Categories
ಕರಾವಳಿ

 ಪುತ್ತೂರು: ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಎಂಟ್ರಿ!

 ಪುತ್ತೂರು: ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಎಂಟ್ರಿ!
– ಸ್ಕೂಲ್‌ ಗೇಮ್ಸ್‌ ಫೆಡರೇಶನ್‌ ಆಫ್‌ ಇಂಡಿಯಾ ಕ್ರೀಡಾಕೂಟಕ್ಕೆ ಸಮೃದ್ಧಿ ಜೆ ಶೆಟ್ಟಿ ಆಯ್ಕೆ!
– ಜಾರ್ಖಂಡ್‌ನ ರಾಂಚಿಯಲ್ಲಿ ಕ್ರೀಡಾಕೂಟ ಆಯೋಜನೆ

NAMMUR EXPRESS NEWS
ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಮೃದ್ಧಿ ಜೆ ಶೆಟ್ಟಿ ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯುವ ಸ್ಕೂಲ್‌ ಗೇಮ್ಸ್‌ ಫೆಡರೇಶನ್‌ ಆಫ್‌ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಹಾಗೂ ಹರಿಣಾಕ್ಷಿ ಜೆ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಕಾಲೇಜಿನ ದೈಹಿಕಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನ ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

Categories
ಅಡಿಕೆ-ದರ

ಅಡಿಕೆ ದರ ಹೇಗಿದೆ?

ಅಡಿಕೆ ದರ ಹೇಗಿದೆ?
– ಗೊರಬಲು ಎಷ್ಟು? ಬೆಟ್ಟೆ, ಸರಕು ರೇಟಿನ ಕಥೆ ಏನಾಗಿದೆ?

NAMMUR EXPRESS NEWS

ಬೆಟ್ಟೆ: 54100 – 56599

ಸರಕು: 48599 – 75000

ಗೊರಬಲು: 16011- 32099

ರಾಶಿ: 32999- 51099

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಉಚಿತ ಕಿವಿಯ ಶ್ರವಣ ತಪಾಸಣೆ

ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಉಚಿತ ಕಿವಿಯ ಶ್ರವಣ ತಪಾಸಣೆ
– ಜ.5 ರಂದು ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ
– ಅಂತರಾಷ್ಟ್ರೀಯ ಸಂಸ್ಥೆಯಿಂದ ಅನುಭವ ಪಡೆದಿರುವ ತಜ್ಞರಿಂದ ಈ ಶಿಬಿರ
– ನೋಂದಾಯಿಸಿದ 30 ಜನರು ಈ ಸೌಲಭ್ಯ ಪಡೆದುಕೊಳ್ಳಬಹುದು

NAMMUR EXPRESS NEWS
ತೀರ್ಥಹಳ್ಳಿ: ತುಳುನಾಡ ಸಿರಿ ಸೌಹಾರ್ದ ಸಹಕಾರಿ ಸಂಘ (ನಿ ) ತೀರ್ಥಹಳ್ಳಿ ಇವರ ಆಶ್ರಯದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಬಂಟರ ಸಂಘ ತೀರ್ಥಹಳ್ಳಿ, ರೋಟರಿ ಕ್ಲಬ್ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಪ್ರಪ್ರಥಮ ಬಾರಿಗೆ ತೀರ್ಥಹಳ್ಳಿಯಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ ನಡೆಯುತ್ತಿದೆ.
ನೋಂದಾಯಿಸಿದ 30 ಸಾರ್ವಜನಿಕರಿಗೆ ತುಳುನಾಡ ಸಂಘ ಆಯೋಜಿಸಿದ ಸಂಸ್ಥೆಗಳಿಂದ ಕಿವಿಯ ಶ್ರವಣ ಸಾಧನದ ಮೊತ್ತದ 40% ಸಂಘದವರು ಭರಿಸಲಾಗುತ್ತದೆ. ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ. ನೋಂದಣಿ ಕಡ್ಡಾಯವಾಗಿದ್ದು ಇಂದೇ ನೊಂದಾಯಿಸಿಕೊಳ್ಳಿ. ಸಂಸ್ಥೆ ಈ ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಮ್ಮ ಪ್ರೀತಿ ಪಾತ್ರರಿಗೆ ಕೇಳಿಸಿಕೊಳ್ಳುವ ಸಂತೋಷವನ್ನು ನೀಡಿ. ಜನವರಿ 5 ಭಾನುವಾರ ಬೆಳಗ್ಗೆ 10 ಗಂಟೆಗೆ ಮಾರಿಕಾಂಬ ಸಭಾಭವನ ಹಳೆ ಪೊಲೀಸ್ ಸ್ಟೇಷನ್ ಹತ್ತಿರ, ನಾಡ್ತಿ ಸೊಪ್ಪುಗುಡ್ಡೆ ತೀರ್ಥಹಳ್ಳಿ ಇಲ್ಲಿ ಉಚಿತ ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಗಳ ವಿತರಣೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9902344399, 9481179490, 9901184246, 9113231844

Categories
ಚಿತ್ರದುರ್ಗ

ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ ವಾರ್ಷಿಕೋತ್ಸವ ಸಂಭ್ರಮ

ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ ವಾರ್ಷಿಕೋತ್ಸವ ಸಂಭ್ರಮ
– ಸೇವಾ ಕಾರ್ಯಕ್ರಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
– ಜ.5ರಂದು ಸಂಜೆ 4-30ಕ್ಕೆ ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ಹೊಸನಗರ: ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹೊಸನಗರಕ್ಕೆ ಹೊಸತೊಂದು ಕಲ್ಪನೆಯಾಗಿದ್ದು, 05-01-2025ನೇ ಭಾನುವಾರದಂದು ಈ ಸೇವಾ ಕಾರ್ಯಕ್ರಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಪ್ರಸಾದ್ ನೇತ್ರಾಲಯ, ಉಡುಪಿ ಇವರಿಂದ ಆಯೋಜನೆ ಮಾಡಲಾಗಿದೆ. ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 1-30ರ ವರೆಗೆ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅದೇ ದಿನ ಸಂಜೆ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿಶೇಷ ಮನರಂಜನಾ ಕಾರ್ಯಕ್ರಮ, ಮಕ್ಕಳ ಯಕ್ಷಗಾನ ಪ್ರದರ್ಶನ ಪ್ರಸಂಗ : ಮಹಿಷಾಸುರ ಮರ್ದಿನಿ ರಾತ್ರಿ 7-00 ರಿಂದ 9-30ರ ವರೆಗೆ ಮಕ್ಕಳ ಯಕ್ಷಗಾನ ಕಲಾತಂಡ, ತಿಣಿವೆ, ನಾಗರಕೊಡಿಗೆ ಇವರಿಂದ ಈ ಕಾರ್ಯಕ್ರಮ ನೆರವೇರಲಿದೆ.
05-01-2025ನೇ ಭಾನುವಾರ, ಸಂಜೆ 4-30ಕ್ಕೆ ಸಂತೆ ಮಾರ್ಕೆಟ್ ಕಟ್ಟಡ, ಹೊಸನಗರದಲ್ಲಿ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಾನಿಧ್ಯವನ್ನ ಶ್ರೀ ಮ॥ನಿ॥ಪ॥ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸದಾನಂದ ಶಿವಯೋಗಾಶ್ರಮ, ಮೂಲೆಗದ್ದೆ ಮಠ ಇವರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯರಾಮ್ ಶೆಟ್ಟಿ ಅಧ್ಯಕ್ಷರು, ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ ಇವರು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಗೌರವ ಉಪಸ್ಥಿತಿಯಾಗಿ ಲಯನ್ ಹೆಚ್. ವಾಸಪ್ಪ ಮಾಸ್ತಿಕಟ್ಟೆ ಗೌರವಾಧ್ಯಕ್ಷರು, ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಸೊನಲೆ ಶ್ರೀನಿವಾಸ್, ಮಹಮ್ಮದ್ ಅಶ್ಯಪ್ ಹಿಮಮಿ, ಫಾದರ್ ಸೈಮನ್ ಹೊರ್ಟಾ, ನಾಗಪ್ಪ, ರಶ್ಮಿ, ಗುರಣ್ಣ ಎಸ್. ಹೆಬ್ಬಾಳ್, ಶ್ರೀನಿವಾಸ್ ರೆಡ್ಡಿ, ಪ್ರವೀಣ್, ಪ್ರದೀಪ್ ಆರ್, ಪ್ರೀತಿ ಶೇಟ್,ಎನ್.ಆರ್. ದೇವಾನಂದ್, ಚಂದ್ರಶೇಖರ, ಮೋಹನ್ ಕುಮಾರ್, ಶೈಲಜ ಕೆ.ಆ‌ರ್, ಆನಂದ್ ಗೌಡ್ರು ಆನೇಗದ್ದೆ, ಅಶೋಕ್ ಮಾವಿನಕೊಪ್ಪ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಕೂಡ ಆದರದ ಸುಸ್ವಾಗತವನ್ನ ಕೋರುವವರು ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಸರ್ವ ಪದಾಧಿಕಾರಿಗಳು ಸರ್ವಧರ್ಮ ಸೌಹಾರ್ದ ಸೇವಾ ಟ್ರಸ್ಟ್ (ರಿ.), ಈ ಕಾರ್ಯಕ್ರಮದಲ್ಲಿ ಭೋಜನದ ವ್ಯವಸ್ಥೆ ಕೂಡ ಇರುತ್ತದೆ .

Categories
ತೀರ್ಥಹಳ್ಳಿ

ಕುಡುಮಲ್ಲಿಗೆ ಸೊಸೈಟಿ : ಸಹಕಾರ ಭಾರತಿ ತಂಡ ಭರ್ಜರಿ ಗೆಲುವು!

ಕುಡುಮಲ್ಲಿಗೆ ಸೊಸೈಟಿ : ಸಹಕಾರ ಭಾರತಿ ತಂಡ ಭರ್ಜರಿ ಗೆಲುವು!
– 12 ಸ್ಥಳದಲ್ಲಿ 10 ಸ್ಥಾನ ಗಳಿಸಿ ಅಭೂತಪೂರ್ವ ಜಯ!
– ಗೆಲುವು ಸಾಧಿಸಲು ಸಹಕರಿಸಿದವರಿಗೆ ಧನ್ಯವಾದ ಸಮರ್ಪಣೆ

NAMMUR EXPRESS NEWS
ತೀರ್ಥಹಳ್ಳಿ: ಕುಡುಮಲ್ಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಕುಡುಮಲ್ಲಿಗೆ ಡಿ. 29 ಭಾನುವಾರದಂದು ಕುಡುಮಲ್ಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಹಕಾರ ಭಾರತಿ ತಂಡ ಭರ್ಜರಿ ಗೆಲುವನ್ನು ಸಾಧಿಸಿದೆ. ಕುಡುಮಲ್ಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತ ನೀಡಿ ಆಶೀರ್ವಾದಿಸಿದ್ದು, ಒಟ್ಟು 12 ಸ್ಥಾನದಲ್ಲಿ 10 ಸ್ಥಾನಗಳಲ್ಲಿ ಅಭೂತಪೂರ್ವ ಜಯಗಳಿಸಲು ಅನೂವು ಮಾಡಿದ ಎಲ್ಲಾ ಷೇರುದಾರ ರೈತ ಬಂಧುಗಳಿಗೆ ಹಾಗೂ ಹಗಲಿರಳು ಶ್ರಮಿಸಿ ಸಹಕಾರ ಭಾರತಿ ತಂಡ ಜಯಗಳಿಸಲು ಸಹಕಾರಿಯಾದ ಸಂಘಟನೆ ಮತ್ತು ಪರಿವಾರದ ಎಲ್ಲ ಕಾರ್ಯಕರ್ತ ಬಂಧುಗಳಿಗೂ ಈ ಮೂಲಕ ಧನ್ಯವಾದಗಳನ್ನು ಸಮರ್ಪಿಸಲಾಗಿದೆ.

ಚುನಾವಣೆಯಲ್ಲಿ ವಿಜೇತರಾದವರ ಪಟ್ಟಿ ಹೀಗಿದೆ!

ಅಂಜುರ ಕುಡುಮಲ್ಲಿಗೆಯವರು 390 ಮತ ಪಡೆದು 128 ಅಂತರದಲ್ಲಿ, ಪ್ರಶಾಂತ್ ಕುಕ್ಕೆ 372 ಮತ ಪಡೆದು, 110 ಅಂತರದಲ್ಲಿ, ಸುಧಾಕರ ಹಕ್ಲುಮನೆ 343 ಮತ ಪಡೆದು, 81ಅಂತರದಲ್ಲಿ, ಅಶೋಕ್ ಕುಕ್ಕೆ 340 ಮತ ಪಡೆದು ಅಂತರ 78, ಭಾಸ್ಕರ್ ಶೆಟ್ಟಿ ಪಡೆದ ಮತ 323 ಅಂತರ 72, ಅನಂತಮೂರ್ತಿ ಹೊದಲ ಪಡೆದ ಮತ 271 ಅಂತರ 57, ರಚನಾ ಸುಧೀರ್ ಪಡೆದ ಮತ 268 ಅಂತರ 32, ಸುಕನ್ಯಾ ಪಡೆದ ಮತ 267 ಅಂತರ 31, ರವಿ ಹಲ್ಯಾಪುರ ಪಡೆದ ಮತ 188 ಅಂತರ 77 ಹಾಗೂ ಸುನಂದಾ ಬಾಳಗಾರು ಅವರು 159 ಮತ ಪಡೆದು 24 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.ವಿಜೇತರಾದ ಸಹಕಾರ ಭಾರತಿ ತಂಡ ಈ ಮೂಲಕ ಕೃತಜ್ಞತೆ ಸಲ್ಲಿಸಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಕಡಬ: ಬಾಲಕಿ ಜೊತೆ ಲವ್ವಿ ಡವ್ವಿ ಕೊನೆಗೆ ಅತ್ಯಾಚಾರ!
– ದೈಹಿಕ ಸಂಪರ್ಕ ವೀಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್!
– ಕುಕ್ಕುಂದೂರಿನಲ್ಲಿ ಬಸ್‌ಗೆ ಆಂಬ್ಯುಲೆನ್ಸ್ ಡಿಕ್ಕಿ: ವಾಹನಗಳು ಜಖಂ!
– ಕಾಪು: ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ, ಕಾರಣ?

NAMMUR EXPRESS NEWS
ಕಡಬ: ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಜೊತೆಗೆ ಪ್ರೀತಿಸುವ ನಾಟಕವಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂಕಲ್‌ ನಿವಾಸಿ ಪ್ರವೀಣ್‌ ಪೂಜಾರಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಆತ ಬಾಲಕಿ ಜೊತೆಗೆ ಸುತ್ತಾಟ ನಡೆಸಿ ವಿಶ್ವಾಸಗಳಿಸಿದ್ದಾನೆ. ನಂತರ ಆತ ಬಾಡಿಗೆ ರೂಂಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಅದರ ವೀಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಅನೇಕ ಬಾರಿ ಆಕೆಯನ್ನು ಪುತ್ತೂರು ಬಳಿಯ ಬಾಡಿಗೆ ರೂಂಗೆ ಕರೆದೊಯ್ಡು ದೈಹಿಕವಾಗಿ ಬಳಸಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಕೆ ಗರ್ಭಿಣಿಯಾಗದಂತೆ ಮಾತ್ರೆಯನ್ನು ತಂದುಕೊಟ್ಟಿದ್ದ. ಅದರ ಜತೆಗೆ ಖಾಸಗಿ ಕ್ಷಣದ ವೀಡಿಯೋಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಯುವಕ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಆ ವಿಷಯವನ್ನು ಮುಚ್ಚಿಟ್ಟು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾಗಿ ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ. ದೂರು ಸ್ವೀಕರಿಸಿದ ಕಡಬ ಪೊಲೀಸರು ಸುಳ್ಯದಲ್ಲಿದ್ದ ಯುವಕನನ್ನು ಬಂಧಿಸಿ ಆತನ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

– ಕುಕ್ಕುಂದೂರಿನಲ್ಲಿ ಬಸ್‌ಗೆ ಆಂಬ್ಯುಲೆನ್ಸ್ ಡಿಕ್ಕಿ: ವಾಹನಗಳು ಜಖಂ!

ಕಾರ್ಕಳ: ಬಸ್‌ಗೆ ಆಂಬ್ಯುಲೆನ್ಸ್ ಡಿಕ್ಕಿಯಾಗಿ ವಾಹನಗಳೆರಡು ಜಖಂಗೊಂಡ ಘಟನೆ ಜ. 2ರಂದು ಕುಕ್ಕುಂದೂರು ಗ್ರಾಮದಲ್ಲಿ ಸಂಭವಿಸಿದೆ.
ಬಸ್‌ನ್ನು ಚಾಲಕ ಕುಕ್ಕುಂದೂರು ಗ್ರಾಮದ ದುರ್ಗಾ ಹೈಸ್ಕೂಲ್ ಗ್ಯಾರೇಜ್ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ತೆರಳುತ್ತಿರುವಾಗ ಅಜೆಕಾರು ಕಡೆಯಿಂದ ಬರುತ್ತಿದ್ದ ಆಂಬ್ಯುಲೆನ್ಸ್ ವಾಹನ ಡಿಕ್ಕಿ ಹೊಡೆದಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮವಾಗಿ ಬಸ್‌ನ ಬಲಬದಿ ಹಾಗೂ ಎದುರುಗಡೆಯ ಚಾಲಕನ ಬಾಗಿಲು ಹಾಗೂ ಬಂಪರ್ ಜಖಂಗೊಂಡಿದ್ದು, ಆಂಬ್ಯುಲೆನ್ಸ್ ವಾಹನ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

– ಕಾಪು: ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ, ಕಾರಣ?

ಕಾಪು: ಉಡುಪಿ ಕಲ್ಸಂಕ ಆಟೋ ರಿಕ್ಷಾ ನಿಲ್ದಾಣದಲ್ಲಿ ರಾತ್ರಿ ಪಾಳಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದ ರಿಕ್ಷಾ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪಳ್ಳಿಗುಡ್ಡೆ ಕೋಟೆ ನಿವಾಸಿ ದೀಪಕ್ ಆರ್. (34) ಆತ್ಮಹತ್ಯೆಗೆ ಶರಣಾದ ರಿಕ್ಷಾ ಚಾಲಕ. ಅವಿವಾಹಿತನಾಗಿರುವ ದೀಪಕ್ ಆರ್ ಮದ್ಯ ಸೇವನೆ ಚಟವನ್ನು ಹೊಂದಿದ್ದು, ಜ. 1ರಂದು ರಾತ್ರಿ ಪಾಳಯದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಕೋಣೆಯಲ್ಲಿ ಮಲಗಿದ್ದರು. ಸಂಜೆ ತಾಯಿ ಕೋಣೆಗೆ ಹೋಗಿ ನೋಡಿದಾಗ ಒಳಗಿನಿಂದ ಬಾಗಿಲನ್ನು ಲಾಕ್ ಮಾಡಲಾಗಿತ್ತು. ಬಳಿಕ ನೆರೆಹೊರೆಯವರು ಸೇರಿ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ದೀಪಕ್ ಕೋಣೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ರಾಜ್ಯ

ಔಷಧಿ ಮಾಫಿಯಾಕ್ಕೆ ಬಲಿಯಾಗುತ್ತಿದ್ದಾರೆ ಬಾಣಂತಿಯರು!?

ಔಷಧಿ ಮಾಫಿಯಾಕ್ಕೆ ಬಲಿಯಾಗುತ್ತಿದ್ದಾರೆ ಬಾಣಂತಿಯರು!?
– ರಾಜ್ಯದಲ್ಲಿ ಮತ್ತೆ 11 ಬಾಣಂತಿಯರ ಸಾವು
– ಆರ್​ಎಲ್ ಫ್ಲುಯಿಡ್ ನಿಂದ ಉಸಿರು ಚೆಲ್ಲುತ್ತಿರುವ ಬಾಣಂತಿಯರು
– ಮೃತ ಬಾಣಂತಿಯರ ಕುಟುಂಬಸ್ಥರಿಂದ ಉಗ್ರ ಹೋರಾಟಕ್ಕೆ ಸಜ್ಜು
– ಕೇಂದ್ರ, ರಾಜ್ಯ ಸರ್ಕಾರಕ್ಕೆ ಬಡ ಜೀವಗಳು ಕಾಣುತ್ತಿಲ್ವಾ?

NAMMUR EXPRESS NEWS
ರಾಯಚೂರು: ಬಳ್ಳಾರಿ ಬಳಿಕ ರಾಯಚೂರಿನಲ್ಲೂ ಬಾಣಂತಿಯರ ಮರಣ ಮೃದಂಗ ಶುರುವಾಗಿದೆ. ಅಕ್ಟೋಬರ್​ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 11 ಬಾಣಂತಿಯರ ಸಾವಾಗಿದೆ. ಬಾಣಂತಿಯರ ಸಾವಿನ ಸರಮಾಲೇ ಶುರುವಾಗಿದ್ದೇ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ, ಮತ್ತೆ ಬಳ್ಳಾರಿ ಕೇಸ್​ಗಳಂತೆ ಇಲ್ಲಿಯೂ ಪಶ್ಚಿಮ ಬಂಗಾಳ ಕಂಪೆನಿಯ ಆರ್​ಎಲ್ ಫ್ಲುಯಿಡ್ ಅನ್ನು ಬಾಣಂತಿಯರಿಗೆ ನೀಡಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತ ಆರ್​ಎಲ್ ಫ್ಲುಯಿಡ್​ನ ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಬೆಂಗಳೂರು ಹಾಗೂ ಹೈದರಾಬಾದ್​ ಲ್ಯಾಬ್​ಗಳಿಂದ ವರದಿ ಬಂದಿದೆ. ಅದು ಸರ್ಕಾರಕ್ಕೂ ತಲುಪಿದೆ. ಆ ವರದಿಯಲ್ಲಿ ಆರ್​ಎಲ್​​ ಫ್ಲುಯಿಡ್ ಕಳಪೆ ಎಂಬ ವಿಷಯ ಬಹಿರಂಗವಾಗಿದ್ದು ಬೆಚ್ಚಿ ಬೀಳಿಸಿತ್ತು. ಜಿಲ್ಲೆಯಲ್ಲಿ ನಡೆದ ಉಳಿದ ಕೇಸ್​ಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವೈದ್ಯರ ವಿರುದ್ದ ಕ್ರಮಕೈಗೊಳ್ಳುವಂತೆ ಮೃತ ಬಾಣಂತಿಯರ ಕುಟುಂಬಸ್ಥರು ಹಾಗೂ ಹೋರಾಟಗಾರರು ಆಗ್ರಹಿಸಿದ್ದಾರೆ. ಆದರೆ, ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ಮಧ್ಯೆ ಸಿಂಧನೂರು ತಾಲ್ಲೂಕು ಆಸ್ಪತ್ರೆಯಂತೆ ರಿಮ್ಸ್ ಆಸ್ಪತ್ರೆಯಲ್ಲೂ ನಾಲ್ಕು ಜನ ಬಾಣಂತಿಯರು ಉಸಿರು ಚೆಲ್ಲಿದ್ದು, ರಿಮ್ಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಮೂಲದ ಉಮಾ ತನ್ನ ಹಸುಗೂಸು ಸಮೇತ ರಿಮ್ಸ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಬಳಿಕ ಜಾಗಿರ ವೆಂಕಟಾಪುರ ಗ್ರಾಮದ ರೆಹಮತ್ ಬೀ ಮಗುವಿಗೆ ಜನ್ಮ ನೀಡಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ರಿಮ್ಸ್ ನಲ್ಲಿ ಅಸುನೀಗಿದ್ದಾರೆ. ನಂತರ ರಾಯಚೂರು ತಾಲ್ಲೂಕಿನ ರಂಗಾಪುರ ಗ್ರಾಮದ ನಿಂಗಮ್ಮ ಎಂಬ ಮಹಿಳೆ ಸಾಮಾನ್ಯ ಹೆರಿಗೆಯಾಗಿ ಮನೆ ಸೇರಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಮತ್ತೆ ರಿಮ್ಸ್ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರಿಮ್ಸ್​​ನಲ್ಲೇ ಕೊನೆಯುಸಿರೆಳೆದಿದ್ದಾರೆ.
ಹೊಸ ವರ್ಷದ ದಿನವೇ ಮಸೀದಾಪುರ ಗ್ರಾಮದ ಶಿವಲಿಂಗಮ್ಮ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮಗು ಸಮೇತ ತಾಯಿಯೂ ರಿಮ್ಸ್​ನಲ್ಲೇ ಸಾವನ್ನಪ್ಪಿದ್ದಾರೆ. ಈಕೆಯ ಪೋಷಕರು ಡಿಸ್ಚಾರ್ಜ್ ಮಾಡಿ ಬೇರೆಡೆ ಕರೆದೊಯ್ಯುತ್ತೇವೆ ಎಂದರೂ ಕೂಡ ರಿಮ್ಸ್ ಆಸ್ಪತ್ರೆ ವೈದ್ಯರು ಡಿಸ್ಚಾರ್ಜ್ ಮಾಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಆಕೆಯ ಸಾವಾಗಿದೆ. ಆಕೆಯ ಸಾವಿಗೆ ರಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ ಎಂದು ಶಿವಲಿಂಗಮ್ಮ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ. ಭಾಸ್ಕರ್, ಆಕೆಗೆ ರಕ್ತದ ಒತ್ತಡ ಹೆಚ್ಚಿತ್ತು. ಡೆಲಿವರಿಗೂ ಮುಂಚೆಯೂ ರಕ್ತದೊತ್ತಡ ನಡೆಯುತ್ತಿತ್ತು. ಆ ಬಳಿಕ ಹೆರಿಗೆ ಬಳಿವೂ ಹೆಚ್ಚಾಗಿತ್ತು. ಹೀಗಾಗಿ ಆರೋಗ್ಯದಲ್ಲಿ ಏರುಪೇರಾಗಿ ಸಾವಾಗಿದೆ ಎಂದಿದ್ದಾರೆ.ರಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು ಬಾಣಂತಿಯರ ಸಾವಾಗಿದ್ದು ನಾಲ್ಕು ಕೇಸ್​ಗಳಲ್ಲೂ ಮೃತರ ಕುಟುಂಬಸ್ಥರು ವೈದ್ಯರ ನಿರ್ಲಕ್ಷ ಅಂತಲೇ ಆರೋಪ ಮಾಡಿದ್ದಾರೆ. ಆದರೆ, ಈವರೆಗೆ ಸರ್ಕಾರವಾಗಲಿ, ಆರೋಗ್ಯ ಇಲಾಖೆ ಆಗಲಿ ಯಾವುದೇ ಕ್ರಮಗೈಕೊಂಡಿಲ್ಲ.

Categories
ಕರಾವಳಿ

ಮಂಗಳೂರಿನೆಲ್ಲೆಡೆ ಸೈಬರ್‌ ಕ್ರೈಂ, ಸೈಬರ್‌ ಕ್ರೈಂ, ಸೈಬರ್‌ ಕ್ರೈಂ!

ಮಂಗಳೂರಿನೆಲ್ಲೆಡೆ ಸೈಬರ್‌ ಕ್ರೈಂ, ಸೈಬರ್‌ ಕ್ರೈಂ, ಸೈಬರ್‌ ಕ್ರೈಂ!
– ಈ ಬುದ್ಧಿವಂತರ ರಾಜ್ಯಕ್ಕೆ ಏನಾಗಿದೆ?
– ಮೂರು ವರ್ಷದಲ್ಲಿ 43 ಪ್ರಕರಣ, 50.91 ಕೋಟಿ ರೂ. ಸೈಬರ್‌ ವಂಚನೆ!
– 40,46,75,693 ಕೋಟಿ ರೂ. ಸೈಬರ್‌ ವಂಚಕರಿಂದ ಗುಳುಂ!

NAMMUR EXPRESS NEWS
ಮಂಗಳೂರು: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2022-24ರವರೆಗೆ ಕೇವಲ ಮೂರು ವರ್ಷದಲ್ಲಿ 43 ಪ್ರಕರಣ ದಾಖಲಾಗಿದ್ದು, 50.91 ಕೋಟಿ ರೂ. ಸೈಬರ್‌ ವಂಚನೆ ನಡೆದಿದೆ. ಮೂರು ವರ್ಷಗಳಲ್ಲಿ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಸೆನ್‌ ಠಾಣೆಗಳಲ್ಲಿ 313 ಪ್ರಕರಣ ದಾಖಲಾಗಿದ್ದರೆ, ಉಳಿದ ಪೊಲೀಸ್‌ ಠಾಣೆಗಳಲ್ಲಿ 120 ಪ್ರಕರಣ ದಾಖಲಾಗಿದೆ. 2024ನೇ ಸಾಲಿನಲ್ಲಿ ಸೆನ್‌ ಪೊಲೀಸ್‌ ಠಾಣೆಯಲ್ಲಿ 62, ಇತರ ಪೊಲೀಸ್‌ ಠಾಣೆಗಳಲ್ಲಿ 72 ಸೇರಿದಂತೆ ಒಟ್ಟು 134 ಪ್ರಕರಣ ದಾಖಲಾಗಿದೆ. 2024ರಲ್ಲಿ 40,46,75,693 ಕೋಟಿ ರೂ. ಸೈಬರ್‌ ವಂಚಕರ ಪಾಲಾಗಿದೆ. 9,32,54,814 ಕೋಟಿ ರೂ. ತಡೆ ಹಿಡಿಯಲಾಗಿದೆ. 2,55,45,674 ಕೋಟಿ ರೂ. ದೂರುದಾರರಿಗೆ ಹಿಂತಿರುಗಿಸಲಾಗಿದೆ.

42 ಆರೋಪಿಗಳ ಬಂಧನ!

ಸೈಬರ್‌ ಕ್ರೈಂ ಪ್ರಕರಣ ಪತ್ತೆ ಪೊಲೀಸರಿಗೆ ಸವಾಲಾಗಿದ್ದರೂ 2024ನೇ ಸಾಲಿನಲ್ಲಿ ನಗರ ಕಮಿಷನರೆಟ್‌ ವ್ಯಾಪ್ತಿಯಲ್ಲಿ ದಾಖಲಾಗಿದ್ದ 134 ಪ್ರಕರಣಗಳ ಪೈಕಿ ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿ 42 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ 15 ಮಂದಿ ಕರ್ನಾಟಕದವರು. 9 ಮಂದಿ ತಮಿಳುನಾಡು, 11 ಮಂದಿ ಕೇರಳ, ಇಬ್ಬರು ಆಂಧ್ರಪ್ರದೇಶ, ಒಡಿಸ್ಸಾ, ಹೊಸದಿಲ್ಲಿ, ಜಮ್ಮುಕಾಶ್ಮೀರ, ಮಹಾರಾಷ್ಟ್ರದ ತಲಾ ಒಬ್ಬೊಬ್ಬರು ಸೇರಿದ್ದಾರೆ. ಹೂಡಿಕೆ ಹೆಸರಲ್ಲಿ 67 ಪ್ರಕರಣದಲ್ಲಿ 30,36,61,299 ರೂ., ಫೆಡೆಕ್ಸ್‌, ಕೊರಿಯರ್‌, ಡಿಜಿಟಲ್‌ ಅರೆಸ್ಟ್‌ 25 ಪ್ರಕರಣದಲ್ಲಿ 7,07,99,645 ರೂ., ಉದ್ಯೋಗದ ಹೆಸರಲ್ಲಿ 8 ವಂಚನೆ ಪ್ರಕರಣದಲ್ಲಿ 1,21,64,788 ರೂ., ಮ್ಯಾಟ್ರಿಮೋನಿಯಲ್‌ ಹೆಸರಲ್ಲಿ 4 ಪ್ರಕರಣದಲ್ಲಿ 60,46,708 ರೂ., ಆನ್‌ಲೈನ್‌ ಶಾಪಿಂಗ್‌ ಹೆಸರಲ್ಲಿ 3 ವಂಚನೆ ಪ್ರಕರಣದಲ್ಲಿ 5,93,626 ರೂ. ಕಳೆದುಕೊಂಡಿದ್ದಾರೆ. ಷೇರು ಮಾರ್ಕೆಟ್‌ ಹೆಸರಲ್ಲಿ 5 ವಂಚನೆ ಪ್ರಕರಣದಲ್ಲಿ 41,96,000 ರೂ., ಜಾಹೀರಾತು ಹೆಸರಲ್ಲಿ 4 ವಂಚನೆ ಪ್ರಕರಣದಲ್ಲಿ 50 ಸಾವಿರ ರೂ., ಕೆವೈಸಿ ಹೆಸರಲ್ಲಿ 3 ವಂಚನೆ ಪ್ರಕರಣದಲ್ಲಿ 8,35,000 ರೂ, ಇತರ ವಂಚನೆ 15 ಪ್ರಕರಣಗಳಲ್ಲಿ 63,28,627 ರೂ. ಸೇರಿದಂತೆ ಒಟ್ಟು 40,46,75,693 ರೂ. ವಂಚಕರ ಪಾಲಾಗಿದೆ.

ನಿರಂತರ ಜಾಗೃತಿ!

ಸೈಬರ್‌ ಕ್ರೈಂ ಬಗ್ಗೆ ನಗರ ಪೊಲೀಸ್‌ ಇಲಾಖೆಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರ ಕಡೆಗೆ ಗುರಿ ಮಾಡಲಾಗುತ್ತಿದೆ. ಬ್ಯಾಂಕ್‌ ಅಧಿಕಾರಿಗಳನ್ನು ಜತೆಗೂಡಿಸಿಕೊಂಡು ಜಾಥಾ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ. ಜೊತೆಗೆ ಮೊಬೈಲ್ ಕರೆಗಳಲ್ಲಿ ಸಹ ಜಾಗೃತಿ ಕ್ರಮವಾಗಿ ಎಚ್ಚರಿಕೆ ನೀಡಲಾಗುತ್ತದೆ. ಜನರು ಇನ್ನಾದರೂ ಈ ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸಬೇಕಾಗಿ ನಮ್ಮೂರ್ ಎಕ್ಸ್ಪ್ರೆಸ್ ನ್ಯೂಸ್ ಮೂಲಕ ತಿಳಿಸಲಾಗಿದೆ.

Categories
ಕರಾವಳಿ

ಮಾರಣಕಟ್ಟೆಯಲ್ಲಿ ಮಕರ ಸಂಕ್ರಮಣ ಉತ್ಸವದ ಸಜ್ಜು!

ಮಾರಣಕಟ್ಟೆಯಲ್ಲಿ ಮಕರ ಸಂಕ್ರಮಣ ಉತ್ಸವದ ಸಜ್ಜು!
– ಜ.14ರಿಂದ 16ರವರೆಗೆ ಉತ್ಸವ: ಸರ್ವರಿಗೂ ಸ್ವಾಗತ
– ವಿವಿಧ ರೀತಿಯ ಕೆಂಡಸೇವೆ, ಮಂಡಲ ಸೇವೆ, ಯಕ್ಷಗಾನ ಸೇವೆ

NAMMUR EXPRESS NEWS
ಕುಂದಾಪುರ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ವರ್ಷಾವಧಿಯ ಮಕರ ಸಂಕ್ರಮಣ ಉತ್ಸವ ನಡೆಯಲಿದ್ದು, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಜ.14 ರಿಂದ 16ರ ವರೆಗೆ ನಡೆಯಲಿರುವ ಮಕರ ಸಂಕ್ರಮಣ ಉತ್ಸವಕ್ಕೆ ಸಂಪೂರ್ಣ ಸಿದ್ಧತೆ ನಡೆದಿದೆ. ಕರಾವಳಿಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಾರಣಕಟ್ಟೆ ದೇವಾಲಯದಲ್ಲಿ ಸಾವಿರಾರು ಭಕ್ತರು ಬೆಳಿಗ್ಗೆಯಿಂದ ದೇವರ ದರ್ಶನ ಪಡೆಯುತ್ತಾರೆ. ಜ.14ರಂದು ಬೆಳಗ್ಗೆ 9ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ, ರಾತ್ರಿ 10.30ಕ್ಕೆ ಕೆಂಡಸೇವೆ, ಜ.15, ಬೆಳಗ್ಗೆ ಮಹಾಮಂಗಳಾರತಿ, ರಾತ್ರಿ 9.30ಕ್ಕೆ ಮಂಡಲ ಸೇವೆ, ಜ. 16 ರಂದು ಬೆಳಗ್ಗೆ 9:30ಕ್ಕೆ ಮಹಾಮಂಗಳಾರತಿ ಹಾಗೂ ಮಂಡಲ ಸೇವೆ, ರಾತ್ರಿ ಎಂಟು ಗಂಟೆಗೆ ಕಡಲು ನೈವೇದ್ಯ ಹಾಗೂ ಮಹಾಮಂಗಳಾರತಿ ರಾತ್ರಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ಯಕ್ಷಗಾನ ಸೇವಾ ಆಟ ಜರಗಲಿದೆ. ಸರ್ವರನ್ನು ಆಡಳಿತ ಮಂಡಳಿ ಸ್ವಾಗತಿಸಿದೆ.

Categories
ರಾಜ್ಯ

ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಗೆ ಚುನಾವಣೆ!

ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಗೆ ಚುನಾವಣೆ!
– ಚುನಾವಣೆ ಸಂಪೂರ್ಣ ಉಸ್ತುವಾರಿ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಹೆಗಲಿಗೆ
– ಮುಂದಿನ ಎಲ್ಲಾ ಹಂತದ ಪದಾಧಿಕಾರಿಗಳ ಆಯ್ಕೆಗೂ ಚುನಾವಣೆ ಮೂಲಕವೇ ಆಯ್ಕೆ : ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ

NAMMUR EXPRESS NEWS
ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸಲಾಗುವುದು ಎಂದು ಪ್ರಹ್ಲಾದ ಜೋಷಿ ಹೇಳಿದ್ದಾರೆ. ಇದರ ಸಂಪೂರ್ಣ ಉಸ್ತುವಾರಿಯನ್ನು ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಈಗಿನ ರಾಜ್ಯಾಧ್ಯಕ್ಷರು ಚುನಾವಣೆ ಮೂಲಕ ಆಯ್ಕೆಯಾದವರಲ್ಲ. ಪಕ್ಷದ ಹೈಕಮಾಂಡ್ ಅವರ ನೇಮಕ ಮಾಡಿದೆ. ಎಲ್ಲರ ಸಮ್ಮತಿ ಮೇರೆಗೆ ಅವರನ್ನು ನೇಮಕ ಮಾಡಲಾಗಿದೆ. ಆದರೆ ಈ ಮುಂದಿನ ಎಲ್ಲಾ ಹಂತದ ಪದಾಧಿಕಾರಿಗಳ ಆಯ್ಕೆಗೂ ಚುನಾವಣೆ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಹ್ಲಾದ ಜೋಷಿ ತಿಳಿಸಿದ್ದಾರೆ. ಬಿಜೆಪಿ ಸದಸ್ಯತ್ವ ಅಭಿಯಾನ ಮುಗಿದ ಬಳಿಕ ಎಲ್ಲ ಹಂತಗಳಲ್ಲೂ ಪಕ್ಷದ ಪದಾಧಿಕಾರಿಗಳ ಚುನಾವಣೆ ನಡೆಯಲಿದೆ. ಈಗಾಗಲೇ ಬೂತ್ ಅಧ್ಯಕ್ಷರ ಆಯ್ಕೆ ನಡೆದಿದೆ. ಮಂಡಲ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಅದೇ ರೀತಿ, ಪ್ರತಿ ರಾಜ್ಯದ ಬಿಜೆಪಿ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಒಬ್ಬೊಬ್ಬರನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮೇಲ್ವಿಚಾರಕರಾಗಿದ್ದಾರೆ ಎಂದು ಅವರು ಹೇಳಿದರು. ಮಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಹ್ಲಾದ ಜೋಷಿ ಅವರು ರಾಜ್ಯ ಆಡಳಿತ ಪಕ್ಷದ ಮೇಲೂ ಹರಿಹಾಯ್ದರು. ಮುಖ್ಯಮಂತ್ರಿ ಸೇರಿ ಅನೇಕ ಸಚಿವರ ವಿರುದ್ಧ ಭ್ರಷ್ಟಾಚಾರ, ಆತ್ಮಹತ್ಯೆಗೆ ಪ್ರಚೋದನೆಯ, ಕಿರುಕುಳದಂತಹ ಗಂಭೀರ ಆರೋಪಗಳಿವೆ. ಈಶ್ವರಪ್ಪ ಹಾಗೂ ಯಡಿಯೂರಪ್ಪ ಪ್ರಕರಣದಲ್ಲಿ ಆಡಿದ ಮಾತುಗಳನ್ನ ಸಿಎಂ ಒಮ್ಮೆ ನೆನಪು ಮಾಡಿಕೊಳ್ಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.