Categories
ರಾಜ್ಯ

ಭಾರತಕ್ಕೆ ಶೀಘ್ರ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್!

ಭಾರತಕ್ಕೆ ಶೀಘ್ರ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್!
– ಮಸ್ಕ್, ಸ್ಪೇಸ್‌ಎಕ್ಸ್‌ ಕಂಪನಿ ಜತೆ ಏರ್‌ಟೆಲ್‌ ಒಪ್ಪಂದ
– ಗ್ರಾಮೀಣ ಪ್ರದೇಶಗಳಲ್ಲಿರುವ ಏರ್‌ಟೆಲ್ ಗ್ರಾಹಕರಿಗೂ ಸ್ಟಾರ್‌ಲಿಂಕ್ ಸೇವೆ

NAMMUR EXPRESS NEWS
ನವದೆಹಲಿ : ಭಾರತದಲ್ಲಿ ಉಪಗ್ರಹ ಆಧರಿತ ವೇಗದ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ಸಲುವಾಗಿ ಟೆಲಿಕಾಂ ಸಂಸ್ಥೆ ಭಾರತಿ ಏರ್‌ಟೆಲ್‌, ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರ ಸ್ಪೇಸ್‌ಎಕ್ಸ್‌ ಜತೆ ಪಾಲುದಾರಿಕೆಗೆ ಮಾಡಿಕೊಂಡಿರುವುದಾಗಿ ತಿಳಿಸಿದೆ. ಈ ಮೂಲಕ ಭಾರತದಲ್ಲಿ ಶೀಘ್ರ ಸ್ಟಾರ್‌ಲಿಂಕ್‌ ಇಂಟರ್ನೆಟ್‌ ಸೇವೆ ಆರಂಭವಾಗುವ ನಿರೀಕ್ಷೆ ಇದೆ. ಈ ಒಪ್ಪಂದದಿಂದ, ಭಾರತದಲ್ಲಿ ಸ್ಟಾರ್‌ಲಿಂಕ್‌ನ ಉಪಗ್ರಹ ಸಂವಹನ ಆಧಾರಿತ ಸೇವೆಗಳನ್ನು ಮಾರಾಟ ಮಾಡುವ ಅಧಿಕಾರವನ್ನು ಸ್ಪೇಸ್‌ಎಕ್ಸ್ ಪಡೆಯಲಿದೆ. ಇದರಿಂದಾಗಿ, ಏರ್‌ಟೆಲ್‌ ಮತ್ತು ಸ್ಪೇಸ್‌ಎಕ್ಸ್‌ ಜೊತೆಗೂಡಿ, ಸ್ಟಾರ್‌ಲಿಂಕ್‌ ಸೇವೆಗಳನ್ನು ಏರ್‌ಟೆಲ್‌ ಮೂಲಕ ಉದ್ಯಮಿಗಳಿಗೆ, ಸಮುದಾಯ, ಶಾಲೆ, ಆರೋಗ್ಯ ಕೇಂದ್ರಗಳನ್ನು ಪರಸ್ಪರ ಸಂಪರ್ಕಿಸಲು ಸಹಾಯವಾಗುತ್ತದೆ.

ಭಾರತದ ಗ್ರಾಮೀಣ ಪ್ರದೇಶಗಳಲ್ಲಿರುವ ಏರ್‌ಟೆಲ್ ಗ್ರಾಹಕರಿಗೂ ಸ್ಟಾರ್‌ಲಿಂಕ್ ಸೇವೆ ನೀಡಲು ಸ್ಪೇಸ್‌ಎಕ್ಸ್‌ನೊಂದಿಗೆ ಕೆಲಸ ಮಾಡುವುದು ಮಹತ್ವದ ಮೈಲುಗಲ್ಲಾಗಿದ್ದು, ಮುಂದಿನ ಪೀಳಿಗೆಯ ಉಪಗ್ರಹ ಸಂಪರ್ಕಕ್ಕೆ ಕಂಪನಿಯ ಬದ್ಧತೆಯನ್ನು ಪ್ರದರ್ಶಿಸುತ್ತದೆ’ ಎಂದು ಭಾರತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷರಾದ ಗೋಪಾಲ್ ವಿಟ್ಟಲ್ ಹೇಳಿದರು. ಭಾರತದಲ್ಲಿ ಇಂಟರ್ನೆಟ್‌ ಸೇವೆ ಆರಂಭಿಸಲು ಸ್ಟಾರ್‌ಲಿಂಕ್‌ ಬಹುದಿನಗಳಿಂದ ಸರ್ಕಾರದ ಅನುಮತಿಗೆ ಕಾಯುತ್ತಿತ್ತು.

Categories
ಚಿಕ್ಕಮಗಳೂರು

ಮುಳ್ಳಯ್ಯನಗಿರಿಗೆ 3 ದಿನ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ

ಮುಳ್ಳಯ್ಯನಗಿರಿಗೆ 3 ದಿನ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
– ಮಾ.15 ರಿಂದ 17 ರವರೆಗೆ ನಿರ್ಬಂಧ ಮಾಡಲಾಗಿದೆ
– ಈಗಾಗಲೇ ಹೋಂಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಬುಕ್ಕಿಂಗ್ ಮಾಡಿಕೊಂಡವರಿಗೆ ಅವಕಾಶ

NAMMUR EXPRESS NEWS
ಚಿಕ್ಕಮಗಳೂರು: ಮಾ.15 ರಿಂದ 17 ರವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್ ಗಿರಿ, ಗಾಳಿಕೆರೆ, ಮಾಣಿಕ್ಯಧಾರಾ ತಾಣಗಳಿಗೆ ಪ್ರವಾಸ ಕೈಗೊಳ್ಳುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ. ತಾಲೂಕಿನ ಐ.ಡಿ. ಪೀಠ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ಮಾ.15 ರಿಂದ 17 ರವರೆಗೆ ಉರುಸ್ ಕಾಠ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತಾದಿಗಳು ವಾಹನಗಳ ಮುಖಾಂತರ ಆಗಮಿಸುತ್ತಾರೆ. ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ತೆರಳುವ ರಸ್ತೆ ತುಂಬಾ ಕಿರಿದಾಗಿದ್ದು, ಕಳೆದ ವರ್ಷ ಭಾರಿ ಮಳೆಗೆ ಹಾಳಾಗಿದೆ. ಆದ ಕಾರಣ ಹೆಚ್ಚಿನ ಜನಸಂದಣಿಯಾಗಿ ಅನಾನುಕೂಲವಾಗುವುದನ್ನು ತಪ್ಪಿಸಲು ಪ್ರವಾಸ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದು, ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ, ಮಾಣಿಕ್ಯಧಾರಾ ಜಲಪಾತ ತಾಣಗಳಿಗೆ ಭಕ್ತರು ಮತ್ತು ಸ್ಥಳೀಯರನ್ನು ಹೊರತುಪಡಿಸಿ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಈಗಾಗಲೇ ಹೋಂಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಬುಕ್ಕಿಂಗ್ ಮಾಡಿಕೊಂಡವರಿಗೆ ಅವಕಾಶ ಇದೆ ಎಂದು ವಿವರಿಸಿದ್ದಾರೆ.

Categories
ಕರಾವಳಿ

ಕರಾವಳಿಯಲ್ಲಿ ಹೆಚ್ಚಿದ ಬಿಸಿಗಾಳಿ!

ಕರಾವಳಿಯಲ್ಲಿ ಹೆಚ್ಚಿದ ಬಿಸಿಗಾಳಿ!

– ಮಕ್ಕಳ ಸಹಿತ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ ಏನೇನು?
– ಕರಾವಳಿಯ ಬಿಸಿ ಗಾಳಿಯಿಂದಾಗುವ ಪರಿಸ್ಥಿತಿಗಳಿಗೆ ಸಲಹೆ ನೀಡಿದ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ

NAMMUR EXPRESS NEWS
ಮಂಗಳೂರು: ಸಾಧಾರಣ ತಾಪಮಾನ ಮತ್ತು ಶಾಖವು ಸಾಮಾನ್ಯ ಜನರಿಗೆ ಸಹಿಸಿಕೊಳ್ಳಬಲ್ಲದು ಆದರೆ ದುರ್ಬಲ ಜನರಿಗೆ ಮಧ್ಯಮ ಆರೋಗ್ಯದವರಿಗೆ ಸಾಧ್ಯವಿಲ್ಲ. ಶಿಶುಗಳು, ವೃದ್ಧರು, ದೀರ್ಘಕಾಲದ ಕಾಯಿಲೆ ಇರುವ ಜನರಿಗೆ ಹೆಚ್ಚು ಅಪಾಯವಿದ್ದು ಸೂಕ್ತ ಕಾಳಜಿ ವಹಿಸಬೇಕೆಂದು ಮುನ್ನೆಚ್ಚರಿಕೆ ನೀಡಿದ್ದಾರೆ.
ಬಿಸಿಲಿನಲ್ಲಿ ತಲೆ ಹಾಗೂ ದೇಹವನ್ನು ಸೂರ್ಯನ ಕಿರಣಗಳಿಗೆ ಒಡ್ಡದಿರಬೇಕು. ಹಗುರವಾದ, ತಿಳಿ ಬಣ್ಣದ, ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಿ, ಟೋಪಿ ಅಥವಾ ಕೊಡೆ/ಛತ್ರಿ ಬಳಸಬೇಕು. ಒಂದು ವೇಳೆ ಹೊರಗೆ ಬಿಸಿಲಿನಿಂದ ಮನೆಗೆ ಬಂದ ತಕ್ಷಣ ಕೂಡಲೇ ಅತೀ ತಂಪಾದ ನೀರು ಕುಡಿಯಬಾರದು ಅಥವಾ ಎ.ಸಿ /ಕೂಲರ್ ಗಳನ್ನು ಕೂಡಲೇ ಬಳಸಬಾರದು.

– ಬಿಸಿಗಾಳಿ ಸಂದರ್ಭಗಳಲ್ಲಿ ಸಮುದಾಯ ಮಟ್ಟದಲ್ಲಿ ಅನುಸರಿಸಬೇಕಾದ ಕ್ರಮಗಳು

ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿರಬೇಕು ಬಿಸಿಲಿನ ಅವಧಿಯಲ್ಲಿ ಕೊಡೆಗಳನ್ನು ಬಳಸಿ ಸಾಧ್ಯವಾದಷ್ಟು ಹತ್ತಿಯ ಉಡುಪುಗಳನ್ನು ಧರಿಸಿ, ಹತ್ತಿಯ ಟೋಪಿಗಳನ್ನು ಬಳಸಿ, ಹೆಚ್ಚಿನ ಬಿಸಿಲು ಅವಧಿಯಲ್ಲಿ ವಿಶ್ರಾಂತಿ ಪಡೆಯಿರಿ, ಸಾಕಷ್ಟು ನೀರು, ಮಜ್ಜಿಗೆ ಕುಡಿಯಿರಿ, ವಾಸವಿರುವ ಕೋಣೆಯನ್ನು ತಂಪಾಗಿರಿಸಿ,ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ತಂಪಾದ ಸ್ಥಳಕ್ಕೆ ರವಾನಿಸಿ, ಬಿಸಿಗಾಳಿಗೆ ತುತ್ತಾದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ಕೊಡಿಸಿ, ಬಿಸಿಗಾಳಿಗೆ ತುತ್ತಾದವರಿಗೆ ಸಾಕಷ್ಟು ಕುಡಿಯುವ ನೀರು, ಮಜ್ಜಿಗೆ, ದ್ರವ ರೂಪದ ಆಹಾರ ನೀಡಬೇಕು.

ನೇರ ಬಿಸಿಲು/ ಬಿಸಿಗಾಳಿಗೆ ಒಡ್ಡಿಕೊಳ್ಳಬೇಡಿ!

ಬಿಸಿಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗಬೇಡಿ, ಕಪ್ಪು /ಘಾಡ ಬಣ್ಣದ, ಹಾಗೂ ಸಿಂಥಟಿಕ್ ಉಡುಪುಗಳನ್ನು ಧರಿಸಬೇಡಿ. ನೇರವಾಗಿ ಬಿಸಿಲಿನ ಝಳಕ್ಕೆ ತಲೆ ಒಡ್ಡಬೇಡಿ. ಹೆಚ್ಚಿನ ಬಿಸಿಲು ಇರುವ ಅವಧಿಯಲ್ಲಿ ತುತ್ತಾದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ಕೊಡಿಸಿ, ಬಿಸಿಗಾಳಿಗೆ ತುತ್ತಾದವರಿಗೆ ಸಾಕಷ್ಟು ಕುಡಿಯುವ ನೀರು, ಮಜ್ಜಿಗೆ, ದ್ರವ ರೂಪದ ಆಹಾರ ನೀಡಬೇಕು.

ನೇರ ಬಿಸಿಲು/ ಬಿಸಿಗಾಳಿಗೆ ಒಡ್ಡಿಕೊಳ್ಳಬೇಡಿ.

ಬಿಸಿಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗಬೇಡಿ, ಕಪ್ಪು /ಘಾಡ ಬಣ್ಣದ, ಹಾಗೂ ಸಿಂಥಟಿಕ್ ಉಡುಪುಗಳನ್ನು ಧರಿಸಬೇಡಿ. ನೇರವಾಗಿ ಬಿಸಿಲಿನ ಝಳಕ್ಕೆ ತಲೆ ಒಡ್ಡಬೇಡಿ. ಹೆಚ್ಚಿನ ಬಿಸಿಲು ಇರುವ ಅವಧಿಯಲ್ಲಿ ಶ್ರಮದಾಯಕ ದೈಹಿಕ ಕೆಲಸಗಳನ್ನು ಮಾಡಬೇಡಿ. ಬಿಸಿ ಚಹ, ಕರಿದ ಪದಾರ್ಥ ಮದ್ಯ ಸೇವಿಸಬೇಡಿ. ವಾಸವಿರುವ ಕೋಣೆಯಲ್ಲಿ ನೇರವಾಗಿ ಬಿಸಿಲು ಬೀಳುವುದನ್ನು ತಪ್ಪಿಸಿ. ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ತಂಪಾದ ಸ್ಥಳಕ್ಕೆ ರವಾನಿಸಲು ತಡಮಾಡಬೇಡಿ. ಬಿಸಿಗಾಳಿ ತುತ್ತ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವುದನ್ನು ತಡಮಾಡಬೇಡಿ. ಬಿಸಿಗಾಳಿ ಸಂದರ್ಭಗಳಲ್ಲಿ ಚಹಾ, ಕಾಫಿ ಮತ್ತು ಜೇನು ಸೇವಿಸಬಾರದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Categories
ತೀರ್ಥಹಳ್ಳಿ

ಮೇಗರವಳ್ಳಿಯಲ್ಲಿ ಬಾಲಾಜಿ ಕಪ್ ಕ್ರಿಕೆಟ್ ಟೂರ್ನಿ ರಂಗು!

ಮೇಗರವಳ್ಳಿಯಲ್ಲಿ ಬಾಲಾಜಿ ಕಪ್ ಕ್ರಿಕೆಟ್ ಟೂರ್ನಿ ರಂಗು!
– ಮೊದಲ ಬಾರಿಗೆ ಕ್ರಿಕೆಟ್ ಹಬ್ಬಕ್ಕೆ ಸಾಂಸ್ಕೃತಿಕ ಝಲಕ್
– ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ
– ಮತ್ತೆ ಮಾದರಯಾಯ್ತು ಲಲಿತಮ್ಮ ಟ್ರಸ್ಟ್, ಬಾಲಾಜಿ ಸ್ಪೋರ್ಟ್ಸ್ ಕ್ಲಬ್

NAMMUR EXPRESS NEWS
ತೀರ್ಥಹಳ್ಳಿ: ಮೇಗರವಳ್ಳಿಯ ಬಾಲಾಜಿ ಕಪ್ 2025 ಕ್ರಿಕೆಟ್ ಟೂರ್ನಮೆಂಟ್ ಮತ್ತು ಸಾಂಸ್ಕೃತಿಕ ನೃತ್ಯ ವೈಭವ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ತೀರ್ಥಹಳ್ಳಿ ತಾಲ್ಲೂಕು ಮೇಗರವಳ್ಳಿಯಲ್ಲಿ ಮಾರ್ಚ್ 6ರಿಂದ ಮಾರ್ಚ್ 9ವರೆಗೆ ನಡೆದ ಆಗುಂಬೆ ಹೋಬಳಿ ಮತ್ತು ಮುತ್ತೂರು ಹೋಬಳಿ ಹಾಗೂ ಯಡೂರು ಭಾಗದ ಆಟಗಾರರನ್ನು ಒಳಗೊಂಡ, ಲೀಗ್ ಕಂ ನಾಕೌಟ್ ಮಾದರಿಯ ಕ್ರಿಕೆಟ್‌ ಟೂರ್ನಮೆಂಟ್ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಯಿತು..‌

ಮೊದಲ ಬಾರಿಗೆ, ಕ್ರಿಕೆಟ್ ಹಬ್ಬಕ್ಕೆ ಸಾಂಸ್ಕೃತಿಕ ರಂಗು

ಇದೇ ಮೊದಲ ಬಾರಿಗೆ, ಕ್ರಿಕೆಟ್ ಹಬ್ಬದ ಜೊತೆಗೆ, ಮಂಗಳೂರಿನ ಅರೇಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ” ಬಿಡುವನೇ ಬ್ರಹ್ಮಲಿಂಗ ” ಎನ್ನುವ ನೃತ್ಯ ವೈಭವವನ್ನು ಅತ್ಯುತ್ತಮವಾಗಿ, ಕಣ್ಮನ ಸೆಳೆಯುವಂತೆ ಅಭಿನಯಿಸಿ ಪೇಕ್ಷಕರ ಹೃದಯದಲ್ಲಿ ಸ್ಮರಣೀಯವಾಗಿ ಉಳಿಯುವಂತೆ ಮಾಡಿತು.

ಲಲಿತಮ್ಮ ಸೇವಾ ಪ್ರಶಸ್ತಿ

ವೇದಿಕೆಯಲ್ಲಿ, ಆರೋಗ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಮಾಡಿದ ಶ್ರೀಮತಿ ನಾಗರತ್ನ ಆರೋಗ್ಯ ಸಹಾಯಕಿ ಅವರಿಗೆ ” ಲಲಿತಮ್ಮ ಸೇವಾ ಪ್ರಶಸ್ತಿ 2025 ” ನೀಡಿ ಗೌರವಿಸಲಾಯಿತು, ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಶ್ರೀ ನವೀನ್ ಕುಮಾರ್ ನಾಯಿರಿ, ಬೆಂಗಳೂರು,
ಶ್ರೀ ವಿರೇಶ್ ಟಿ, ಗುಡ್ಡೇಕೇರಿ, ಶ್ರೀ ಚಂದ್ರಶೇಖರ ಗುರುಸ್ವಾಮಿಗಳು ಕರುಣಾಪುರ, ಶ್ರೀ ನಿತಿನ್ ಹೆಗಡೆ, ಡಾ.ಯುವರಾಜ್ ಹೆಗಡೆ ವೈದ್ಯರು, ಡಾ.ಗಣೇಶ್ ಕಾಮತ್, ರಾಜೇಂದ್ರ ಅರಣ್ಯ ಇಲಾಖೆ, ಆರೋಗ್ಯ ಇಲಾಖೆಯ ಕಿಟ್ಟಪ್ಪ, ಕೃಷ್ಣಪ್ಪ, ಅಂಚೆ ಇಲಾಖೆಯ ಮಂಜುನಾಥ್ ಬಾವಿಕೆರೆ, ಕೃಷಿಕ, ಶ್ರೀ ಅಶೋಕ್ ಕೆರೆಬೈಲು, ಸಾಹಿತಿ ಶ್ರೀಮತಿ ನೇತ್ರಾವತಿ ಚಂದ್ರಹಾಸ್, ಕ್ರೀಡಾ ಸಾಧಕ ಶಿಕ್ಷಕಿ ಶ್ರೀಮತಿ ಜ್ಯೋತಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ, ಶ್ರೀ ಪ್ರದೀಪ್ ಶಿರೂರು, ಕ್ರೀಡಾಕೂಟದ ಸರಣಿ ಸರ್ವೋತ್ತಮ ಪ್ರಶಸ್ತಿ, ರೆಪ್ರೀಜರೇಟರ್ ನೀಡಿದ್ದ ಪ್ರಶಾಂತ್ ದನಿನಕೊಡಿಗೆ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.. ‌
ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಮತ್ತು ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಸದಸ್ಯರು ಸಂಬಂಧಿಸಿದ ಎಲ್ಲರನ್ನೂ ಎಲ್ಲಾ ಮುಖ್ಯ ಅತಿಥಿಗಳು ಶ್ಲಾಘಿಸಿದರು ಜೊತೆಗೆ ಇದೊಂದು ಅತ್ಯಂತ ಮಾದರಿ ಕಾರ್ಯ.. ದಿವಂಗತ, ಲಲಿತಮ್ಮ ಅವರ ಹೆಸರಿನಲ್ಲಿ ಅವರ ಮಗ ವಿಜೇತ ಶೆಟ್ಟಿ ಮಾಡುತ್ತಿರುವ ಕಾರ್ಯ, ಇಡೀ ಸಮಾಜಕ್ಕೆ ಮಾದರಿಯಾದುದು ಎಂದು ಎಲ್ಲಾ ಗಣ್ಯರು ಅಭಿನಂದಿಸಿದರು..‌
ವೇದಿಕೆಯ, ಅಧ್ಯಕ್ಷತೆಯನ್ನು, ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ದಿಲೀಪ್ ಕರುಣಾಪುರ ವಹಿಸಿದ್ದು ವೇದಿಕೆಯಲ್ಲಿ, ಬಾಳೇಹಳ್ಳಿ ಪ್ರಭಾಕರ್, ರಮೇಶ್ ಹೆಗಡೆ, ವೆಂಕಟೇಶ್ ಹೆಗಡೆ, ವಿಜೇತ್ ಶೆಟ್ಟಿ, ರಾಘವೇಂದ್ರ ಭಟ್, ದಿವಾಕರ್ ಎಂ ಎಸ್, ಸತೀಶ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ಚಂದ್ರಶೇಖರ ಗುರುಸ್ವಾಮಿಗಳು, ಪ್ರದೀಪ್ ಸೈನಿಕರು, ಹಸಿರುಮನೆ ಮಹಾಬಲೇಶ್, ಪ್ರಶಾಂತ್ ದನಿನಕೂಡಿಗೆ, ಹಾಗೂ ಎಲ್ಲಾ ಸನ್ಮಾನಿತರು ಹಾಜರಿದ್ದರು..‌

– ಬಾಲಾಜಿ ಕಪ್ 2025 ವಿಜೇತರು

ಮೊದಲ ಬಹುಮಾನ : ಪಲ್ಲವಿ ಫ್ರೆಂಡ್ಸ್ ರಂಜದಕಟ್ಟೆ
ಮಾಲೀಕರು : ಹರೀಶ್ ರಂಜದಕಟ್ಟೆ & ಆಶೀರ್ವಾದ ಮೇಗರವಳ್ಳಿ

ದ್ವಿತೀಯ ಬಹುಮಾನ : ಲೈಟಿಂಗ್ ಗ್ಯಾಲರಿ ಶಿವಮೊಗ್ಗ
ಮಾಲೀಕರು : ದೀಪಕ್ ಎಂ ಸಿ ಮುಂಡುಕೋಡು

ತೃತೀಯ ಬಹುಮಾನ : ನಿಮ್ದೇ ಬಾಯ್ಸ್ ಯಡೂರು
ಮಾಲೀಕರು : ಚಿದಾನಂದ್ ಯಡೂರು & ದಿನೇಶ್ ಪೂಜಾರಿ ಗೌತನಿ & ವಿನಯ್ ಯಡೂರು

ಶಿಸ್ತು ಬದ್ಧ ತಂಡ : ವಿ ಕೆ ಬ್ರದರ್ಸ್ ಚಿಪ್ಪಳಕಟ್ಟೆ
ಮಾಲೀಕರು : ವೈಶಾಕ್ ಎನ್.ಆರ್ .ಪುರ & ಕಿರಣ್ ಚಿಪ್ಪಳಕಟ್ಟೆ

ಮ್ಯಾನ್ ಆಫ್ ದ ಸೀರೀಸ್ : ಕಾರ್ತಿಕ್ ಕಡ್ತೂರು
ಬೆಸ್ಟ್ ಬ್ಯಾಟ್ಸ್ಮನ್ : ಸಚಿನ್ ಶುಂಠಿಕಟ್ಟೆ
ಬೆಸ್ಟ್ ಬೌಲರ್ : ಶಾರ್ಜಿಲ್ ರಂಜದಕಟ್ಟೆ
ಬೆಸ್ಟ್ ಫೀಲ್ಡರ್ : ರಂಜನ್ ಎಸ್ ಆರ್ ಶುಂಠಿಕಟ್ಟೆ
ಎಮರ್ಜಿಂಗ್ ಪ್ಲೇಯರ್ : ದೀಕ್ಷಿತ್ ಯಡೂರು

– ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ನೃತ್ಯ ವೈಭವದ ಯಶಸ್ವಿಗೆ ದುಡಿದವರು..‌

* ವಿಜೇತ ಶೆಟ್ಟಿ ಬಾಲಾಜಿ • ಮಂಜುನಾಥ್ ಶೆಟ್ಟಿ ಬಾಲಾಜಿ,
* ದಿಲೀಪ್ ಕರುಣಾಪುರ • ವಸಂತ್ ಅಣ್ಣುವಳ್ಳಿ • ರಮೀತ್ ಅಣ್ಣುವಳ್ಳಿ • ಅಮಿತ್ ಅಣ್ಣುವಳ್ಳಿ • ರಮೇಶ್ ಅಣ್ಣುವಳ್ಳಿ
* ವಿಶ್ವನಾಥ್ ಅಣ್ಣುವಳ್ಳಿ, • ಕರ್ಣ ಶಾಂತಿಗುಡ್ಡ,
* ಆಕಾಶ್ ಶೆಟ್ಟಿ ಸಂತೆ ಮೈದಾನ, • ಮಧು ಸಂತೆ ಮೈದಾನ
* ಸಂತೋಷ ಸಂತೆ ಮೈದಾನ, • ಪ್ರವೀಣ ಜೋಗಿಮನೆ
* ಸುಶಾಂತ್ ಕರೆಬೈಲು, • ಗಣೇಶ್ ಬಾವಿಕೆರೆ
* ಮಂಜು ಬಾವಿಕೆರೆ , • ನಾಗೇಶ್ ಬಾಲಾಜಿ
* ಅಶೋಕ್ ಬಾವಿಕೆರೆ, • ಶಿವರಾಜ್ ಮೇಗರವಳ್ಳಿ,
* ಅರುಣ ನಾಲೂರು, • ರಾಜೇಶ್ ಬಾವಿಕೆರೆ,
* ಪ್ರದೀಪ್ ಆಂದಿನಿ, • ಅವಿನಾಶ್ ಛತ್ರಕೇರಿ ತೀರ್ಥಹಳ್ಳಿ
* ಸುಬ್ರಹ್ಮಣ್ಯ ಕರುಣಾಪುರ, • ನವೀನ್ ಬೆಜ್ಜುವಳ್ಳಿ
* ಸಂಕೇತ್ ಕೊಳಿಗೆ, • ದಯಾನಂದ ಕಾಮತ್
* ಅಜಿತ್ ಅಣ್ಣುವಳ್ಳಿ

Categories
ಕ್ರೀಡಾ ಸುದ್ದಿ

ಸ್ಪೋರ್ಟ್ಸ್ ಟಾಪ್ ನ್ಯೂಸ್..!!

ಸ್ಪೋರ್ಟ್ಸ್ ಟಾಪ್ ನ್ಯೂಸ್..!!

* ಭಾರತೀಯ ಕುಸ್ತಿ ಫೆಡರೇಷನ್ ಮೇಲಿನ ಅಮಾನತು ತೆರವು
* ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಜಲಕಂಟಕ
* ಕೊಹ್ಲಿ,ರೋಹಿತ್ 4 ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಕ್ರಿಕೆಟಿಗರು

NAMMUR EXPRESS SPORTS NEWS
* ಭಾರತೀಯ ಕುಸ್ತಿ ಫೆಡರೇಷನ್ ಮೇಲಿನ ಅಮಾನತು ತೆರವು..

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಮೇಲೆ ವಿಧಿಸಲಾಗಿದ್ದ ಅಮಾನತು ಆದೇಶವನ್ನು ಕ್ರೀಡಾ ಸಚಿವಾಲಯ ರದ್ದುಗೊಳಿಸಿದೆ.
ಮುಂದಿನ ಸೂಚನೆ ಬರುವವರೆಗೆ ಒಕ್ಕೂಟದ ದೈನಂದಿನ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯಿಂದ ದೂರವಿರಲು ಹೊಸದಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿಗೆ ಸೂಚನೆ నిడిది.
ಕ್ರೀಡೆ ಮತ್ತು ಕ್ರೀಡಾಪಟುಗಳ ಹಿತದೃಷ್ಟಿಯಿಂದ ಸಚಿವಾಲಯವು ಅಮಾನತು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಕ್ರಮ ಕೈಗೊಂಡಿದ್ದಕ್ಕಾಗಿ ನಾನು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಇದು ನಮಗೆ ಸುಗಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಕ್ರೀಡೆಯ ಹಿತದೃಷ್ಟಿಯಿಂದ ಇದು ಅಗತ್ಯವಾಗಿತ್ತು. ಸ್ಪರ್ಧೆಗಳ ಕೊರತೆಯಿಂದ ಕ್ರೀಡಾಪಟುಗಳು ಬಳಲುತ್ತಿದ್ದರು ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ.
ಅಮನ್‌ನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಆಯ್ಕೆ ಟ್ರಯಲ್ಸ್ ಸೇರಿದಂತೆ ಚಟುವಟಿಕೆಗಳನ್ನು ಪುನರಾರಂಭಿಸಲು ಈ ಆದೇಶ ದಾರಿ ಮಾಡಿಕೊಟ್ಟಿದೆ. ಡಿಸೆಂಬರ್ 21 ರಂದು ಆಯ್ಕೆಯಾದ ಹೊಸ ಸಂಸ್ಥೆಯ ಆಡಳಿತ ಮತ್ತು ಕಾರ್ಯವಿಧಾನದ ಸಮಗ್ರತೆಯಲ್ಲಿನ ಲೋಪಗಳಿಗಾಗಿ ಸಚಿವಾಲಯವು 2023 ರ ಡಿ.24 ರಂದು WFI ಅನ್ನು ಅಮಾನತುಗೊಳಿಸಿತ್ತು.

* ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಜಲಕಂಟಕ – ಕುಡಿಯುವ ನೀರು ಗ್ರೌಂಡ್‌ಗೆ ನಿಷೇಧ

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಜಲ ಕಂಟಕ ಎದುರಾಗಿದೆ. ಬೇಸಿಗೆ ಆರಂಭವಾಗುತ್ತಿದಂತೆ ಜಲಮಂಡಳಿ ಅಲರ್ಟ್ ಆಗಿದೆ. ಕುಡಿಯುವ ನೀರನ್ನು ಗೌಂಡ್‌ಗೆ ಬಳಸೋದಕ್ಕೆ ನಿಷೇಧ ಮಾಡಲಾಗಿದೆ. ಈಗಾಗಲೇ ಜಲಮಂಡಳಿ ಆಯೋಜಕರಿಗೆ ಸೂಚನೆ ಕೂಡ ನೀಡಿದರೆ.
ಮಾರ್ಚ್ 22ರಂದು ಶುರುವಾಗಲಿರುವ 2025ರ ಐಪಿಎಲ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ನಡಯುವಾಗ ಗೌಂಡ್‌ಗೆ ಕುಡಿಯುವ ನೀರು ಬಳಸದಂತೆ ಸೂಚನೆ ನೀಡಲಾಗಿದೆ. ಪ್ರತಿ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ನೀರುಣಿಸಲು 75 ಸಾವಿರ ಲೀಟರ್ ನೀರು ಬೇಕು. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬೇಡಿಕೆ ಬೇಸಿಗೆಯಲ್ಲಿ ಹೆಚ್ಚಿರಲಿದೆ. ನಗರದಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಐಪಿಎಲ್ ಪಂದ್ಯದ ವೇಳೆ ಕುಡಿಯುವ ನೀರನ್ನು ಬಳಸದಂತೆ ಆಯೋಜಿಕರಿಗೆ ಸೂಚಿಸಿದ್ದಾರೆ. ಕಬ್ಬನ್ ಉದ್ಯಾನವನದ ತ್ಯಾಜ್ಯ ನೀರನ್ನು ಸಂಸ್ಕರಣ ಘಟಕದಿಂದ ಕ್ರೀಡಾಂಗಣಕ್ಕೆ ಸರಬರಾಜು ಮಾಡಲು ಜಲಮಂಡಳಿ ಅನುಮತಿ ನೀಡಿದೆ.

* ಕೊಹ್ಲಿ,ರೋಹಿತ್ 4 ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಕ್ರಿಕೆಟಿಗರು..

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಪ್ರಸ್ತುತ ನಾಯಕ ರೋಹಿತ್ ಶರ್ಮಾ ನಾಲ್ಕು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಕ್ರಿಕೆಟಿಗರು.
ಕೊಹ್ಲಿ 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ, 2024ರ ಟಿ 20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದಾರೆ. ಇನ್ನು ರೋಹಿತ್‌ 2007ರ ಟಿ20 ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ, 2024ರ ಟಿ 20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದಾರೆ.

Categories
ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಾಲಿವುಡ್ ನಟಿ ಭೇಟಿ, ವಿಶೇಷ ಪೂಜೆ!

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಾಲಿವುಡ್ ನಟಿ ಭೇಟಿ, ವಿಶೇಷ ಪೂಜೆ!

– ಸುಬ್ರಹ್ಮಣ್ಯನ ಮೊರೆ ಹೋದ ಕತ್ರಿನಾ ಕೈಫ್
– ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆ ನಡೆಸಿದ ಪ್ರಾರ್ಥನೆ

NAMMUR EXPRESS NEWS
ಮಂಗಳೂರು: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಮಾ. 11ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ತನ್ನ ಸ್ನೇಹಿತೆಯರೊಂದಿಗೆ ದೇಗುಲಕ್ಕೆ ಭೇಟಿ ನೀಡಿದ ಕತ್ರಿನಾ, ಸರ್ಪ ಸಂಸ್ಕಾರ ಪೂಜೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ದೋಷ ನಿವಾರಣೆಗೆ ಅನೇಕರು ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಾರೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೂಡ ಸುಬ್ರಹ್ಮಣ್ಯನ ಮೊರೆ ಹೋಗಿದ್ದಾರೆ.
ಮಾ. 11 ಮತ್ತು 12ರಂದು ತಲಾ ನಾಲ್ಕರಿಂದ ಐದು ಗಂಟೆಗಳ ಕಾಲ ಎರಡು ಹಂತಗಳಲ್ಲಿ ಪೂಜೆಯನ್ನು ನಡೆಸಲಾಗುತ್ತದೆ.
ದೇವಸ್ಥಾನದ ವಿಐಪಿ ಅತಿಥಿ ಗೃಹದಲ್ಲಿ ಉಳಿದುಕೊಳ್ಳಲಿರುವ ಕತ್ರಿನಾ ಮಾ. 13ರಂದು ಮಧ್ಯಾಹ್ನ 2 ಗಂಟೆಯ ವೇಳೆಗೆ ಧಾರ್ಮಿಕ ಕ್ರಿಯೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ.

Categories
ಸಿನಿಮಾ

ಕನ್ನಡಕ್ಕೆ ಹೊಸ ಸಿನಿಮಾ ಪಾರಿತೋಷಕ!

ಕನ್ನಡಕ್ಕೆ ಹೊಸ ಸಿನಿಮಾ ಪಾರಿತೋಷಕ!
– ಮಾ. 14ಕ್ಕೆ ರಾಜ್ಯದಲ್ಲಿ ಬಿಡುಗಡೆ
– ಹೊಸ ಭರವಸೆ ಮೂಡಿಸಿರುವ ಹೊಸಬರ ಸಿನಿಮಾ

NAMMUR EXPRESS NEWS
ಬೆಂಗಳೂರು: ಶಿವಮೊಗ್ಗ ಹಾಗೂ ಚಿತ್ರದುರ್ಗ ಮೂಲದ ಉತ್ಸಾಹಿ ಯುವಕರ ತಂಡವೇ ನಿರ್ಮಿಸಿ, ನಿರ್ದೇಶಿಸಿದ ‘ಪಾರಿತೋಷಕ’ ಹೆಸರಿನ ಚಿತ್ರವು ಮಾ. 14ರಂದು ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ ಎಂದು ಚಿತ್ರದ ನಿರ್ದೇಶಕ ಪ್ರದೀಪ್ ತಿಳಿಸಿದರು.
ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರದ ತಂಡದೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಾಮ ಮಾರ್ಗಗಳ ಮೂಲಕ ಸುಲಭವಾಗಿ ಗಳಿಸಿದ ಹಣವು ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ಅಂತಿಮವಾಗಿ ಕಷ್ಟಪಟ್ಟು ಗಳಿಸಿದ್ದೇ ಶಾಶ್ವತ ಎನ್ನುವ ಥೀಮ್ ಇಟ್ಟುಕೊಂಡು ನಿರ್ಮಾಣ ಮಾಡಿದ ಚಿತ್ರ ಇದ್ದಾಗಿದ್ದು, ಚಿತ್ರದ ಕಥೆಗೆ ತಕ್ಕಂತೆ ಬಂಡವಾಳ ಹೂಡಲಾಗಿದೆ. ಚಿತ್ರವು ಕುಟುಂಬ ಸಮೇತ ನೋಡಬಹುದಾದ ಕಥಾ ಹಂದರವನ್ನು ಹೊಂದಿದೆ. ರಾತ್ರಿ ಸಮಯದಲ್ಲಿಯೇ ಹೆಚ್ಚು ಚಿತ್ರೀಕರಣ ಮಾಡಿದ್ದೇವೆ. ತುಂಬಾ ರಿಸ್ಕ್ ತೆಗೆದುಕೊಂಡು, ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಎಂದರು.
ಶಿವಮೊಗ್ಗ ಮೂಲದ ಶ್ರೀನಿಧಿ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊಸಬರು ಹೊಸ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ. ಹೊಸಬರಿಗೆ ಪ್ರೇಕ್ಷಕರು ಪ್ರೋತ್ಸಾಹಿಸಿದರೆ ಮುಂದಿನ ದಾರಿಗೂ ಅನುಕೂಲವಾಗಲಿದೆ ಎಂದರು.
ಚಿತ್ರದ ನಾಯಕ ನಟ ಮನು ಮಾತನಾಡಿ, ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆನ್ನುವ ಹಂಬಲದೊಂದಿಗೆ ಬೆಂಗಳೂರಿಗೆ ಹೋಗಿ ಅಲ್ಲಿ ನೆಲೆ ಕಾಣದೆ ವಾಪಾಸ್ ಬಂದು ಈ ಸಿನಿಮಾ ಮಾಡಿದ್ದೇವೆ. ಬೆಂಗಳೂರು ‘ಸಮುದ್ರ ಇದ್ದಂತೆ’ ಅಲ್ಲಿದ್ದು ಸಿನಿಮಾದಲ್ಲಿ ಗುರುತಿಸಿಕೊಳ್ಳುವುದು ಕಷ್ಟ. ನಮಗೆ ಅವಕಾಶ ಸಿಗಲಿಲ್ಲ. ಹಾಗಾಗಿ ವಾಪಾಸ್ ಬಂದು ನಾವೇ ಸಿನಿಮಾ ಮಾಡಿದ್ದೇವೆ ಎಂದರು.
ಚಿತ್ರದಲ್ಲಿ ನಾಯಕಿಯಾಗಿ ಐಶ್ವರ್ಯ ನಟಿಸಿದ್ದಾರೆ. ಶಂಕರ್ ಛಾಯಾಗ್ರಹಣ, ಚಂದನ್ ಹೆಗಡೆ ಸಂಗೀತ ಚಿತ್ರಕ್ಕಿದೆ. ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಲಾವಿದ ಹೇಮಂತ್ ಇದ್ದರು.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ವಿನಾಯಕನ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಹಣಕಾಸಿನ ವಿಷಯಗಳಲ್ಲಿ ನೀವು ಅದೃಷ್ಟಶಾಲಿಯಾಗುತ್ತೀರಿ. ನಿಮ್ಮ ಮನಸ್ಸು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ವ್ಯವಹಾರದಲ್ಲಿ ವಿಸ್ತರಣೆ ಕಂಡುಬರಲಿದೆ. ಆಸ್ತಿ ಖರೀದಿ ಅಥವಾ ಮಾರಾಟದಲ್ಲಿ ವಿಳಂಬವಾಗಬಹುದು. ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ಕಚೇರಿಯಲ್ಲಿ ತಂಡದ ಜೊತೆ ಸೇರಿ ಮಾಡುವ ಕೆಲಸವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.

** ವೃಷಭ ರಾಶಿ :
ಇಂದು ನಿಮ್ಮ ಖರ್ಚುಗಳ ಮೇಲೆ ಹಿಡಿತವಿರಲಿ.
ಅನುಪಯುಕ್ತ ವಸ್ತುಗಳಿಗೆ ಹಣ ಖರ್ಚು ಮಾಡಬೇಡಿ. ಇದು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಕುಟುಂಬ ಜೀವನದಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ಆಸ್ತಿ ಮಾರಾಟದಿಂದ ಆರ್ಥಿಕ ಲಾಭ ದೊರೆಯಲಿದೆ. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ. ಯೋಗ ಮತ್ತು ಧ್ಯಾನವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ಆರೋಗ್ಯವನ್ನು ಉತ್ತಮವಾಗಿಡುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಮಯ ಕಳೆಯಿರಿ

** ಮಿಥುನ ರಾಶಿ :
ಇಂದು ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ನಿಮ್ಮ ಕುಟುಂಬ ಜೀವನದಲ್ಲಿ ಸಣ್ಣ ಸಣ್ಣ ಸಂತೋಷಗಳನ್ನು ಗಮನದಲ್ಲಿಟ್ಟುಕೊಳ್ಳಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ. ಯೋಗ ಮತ್ತು ಧ್ಯಾನವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ.

** ಕರ್ಕಾಟಕ ರಾಶಿ :
ಇಂದು ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಇರುತ್ತದೆ. ನಿಮ್ಮ ಕೆಲಸಕ್ಕೆ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಆರ್ಥಿಕ ಲಾಭ ಸಿಗುತ್ತದೆ, ಆದರೆ ಯೋಚಿಸದೆ ಹೂಡಿಕೆ ಮಾಡಬೇಡಿ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದರಿಂದ ಆರ್ಥಿಕ ಲಾಭಗಳು ಸಿಗುತ್ತವೆ, ಆದರೆ ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳಿಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

** ಸಿಂಹ ರಾಶಿ :
ಇಂದು ಆರ್ಥಿಕ ಸ್ಥಿರತೆ ಬರುತ್ತದೆ. ಇದರಿಂದಾಗಿ ಮನಸ್ಸು ಸಂತೋಷವಾಗಿರುತ್ತದೆ. ಒತ್ತಡವನ್ನು ತಪ್ಪಿಸಿ. ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು, ನೀವು ಯಶಸ್ಸಿನ ಏಣಿಯನ್ನು ಏರುತ್ತೀರಿ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ. ಇದು ನಿಮ್ಮನ್ನು ಆರೋಗ್ಯವಾಗಿ ಮತ್ತು ಚೈತನ್ಯಶೀಲವಾಗಿಡುತ್ತದೆ. ನಿಮ್ಮ ಒಟ್ಟಾರೆ ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಪ್ರೇಮ ಜೀವನದಲ್ಲಿ ನೀವು ಸುಂದರ ಕ್ಷಣಗಳನ್ನು ಆನಂದಿಸುವಿರಿ.

** ಕನ್ಯಾ ರಾಶಿ :
ಇಂದು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಬೇಡಿ. ನಿಮ್ಮ ಪ್ರಣಯ ಜೀವನ ಇಂದು ಅದ್ಭುತವಾಗಿರುತ್ತದೆ.

** ತುಲಾ ರಾಶಿ :
ಇಂದು ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಗಮನವಿರಲಿ. ಕಚೇರಿಯಲ್ಲಿ ನಿಮ್ಮ ಕೆಲಸದ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ. ಉತ್ಸಾಹಭರಿತರಾಗಿ ಉಳಿಯುತ್ತಾರೆ. ಪ್ರೇಮ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ.

** ವೃಶ್ಚಿಕ ರಾಶಿ :
ಇಂದು ಸಂಬಂಧಗಳಲ್ಲಿ ಆಪ್ತತೆ ಹೆಚ್ಚಾಗುತ್ತದೆ. ಅಪಾಯಕಾರಿ ವ್ಯವಹಾರವನ್ನು ಪ್ರಾರಂಭಿಸಬೇಡಿ. ನೀವು ಯಾವುದಾದರೂ ಶಾಂತ ಸ್ಥಳಕ್ಕೆ ಭೇಟಿ ನೀಡಬಹುದು. ನಿಮ್ಮ ಹಳೆಯ ಆಸ್ತಿಯನ್ನು ಮಾರಾಟ ಮಾಡಲು ನೀವು ನಿರ್ಧರಿಸಬಹುದು. ಇದರಿಂದ ನಿಮಗೆ ಆರ್ಥಿಕವಾಗಿಯೂ ಲಾಭವಾಗುತ್ತದೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಆಹ್ಲಾದಕರ ಪ್ರಯಾಣಕ್ಕೆ ಅವಕಾಶಗಳು ದೊರೆಯುತ್ತವೆ.

** ಧನಸ್ಸು ರಾಶಿ :
ಇಂದು ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ವ್ಯವಹಾರದ ಪರಿಸ್ಥಿತಿ ಬಲವಾಗಿರುತ್ತದೆ. ಕೆಲಸಗಳನ್ನು ವಿಳಂಬ ಮಾಡುವುದನ್ನು ತಪ್ಪಿಸಿ. ಆಸ್ತಿ ಖರೀದಿಗೆ ಅವಕಾಶಗಳು ದೊರೆಯಲಿವೆ. ಸಂಪತ್ತಿನಲ್ಲಿ ಹೆಚ್ಚಳವಾಗಲಿದೆ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ

** ಮಕರ ರಾಶಿ :
ಇಂದು ಉದ್ಯೋಗ ಮತ್ತು ವ್ಯವಹಾರದಲ್ಲಿ ಪರಿಸರ ಅನುಕೂಲಕರವಾಗಿರುತ್ತದೆ. ವ್ಯವಹಾರದಲ್ಲಿ ಲಾಭ ಇರುತ್ತದೆ. ನಿಮ್ಮ ಕೆಲಸಕ್ಕೆ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ. ಧ್ಯಾನವು ಮನಸ್ಸನ್ನು ಶಾಂತವಾಗಿರಿಸುತ್ತದೆ. ಇಂದು ಆಸ್ತಿ ಖರೀದಿಸುವುದು ಅಥವಾ ಮಾರಾಟ ಮಾಡುವುದನ್ನು ತಪ್ಪಿಸಬೇಕು. ಆಹ್ಲಾದಕರ ಪ್ರಯಾಣದ ಸಾಧ್ಯತೆ ಇರಬಹುದು. ಪ್ರಣಯ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ.

** ಕುಂಭ ರಾಶಿ :
ಇಂದು ಆರ್ಥಿಕ ಲಾಭದಿಂದಾಗಿ ಸಂಪತ್ತು ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಕೆಲಸದ ಸ್ಥಳದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ನಿಮಗೆ ಸಿಗುತ್ತಲೇ ಇರುತ್ತವೆ. ಯೋಗ ಮತ್ತು ಧ್ಯಾನದಿಂದ ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯಿಂದ ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು.

** ಮೀನ ರಾಶಿ :
ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಕಚೇರಿಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಇರುತ್ತದೆ. ನಿಮ್ಮ ಹಳೆಯ ಆಸ್ತಿಯನ್ನು ಮಾರಾಟ ಮಾಡುವುದರಿಂದ ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ಪ್ರೀತಿಪಾತ್ರರ ಜೊತೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಇದು ನಿಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ.

Categories
ಕರಾವಳಿ

ಕಾರ್ಕಳದಲ್ಲಿ ಯುವಕ ಆತ್ಮಹತ್ಯೆಗೆ ಶರಣು

ಕಾರ್ಕಳದಲ್ಲಿ ಯುವಕ ಆತ್ಮಹತ್ಯೆಗೆ ಶರಣು
– ಅರುಣ್ ಕುಮಾರ್ (18) ಎಂಬ ಯುವಕ ಆತ್ಮಹತ್ಯೆ
– ಕಬ್ಬಿಣದ ರಾಡ್ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ
NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಹಿಮ್ಮುಂಜೆ ರಸ್ತೆಯಲ್ಲಿ ವಾಸಿಸುತ್ತಿದ್ದ ಅರುಣ್ ಕುಮಾರ್ (18) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ 2025ರ ಮಾರ್ಚ್ 10ರಂದು ಬೆಳಿಗ್ಗೆ 11ರಿಂದ 12ಗಂಟೆಯ ನಡುವೆ ನಡೆದಿದೆ.

ಅರುಣ್ ತನ್ನ ಮನೆಯೊಳಗೆ ಇದ್ದ ಕಬ್ಬಿಣದ ರಾಡ್ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನು ಇತ್ತೀಚೆಗೆ ಮನಸ್ತಾಪದಿಂದ ಬಳಲುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆಗೆ ಕಾರಣಗಳನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಈ ಸಂಬಂಧವಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕರಾವಳಿ

ಶಂಭೂರಿನ ಅಡೆಪಿಲ ದೈವಸ್ಥಾನ ಗೊಂದಲದಿಂದ ನೇಮ ಸ್ಥಗಿತಗೊಂಡಿದೆ.

ಶಂಭೂರಿನ ಅಡೆಪಿಲ ದೈವಸ್ಥಾನ ಗೊಂದಲದಿಂದ ನೇಮ ಸ್ಥಗಿತಗೊಂಡಿದೆ.
-ಅಧಿಕಾರಿಗಳು ಮತ್ತು ಪೊಲೀಸರ ಮಧ್ಯ ಪ್ರವೇಶದಿಂದ ನೇಮ ಸ್ಥಗಿತ
– ಮುಂದಿನ ಆದೇಶ ಬರುವವರೆಗೆ ನೇಮ ನಡೆಸದಂತೆ ನ್ಯಾಯಾಲಯವು ಆದೇಶಿಸಿದೆ

NAMMUR EXPRESS NEWS

ಬಂಟ್ವಾಳ: ಶಂಭೂರು ಅಡೆಪಿಲ ದೈವಸ್ಥಾನದ ವಾರ್ಷಿಕ ನೇಮೋತ್ಸವದ ವಿಷಯದಲ್ಲಿ ಗೊಂದಲ ಉಂಟಾಗಿದ್ದು, ಅಧಿಕಾರಿಗಳು ಮತ್ತು ಪೊಲೀಸರ ಮಧ್ಯ ಪ್ರವೇಶದಿಂದ ನೇಮ ಸ್ಥಗಿತಗೊಂಡ ಘಟನೆ ಮಾ. 9ರಂದು ನಡೆದಿದೆ.
ದೈವಸ್ಥಾನದ ನೇಮೋತ್ಸವದ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಗೊಂದಲಗಳಿದ್ದು, ಹೀಗಾಗಿ ಮಾ. 9ರಿಂದ 11ರ ವರೆಗೆ ನಿಗದಿಯಾಗಿದ್ದ ನೇಮದ ಮೊದಲ ದಿನ ಎರಡೂ ಕಡೆಯವರು ಸೇರಿದ್ದರು. ಈ ಪ್ರಕರಣ ನ್ಯಾಯಾಲಯದ ಜತೆಗೆ ಧಾರ್ಮಿಕ ದತ್ತಿ ಇಲಾಖೆಗೂ ತಲುಪಿತ್ತು. ಗೊಂದಲ ಉಂಟಾಗಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ತಹಶೀಲ್ದಾರ್ ಸಹಿತ ಗ್ರಾಮಾಂತರ ಪೊಲೀಸರು ತೆರಳಿದ್ದು, ಮುಂದಿನ ಆದೇಶ ಬರುವವರೆಗೆ ನೇಮ ನಡೆಸದಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಕೊನೆಗೆ ನೇಮ ಸ್ಥಗಿತಗೊಂಡಿತು.