Categories
ಕರಾವಳಿ

ಎ.01-09 : ಚಾರ ಮೇಲ್ಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿ ಪುನರ್‌ ಪ್ರತಿಷ್ಠೆ – ಬ್ರಹ್ಮಕಲಶೋತ್ಸವ – ನೇಮೋತ್ಸವ

ಕಾರ್ಕಳ : ತುಳುನಾಡಿನ ದೈವಗಳು ತುಳುವರ ಮನಸ್ಸುಗಳಲ್ಲಿ ನೆಲೆಗೊಂಡಿರುವ ತುಳುವ ಸಂಸ್ಕೃತಿಯ ಮೂಲ ದೇವರುಗಳಾದ ದೈವಾರಾಧನೆ, ನಾಗರಾಧನೆ, ಸಿರಿ ಆರಾಧನೆ, ವೈದಿಕ ಸಂಸ್ಕೃತಿಯು ತುಳುವರನ್ನು ಆವರಿಸಿಕೊಂಡಿರುವುದು ದೈವಶಕ್ತಿಗೆ ಸಾಕ್ಷಿ ಆಗಿದೆ. ತುಳುನಾಡಿನಲ್ಲಿ ಪ್ರಚಲಿತವಿರುವ ದೈವಾರಾಧನೆಯಲ್ಲಿ, ವೀರಪುರುಷರಾದ ಒಡಹುಟ್ಟು ಅವಳಿಮಕ್ಕಳು ತುಳುನಾಡಿನ ನಾಗಬ್ರಹ್ಮರನ್ನು ಪೂಜಿಸುತ್ತಾ ಬಂದ ಕೋಟಿ ಚೆನ್ನಯರು ತಮ್ಮ ಕಾರ್ಯಸಾಧನೆಯಿಂದ ದೈವತ್ವಕ್ಕೆ ಏರಿದವರು. ಅಮರ ಜೀವಿಗಳು ಬ್ರಹ್ಮ ಬೈದರ್ಕಳ ಎಂಬ ಹೆಸರನ್ನು ಪಡೆದವರು. ಅಂತ ಸಾಧನೆಗಾಗಿ, ದೈವ ಬಲ ಮತ್ತು ಮನೋಬಲವನ್ನು, ವೃದ್ಧಿಗೊಳ್ಳುವುದಕ್ಕಾಗಿ ಅಂದು ಸ್ಥಾಪಿಸಿದ, 66 ಮೂಲ ಗರಡಿಯಲ್ಲಿ ಇದು ಒಂದಾಗಿದೆ ಎಂದು ಪ್ರಚಲಿತದಲ್ಲಿದೆ. ಚಾರ, ಕೆರೆಬೆಟ್ಟು, ಕಸ್ತೂರು, ಮೂರು ಗ್ರಾಮಗಳನ್ನು ಒಳಗೊಂಡ 10 ಸಾವಿರ ಭಕ್ತ ಸಮೂಹವನ್ನು ಹೊಂದಿರುತ್ತದೆ. ಸುಮಾರು 475 ವರ್ಷಗಳ ಇತಿಹಾಸವಿರುವ ಈ ಗರಡಿ ಜೀರ್ಣೋದ್ದಾರಕ್ಕೆ ಕಳೆದ ಸೆಪ್ಟೆಂಬರ್ 9ನೇ ತಾರೀಖಿನಂದು ವೇದಮೂರ್ತಿ ಶ್ರೀ ರಾಘವೇಂದ್ರ ತಂತ್ರಿಗಳು ಹೆರ್ಗ ಇವರ ಮಾರ್ಗದರ್ಶನದಲ್ಲಿ ಶಂಕುಸ್ಥಾಪನೆಗೊಂಡು, 3 ಕೋಟಿ ಹಣ ಖರ್ಚಿನೊಂದಿಗೆ ಇದೀಗ ಬ್ರಹ್ಮ ಕಲಶಕ್ಕೆ ಸಜ್ಜಾಗಿದೆ. ನಂಬಿನಾಯಗ್ ಇಂಬು ಕೊರ್ಪ ಸತ್ಯಗೆಂದಾದ್ ಕೊರ್ಪ ಎಂಬ ಅವರ ನುಡಿಗೆ, ಮೇಲೆಟ್ಟು ಗರಡಿಯಲ್ಲಿ ಇದೀಗ ಸಂಪೂರ್ಣ ಶಿಲಾಮಯಗೊಂಡು ಪುನರ್‌ಪ್ರತಿಷ್ಠೆಗೊಳ್ಳುವ ಸಮಯ ಒದಗಿ ಬಂದಿದೆ. ಈ ಜೀರ್ಣೋದ್ದಾರದ, ವಿಧಿ ವಿಧಾನಗಳನ್ನು ವೇದಮೂರ್ತಿ ಶ್ರೀ ರಾಘವೇಂದ್ರ ತಂತ್ರಿಗಳು ಹೆರ್ಗ ಇವರ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನದ ಸಹಯೋಗದಿಂದ ನಡೆಯಲಿದ್ದು, ಎ.01 ರಿಂದ ಎ. 09 ಚಾರ ಮೇಲ್ಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿಯಲ್ಲಿ ಪುನರ್‌ ಪ್ರತಿಷ್ಠೆ – ಬ್ರಹ್ಮಕಲಶೋತ್ಸವ ನಡೆಯಲಿದೆ.
ಶಿವರಾಯ ಗರೋಡಿಯಲ್ಲಿ ವರ್ಷಂಪ್ರತಿ ನೇಮೋತ್ಸವವು 06-04-2025ರಂದು ಆರಂಭಗೊಂಡು ದಿನಾಂಕ 09-04-2025ರವರೆಗೆ ನಡೆಯಲಿದೆ.

Categories
ಕರಾವಳಿ

ಕಾಂಗ್ರೆಸ್ ಪಕ್ಷದಿಂದ ಪ್ರವಾಸೋದ್ಯಮಕ್ಕೆ ಅಡ್ಡಗಾಲು: ನವೀನ್ ನಾಯಕ್ ಆಕ್ರೋಶ

ಕಾಂಗ್ರೆಸ್ ಪಕ್ಷದಿಂದ ಪ್ರವಾಸೋದ್ಯಮಕ್ಕೆ ಅಡ್ಡಗಾಲು: ರಾಜಕೀಯ ಲಾಭಕ್ಕಾಗಿ ನೀಚ ರಾಜಕಾರಣ: ನವೀನ್ ನಾಯಕ್ ಆಕ್ರೋಶ

ಕಾರ್ಕಳ:ಪ್ರವಾಸೋದ್ಯಮ ದೃಷ್ಟಿಯಿಂದ ಕಾರ್ಕಳದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕನ್ನು ಅಪೂರ್ಣ ಸ್ಥಿತಿಯಲ್ಲಿಯೇ ಮುಂದಿನ ಚುನಾವಣೆವರೆಗೂ ಉಳಿಸಿಕೊಂಡು ರಾಜಕೀಯ ಲಾಭ ಪಡೆಯುವ ಕಾಂಗ್ರೆಸ್ಸಿನ ನೀಚ ರಾಜಕಾರಣ ಮತ್ತು ದುರುದ್ದೇಶಕ್ಕೆ ಧಿಕ್ಕಾರವಿದೆ.ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು 2 ವರ್ಷಗಳಾದರೂ ಪರಶುರಾಮ ಥೀಮ್ ಪಾರ್ಕಿನ ಯೋಜನೆಯ ಬಾಕಿ ಇರುವ ಅನುದಾನವನ್ನೂ ಬಿಡುಗಡೆ ಮಾಡದೆ, ತನಿಖೆಯನ್ನೂ ಸಹ ಮುಂದುವರಿಸದಂತೆ ತಡೆಹಿಡಿದು ದಿನಕ್ಕೊಂದು ರೀತಿಯ ಪ್ರಹಸನ ನಡೆಸುತ್ತಿರುವ ಕಾರ್ಕಳ ಕಾಂಗ್ರೆಸ್ ಮುಖಂಡರು ಇದೀಗ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮುಖಾಂತರವೂ ಥೀಮ್ ಪಾರ್ಕನ್ನು ಮುಂದಿನ ಚುನಾವಣೆಯವರೆಗೆ ಹೀಗೆ ಮುಂದುವರಿಸಬೇಕೆಂದು ಹೇಳಿಸಿದ್ದು ಕಾಂಗ್ರೆಸ್ಸಿನ ಷಡ್ಯಂತ್ರವನ್ನು ಜಗಜ್ಜಾಹೀರು ಮಾಡಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕಾರ್ಕಳದ ಅಭಿವೃದ್ದಿಯ ಬಗ್ಗೆ ಕಾಂಗ್ರೆಸ್ಸಿಗಿರುವ ಅಸಡ್ಡೆಯನ್ನು ತೋರಿಸುತ್ತದೆ. ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಕಾರ್ಕಳದ ಜನತೆಗೆ ಇಷ್ಟು ದೊಡ್ಡ ದ್ರೋಹವೆಸಗಲು ಮುಂದಾಗಿರುವ ಕಾಂಗ್ರೆಸ್ ನಡೆಗೆ ಧಿಕ್ಕಾರವಿದೆ ಎಂದು ನವೀನ್ ನಾಯಕ್ ವಾಗ್ದಾಳಿ ನಡೆಸಿದ್ದಾರೆ. ಕುಟುಂಬೋತ್ಸವ ಕಾರ್ಯಕ್ರಮಕ್ಕೆ 15 ಸಾವಿರ ಜನ ಸೇರಿಸುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಗಿದೆ. ಕೇವಲ ಎರಡು ಸಾವಿರ ಜನರನ್ನಷ್ಟೇ ಸೇರಿಸಲು ಶಕ್ತವಾದ ಕಾಂಗ್ರೆಸ್ಸಿಗೆ ಕಾರ್ಕಳದಲ್ಲಿ ಅದೆಷ್ಟು ಜನ ಬೆಂಬಲವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ, ಮಿತಿಮೀರಿದ ಬೆಲೆ ಏರಿಕೆ ಹಾಗೂ ಕಾಂಗ್ರೆಸ್ಸಿನ ದ್ವೇಷ ರಾಜಕಾರಣದಿಂದ ಬೇಸತ್ತ ಜನ ಕಾಂಗ್ರೆಸ್ ಕಾರ್ಯಕ್ರಮವನ್ನು ಧಿಕ್ಕರಿಸಿದ್ದಾರೆ, ಕಾರ್ಕಳದಲ್ಲಿ ಏರ್ಪಡಿಸಲಾಗಿರುವ ಕಾಂಗ್ರೆಸ್ ಕುಟುಂಬೋತ್ಸವ ಸಂಪೂರ್ಣ ವಿಫಲವಾಗಿದೆ. ಈ ಕಾರ್ಯಕ್ರಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

Categories
ಕರಾವಳಿ

ಮಾ.9 : ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ ಕಾರ್ಕಳ ವತಿಯಿಂದ 60 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಮ್ಯಾಚ್

ಕಾರ್ಕಳ : ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ ಇವರ ಆಶ್ರಯದಲ್ಲಿ ಕ್ಷೇಮನಿಧಿ ಹಾಗೂ ವಿದ್ಯಾನಿಧಿ ಸಹಾಯಾರ್ಥವಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಮಾ. 9 ಬೆಳಗ್ಗೆ 8 ರಿಂದ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ರಮೇಶ ಆಚಾರ್ಯ – 9844995533
ಅಶೋಕ್ ಆಚಾರ್ಯ ಅಂಡಾರು – 9886664714
ವಿಶ್ವನಾಥ್ ಆಚಾರ್ಯ – 9964071581 – ಇವರನ್ನು ಸಂಪರ್ಕಿಸಬಹುದು.