದಗಳು ನಡೆದು ಜ. 30 ರಂದು ಹೈಕೋರ್ಟ್ ಮರು ಮತ ಏಣಿಕೆಗೆ ಆದೇಶ ನೀಡಿ ಮೂವತ್ತು ದಿನಗಳ ಒಳಗೆ ಮತ ಏಣಿಕೆ ಮಾಡುವಂತೆ ಆದೇಶ ಮಾಡಿದೆ.

Categories
ಕರಾವಳಿ

ಫೆ. 7ರಿಂದ 12ರವರೆಗೆ ಅರಳ ಜಾತ್ರಾ ಮಹೋತ್ಸವ!

ಫೆ. 7ರಿಂದ 12ರವರೆಗೆ ಅರಳ ಜಾತ್ರಾ ಮಹೋತ್ಸವ!
– ಶ್ರೀಗರುಡ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ
– ಪರಿವಾರ ದೈವಗಳಿಗೆ ಅದ್ದೂರಿ ನೇಮೋತ್ಸವ!

NAMMUR EXPRESS NEWS
ಬಂಟ್ವಾಳ: ಅರಳ-ಕೊಯಿಲ ಗ್ರಾಮಗಳ ಗ್ರಾಮದೇವತೆ ಶ್ರೀಗರುಡ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 7ರಿಂದ 12ರವರೆಗೆ ನಡೆಯಲಿದೆ.
ಕ್ಷೇತ್ರದ ತಂತ್ರಿ ನಡ್ವಂತಾಡಿ ಉದಯ ಪಾಂಗಣ್ಣಾಯ ಅವರ ಮಾರ್ಗದರ್ಶನದಲ್ಲಿ ಫೆ.7ರಂದು ಬೆಳಿಗ್ಗೆ 9.25ಕ್ಕೆ ಕುಂಟ ಮುಹೂರ್ತ, ಸಂಜೆ 5.30ಕ್ಕೆ ಧ್ವಜಾರೋಹಣ, ರಾತ್ರಿ 6.30ಕ್ಕೆ ಭಜನೆ, ಕಟೀಲು ಮೇಳದಿಂದ ಯಕ್ಷಗಾನ ಬಯಲಾಟ, ರಾತ್ರಿ 8.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ.8ರಂದು ರಾತ್ರಿ ದೀಪದ ಬಲಿ ಉತ್ಸವ, ಫೆ.9ರಂದು ನಡುಬಲಿ ಉತ್ಸವ, ಚಂದ್ರಮಂಡಲೋತ್ಸವ, ಫೆ.10ರಂದು ಮಹಾರಥೋತ್ಸವ, ಫೆ.11ರಂದು ಬೆಳಿಗ್ಗೆ ಚಂಡಿಕಾ ಯಾಗ, ಸಂಜೆ 7.30ರಿಂದ ದೇವರ ಬಲಿ ಉತ್ಸವ ಮತ್ತು ಧ್ವಜಾ ವರೋಹಣ, ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Categories
ರಾಜ್ಯ

23 ಜಿಲ್ಲೆಗಳಿಗೆ ಬಿಜೆಪಿ ನೂತನ ಸಾರಥಿಗಳು!

23 ಜಿಲ್ಲೆಗಳಿಗೆ ಬಿಜೆಪಿ ನೂತನ ಸಾರಥಿಗಳು!
– ಆಯ್ಕೆ ಸಮಿತಿಯಿಂದ ಚುನಾವಣೆ ಮೂಲಕ ಆಯ್ಕೆ

– ಯಾವ ಜಿಲ್ಲೆಗೆ ಯಾರು ನೂತನ ಜಿಲ್ಲಾಧ್ಯಕ್ಷರು ಇಲ್ಲಿದೆ ಪಟ್ಟಿ

NAMMUR EXPRESS NEWS
ಬೆಂಗಳೂರು: 23 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿ ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ.ತನ್ನ ಆಯ್ಕೆ ಸಮಿತಿಯ ಮೂಲಕ ಚುನಾವಣೆ ನಡೆಸಿ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.

ಯಾವ ಜಿಲ್ಲೆಗೆ ಯಾರು ಜಿಲ್ಲಾಧ್ಯಕ್ಷ..!?
ಮೈಸೂರು ನಗರ – ಎಲ್.ನಾಗೇಂದ್ರ
ಚಾಮರಾಜನಗರ-ಸಿ.ಎಸ್.ನಿರಂಜನ್‌ ಕುಮಾರ್
ದಕ್ಷಿಣ ಕನ್ನಡ-ಸತೀಶ್ ಕುಂಪಲಿ
ಚಿಕ್ಕಮಗಳೂರು-ದೇವರಾಜ ಶೆಟ್ಟಿ
ಶಿವಮೊಗ್ಗ-ಎನ್.ಕೆ.ಜಗದೀಶ್
ಉತ್ತರ ಕನ್ನಡ-ನಾರಾಯಣ ಶ್ರೀನಿವಾಸ ಹೆಗಡೆ
ಹುಬ್ಬಳ್ಳಿ-ಧಾರವಾಡ- ತಿಪ್ಪಣ್ಣ ಮಜ್ಜಗಿ
ಧಾರವಾಡ ಗ್ರಾಮಾಂತರ-ನಿಂಗಪ್ಪ ಡಿ.ಸುತಗಟ್ಟಿ
ಬೆಳಗಾವಿ ನಗರ-ಗೀತಾ ಸುತಾರ್
ಬೆಳಗಾವಿ ಗ್ರಾಮಾಂತರ-ಸುಭಾಷ್ ದುಂಡಪ್ಪ ಪಾಟೀಲ್
ಚಿಕ್ಕೋಡಿ-ಸತೀಶ್
ಅಪ್ಪಾಜಿಗೋಲ್
ಬೀದರ್-ಸೋಮನಾಥ್ ಪಾಟೀಲ್
ಕಲಬುರಗಿ ನಗರ-ಚಂದ್ರಕಾಂತ ಬಿ.ಪಾಟೀಲ್
ಕಲಬುರಗಿ ಗ್ರಾಮಾಂತರ-ಅಶೋಕ ಶಾಂತಪ್ಪ ಬಗಲಿ
ಯಾದಗಿರಿ-ಬಸವರಾಜ ವಿಭೂತಿಹಳ್ಳಿ
ಕೊಪ್ಪಳ-ದಡಸುಗೂರು ಬಸವರಾಜ್
ಬಳ್ಳಾರಿ-ಅನಿಲ್ ಕುಮಾರ್ ಮೋಕಾ
ವಿಜಯನಗರ-ಸಂಜೀವರೆಡ್ಡಿ ಎಸ್
ಚಿಕ್ಕಬಳ್ಳಾಪುರ-ಬಿ.ಸಂದೀಪ್
ಕೋಲಾರ-ಓಂ ಶಂಕ್ತಿ ಛಲಪತಿ
ಬೆಂಗಳೂರು ಗ್ರಾಮಾಂತರ-ಎಸ್.ಹರೀಶ್
ಬೆಂಗಳೂರು ಕೇಂದ್ರ-ಎ.ಆರ್.ಸಪ್ತಗಿರಿ ಗೌಡ
ಬೆಂಗಳೂರು ದಕ್ಷಿಣ-ಸಿ.ಕೆ.ರಾಮಮೂರ್ತಿ
ರವರುಗಳನ್ನು ಆಯ್ಕೆ ಮಾಡಲಾಗಿದೆ.

Categories
ಅಡಿಕೆ-ದರ

ಇಂದಿನ ಅಡಿಕೆ ದರ ಹೇಗಿದೆ?

ಇಂದಿನ ಅಡಿಕೆ ದರ ಹೇಗಿದೆ?
– ಗೊರಬಲು ಎಷ್ಟು? ಬೆಟ್ಟೆ, ಸರಕು ರೇಟಿನ ಕಥೆ ಏನಾಗಿದೆ?

NAMMUR EXPRESS NEWS
ಬೆಟ್ಟೆ: 40366 – 56919

ಸರಕು: 55119 – 82600

ಗೊರಬಲು: 18000 – 33089

ರಾಶಿ: 36366 – 51549

Categories
ರಾಜ್ಯ

ಟಾಪ್ 3 ನ್ಯೂಸ್

ಟಾಪ್ 3 ನ್ಯೂಸ್
– ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆದ ಅಮಿತ್ ಶಾ
– ಫೆಬ್ರವರಿ 1ರಿಂದ ಹೊಸದಾಗಿ ವಾಹನ ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್​
– ಬಿಪಿಎಲ್ ಕಾರ್ಡ್ ನವರಿಗೆ ಹೃದಯ, ಶ್ವಾಸಕೋಶ, ಮೂಳೆ ಕಸಿಯೂ ಲಭ್ಯ

NAMMUR EXPRESS NEWS
ಪ್ರಯಾಗ್​ರಾಜ್​: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಶೃಂಗೇರಿ ಮಠದ ಪರಮಪೂಜ್ಯ ಜಗದ್ಗುರುಳಾದ ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರು ಭಾಗವಹಿಸಿ ಪುಣ್ಯ ಸ್ನಾನ ಮಾಡಿದರು. ಧರ್ಮ ವಿಜಯ ಯಾತ್ರೆ ಕೈಗೊಂಡಿರುವ ಸಂದರ್ಭದಲ್ಲಿ ಜಗದ್ಗುರುಗಳು ಮಹಾಕುಂಭದ ಅಂಗವಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ವರಿಷ್ಠ ಅಮಿತ್ ಶಾ ಹಾಗೂ ಅವರ ಪತ್ನಿ ಸೋನಾಲ್ ಶಾ ಅವರು ಆಶೀರ್ವಾದ ಪಡೆದರು.

– ಫೆಬ್ರವರಿ 1ರಿಂದ ಹೊಸದಾಗಿ ವಾಹನ ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್​

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯು ಫೆ.1ರಿಂದ ಹೊಸ ಕಾರು ಹಾಗೂ ಬೈಕ್ ಖರೀದಿಸುವವರಿಗೆ ಹೆಚ್ಚುವರಿ ಸೆಸ್ ವಿಧಿಸಲು ನಿರ್ಧರಿಸಿದ್ದು, ಅಧಿಕೃತ ಆದೇಶವನ್ನು ಹೊರಡಿಸಿದೆ. ಸಾರಿಗೆ ಇಲಾಖೆ ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಿದ್ದು, ಹೊಸ ಕಾರುಗಳನ್ನು ಖರೀದಿಸುವವರಿಗಾಗಿ 1000 ರುಪಾಯಿ ಹಾಗೂ ಬೈಕ್ ಖರೀದಿಸುವವರಿಗಾಗಿ 500 ರು. ಹೆಚ್ಚು ಸೆಸ್ ಪಾವತಿಸಬೇಕಾಗುತ್ತದೆ. ಈ ಹೆಚ್ಚುವರಿ ಸೆಸ್ ಮೋಟಾರು ಸಾರಿಗೆ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ ನಿಧಿಗಾಗಿ ಸಾರಿಗೇತರ ವಾಹನಗಳ ನೋಂದಣಿ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ 500ರು. ಹಾಗೂ ಮೋಟಾರ್ ಕಾರಗಳಿಗೆ 1000 ರು. ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತದೆ. ಯೆಲ್ಲೋ ಬೋರ್ಡ್ ವಾಹನಗಳನ್ನು ಖರೀದಿ ಮಾಡುವವರ ಬಳಿ ಸೆಸ್ ಸಂಗ್ರಹ ಮಾಡುವಂತಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ತನ್ನ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದೆ.

– ಬಿಪಿಎಲ್ ಕಾರ್ಡ್ ನವರಿಗೆ ಹೃದಯ, ಶ್ವಾಸಕೋಶ, ಮೂಳೆ ಕಸಿಯೂ ಲಭ್ಯ

ಬೆಂಗಳೂರು: ಜೀವ ಸಾರ್ಥಕತೆ ಅಂಗಾಂಗ ಕಸಿ ಯೋಜನೆಯಡಿ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆ ಕಸಿಯನ್ನೂ ಸೇರಿಸಿ ಅಂಗಾಂಗ ಕಸಿ ಯೋಜನೆಯನ್ನು ವಿಸ್ತರಿಸಲು ಆರೋಗ್ಯ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಜನವರಿ 16ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 2018 ರಿಂದ ಬಡತನ ರೇಖೆಗಿಂತ ಕೆಳಗಿರುವ ನಾಗರಿಕರಿಗಾಗಿ (ಆದ್ಯತಾ ವಲಯ) ಜಾರಿಯಲ್ಲಿರುವ ಅಂಗಾಂಗ ಕಸಿ ಯೋಜನೆಗೆ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆ ಕಸಿ ಸೇರಿಸಲು ನಿರ್ಧಾರ ಮಾಡಲಾಗಿತ್ತು. ಇದರಡಿಯಲ್ಲಿಯೇ ಯೋಜನೆಯನ್ನು ವಿಸ್ತರಣೆ ಮಾಡಿ ಅಂಗಾಂಗ ಕಸಿ, ಇಮ್ಯುನೋಸಪ್ರೆಶನ್ ಔಷಧಿಗಳ ಖರೀದಿಯನ್ನು ಅತಿ ವಿರಳ ಮತ್ತು ದುಬಾರಿ ವೆಚ್ಚದ ಚಿಕಿತ್ಸಾ ವಿಧಾನಗಳ ಯೋಜನೆಯಲ್ಲಿ ವ್ಯಾಖ್ಯಾನಿಸಲಾದ ಷರತ್ತುಗಳ ಅನ್ವಯ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

Categories
ಕರಾವಳಿ

ರಂಗೇರಲಿದೆ ಮಂಗಳೂರು, ಮತ್ತೆ ಅರಳಲಿದೆ ಪಂಪ್‌ವೆಲ್‌ನ ಕಲಶ!

ರಂಗೇರಲಿದೆ ಮಂಗಳೂರು, ಮತ್ತೆ ಅರಳಲಿದೆ ಪಂಪ್‌ವೆಲ್‌ನ ಕಲಶ!
– ಪಂಪ್‌ವೆಲ್ ಸರ್ಕಲ್‌ನಲ್ಲಿ ಮರುಕಳಿಸಲಿದೆ ಕಲಶ ವೈಭವ
– ಬಹುಕಾಲದ ಬೇಡಿಕೆ ಈಡೇರಿಕೆಗೆ ಕಾಲ ಸನ್ನಿಹಿತ

NAMMUR EXPRESS NEWS
ಮಂಗಳೂರು: ದಶಕದ ಹಿಂದೆ ಇದ್ದ ಪಂಪ್‌ವೆಲ್‌ನ ಗತ ವೈಭವ ಮತ್ತೆ ಮರುಕಳಿಸಲಿದೆ. ಕಲಶ ಮರು ಸ್ಥಾಪನೆಗೆ ಸಿದ್ಧತೆಗಳು ನಡೆಯುತ್ತಿದ್ದು, ಎರಡು ತಿಂಗಳ ಒಳಗಾಗಿ ಈ ಹಿಂದೆ ಇದ್ದ ರೀತಿಯೇ ಸುಂದರ ಕಲಶ ನಿರ್ಮಾಣ ಆಗಲಿದೆ. ಜೈನ್ ಸೊಸೈಟಿ ಮತ್ತು ಮಂಗಳೂರು ಸ್ಮಾರ್ಟ್‌ ಲಿ.ನಿಂದ ಈ ಕಾಮಗಾರಿ ನಡೆಯಲಿದ್ದು, ಸದ್ಯ ಆರಂಭಿಕ ಹಂತದ ಕೆಲಸ ಚಾಲನೆ ಸಿಕ್ಕಿದೆ. ಗರೋಡಿ ಕಡೆಗೆ ತೆರಳುವ ರಸ್ತೆಯಲ್ಲಿ ಇರುವ ಟ್ರಾಫಿಕ್ ಐಲ್ಯಾಂಡ್‌ನಲ್ಲೇ ಕಲಶ ನಿರ್ಮಾಣಗೊಳ್ಳಲಿದೆ. ಈ ಐಲ್ಯಾಂಡ್ ನಲ್ಲಿದ್ದ ಬೃಹತ್‌ ಪೈಪ್‌ಗ್ನನ್ನು ಈಗಾಗಲೇ ತೆರವು ಮಾಡಲಾಗಿದ್ದು, ಕೆಲವು ದಿನಗಳಲ್ಲೇ ಕಾಮಗಾರಿ ಆರಂಭಿಸಿ, ಶೀಘ್ರದಲ್ಲೇ ಪೂರ್ಣಗೊಳಿಸಲು ಯೋಜನೆ ರೂಪಿ ಸಲಾಗಿದೆ. ಆರಂಭಿಕವಾಗಿ ಸ್ಮಾರ್ಟ್ ಸಿಟಿಯಿಂದ ಕಟ್ಟೆ ನಿರ್ಮಾಣ ಕೆಲಸ ನಡೆಯುತ್ತದೆ. ಬಳಿಕ ಜೈನ್ ಸೊಸೈಟಿಯಿಂದ ಕಲಶ ಸ್ಥಾಪನೆಯ ಕೆಲಸ ನಡೆಯಲಿದೆ. ಈ ಹಿಂದೆ ಇದ್ದಂತೆ ಓವಲ್ ಆಕಾರದಲ್ಲಿಯೇ ಕಲಶ ನಿರ್ಮಾಣ ಆಗುತ್ತದೆ. ಕಲಶ ಸ್ಥಾಪನೆ ಮಾಡಿ ಅಲ್ಲಿನ ಸುತ್ತಲೂ ಹಸುರಿಕರಣಕ್ಕೆ ಆದ್ಯತೆ ನೀಡಲಾಗುತ್ತದೆ. ಅಲ್ಲಿ ‘ಮಹಾವೀರ ವೃತ್ತ’ ಎಂಬ ನಾಮ ಫಲಕವೂ ತಲೆಎತ್ತಲಿದೆ. ವೃತ್ತಕ್ಕೆ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇನ್ನಷ್ಟು ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದ್ದು, ನೀಲ ನಕ್ಷೆ ಸಿದ್ದಗೊಳ್ಳುತ್ತಿದೆ. ಭಗವಾನ್ ಶ್ರೀ ಮಹಾವೀರ ಸ್ವಾಮಿಯ 2600ನೇ ಜನ್ಮ ಕಲ್ಯಾಣೋತ್ಸವವನ್ನು ರಾಷ್ಟ್ರಾದ್ಯಂತ 2001ರಿಂದ 2002ರ ವರೆಗೆ ಆಚರಿಸಲು ಕೇಂದ್ರ ಸರಕಾರ ಈ ಹಿಂದೆ ನಿರ್ಧರಿಸಿತ್ತು. ಅದರಂತೆ ಮಂಗಳೂರು ಮಹಾನಗರ ಪಾಲಿಕೆಯು ‘ಮಹಾವೀರ ವೃತ್ತ’ ಎಂದು ನಾಮಕರಣ ನಡೆಸಿತ್ತು. ಬಳಿಕ ಜೈನ್ ಸೊಸೈಟಿ ಹಾಗೂ ಜೈನ ಸಮಾಜ ಸೇರಿಕೊಂಡು 43 ಸೆಂಟ್ಸ್ ಜಾಗದಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸುಂದರ ಮಹಾವೀರ ವೃತ್ತ ಹಾಗೂ 20 ಟನ್ ತೂಕದ ಮಂಗಲ ಕಲಶವನ್ನು ನಿರ್ಮಾಣ ಮಾಡಲಾಯಿತು.

* 9 ವರ್ಷದ ಬಳಿಕ ಮರುಸ್ಥಾಪನೆ

ಮಹಾವೀರ ವೃತ್ತ ಮತ್ತು ಕಲಶ ನಿರ್ಮಾಣ ಕಾಮಗಾರಿ 2003ರ ಜನವರಿ ತಿಂಗಳಿನಲ್ಲಿ ಆರಂಭಗೊಂಡು 6 ತಿಂಗಳ ಬಳಿಕ ಉದ್ಘಾಟನೆ ನೆರವೇರಿತ್ತು. ಪಂಪ್‌ವೆಲ್‌ ಕಾಮಗಾರಿ ವೇಳೆ 2016ರಲ್ಲಿ ಈ ಕಲಶವನ್ನು ತೆರವು ಗೊಳಿಸಲಾಗಿತ್ತು. ಬಳಿಕ ಅಲ್ಲೇ ಹತ್ತಿರದಲ್ಲಿ ಕಂಕನಾಡಿ ರಸ್ತೆ ತಿರುವು ಪ್ರವೇಶದಲ್ಲಿ ಇಡಲಾಗಿದೆ. ಮಹಾವೀರ ವೃತ್ತ ಮತ್ತು ಕಲಶ ನಿರ್ಮಾಣ ಕಾಮಗಾರಿ ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಪಂಪ್‌ವೆಲ್ ಫ್ಲೈ ಓವರ್‌ ಉದ್ಘಾಟನೆ ವೇಳೆ ಜನಪ್ರತಿನಿಧಿಗಳು ಹಲವು ವರ್ಷಗಳಿಂದ ಭರವಸೆ ನೀಡಿದ್ದರು. ಆದರೆ ಈಗ ಒಂಬತ್ತು ವರ್ಷದ ಬಳಿಕ ಸಾಕಾರಗೊಳ್ಳುತ್ತಿದೆ.

* ಹಳೆ ಕಲಶವೇ ಮರುಸ್ಥಾಪನೆ!

ಮಂಗಳೂರಿನ ಪಂಪ್‌ವೆಲ್ ಬಳಿ ಈ ಹಿಂದೆ ಇದ್ದಂತಹ ಕಲಶವನ್ನು ತೆರವು ಮಾಡಿ, ಕಂಕನಾಡಿ ತಿರುವು ರಸ್ತೆ ಬಳಿ ಇಡಲಾಗಿದೆ. ಆ ಕಲಶದ ಕೆಲವು ಕಡೆಗಳಲ್ಲಿ ಹಾನಿ ಉಂಟಾಗಿದ್ದು, ಪೈಂಟ್ ಮಾಸಿದೆ. ಅದೇ ಕಲಶವನ್ನು ಸರಿಪಡಿಸಿ, ಪಂಪ್‌ವೆಲ್‌ನಲ್ಲಿ ಮರು ನಿರ್ಮಿಸಲಾಗುತ್ತಿದೆ.

Categories
ರಾಷ್ಟ್ರೀಯ ವಾರ್ತೆ

ಮಹಾಕುಂಭ ಮೇಳದಲ್ಲಿ ನಡೆಯುತ್ತಿದೆ ಬಲಿ ಬಲಿ ಬಲಿ!!

ಮಹಾಕುಂಭ ಮೇಳದಲ್ಲಿ ನಡೆಯುತ್ತಿದೆ ಬಲಿ ಬಲಿ ಬಲಿ!!
– ಕರ್ನಾಟಕದ ನಾಲ್ವರು ಭಕ್ತರು ಬಲಿ!
– ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿ ನಾಲ್ವರು ಸಾವು!

NAMMUR EXPRESS NEWS
ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕಳೆದು 2 ವಾರಗಳಿಂದ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾರಂಭ ಮಹಾಕುಂಭಮೇಳ ನಡೆಯುತ್ತಿದೆ. ಮೌನಿ ಅಮಾವಾಸ್ಯೆ ಹಿನ್ನೆಲೆ ಪ್ರಯಾಗ್‌ರಾಜ್‌ನಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.. ಇದೇ ಕಾರಣದಿಂದ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿದೆ. ಮಹಾಕುಂಭ ಮೇಳ ಹಿನ್ನೆಲೆ ಪವಿತ್ರ ಸ್ನಾನಕ್ಕಾಗಿ ತಡರಾತ್ರಿ ಪ್ರಯಾಗ್‌ರಾಜ್‌ನಲ್ಲಿ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಕರ್ನಾಟಕದಿಂದ ಹೋಗಿದ್ದ ಹಲವು ಭಕ್ತರು ಕಾಲ್ತುಳಿತಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದು, ಇದೀಗ ಒಂದೇ ಜಿಲ್ಲೆಯ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ತಾಯಿ-ಮಗಳು ಮಿಸ್ಸಿಂಗ್ಎಂದು ಬೆಳಿಗ್ಗೆಯಿಂದಲೇ ಸುದ್ದಿಯಾಗಿತ್ತು. ಆದ್ರೆ ಸಂಜೆ ವೇಳೆ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬೆನ್ನಲ್ಲೇ ರಾಜ್ಯದ ಮತ್ತಿಬ್ಬರು ಕುಂಭಮೇಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಡಿಸಿ ಮೊಹಮ್ಮದ್ ರೋಷನ್ ಖಚಿಪಡಿಸಿದ್ದು, ಮೃತರನ್ನು ಜ್ಯೋತಿ, ಮೇಘಾ, ಮಹಾದೇವಿ ಮತ್ತು ಅರುಣ ಕೋಪರ್ಡೆ ಎಂದು ಗುರುತಿಸಲಾಗಿದೆ. ಬೆಳಗಾವಿಯ ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಣ ಆರಂಭಿಸಿದ್ದ, 13 ಜನರ ತಂಡದಲ್ಲಿ ಜ್ಯೋತಿ ಹತ್ತರವಾಠ (50) ಮತ್ತು ಮೇಘಾ ಹತ್ತರವಾರ್ ಹೋಗಿದ್ದರು. ಬೆಳಗಾವಿ ವಡಗಾವಿ ನಿವಾಸಿಯವರಾಗಿದ್ದ ಜ್ಯೋತಿ ಮತ್ತು ಮೇಘಾ ಕುಂಭ ಮೇಳದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ ಮತ್ತೋರ್ವ ಯಾತ್ರಾರ್ಥಿ ಬಲಿಯಾಗಿದ್ದು, ಅವರನ್ನು ಬೆಳಗಾವಿಯ ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಎಂದು ಗುರುತಿಸಲಾಗಿದೆ. ಪತ್ನಿ ಜೊತೆಗೆ ಪ್ರಯಾಗ್‌ ರಾಜ್‌ಗೆ ತೆರಳಿದ್ದ ಅರುಣ್, ಇಂದು ಬೆಳಗ್ಗೆ ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದರು. ನಂತರ ಪ್ರಯಾಗ್ ರಾಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಅರುಣ್ ಕೊಪಾರ್ಡೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ದುರಂತದಲ್ಲಿ ಬೆಳಗಾವಿಯ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದು, ಬೆಳಗಾವಿಯ ಶಿವಾಜಿ ನಗರದ ನಿವಾಸಿ ಮಹಾದೇವಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಈ ಬಗ್ಗ ಮೃತ ಮಹಿಳೆ ಮಹಾದೇವಿ ಪತಿ ಮಾತನಾಡಿದ್ದು, ಕಳೆದ ಮೂರು ದಿನಗಳ ಹಿಂದೆ ಮೂವತ್ತು ಜನ ಕುಂಭಮೇಳಕ್ಕೆ ಹೋಗಿದ್ರು. ಕಾಲ್ತುಳಿತದಲ್ಲಿ ನನ್ನ ಪತ್ನಿ ಸಾವನ್ನಪ್ಪಿರೋದು ಖಚಿತವಾಗಿದೆ. ಇನ್ನೂ ಶವ ಮಾತ್ರ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

Categories
ಚಿಕ್ಕಮಗಳೂರು

ಶೃಂಗೇರಿ ಕ್ಷೇತ್ರ ಮಟ್ಟದ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯ!

ಶೃಂಗೇರಿ ಕ್ಷೇತ್ರ ಮಟ್ಟದ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯ!
– ಮಾರ್ನಿಂಗ್ ಕ್ರಿಕೆಟ್ ಕ್ಲಬ್(ರಿ) ಕೊಪ್ಪ ಇವರ ಆಶ್ರಯದಲ್ಲಿ ಆಯೋಜನೆ
– ತಂಡದವರಿಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

NAMMUR EXPRESS NEWS
ಕೊಪ್ಪ: ಮಾರ್ನಿಂಗ್ ಕ್ರಿಕೆಟ್ ಕ್ಲಬ್ (ರಿ,) ಕೊಪ್ಪ ಇವರ ಆಶ್ರಯದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಕೊಪ್ಪದ ಟೌನ್ ಹಾಲ್‌ನಲ್ಲಿ ಫೆಬ್ರವರಿ 9 ರಂದು ಭಾನುವಾರ ಆಯೋಜಿಸಿಲಾಗಿದೆ.

ಪಂದ್ಯ ವಿಜೇತರಿಗೆ ಬಹುಮಾನವೆಷ್ಟು..!?

* ಪ್ರಥಮ ಬಹುಮಾನ 8888/- ರೂ‌. ಹಾಗೂ ಆಕರ್ಷಕ ಟ್ರೋಫಿ
* ದ್ವಿತೀಯ ಬಹುಮಾನ 5555/- ರೂ. ಹಾಗೂ ಆಕರ್ಷಕ ಟ್ರೋಫಿ
* ತೃತೀಯ ಬಹುಮಾನ ಆಕರ್ಷಕ ಟ್ರೋಫಿ ಸಿಗಲಿದೆ

ಪಂದ್ಯಾವಳಿಯ ನಿಯಮಗಳು ಹೇಗಿದೆ?

* ಶೃಂಗೇರಿ ಕ್ಷೇತ್ರದ ಸ್ಪರ್ಧಿಗಳಿಗೆ ಮಾತ್ರ ಪಂದ್ಯದಲ್ಲಿ ಭಾಗವಹಿಸಲು ಅವಕಾಶ
* ಸ್ಪರ್ಧಿಗಳಿಗೆ ವಯಸ್ಸಿನ ನಿರ್ಬಂಧವಿರುವುದಿಲ್ಲ
* ಪುರುಷ,ಮಹಿಳೆ ( ಮಿಡೆಕ್ಸ್ ಡಬಲ್ಸ್) ಅವಕಾಶವಿರುತ್ತದೆ
* ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ

ಪಂದ್ಯದ ಮಾಹಿತಿ ಹಾಗೂ ತಂಡಗಳ ನೋಂದಣಿಗಾಗಿ ಹೆಚ್ಚಿನ ಮಾಹಿತಿ!

* ರಜತ್: 8088064018
* ಬ್ಯಾಟನ್: 7019229674
* ಪವನ್ ಕುಮಾರ್: 8277043673
ಇವರುಗಳನ್ನು ಸಂಪರ್ಕಿಸಲು ಈ ಮೂಲಕ ಕೋರಿಲಾಗಿದೆ. ತಂಡಗಳ ಹೆಸರು ನೋಂದಾವಣೆಗೆ ಫೆ. 06 ರ ಗುರುವಾರ ಕಡೆ ದಿನವಾಗಿರುತ್ತದೆ.

Categories
ಚಿಕ್ಕಮಗಳೂರು

ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯ..!!?

ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯ..!!?
– ಜ. 30,31 ಹಾಗೂ ಫೆ.01 ರಂದು ವಿದ್ಯುತ್ ವ್ಯತ್ಯಯ
– ಎಲ್ಲೆಲ್ಲಿ ಕರೆಂಟ್ ವ್ಯತ್ಯಯವಾಗತ್ತೆ ಇಲ್ಲಿದೆ ಮಾಹಿತಿ..
– ಚಿಕ್ಕಮಗಳೂರು ಮೆಸ್ಕಾಂ ವಿಭಾಗದಿಂದ ಪ್ರಕಟಣೆ

NAMMUR EXPRESS NEWS
ಚಿಕ್ಕಮಗಳೂರು: ಜ.30, 31 ಹಾಗೂ ಫೆ.01 ರಂದು ಚಿಕ್ಕಮಗಳೂರು ಜಿಲ್ಲೆಯ ಮುಗುಳುವಳ್ಳಿ- ಆಲ್ದೂರು – ಬಾಳೆಹೊನ್ನೂರು ಮಾರ್ಗದಿಂದ ವಿದ್ಯುತ್ ಸಂಪರ್ಕ ಹೊಂದಿದ ವಿದ್ಯುತ್ ವಿತರಣಾ ಕೇಂದ್ರಗಳಿಗೆ ವಿದ್ಯುತ್ ಅಡಚಣೆ ಉಂಟಾಗಲಿದೆ. ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ರೈಲ್ವೇ ಬ್ರಾಡ್ ಗೇಟ್ ಹಳಿ ಹಾಗೂ ಇದಕ್ಕೆ ಸಂಬಂಧಿಸಿದ ರೈಲ್ವೇ ಎಲೆಕ್ಟ್ರೀಷಿಯನ್ ಕಾರ್ಯವನ್ನು ರೈಲ್ವೇ ಇಲಾಖೆಯಿಂದ ನಿರ್ವಹಿಸುತ್ತಿದ್ದು ಇದರಿಂದ ಜ.30, 31 ಹಾಗೂ ಫೆ.01 ರಂದು ಮುಗುಳುವಳ್ಳಿ- ಆಲ್ದೂರು – ಬಾಳೆಹೊನ್ನೂರು ಮಾರ್ಗ ವ್ಯಾಪ್ತಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಬಾಳೆಹೊನ್ನೂರು, ಜಯಪುರ, ಕೊಪ್ಪ, ಕೊರಡಿಹಿತ್ಲು, ಎನ್.ಆರ್ ಪುರ ವಿದ್ಯುತ್ವಿತರಣಾ ಕೇಂದ್ರಗಳಲ್ಲಿ ಹೊರಹೊಮ್ಮುವ ಎಲ್ಲಾ ಫೀಡರ್‌ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕು ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಅನುಗ್ರಹದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಕುಟುಂಬ ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ನಿಮ್ಮ ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಲಾಭ ಸಿಗಬಹುದು. ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ. ಆಡಳಿತ ಪಕ್ಷದಿಂದ ನಿಮಗೆ ಬೆಂಬಲ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಸಂಪತ್ತು ಮತ್ತು ಸಂತೋಷದಲ್ಲಿ ಹೆಚ್ಚಳವಾಗುತ್ತದೆ. ಕಲೆ ಮತ್ತು ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ.

** ವೃಷಭ ರಾಶಿ :
ಇಂದು ನಿಮ್ಮ ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಜೀವನ ಅಸ್ತವ್ಯಸ್ತವಾಗಲು ಬಿಡಬೇಡಿ. ಕೆಲಸದ ಸ್ಥಳದಲ್ಲಿ ಆತ್ಮವಿಶ್ವಾಸದಿಂದ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತೀರಿ. ಅಧಿಕ ಖರ್ಚು ಇರುತ್ತದೆ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.

** ಮಿಥುನ ರಾಶಿ :
ಇಂದು ನಿಮ್ಮ ಮನಸ್ಸು ಶಾಂತವಾಗಿ ಉಳಿಯುತ್ತದೆ. ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳಿವೆ, ಆದರೆ ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಬಹುದು. ಹಣದ ಒಳಹರಿವು ಹೆಚ್ಚಾಗುತ್ತದೆ, ಅಷ್ಟೇ ಖರ್ಚುಗಳು ಸಹ ಇರುತ್ತದೆ. ಭರವಸೆ ಮತ್ತು ಹತಾಶೆಯ ಭಾವನೆ ಇರಬಹುದು. ತಾಯಿಯ ಆರೋಗ್ಯದ ಕಡೆ ಗಮನ ಕೊಡಿ.

** ಕರ್ಕಾಟಕ ರಾಶಿ :
ಇಂದು ನಿಮ್ಮಲ್ಲಿ ಹತಾಶೆಯ ಭಾವನೆ ಹೆಚ್ಚಾಗಬಹುದು. ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ನಿಮಗೆ ಇಂದು ಸಹೋದರರಿಂದ ಬೆಂಬಲ ಸಿಗಲಿದೆ. ನಿಮಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಅತ್ಯಂತ ಶುಭ ದಿನವಾಗಿದೆ. ಪ್ರಯಾಣವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ಮಾತಿನಲ್ಲಿ ಮಾಧುರ್ಯವಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಗಟ್ಟಿಯಾಗುತ್ತದೆ.

** ಸಿಂಹ ರಾಶಿ :
ಇಂದು ನಿಮಗೆ ವೃತ್ತಿ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ಹೊಸ ರೋಚಕ ತಿರುವುಗಳಿರುತ್ತವೆ. ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ವೃತ್ತಿಪರ ಜೀವನದಲ್ಲಿ, ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯುತ್ತೀರಿ.

** ಕನ್ಯಾ ರಾಶಿ :
ಈ ದಿನ ನಿಮ್ಮನ್ನು ಸಂತೋಷ ಹುಡುಕಿ ಬರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಸಾಂಸಾರಿಕ ಸೌಕರ್ಯ ಮತ್ತು ಸಂಪತ್ತು ವೃದ್ಧಿಯಾಗಲಿದೆ. ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ನಿಮ್ಮ ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು, ಅತಿಯಾದ ಕೋಪವನ್ನು ತಪ್ಪಿಸಿ. ಸಂಬಂಧದಲ್ಲಿ ಎದುರಾಗುವ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿ.

** ತುಲಾ ರಾಶಿ :
ಇಂದು ನಿಮ್ಮ ಜೀವನದಲ್ಲಿ ಏರಿಳಿತಗಳಿರುತ್ತವೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭವಿದೆ, ಆದರೆ ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ತಾಳ್ಮೆಯಿಂದಿರುವುದು ಮುಖ್ಯವಾಗುತ್ತದೆ. ನಿಮ್ಮ ಸ್ನೇಹಿತರ ಸಹಾಯದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

** ವೃಶ್ಚಿಕ ರಾಶಿ :
ಇಂದು ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ವೆಚ್ಚಗಳನ್ನು ನಿಯಂತ್ರಿಸಿ. ಪೋಷಕರ ಸಹಕಾರ ಸಿಗಲಿದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ನಡೆಯಬಹುದು. ವ್ಯಾಪಾರದಲ್ಲಿ ವಿಸ್ತರಣೆಗೆ ಅವಕಾಶವಿರುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ.

** ಧನಸ್ಸು ರಾಶಿ :
ಇಂದು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ, ಆದರೆ ನೀವು ಕೆಲಸದ ಸ್ಥಳದಲ್ಲಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಮಾತಿನಲ್ಲಿ ಕಠೋರತೆಯ ಪರಿಣಾಮವಿರುತ್ತದೆ. ನೀವು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುವಿರಿ. ಸ್ವಭಾವದಲ್ಲಿ ಕಿರಿಕಿರಿ ಇರುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ ಮತ್ತು ಅತಿಯಾದ ಕೋಪವನ್ನು ತಪ್ಪಿಸಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ.

** ಮಕರ ರಾಶಿ :
ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ, ಆದರೆ ನೀವು ಖಂಡಿತವಾಗಿಯೂ ವೃತ್ತಿಪರ ಯಶಸ್ಸನ್ನು ಪಡೆಯುತ್ತೀರಿ. ಕೌಟುಂಬಿಕ ಸಮಸ್ಯೆಗಳಿಂದಾಗಿ ಮನಸ್ಸು ಸ್ವಲ್ಪ ಚಿಂತೆಯಲ್ಲಿ ಉಳಿಯಬಹುದು. ಇಂದು ಪಿತ್ರಾರ್ಜಿತ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಸ್ನೇಹಿತರ ಸಹಾಯದಿಂದ, ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ಕಂಡುಬರುತ್ತವೆ.

** ಕುಂಭ ರಾಶಿ :
ಇಂದು ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಬಹುದು. ಉದ್ಯೋಗದಲ್ಲಿ ಪ್ರಗತಿಗೆ ಸುವರ್ಣಾವಕಾಶಗಳು ದೊರೆಯಲಿವೆ. ಇಂದು ನಿಮ್ಮ ಭಾವನೆಗಳು ಏರುಪೇರಾಗಬಹುದು. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

** ಮೀನ ರಾಶಿ :
ಇಂದು ನೀವು ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ. ಮಕ್ಕಳ ಆರೋಗ್ಯದ ಕಡೆ ಗಮನ ಕೊಡಿ. ಮಾನಸಿಕ ಅಡಚಣೆ ಉಂಟಾಗಬಹುದು. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಅತಿಯಾದ ಕೋಪವನ್ನು ತಪ್ಪಿಸಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ.