Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಸಂಪತ್ತು ವೃದ್ಧಿಯಾಗಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ, ಆದರೆ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಹೆಚ್ಚಾಗಬಹುದು. ನಿಮ್ಮಲ್ಲಿರುವ ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು.

** ವೃಷಭ ರಾಶಿ :
ಇಂದು ನಿಮಗೆ ವೃತ್ತಿಪರ ಜೀವನದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ನಿಮ್ಮ ತಾಯಿಯ ನೆರವಿನಿಂದ ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಹೆಚ್ಚಾಗಬಹುದು. ವಾಹನ ನಿರ್ವಹಣೆಗೆ ಹಣ ವ್ಯಯವಾಗಬಹುದು. ಇಂದು, ನಿಮ್ಮ ಸಂಗಾತಿಯಿಂದ ಬೆಂಬಲವನ್ನು ಪಡೆಯುತ್ತೀರಿ. ಆದರೆ, ಕುಟುಂಬದ ಜವಾಬ್ದಾರಿಗಳು ಸಹ ಹೆಚ್ಚಾಗುತ್ತವೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.

** ಮಿಥುನ ರಾಶಿ :
ಇಂದು ನಿಮಗೆ ಧನ ಲಾಭವಾಗಬಹುದು. ಹಣದ ಒಳಹರಿವಿನ ಹೊಸ ಮಾರ್ಗಗಳು ಸೃಷ್ಟಿಯಾಗಬಹುದು, ಆದರೆ ಹೆಚ್ಚುವರಿ ವೆಚ್ಚಗಳು ಸಹ ಇರುತ್ತವೆ. ಇಂದು ನೀವು ಮಾನಸಿಕವಾಗಿ ಕುಗ್ಗಬಹುದು. ನಿಮ್ಮ ಸಹೋದರರ ಸಹಾಯದಿಂದ ಆದಾಯ ಹೆಚ್ಚಾಗುವಂತಹ ಹೊಸ ಅವಕಾಶಗಳು ಕಂಡುಬರುತ್ತವೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಇಂದು ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿರುತ್ತವೆ. ನಿಮ್ಮ ಸಂಗಾತಿಯೊಂದಿಗೆ ಜಗಳವಾಡಬೇಡಿ.

** ಕರ್ಕಾಟಕ ರಾಶಿ :
ಇಂದು ನಿಮಗೆ ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಇಂದು ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ತಾಳ್ಮೆಯನ್ನು ಕಾಪಾಡಿಕೊಳ್ಳಿ.

** ಸಿಂಹ ರಾಶಿ :
ಇಂದು ನಿಮ್ಮ ಕೆಲಸದಲ್ಲಿ ಪ್ರಗತಿ ಹೆಚ್ಚಾಗಬಹುದು. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ದಂಪತಿಗಳಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ. ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ವ್ಯಾಪಾರ ಸಂಬಂಧಿತ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಇದು ನಿಮಗೆ ಸಮಸ್ಯೆ ಉಂಟುಮಾಡಬಹುದು. ಇಂದು, ಸ್ನೇಹಿತರ ಸಹಾಯದಿಂದ, ನಿಮ್ಮ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗಬಹುದು.

** ಕನ್ಯಾ ರಾಶಿ :
ಇಂದು ನಿಮಗೆ ತುಂಬಾ ಶುಭ ದಿನವಾಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಆದರೆ, ಇಂದು ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.

** ತುಲಾ ರಾಶಿ :
ಈ ದಿನ ನಿಮಗೆ ಶುಭ ಫಲವನ್ನು ಹೊತ್ತು ತರಲಿದೆ. ಕೆಲಸದ ಸ್ಥಳದಲ್ಲಿ ಅಗತ್ಯ ಬದಲಾವಣೆಗಳಿಗೆ ಸಿದ್ಧರಾಗಿರಿ. ನಿಮ್ಮ ಉದ್ಯೋಗ ಹುಡುಕಾಟ ಇಂದು ಪೂರ್ಣಗೊಳ್ಳಲಿದೆ. ಹೊಸ ಉದ್ಯೋಗ ನಿಮ್ಮನ್ನು ಹುಡುಕಿ ಬರಲಿದೆ. ಆದಾಯದಲ್ಲಿ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ಮಾಡಿದ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

** ವೃಶ್ಚಿಕ ರಾಶಿ :
ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ವೃತ್ತಿ ಜೀವನದಲ್ಲಿ ನೀವು ತುಂಬಾ ಕಾರ್ಯನಿರತರಾಗಬಹುದು. ಯಾವುದೇ ಸಭೆಗಳಲ್ಲಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ಕೆಲವರಿಗೆ ಉದ್ಯೋಗದಲ್ಲಿ ಬಡ್ತಿಯ ಅವಕಾಶ ದೊರೆಯಲಿದೆ. ಇಂದು, ನಿಮ್ಮ ಕೆಲಸಗಳು ಮೆಚ್ಚುಗೆಗೆ ಪಾತ್ರವಾಗುತ್ತವೆ. ಸಂಜೆಯ ವರೆಗೂ ನಿಮ್ಮ ಕೆಲಸದಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಇಂದು, ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ.

** ಧನಸ್ಸು ರಾಶಿ :
ಇಂದು ಧನು ರಾಶಿಯವರಿಗೆ ತುಂಬಾ ಒಳ್ಳೆಯ ದಿನವಾಗಿರುತ್ತದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ವ್ಯಕ್ತಿತ್ವ ಸುಧಾರಿಸುತ್ತದೆ. ಕೆಲವು ಕೆಲಸಗಳಿಗೆ ಸಂಬಂಧಿಸಿದಂತೆ ಪ್ರಯಾಣಿಸುವ ಅವಕಾಶವಿರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಇಂದು ನಿಮಗೆ ಶತ್ರುಗಳ ವಿರುದ್ಧ ಜಯ ಸಿಗಲಿದೆ. ಆದರೆ ಇಂದು, ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

** ಮಕರ ರಾಶಿ :
ಇಂದು ನೀವು ಅಧಿಕ ಖರ್ಚುಗಳಿಂದ ತೊಂದರೆಗೊಳಗಾಗಬಹುದು. ನಿಮ್ಮ ಖರ್ಚುಗಳ ಮೇಲೆ ನಿಗಾ ಇರಿಸಿ ಮತ್ತು ಅನಗತ್ಯ ವಿಷಯಗಳಿಗೆ ಹಣವನ್ನು ಖರ್ಚು ಮಾಡಬೇಡಿ. ಇಂದು ನಿಮಗೆ ಅಧಿಕಾರಿಗಳ ಬೆಂಬಲ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ, ಆದರೆ ಕಚೇರಿಯಲ್ಲಿ ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ಇಂದು, ನಿಮ್ಮ ಕಠಿಣ ಪರಿಶ್ರಮದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಸಿಗಬಹುದು.

** ಕುಂಭ ರಾಶಿ :
ಈ ದಿನ ನಿಮಗೆ ಉದ್ಯೋಗದಲ್ಲಿ ಪ್ರಗತಿಗೆ ಅವಕಾಶವಿರುತ್ತದೆ. ಆದರೆ ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರಬಹುದು. ನಿಮ್ಮ ಸ್ವಭಾವದಲ್ಲಿ ಕಿರಿಕಿರಿ ಅನುಭವಿಸಬಹುದು. ಮಾನಸಿಕ ನೆಮ್ಮದಿ ಹಾಳಾಗಬಹುದು. ಶತ್ರುಗಳು ಹಾನಿ ಉಂಟುಮಾಡಲು ಪ್ರಯತ್ನಿಸಬಹುದು. ಹಾಗಾಗಿ, ಇಂದು ನೀವು ತಾಳ್ಮೆಯಿಂದ ಇರುವುದು ತುಂಬಾ ಮುಖ್ಯ. ಈ ದಿನ ನಿಮ್ಮನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಸಮಸ್ಯೆ ಪರಿಹಾರಕ್ಕಾಗಿ ಕುಟುಂಬ ಸದಸ್ಯರ ಸಲಹೆಗಳನ್ನು ತೆಗೆದುಕೊಳ್ಳಿ.

** ಮೀನ ರಾಶಿ :
ಇಂದು ನಿಮ್ಮ ಉದ್ಯೋಗದಲ್ಲಿ ಸಣ್ಣಪುಟ್ಟ ಸವಾಲುಗಳು ಎದುರಾಗಬಹುದು. ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಮಾನಸಿಕ ನೆಮ್ಮದಿಯನ್ನು ಪಡೆಯುತ್ತೀರಿ. ಇಂದು, ಮನೆಗೆ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ ಇರುತ್ತದೆ. ಮಾತಿನಲ್ಲಿ ಸೌಮ್ಯತೆ ಇರುತ್ತದೆ. ವ್ಯಾಪಾರ ಮಾಡುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಆಸ್ತಿಯಲ್ಲಿ ಯಾವುದೇ ಹಳೆಯ ಹೂಡಿಕೆಯು ನಿಮ್ಮ ಆರ್ಥಿಕ ಪರಿಸ್ಥಿತಿಗಳನ್ನು ಬಲಪಡಿಸುತ್ತದೆ.

Categories
ರಾಜ್ಯ

50 ಹುಡುಗಿಯರ ಖಾಸಗಿ ಅಂಗಾಂಗ ಶೂಟ್: ವ್ಯಕ್ತಿ ಮೆಟ್ರೋದಲ್ಲಿ ಸೆರೆ!

50 ಹುಡುಗಿಯರ ಖಾಸಗಿ ಅಂಗಾಂಗ ಶೂಟ್: ವ್ಯಕ್ತಿ ಮೆಟ್ರೋದಲ್ಲಿ ಸೆರೆ!
– ಬೆಂಗಳೂರು : ಮೆಟ್ರೋದಲ್ಲಿ ಯುವತಿಯರ ಅಂಗಾಂಗ ವಿಡಿಯೋ ಮಾಡುತ್ತಿದ್ದ ಆರೋಪಿ ಪೊಲೀಸ್ ವಶಕ್ಕೆ
– ಹಾಸನ: ಮದುವೆಯಾಗಲು ನಿರಾಕರಣೆ ಮಾಡಿದ್ದಕ್ಕೆ ಪ್ರಿಯಕರನಿಗೆ ಚೂರಿ ಇರಿದ ಪ್ರೇಯಸಿ
– ಹಾಸನ: ಹೊಸ ವರ್ಷದ ಆಚರಣೆ ಪಾರ್ಟಿ ವೇಳೆ ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು
– ಉಳ್ಳಾಲ : ಆಯತಪ್ಪಿ ಬಾವಿಗೆ ಬಿದ್ದು ಮೀನುಗಾರ ಸಾವು

NAMMUR EXPRESS NEWS
ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯರ ಅಂಗಾಂಗಗಳ ವಿಡಿಯೋ ಹಾಗೂ ಫೋಟೋ ತೆಗೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಮೆಟ್ರೋ ನಿಲ್ದಾಣದ ಸೆಕ್ಯೂರಿಟಿ ಗಾರ್ಡ್‍ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಜಯನಗರದಲ್ಲಿ ನಡೆದಿದೆ. ವಶಕ್ಕೆ ಪಡೆಯಲಾದ ಆರೋಪಿಯನ್ನು ಮಹೇಶ್ ಎಂದು ಗುರುತಿಸಲಾಗಿದ್ದು, ಅವನಿಗೆ ಬಿಎಂಆರ್‌ಸಿಎಲ್‌ 5,000 ರೂ. ದಂಡ ವಿಧಿಸಿದೆ. ಆರೋಪಿಯು ಮೆಟ್ರೋದಲ್ಲಿ ಪ್ರಯಾಣ ಮಾಡುವ ಮಹಿಳೆಯರ ಖಾಸಗಿ ಅಂಗಾಂಗಗಳ ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದ. ಆರೋಪಿಯ ಮೊಬೈಲ್‍ನಲ್ಲಿ ಸುಮಾರು 50 ಯುವತಿಯರ ವಿಡಿಯೋ ಮತ್ತು ಫೋಟೋಗಳು ಪತ್ತೆಯಾಗಿವೆ.

– ಹಾಸನ: ಮದುವೆಯಾಗಲು ನಿರಾಕರಣೆ ಮಾಡಿದ್ದಕ್ಕೆ ಪ್ರಿಯಕರನಿಗೆ ಚೂರಿ ಇರಿದ ಪ್ರೇಯಸಿ

ಹಾಸನ: ಮದುವೆಯಾಗಲು ನಿರಾಕರಿಸಿದ ಪ್ರಿಯಕರನಿಗೆ ಪ್ರೇಯಸಿಯೊಬ್ಬಳು ಚೂರಿ ಇರಿದಿರುವ ಘಟನೆ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೊಟೇಲ್‌ ಗೇಟ್‌ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಹಾಸನ ತಾಲೂಕಿನ ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ (24) ಗಾಯಗೊಂಡ ಯುವಕನಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಭವಾನಿ ಎಂಬ ಯುವತಿ ಮನುಕುಮಾರ್ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಳು. ಈ ವೇಳೆ ಇಬ್ಬರಲ್ಲಿ ಪ್ರೀತಿ ಪ್ರೇಮ ಶುರುವಾಗಿದೆ. ಆದರೆ, ಕೆಲವು ದಿನಗಳಿಂದ ಇಬ್ಬರೂ ಬೇರೆಯಾಗಿದ್ದರು. ಯಾವ ಕರೆ ಕೂಡ ಮಾಡಿರಲಿಲ್ಲ. ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೊಟೇಲ್‌ಗೆ ಬಂದಿದ್ದ ಮನುಕುಮಾರ್ ವಿಚಾರ ತಿಳಿದ ಯುವತಿ, ಆತನಿಗೆ ಫೋನ್ ಮಾಡಿದ್ದಾಳೆ. ಆದರೆ, ಮನುಕುಮಾರ್ ಫೋನ್ ತೆಗೆದಿಲ್ಲ. ಬಳಿಕ ತಡರಾತ್ರಿ ಹೊಟೇಲ್ ಬಳಿ ಬಂದ ಭವಾನಿ ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಹೋಗಿದ್ದಾಳೆ. ಇದೇ ವೇಳೆ ಮನುಕುಮಾರ್ ಕೂಡ ಗೇಟ್ ಬಳಿ ಬಂದಿದ್ದು, ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ತಕ್ಷಣ ಜಗಳ ಬಿಡಿಸಲು ಸ್ನೇಹಿತರು ಮುಂದಾಗಿದ್ದರು. ಈ ವೇಳೆ ಯುವತಿ ಮನುಕುಮಾರ್‌ಗೆ ಚಾರಿಯಿಂದ ಇರಿದಿದ್ದಾಳೆ. ತಕ್ಷಣ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

– ಹಾಸನ: ಹೊಸ ವರ್ಷದ ಆಚರಣೆ ಪಾರ್ಟಿ ವೇಳೆ ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು

ಹಾಸನ: ಹೊಸ ವರ್ಷದ ಆಚರಣೆ ಮಾಡುವ ವೇಳೆ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾಸನದ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಬೇಲೂರು ತಾಲೂಕಿನ ಮಲಸಾವರ ಗ್ರಾಮದ ಲಕ್ಷ್ಮಿಪುರ ಬಡಾವಣೆಯ ನಿವಾಸಿಗಳಾದ ಅಜಿತ್ (30 ) ಹಾಗೂ ಅಶೋಕ್ (35) ಗುರುತಿಸಲಾಗಿದೆ. ಹೊಸ ವರ್ಷದ ಆಚರಣೆಗೆ ಬೇಲೂರಿನ ಮಲಸಾವರ ಗ್ರಾಮದ ಲಕ್ಷ್ಮಿಪುರ ಕೆರೆ ಏರಿಯ ಮೇಲೆ ಯುವಕರು ಪಾರ್ಟಿ ಮಾಡಿದ್ದಾರೆ. ಆದರೆ, ಬುಧವಾರ ಬೆಳಗ್ಗೆಯಾದರೂ ಮನೆಗೆ ಯುವಕರು ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕೆರೆಯ ಏರಿಯ ಮೇಲೆ ವಾಹನ, ಚಪ್ಪಲಿಗಳು ಕಂಡು ಬಂದಿವೆ. ಈ ಬಗ್ಗೆ ಸಂಶಯಗೊಂಡ ಗ್ರಾಮಸ್ಥರು ಅಗ್ನಿಶಾಮಕ ಹಾಗೂ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ, ಕೆರೆಯಲ್ಲಿ ಶೋಧಕಾರ್ಯ ನಡೆಸಿದ್ದು, ಸಂಜೆ ವೇಳೆಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಈ ಘಟನೆ ಬಗ್ಗೆ ಅರೇಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

– ಉಳ್ಳಾಲ : ಆಯತಪ್ಪಿ ಬಾವಿಗೆ ಬಿದ್ದು ಮೀನುಗಾರ ಸಾವು

ಉಳ್ಳಾಲ: ಪಾಳು ಬಾವಿಗೆ ಮೀನುಗಾರರೋರ್ವರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮೇಶ್ವರ ಉಚ್ಚಿಲ ಬೀಚ್ ಬಳಿ ನಡೆದಿದೆ. ಉಚ್ಚಿಲ ನಿವಾಸಿ ಶಶೀಂದ್ರ ಎಂ. ಉಚ್ಚಿಲ್ (75)ಮೃತಪಟ್ಟ ಮೀನುಗಾರ. ಶಶೀಂದ್ರ ಎಂ. ಉಚ್ಚಿಲ್ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದು, ಮಂಗಳವಾರ ಸಂಜೆ ಸ್ನೇಹಿತನೊಂದಿಗೆ ವಾಸ್ಕೋ ರೆಸಾರ್ಟ್ ಮುಂಭಾಗದ ಪಾಳುಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಈ ವೇಳೆ ಶಶೀಂದ್ರ ಅವರು ಆಯತಪ್ಪಿ ಬಾವಿಯೊಳಗೆ ತಲೆಕೆಳಗಾಗಿ ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ಕೇವಲ ಮೂರು ಅಡಿಯಷ್ಟು ನೀರಿದ್ದ ಪರಿಣಾಮ ತಲೆಗೆ ನೆಲ ಬಡಿದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ತಕ್ಷಣ ಸ್ಥಳೀಯರ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಶಶೀಂದ್ರ ಅವರ ಪತ್ನಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದು ಬುಧವಾರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸುವ ತಯಾರಿ ನಡೆದಿತ್ತು ಎಂದು ತಿಳಿದುಬಂದಿದೆ.

Categories
ರಾಜ್ಯ

ಸರ್ಕಾರಿ ಬಸ್ ನಲ್ಲಿ ಪುರುಷರ ತಲೆಗೆ ಟೊಪ್ಪಿ?

ಸರ್ಕಾರಿ ಬಸ್ ನಲ್ಲಿ ಪುರುಷರ ತಲೆಗೆ ಟೊಪ್ಪಿ?
– ಸಾರಿಗೆ ಬಸ್ಸುಗಳ ಪ್ರಯಾಣ ದರ ಶೇ.15ರಷ್ಟು ಏರಿಕೆ
– ಸಿ. ಎಂ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ
– ಸಾರಿಗೆ ಬಸ್ ಟಿಕೆಟ್ ದರ ಪ್ರಸ್ತಾವನೆ ಕುರಿತಂತೆ ಚರ್ಚೆ!

NAMMUR EXPRESS NEWS
ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಸಾರಿಗೆ ಬಸ್ಸುಗಳ ಪ್ರಯಾಣ ದರ ಶೇ.15ರಷ್ಟು ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹೀಗಾಗಿ ಶೀಘ್ರವೇ ಸಾರಿಗೆ ಬಸ್ ಪ್ರಯಾಣ ದರದಿಂದ ಜನತೆಗೆ ಶಾಕ್ಉಂ ಟಾಗಲಿದೆ. ಜ. 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದೆ.
ಈ ಸಭೆಯಲ್ಲಿ ಸಾರಿಗೆ ಬಸ್ಸುಗಳ ಟಿಕೆಟ್ ದರದ ಪ್ರಸ್ತಾವನೆ ಕುರಿತಂತೆ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಶೇ.15ರಷ್ಟು ಪ್ರಯಾಣ ದರ ಏರಿಕೆಗೆ ಸಂಪುಟ ಅನುಮೋದನೆ ನೀಡಿರುವುದು ತಿಳಿದು ಬಂದಿದೆ. ಸಾರಿಗೆ ಬಸ್ಸುಗಳ ಪ್ರಯಾಣ ದರವನ್ನು ಶೇ.42ರಷ್ಟು ಮಾಡುವಂತೆ ಸರ್ಕಾರಕ್ಕೆ ಸಾರಿಗೆ ನಿಗಮಗಳು ಪ್ರಸ್ತಾಪನೆ ಸಲ್ಲಿಸಿವೆ. ಈ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ, ಅಂತಿಮವಾಗಿ ಶೇ.15ರಷ್ಟು ರಾಜ್ಯ ಸಚಿವರಿಗೆ ಅನುಮೋದನೆ ನೀಡಲಾಯಿತು. ಹೀಗಾಗಿ ಶೀಘ್ರವೇ ಸಾರಿಗೆ ಬಸ್‌ ಟಿಕೆಟ್ ದರ ಈಗಾಗಲೇ ಬರಲಿದೆ. ಆ ಮೂಲಕ ಕೆ ಎಸ್ ಆರ್ ಟಿಸಿ ಬಸ್ ಟಿಕೆಟ್ ದರದಲ್ಲಿ ಕೂಡ ಆಗಲಿದೆ.

Categories
ಕರಾವಳಿ

ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ಸಾಹಿತ್ಯ ದಿಗ್ಗಜರ ಸಮಾಗಮ!

ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ಸಾಹಿತ್ಯ ದಿಗ್ಗಜರ ಸಮಾಗಮ!
– ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ನಾಡಿನ ಖ್ಯಾತ ಲೇಖಕರು ಬೇಟಿ
– ಡಾ. ನಾ ಸೋಮೇಶ್ವರ, ಕನ್ನಡದ ಪ್ರೇಮಕವಿ ಬಿ. ಆರ್.
ಲಕ್ಷ್ಮಣರಾವ್ ಚರ್ಚೆ

NAMMUR EXPRESS NEWS
ಕಾರ್ಕಳ: ಜನವರಿ-3-2025ರಂದು ಕಾರ್ಕಳದ ಜೋಡುರಸ್ತೆಯಲ್ಲಿರುವ ಕ್ರಿಯೇಟಿವ್ ಪುಸ್ತಕ ಮನೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಎರಡು ಪ್ರಮುಖ ದಿಗ್ಗಜರು ಆಗಮಿಸುತ್ತಿದ್ದಾರೆ. ಚಂದನವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕರಾಗಿರುವ, ನಡೆದಾಡುವ ಗ್ರಂಥಾಲಯ ಎಂಬ ಖ್ಯಾತಿಯನ್ನು ಪಡೆದ ಡಾ. ನಾ ಸೋಮೇಶ್ವರ ಅವರು ಸಂಜೆ 4:00 ಗಂಟೆಗೆ ಮೂಡುಬಿದಿರೆ ಕ್ರಿಯೇಟಿವ್ ಪುಸ್ತಕಮನೆಗೆ ಹಾಗೂ ಸಂಜೆ 5:00 ಗಂಟೆಗೆ ಕಾರ್ಕಳದ ಜೋಡುರಸ್ತೆಯ ಕ್ರಿಯೇಟಿವ್ ಪುಸ್ತಕ ಮನೆಗೆ ಭೇಟಿ ನೀಡಲಿದ್ದಾರೆ.
ಕನ್ನಡದ ಪ್ರೇಮಕವಿ ಹಾಗು ತುಂಟಕವಿ ಎಂದೇಚಿರಪರಿಚಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಂಜೆ 5:30ಕ್ಕೆ ಪುಸ್ತಕ ಮನೆಗೆ ಆಗಮಿಸುತ್ತಿದ್ದಾರೆ. ಈ ಇಬ್ಬರು ಖ್ಯಾತ ಲೇಖಕರ ಭೇಟಿ ಸಾಹಿತ್ಯಾಸಕ್ತರಿಗೆ ಒಂದುಸುವರ್ಣಾವಕಾಶ. ಸಾಹಿತ್ಯಾಸಕ್ತರು ಈ ಅಪರೂಪದ ಸಂದರ್ಭದಲ್ಲಿ ಪಾಲ್ಗೊಂಡು, ಈ ಸಾಹಿತ್ಯ ದಿಗ್ಗಜರ ಭೇಟಿಯಿಂದ ಪ್ರೇರಣೆಯನ್ನು ಪಡೆಯುವಂತೆ ಆಹ್ವಾನಿಸಲಾಗಿದೆ.

ಸ್ಥಳ:ಕ್ರಿಯೇಟಿವ್ ಪುಸ್ತಕಮನೆ,
ಜೋಡುರಸ್ತೆ, ಕಾರ್ಕಳ

Categories
ತೀರ್ಥಹಳ್ಳಿ

ಹೊಸ ವರ್ಷದ ಸಂಭ್ರಮ: ಎಲ್ಲೆಡೆ ಆಚರಣೆ ಜೋಷ್!

ಹೊಸ ವರ್ಷದ ಸಂಭ್ರಮ: ಎಲ್ಲೆಡೆ ಆಚರಣೆ ಜೋಷ್!
– ತೀರ್ಥಹಳ್ಳಿಯಲ್ಲಿ ವಿವಿಧ ಕಾರ್ಯಕ್ರಮ: ಹೊಸ ವರ್ಷ ಸ್ವಾಗತಿಸಿದ ತೆಪ್ಪೋತ್ಸವ
– ಹೊಸ ವರ್ಷಕ್ಕೆ ಮಧ್ಯದಂಗಡಿಗಳು , ಹೋಟೆಲ್ ಫುಲ್ ಫುಲ್
– ಮಾದರಿಯಾಯ್ತು ಸಮರ್ಪಣಾ ತಂಡದ ಹೊಸ ವರ್ಷ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದ ಜಾತ್ರೆಯೂ ಕೂಡ ಅದೇ ದಿನವೂ ಬಂದಿರುವುದರಿಂದ ಅತಿ ಹೆಚ್ಚಿನ ಜನರು ಬೆಂಗಳೂರಿನಿಂದ ಹಾಗೂ ಹೊರಗಡೆ ಊರುಗಳಲ್ಲಿರುವಂತಹವರು ಮಲೆನಾಡಿನವರು ತೀರ್ಥಹಳ್ಳಿ ರಾಮೇಶ್ವರ ಜಾತ್ರೆ ಹಾಗೂ ಹೊಸ ವರ್ಷದ ಆಚರಣೆಗೆ ತಮ್ಮ ಊರಿಗೆ ಬಂದಿದ್ದಾರೆ. ಹೀಗಾಗಿ ಹೊಸ ವರ್ಷ ಅತ್ಯಂತ ಸಂಭ್ರಮದ ಕಳೆ ಕಟ್ಟಿದೆ. ಹೊಸ ವರ್ಷದ ಅಂಗವಾಗಿ ಈಗಾಗಲೇ ತೀರ್ಥಹಳ್ಳಿ ಅನೇಕ ಹೋಂ ಸ್ಟೇ, ರೆಸಾರ್ಟ್ ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ತೀರ್ಥಹಳ್ಳಿಯ ಆರಗದ ನೆಸ್ಟ್ ಹೋಂಸ್ಟೇ, ನಾಡ್ತಿ ಹೋಂಸ್ಟೇ, ಬಳಗಟ್ಟೆ ಹೋಂ ಸ್ಟೇ, ಬಾಣ0ಕಿ ಹೋಂ ಸ್ಟೇ, ಅತಿಥ್ಯ ಹೋಂ ಸ್ಟೇ, ಕುಂದಾದ್ರಿ ಮಿಸ್ಟ್ ಇನ್, ರಾಕ್ ವೀವ್, ಮೇನಕಾ ಸೇರಿದಂತೆ ಅನೇಕ ಹೋಂ ಸ್ಟೇ ಗಳಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಸಾವಿರಾರು ಜನರು ಭೇಟಿ ನೀಡಿ ಹೊಸ ವರ್ಷ ಆಚರಣೆ ಮಾಡಿದರು. ಖಂಡಿಲ್ ವೈನ್ಸ್, ಮೂಡ್ ರೆಸ್ಟೋರೆಂಟ್ ಸೇರಿ ಅನೇಕ ಹೋಟೆಲ್, ರೆಸ್ಟೋರೆಂಟ್ ಅಲ್ಲಿ ಮಧ್ಯಪ್ರಿಯರಿಗೆ ವಿಶೇಷ ಆಫರ್ ಗಳನ್ನು ನೀಡಿ ಗ್ರಾಹಕರನ್ನ ಸೆಳೆಯುವ ಪ್ರಯತ್ನ ಮಾಡಲಾಯಿತು.

– ಹೊಸ ವರ್ಷದ ಸಂಭ್ರಮ ಹೆಚ್ಚಿಸಿದ ಎಳ್ಳಮಾವಾಸ್ಯೆ ಜಾತ್ರೆ!

ಹೊಸ ವರ್ಷದ ಸಂಭ್ರಮದಲ್ಲಿ ಜನತೆ ಎಚ್ಚರ ವಹಿಸಬೇಕಾಗಿದೆ. ಏಕೆಂದರೆ ವಾಹನಗಳ ಸಂಖ್ಯೆ ಅತಿ ಹೆಚ್ಚಾಗಿರುವುದರಿಂದ ಜಾಗೃತಿಯಿಂದ ವಾಹನವನ್ನು ಚಲಾಯಿಸಬೇಕಾಗಿದೆ. ಹೊಸ ವರ್ಷ ತಮ್ಮ ಬದುಕಿನಲ್ಲೂ ಕೂಡ ಹೊಸ ವರ್ಷವನ್ನು ತರಲಿದೆ. ಹಾಗಾಗಿ ಎಚ್ಚರಿಕೆ ಕೂಡ ಅಗತ್ಯ ಇನ್ನು ಮಿತಿಮೀರಿದ ಮಧ್ಯಪಾನ ಕೂಡ ಆರೋಗ್ಯಕ್ಕೆ ಹಾನಿಕರ ಹೀಗಾಗಿ ಹೊಸ ವರ್ಷವನ್ನು ಸಂಭ್ರಮವನ್ನ ಮಿತಿಯಲ್ಲಿ ಆಚರಣೆ ಮಾಡಬೇಕಾಗಿದೆ ಎಂಬುದು ಪೊಲೀಸ್ ಇಲಾಖೆಯ ಮನವಿ.

ಮಾದರಿಯಾಯ್ತು ಸಮರ್ಪಣಾ ತಂಡದ ಹೊಸ ವರ್ಷ!

ಹೊಸ ವರ್ಷ ಬಂತೆಂದರೆ ಯಾರಿಗೆ ಸಂತೋಷವಿಲ್ಲ. ಹೇಳಿ. ಎಲ್ಲ ಊರಲ್ಲೂ ಕೂಡ ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತಾರೆ. ಎಲ್ಲ ಸ್ನೇಹಿತರು ಸೇರಿ ಗುಂಡು ತುಂಡಿನ ಪಾರ್ಟಿ ಕೂಡ ಮಾಡುತ್ತಾರೆ. ಆದರೆ ರಾಮಕೃಷ್ಣಪುರದ ಊರಿನ ಸಮರ್ಪಣಾ ತಂಡದವರ ಒಂದು ಹಾಳು ಬಿದ್ದ ಬಸ್ ಸ್ಟ್ಯಾಂಡನ್ನು ನವೀಕರಿಸಿ ಅತ್ಯಂತ ಮಾದರಿ ಕೆಲಸವನ್ನು ಮಾಡಿದ್ದಾರೆ. ಸುಮಾರು ಏಳು ಜನರ ತಂಡ ಕಳೆದ ವರ್ಷ ಕೂಡ ತಮ್ಮ ಊರಾದ ರಾಮಕೃಷ್ಣಪುರದ ಬಸ್ ಸ್ಟ್ಯಾಂಡನ್ನು ನವೀಕರಿಸಿ ಅತ್ಯಂತ ಸುಂದರಗೊಳಿಸಿದ್ದರು. ಪ್ರತಿ ವರ್ಷಕ್ಕೊಂದು ಬಸ್ ಸ್ಟ್ಯಾಂಡನ್ನು ನವೀಕರಿಸುವ ಇವರು ಈ ವರ್ಷದ ಇಯರ್ ಎಂಡ್ ನಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಹೊಲಗೊಡಿಗೆ ಬಸ್ ನಿಲ್ದಾಣವನ್ನು ಸುಂದರವಾಗಿ ನವೀಕರಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು ಮತ್ತು ಕವಿಗಳ ಚಿತ್ರವನ್ನು ಅಂಟಿಸಿರುತ್ತಾರೆ. ಬಸ್ ವೇಳಾಪಟ್ಟಿಯನ್ನು ಕೂಡ ನಮೂದಿಸಿರುತ್ತಾರೆ.ಈ ಕಾರ್ಯದಲ್ಲಿ ಮುಖ್ಯವಾಗಿ ನಂದನ್ ಕೆರೆ ಬೈಲು, ಸತೀಶ್ ಕೋಟೆ ತೋಟ, ಮಂಜುನಾಥ್ ವಾರಳಿ, ಮನೋಹರ್ ಭಂಡಾರಿ ರಾಮಕೃಷ್ಣಪುರ, ರಾಘವೇಂದ್ರ ಭಟ್ ಕೋಟೆ ತೋಟ, ವಿಷ್ಣುಕುಮಾರ್ ಹೊಲಗೊಡಿಗೆ ಯವರು ಸಹಕರಿಸಿದ್ದು ತಮ್ಮೂರಿನ ಬಸ್ ನಿಲ್ದಾಣ ನವೀಕರಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Categories
ತೀರ್ಥಹಳ್ಳಿ

ಜ. 10ಕ್ಕೆ ತೀರ್ಥಹಳ್ಳಿ ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇಗುಲದಲ್ಲಿ ವೈಕುಂಠ ಏಕಾದಶಿ

ಜ. 10ಕ್ಕೆ ತೀರ್ಥಹಳ್ಳಿ ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇಗುಲದಲ್ಲಿ ವೈಕುಂಠ ಏಕಾದಶಿ
– ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಸಿದ್ಧತೆ ಜೋರು
– ಉತ್ತರ ದ್ವಾರದ ಮೂಲಕ ಶ್ರೀದೇವರ ದರ್ಶನಕ್ಕೆ ಅವಕಾಶ: ಸರ್ವ ಭಕ್ತರಿಗೆ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ, ರಥಬೀದಿ ತೀರ್ಥಹಳ್ಳಿಯಲ್ಲಿ ಜನವರಿ 10 ಶುಕ್ರವಾರದಂದು ಬೆಳಿಗ್ಗೆ 6-00 ರಿಂದ ರಾತ್ರಿ 8-00ರ ತನಕ ತಿರುಪತಿ ವೈಕುಂಠ ಏಕಾದಶಿ ವಿಶೇಷ ಆಚರಣೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ವಿಶೇಷತೆಯಾಗಿ ದೇವಸ್ಥಾನದ ಉತ್ತರ ದ್ವಾರದಿಂದ ಪ್ರವೇಶಿಸಿ ಶ್ರೀ ದೇವರ ದರ್ಶನ ಪಡೆಯುವ ಭಕ್ತರ ಸಕಲ ಇಷ್ಟಾರ್ಥಗಳು ಫಲಿಸುವುದು ಎಂಬ ಪ್ರತೀತಿ ಹೊಂದಿದೆ ಹಾಗೂ ಕಾರ್ಯಕ್ರಮದಲ್ಲಿ ಪರಮಾತ್ಮನಿಗೆ ಪ್ರಿಯವಾದ ಲಡ್ಡುಪ್ರಸಾದ ವಿತರಿಸಲಾಗುತ್ತದೆ.
ವೆಂಕಟರಮಣ ದೇವಸ್ಥಾನ ತಿರುಪತಿ ವೈಕುಂಠ ಏಕಾದಶಿಯು ಧನು ಸಂಕ್ರಾಂತಿಯ ನಂತರ ಶುಕ್ಲ ಪಕ್ಷದ ಏಕಾದಶಿಯಂದು ಆಚರಣೆ ಮಾಡಲಾಗುತ್ತದೆ. ಈ ಒಂದು ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಹಾಗೂ ಉತ್ತರ ದ್ವಾರದಿಂದ ಪ್ರವೇಶಿಸಿ ದೇವರ ದರ್ಶನ ಪಡೆಯುವವರೆಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಹಾಗೆಯೇ ತಿರುಪತಿಯಲ್ಲೂ ಈ ದಿನ ಬಹಳ ಶ್ರೇಷ್ಠವಾದ ದಿನವಾಗಿದ್ದು, ವೆಂಕಟರಮಣ ದೇವಸ್ಥಾನ ರಥಬೀದಿ ತೀರ್ಥಹಳ್ಳಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿಯನ್ನು ಹಮ್ಮಿಕೊಳ್ಳಲಾಗಿದೆ ದೇವಸ್ಥಾನದಲ್ಲಿ ವಿವಿಧ ವಿಶೇಷ ಸೇವೆಗಳನ್ನು ಆಯೋಜಿಸಲಾಗಿದೆ. ಏಕಾದಶಿಯಂದು ಯಾರು ಉಪವಾಸ ಮತ್ತು ದೇವರ ದರ್ಶನ ಮಾಡುತ್ತಾರೋ ಅವರಿಗೆ 23 ಏಕಾದಶಿಗಳ ಪುಣ್ಯಫಲ ಆ ಒಂದೇ ಏಕಾದಶಿಯಲ್ಲಿ ಸಿಗುತ್ತದೆ ಎಂದು ಹೇಳಲಾಗಿದೆ. ಜೊತೆಗೆ ದೇವಸ್ಥಾನದಲ್ಲಿ “ಉತ್ತರ ದ್ವಾರ”ದ ಮೂಲಕ ಶ್ರೀ ದೇವರ ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗುತ್ತದೆ. ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ಕೋರಿಲಾಗಿದೆ.

ಮಾಹಿತಿಗೆ ಸಂಪರ್ಕಿಸಿ

9482677477, 9448154373, 80733 52518

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ತುಂಗಾ ಕಾಲೇಜಲ್ಲಿ ವಿಶ್ವ ಮಾನವ ದಿನಾಚರಣೆ!

ತೀರ್ಥಹಳ್ಳಿಯ ತುಂಗಾ ಕಾಲೇಜಲ್ಲಿ ವಿಶ್ವ ಮಾನವ ದಿನಾಚರಣೆ!
– ಕುವೆಂಪು ಅವರ 120ನೇ ಜನ್ಮ ದಿನೋತ್ಸವ ಆಚರಣೆ
– ಹಿರಿಯ ವಿದ್ಯಾರ್ಥಿಗಳ ಸಂಘದಿಂದ ವಿಚಾರ ಸಂಕಿರಣ

NAMMUR EXPRESS NEWS
ತೀರ್ಥಹಳ್ಳಿ: ಹಿರಿಯ ವಿದ್ಯಾರ್ಥಿಗಳ ಸಂಘ ತುಂಗಾ ಮಹಾವಿದ್ಯಾಲಯ ಇವರಿಂ ವಿಶ್ವಮಾನವ ದಿನಾಚರಣೆ ಶ್ರೀ ಕುವೆಂಪು ಅವರ 120ನೇ ಜನ್ಮದಿನೋತ್ಸವದ ವಿಚಾರ ಸಂಕಿರಣ ಕಾರ್ಯಕ್ರಮ 03-01-2025 ರ ಶುಕ್ರವಾರ ಬೆಳಿಗ್ಗೆ 11.00ಕ್ಕೆ ತುಂಗಾ ಕಾಲೇಜಿನ ರಜತ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನ ಪಟಮಕ್ಕಿ ಮಹಾಬಲೇಶ್ ವಹಿಸಲಿದ್ದಾರೆ. ವಿಚಾರ ಸಂಕಿರಣದ ವಿಷಯ ಮಂಡನೆಯನ್ನು ಕೆ.ಸಿ. ಶಿವಾರೆಡ್ಡಿ ನಿರ್ದೇಶಕರು, ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಬೆಂಗಳೂರು ಇವರು “ವಿಶ್ವಮಾನವ ಸಂದೇಶ ಮತ್ತು ಕನ್ನಡ ಸಾಹಿತ್ಯದ ಮೇಲೆ ಅವರ ಪ್ರಭಾವ” ಹಾಗೂ ನೆಂಪೆ ದೇವರಾಜ್ ಚಿಂತಕರು, ತೀರ್ಥಹಳ್ಳಿ ವಿಷಯ : “ಮಂತ್ರ ಮಾಂಗಲ್ಯ ವಿವಾಹ ಪದ್ದತಿ : ಒಂದು ಅವಲೋಕನ” ಈ ಎರಡು ವಿಷಯಗಳನ್ನು ಇಟ್ಟುಕೊಂಡು ವಿಚಾರ ಸಂಕಿರಣವನ್ನು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಂಗಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀನಂದ ದಬ್ಬಣಗದ್ದೆ ಇವರು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಗೌರವ ಉಪಸ್ಥಿತಿಯಾಗಿ ತುಂಗಾ ಮಹಾವಿದ್ಯಾಲಯದ ಡಿಗ್ರಿ ಪ್ರಿನ್ಸಿಪಾಲರಾದ ಡಾ. ಕುಮಾರಸ್ವಾಮಿ ಹಾಗೂ ಪಿಯು ಪ್ರಿನ್ಸಿಪಾಲರಾದ ಪ್ರಸನ್ನ ಕೆ.ಎಲ್‌ ಅವರು ವಹಿಸಲಿದ್ದಾರೆ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಕೂಡ ಆದರ ಸ್ವಾಗತ ಕೋರಿದ್ದಾರೆ.

ಹಿರಿಯ ವಿದ್ಯಾರ್ಥಿಗಳ ಸಂಘ ತುಂಗಾ ಮಹಾವಿದ್ಯಾಲಯದ ಸಮಿತಿ

ಶ್ರೀನಂದ ದಬ್ಬಣಗದ್ದೆ( ಅಧ್ಯಕ್ಷರು ), ಲೀಲಾವತಿ ಜಯಶೀಲ( ಉಪಾಧ್ಯಕ್ಷರು ), ಅಕ್ಷತ ಸುರೇಶ್( ಉಪಾಧ್ಯಕ್ಷರು ), ಯುವರಾಜ್ ಕಲ್ಮನೆ( ಕಾರ್ಯದರ್ಶಿ), ಚೇತನ್ ಜಿ ( ಸಹ ಕಾರ್ಯದರ್ಶಿ ),ಭರತ್ ಕುಮಾರ್ ಕೊಡ್ಲು( ಖಜಾಂಚಿ ), ಆದರ್ಶ ಮುತ್ತುಗುಂಡಿ( ಕಾನೂನು ಸಲಹೆಗಾರರು ), ನಿರ್ದೇಶಕರು ನೆಂಪೆ ದೇವರಾಜ್, ಕೆ.ಟಿ.ರಮೇಶ್, ಮ್ಯಾತ್ಯು ಸುರಾನಿ, ಪೂರ್ಣೇಶ್ ಕೆಳಕೆರೆ, ಡಾ.ಹಕೀಮ್, ರಜನಿ ಜೋಗಿ, ಗೋಪಾಲಕೃಷ್ಣ ಟಿ, ಗೌತಮ್ ಬಾಣಂಕಿ, ಶಿವಕುಮಾರ್ ತೀರ್ಥಹಳ್ಳಿ ಸರ್ವರನ್ನು ಸ್ವಾಗತಿಸಿದ್ದಾರೆ.

Categories
ಮಲ್ನಾಡ್

6 ಮೇಳಗಳಿಂದ ಈವರೆಗೆ “ಶ್ರೀದೇವಿ ಮಹಾತ್ಮೆ ಪ್ರಸಂಗ” ಶತಕ ಪ್ರದರ್ಶನ

6 ಮೇಳಗಳಿಂದ ಈವರೆಗೆ “ಶ್ರೀದೇವಿ ಮಹಾತ್ಮೆ ಪ್ರಸಂಗ” ಶತಕ ಪ್ರದರ್ಶನ
– ಶತಕ ದಾಟಿದ ಕಟೀಲು ದೇವಿ ಮಹಾತ್ಮೆ ಯಕ್ಷಗಾನ
– 36 ದಿನಗಳಲ್ಲಿ 216 ಆಟ 109 ದೇವಿ ಮಹಾತ್ಮೆ ಪ್ರಸಂಗ

NAMMUR EXPRESS NEWS
ಕೊಲ್ಲೂರು: ಕಟೀಲು ಯಕ್ಷಗಾನ ಮೇಳಗಳ ಪ್ರಸಕ್ತ ವರ್ಷದ ತಿರುಗಾಟ ಆರಂಭವಾಗಿ 36 ದಿನಗಳು ಕಳೆದಿದ್ದು, 6 ಮೇಳಗಳಿಂದ ಈವರೆಗೆ ಶ್ರೀದೇವಿ ಮಹಾತ್ಮೆ ಪ್ರಸಂಗ ಶತಕ ಪ್ರದರ್ಶನ ಕಂಡು ಮುಂದುವರಿದಿವೆ. ಕಟೀಲು ಕ್ಷೇತ್ರದ ರಥಬೀದಿಯಲ್ಲಿ ನ.25 ರಂದು ಆರೂ ಮೇಳಗಳ ಸೇವೆಯಾಟ ನಡೆದು ಗೆಜ್ಜೆ ಕಟ್ಟಿ ತಿರುಗಾಟಕ್ಕೆ ನ.26ರಂದು ಹೊರಟ ಆರು ಮೇಳಗಳ ತಿರುಗಾಟ 2024ರ ಡಿ.31 ಕ್ಕೆ 36 ದಿನಗಳಾಗಿವೆ. ಕಳೆದ 36 ದಿನಗಳ ತಿರುಗಾಟದಲ್ಲಿ ಒಂದನೇ ಮೇಳದಿಂದ 20, ಎರಡನೇ ಮೇಳದಿಂದ 20, ಮೂರನೇ ಮೇಳದಿಂದ 18, ನಾಲ್ಕನೇ ಮೇಳದಿಂದ 14, ಐದನೇ ಮೇಳದಿಂದ 19 ಹಾಗೂ ಆರನೇ ಮೇಳದಿಂದ 18 ಶ್ರೀದೇವಿ ಮಹಾತ್ಮೆ ಪ್ರಸಂದ ಪ್ರದರ್ಶಿತವಾಗಿವೆ.

– ಎರಡಂಕೆ ತಲುಪಿಲ್ಲ ಕಟೀಲು ಕ್ಷೇತ್ರ ಮಹಾತ್ಮೆ

ಕಟೀಲು ಕ್ಷೇತ್ರ ಮಹಾತ್ಮೆ 9 ಪ್ರದರ್ಶನಗಳನ್ನು ಮಾತ್ರ ಕಂಡಿದೆ. 1 ನೇ ಮೇಳದಿಂದ ಒಂದು, 2, 3, 4 ಹಾಗೂ 6ನೇ ಮೇಳಗಳು ತಲಾ 2 ಪ್ರದರ್ಶನ ನೀಡಿವೆ. 5 ನೇ ಮೇಳದಲ್ಲಿ ಈವರೆಗೂ ಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನವಾಗಿಲ್ಲ. ಎಕ್ಕಾರು ಗುಡ್ಡೆಸಾನದ ಸ್ವಾಗತ ಗೋಪುರದ ಬಳಿ ಈವರೆಗೆ ಕಟೀಲಿನ 3 ಬಯಲಾಟಗಳು ನಡೆದಿದ್ದು ಮೂರು ಕೂಡ ಶ್ರೀದೇವಿ ಮಹಾತ್ಮೆಯೇ ಆಗಿತ್ತು. ಮತ್ತೊಂದು ವಿಶೇಷವೆಂದರೆ ಕಾಲಮಿತಿಗೆ ಒಗ್ಗಿ ಹೋದ ಪ್ರೇಕ್ಷಕರು, ಪೂರ್ತಿ ಆಟ ನೋಡುವತ್ತ ಮನಸ್ಸು ಮಾಡಿದ್ದು ಮಾತ್ರವಲ್ಲದೆ ಊಟ-ಉಪಾಹಾರ ಸತ್ಕಾರದ ವಿಚಾರದಲ್ಲೂ ಸಂಘಟಕರು ಖುಷಿ ಕಾಣುತ್ತಿದ್ದಾರೆ. ಇವೆಲ್ಲವುಗಳ ಮಧ್ಯೆ ಶ್ರೀದೇವಿ ಮಹಾತ್ಮೆ ಪ್ರದರ್ಶನವೇ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿರುವುದಕ್ಕೆ ಸೇವಾಕರ್ತರ ಭಕ್ತಿಭಾವವೇ ಪ್ರಧಾನ ಕಾರಣವೆನ್ನಲಾಗಿದೆ.

– ವಿಶೇಷತೆಗಳು :-

*36 ದಿನಗಳ ತಿರುಗಾಟದಲ್ಲಿ ಕಟೀಲು ಕ್ಷೇತ್ರದಲ್ಲಿ ಆಟವೇ ಇಲ್ಲದ ದಿನಗಳು 2 ಮಾತ್ರ. ಉಳಿದೆಲ್ಲ ದಿನಗಳಲ್ಲಿ ಕ್ಷೇತ್ರದ ಸರಸ್ವತಿ ಸದನ, ಮಹಾಲಕ್ಷ್ಮೀ ಸದನಗಳಲ್ಲಿ ಕನಿಷ್ಠ ಒಂದಾದರೂ ಪ್ರದರ್ಶನವಿತ್ತು.

*ಒಂದೇ ದಿನ 2 ಕಡೆ ಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನಗೊಂಡ ಸಂದರ್ಭ ಒಂದು ಬಾರಿ.

*ಶ್ರೀಮಹಾದೇವಿ ಲಲಿತೋಪಖ್ಯಾನ ಪ್ರಸಂಗವನ್ನು ಐದನೇ ಮೇಳ 3 ಕಡೆ, 6ನೇ ಮೇಳ 1 ಕಡೆ ಮಾತ್ರ ಪ್ರದರ್ಶಿಸಿದೆ.

*ದೇವಿ ಮಹಾತ್ಮೆ ಪ್ರದರ್ಶನವೇ ಇಲ್ಲದ ದಿನ ಯಾವುದೂ ಇಲ್ಲ.

*ಒಂದೇ ದಿನ ಗರಿಷ್ಠ 5 ದೇವಿ ಮಹಾತ್ಮೆ ಡಿ.21 ರಂದು ಪ್ರದರ್ಶನಗೊಂಡಿದೆ.

*ಡಿ.13ರಂದು ಒಂದೇ ದಿನ ಒಂದೇ ದೇವಿ ಮಹಾತ್ಮೆ ಪ್ರದರ್ಶನ ಕಂಡಿದೆ.

*ಈವರೆಗೆ ಒಂದೇ ದಿನ 2 ದೇವಿ ಮಹಾತ್ಮೆ 10 ಬಾರಿ, 3 ದೇವಿ ಮಹಾತ್ಮೆ 9 ಬಾರಿ, 4 ದೇವಿ ಮಹಾತ್ಮೆ 12 ಬಾರಿ ಪ್ರದರ್ಶನಗೊಂಡಿದೆ.

Categories
ರಾಜ್ಯ

ರೇಷನ್ ಕಾರ್ಡ್ ತಿದ್ದುಪಡಿ ಅವಧಿ ವಿಸ್ತರಣೆ

ರೇಷನ್ ಕಾರ್ಡ್ ತಿದ್ದುಪಡಿ ಅವಧಿ ವಿಸ್ತರಣೆ
– ಜ.31ರ ತನಕ ಗ್ರಾಮ ಒನ್ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶ
– ಅನೇಕ ಕಾರ್ಡ್‌ಗಳ ತಿದ್ದುಪಡಿ ಬಾಕಿ ಇರುವುದರಿಂದ ಗಡುವು ವಿಸ್ತರಣೆ

NAMMUR EXPRESS NEWS
ಬೆಂಗಳೂರು : ರೇಷನ್ ಕಾರ್ಡ್ ತಿದ್ದುಪಡಿ ಅಂತಿಮ ಗಡುವನ್ನು ಸರಕಾರ ಒಂದು ತಿಂಗಳು ವಿಸ್ತರಣೆ ಮಾಡಿದೆ. ರೇಷನ್ ಕಾರ್ಡ್ ತಿದ್ದುಪಡಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಇನ್ನೂ ಅನೇಕ ಕಾರ್ಡ್‌ಗಳ ತಿದ್ದುಪಡಿ ಬಾಕಿ ಇರುವುದರಿಂದ ಜ. 31ರ ತನಕ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಮೊದಲು ರೇಷನ್ ಕಾರ್ಡ್ ತಿದ್ದುಪಡಿಗೆ ಡಿ. 31 ಅಂತಿಮ ಗಡುವು ನೀಡಿತ್ತು. ಆದರೆ ತಿದ್ದಪಡಿಯಲ್ಲೇ ಸಾಕಷ್ಟು ಗೊಂದಲಗಳಿದ್ದು, ಇನ್ನೂ ಸಾವಿರಾರು ತಿದ್ದುಪಡಿ ಬಾಕಿಯುಳಿದಿದೆ. ಈ ಹಿನ್ನೆಲೆಯಲ್ಲಿ ಜ. 31ರ ತನಕ ತಿದ್ದುಪಡಿ ದಿನಾಂಕ ಮುಂದುವರಿಸಲಾಗಿದೆ.
ಪಡಿತರ ಚೀಟಿಯಲ್ಲಿ ಮನೆ ಯಜಮಾನರ ಹೆಸರು ಬದಲಾವಣೆ, ಹೆಸರು ಸೇರಿಸುವುದು, ಹೆಸರು ಸರಿಪಡಿಸಿಕೊಳ್ಳುವುದು, ಹೆಸರು ತೆಗೆಯುವುದು, ಫೋಟೊ ಬದಲಾವಣೆ ಮಾಡುವುದು ಹಾಗೂ ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸಿಕೊಳ್ಳುವುದಕ್ಕೆ ಅವಕಾಶ ಕೊಡಲಾಗಿದೆ. ತಿದ್ದುಪಡಿ ಮಾಡಿಸಲು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಅಥವಾ ಆದಾಯ ಪ್ರಮಾಣಪತ್ರ ನೀಡಬೇಕಾಗುತ್ತದೆ. ಆರು ವರ್ಷದ ಒಳಗಿನ ಮಕ್ಕಳಿದ್ದರೆ, ಜನನ ಪ್ರಮಾಣಪತ್ರ ದಾಖಲೆ ಸಲ್ಲಿಸಿ ರೇಷನ್‌ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.
ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

Categories
ಚಿಕ್ಕಮಗಳೂರು

ಪದೇ ಪದೇ ಕಾಡಾನೆ ಪ್ರತ್ಯಕ್ಷ ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ..!??

ಪದೇ ಪದೇ ಕಾಡಾನೆ ಪ್ರತ್ಯಕ್ಷ ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ..!??
– ಗ್ರಾಮಸ್ಥರಿಗೆ,ಪ್ರಯಾಣಿಕರಿಗೆ ಕಾಣಿಸೋ ಕಾಡಾನೆ ಅರಣ್ಯ ಇಲಾಖೆ ಕಣ್ಣಿಗೆ ಬೀಳ್ತಿಲ್ವಾ..?
– ಅಧಿಕಾರಿಗಳೇ, ಜನಪ್ರತಿನಿಧಿಗಳೇ ಯಾರ ಜೀವದೊಂದಿಗೆ ಚೆಲ್ಲಾಟ

NAMMUR EXPRESS NEWS
ಎನ್.ಆರ್.ಪುರ: ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು,ಇಲಾಖೆ ನಿದ್ದೆಗೆ ಜಾರಿದಂತೆ ಕಾಣುತ್ತಿದೆ.
ಹೌದು ಕೆಲವು ದಿನಗಳ ಹಿಂದಷ್ಟೇ ತಾಲೂಕಿನ ಸೀತೂರಿನಲ್ಲಿ ಹಾಗೂ ಮುತ್ತಿನಕೊಪ್ಪದಲ್ಲಿ ಎರಡು ಜೀವವನ್ನು ಬಲಿ ಪಡೆದ ಕಾಡಾನೆ ಈಗ ತಾಲೂಕಿನ ಆರಂಬಳ್ಳಿ ಮುಖ್ಯ ರಸ್ತೆಯ ಮೂಲೆಗದ್ದೆಯಲ್ಲಿ ಕಾಣಿಸಿಕೊಂಡಿದೆ. ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಆಟೋ ಚಾಲಕರೊಬ್ಬರಿಗೆ ರಸ್ತೆ ಮಧ್ಯದಲ್ಲಿ ಕಾಣಿಸಿದ ಕಾಡಾನೆ ಕಂಡು ಭಯಗೊಂಡಿದ್ದಾರೆ. ತಕ್ಷಣವೇ ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಮಾಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಈ ಕಾಡು ಪ್ರಾಣಿಗಳಿಂದ ಗ್ರಾಮಸ್ಥರು ದಿನವು ಭಯದಲ್ಲೇ ಜೀವನ ನಡೆಸಬೇಕಾಗಿದೆ.

ಗ್ರಾಮಸ್ಥರಿಗೆ,ಸಾರ್ವಜನಿಕರಿಗೆ ಕಾಣೋ ಕಾಡಾನೆ ಅರಣ್ಯ ಇಲಾಖೆಗೆ ಕಾಣ್ತಿಲ್ಲ ಯಾಕೆ..!!???
ತಾಲೂಕಿನ ಸೀತೂರಿನಲ್ಲಿ ಉಮೇಶ್ ಎಂಬುವರನ್ನು ಬಲಿಪಡೆದು ಇಪ್ಪತ್ತು ದಿನಗಳೊಳಗೆ ಮುತ್ತಿನಕೊಪ್ಪದಲ್ಲಿ ಎಂಬುವವರನ್ನು ಬಲಿಪಡೆದಿದ್ದ ಆನೆ ಹತ್ತು ದಿನಗಳೊಳಗೆ ತಾಲೂಕಿನ ಮೂಲೆಗದ್ದೆ ಎಂಬಲ್ಲಿ ಕಾಣಿಸಿಕೊಂಡಿದೆ. ಪ್ರತಿಬಾರಿಯು ಕಾಡಾನೆಯು ಸಾರ್ವಜನಿಕರಿಗೆ ಕಾಣಿಸುತ್ತಿದೆ ಮಾಹಿತಿ ಇದ್ದರೂ ಅರಣ್ಯ ಇಲಾಖೆಗೆ ಕಾಣಿಸುತ್ತಿಲ್ಲವೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಲು ಪ್ರಾರಂಭಿಸಿದೆ. ಮೊದಲ ಘಟನೆ ನಡೆದು ತಿಂಗಳಾದರೂ ಕಾಡನೇ ಅದೇ ತಾಲೂಕಿನ ವ್ಯಾಪ್ತಿಯಲ್ಲಿದ್ದರೂ ಕೂಡ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಆನೆಯನ್ನು ಸೆರೆಹಿಡಿಯಲು ಮುಂದಾಗದೇ ಇರುವುದು ಇವರೆಲ್ಲ ಯಾರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಅನುಮಾನ ಜನರಲ್ಲಿ ಮನೆಮಾಡಿದೆ. ಒಂದೆಡೆ ಅರಣ್ಯ ಹಾಗೂ ಕಾಡು ಪ್ರಾಣಿಗಳನ್ನು ರಕ್ಷಿಸಿ ಎಂದು ಹೇಳುತ್ತಿರುವ ಸರ್ಕಾರ,ಇಲಾಖೆ,ಅಧಿಕಾರಗಳು ಸಾಮಾನ್ಯ ಜನರ,ರೈತರ ಜೀವ,ಜೀವನಕ್ಕೆ ಬೆಲೆಯೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ಆತಂಕದ ಸಂಗತಿಯಾಗಿದೆ.