Categories
ಶಿವಮೊಗ್ಗ

ಶಿವಮೊಗ್ಗ ಬಿಜೆಪಿಗೆ ನೂತನ ಸಾರಥಿಗಳು!

ಶಿವಮೊಗ್ಗ ಬಿಜೆಪಿಗೆ ನೂತನ ಸಾರಥಿಗಳು!
– ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಎನ್‌.ಕೆ.ಜಗದೀಶ್‌
– ಪ್ರತಿ ತಾಲೂಕಿನ ಬಿಜೆಪಿ ಅಧ್ಯಕ್ಷರು ಯಾರು?

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಬಿಜೆಪಿಗೆ ನೂತನ ಅಧ್ಯಕ್ಷರಾಗಿ ಈ ಹಿಂದೆ ನಗರ ಅಧ್ಯಕ್ಷರಾಗಿದ್ದ ಎನ್‌.ಕೆ.ಜಗದೀಶ್‌ ಆಯ್ಕೆಯಾಗಿದ್ದಾರೆ. ಜಿಲ್ಲಾಧ್ಯಕ್ಷರು, ಸಂಸದ, ಶಾಸಕರು, ಕೋರ್‌ ಕಮಿಟಿ ಸದಸ್ಯರು, ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಚುನಾವಣೆ ನಡೆಯಿತು. ಎನ್‌.ಕೆ.ಜಗದೀಶ್‌ ನೂತನ ಅಧ್ಯಕ್ಷರಾಗಿದ್ದಾರೆ. ರಾಜ್ಯಕ್ಕೆ ಜಿಲ್ಲಾ ಪ್ರತಿನಿಧಿಯಾಗಿ ರುದ್ರೇಗೌಡ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಿ.ಆರ್‌.ಪ್ರೇಮ್‌ ಕುಮಾರ್‌ ತಿಳಿಸಿದ್ದಾರೆ.

ತಾಲೂಕು ಅಧ್ಯಕ್ಷರು ಯಾರು ಯಾರು?

ತೀರ್ಥಹಳ್ಳಿ ನವೀನ್‌ ಹೆದ್ದೂರು, ಹೊಸನಗರ ಕೆ.ವಿ.ಸುಬ್ರಹ್ಮಣ್ಯ, ಸಾಗರ ನಗರ ಕೆ.ಆರ್.ಗಣೇಶ್‌ ಪ್ರಸಾದ್‌, ಸಾಗರ ಗ್ರಾಮಾಂತರ ದೇವೇಂದ್ರ ಯಲಕುಂದ್ಲಿ, ಸೊರಬ ಪ್ರಕಾಶ್‌ ಅಗಸನಹಳ್ಳಿ, ಶಿಕಾರಿಪುರ ಹನುಮಂತಪ್ಪ.ಎಸ್‌, ಭದ್ರಾವತಿ ಜಿ.ಧರ್ಮಪ್ರಸಾದ್‌, ಹೊನ್ನೆಹೊಳೆನ್ನೂರು ಮಲ್ಲೇ‍ಶಪ್ಪ.ಎಂ, ಶಿವಮೊಗ್ಗ ಗ್ರಾಮಾಂತರ ಎಸ್‌.ಇ.ಸುರೇಶ್‌, ಶಿವಮೊಗ್ಗ ನಗರ ಡಿ.ಮೋಹನ್‌ ರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Categories
ಕರಾವಳಿ

ಮಂಗಳೂರಿನಲ್ಲಿ ಬ್ರಹ್ಮರಾಕ್ಷಸ ಉಚ್ಚಾಟನೆ

ಮಂಗಳೂರಿನಲ್ಲಿ ಬ್ರಹ್ಮರಾಕ್ಷಸ ಉಚ್ಚಾಟನೆ
– 29ರಂದು ವಾಹನ ಸಂಚಾರ ನಿಷೇಧ!
– ಭಕ್ತರು ರಾತ್ರಿ 10ಗಂಟೆ ಒಳಗೆ ದೈವಸ್ಥಾನ ಬಂದು ಸೇರತಕ್ಕದ್ದು!

NAMMUR EXPRESS NEWS
ಮಂಗಳೂರು: ಮಹಾದೈವರಾಜ ಕೋಟೆದ ಉಬ್ಬುಸ್ವಾಮಿ ದೈವಸ್ಥಾನ ದೇರೆಬೈಲು, ಕೊಟ್ಟಾರ ಇಲ್ಲಿ ಜನವರಿ 29ರ ಬುಧವಾರ ರಾತ್ರಿ 12ಗಂಟೆಗೆ (ರಣಕಾಟ) ಉಚ್ಚಾಟನೆ ಹಾಗೂ(ಬ್ರಹ್ಮರಾಕ್ಷಸ) ಅನ್ಯಪ್ರೇತ ಉಚ್ಚಾಟನೆ ನಡೆಯಲಿದೆ. ಹೀಗಾಗಿ ರಾತ್ರಿ 10ರಿಂದ ಬೆಳಿಗ್ಗೆ 5ಗಂಟೆಯವರೆಗೆ ರಸ್ತೆಯಲ್ಲಿ ಯಾರು ಓಡಾಡಬಾರದೆಂದು ವಿನಂತಿ ಮಾಡಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜ. 29 ಬುಧವಾರ ರಾತ್ರಿ ಕೊಟ್ಟಾರ ಪ್ರಮುಖ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮಾಡಲಾಗುವುದು. ಪೂಜಾ ವಿಧಿ ವಿಧಾನವನ್ನು ನೋಡುವ ಆಸಕ್ತಿ ಉಳ್ಳ ಭಕ್ತರು ರಾತ್ರಿ 10ಗಂಟೆಯ ಒಳಗೆ ದೈವಸ್ಥಾನಕ್ಕೆ ಬಂದು ಸೇರತಕ್ಕದ್ದು ಎಂದು ದೈವಸ್ಥಾನದ ಆಡಳಿತ ಮಂಡಳಿ ಈ ಮೂಲಕ ಮನವಿ ಮಾಡಿದೆ.

Categories
ತೀರ್ಥಹಳ್ಳಿ

ಟಾಪ್ 5 ನ್ಯೂಸ್ ತೀರ್ಥಹಳ್ಳಿ

ಟಾಪ್ 5 ನ್ಯೂಸ್ ತೀರ್ಥಹಳ್ಳಿ
– ತೀರ್ಥಹಳ್ಳಿ : ಎಂಎಸ್ಸಿ ಫಿಸಿಕ್ಸ್ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದು ಉತ್ತಮ ಸಾಧನೆ
– ಶಿವಮೊಗ್ಗ : ಶಿವಮೊಗ್ಗದ ತಾಲೂಕು ಮಟ್ಟದ ಅತ್ಯುತ್ತಮ ಬಿ ಎಲ್ ಒ ಪ್ರಶಸ್ತಿಗೆ ಗೋಪಾಲ ಹಿಲಿಕೆರೆ ಭಾಜನ
– ಪ್ರಥಮ ರ‍್ಯಾಂಕ್‌ ಪಡೆದ ಕೋಣಂದೂರಿನ ನವ್ಯಶ್ರೀ ಹೆಚ್.ಎನ್
– ಸಾಲೂರು ಸೊಸೈಟಿಗೆ ರುದ್ರಪ್ಪ ಹೆಚ್ ಕೆ ಸಾರಥಿ
– ಜ.31 ರಿಂದ ಫೆ. 2 ವರೆಗೆ ಕ್ರಿಕೆಟ್ ಟೂರ್ನಮೆಂಟ್ ಮಿಥುನ್ ಟ್ರೋಫಿ 2025

NAMMUR EXPRESS NEWS
– ತೀರ್ಥಹಳ್ಳಿ : ಎಂ ಎಸ್ ಸಿ ಫಿಸಿಕ್ಸ್ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದು ಉತ್ತಮ ಸಾಧನೆ. ತೀರ್ಥಹಳ್ಳಿ ತಾಲೂಕು ವಾಟಗಾರು ಗ್ರಾಮ ಅಂಚೆಮನೆ ನಿವಾಸಿ ಸುಮಿತ್ರಾ ಇವರ ಮಗಳು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ MSc.Physics ನಲ್ಲಿ ಪ್ರಥಮ ರ‍್ಯಾಂಕ್‌ ನಲ್ಲಿ ಉತ್ತೀರ್ಣರಾಗಿದ್ದು ಹಾಗೂ 2 ಸ್ವರ್ಣ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಕುವೆಂಪು ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಸ್ವೀಕರಿಸಿದರು.

– ತೀರ್ಥಹಳ್ಳಿ: ತಾಲೂಕು ಮಟ್ಟದ ಅತ್ಯುತ್ತಮ ಬಿ.ಎಲ್.ಒ ಪ್ರಶಸ್ತಿಗೆ ಗೋಪಾಲ್ ಭಾಜನ

ಶಿವಮೊಗ್ಗ : ಶಿವಮೊಗ್ಗದಲ್ಲಿ ಜ.29ರಂದು ನಡೆದ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅತ್ಯುತ್ತಮ ಬಿ ಎಲ್ ಒ ಪ್ರಶಸ್ತಿ ಯನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಗೋಪಾಲ ಹಿಲಿಕೆರೆ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗೆ ಗೋಪಾಲ್ ಅವರು ಪಡೆದುಕೊಂಡಿರುವುದರಿಂದ ಇದೊಂದು ಹೆಮ್ಮೆಯ ಸಂಗತಿಯಾಗಿದೆ.

ಸಾಲೂರು ಸೊಸೈಟಿಗೆ ರುದ್ರಪ್ಪ ಹೆಚ್ ಕೆ ಅಧ್ಯಕ್ಷ

ಸಾಲೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು ನೂತನ ಆಡಳಿತ ಮಂಡಳಿಯ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರೀ ರುದ್ರಪ್ಪ ಹೆಚ್ ಕೆ ( ಬಾಬಯ್ಯ) ಮತ್ತು ಉಪಾಧ್ಯಕ್ಷರಾಗಿ ಮೋಹನ್ ಬಿ ಜಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ ಉಪಸ್ಥಿತರಿದ್ದರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವವರಿಗೆ ಶುಭ ಹಾರೈಸಿದರು.

ಪ್ರಥಮ ರ‍್ಯಾಂಕ್‌ ಪಡೆದ ಕೋಣಂದೂರಿನ ನವ್ಯಶ್ರೀ ಹೆಚ್.ಎನ್

ತೀರ್ಥಹಳ್ಳಿ: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ 34ನೇ ವಾರ್ಷಿಕ ಘಟಿಕೋತ್ಸವದಲ್ಲಿ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ನವ್ಯಶ್ರೀ ಹೆಚ್ ಎನ್ BSC (hons) ನಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್‌ ಗಳಿಸಿರುತ್ತಾರೆ. ಕೋಣಂದೂರು ಸಮೀಪದ ಹಿತ್ತಲಸರದ ನಾಗರಾಜ್ ಮತ್ತು ನಳಿನಿ ದಂಪತಿಗಳ ಪುತ್ರಿಯಾಗಿರುವ ನವ್ಯಶ್ರೀ BSC (hons) ನಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.

ಬಾಳೆಬರೇಯಲ್ಲಿ ಫೆ.1 ರಂದು 35 ವರ್ಷಗಳ ನಂತರ ಶತ ಚಂಡಿಕಾಯಾಗ

ಶ್ರೀ ಚಂಡಿಕಾಂಬ ದೇವಸ್ಥಾನ, ಬಾಳೆಬರೇ ಶ್ರೀ ಕ್ಷೇತ್ರ ಚಂಡಿಕಾವನ. ಶತ ಚಂಡಿಕಾ ಯಾಗ 35 ವರ್ಷಗಳ ನಂತರ ನಡೆಯುತ್ತಿರುವ ಅಪರೂಪದ ವಿಶೇಷ ಯಾಗ. ಫೆ 1 ,ಶನಿವಾರ ಪ್ರಧಾನ ಹೋಮ ಹಾಗೂ ಪೂರ್ಣಹುತಿ ಕಾರ್ಯಕ್ರಮ ಮತ್ತು ವಿಶೇಷ ಅನ್ನಸಂತರ್ಪಣೆ ಸೇವಾ ಕರ್ತರು ಮತ್ತು ಕ್ಷೇತ್ರದ ಪರವಾಗಿ ಸರ್ವರಿಗೂ ಆದರದ ಅಹ್ವಾನ ನೀಡಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಜ. 27 ರಿಂದ ಪ್ರಾರಂಭವಾಗಿರುವ ಶತಚಂಡಿಕಾಯಾಗವು ಶೃಂಗೇರಿ ಪೀಠದ ಪರಮಾಪೂಜ್ಯ ಗುರುಗಳ ಕೃಪಾ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೂ ಇದೊಂದು ಅಪರೂಪದ ಮತ್ತು ಲೋಕ ಕಲ್ಯಾಣರ್ಥವಾಗಿ ನಡೆಯುವ ವಿಶೇಷ ಯಾಗವಾಗಿದೆ. ಇದರಲ್ಲಿ ಪಾಲ್ಗೊಳ್ಳುವ ಸರ್ವರಿಗೂ ವಿಶೇಷ ಪುಣ್ಯ ಪ್ರಾಪ್ತಿ ಇದೆ. ಇದನ್ನು ನೋಡುವ, ಶ್ರವಣ ಮಾಡುವ ಭಾಗ್ಯವು ಶ್ರೀ ಕ್ಷೇತ್ರದ ಎಲ್ಲಾ ಭಕ್ತರಿಗೂ ಲಭ್ಯವಾಗಬೇಕು ಎಂಬುದು ಕ್ಷೇತ್ರದ ಹಾಗೂ ಸೇವಾ ಕರ್ತರ ಆಶಯ. ಆ ನಿಟ್ಟಿನಲ್ಲಿ ದಿನಾಂಕ 01-02-2025 ಶನಿವಾರ ನಡೆಯುವ ಪ್ರಧಾನ ಹೋಮ, ಪೂರ್ಣಹುತಿ ಕಾರ್ಯಕ್ರಮ, ವಿಶೇಷ ಅನ್ನಸಂತರ್ಪಣೆ ಹಾಗೂ ವಿಶೇಷ ಹೋಮ ಹವನ ಕಾರ್ಯಕ್ರಮಗಳಿಗೆ ತಾವುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಕೃಥಾರ್ತರಾಗಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಧರ್ಮದರ್ಶಿಗಳು ಹಾಗೂ ಸೇವಾ ಕರ್ತರು, ಬಾಳೆ ಬರೆ ಇವರು ಕೋರಿದ್ದಾರೆ.

– ಜ. 31 ರಿಂದ ಫೆ. 2 ವರೆಗೆ ಕ್ರಿಕೆಟ್ ಟೂರ್ನಮೆಂಟ್ ಮಿಥುನ್ ಟ್ರೋಫಿ 2025

ವಿನಾಯಕ ಸ್ಪೋರ್ಟ್ಸ್ ನವರ ಆಶ್ರಯದಲ್ಲಿ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಮಿಥುನ್ ಮತ್ತು ದಿನೇಶ್ ಭಟ್ ಸ್ಮರಣಾರ್ಥ ದಲ್ಲಿ ಮಿಥುನ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್ ಅನ್ನ ನಡೆಸಲಾಗುತ್ತದೆ. ಜ. 31 ರಿಂದ ಫೆಬ್ರವರಿ 2 ವರೆಗೆ ಸರ್ಕಾರಿ ಪ್ರೌಡ ಶಾಲೆ, ಕಟ್ಟೆಹಕ್ಕಲು ಇಲ್ಲಿ ನೆರವೇರಲಿದೆ. ಈ ಕ್ರಿಕೆಟ್ ನಲ್ಲಿ ಗೆಲುವು ಸಾಧಿಸಿದವರಿಗೆ ಬಹುಮಾನಗಳನ್ನು ಕೂಡ ವಿತರಣೆ ಮಾಡಲಾಗುತ್ತದೆ. ಪ್ರಥಮ ಬಹುಮಾನ 1,00,000, ದ್ವಿತೀಯ ಬಹುಮಾನ 50,000 ಹಾಗೂ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್‌ಮ್ಯಾನ್ ಮತ್ತು ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ನೀಡಲಾಗುವುದು. ಸರ್ವರಿಗೂ ಆದರದ ಸ್ವಾಗತವನ್ನ ವಿನಾಯಕ ಸ್ಪೋರ್ಟ್ಸ್ ಇವರು ಕೋರಿದ್ದಾರೆ.

Categories
ಚಿಕ್ಕಮಗಳೂರು

ಬುರ್ಖಾದೊಳಗಿಟ್ಟುಕೊಂಡು ಗಾಂಜಾ ಮಾರಾಟ: ದಂಪತಿ ಅಂದರ್!

ಬುರ್ಖಾದೊಳಗಿಟ್ಟುಕೊಂಡು ಗಾಂಜಾ ಮಾರಾಟ: ದಂಪತಿ ಅಂದರ್!
– ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದವರ ಬಂಧನ
– 10.04 ಕೆ.ಜಿ ಗಾಂಜಾ ಹಾಗೂ ಸ್ಕೂಟಿ ವಶ: ಚಿಕ್ಕಮಗಳೂರಲ್ಲಿ ಘಟನೆ

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದಲ್ಲಿ ಸ್ಕೂಟಿಯಲ್ಲಿ ಗಾಂಜಾ ಇಟ್ಟುಕೊಂಡು ಬರುತ್ತಿದ್ದ ದಂಪತಿಯನ್ನು ನಗರದ ಬೈಪಾಸ್‌ನಲ್ಲಿ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 10.04 ಕೆ.ಜಿ. ಗಾಂಜಾ ಮತ್ತು ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ನಗರದ ಮಾರ್ಕೆಟ್ ರಸ್ತೆಯಲ್ಲಿ ಬುರ್ಖಾದೊಳಗೆ ಗಾಂಜಾ ಇಟ್ಟುಕೊಂಡು ಮಾರುತ್ತಿದ್ದ ಚಿಕ್ಕಮಗಳೂರು ನಗರದ ನಾಜೀಮಾ ಬಾನು ಹಾಗೂ ಪತಿ ವಾಸೀಮ್ ಶಿವಮೊಗ್ಗದಿಂದ ಸ್ಕೂಟಿಯಲ್ಲಿ ಗಾಂಜಾ ತರುವಾಗ ಮಾಲು ಸಮೇತ ಸೆರೆ ಸಿಕ್ಕಿದ್ದಾರೆ. ದಂಪತಿ ಒಟ್ಟಿಗೆ ಇದ್ರೆ ಪೋಲೀಸರಿಗೆ ಅನುಮಾನ ಬರಲ್ಲ,ಹಿಡಿಯಲ್ಲ ಎಂದು ಉಪಾಯದಿಂದ ದಂಪತಿ ಸಮೇತ ಗಾಂಜಾ ಸಾಗಾಟ ನಡೆಸುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ 20 ಕೆ.ಜಿಯಷ್ಟು ಗಾಂಜಾ ತಂದಿದ್ದ ಈ ದಂಪತಿ,ಪತ್ನಿ ನಜೀಮಾ ಬಾನು ಗಾಂಜಾ ಮಾರುತ್ತಿದ್ದಳು. ಸೆನ್ ಪೋಲೀಸ್ ಇನ್ಸ್‌ಪೆಕ್ಟರ್ ಗವಿರಾಜ್ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು ನಗರದ ಸೆನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ರಾಜ್ಯ

ಕರ್ನಾಟಕ ಟಾಪ್ ನ್ಯೂಸ್

ಕರ್ನಾಟಕ ಟಾಪ್ ನ್ಯೂಸ್
– ಬೆಂಗಳೂರು: ಉಡದಾರ ಬಿಗಿದುಕೊಂಡು ಬಾಲಕ ಆತ್ಮಹತ್ಯೆ!
– ಮೈಸೂರು: ವಾಟ್ಸಾಪ್ ಮೆಸೇಜ್‌ಗೆ ಹೆದರಿ ಯುವತಿ ಸೂಸೈಡ್!
– ನಂಜನಗೂಡು: ಫೈನಾನ್ಸ್ ಕಿರುಕುಳ, ರಾಜ್ಯದಲ್ಲೇ ಮೊದಲ ಬಂಧನ

NAMMUR EXPRESS NEWS
ಬೆಂಗಳೂರು: ಮೊಬೈಲ್ ಯಾಕೆ ಅತಿಯಾಗಿ ಬಳಸುತ್ತೀಯ ಎಂದು ಹೆತ್ತವರು ಪ್ರಶ್ನೆ ಮಾಡಿದ್ದಕ್ಕೆ ಮನನೊಂದ 13 ವರ್ಷದ ಬಾಲಕ ತಂಗಿ ಮುಂದೆಯೇ ತನ್ನ ಸೊಂಟಕ್ಕೆ ಕಟ್ಟುವ ನೂಲಿನಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮನೆಯವರ ಮಾತು ಕೇಳದೆ ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಕಾರಣ ಮನೆಯಲ್ಲಿ ಮೊಬೈಲ್ ಇಡದೇ ಬಾಲಕನ ತಂದೆ, ತಾಯಿ ತಮ್ಮೊಂದಿಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಮೊಬೈಲ್ ಇಲ್ಲದೇ ಕೋಪಿತಗೊಂಡ ಬಾಲಕ ಸೊಂಟದಲ್ಲಿದ್ದ ಉಡದಾರವನ್ನು ಬಿಚ್ಚಿಕೊಂಡು ಫ್ಯಾನ್‌ಗೆ ಕಟ್ಟಿ ಅದರ ಕುತ್ತಿಗೆಗೆ ಬಿಗಿದುಕೊಂಡು ತಂಗಿಯ ಕಣ್ಣ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

* ಮೈಸೂರು: ವಾಟ್ಸಾಪ್ ಮೆಸೇಜ್‌ಗೆ ಹೆದರಿ ಯುವತಿ ಸೂಸೈಡ್!

ಮೈಸೂರು : ಮೃತ ಕವನಾಳ ಸ್ನೇಹಿತೆಗೆ ವಾಟ್ಸಾಪ್‌ನಲ್ಲಿ ಬೇರೆಯವರು ಮೆಸೇಜ್ ಮಾಡಿದ್ದರಂತೆ. ಈ ವಿಚಾರ ಪಕ್ಕದ ಮನೆಯವರಿಗೆ ಗೊತ್ತಾಗಿತ್ತು ಎನ್ನಲಾಗಿದೆ. ಆದರೆ ಈ ಕವನಳ ಸ್ನೇಹಿತೆಗೆ ಅಲ್ಲ, ಖುದ್ದು ಕವನಳಿಗೇ ಬರುತ್ತಿದ್ದ ಮೆಸೇಜ್‌ಗಳು ಅಂತ ಅಪಪ್ರಚಾರ ಮಾಡಿದ್ರಂತೆ. ಈ ಆರೋಪದಿಂದ ಕವನ ಬೇಸತ್ತಿದ್ದು, ಆಕೆಯ ಪೋಷಕರು ಕಿರುಕುಳ, ಅಪಮಾನ ಮಾಡುತ್ತಿದ್ದಾರೆಂದು ಮಾನಸಿಕವಾಗಿ ನೊಂದು ವಾಟ್ಸಾಪ್ ಮೆಸೇಜ್‌ಗೆ ಹೆದರಿ ಯುವತಿಯೊಬ್ಬಳು ಸೂಸೈಡ್ ಮಾಡಿಕೊಂಡಿದ್ದು, ಜೊತೆಗೆ ಸಾಯುವ ಮೊದಲು ಮನೆ ಬಾಗಿಲಲ್ಲಿ ಪಕ್ಕದ ಮನೆಯವರ ಹೆಸರು ಬರೆದು ನನ್ನ ಸಾವಿಗೆ ಇವರೇ ಕಾರಣ ಎಂದು ತಿಳಿಸಿದ್ದಾಳೆ. ಕವನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಮೃತ ಕವನಳ ತಾಯಿ ಗಾಯತ್ರಿ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

* ನಂಜನಗೂಡು: ಫೈನಾನ್ಸ್ ಕಿರುಕುಳ, ರಾಜ್ಯದಲ್ಲೇ ಮೊದಲ ಬಂಧನ

ನಂಜನಗೂಡು: ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ರಾಜ್ಯವನ್ನೇ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ನಂಜನಗೂಡು ಪೊಲೀಸರು ಸಾಲಗಾರರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಐದು ಮೈಕ್ರೋಫೈನಾನ್ಸ್‌ಗಳ ಮೇಲೆ ಪ್ರಕರಣ ದಾಖಲಾಗದೇ, ನಾಲ್ವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಿಎಸ್‌ಎಸ್‌ ಕಂಪನಿಯ ಅರಸನಕರೆಯ ಆಕಾಶ, ಗ್ರಾಮೀಣ ಕೂಟದ ಸಿದ್ದರಾಜು ಹುಣಸಳ್ಳಿ, ಉಜ್ಜಿವನ್ -ನಾನ್ಸ್‌ನ ಲೋಕೇಶ, ಐಡಿಎಫ್‌ಎಸ್ ಕಂಪನಿಯ ಕೋಟೆ ಸಿದ್ದರಾಜು ಅವರನ್ನು 14 ದಿನಗಳ ಕಾಲ ಕಾಲಾವಧಿ ಬಂಧನಕ್ಕೆ ಕಳುಹಿಸಲಾಗಿದೆ. ಈ ಮೂಲಕ ನಂಜನಗೂಡಿನ ಡಿವೈಎಸ್ ಪಿ, ಹುಲ್ಲಹಳ್ಳಿ ಠಾಣಾಧಿಕಾರಿ ಚೇತನ್ ತಂಡ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಗರಣದ ಮೊದಲ ಬಂಧನ ಮಾಡಿರುವ ಪ್ರಶಂಸೆಗೆ ಪಾತ್ರವಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಧರ್ಮಸ್ಥಳ ಸ್ತ್ರೀಶಕ್ತಿ ಸಂಘದ ಸ್ಥಳೀಯ ವ್ಯವಸ್ಥಾಪಕರಿಗಾಗಿ ಬಲೆ ಬೀಸಲಾಗಿದೆ ಎಂದು ಸೂಚಿಸಲಾಗಿದೆ.

Categories
ಮಲ್ನಾಡ್

ತಲವಾರ್‌ನಿಂದ ಯುವಕನ ಮೇಲೆ ಹಲ್ಲೆ..!!?

ತಲವಾರ್‌ನಿಂದ ಯುವಕನ ಮೇಲೆ ಹಲ್ಲೆ..!!?
– ಹಿಂದಿಯಲ್ಲಿ ಮಾತನಾಡುತ್ತಿದ್ದ ನಾಲ್ಕು ಜನರ ತಂಡ
– ಸ್ಥಳಕ್ಕೆ ಡಿವೈಎಸ್‌ಪಿ,ಸ್ಥಳೀಯ ಪೋಲೀಸರ ತಂಡ ಆಗಮಿಸಿ ಪರಿಶೀಲನೆ

NAMMUR EXPRESS NEWS
ಶೃಂಗೇರಿ: ತಲವಾರ್ ನಿಂದ ಯುವಕನ ಮೇಲೆ ನಾಲ್ಕು ಜನರ ಗುಂಪೊಂದು ಅಟ್ಯಾಕ್ ಮಾಡಲು ಯತ್ನಿಸಿರುವ ಘಟನೆ ಶೃಂಗೇರಿ ತಾಲ್ಲೂಕಿನ ಶಿಡ್ಲೆ ಸಮೀಪ ನಡೆದಿದೆ.
ತಡ ರಾತ್ರಿ 11 ಗಂಟೆ ಸುಮಾರಿಗೆ ಮಹೀಂದ್ರ ಜೈಲೋ XUV 500 ಕಾರಿನಲ್ಲಿ ಬಂದಿರುವ ನಾಲ್ಕು ಜನರ ಗುಂಪು ಸುಮುಖ ಎನ್ನುವ ಯುವಕನನ್ನು ಹಿಂಬಾಲಿಸಿ ಶಿಡ್ಲೆ ಸಮೀಪ ತಲವಾರ್‌ನಿಂದ ದಾಳಿಗೆ ಯತ್ನಿಸಿದ್ದಾರೆ. ದಾಳಿಯಲ್ಲಿ ಸುಮುಖನ ಕಾಲಿಗೆ ಗಾಯವಾಗಿದೆ. ದಾಳಿ ಮಾಡಲು ಬಂದ ನಾಲ್ಕು ಜನ ಅಪರಿಚಿತರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಇನ್ಸ್ಪೆಕ್ಟರ್ ಮಂಜು, ಶೃಂಗೇರಿ ಪಿ.ಎಸ್.ಐ ಜಕ್ಕಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ. ಗಾಯಾಳು ಸುಮುಖನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Categories
ರಾಜ್ಯ

ಶಿರಸಿಯಲ್ಲಿ ಎಸ್ ಎಸ್ ಎಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

ಶಿರಸಿಯಲ್ಲಿ ಎಸ್ ಎಸ್ ಎಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ
– ಶಿರಸಿ ಶೈಕ್ಷಣಿಕ ಜಿಲ್ಲೆಯ ೩೯ ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್
– ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಆಶ್ರಯದಲ್ಲಿ ಶಿಬಿರ

NAMMUR EXPRESS NEWS
ಶಿರಸಿ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಆಶ್ರಯದಲ್ಲಿ ಶೈಕ್ಷಣಿಕ ಜಿಲ್ಲೆ ಶಿರಸಿಯಲ್ಲಿ ಪ್ರೇರಣಾ ಶಿಬಿರ – ೨೦೨೫ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಮೂಡಿಸಿದೆ. ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಶಿರಸಿ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ವಸತಿಯುತ ಪ್ರೇರಣಾ ಶಿಬಿರದ ಉದ್ಘಾಟನಾ ಸಮಾರಂಭ ೨೭.೦೧.೨೦೨೫ರಂದು ಲಯನ್ಸ್ ಪ್ರೌಢಶಾಲಾ ಸಭಾಂಗಣ, ಶಿರಸಿ (ಉ. ಕ )ಯಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟಕರಾಗಿ ಆಗಮಿಸಿದ ಶಿರಸಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ. ನಿವೃತ್ತ ನಿರ್ದೇಶಕರಾದ ಎಂ.ಎಸ್ ಪ್ರಸನ್ನಕುಮಾರ್ ಭಾಗವಹಿಸಿ
ಪ್ರೇರಣಾ ಶಿಬಿರ ಸಾಗಿ ಬಂದ ಹಾದಿಯ ಕುರಿತು ಮಾತನಾಡಿದರು. ಕಳೆದ ಬಾರಿಯ ವಾರ್ಷಿಕ ಫಲಿತಾಂಶದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ೩೯ ವಿದ್ಯಾರ್ಥಿಗಳು ರಾಜ್ಯದ ಮೊದಲ 10 ಅತ್ಯುತ್ತಮ ಅಂಕಗಳೊಂದಿಗೆ ಗುರುತಿಸಿಕೊಂಡಿದ್ದು, ಈ ಪ್ರೇರಣಾ ಶಿಬಿರಕ್ಕೆ ಸಹಕರಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳದ ಸಹಕಾರವನ್ನು
ಸ್ಮರಿಸಿದರು.

ಪ್ರಯತ್ನ ಇದ್ದಲ್ಲಿ ಗೆಲುವು: ಗಣಪತಿ ಭಟ್ ಕೆ.ಎಸ್

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್ ರವರು ಎಸ್.ಎಸ್.ಎಲ್.ಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುವ ಸಲುವಾಗಿ ವಿಶೇಷ ತರಬೇತಿ ನೀಡುವ ಈ ಪ್ರೇರಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು. ವಿದ್ಯಾರ್ಜನೆಯು ಪ್ರಾಮಾಣಿಕ ಪ್ರಯತ್ನ, ನಿರಂತರ ಶ್ರಮದ ನೆಲೆಯಲ್ಲಿ ಪ್ರಾಪ್ತ ವಾಗುವುದು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂ.ಎಸ್ ಹೆಗಡೆ, ಪ್ರಾಚಾರ್ಯರು, ಡಯಟ್ ಶಿರಸಿ ಇವರು ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಇಂತಹ ಪ್ರೇರಣಾ ಶಿಬಿರಗಳು ಪ್ರೇರಣೆಯಾಗಲಿ ಎಂದರು. ಶ್ರೀ ಸದಾನಂದ ಸ್ವಾಮಿ, ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಛೇರಿ, ಶಿರಸಿ ಇವರು ವಿದ್ಯಾರ್ಥಿಗಳ ಪ್ರಯತ್ನ, ಶಿಕ್ಷಕರ ಪ್ರಯತ್ನದ ಜೊತೆ ಜೊತೆಗೆ ಪ್ರೇರಣ ಶಿಬಿರವು ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ
ಸಹಕಾರಿಯಾಗಲಿದೆ ಎಂದರು. ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಲೋಕೇಶ್ ಹೆಗಡೆಯವರು ಪ್ರೇರಣಾಶಿಬಿರದಲ್ಲಿ ಸಂಸ್ಕಾರಯುತ ಶಿಕ್ಷಣ ಪಡೆಯಲಿರುವ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಮುರಾರಿ ಭಟ್, ವ್ಯವಸ್ಥಾಪಕರು,
ರಾಮಕೃಷ್ಣ ಸ್ಟುಡೆಂಟ್ ಹೋಮ್, ಶಿರಸಿ, ಲಯನ್ಸ್ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶಶಾಂಕ್ ಹೆಗಡೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲಾ ೬ ತಾಲೂಕಿನ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಪಾಲಕ ಪೋಷಕರು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಕಾರ್ಕಳದ ಪಿ.ಆರ್.ಓ ಲಿಶನ್ ಗೌಡ ಮತ್ತಿತರರು ಪಾಲ್ಗೊಂಡಿದ್ದರು.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಮಂಗಳೂರು : ಅಪರಿಚಿತ ಕಾರಿನಲ್ಲಿ ಒಂದು ಕೋಟಿ ಪತ್ತೆ!
– ಕಡಬ: ಆಡು ಕದ್ದು, ಆ್ಯಂಬುಲೆನ್ಸ್‌ನಲ್ಲಿ ಸಾಗಾಟ, ಕೊಲೆ!
– ಬೆಳ್ತಂಗಡಿ: ಚಾರ್ಮಾಡಿ ಘಾಟಿನಲ್ಲಿ ಅಪಘಾತ, ನಾಲ್ವರಿಗೆ ಗಂಭೀರ ಗಾಯ

NAMMUR EXPRESS NEWS
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ರಾಮನಗುಳಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಒಂದು ಕೋಟಿ ರೂ. ಪತ್ತೆಯಾಗಿದೆ. ಯಲ್ಲಾಪುರ ಅಂಕೋಲಾ ನಡುವಿನ ಹೆದ್ದಾರಿಯಲ್ಲಿ ರಾಮನಗುಳಿ ಗ್ರಾಮ ಇದ್ದು, ಇಲ್ಲಿ ಸಂಜೆ ನಿರ್ಜನ ಪ್ರದೇಶದಲ್ಲಿ ಯಾರು ಕಾರು ನಿಲ್ಲಿಸಿ ಹೋದರು ಎಂಬುದು ಬೆಳಕಿಗೆ ಬರಬೇಕಿದೆ.‌ ಕಾರಿಗೆ ಹಾಕಿದ ನಂಬರ್ ಪ್ಲೇಟ್ ಫೇಕ್ ಎಂದು ಗೊತ್ತಾಗಿದೆ. ಅಂಕೋಲಾ ದಿಂದ ಬಂದ ಪೊಲೀಸರು ಕಾರನ್ನು ವಶಕ್ಕೆ ಪಡೆದು ಅದರಲ್ಲಿನ ಒಂದು ಕೋಟಿ ವಶಪಡಿಸಿಕೊಂಡಿದ್ದಾರೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಕಾರು ಮಂಗಳೂರು ಮೂಲದವರದ್ದು ಎಂದು ಇದೀಗ ತನಿಖೆಯಿಂದ ಬೆಳಕಿಗೆ ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

* ಕಡಬ: ಆಡು ಕದ್ದು, ಆ್ಯಂಬುಲೆನ್ಸ್‌ನಲ್ಲಿ ಸಾಗಾಟ, ಕೊಲೆ!

ಕಡಬ: ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಆಡುಗಳನ್ನು ಕಳವುಗೈದು ಆ್ಯಂಬುಲೆನ್ಸ್‌ನಲ್ಲಿ ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ಆರೋಪಿಗಳು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಘಟನೆ ಐತ್ತೂರು ಗ್ರಾಮದ ಕೊಡೆಂಕೀರಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಕೊಡೆಂಕೀರಿ ನಿವಾಸಿ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಎರಡು ಆಡುಗಳನ್ನು ಬೈಕ್‌ನಲ್ಲಿ ಬಂದ ನಾಲ್ವರು ಕಳ್ಳರು ಹಿಡಿದು ಕೊಂದಿದ್ದಾರೆ. ಬಳಿಕ ಅವುಗಳನ್ನು ಕಡಬದ ಆ್ಯಂಬುಲೆನ್ಸ್‌ನಲ್ಲಿ ಸಾಗಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆನ್ನಲಾಗಿದೆ. ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು ಗಮನಿಸಿ ಬೊಬ್ಬೆ ಹೊಡೆದಿದ್ದಾರೆ. ಈ ವೇಳೆ ಬೈಕನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬೈಕ್‌ನ ಜಾಡು ಹಿಡಿದ ಸ್ಥಳೀಯರು ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಿದಾಗ ಆಡನ್ನು ಕಳವುಗೈಯಲು ಯತ್ನಿಸಿರುವುದು ಬಯಲಾಗಿದೆ. ಕೃತ್ಯಕ್ಕೆ ಬಳಸಿದ ಆ್ಯಂಬುಲೆನ್ಸ್‌ನಲ್ಲಿ ಹಿಂದಿನಿಂದಲೂ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

* ಬೆಳ್ತಂಗಡಿ: ಚಾರ್ಮಾಡಿ ಘಾಟಿನಲ್ಲಿ ಅಪಘಾತ, ನಾಲ್ವರಿಗೆ ಗಂಭೀರ ಗಾಯ

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ತಡ ರಾತ್ರಿ ಲಾರಿ ಮತ್ತು ಕಾರು ಡಿಕ್ಕಿ ಯಾಗಿ ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಮೂಡಿಗೆರೆಯಿಂದ ಉಜಿರೆ ಕಡೆ ಬರುತ್ತಿದ್ದ ಕಾರು ಹಾಗೂ ಕೊಟ್ಟಿಗೆಹಾರ ಕಡೆ ತೆರಳುತ್ತಿದ್ದ ಲಾರಿ ಡಿಕ್ಕಿಯಾಗಿದ್ದು, ಕಾರಿನಲ್ಲಿ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಹಂಪೆಯ ವೇದಮ್ಮ (55) ಜ್ಞಾನಮ್ಮ(70), ಮಂಜುಳಾ (50) ಮತ್ತು ರೇಣುಕಾ (26) ಗಂಭೀರವಾಗಿ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನಲ್ಲಿದ್ದ ಚಾಲಕ ಮತ್ತು ಇಬ್ಬರು ಮಕ್ಕಳು ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಆಡಳಿತದಿಂದ ಜನರಿಗೆ ತೊಂದರೆ

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಆಡಳಿತದಿಂದ ಜನರಿಗೆ ತೊಂದರೆ
– ಬಿಜೆಪಿ ಸದಸ್ಯರಿಂದ ಪಟ್ಟಣ ಪಂಚಾಯತ್ ಮುಂಭಾಗ ಪ್ರತಿಭಟನೆ
– ನೂರೆಂಟು ಹಗರಣ, ಅವ್ಯವಸ್ಥೆ: ಸದಸ್ಯರ ಆರೋಪ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸದಸ್ಯರು ದುರಾಡಳಿತ ಮಾಡುತ್ತಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಸದಸ್ಯ ಸಂದೇಶ ಜವಳಿ ಮಾತನಾಡಿ, ಸ್ಥಳೀಯ ಸಂಸ್ಥೆಯಾಗಿ ತನ್ನ ಆದಾಯದ ಮೂಲದಲ್ಲಿ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಕಾಂಗ್ರೆಸ್ ಫೇಲ್ ಆಗಿದೆ. ಗೋಪಾಲಗೌಡ ರಂಗಮಂದಿರ ಉಸ್ತುವಾರಿ ಇಲ್ಲದೇ ಹಾಳಾಗುತ್ತಿದೆ. ಪ್ರತಿದಿನ 200 ವ್ಯಾಟ್ ವಿದ್ಯುತ್ ಉತ್ಪತ್ತಿ ಮಾಡಲು ಸೋಲಾ‌ರ್ ಅಳವಡಿಸಲಾಗಿತ್ತು. ಅದನ್ನು ಉಸ್ತುವಾರಿ ವಹಿಸದೇ 50-60ಯುನಿಟ್ ವಿದ್ಯುತ್ ಕೂಡಾ ಸಿಗದಂತಾಗಿದೆ. ಬೀದಿ ಬದಿ ವ್ಯಾಪಾರಿಗಳನೇಕರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೂ ಅವರಿಗೆ ಸೂಕ್ತ ಸ್ಥಳಾವಕಾಶ ಮಾಡಿಕೊಡುವ ಅಥವಾ ಅಲ್ಲಿಂದ ತೆಗೆಸುವ ಕೆಲಸ ಆಡಳಿತ ಮಾಡುತ್ತಿಲ್ಲ. ಕಳೆದ ಸಾಲಿನಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದೆವು ಎನ್ನುತ್ತಾರೆ. ಈಗಲೂ ಪಟ್ಟಣದಾದ್ಯಂತ ನಾಯಿಗಳ ಸಂಖ್ಯೆ ಹೆಚ್ಚಳವಾಗಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ. ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಯಾವುದೇ ಜನನ ಮರಣ ಪ್ರಮಾಣ ಪತ್ರಕ್ಕೆ ಬಂದರೂ ತಮ್ಮ ಬಳಿ ತರಬೇಕೆಂಬ ಧೋರಣೆಯನ್ನು ಹೊಂದಿ ಅಧಿಕಾರಿಗಳೊಂದಿಗೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಅರ್ಜಿ ವಿಲೇವಾರಿ ಆಗುತ್ತಿಲ್ಲ. ಖಾತೆ ಬದಲಾವಣೆಗೆ ಒಂದು ತಿಂಗಳ ಗಡುವಿದ್ದರೂ ಮೂರು ತಿಂಗಳಾದರೂ ಅರ್ಜಿ ಇಲ್ಲ ಎಂಬ ಉತ್ತರ ಅರ್ಜಿದಾರನಿಗೆ ಸಿಗುತ್ತಿದೆ. ನ್ಯಾಯಾಲಯದಿಂದ ಸೇಲ್ ಸರ್ಟಿಫಿಕೇಟ್‌ ಪಡೆದುಕೊಳ್ಳಲು ಅನುಮತಿ ನೀಡಿ ಎಂಬ ಆದೇಶ ಬಂದರೆ ಬರೀ ಹಕ್ಕುಪತ್ರ ಮಾತ್ರವಿದ್ದು ಬೇರೆ ಯಾವ ದಾಖಲೆ ಇಲ್ಲದ ವ್ಯಕ್ತಿಗೂ ಕಟ್ಟಡ ಕಟ್ಟಲು ಪರವಾನಗಿ ನೀಡುತ್ತಾರೆ. ರಿಯಲ್ ಎಸ್ಟೇಟ್ ದಂಧೆ ಬೆಂಬಲಿಸುತ್ತಿದ್ದಾರಾ? ಅನಧಿಕೃತ ಕಟ್ಟಡಗಳು ಬೇಕಾದಷ್ಟು ತಲೆ ಎತ್ತಿ ನಿಂತಿವೆ. ಪಟ್ಟಣ ಪಂಚಾಯಿತಿಯ ಆಸ್ತಿ ಸಂರಕ್ಷಣೆಗೆ ಕ್ರಮ ವಹಿಸುತ್ತಿಲ್ಲ. ಇರುವ ಆದಾಯ ಮೂಲದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಆಡಳಿತ ವಿಫಲವಾಗಿದೆ. ಮಂಗಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದರೆ ಅವುಗಳನ್ನು ಸ್ಥಳಾಂತರಿಸುವ ಕೆಲಸಕ್ಕೆ ಮುತುವರ್ಜಿ ವಹಿಸುತ್ತಿಲ್ಲ. ಬೀದಿನಾಯಿ, ಜಾನುವಾರು ಮತ್ತು ಮಂಗಗಳ ಕಾಟದಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಅನೇಕ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕ್ರಮಕೈಗೊಳ್ಳದೇ ಹುಲಿವೇಷ ಸ್ಪರ್ಧೆ ನಡೆಸಿದೆ, ಆಳ್ವಾಸ್ ಕಾರ್ಯಕ್ರಮ ಮಾಡಿಸಿದೆ, ಕ್ರಿಕೆಟ್ ನಡೆಸಿದೆ ಎಂದು ಕಾಲಾಹರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಸದಸ್ಯರ ವಾರ್ಡ್ ಗಳಲ್ಲಿ ಕೆಲಸ ಮಾಡಿಸಲು ಎಲ್ಲವೂ ನಿಯಮಬದ್ಧವಾಗಬೇಕೆಂದು ಯಾವುದೇ ಕೆಲಸ ಮಾಡಿಸದೇ ಕಾಲ ಹರಣ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಸದಸ್ಯರ ವಾರ್ಡಿನಲ್ಲಿ ಯಾವ ನಿಯಮವೂ ಇಲ್ಲದೇ ಕಾಮಗಾರಿಗಳು ನಡೆಯುತ್ತಿವೆ. ಯಾವಾಗಲೋ ನಡೆದ ಕಾಮಗಾರಿಗಳಿಗೂ ಈಗ ಹಣ ಸಂದಾಯವಾಗುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯತ್ ಸದಸ್ಯರಾದ ರಾಘವೇಂದ್ರ ಸೊಪ್ಪುಗುಡ್ಡೆ, ನವೀನ್ ಯತಿರಾಜ್, ರವೀಶ್ ಬಾಬಿ, ಜ್ಯೋತಿ ಮೋಹನ್, ಜ್ಯೋತಿ ಗಣೇಶ, ಮುಖಂಡರಾದ ರಾಜೀವನ್, ಸಂತೋಷ್ ಬಾಳೆಬೈಲು, ನಿಖಿಲ್ ಕಾಮತ್ ಇತರರು ಇದ್ದರು.

Categories
ಕರಾವಳಿ

ಬೆಳ್ತಂಗಡಿ: ಸರಕಾರಿ ಬಸ್ ಅವ್ಯವಸ್ಥೆ ವಿರೋಧಿಸಿ ಉಗ್ರ ಹೋರಾಟ!

ಬೆಳ್ತಂಗಡಿ: ಸರಕಾರಿ ಬಸ್ ಅವ್ಯವಸ್ಥೆ ವಿರೋಧಿಸಿ ಉಗ್ರ ಹೋರಾಟ!
– ಬಸ್ ಸಮಸ್ಯೆ, ಬಸ್ ಸಂಖ್ಯೆ ಹೆಚ್ಚು ಮಾಡಬೇಕೆಂಬ ವಿಚಾರ ಎಬಿವಿಪಿ ಹೋರಾಟ
– ಉಜಿರೆ ಸರ್ಕಲ್ ಬಳಿ ಪ್ರತಿಭಟನೆ

ಬೆಳ್ತಂಗಡಿ: ಜ.28 ರಂದು (ಮಂಗಳವಾರ) ಧರ್ಮಸ್ಥಳದಿಂದ ಕಡಿರುದ್ಯಾವರ ಗ್ರಾಮದ ಆಲಂದಡ್ಕ ಸಾಗುವ ಸಾರಿಗೆ ಬಸ್‌’ವೊಂದು ಮುಂಡಾಜೆ ಸಮೀಪದ ಸೋಮಂತಡ್ಕ ಪಕ್ಕದ ಚರಂಡಿಗೆ ಹೋದ, ಸಾರಿಗೆ ಬಸ್‌ನ ಸ್ಟೇರಿಂಗ್ ಕಟ್ ಆಗಿ ಈ ಅಪಘಾತ ಘಟನೆ ನಡೆದಿದೆ.
ಸರಿ ಸುಮಾರು 4.30ಕ್ಕೆ ಈ ಅಪಘಾತ ನಡೆದಿದ್ದು, ಬಸ್‌ನಲ್ಲಿ ವಿದ್ಯಾರ್ಥಿಗಳು ಇದ್ದಿದ್ದು, ಜನರಿಗೆ ಗಾಯವಾಗಿತ್ತು. ಈ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸಾರಿಗೆ ಇಲಾಖೆ ನಿರ್ಲಕ್ಷ್ಯದಿಂದ ಬಸ್‌ ಅಪಘಾತ ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ಸಿನ ಸಮಸ್ಯೆಯ ವಿರುದ್ಧ ಉಜಿರೆ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.
ಬಸ್‌ನ ಸ್ಟೇರಿಂಗ್ ಕಟ್ ಆಗಿ ಅದರ ಕಂಡೀಷನ್ ಸರಿ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಹಾನಿಯುಂಟಾಗುವ ಘಟನೆ ನಡೆದಿದೆ. ಈ ವಿಚಾರದ ವಿರುದ್ಧ ವಿದ್ಯಾರ್ಥಿ ಪರಿಷತ್ತು ಅನೇಕ ವರ್ಷಗಳಿಂದ ಬಸ್ ಸಮಸ್ಯೆ ಸರಿ ಮಾಡಬೇಕು ಜೊತೆಗೆ ಬಸ್ ಸಂಖ್ಯೆಯನ್ನು ಹೆಚ್ಚು ಮಾಡಬೇಕು ಎಂಬ ಹೋರಾಟವನ್ನು ಮಾಡಲಾಗಿದೆ.
ಆದರೆ ಇಂತಹ ಹೋರಾಟಕ್ಕೆ ಸರಕಾರ ಯಾವುದೇ ರೀತಿಯ ಬೆಲೆಯನ್ನು ಕೊಡದ ಉಜಿರೆ ಸರ್ಕಲ್‌ನಲ್ಲಿ ವಿದ್ಯಾರ್ಥಿ ಪರಿಷತ್ ಹೋರಾಟಕ್ಕೆ ಮುಂದಾಗಿದೆ. ಯಾವುದೇ ಹೋರಾಟದ ಸ್ಥಳಕ್ಕೆ ಡಿಪೋ ಮ್ಯಾನೇಜರ್ ಬರಬೇಕು ಮತ್ತು ಜನರ ಸಮಸ್ಯೆ ಆಲಿಸಬೇಕು ಎಂದು ನಮ್ಮ ಬೇಡಿಕೆ ಎಂದು ಜಿಲ್ಲಾ ಸಂಚಾಲಕರಾದ ಸುವಿತ್ ಶೆಟ್ಟಿ ಹೇಳಿದ್ದಾರೆ
ಪ್ರತಿಭಟನೆಯಲ್ಲಿ ವಿಭಾಗ ಸಂಘಟನೆಯ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಸಂಚಾಲಕ ಸುವಿತ್‌ ಶೆಟ್ಟಿ, ತಾಲೂಕು ಸಂಚಾಲಕ ಪ್ರಾರ್ಥನ್ ಗೌಡ ಅವರು ಭಾಗವಹಿಸಿದ್ದು, ಸರಕಾರದ ಸಂಘಟನೆಯ ವಿರುದ್ಧ ಧ್ವನಿಗೂಡಿಸಿದ್ದಾರೆ.