Categories
ಕರಾವಳಿ

ಪ್ರಿಯಕರನ ಜತೆ ಸೇರಿ ಪತಿ ಹತ್ಯೆ ಪ್ರಕರಣ; ಪತ್ನಿ ಜಾಮೀನಿಗೆ ಆಕ್ಷೇಪಣೆ ಸಲ್ಲಿಕೆ

ಪ್ರಿಯಕರನ ಜತೆ ಸೇರಿ ಪತಿ ಹ*ತ್ಯೆ ಪ್ರಕರಣ; ಪತ್ನಿ ಜಾಮೀನಿಗೆ ಆಕ್ಷೇಪಣೆ ಸಲ್ಲಿಕೆ
– ಮಾ. 11ರಂದು ಕಾರ್ಕಳದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಲಯದ ಸಂಚಾರಿ ಪೀಠದಲ್ಲಿ ನಡೆಯಲಿದೆ.
– ಅ. 25ರಂದು ಆರೋಪಿಗಳನ್ನು ಅಜೆಕಾರು ಪೊಲೀಸರಿಂದ ಬಂದಿಸಲಾಗಿದೆ

NAMMUR EXPRESS NEWS

ಕಾರ್ಕಳ: ಅಜೆಕಾರಿನ ದೆಪ್ಪುತ್ತೆಯ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ ಸಂಬಂಧ ಅವರ ಪತ್ನಿ ಪ್ರತಿಮಾಗೆ ಜಾಮೀನು ನೀಡುವುದಕ್ಕೆ ಸರಕಾರಿ ಅಭಿಯೋಜಕರು ಸೋಮವಾರ ಆಕ್ಷೇಪಣೆ ಸಲ್ಲಿಸಿದ್ದು, ಅದರ ವಿಚಾರಣೆ ಮಾ. 11ರಂದು ಕಾರ್ಕಳದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಲಯದ ಸಂಚಾರಿ ಪೀಠದಲ್ಲಿ ನಡೆಯಲಿದೆ.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರತಿಮಾ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಆಕ್ಷೇಪ ಸಲ್ಲಿಸಿದ್ದರು. ಅದರ ಕುರಿತಂತೆ ವಿಚಾರಣೆ ನಡೆದ ಬಳಿಕ ಜಾಮೀನು ನೀಡಬೇಕೋ ? ಅಥವಾ ಬೇಡವೋ ಅನ್ನುವುದನ್ನು ನ್ಯಾಯಾಧೀಶರು ನಿರ್ಧರಿಸಲಿದ್ದಾರೆ.
ಇದಕ್ಕೂ ಮೊದಲು ಪ್ರಕರಣದ ಮತ್ತೋರ್ವ ಆರೋಪಿ ದಿಲೀಪ್ ಹೆಗ್ಡೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಘಟನೆ ಹಿನ್ನೆಲೆ: ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆಯ ನಿವಾಸಿ ಬಾಲಕೃಷ್ಣ ಪೂಜಾರಿ ಅವರನ್ನು 2024ರ ಅ. 20ರಂದು ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣ ಸಂಬಂಧ ಅ. 25ರಂದು ಆರೋಪಿಗಳನ್ನು ಅಜೆಕಾರು ಪೊಲೀಸರು ಬಂಧಿಸಿದ್ದರು

Categories
ಮೈಸೂರು

ಕರ್ನಾಟಕದ ಹನೂರ್ ಬಳಿ ಬಸ್ ಪಲ್ಟಿಯಾಗಿ ಒಬ್ಬ ವ್ಯಕ್ತಿಯ ಸಾವು, 70 ಜನರಿಗೆ ಗಾಯ

ಕರ್ನಾಟಕದ ಹನೂರ್ ಬಳಿ ಬಸ್ ಪಲ್ಟಿಯಾಗಿ ಒಬ್ಬ ವ್ಯಕ್ತಿಯ ಸಾವು, 70 ಜನರಿಗೆ ಗಾಯ
– ನಿಶ್ಚಿತಾರ್ಥ ಸಮಾರಂಭಕ್ಕೆ ಭಾಗವಹಿಸಲು ತೆರಳುತ್ತಿದ್ದ ಬಸ್ ಪಲ್ಟಿ
-ಒಬ್ಬ ವ್ಯಕ್ತಿ ಸಾವನ್ನಪ್ಪಿ, 70 ಮಂದಿ ಗಾಯಗೊಂಡಿದ್ದಾರೆ.

NAMMUR EXPRESS NEWS

ಕನಕಪುರ ತಾಲ್ಲೂಕಿನ ಕಬ್ಬಾಲು ಬಳಿಯ ಹನಿಯೂರು ಗ್ರಾಮದಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಲು ಶಾಗ್ಯ ಗ್ರಾಮದ 70 ಕ್ಕೂ ಹೆಚ್ಚು ಜನರು ಹೋಗಿದ್ದರು.

ಕೊತ್ತನೂರು-ಮಂಡಲಿ ಬಳಿಯ ತಿರುವಿನಲ್ಲಿ ಬಸ್ ಉರುಳಿಬಿದ್ದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಂಡಲಿ ಬಳಿ ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿ, 70 ಮಂದಿ ಗಾಯಗೊಂಡಿದ್ದಾರೆ. ದೊಡ್ಡಿಂಡುವಾಡಿ ಗ್ರಾಮದ ನವೀನ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ

Categories
ಕರಾವಳಿ

ಕಾರ್ಕಳದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸರ್ಕಾರಿ ಕಟ್ಟಡದ ಸಮಸ್ಯೆಗಳು

ಕಾರ್ಕಳದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸರ್ಕಾರಿ ಕಟ್ಟಡದ ಸಮಸ್ಯೆಗಳು
– ಸುಮಾರು 12 ಕ್ಕಿಂತ ಹೆಚ್ಚು ಕಟ್ಟಡಗಳು 70 ವರ್ಷಕ್ಕಿಂತ ಹಳೆಯದಾದ ಕಟ್ಟಡಗಳಾಗಿವೆ
– ಸಿಬ್ಬಂದಿಗಳು ಕರ್ತವ್ಯ  ನಿರ್ವಹಿಸುತಿದ್ದ ಸಂದರ್ಭದಲ್ಲಿ ಪಕ್ಕಾಸು ತುಂಡಾಗಿ ಬಿದ್ದಿದೆ

NAMMUR EXPRESS NEWS

ಕಾರ್ಕಳ:   
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ಒಟ್ಟು 39 ಕಂದಾಯ ಗ್ರಾಮ ಗಳಿದ್ದು  ಅದರಲ್ಲಿ 32 ಗ್ರಾಮ ವೃತ್ತಗಳಿವೆ. ಅದರಲ್ಲಿ ತಾಲೂಕು ಕಚೇರಿ ಹಾಗೂ ಗ್ರಾಮಗಳು ಸೇರಿದಂತೆ ಒಟ್ಟು 25 ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯ ಸಲ್ಲಿಸುತಿದ್ದಾರೆ. ಅದರಲ್ಲೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ  ಒಟ್ಟು 16  ಕಂದಾಯ ಗ್ರಾಮ ಗಳಿದ್ದು 9 ಗ್ರಾಮ ವೃತ್ತಗಳಿವೆ ಅದರಲ್ಲಿ ತಾಲೂಕು ಕಛೇರಿ ಹಾಗೂ ಗ್ರಾಮ ಮಟ್ಟದಲ್ಲಿ ಒಟ್ಟು 7 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

70 ವರ್ಷಗಳ ಹಳೆಯ ಕಟ್ಟಡಗಳು : ಕಾರ್ಕಳ ತಾಲೂಕಿನ  ಮರ್ಣೆ , ಅಂಡಾರು ,ಎಳ್ಲಾರೆ , ಇರ್ವತ್ತೂರು, ಈದು, ನಲ್ಲೂರು , ಹೆರ್ಮುಂಡೆ, ರೆಂಜಾಳ ಹೆಬ್ರಿ ತಾಲೂಕಿನ ಮಡಾಮಕ್ಕಿ, ಬೆಳ್ವೆ, ಕುಚ್ಚೂರು, ಶಿವಪುರ ವರಂಗ ಮುದ್ರಾಡಿ,  ಸುಮಾರು 70 ವರ್ಷದ ಹಳೆಯ ಕಟ್ಟಡಗಳಾಗಿವೆ. ಅದರಲ್ಲೂ ನಾಡ್ಪಾಲು ಗ್ರಾಮದ ಗ್ರಾಮಾಡಳಿತ ಕಚೇರಿಗೆ ಕೇವಲ ತಗಡು ಶೀಟ್ ಹೊಂದಿಸಿ ನಿಲ್ಲಿಸಲಾಗಿದ್ದರು ಅದರಲ್ಲಿ   ಗ್ರಾಮದ ದಾಖಲೆಗಳನ್ನು  ಇಡಲು ಸರಿಯಾದ ವ್ಯವಸ್ಥೆ ಗಳು ಕೂಡ ಇಲ್ಲ . ಇರ್ವತ್ತೂರು ವಿ ಎ ಕಛೇರಿ ಶಾಲೆ ಕಟ್ಟಡದಲ್ಲಿ ,  ಎಳ್ಳಾರೆ  ವಿ ಎ ಕಛೇರಿ ಖಾಸಗಿ  ಭೂಮಿಯಲ್ಲಿ ಕಾರ್ಯ
ನಿರ್ವಹಿಸುತ್ತಿದೆ.‌

ಪಂಚಾಯತ್ ಕಟ್ಟಡದ ಲ್ಲಿ ಗ್ರಾಮಾಧಿಕಾರಿ ಕಚೇರಿ:  
ಗ್ರಾಮಾಡಳಿತ ಕಚೇರಿಗಳು ಸಾರ್ವಜನಿಕರಿಗೆ  ಮನೆಕಟ್ಟಲು ಕಂದಾಯ ಭೂಮಿಯನ್ನು ಗುರುತಿಸಿ  ಸರಕಾರಕ್ಕೆ ವರದಿ ನೀಡುತ್ತವೆ. ಅದರೆ ಅದರಲ್ಲೂ ತಮ್ಮ ಸ್ವಂತ ಕಟ್ಟಡ ವನ್ನು ನಿರ್ಮಾಣ ಮಾಡುವಲ್ಲಿ ಸ್ಥಳ ನಿಗದಿ ಮಾಡುವಲ್ಲಿ  ಸರಕಾರಗಳ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತದೆ. ಕಾರ್ಕಳ ತಾಲೂಕಿನ ಹೆರ್ಮುಂಡೆ, ಮರ್ಣೆ ಅಂಡಾರು, ಮಾಳ ಕೆರುವಾಶೆ, ಎರಲಪಾಡಿ, ನೀರೆ ಬೈಲೂರು, ಇರ್ವತ್ತೂರು, ಪಳ್ಳಿ, ನಲ್ಲೂರು ,ರೆಂಜಾಳ ಮುಡಾರು, ಈದು , ಮಿಯ್ಯಾರು, ನಿಟ್ಟೆ  , ಬೋಳ, ಕಾಂತಾವರ , ಸಾಣೂರು, ಕೆರುವಾಶೆ , ಮುಂಡ್ಕೂರು ,ಇನ್ನಾ ,ಕಲ್ಯಾ ,ನಿಟ್ಟೆ ಹೆಬ್ರಿ ತಾಲೂಕಿನ ಮಡಮಕ್ಕಿ, ಬೆಳ್ವೆ, ಕುಚ್ಚೂರು , ಶಿವಪುರ ವರಂಗ , ಮುದ್ರಾಡಿ  ಎಲ್ಲಾ ಕಛೇರಿಗಳು ಗ್ರಾಮ ಪಂಚಾಯತ್  ನ  ಕಟ್ಟಡಗಳಲ್ಲಿಯೆ ಕಾರ್ಯನಿರ್ವಹಿಸುವ ಅನಿವಾರ್ಯ ತೆ ಯಿದೆ .
ಟಾಯ್ಲೆಟ್ ವ್ಯವಸ್ಥೆ ಯೆ ಇಲ್ಲಾ;  ಜಿಲ್ಲಾಡಳಿತ ಎಲ್ಲೆಡೆ ಶೌಚಾಲಯ ನಿರ್ಮಿಸಬೇಕು ಎಂದು ಪಣ ತೊಟ್ಟಿದ್ದರು ,ಗ್ರಾಮಾಡಳಿತ ಕಛೇರಿಗಳಲ್ಲಿ ಶೌಚಾಲಯ ವ್ಯವಸ್ಥೆ ಗಳೆ ಇಲ್ಲಾ. ಅದರಲ್ಲೂ ಕಾರ್ಕಳ ತಾಲೂಕಿನ   ಶೇ60% ಗ್ರಾಮಾಡಳಿತ ಅಧಿಕಾರಿಗಳು ಮಹಿಳಾ ಸಿಬ್ಬಂದಿಗಳಾಗಿದ್ದಾರೆ . ಹೆಬ್ರಿ ತಾಲೂಕಿನಲ್ಲಿ  ಓರ್ವ  ಗ್ರಾಮಾಡಳಿತ  ಮಹಿಳಾ ಅಧಿಕಾರಿಯಿದ್ದರು , ಅವರು ಕಾರ್ಯ ನಿರ್ವಹಿಸುವ ಕಛೇರಿಯಲ್ಲಿ ಅಲ್ಲೂ ಟಾಯ್ಲೆಟ್ ನಿರ್ಮಾಣ ವಾಗಿಲ್ಲ. ಅದರಲ್ಲೂ ಮಹಿಳೆಯರು ಮಾತ್ರ ಸ್ಥಳೀಯ ಖಾಸಗಿ ಮನೆಗಳನ್ನು  ಆಸರಯಿಸಬೇಕಾಗಿದೆ
ಪಕ್ಕಾಸು ಬಿದ್ದಾಗ ಎದ್ದು ಓಡಿದರು ; ಎಳ್ಳಾರೆ ಗ್ರಾಮಾಡಳಿತ ಕಛೇರಿಯಲ್ಲಿ ಕಳೆದ 9ದಿನಗಳ ಹಿಂದೆ  ಸಿಬ್ಬಂದಿಗಳು ಕರ್ತವ್ಯ  ನಿರ್ವಹಿಸುತಿದ್ದ ಸಂದರ್ಭದಲ್ಲಿ ಪಕ್ಕಾಸು ತುಂಡಾಗಿ ಬಿದ್ದಿತ್ತು ಆದರೆ  ಗ್ರಾಮಾಡಳಿತ ಅಧಿಕಾರಿಯ  ಸಮಯಪ್ರಜ್ಞೆಯಿಂದ ನಡೆಯಲಿದ್ದ ಭಾರಿ  ದುರಂತ ತಪ್ಪಿಹೋಗಿತ್ತು .ಸುಮಾರು 70 ವರ್ಷಗಳ  ಹಳೆಯ ಕಟ್ಟಡಗಳಾಗಿದ್ದ ಕಾರಣ ಮರದ ರೀಪುಗಳು ತುಂಡಾಗಿ   ಹಂಚುಗಳು ನೇತಾಡುತ್ತಿವೆ. ಅಧಿಕಾರಿಗಳು ಜೀವವನ್ನು ಪಣಕ್ಕಿಟ್ಟುಕೊಂಡು ಕಾರ್ಯನಿರ್ವಹಿಸುವ ಒತ್ತಡಗಳಿವೆ.

ಶಾಸಕರ ನಿಧಿಯೆ  ಶ್ರೀರಕ್ಷೆ:  ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಕಾರ್ಕಳ ಸಾಸಕ ವಿ ಸುನಿಲ್ ಕುಮಾರ್ ತಮ್ಮ ಶಾಸಕರ ನಿಧಿ ಹಾಗೂ ಗ್ರಾಮ ಪಂಚಾಯತಿ ಸಹಕಾರದೊಂದಿಗೆ ಹಿರ್ಗಾನ 10ಲಕ್ಷ  ಹಾಗೂ ಕುಕ್ಕುಂದೂರು  ಗ್ರಾಮದ ಗ್ರಾಮಾಧಿಕಾರಿ ಕಛೇರಿಗಳು  ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಅದರಲ್ಲೂ ಸೂಡ ಕಛೇರಿ 5 ಲಕ್ಷ ರೂಗಳ   ಶಾಸಕರ ಅನುದಾನಿಂದ  ನವೀಕರಣ ಮಾಡಲಾಗಿದೆ.ಇನ್ನೂ ನೀರೆ ಗೆ 5 ಲಕ್ಷ ,ಕೌಡೂರು 5 ಲಕ್ಷ  ನಂದಳಿಕೆ ಗೆ 5 ಲಕ್ಷ ಹಣವನ್ನು  ಗ್ರಾಮಾಡಳಿತ ಕಛೇರಿ  ಮೀಸಲಿಡಲಾಗಿದೆ.

ಗ್ರಾಮ ಆಡಳಿತಾಧಿಕಾರಿ ಕಛೇರಿ  ಹಾಗು ಶೌಚಾಲಯ ನಿರ್ಮಾಣಕ್ಕಾಗಿ  ಅನುದಾನ ವನ್ನ  ಸರಕಾರದ ಆದ್ಯತೆ ಮೇರೆಗೆ   ಬಿಡುಗಡೆ ಮಾಡಬೇಕು.
ವಿ ಸುನಿಲ್ ಕುಮಾರ್

ಶಾಸಕರು ,ಹಾಗೂ ಮಾಜಿ ಸಚಿವರು

Categories
ಕರಾವಳಿ

ಜನಪರ ಬಜೆಟ್ ಮಂಡನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉದಯ ಶೆಟ್ಟಿ ಮುನಿಯಾಲು ಶ್ಲಾಘನೆ

ಜನಪರ ಬಜೆಟ್ ಮಂಡನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉದಯ ಶೆಟ್ಟಿ ಮುನಿಯಾಲು ಶ್ಲಾಘನೆ
– ಎಲ್ಲಾ ವರ್ಗ ಎಲ್ಲಾ ಸಮುದಾಯಗಳನ್ನು ಒಳಗೊಂಡ ಸಮಪಾಲು ಸಮ ಬಾಳು ಬಜೆಟನ್ನು ರಾಜ್ಯದ ಜನರಿಗೆ ನೀಡಿದ್ದಾರೆ
– ಸಿದ್ದರಾಮಯ್ಯನವರಿಗೆ ಜನತೆಯ ಪರವಾಗಿ ಅಭಿನಂದನೆಗಳು ಎಂದು ಉದಯ ಶೆಟ್ಟಿ ಮುನಿಯಾಲು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NAMMUR EXPRESS NEWS

ದಾಖಲೆಯ 16ನೇ ಬಜೆಟ್ ಮಂಡಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ವರ್ಗ ಎಲ್ಲಾ ಸಮುದಾಯಗಳನ್ನು ಒಳಗೊಂಡ ಸಮಪಾಲು ಸಮ ಬಾಳು ಬಜೆಟನ್ನು ರಾಜ್ಯದ ಜನರಿಗೆ ನೀಡಿದ್ದಾರೆ ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಬಣ್ಣಿಸಿದ್ದಾರೆ.

ಸುಮಾರು 51 ಸಾವಿರ ಕೋಟಿ ಮೊತ್ತವನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದ್ದು ಇದು ಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ, ಆ ಮೂಲಕ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಬಿಜೆಪಿಗರ ಟೀಕೆಗಳು ಠುಸ್ಸಾಗಿದೆ ಎಂದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನ ಒಂದು ಸಾವಿರ ರೂಪಾಯಿ ಹಾಗೂ ಸಹಾಯಕಿಯರ ಮಾಸಿಕ ಗೌರವದನ 750 ರೂಪಾಯಿಗೆ ಹೆಚ್ಚಿಸುವ ಭರವಸೆಯನ್ನು ನೀಡಿದ್ದಾರೆ ಮತ್ತು ಬಿಸಿಯೂಟ ಸಿಬ್ಬಂದಿಗಳಿಗೂ ವೇತನ ಏರಿಕೆಯಾಗಲಿದೆ ಎಂದಿದ್ದಾರೆ. 100 ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ 50 ಪ್ರೌಢಶಾಲೆಗಳನ್ನು ಪ್ರಥಮ ದರ್ಜೆ ಕಾಲೇಜುಗಳನ್ನಾಗಿ ಉನ್ನತಿಗರಿಸುವ ಘೋಷಣೆಯನ್ನು ಮಾಡಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಯ ಅರ್ಚಕರಿಗೆ ನೀಡುತ್ತಿರುವ ತಸ್ತಿಕ್ ಮೊತ್ತವನ್ನು 60 ಸಾವಿರದಿಂದ 72 ಸಾವಿರ ರೂಪಾಯಿಗೆ ಏರಿಸಲಾಗುವುದು ಮತ್ತು ಕರ್ನಾಟಕ ರಾಜ್ಯ ವಸತಿಕೋಶ ಸ್ಥಾಪನೆಗೆ ನಿರ್ಧರಿಸಲಾಗಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ರೂ.8,000 ಕೋಟಿ ರೂಪಾಯಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮೀಸಲಿಡುವ ಮೂಲಕ ಇದು ಸರ್ವರನ್ನು ಒಳಗೊಂಡ ಬಜೆಟ್ ಆಗಿದೆ, ಜನರ ಜೀವನ ಮಟ್ಟವನ್ನು ಉದಾರಣೆ ಮಾಡುವಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯುತ್ತಮ ಬಜೆಟ್ ಅನ್ನು ಮಂಡಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನತೆಯ ಪರವಾಗಿ ಅಭಿನಂದನೆಗಳು ಎಂದು ಉದಯ ಶೆಟ್ಟಿ ಮುನಿಯಾಲು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರ 2025 – 2026 ನೇ ವರ್ಷದ ಬಜೆಟ್ ಮಂಡನೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರ 2025 – 2026 ನೇ ವರ್ಷದ ಬಜೆಟ್ ಮಂಡನೆ

– ರಾಜ್ಯದ 2025-26 ನೇ ವರ್ಷದ 4,08,549 ಕೋಟಿ ರೂ. ವೆಚ್ಚದ ಬಜೆಟ್
– ಈ ಬಾರಿಯ ಬಜೆಟಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನಕ್ಕೆ 51,300ಕೋಟಿ ರೂಪಾಯಿ ಮೀಸಲು

NAMMUR EXPRESS NEWS

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿರುವ ರಾಜ್ಯದ 2025-26 ನೇ ವರ್ಷದ 4,08,549 ಕೋಟಿ ರೂ ವೆಚ್ಚದ ಬಜೆಟ್ ಕಳೆದ ಆರ್ಥಿಕ ವರ್ಷದಲ್ಲಿ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ ಸರಕಾರ ದಿವಾ ಳಿಯಾಗಿದೆ ಎಂದು ಗುಲ್ಲೆಬ್ಬಿಸಿದವರಿಗೆ ನೀಡಿದ ಸಮರ್ಪಕ ಉತ್ತರವಾಗಿದೆ. ಇದೊಂದು ವಿತ್ತೀಯ ಶಿಸ್ತು ಪಾಲನೆಯ ಬಜೆಟ್. ಸಮಾಜದ ಆರ್ಥಿಕ ಸಮಾನತೆ, ಸಾಮಾಜಿಕ ಸೌಹಾರ್ಧತೆ ಮತ್ತು ಸರ್ವಾಂಗೀಣ ಅಭಿವೃದ್ಧಿ ಮತ್ತು ಮಹಿಳೆ ಮಕ್ಕಳು ಕೂಲೀ ಕಾರ್ಮಿಕರ ಪರ ಒಲವುಳ್ಳ ಬಜೆಟ್ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಪ್ರತೀ ವಿಧಾನ ಸಭಾ ಕ್ಷೇತ್ರಗಳ ಮೂಲ ಸೌಲಭ್ಯ ಅಭಿವೃದ್ದಿಗಾಗಿ ಪ್ರತೀ ಕ್ಷೇತ್ರಗಳಿಗೆ 8000ಕೋಟಿ.ರೂ ಮೀಸಲು, ಮಹಿಳೆಯರ ಸಾಮಾಜಿಕ ಅಭ್ಯುದಯದ ಗುರಿಯೊಂದಿಗೆ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ 94084 ಕೋಟಿ.ರೂ, ಮಕ್ಕಳ ಸಮಗ್ರ ಕ್ಷೇಮ ಸಾಧನೆಯ ಗುರಿಯೊಂದಿಗಿನ ಯೋಜನೆಗಳಿಗೆ 42033 ಕೋಟಿ.ರೂ ಮೀಸಲಿಟ್ಟಿರುವುದು ಸ್ವಾಗತಾರ್ಹ. ಧಾರ್ಮಿಕ ಧತ್ತಿ ಇಲಾಖಾ ದೇಣಿಗೆ ದೇವಸ್ಥಾನಗಳ ಅರ್ಚಕರ ತಸ್ತಿಕ್ ಹಣವನ್ನು ವಾರ್ಷಿಕ 60,000 ರೂ. ಯಿಂದ 72,000 ಏರಿಕೆ, ಅಂಗನವಾಡಿ ಮತ್ತು ಅಡುಗೆ ಸಹಾಯಕಿಯರಿಗೆ ಕ್ರಮವಾಗಿ 1000 ಮತ್ತು 750 ರೂ. ಹೆಚ್ಚುವರಿ ಹಾಗೂ ರೈತ ಕುಟುಂಬಗಳ ಜಾನುವಾರುಗಳ ಅಕಸ್ಮಿಕ ಸಾವಿಗೆ ಅನುಗ್ರಹ ಯೋಜನೆಯಡಿ ಪರಿಹಾರದಲಿಯೂ ಏರಿಕೆಯೇ ಮೊದಲಾದ ಯೋಜನಗಳು ಗ್ರಾಮೀಣ ಪರಿಸರದ ವರ್ಗದಲ್ಲಿ ಸಂತಸತಂದಿದೆ ಎಂದು ಹೇಳಿದ್ದಾರೆ.
ಮತ್ತೆ ಈ ಬಾರಿಯ ಬಜೆಟಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನಕ್ಕೆ 51,300ಕೋ.ರೂ. ಮೀಸಲಿಟ್ಟಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ ವಿತ್ತೀಯ ಶಿಸ್ತು ಪಾಲನೆಯ ಮೂಲಕ ರಾಜ್ಯದ ಅಭಿವೃದ್ಧಿಯನ್ನು ಎತ್ತಿ ಹಿಡಿದಿರುವುದರಿಂದ ಇದು ಸಾಧ್ಯವಾಗಿದೆ. ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಹಣ ಕಡಿತದ ಹೊರತಾಗಿಯೂ ಒಟ್ಟು “ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 8.4ಕ್ಕೆ ದೇಣಿಗೆಯೆಂಬಂತೆ ರಾಜ್ಯ ಸರ್ಕಾರ ತನ್ನ “ರಾಜ್ಯ ರಾಷ್ಟ್ರೀಯ ಉತ್ಪನ್ನವನ್ನು (ಜಿಎಸ್ ಡಿಪಿ) 7.4 ರ ಪಥಕ್ಕೆ ತಂದು ನಿಲ್ಲಿಸಿರುವುದು ಸರಕಾರದ ಸಾಧನೆಗೆ ಸಾಕ್ಷಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

ರಾಜ್ಯ ಸರಕಾರ 5 ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದೊಂದಿಗೆ ಒಟ್ಟು ದೇಶೀಯ ಉತ್ಪನ್ನ ಜಿಡಿಪಿ 8.4 ಮತ್ತು ರಾಜ್ಯ ಜಿಎಸ್ ಡಿಪಿಯನ್ನು 7.4 ರ ಹಂತಕ್ಕೆ ತಂದಿರುತ್ತಾರೆ.

ಪ್ರಕಟಣೆಗಾಗಿ: BipinchandraPal Nakre,
Spokesperson,
DCC-Udupi.

Categories
ಕರಾವಳಿ

ಕಾರ್ಕಳ ಬಿಜೆಪಿ ಯುವ ಮೋರ್ಚ ವತಿಯಿಂದ ಬೈಲೂರಿನ ಮಾರಿಗುಡಿಯ ಎದುರು ಬೃಹತ್ ಪ್ರತಿಭಟನೆ…!!!

ಕಾರ್ಕಳ ಬಿಜೆಪಿ ಯುವ ಮೋರ್ಚ ವತಿಯಿಂದ ಬೈಲೂರಿನ ಮಾರಿಗುಡಿಯ ಎದುರು ಬೃಹತ್ ಪ್ರತಿಭಟನೆ…!!!
– ಮಾರ್ಚ್ 6 ರಂದು ಬೈಲೂರಿನಲ್ಲಿ ಪ್ರತಿಭಟನೆ
– ಕಾರ್ಕಳದ ಬೈಲೂರಿನ ಮಾರಿಗುಡಿ ಎದುರು ಕಾರ್ಕಳ ಬಿಜೆಪಿ ಯುವ ಮೋರ್ಚ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು.

NAMMUR EXPRESS NEWS

ಕಾರ್ಕಳ: ಮಾರ್ಚ್ 6 ಬೈಲೂರಿನಲ್ಲಿ ಗೊಂದಲ ಗಲಾಟೆ ನಡೆಯುತ್ತಿರುವುದು ಈಗಾಗಲೇ ಕರ್ನಾಟಕ ಜನರಿಗೆ ತಿಳಿದಿರುವ ವಿಚಾರ. ಇದರ ಸಲುವಾಗಿ ಮಾರ್ಚ್ 6 ರಂದು ಸಂಜೆ 4.30 ರಿಂದ ಕಾರ್ಕಳದ ಬೈಲೂರಿನ ಮಾರಿಗುಡಿ ಎದುರು ಕಾರ್ಕಳ ಬಿಜೆಪಿ ಯುವ ಮೋರ್ಚ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಕಾರ್ಕಳ ಬಿಜೆಪಿ ಕ್ಷೇತ್ರ ಅಧ್ಯಕ್ಷ ನವೀನ್ ನಾಯಕ್, ಬಿಜೆಪಿ ಜಿಲ್ಲಾ ವಕ್ತಾರ ಮುಟ್ಲು ಪಾಡಿ ಸತೀಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಕೌಡೂರು, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಕಾರ್ಕಳ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಹಾಗೂ ಬಿಜೆಪಿ ಕಾರ್ಯಕರ್ತರಾದ ಜಯರಾಮ್ ಸಾಲಿಯಾನ್, ಬೋಳ ಸತೀಶ್, ಸುಹಾಸ್ ಶೆಟ್ಟಿ ಮುಟ್ಲು ಪಾಡಿ, ವಿನಯ ಡಿ ಬಂಗೇರ ಹಾಗೂ ಹಲವಾರು ಗಣ್ಯರು ಭಾಗಿಯಾಗಿದ್ದರು.

ಈ ಮೊನ್ನೆ ಡಿಸಿಎಂ ಡಿ ಕೆ ಶಿವಕುಮಾರ್ ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮಕ್ಕೆ ಬಂದಾಗ ಅವರು ಮಾತನಾಡಿದ ವಿಚಾರದಿಂದ ಅದರಲ್ಲೂ ಪರಶುರಾಮ ಥೀಮ್ ಪಾರ್ಕ್ ನ ವಿಚಾರದ ಬಗ್ಗೆ ಮಾತನಾಡಿದ ಅವರು ಥೀಮ್ ಪಾರ್ಕ್ ನ ಅವ್ಯವಸ್ಥೆಯ ಬಗ್ಗೆ ತಿಳಿಸಿದರು.
ಇದನ್ನೆಲ್ಲ ಗಮನಿಸಿದ ಡಿ ಸಿ ಎಂ ಇದರ ಬಗ್ಗೆ ನೋಡಿ ಸೂಕ್ಷ್ಮವಾಗಿ ತಿಳಿದುಕೊಳ್ಳುವಂತಾಯಿತು, ಕೇವಲ ಬೆಂಗಳೂರಿನಲ್ಲಿ ಇದರ ವಿಚಾರ ಕಿವಿಯಲ್ಲಿ ಕೇಳುತ್ತಿದ್ದೆ ಈಗ ನೋಡಿ ಬಹಳ ಬೇಸರವಾಗುತ್ತಿದೆ.
ಬಿಜೆಪಿ ಶಾಸಕರಾದ ವಿ ಸುನಿಲ್ ಕುಮಾರ್ ಅವರು ಮಾಡಿರುವುದು ಬಹಳ ಹೀನ ಕೃತ್ಯವಾಗಿದೆ. ಅದರಲ್ಲೂ ಕಾರ್ಕಳ ಬಹಳಷ್ಟು ದೈವ ದೇವರು ನೆಲೆ ನಿಂತಿರುವಂತಹ ಜಾಗ ತಿರುಪತಿ ಹಾಗೂ ಪಡು ತಿರುಪತಿ ಇವೆರಡಕ್ಕೂ ಪವಿತ್ರವಾದ ಸಂಬಂಧವಿದೆ. ಈ ಊರಿನ ಬೈಲೂರಿನಲ್ಲಿ ಈ ರೀತಿಯ ವ್ಯವಸ್ಥೆ ಮಾಡಿರುವುದನ್ನು ನೋಡಿ ಬಹಳ ಬೇಸರವಾಗುತ್ತದೆ ಇದು ಬಿಜೆಪಿ ಪಕ್ಷದ ಹೀನ ಕೃತ್ಯ. ಹಾಗೆ ಇನ್ನು ಹಲವಾರು ವಿಚಾರಗಳನ್ನು ಹೇಳಿ, ಬಿಜೆಪಿ ವಿರುದ್ಧ ಕಿಡಿ ಕಾರಿದ್ದರು.
ಈ ಎಲ್ಲ ವಿಚಾರವನ್ನು ನೋಡಿ ಕೇಳಿದ ಕಾರ್ಕಳದ ಬಿಜೆಪಿ ಬಳಗಕ್ಕೆ ಬಹಳಷ್ಟು ಕೋಪ ಬಂದು ನಿನ್ನೆ ಮಾರ್ಚ್ 6 ಸಂಜೆ 4:30ಕ್ಕೆ ಬೈಲೂರಿನ ಮಾರಿ ಗುಡಿಯ ಎದುರುಗಡೆ ಪ್ರತಿಭಟನೆ ನಡೆಸಿದರು.
ಮುಟ್ಲುಪಾಡಿ ಸತೀಶ್ ಶೆಟ್ಟಿ – ನಮ್ಮ ಶಾಸಕರೊಂದಿಗೆ ಚರ್ಚೆ ನಡೆಸುವಂತಹ ವಿಷಯ ಬಿಡಿ ನಮ್ಮ ಕಾರ್ಯಕರ್ತರೊಂದಿಗೆ ಕೂಡ ಚರ್ಚಿಸುವ ಸಾಮರ್ಥ್ಯ ಈ ಕಾಂಗ್ರೆಸ್ಸಿಗರಿಗೆ ಇಲ್ಲ. ಕಾಂಗ್ರೆಸ್ ನವರಿಗೆ ಅಷ್ಟು ತಾಕತ್ತಿದ್ದರೆ ನನ್ನ ಜೊತೆ ನೇರವಾಗಿ ಮಾತನಾಡಲಿ ನನ್ನ ಜೊತೆ ಚರ್ಚಿಸಲಿ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ನವೀನ್ ನಾಯ್ಕ್ – ಕಾಂಗ್ರೆಸಿಗರಿಂದ ನಾವು ರಾಜಕೀಯ ಕಲಿಯಬೇಕಾಗಿಲ್ಲ ಇಂಥ ನೀಚ ರಾಜಕೀಯ ನಾವು ಮಾಡುವುದು ಕೂಡ ಇಲ್ಲ ಇಂಥ ಕ್ರೂರ ನೀಚ ರಾಜಕೀಯ ಮಾಡುವುದನ್ನು ಕಾರ್ಕಳ ಜನರು ನೋಡುತ್ತಿದ್ದಾರೆ ಇನ್ನಾದರೂ ಬುದ್ದಿ ಕಲಿಯಲಿ.
ಸುಮಿತ್ ಕೌಡೂರು – ರಾಜ್ಯ ಸರ್ಕಾರದಲ್ಲಿ ಈಗ ಕಾಂಗ್ರೆಸ್ ಪಕ್ಷವಿದೆ, ಕಾಂಗ್ರೆಸಿಗರೆ ಆಳುತ್ತಿದ್ದಾರೆ ಇವರ ಕೈಯಲ್ಲಿ ಪರಶುರಾಮನ ವಿಚಾರವನ್ನು ಸರಿಪಡಿಸಲು ಆಗದಿದ್ದರೆ ನಮಗೆ ಕೊಡಿ ನಾವು ಬೈಲೂರಿನ 10 ಸಮಸ್ತರು ಸೇರಿ ಮುಖಂಡರು ಸೇರಿ ನಮ್ಮ ಕೈಯಿಂದ ನಾವೇ ಹಣ ಹಾಕಿ ಪರಶುರಾಮ ಥೀಮ್ ಪಾರ್ಕನ್ನು ಸರಿ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಕೇಶ್ ಶೆಟ್ಟಿ – ಎಲ್ಲೆಲ್ಲಿ ಅಭಿವೃದ್ಧಿಯ ವಿಚಾರವಾಗಿ ಪ್ರಶ್ನೆ ಬರುತ್ತದೋ, ಎಲ್ಲೆಲ್ಲಿ ಅಭಿವೃದ್ಧಿಯನ್ನು ನಿಲ್ಲಿಸಲು ಕಾಂಗ್ರೆಸ್ಸಿಗರು ಎದ್ದು ನಿಲ್ಲುತ್ತಾರೋ ಅಲ್ಲಲ್ಲಿ ನಾವು ಸಿಂಹದಂತೆ ಎದ್ದು ಬರುತ್ತೇವೆ.
ಪರಶುರಾಮ ಥೀಮ್ ಪಾರ್ಕ್ ನ ವಿಚಾರವಾಗಿ ಯಾರ ಹತ್ತಿರ ಕೂಡ, ಯಾವ ಜಾಗದಲ್ಲಿ ಕೂಡ ಮಾತನಾಡಲಿಕ್ಕೆ ನಾನು ಸಿದ್ಧ, ಮುನಿಯಾಲು ಉದಯಕುಮಾರ್ ಶೆಟ್ಟಿ ಅವರೊಂದಿಗೆ ಮಾತನಾಡಲು ಪ್ರಶ್ನೆ ಮಾಡಲು ಚರ್ಚೆ ಮಾಡಲು ಕೂಡ ನಾನು ಸಿದ್ದರಾಗಿದ್ದೇನೆ ಎಂದು ಹಲವು ಮುಖಂಡರು ಮತ್ತು ಜನಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Categories
ಕರಾವಳಿ

ಕಾರ್ಕಳ: ಮಹಾವೀರ ಫ್ರೆಂಡ್ಸ್ ಕ್ಲಬ್ ಇವರ ಆಶ್ರಯದಲ್ಲಿ ” ಶ್ರೀದೇವಿ ರಕ್ತೇಶ್ವರಿ ಮಹಾತ್ಮೆ”

ಇದೆ ಬರುವ ದಿನಾಂಕ 10/03/2025 ಸೋಮವಾರದಂದು ಕಾರ್ಕಳದ ತಾಲೂಕು ಆಫೀಸ್ ಹತ್ತಿರ ಕೆಎಚ್‌ಪಿ ಕಾಲೋನಿ ಯಲ್ಲಿ ರಾತ್ರಿ 7.30 ರಿಂದ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ ಕಳವಾರು ಇವರು ರಚಿಸಿ ರೂಪಿಸಿರುವಂತಹ ಅದ್ಭುತ ಸೂಪರ್ ಹಿಟ್ ಯಕ್ಷಗಾನ  ‘ಶ್ರೀದೇವಿ ರಕ್ತೆಶ್ವರಿ ಮಹಾತ್ಮೆ’ ಎಂಬ ಪುಣ್ಯ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ . ಶ್ರೀ ಮಹಾವೀರ ಫ್ರೆಂಡ್ಸ್ ಕ್ಲಬ್ ಇವರು ಆಯೋಜಿಸಿರುವಂತಹ ಆಟಕ್ಕೆ ಎಲ್ಲಾ ಭಕ್ತಾಭಿಮಾನಿಗಳು ಬಂದು ನೋಡಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ ಮಹಾವೀರ ಫ್ರೆಂಡ್ಸ್ ಕ್ಲಬ್.ರಿ. ಹಾಗೂ ಊರಿನ ಹತ್ತು ಸಮಸ್ತರು.

Categories
ಕರಾವಳಿ

ಪರಿಸರ ಅಸಮತೋಲನ, ಪಕ್ಷಿಗಳ ವಲಸೆಯಲ್ಲಿ ಏರುಪೇರು

ಕಾರ್ಕಳ : ಪರಿಸರದ ಅಸಮತೋಲನವು ಪಕ್ಷಿಗಳ ಮೇಲು ಭಾರಿ ಪರಿಣಾಮ ಬೀರಿದೆ. ಅಕಾಲಿಕ ಮಳೆ, ಕಲುಶಿತ ಜಲಮೂಲಗಳು, ಪರಿಸರದ ಮೇಲೆ ಅತಿಯಾದ ಮಾನವ ಹಸ್ತಕ್ಷೇಪಗಳಿಂದ ಪಕ್ಷಿಗಳ ವಲಸೆಯಲ್ಲಿ ಏರುಪೇರು ಉಂಟಾಗಿದೆ. ಅದರಲ್ಲೂ ಮಂಗಳೂರಿನ ಹಾಟ್‌ಸ್ಪಾಟ್‌ಗಳಿಗೆ ವಲಸೆ ಹಕ್ಕಿಗಳ ಆಗಮನ ವಿಳಂಬವಾಗುತ್ತಿರುವುದು ಪಕ್ಷಿಪ್ರೇಮಿಗಳನ್ನು ಚಿಂತೆಗೀಡು ಮಾಡಿದೆ. ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ವಟಿ ಕೆ. ಕಳವಳ ವ್ಯಕ್ತಪಡಿಸಿದ್ದಾರೆ.
ಕರಾವಳಿಯತ್ತ ವಲಸೆ ಪ್ರತಿ ವರ್ಷ ನವೆಂಬರ್ ತಿಂಗಳಿನಿಂದ ಫೆಬ್ರವರಿ ಮೊದಲ ವಾರದಲ್ಲಿ ಹಕ್ಕಿಗಳು ಕರಾವಳಿಯತ್ತ ವಲಸೆ ಬರುವುದು ವಾಡಿಕೆಯಾಗಿದೆ. ಫೆಬ್ರವರಿ ತಿಂಗಳಲ್ಲಿ ಹಕ್ಕಿಗಳ ವೀಕ್ಷಣೆ ‌ಹಾಗು ಏಣಿಕೆ ಕಾರ್ಯಕ್ಕೆ ಸೂಕ್ತ ಸಮಯವಾಗಿದೆ. ಆದರೆ ಈ ಬಾರಿ ಹಕ್ಕಿಗಳ ವಲಸೆಯಲ್ಲಿ ಕುಸಿತವಾಗಿದೆ.

ವಲಸೆ ಹಕ್ಕಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ : 
ಕರಾವಳಿ ಕರ್ನಾಟಕ ಪಕ್ಷಿ ವೀಕ್ಷಕರ ನೆಟ್‌ವರ್ಕ್‌ನ ಬರ್ಡರ್ ವಿವೇಕ್ ನಾಯಕ್  ಮಾಹಿತಿ ಪ್ರಕಾರ, ಹವಾಮಾನ ಬದಲಾವಣೆಯು ಅತಿಯಾದ ಅಭಿವೃದ್ಧಿ ಕಾರ್ಯಗಳು, ಮಲಿನ ನೀರು ಪಕ್ಷಿಗಳ ವಲಸೆಯ‌ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಆವಾಸ್ಥಾನದ ನಷ್ಟದ ಪರಿಣಾಮವಾಗಿದೆ. ನವೆಂಬರ್ 2023 ರಿಂದ ಮಾರ್ಚ್ 2024 ರವರೆಗೆ, ಸುಮಾರು 60-65 ವಲಸೆ ಪ್ರಭೇದಗಳು ದಾಖಲಾಗಿತ್ತು ಈ ಬಾರಿ ಕೇವಲ ಕೇವಲ 7-10 ಹಕ್ಕಿ  ಪ್ರಭೇದಗಳು ಮಾತ್ರ ಕಾಣಿಸಿಕೊಂಡಿವೆ.

ಸಿಹಿ ನೀರಿನ ಪ್ರದೇಶಗಳೆ ವಲಸೆ ಹಕ್ಕಿಗಳ ಹಾಟ್ಸ್ಪಾಟ್ :
ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ವಟಿ  ಕೆ.  ಹಕ್ಕಿಗಳ ವಲಸೆ ಋತುವಿನಲ್ಲಿ ಸಂದರ್ಭದಲ್ಲಿ ಸರಾಸರಿ 70 ಜಾತಿಯ ಪಕ್ಷಿಗಳನ್ನು ದಾಖಲಿಸಿದ್ದಾರೆ. ಪಕ್ಷಿಗಳು ಹೆಚ್ಚಾಗಿ ಸಿಹಿ ನೀರಿನ ಜೌಗು ಪ್ರದೇಶಗಳಿಂದ ಆವೃತವಾಗಿರುವ ಮಂಜಲ್ಪಾದೆ, ಕೆಂಜಾರ್ ಮತ್ತು ಜೋಕಟ್ಟೆಯಂತಹ ಸಾಂಪ್ರದಾಯಿಕ ಸ್ಥಳಗಳಲ್ಲಿ ಕಾಣಿಸುತ್ತವೆ. ಸಿಹಿ ನೀರಿನ ಜೌಗು ಪ್ರದೇಶಗಳು, ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ಪರಿಸರ ವ್ಯವಸ್ಥೆಗಳಾಗಿವೆ. ಅವು ನೈಸರ್ಗಿಕ ಫಿಲ್ಟರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ, ನೀರನ್ನು ಶುದ್ಧೀಕರಿಸುತ್ತವೆ ಮತ್ತು ಮಾಲಿನ್ಯವನ್ನು ತಗ್ಗಿಸುತ್ತವೆ. ಈ ಪರಿಸರ ವ್ಯವಸ್ಥೆಗಳು ನಿರ್ಣಾಯಕ ಪ್ರವಾಹ ಬಫರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ, ಭಾರೀ ಮಳೆಯ ಸಮಯದಲ್ಲಿ ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತವೆ ಮತ್ತು ಕರಾವಳಿ ಸವೆತದ ಪರಿಣಾಮವನ್ನು ತಗ್ಗಿಸುತ್ತವೆ. ಇದಲ್ಲದೆ, ಅವು ಅಸಂಖ್ಯಾತ ಪಕ್ಷಿ ಪ್ರಭೇದಗಳನ್ನು ಒಳಗೊಂಡಂತೆ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ಅಗತ್ಯವಾದ ಆವಾಸಸ್ಥಾನಗಳನ್ನು ಒದಗಿಸುತ್ತವೆ.
ಮಂಗಳೂರಿನ ಜೌಗು ಪ್ರದೇಶಗಳು ನಿವಾಸಿ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ತಾಣವಾಗಿದೆ. ಸಿಹಿನೀರಿನ ಜೌಗು ಪ್ರದೇಶಗಳು, ಬಾತುಕೋಳಿಗಳು ಮತ್ತು ಬೆಳ್ಳಕ್ಕಿಗಳು ಸೇರಿದಂತೆ ವಿವಿಧ ಜಲಪಕ್ಷಿಗಳನ್ನು ಆಕರ್ಷಿಸುತ್ತವೆ. ಈ ಪ್ರಶಾಂತವಾದ ಜಲಮೂಲಗಳು ಹಲವಾರು ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತವೆ.

ಕುಸಿತಗೊಂಡ ವಲಸೆ ಹಕ್ಕಿಗಳು : 
ಬಾಯ್ ವೀವರ್, ಜಾಕೋಬಿನ್ ಕುಕ್ಕೂ, ಬಾಂಡೆಡ್ ಬೆ ಕುಕ್ಕೂ, ಬ್ಲೂ ಥ್ರೋಟ್ ಫೈಕ್ಯಾಚರ್, ಇಂಡಿಯನ್ ಬ್ಲಾಕ್ಬರ್ಡ್, ಇಂಡಿಯನ್ ಬ್ಲೂ ರಾಬಿನ್ ಏಶಿಯನ್ ಓಪನ್ ಬಿಲ್, ಏಷಿಯಾನಾ ಔಉಲ್ಲಿ ನೆಕ್ ರೋಸಿ ಸ್ಟರ್ಲಿಂಗ್, ಅರೆಂಜ್ ಹೆಡೆಡ್ ಟ್ರಷ್, ‌ಸ್ಟ್ರಾಕ್ ಬಿಲ್ಲೆ್ಡ್ ಕಿಂಗ್ ಫಿಶರ್ ಈ ಹಕ್ಕಿಗಳು ಬರಿ ಅಪರೂಪದಲ್ಲಿ  ಕಾಣಸಿಗುತ್ತವೆ ಎಂದು ಮಣಿಪಾಲದ  ಪಕ್ಷಿ ವೀಕ್ಷಕರಾದ ಪಿ ಎಚ್ ಡಿ ವಿದ್ಯಾರ್ಥಿ ಮಹೀಮ್ ಭಟ್  ತಿಳಿಸಿದ್ದಾರೆ.

“ಸಿಹಿ ನೀರಿನ ಜೌಗು ಪ್ರದೇಶದ ಗಳಲ್ಲಿ ಮಂಜಲ್ಪಾದೇ, ಕೆಂಜಾರ್ ಮತ್ತು ಜೋಕಟ್ಟೆಯಂತಹ ಸಾಂಪ್ರದಾಯಿಕ ಸ್ಥಳಗಳಲ್ಲಿ ವಲಸರ ಹಕ್ಕಿಗಳು ಹಾಗೂ ಸಾಂಪ್ರದಾಯಿಕ ಹಕ್ಕಿಗಳು ಕೂಡ ಕಾಣಿಸುತ್ತವೆ. ಸಿಹಿ ನೀರಿನ ಜೌಗು ಪ್ರದೇಶಗಳು, ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ಪರಿಸರ ವ್ಯವಸ್ಥೆಗಳಾಗಿವೆ.ಈ ಬಾರಿ ಅತಿಯಾದ ಪರಿಸರದ ಮೇಲಿನ ಮಾನವ ಹಸ್ತಕ್ಷೇಪಗಳು ಹಾಗೂ ಮಲಿನತೆ, ಪರಿಸರ ಅಸಮತೋಲನಗಳಿಂದ ವಲಸೆ ಪಕ್ಷಿಗಳ ಸಂಖ್ಯೆ 7 ಪ್ರಭೇದಗಳಿಗೆ ಸೀಮಿತವಾಗಿದೆ.‌” ಎನ್ನುತ್ತಾರೆ  ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ಪ್ರಾಣಿ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ವಟಿ ಕೆ. 

 

Categories
ಕರಾವಳಿ

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಕುಡಿಯುವ ನೀರಿನ ಘಟಕದ ದೇಣಿಗೆ

ಕಾರ್ಕಳ : ಮಾಳದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಕಾರ್ಕಳ ರೋಟರಿ ಕ್ಲಬ್ ವತಿಯಿಂದ ಕುಡಿಯುವ ನೀರಿನ ಘಟಕವನ್ನು ದೇಣಿಗೆಯಾಗಿ ನೀಡಲಾಯಿತು. ಇದರ ಹಸ್ತಾಂತರ ಕಾರ್ಯಕ್ರಮವು ದಿನಾಂಕ 28-02- 2025 ರಂದು ನೆರವೇರಿತು. ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಗವರ್ನರ್ – ರೊಟೇರಿಯನ್ C. A ದೇವಾನಂದ್ ಅವರು ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಜಾನನ ಮರಾಠೆ ಅವರು ರೋಟರಿ ಕ್ಲಬ್ ಇದರ ಚಟುವಟಿಕೆಗಳನ್ನು ಶ್ಲಾಘಿಸಿದರು ಹಾಗೂ ಗ್ರಾಮೀಣ ಶಾಲೆಗಳಿಗೆ ರೋಟರಿ ಕ್ಲಬ್ ಕಾರ್ಕಳ ಇದರ ದೇಣಿಗೆಗಳಿಗಾಗಿ ಸದಸ್ಯರನ್ನು ಅಭಿನಂದಿಸಿದರು. ಸಹಾಯಕ ಗವರ್ನರ್ ರೊಟೇರಿಯನ್ ಅನಿಲ್ ಡೇಸಾ, ವಲಯ ಸೇನಾನಿ ರೊಟೇರಿಯನ್ ಸುರೇಶ್ ನಾಯಕ್, ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರೋ. ಇಕ್ಬಾಲ್ ಅಹಮದ್, ಕಾರ್ಯದರ್ಶಿ-ರೋ. ಗಣೇಶ್ ಸಾಲಿಯಾನ್, ಸದಸ್ಯರು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಶೋಭಾ ಇವರು ನಿರೂಪಿಸಿದರು. ಮುಖ್ಯೋಪಾಧ್ಯಾಯನಿ ಪೂರ್ಣಿಮಾ ಶೆಣೈ  ಸ್ವಾಗತಿಸಿದರು.

Categories
ಕರಾವಳಿ

ಹಣದ ಹೊಳೆ ಗ್ಯಾರಂಟಿಗೆ – ಗ್ರಾಮೀಣ ಜನಜೀವನ ಇಕ್ಕಟ್ಟಿಗೆ

ಬೃಹತ್ ನೀರಾವರಿ ಇಲಾಖೆಯಿಂದ 16 ಕೋಟಿ ಹಣ ಬಿಡುಗಡೆಯೂ ಬಾಕಿ ಈ ಕೂಡಲೆ ಹಣ ಬಿಡುಗಡೆಗೊಳಿಸುವಂತೆ ನವೀನ್ ನಾಯಕ್ ಆಗ್ರಹ

ಕಾರ್ಕಳ : ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಘೋಷಿಸಿದ ಗ್ಯಾರಂಟಿ ಯೋಜನೆಗಳಿಗೆ ಹಣದ ಹೊಳೆ ಹರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರವು ಅಭಿವೃದ್ದಿ ಕಾರ್ಯಗಳಿಗೆ ಹಣ ನೀಡದೆ ವಂಚಿಸುತ್ತಿದೆ. ಬೃಹತ್ ನೀರಾವರಿ ಇಲಾಖೆಯಿಂದ ತಾಲೂಕಿನ ಅಭಿವೃದ್ದಿಗೆ 16 ಕೋ.ರೂ. ಬಿಡುಗಡೆಯಾಗಬೇಕಿದ್ದು ಆ ಹಣವನ್ನು ಸರಕಾರ ತಡೆ ಹಿಡಿದಿದೆ. ಈ ಕೂಡಲೆ ಹಣ ಬಿಡುಗಡೆಗೊಳಿಸುವಂತೆ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಗ್ರಹಿಸಿದ್ದಾರೆ. ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರದ ಅವಧಿಯ 2022-23ನೇ ಸಾಲಿನಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಬೃಹತ್ ನೀರಾವರಿ ಇಲಾಖೆಯಿಂದ (ವಾರಾಹಿ) 16 ಕೋ. ರೂ ಮಂಜೂರಾತಿ ನೀಡಿತ್ತು. ಟೆಂಡರ್ ಪ್ರಕ್ರಿಯೆಯೂ ನಡೆದಿದೆ. ಕಾಮಗಾರಿ ಕೈಗೆತ್ತಿಕೊಳ್ಳುವ ಸಲುವಾಗಿ ಹಣ ಬಿಡುಗಡೆಗೆ ಕಾಂಗ್ರೆಸ್ ಸರಕಾರ ಹಣ ಬಿಡುಗಡೆಗೊಳಿಸುತಿಲ್ಲ ಎಂದು ಆರೋಪಿಸಿದರು. ಇದರಿಂದಾಗಿ ಕಾಮಗಾರಿಗಳು ನಡೆಯದೆ ಗ್ರಾಮೀಣ ಭಾಗದ ಜನ ಇಕ್ಕಟ್ಟಿಗೆ ಸಿಲುಕಿದ್ದಾರೆ. ಬೃಹತ್ ನೀರಾವರಿ ಸೇರಿ ಕ್ಷೇತ್ರಕ್ಕೆ ಸುಮಾರು 75 ಕೋ. ರೂ. ಅಧಿಕ ಮೊತ್ತದ ಅನುದಾನ ಸರಕಾರದಿಂದ ಬಿಡುಗಡೆಯಾಗಬೇಕಿದೆ. ಇದೆಲ್ಲದಕ್ಕೂ ತಡೆ ನೀಡಿರುವ ಕಾಂಗ್ರೆಸ್ ಸರಕಾರ ಕ್ಷೇತ್ರದ ಅಭಿವೃದ್ದಿಯಲ್ಲಿ ತಾರತಮ್ಯ ಮಾಡುತ್ತಿದೆ ಎಂದರು.
ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರು ಸಚಿವರಾಗಿದ್ದ ವೇಳೆ ಅವರ ನಿರಂತರ ಪ್ರಯತ್ನದಿಂದ ಕ್ಷೇತ್ರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅನುದಾನಗಳು ಲಭ್ಯವಾಗಿ ಅಭಿವೃದ್ದಿ ಕೆಲಸಗಳಾಗಿವೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಕ್ಷೇತ್ರದ ಅಭಿವೃದ್ದಿಗೆ ಕಿಂಚಿತ್ತು ಹಣ ಬಿಡುಗಡೆಯಾಗಿಲ್ಲ ಎಂದರು. ಶಾಸಕ ವಿ. ಸುನಿಲ್ ಕುಮಾರ್ ಕ್ಷೇತ್ರಕ್ಕೆ ಮಂಜೂರಾತಿಗೊಂಡ ಹಣ ಬಿಡುಗಡೆಗೊಳಿಸುವಂತೆ ಮತ್ತು ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೆ ರಾಜ್ಯದ ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹೇರಿದ್ದು, ಆಗ್ರಹ ವ್ಯಕ್ತಪಡಿಸಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿ ಟೆಂಡರ್ ನಡೆದು ತಡೆಹಿಡಿದ ಬಾಕಿ ಹಣದ ಬಿಡುಗಡೆಯ ನಿರೀಕ್ಷೆಯಲ್ಲಿ ಕ್ಷೇತ್ರದ ಜನರಿದ್ದಾರೆ ಎಂದಿದ್ದಾರೆ.