Categories
ಉಡುಪಿ

ಉಡುಪಿಯಲ್ಲಿ ಯಾರೂ ಪಾಕಿಸ್ತಾನಿ ಪ್ರಜೆಗಳಿಲ್ಲ: ಎಸ್ಪಿ ಡಾ. ಕೆ ಅರುಣ್!

ಉಡುಪಿಯಲ್ಲಿ ಯಾರೂ ಪಾಕಿಸ್ತಾನಿ ಪ್ರಜೆಗಳಿಲ್ಲ: ಎಸ್ಪಿ ಡಾ. ಕೆ ಅರುಣ್!

– ಮೂರು ಮಂದಿ ಪಾಕಿಸ್ಥಾನಿ ಮಹಿಳೆಯರು ಮಂಗಳೂರಲ್ಲಿ ವಾಸ್ತವ್ಯ- ಎಸ್ಪಿ ಮಾಹಿತಿ!
– ಕೇಂದ್ರ ಸರ್ಕಾರ ಮಹತ್ವದ ಆದೇಶ ಮೇರೆಗೆ, ದೇಶದ ಜಿಲ್ಲೆ ಜಿಲ್ಲೆಯೂ ಜಾಗೃತ!

NAMMUR EXPRESS NEWS
ಉಡುಪಿ : ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಸಂಬಂಧಿಸಿ ಕೇಂದ್ರ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇಶದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ ಇಲ್ಲಿ ಜಾಗವಿಲ್ಲ, ವಾಪಾಸ್ ಕಳಿಸಿ ಎಂಬ ಆದೇಶ ಹೊರಡಿಸಿದ್ದು ಈ ನಿಟ್ಟಿನಲ್ಲಿ ದೇಶದ ಜಿಲ್ಲೆ ಜಿಲ್ಲೆಯೂ ಜಾಗೃತವಾಗುತ್ತಿದೆ.
ಇದಕ್ಕೆ ಸಂಬಂಧಿಸಿ ಮಾಹಿತಿ ಕಲೆ ಹಾಕಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ ಅರುಣ್ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಯಾವುದೇ ನೋಂದಾಯಿತ ಪಾಕಿಸ್ತಾನಿ ಪ್ರಜೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

– ಮೂರು ಮಂದಿ ಪಾಕಿಸ್ಥಾನಿ ಮಹಿಳೆಯರು ಮಂಗಳೂರಲ್ಲಿ ವಾಸ್ತವ್ಯ- ಎಸ್ಪಿ ಮಾಹಿತಿ!

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೂರು ಮಂದಿ ಪಾಕಿಸ್ಥಾನಿ ಮಹಿಳೆಯರು ವಾಸ್ತವ್ಯವಿರುವುದು ಪೊಲೀಸ್ ಪರಿಶೀಲನೆ ವೇಳೆ ಪತ್ತೆಯಾಗಿದೆ.
ಇವರು 12-13 ವರ್ಷಗಳ ಹಿಂದೆಯೇ ಮಂಗಳೂರಿಗೆ ಬಂದು ವಾಸ್ತವ್ಯ ಹೂಡಿ ಭಾರತೀಯ ಪ್ರಜೆಗಳನ್ನು ಮದುವೆಯಾಗಿದ್ದಾರೆ.
ಈ ಪೈಕಿ ಒಬ್ಬರು ನಗರದ ಫಳ್ನೀರ್, ಇನ್ನೊಬ್ಬರು ವಾಮಂಜೂರಿನಲ್ಲಿ ನೆಲೆಸಿದ್ದಾರೆ. ಇನ್ನೊಬ್ಬ ಮಹಿಳೆಯ ವಾಸಸ್ಥಳದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಈಗಾಗಲೇ ರಾಜ್ಯ ಸರಕಾರಕ್ಕೆ ಮಾಹಿತಿ ರವಾನೆ ಮಾಡಲಾಗಿದೆ. ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸದ್ಯ ಯಾವುದೇ ಪಾಕಿಸ್ಥಾನಿ ನಾಗರಿಕರು ಪತ್ತೆಯಾಗಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.

Categories
ಕರಾವಳಿ

ಮಂಜೇಶ್ವರ: ಮಲಗಿದ್ದ ತಾಯಿಗೆ ಚೂರಿ ಇರಿತ, ಮಗನನ್ನು ವಶಕ್ಕೆ ಪಡೆದ ಪೊಲೀಸರು!

ಕರಾವಳಿ ಟಾಪ್ ನ್ಯೂಸ್

ಮಂಜೇಶ್ವರ: ಮಲಗಿದ್ದ ತಾಯಿಗೆ ಚೂರಿ ಇರಿತ, ಮಗನನ್ನು ವಶಕ್ಕೆ ಪಡೆದ ಪೊಲೀಸರು!

– ಮಂಗಳೂರು: ಕೆಎಸ್‌ಆರ್‌ಟಿಸಿಯಲ್ಲಿ ಅರ್ಧ ಕೆಜಿ ಚಿನ್ನ ಅಕ್ರಮ ಸಾಗಾಟ, ವ್ಯಕ್ತಿಯ ಬಂಧನ
– ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಮೋಸ ಪ್ರಕರಣ, ಆರೋಪಿ ಖುಲಾಸೆ!

NAMMUR EXPRESS NEWS
ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಮುಂಡದ ಉಪ್ಪಳದಲ್ಲಿ ಮಲಗಿದ್ದ ತಾಯಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಇರಿತಕ್ಕೊಳಗಾದ ಮಹಿಳೆ ಶಮೀಮಾ ಬಾನು. ಏ. 25ರಂದು ಬೆಳಿಗ್ಗೆ ಈ ಘಟನೆ ನಡೆದಿದೆ.
ಮುಖಕ್ಕೆ ಗಂಭೀರ ಗಾಯಗಳಾಗಿದ್ದ ಶಮೀಮಾ ಬಾನು ಅವರನ್ನು ಮೊದಲು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರನ್ನು ಪರಿಯಾರಂಗೆ ವರ್ಗಾಯಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಮಗನನ್ನು ವಶಕ್ಕೆ ಪಡೆದಿದ್ದಾರೆ.
ಅವರನ್ನು ಪ್ರಶ್ನಿಸಲಾಯಿತು ಆದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಹಿಂಸಾಚಾರಕ್ಕೆ ಕಾರಣ ತಿಳಿದಿಲ್ಲ ಮತ್ತು ಶಮೀಮಾ ಬಾನು ಅವರ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಪರಿಯಾರಂಗೆ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

– ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅರ್ಧ ಕೆಜಿ ಚಿನ್ನ ಅಕ್ರಮ ಸಾಗಾಟ, ವ್ಯಕ್ತಿಯ ಬಂಧನ

ಮಂಗಳೂರು: ಕೆಎಸ್ ಆರ್ ಟಿಸಿ ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅರ್ಧ ಕಿಲೋ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿ ಬಂಧನದಲ್ಲಿದ್ದಾರೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಜಸ್ಥಾನ ಮೂಲದ ಚೆಗನ್‌ಲಾಲ್‌ ಅವರಿಂದ ಈ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊಸಂಗಡಿ ಅಬಕಾರಿ ಚೆಕ್ ಪೋಸ್ಟ್ ಗೆ ಬಸ್ ಬಂದಾಗ ನಡೆಸಿದ ತಪಾಸಣೆಯಲ್ಲಿ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗಿದ್ದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ತಂಡದಲ್ಲಿ ಅಬಕಾರಿ ನಿರೀಕ್ಷಕ ಗಂಗಾಧರನ್, ಪ್ರಿವೆಂಟಿವ್ ಆಫೀಸರ್ ಎಂ.ವಿ. ಜಿಜಿನ್, ಗ್ರೇಸ್ ಪ್ರಿವೆಂಟಿವ್ ಅಧಿಕಾರಿಗಳಾದ ವಿಜಯನ್ ಮತ್ತು ಬಾಬುರಾಜ್, ಮತ್ತು ಸಿಇಒ ರಾಹುಲ್ ಇದ್ದರು.

– ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಮೋಸ ಪ್ರಕರಣ, ಆರೋಪಿ ಖುಲಾಸೆ!

ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಕೊನೆಗೆ ಮೋಸ ಮಾಡಿದ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ.
ಕಿನ್ನಿಗೋಳಿಯ ನಿವಾಸಿ, ಖಾಸಗಿ ಬಸ್‌ ಚಾಲಕ ಅವಿಲ್‌ ಸುಧೀರ್‌ ಕೊರೆಯಾ ಎಂಬಾತ ಕಾರ್ಕಳದಲ್ಲಿ ನರ್ಸ್‌ ವೃತ್ತಿ ಮಾಡಿಕೊಂಡಿದ್ದ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಬಗ್ಗೆ ಉಡುಪಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಂತೆ ವಿಚಾರಣೆ ನಡೆದು ಆರೋಪಿಯು ನೊಂದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿಲ್ಲ ಇದೊಂದು ಸಮ್ಮತಿಯ ಲೈಂಗಿಕ ಸಂಪರ್ಕ ಪ್ರಕರಣವಾಗಿದೆ ಎಂದು ಮನಗೊಂಡು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ (ಪೋಕ್ಸೋ) ಶ್ರೀನಿವಾಸ ಸುವರ್ಣ ಅವರು ಆರೋಪಿಯನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿ ಆದೇಶಿಸಿದ್ದಾರೆ.

Categories
ಬೆಂಗಳೂರು

ದ್ವಿತೀಯ ಪಿಯು ಮರು ಮೌಲ್ಯ ಮಾಪನ ಫಲಿತಾಂಶ ಪ್ರಕಟ!

ದ್ವಿತೀಯ ಪಿಯು ಮರು ಮೌಲ್ಯ ಮಾಪನ ಫಲಿತಾಂಶ ಪ್ರಕಟ!

– ವಿದ್ಯಾರ್ಥಿಗಳ ಅಂಕಗಳಲ್ಲಿ ಭಾರೀ ವ್ಯತ್ಯಾಸ!
– ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಚೆಲ್ಲಾಟ??

NAMMUR EXPRESS NEWS
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ -1ರ ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟವಾಗಿದ್ದು, ಕೆಲವು ವಿದ್ಯಾರ್ಥಿಗಳು ಪಡೆದ ಅಂಕದಲ್ಲಿ ಭಾರೀ ಏರುಪೇರು ಕಂಡು ಬಂದಿದೆ.
ಹರ್ಷಿತಾ ರೆಡ್ಡಿ ಎಂಬ ವಿದ್ಯಾರ್ಥಿನಿ ಇಂಗ್ಲಿಷ್‌ನಲ್ಲಿ ಮೊದಲ ಮೌಲ್ಯಮಾಪನದಲ್ಲಿ ಕೇವಲ 16 ಅಂಕ ಪಡೆದಿದ್ದು, ಮರು ಮೌಲ್ಯಮಾಪನದಲ್ಲಿ 66 ಅಂಕ ಪಡೆದುಕೊಂಡಿದ್ದಾರೆ. ಅಕ್ಷಯ ಎಂಬ ವಿದ್ಯಾರ್ಥಿಗೆ ಬ್ಯುಸಿನೆಸ್ ಸ್ಟಡೀಸ್‌ನಲ್ಲಿ ಮೊದಲ ಮೌಲ್ಯಮಾಪನದಲ್ಲಿ 31 ಅಂಕ ಸಿಕಿತ್ತು. ಈಗ 45 ಅಂಕ ಸೇರ್ಪಡೆಯಾಗಿ ಬಳಿಕ 76 ಅಂಕ ಪಡೆದಿದ್ದಾರೆ. ಉಷಾ ಜಿ. ಎಚ್. ಅವರಿಗೆ ಮೊದಲ ಮೌಲ್ಯಮಾಪನದಲ್ಲಿ 46 ಅಂಕ ಸಿಕ್ಕಿದ್ದು ಈಗ 76 ಅಂಕ ಲಭಿಸಿದೆ. ಸರ್ವೇಶ್‌ ಗೆ ಇಂಗ್ಲೀಷ್‌ನಲ್ಲಿ ಮೊದಲ
ಮೌಲ್ಯಮಾಪನದಲ್ಲಿ 15 ಅಂಕ ಸಿಕ್ಕಿದ್ದು ಈಗ 59 ಅಂಕ ಲಭಿಸಿದೆ. ಪ್ರೀತ್ ಪಾರ್ಮರ್ ಗೆ ಮೊದಲು ಹಿಂದಿಯಲ್ಲಿ 26 ಅಂಕ ಸಿಕ್ಕಿದ್ದು, ಈಗ 63 ಲಭಿಸಿದೆ. ವಿಧಿ ಜೈನ್ ಗೆ ಬ್ಯುಸಿನೆಸ್ ಸ್ಟಡಿಯಲ್ಲಿ 24 ಅಂಕ ಸಿಕ್ಕಿದ್ದು, ಈಗ 75 ಅಂಕಲಭಿಸಿದೆ.
ಶ್ರೇಯಸ್ ಕಾಮತ್‌ಗೆ ಕನ್ನಡದಲ್ಲಿ ಸಿಕ್ಕಿದ್ದ 21 ಅಂಕ, ಈಗ 78ಕ್ಕೆ ಏರಿಕೆಯಾಗಿದೆ. ಅಪೇಕ್ಷಾಕುಮಾರಿಗೆ ಸೋಷಿಯಾಲಜಿಯಲ್ಲಿ ಮೊದಲ ಮೌಲ್ಯಮಾಪನದಲ್ಲಿ 48 ಅಂಕ ಸಿಕ್ಕಿದ್ದು, ಈಗ 63 ಅಂಕ ಲಭಿಸಿದೆ.
ರಕ್ಷಿತಾ ಎಂಬ ವಿದ್ಯಾರ್ಥಿನಿಗೆ ಮಾತ್ರ ಅರ್ಥಶಾಸ್ತ್ರದಲ್ಲಿ ಮರು ಮೌಲ್ಯಮಾಪನದಲ್ಲಿ ಈ ಹಿಂದೆ ಸಿಕ್ಕಿದ್ದಕ್ಕಿಂತ 14 ಅಂಕ ಕಡಿಮೆಯಾಗಿ ಈಗ ಕೇವಲ 13 ಅಂಕ ಸಿಕ್ಕಿದೆ.

Categories
ಮಲ್ನಾಡ್

ಮಲೆನಾಡಲ್ಲಿ ಭಾರೀ ಮಳೆ!

ಮಲೆನಾಡಲ್ಲಿ ಭಾರೀ ಮಳೆ!
– ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಕೆಲ ಭಾಗದಲ್ಲಿ ಭಾರೀ ಮಳೆ
– ಏ.28ರಿಂದ ಮೇ 1ರವರೆಗೆ ನಾಲ್ಕು ದಿನ ಭಾರೀ ಮಳೆ

NAMMUR EXPRESS NEWS
ಮಲೆನಾಡು: ಮಲೆನಾಡಿನ ಭಾಗದಲ್ಲಿ ಮಳೆ ಮತ್ತೆ ಚುರುಕಾಗಿದ್ದು, ಕೆಲವು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ತುಂತುರು ಮಳೆಯಾಗುತ್ತಿದೆ. ಕೊಪ್ಪ, ಶೃಂಗೇರಿ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಮಳೆ ಹೆಚ್ಚಾಗಿದೆ. ಬೇಸಿಗೆಯ ಬಿಸಿಲು ತಾಳಲಾರದೆ ಕಂಗಾಲಾಗಿದ್ದ ಜನರಿಗೆ ಮಳೆರಾಯನ ಆಗಮನದಿಂದ ತುಂಬಾ ಸಂತಸ ಎದುರಾಗಿದೆ .
ಕೆಲವೆಡೆ ಗುಡುಗು – ಸಿಡಿಲಿನ ಆರ್ಭಟದಿಂದ ಮಳೆಯಾಗಿದೆ, ರೈತರಿಗೆ ಸಾಕಷ್ಟು ನಿರಾಳ ಎನಿಸಿದೆ. ಬೇಸಿಗೆಯ ಬಿಸಿಲು ತಾಳಲಾರದೆ ಎಲ್ಲರೂ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಎಲ್ಲರಿಗೂ ಮಳೆರಾಯ ತಂಪೆರೆದಿದ್ದಾನೆ.
ಹವಮಾನ ಇಲಾಖೆ ಸೂಚಿಸಿದಂತೆ ಏಪ್ರಿಲ್ ಅಂತ್ಯದ ವೇಳೆಗೆ ಮಳೆ ಆಗಮನವಾಗುವ ಸಾಧ್ಯತೆ ಇದೆ ಎಂಬುವ ಸೂಚನೆಯನ್ನು ನೀಡಿತು. ಕೆಲವೊಂದಿಷ್ಟು ಕಡೆ ತುಂತುರು ಮಳೆಯಾಗಿದ್ದು ಇನ್ನೂ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಾ ಇದೆ. ಏಪ್ರಿಲ್ 28ರಿಂದ ಮೇ 1 ರವರೆಗೆ ನಾಲ್ಕು ದಿನ ರಾಜ್ಯಾದ್ಯಂತ ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವೆಡೆ ತುಂತುರು ಮಳೆ ಆಗಬಹುದು. ನಂತರ ನಾಲ್ಕು ದಿನಗಳ ಕಾಲ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಇದಕ್ಕೆ ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ಸೃಷ್ಟಿಯಾಗಿ ಭೂಮಿ ಮೇಲ್ಮೈ ಮೇಲೆ ತೀವ್ರವಾಗಿ ಬೀಸುತ್ತಿರುವ ಚಂಡಮಾರುತ ಪರಿಚಲನೆ ಕಾರಣವಾಗಿದೆ.
ಈಗಾಗಲೇ ಮಳೆ ಕಾರಣ ಅನೇಕ ಊರುಗಳಲ್ಲಿ ಮರ ಬಿದ್ದಿವೆ. ವಿದ್ಯುತ್ ಕೂಡ ಇಲ್ಲ. ಇದರಿಂದ ಜನತೆಗೆ ಭಾರೀ ತೊಂದರೆ ಆಗುತ್ತಿದೆ.

Categories
ಹೆಲ್ತ್ ಎಕ್ಸ್ಪ್ರೆಸ್

ಆರೋಗ್ಯ ಎಕ್ಸ್ ಪ್ರೆಸ್! | ಆರೋಗ್ಯಕ್ಕೆ ಉತ್ತಮ ನಿದ್ದೆ ತುಂಬಾ ಮುಖ್ಯ!

ಆರೋಗ್ಯ ಎಕ್ಸ್ ಪ್ರೆಸ್!

ಆರೋಗ್ಯಕ್ಕೆ ಉತ್ತಮ ನಿದ್ದೆ ತುಂಬಾ ಮುಖ್ಯ!

– ಗಾಢ ನಿದ್ರೆಯಿಂದ ಸಿಗುವ ಪ್ರಯೋಜನಗಳೇನು?

NAMMUR EXPRESS NEWS 

ನಾಲ್ಕೈದು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾವು ಅಂದುಕೊಂಡರೂ, ದೇಹವು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ದೇಹಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಅಡೆತಡೆಯಿಲ್ಲದ, ಆಳವಾದ ನಿದ್ದೆಯ ಅಗತ್ಯವಿದೆ.ಕೆಲಸ ಅಥವಾ ಬೇರೆ ಯಾವುದೋ ಕಾರಣಕ್ಕೆ ನಿದ್ದೆಯನ್ನು ತ್ಯಾಗ ಮಾಡುವುದು ಮಾನವನ ಪ್ರಮುಖ ಲಕ್ಷಣ. ಬಿಡುವಿಲ್ಲದ ಜೀವನಶೈಲಿಯೇ ಇದಕ್ಕೆ ಕಾರಣ.
ಕಡಿಮೆ ನಿದ್ದೆಯನ್ನು ಮಾಡುವುದರಿಂದ ಉಂಟಾಗುವ ಸಾಮಾನ್ಯ ರೋಗಲಕ್ಷಣಗಳು ಮೆದುಳಿಗೆ ಮಂಕು ಬಡಿದಂತಾಗುವುದು (ಗೊಂದಲ, ಮರೆವು ಮತ್ತು ಗಮನ ಹಾಗೂ ಮಾನಸಿಕ ಸ್ಪಷ್ಟತೆಯ ಕೊರತೆ), ದೌರ್ಬಲ್ಯ, ತಲೆನೋವು, ಕಡಿಮೆ ಮನಸ್ಥಿತಿ ಮತ್ತು ನೆನಪಿನ ಮೆಮೊರಿ ಸಮಸ್ಯೆಗಳು ಕಂಡುಬರುತ್ತವೆ. ಕೆಲವರು ಇವುಗಳು ವಯಸ್ಸಿನಿಂದಾಗುತ್ತವೆ ಎಂದುಕೊಳ್ಳುತ್ತಾರೆ. ಮೆದುಳಿನ ಆರೋಗ್ಯ ಮತ್ತು ನಿದ್ರೆಯ ನಡುವಿನ ಸಂಪರ್ಕವನ್ನು ಅರ್ಥಮಾಡಿಕೊಂಡರೆ, ಆಲ್ಝೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳನ್ನು ತಡೆಗಟ್ಟುವುದು ಅಥವಾ ನಿರ್ವಹಿಸುವುದು ಮತ್ತು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುವುದು ಎಷ್ಟು ಮುಖ್ಯ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ.
ದೀರ್ಘಕಾಲದ ನಿದ್ರಾಹೀನತೆ ಮತ್ತು ದುರ್ಬಲ ಮೆದುಳಿನ ಕ್ರಿಯೆಯ ನಡುವಿನ ಕೊಂಡಿಯನ್ನು ಹಲವಾರು ಸಂಶೋಧನೆಗಳು ತೋರಿಸಿವೆ. ಸ್ಟಕ್ ಆಗುವುದು, ಯೋಚಿಸಲೂ ಆಗದಂತಹ ಸ್ಥಿತಿಯನ್ನು ಪ್ರತಿಯೊಬ್ಬರೂ ಅನುಭವಿಸಿರುತ್ತಾರೆ. ಯೋಚಿಸಲು ಕಷ್ಟವಾಗುವುದು, ಕಾರ್ಯಗತಗೊಳಿಸುವಲ್ಲಿ ನಿಧಾನ, ನಾವೀನ್ಯತೆಯ ಕೊರತೆಯು ಕಳಪೆ ನಿದ್ರೆಯ ಕಾರಣದಿಂದಾಗಿ ಬರುತ್ತದೆ. ಅಸಮರ್ಪಕ ನಿದ್ದೆಯು ಒತ್ತಡ ನಿಭಾಯಿಸುವ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ನಾವು ಗಾಢ ನಿದ್ರೆಯಲ್ಲಿರುವಾಗ ಮೆದುಳು ತ್ಯಾಜ್ಯಗಳನ್ನು ಹೊರಹಾಕುತ್ತದೆ. ನಮ್ಮ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕಲು ಅಂಗದಂತೆಯೇ ಮೆದುಳು ಕೂಡ, ಅತಿಯಾದ ಆಲೋಚನೆ, ಒತ್ತಡ ಮತ್ತು ಮಿತಿಮೀರಿದ ಮಾಹಿತಿಯಿಂದ ಉಂಟಾಗಿರುವ ಮೆಟಬಾಲಿಕ್ ತ್ಯಾಜ್ಯಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೆದುಳಿನಲ್ಲಿ ನಿರಂತರವಾಗಿ ಟಾಕ್ಸಿಕ್ ಉತ್ಪಾದನೆಯಾಗುತ್ತದೆ ಮತ್ತು ಈ ಮಾದರಿಗಳು ಮಿತಿಮೀರಿದ ಸಂದರ್ಭದಲ್ಲಿ ಮಾನಸಿಕ ಆಯಾಸ ಉಂಟಾಗುತ್ತದೆ.ನಾವು ಗಾಢ ನಿದ್ರೆಯಲ್ಲಿರುವಾಗ ನಮ್ಮ ಮೆದುಳು ಕುಗ್ಗುತ್ತದೆ. ಇದು ಸೆರೆಬ್ರೊಸ್ಪೈನಲ್ ದ್ರವವು ಮೆದುಳಿನ ನಿರ್ದಿಷ್ಟ ಭಾಗಗಳನ್ನು ಪ್ರವೇಶಿಸಲು ಜಾಗವನ್ನು ಸೃಷ್ಟಿಸುತ್ತದೆ ಮತ್ತು ಆಲ್ಝೈಮರ್ನ ಕಾಯಿಲೆಯಿರುವ ವ್ಯಕ್ತಿಗಳ ಮೆದುಳಿನಲ್ಲಿ ಕಂಡುಬರುವ ಬೀಟಾ-ಅಮಿಲಾಯ್ಡ್ ಪ್ಲೇಕ್‌ಗಳಂತಹ ತ್ಯಾಜ್ಯ ಮತ್ತು ಹೆಚ್ಚುವರಿ ಪ್ರೋಟೀನ್ ಕಣಗಳನ್ನು ತೆಗೆದುಹಾಕುತ್ತದೆ.
ಅರಿವಿನ ಕಾಯಿಲೆಗಳಾದ ಆಲ್ಝೈಮರ್ಸ್, ಪಾರ್ಕಿನ್ಸನ್ ಮತ್ತು ಬುದ್ಧಿಮಾಂದ್ಯತೆಯನ್ನು ಉರಿಯೂತದ ಪರಿಸ್ಥಿತಿಗಳು ಎಂದು ಕರೆಯಲಾಗುತ್ತದೆ. ದೀರ್ಘಕಾಲದ ನಿದ್ರೆಯ ಕೊರತೆಯು ಇವುಗಳನ್ನು ಹೆಚ್ಚಿಸಬಹುದು. ಉರಿಯೂತವನ್ನು ತಗ್ಗಿಸಲು ನಾವು ಕರ್ಕ್ಯುಮಿನ್ ಪೂರಕಗಳನ್ನು ನೀಡಬಹುದಾದರೂ, ಅದು ನಿದ್ರೆಗೆ ಬದಲಿಯಾಗಿರುವುದಿಲ್ಲ.
ದುರದೃಷ್ಟವಶಾತ್, ಜನರು ಈ ಎಲ್ಲವನ್ನು ಮರೆತುಬಿಡುತ್ತಾರೆ ಮತ್ತು ಜೀವನದ ನಂತರದ ಹಂತಗಳಲ್ಲಿ ಮಾತ್ರ ತಮ್ಮ ನಿದ್ರೆಯ ಅವಶ್ಯಕತೆಗಳನ್ನು ನೋಡಿಕೊಳ್ಳಲು ಪ್ರಾರಂಭಿಸುತ್ತಾರೆ. ಆಲ್ಝೈಮರ್ ಮತ್ತು ಪಾರ್ಕಿನ್ಸನ್ ರಾತ್ರೋರಾತ್ರಿ ಸಂಭವಿಸುವುದಿಲ್ಲ. ಬದಲಿಗೆ ಇದು ನಿಧಾನವಾಗಿ ಪ್ರಾರಂಭವಾಗುವ ಪ್ರಕ್ರಿಯೆ. ನಿದ್ರೆಗೆ ಆದ್ಯತೆ ನೀಡಿದರೆ ಅದನ್ನು ತಡೆಯಬಹುದು ಅಥವಾ ಕನಿಷ್ಠ ಉತ್ತಮವಾಗಿ ನಿರ್ವಹಿಸಬಹುದು. ಇಂದು ನಿಮ್ಮ ಜೀವನಶೈಲಿ ಮತ್ತು ನಿದ್ರೆಯ ಗುಣಮಟ್ಟವು ನಾಳೆ ನಿಮ್ಮ ಅರಿವಿನ ಆರೋಗ್ಯದ ಗುಣಮಟ್ಟವನ್ನು ನಿರ್ಧರಿಸುತ್ತದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಬದಲಾಗದ ಚೆನ್ನೈ ಹಣೆಬರಹ,ಹೈದ್ರಾಬಾದ್ ವಿರುದ್ಧ ಸೋಲು

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಬದಲಾಗದ ಚೆನ್ನೈ ಹಣೆಬರಹ,ಹೈದ್ರಾಬಾದ್ ವಿರುದ್ಧ ಸೋಲು
* ಪ್ಲೇ ಆಫ್ ಹಾದಿಯಿಂದ ಬಹುತೇಕ ಔಟ್ !

NAMMMUR EXPRESS SPORTS NEWS
ಚೆನ್ನೈ: ನಾಯಕ ಬದಲಾದರೂ, ತಂಡದಲ್ಲಿ ಪದೇ ಪದೇ ಬದಲಾವಣೆ ಮಾಡುತ್ತಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ಹಣೆಬರಹ ಮಾತ್ರ ಬದಲಾಗಿಲ್ಲ. ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧವೂ ಸೋಲುವ ಮೂಲಕ ಧೋನಿ ಬಳಗದ ಪ್ಲೇ ಆಫ್ ಕನಸು ಬಹುತೇಕ ಕಮರಿದೆ. ಆಡಿರುವ 9 ಪಂದ್ಯಗಳಲ್ಲಿ 7 ಸೋಲು ಕಂಡಿರುವ ಚೆನ್ನೈ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಇನ್ನುಳಿದ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಪ್ಲೇ ಆಫ್ ತಲುಪುವುದು ಅಸಾಧ್ಯ ಎಂಬ ಪರಿಸ್ಥಿತಿಗೆ ಬಂದಿದೆ. ಇದೇ ವೇಳೆ 9ನೇ ಸ್ಥಾನಿಯಾಗಿದ್ದ ಸನ್ ರೈಸರ್ಸ್ ತಂಡ ಈ ಗೆಲುವಿನೊಂದಿಗೆ 6 ಅಂಕಗಳನ್ನು ಕೂಡಿಸಿದಂತಾಗಿದ್ದು 8ನೇ ಸ್ಥಾನಕ್ಕೇರಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 155 ರನ್‌ಗಳ ಸುಲಭ ಗುರಿ ಪಡೆದ ಹೈದರಾಬಾದ್ ತಂಡ ಇನ್ನೂ 8 ಎಸೆತಗಳು ಬಾಕಿ ಇರುವಂತೆ ಜಯಭೇರಿ ಬಾರಿಸಿತು. ಸನ್ ರೈಸರ್ಸ್ ಪರ ಇಶಾನ್ ಕಿಶನ್ 44, ಕಮಿಂಡು ಮೆಂಡಿಸ್ ಅಜೇಯ 32 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಹಂತದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರು ಔಟಾಗದೆ 19 ರನ್ ಗಳಿಸಿದರು. ಇನ್ನು ಚೆನ್ನೈ ಬೌಲರ್‌ಗಳು 15 ರನ್‌ಗಳನ್ನು ಇತರೆ ರೂಪದಲ್ಲಿ ನೀಡಿದ್ದು ಹೈದರಾಬಾದ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು. ಆ 15 ಇತರೆ ರನ್‌ಗಳಲ್ಲಿ 11 ವೈಡ್ ಗಳಿದ್ದವು. ಚೆನ್ನೈ ಪರ ನೂರ್ ಅಹ್ಮದ್ ಅವರು 42 ರನ್ ಗೆ 2 ವಿಕೆಟ್ ಗಳಿಸಿದರು.

* ಸೂಪರ್ ಕಿಂಗ್ಸ್‌ನ ಫ್ಲಾಪ್ ಶೋ
ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಮೊಹಮ್ಮದ್ ಶಮಿ ಎಸೆದ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಶೇಖ್ ರಶೀದ್(0) ಅವರ ವಿಕೆಟ್‌ ಅನ್ನು ಕಳೆದುಕೊಂಡಿತು. ಸ್ಯಾಮ್ ಕುರ್ರನ್(9) ಅವರು ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಹಂತದಲ್ಲಿ ಆಯುಷ್ ಮಾತ್ರೆ(30) ಮತ್ತು ರವೀಂದ್ರ ಜಡೇಜಾ(21) ಅವರು ಸ್ವಲ್ಪ ತಂಡದ ಚೇತರಿಕೆಗೆ ಸಹಕರಿಸಿದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಡಿವಾಲ್ಡ್ ಡೇವಿಸ್ (42) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್‌ಗಳೂ ಉತ್ತಮ ಪ್ರದರ್ಶನ ನೀಡಲಿಲ್ಲ. ಶಿವಂ ದುಬೆ(12), ನಾಯಕ ಧೋನಿ(6) ತಂಡದ ಸ್ಕೋರ್ ಏರಿಸುವಲ್ಲಿ ಸಂಪೂರ್ಣ ವಿಫಲರಾದರು. ದೀಪಕ್ ಹೂಡಾ 22 ರನ್ ಹೊಡೆದರೂ ಅದಕ್ಕಾಗಿ ತೆಗೆದುಕೊಂಡ ಎಸೆತ 22. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಸಾಧಾರಣ ಮೊತ್ತಕ್ಕೆ ಕುಸಿಯಿತು. ಸನ್ ರೈಸರ್ಸ್ ಪರ ಹರ್ಷಲ್ ಪಟೇಲ್ 4 ಮತ್ತು ಪ್ಯಾಟ್ ಕಮಿನ್ಸ್ ಮತ್ತು ಉನದ್ಕತ್ ತಲಾ 2 ವಿಕೆಟ್ ಪಡೆದರು. ಹರ್ಷಲ್ ಪಟೇಲ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

Categories
ದಕ್ಷಿಣ ಕನ್ನಡ

ಎಕ್ಸೆಲ್ ಗುರುವಾಯನಕೆರೆಯಲ್ಲಿ ನರ್ಸರಿ, ಎಲ್ ಕೆ ಜಿ, ಯು ಕೆಜಿ ಹಾಗೂ 1ನೇ ತರಗತಿ ಪ್ರಾರಂಭ

ಎಕ್ಸೆಲ್ ಗುರುವಾಯನಕೆರೆಯಲ್ಲಿ ನರ್ಸರಿ, ಎಲ್ ಕೆ ಜಿ, ಯು ಕೆಜಿ ಹಾಗೂ 1ನೇ ತರಗತಿ ಪ್ರಾರಂಭ
– ಪಿಯು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಸಂಸ್ಥೆ
– ಎಕ್ಸೆಲ್ – ಬೆಳಕು: ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಹಾಗೂ ಪದವಿ ಪೂರ್ವ ಶಿಕ್ಷಣದಲ್ಲಿ ರಾಜ್ಯ – ರಾಷ್ಟ್ರಮಟ್ಟದಲ್ಲಿ ಅನನ್ಯ ಸ್ಥಾನ ಗಳಿಸಿಕೊಂಡ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಈ ಶೈಕ್ಷಣಿಕ ವರ್ಷದಿಂದ ನರ್ಸರಿ, ಎಲ್ ಕೆ ಜಿ, ಯು ಕೆ ಜಿ ಹಾಗೂ ಆಂಗ್ಲ ಮಾಧ್ಯಮದ ಒಂದನೆಯ ತರಗತಿ ಪ್ರಾರಂಭಗೊಳ್ಳಲಿದೆ.
ಆಯಾ ಕ್ಷೇತ್ರಗಳಲ್ಲಿ 20 ವರ್ಷಗಳಿಗೂ ಮೀರಿದ ಅನುಭವ ಇರುವ ಶಿಕ್ಷಕರು ಬೋಧಿಸಲಿದ್ದಾರೆ. ಆಕರ್ಷಕ ತರಗತಿ ಕೋಣೆ, ಮಕ್ಕಳ ವಯೋಮಾನಕ್ಕೆ ಸೂಕ್ತ ಪೀಠೋಪಕರಣಗಳು, ಆಟಿಕೆ ವಸ್ತುಗಳು, ಆಟದೊಂದಿಗೆ ಪಾಠ, ಆಂಗ್ಲ ಭಾಷಾ ಪ್ರಾವೀಣ್ಯತೆ, ಭಾರತೀಯ ಸಂಸ್ಕೃತಿಯ ಮೈಗೊಡಿಸುವಿಕೆ, ನಾಡು – ನುಡಿಯ ಅಭಿಮಾನ ಸೇರಿದಂತೆ ಮಗುವಿನ ಸರ್ವತೋಮುಖ ಬೆಳವಣಿಗೆಯೆ ಧ್ಯೇಯವಾಗಿ ಶಾಲೆ ನಿರಂತರ ಚಟುವಟಿಕೆಯ ಕೇಂದ್ರವಾಗಿ ಮುನ್ನಡೆಯಲಿದೆ . ಬೆಳ್ತಂಗಡಿ ಹಾಗೂ ಆಸುಪಾಸಿನ ಹೆತ್ತವರ ಬೇಡಿಕೆಗೆ ಸ್ಪಂದಿಸಿ, ವೇಣೂರಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ನಡೆಸುವುದರ ಜೊತೆಗೆ, ಗುರುವಾಯನಕೆರೆಯಲ್ಲೂ ನೂತನ ಶಾಲೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9880899769 , 9900626441 ಸಂಪರ್ಕಿಸಲು ಕೋರಲಾಗಿದೆ.

ಎಕ್ಸೆಲ್ – ಬೆಳಕು: ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಪಿಯು ಬೋರ್ಡ್ ಪರೀಕ್ಷೆ, NEET, JEE- IIT, CET, NDA ಪರೀಕ್ಷೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಎಕ್ಸೆಲ್ ವಿದ್ಯಾಸಂಸ್ಥೆ, ಗುರುವಾಯನಕೆರೆ, ಬೆಳ್ತಂಗಡಿ, ದ.ಕ- ಕಳೆದ ವರ್ಷಗಳಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು AIIMS ಗೆ ಕಳುಹಿಸಿದ ಸವಿನೆನಪಿಗಾಗಿ, ಓದುವ ಹಂಬಲ ಉಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಸಮಾಜಮುಖಿ ಹೆಜ್ಜೆಯನ್ನಿಟ್ಟಿದೆ. ಗುಣಮಟ್ಟದ ಶಿಕ್ಷಣಕ್ಕೆ ಹಂಬಲಿಸುವ ಯುವಪೀಳಿಗೆಗೆ ಹಣವೊಂದು ಅಡಚಣೆ ಆಗಬಾರದು ಎನ್ನುವುದು ಈ ಯೋಜನೆಯ ಆಶಯವಾಗಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕವನ್ನು ಸಂಪೂರ್ಣವಾಗಿ ವಿನಾಯ್ತಿಗೊಳಿಸಲಾಗುವುದು ಅಥವಾ ವಿಷೇಶವಾದ ವಿದ್ಯಾರ್ಥಿವೇತನವನ್ನು ನೀಡಲಾಗುವುದು.
ಆಸಕ್ತರು ಈ ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಮೆಸೇಜ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯಲ್ಲಿ ವಿದ್ಯಾರ್ಥಿಯ ಹೆಸರು, ವಿಳಾಸ ದೂರವಾಣಿ ಸಂಖ್ಯೆ, ಶಾಲೆಯ ಹೆಸರು ಮತ್ತು ಆಧಾರ್ ಕಾರ್ಡ್ ಫೋಟೋವನ್ನು ಮೆಸೇಜ್ ಮೂಲಕ ಕಳುಹಿಸತಕ್ಕದ್ದು.

ವಾಟ್ಸಾಪ್ ಸಂಖ್ಯೆ – 8867242769, 8867146086

Categories
ದೈವಿಕ

ಆಂಜನೇಯ ಸ್ವಾಮಿಯ ಈ ಶಕ್ತಿಶಾಲಿ ಮಂತ್ರದಿಂದ ಎಲ್ಲಾ ಸಮಸ್ಯೆಗಳ ನಿವಾರಣೆ ಸಾಧ್ಯ!

ಆಂಜನೇಯ ಸ್ವಾಮಿಯ ಈ ಶಕ್ತಿಶಾಲಿ ಮಂತ್ರದಿಂದ ಎಲ್ಲಾ ಸಮಸ್ಯೆಗಳ ನಿವಾರಣೆ ಸಾಧ್ಯ!

NAMMUR EXPRESS NEWS
ಕಲಿಯುಗದಲ್ಲಿ ಆಂಜನೇಯಸ್ವಾಮಿ ಆರಾಧನೆ ಮಾಡುವುದರಿಂದ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ ನಾವು ಅನೇಕ ದೇವರನ್ನು ಆರಾಧನೆ ಮಾಡುತ್ತೇವೆ ನಮ್ಮ ಕಷ್ಟಗಳು ನಿವಾರಣೆಯಾಗಲಿ ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಎಲ್ಲಾ ದೇವರಲ್ಲಿ ಮೊರೆ ಹೋಗುತ್ತೇವೆ.
ಆದರೆ ಈ ಕಲಿಯುಗದಲ್ಲಿ ಎಲ್ಲಾ ದೇವರನ್ನು ಆರಾಧನೆ ಮಾಡುವುದಕ್ಕಿಂತ ಆಂಜನೇಯಸ್ವಾಮಿ ದೇವರನ್ನು ಆರಾಧನೆ ಮಾಡಿದರೆ ಪುಣ್ಯ ಫಲಗಳು ದೊರೆಯುತ್ತವೆ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತವೆ ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಆತ್ಮಸ್ಥೈರ್ಯ ಹೆಚ್ಚುತ್ತದೆ ಸದೃಡವಾಗಿ ಬಲಶಾಲಿಗಳು ಆಗುತ್ತೀರಾ.

ಯಾಕೆ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಬೇಕು??

ಗೆಳೆಯರೇ ಆಂಜನೇಯಸ್ವಾಮಿ ಶ್ರೀ ರಾಮನ ಬಂಟ ಹಾಗಾಗಿ ರಾಮ ಹನುಮಂತನಿಗೆ ಒಂದು ವರವನ್ನು ಕೊಟ್ಟಿರುತ್ತಾನೆ ನೀನು ಕಲಿಯುಗದಲ್ಲಿ ಅಮರನ್ನಾಗಿ ಇದ್ದು ಎಲ್ಲಾ ಭಕ್ತ ಕಷ್ಟಗಳನ್ನು ಕೇಳಿಸಿಕೊಳ್ಳಬೇಕು ಹಾಗೂ ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಬೇಕು ಅವರ ಪಾಪ ಕರ್ಮಗಳಿಗೆ ತಕ್ಕ ಫಲವನ್ನು ಕೊಡಬೇಕು ಎಂದು..

ಆ ಮಂತ್ರ ಯಾವುದು, ಅದನ್ನು ಹೇಗೆ ಪಠನೆ ಮಾಡಬೇಕು ಯಾವಾಗ ಪಟನೆ ಮಾಡಬಹುದು??

ನಾವು ಸಾಕಷ್ಟು ಮಾಹಿತಿಯಲ್ಲಿ ನಿಮಗೆ ಗಾಯತ್ರಿ ಮಂತ್ರದ ಮಹತ್ವವನ್ನು ತಿಳಿಸಿದ್ದೇವೆ ಅದೇ ರೀತಿ ನೀವೇನಾದರೂ ಆಂಜನೇಯನ ಭಕ್ತಾದಿಗಳ ಆಗಿದ್ದರೆ ಆಂಜನೇಯ ಸ್ವಾಮಿಯ ಗಾಯತ್ರಿ ಮಂತ್ರವೇ ಪ್ರತ್ಯೇಕವಾಗಿ ಇರುತ್ತದೆ. ಈ ಮಂತ್ರವನ್ನು ಕೂಡ ನೀವು ಪ್ರತಿದಿನ ಪಠನೆ ಮಾಡಬಹುದು ಇನ್ನು ಹನುಮಾನ್ ಚಾಲೀಸಾ ಬಗ್ಗೆ ಕೂಡ ನೀವು ತಿಳಿದುಕೊಂಡಿರುತ್ತೀರಿ ಯಾರು ಪ್ರತಿ ದಿವಸ ಅದರಲ್ಲೂ ಸಂಜೆ ಸಮಯದಲ್ಲಿ ಹನುಮಾನ್ ಚಾಲೀಸವನ್ನು ಪಠಣೆ ಮಾಡುತ್ತಾರೆ ಅಂಥವರ ವಿಶೇಷವಾಗಿ ಆಂಜನೇಯನ ಕೃಪಕಟಾಕ್ಷ ದೊರೆಯುತ್ತದೆ. ಆಂಜನೇಯನ ನಾಮಸ್ಮರಣೆ ಮಾಡುವುದರಿಂದ ನಮ್ಮ ಸಾಕಷ್ಟು ಸಮಸ್ಯೆಗಳು ದೂರವಾಗುತ್ತದೆ ಹಾಗೂ ನಮ್ಮ ಕಷ್ಟಗಳಿಗೆ ಪರಿಹಾರ ಕೂಡ ದೊರೆಯುತ್ತದೆ.
ಯಾರು ಪ್ರತಿದಿವಸ ಆಂಜನೇಯನ ಪೂಜೆಯನ್ನು ಮಾಡುತ್ತಾರೆ ಅಂತಹವರು ಆಂಜನೇಯನ ಕೃಪೆ ಪಡೆದುಕೊಂಡಿರುತ್ತಾರೆ. ಅಷ್ಟೇ ಅಲ್ಲ ನಾವು ಈ ದಿನ ತಿಳಿಸುವ ಈ ಮಂತ್ರವನ್ನು ನೀವು ಮಂಗಳವಾರದ ದಿವಸದಿಂದ ಶುರು ಮಾಡಿ. ಅಷ್ಟೇ ಅಲ್ಲ ಆಂಜನೇಯ ಸ್ವಾಮಿಯನ್ನು ಕುರಿತು ಮಾಡಿಕೊಳ್ಳುವ ಹರಕೆಯನ್ನು ಅಥವಾ ಯಾವುದೇ ಪರಿಹಾರಗಳನ್ನು ಸಹ ನೀವು ಮಾಡಿಕೊಳ್ಳುವುದಾದರೆ, ಮಂಗಳವಾರದ ದಿವಸದಂದು ಮಾಡಿದರೆ ಶ್ರೇಷ್ಠ ಇನ್ನೂ ಆ ಮಂತ್ರ ಯಾವುದು ಅಂದರೆ

ಮನೋಜವಂ ಮಾರುತತುಲ್ಯವೇಗಂ ಚಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಾಮ್ ವಾತಾತ್ಮಜಂ ವಾನರಯೂದ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ ಬುದ್ಧಿಬಲ ಯಶೋಧರ್ಮಂ ನಿರ್ಭಯತ್ವಂ ಅರೋಗತಾ ಅಜಾಡಂ ವಾಕ್ಪಟುತ್ವಂ ಹನುಮಂತ್ ಸ್ಮರಣಾರ್ಥ ಭವೇತ್
“ಓಂ ಹಂ ಹನುಮತಯೆ ನಮಃ”.
ಈ ಮಂತ್ರವನ್ನು ನೀವು ಬೆಳಗ್ಗೆ ಎದ್ದ ನಂತರ ಶುದ್ಧವಾಗಿ ಮಂತ್ರ ಪಠಣೆ ಮಾಡಿ. ಈ ಮಂತ್ರವನ್ನು ಎಷ್ಟು ಬಾರಿ ಪಟಣೆ ಮಾಡಬೇಕು ಅಂತ ಏನೂ ಇಲ್ಲ ನಿಮಗೆ ಸಾಧ್ಯವಾದಷ್ಟು ಸಮಯ ಅಂದರೆ ಇಪ್ಪತ್ತ್ ಒಂದು ಬಾರಿ ಅಥವಾ ನೂರ ಎಂಟು ಬಾರಿ ಆಗಿರುತ್ತದೆ. ನೀವು ಎಷ್ಟು ಬಾರಿಯಾದರೂ ಈ ಮಂತ್ರವನ್ನು ಪಠಣೆ ಮಾಡಬಹುದು, ಅದರೆ ಪ್ರತಿ ದಿವಸ ಮಂತ್ರ ಪಠಣೆ ಮಾಡಿ. ಇನ್ನೂ ಮಾಂಸಾಹಾರ ಪದಾರ್ಥಗಳನ್ನು ಸೇವಿಸಿ ಈ ಮಂತ್ರ ಪಠನೆ ಮಾಡುವುದು ಅಷ್ಟೊಂದು ಉತ್ತಮವಲ್ಲ ಧನ್ಯವಾದ ಶುಭ ದಿನ.

ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?

ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 8548998564

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಶನಿದೇವರ ಕೃಪೆಯಿಂದ ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಅನಿರೀಕ್ಷಿತ ಲಾಭಗಳು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಸಂತಸದ ಕ್ಷಣಗಳನ್ನು ಕಳೆಯಹುದು. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಸಂತೋಷವಾಗಿಡಲು ಕೆಲಸ ಮಾಡುತ್ತಾರೆ. ಹಿರಿಯರಿಂದ ನಿಮಗೆ ಅಮೂಲ್ಯ ಸಲಹೆ ಸಿಗಬಹುದು. ಇಂದು ಯಾರೊಂದಿಗೂ ಹಣದ ವಹಿವಾಟು ನಡೆಸಬೇಡಿ ಮತ್ತು ಯಾರಿಗೂ ಜಾಮೀನು ನೀಡಬೇಡಿ.

** ವೃಷಭ ರಾಶಿ :
ಇಂದು ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವ ಸೂರ್ಯನಂತೆ ಹೊಳೆಯಲಿದೆ. ನಿಮ್ಮ ದಿನವು ಶುಭ ಮತ್ತು ಫಲಪ್ರದವಾಗಿರುತ್ತದೆ. ಸಂಪತ್ತು ಮತ್ತು ಬಡ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಮಾಡಿಕೊಂಡ ಒಪ್ಪಂದಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ನೀವು ಯಾರಿಂದಾದರೂ ಸಾಲ ಪಡೆದಿದ್ದರೆ ಇಂದು ಅದನ್ನು ಹಿಂದಿರುಗಿಸುವುದು ಒಳ್ಳೆಯದು.

** ಮಿಥುನ ರಾಶಿ :
ಇಂದು ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ಸಂಬಂಧಗಳು ಉತ್ತಮವಾಗಿರುತ್ತವೆ. ಸಾಮಾಜಿಕ ದೃಷ್ಟಿಕೋನದಿಂದ ನಿಮ್ಮ ಗೌರವ ಹೆಚ್ಚಾಗುತ್ತದೆ. ಬಡ್ತಿ ಸಿಗುವ ಸಾಧ್ಯತೆಗಳಿವೆ. ನಿಮ್ಮ ಪ್ರೀತಿಪಾತ್ರರಿಂದ ನೀವು ಉಡುಗೊರೆಗಳನ್ನು ಪಡೆಯಬಹುದು. ಆರೋಗ್ಯವು ಉತ್ತಮವಾಗಿರುತ್ತದೆ. ಲೌಕಿಕ ಜೀವನವು ಆನಂದಮಯವಾಗಿರುತ್ತದೆ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ ಮತ್ತು ನಿಮಗೆ ಹಠಾತ್ ಆರ್ಥಿಕ ಲಾಭವಾಗುತ್ತದೆ. ಈ ಹಿಂದೆ ಸಾಲವಾಗಿ ನೀಡಿದ್ದ ಹಣ ಮರಳಿ ಬರಬಹುದಾದ್ದರಿಂದ ನಿಮಗೆ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಲು ಬಯಸುವವರ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಮತ್ತು ವಿದೇಶದಿಂದ ಒಳ್ಳೆಯ ಸುದ್ದಿ ಬರುತ್ತದೆ. ಧಾರ್ಮಿಕ ಚಟುವಟಿಕೆಗಳು ಅಥವಾ ಪ್ರಯಾಣಕ್ಕಾಗಿ ಹಣವನ್ನು ಖರ್ಚು ಮಾಡಲಾಗುವುದು.

** ಸಿಂಹ ರಾಶಿ :
ಇಂದು ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಇತ್ತೀಚೆಗೆ ಹೊಸ ಕೆಲಸಕ್ಕೆ ಸೇರಿದ ಜನರು ಇಂದು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯಬಹುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಇಂದು ಉತ್ತಮ ದಿನವಾಗಿದೆ. ನಿಮ್ಮ ದೈನಂದಿನ ದಿನಚರಿಯಿಂದ ವಿರಾಮ ತೆಗೆದುಕೊಳ್ಳಿ. ಒತ್ತಡ ನಿರ್ವಹಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ.

** ಕನ್ಯಾ ರಾಶಿ :
ಇಂದು ಜೀವನದಲ್ಲಿ ಅನೇಕ ಸಂತೋಷವನ್ನು ತರುತ್ತದೆ. ಕುಟುಂಬದಲ್ಲಿ ಹಬ್ಬದ ವಾತಾವರಣವಿರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ. ಪ್ರಯಾಣದ ಅವಕಾಶವಿರುತ್ತದೆ. ಕುಟುಂಬದಿಂದ ಬೆಂಬಲ ಸಿಗಲಿದೆ. ಇದರಿಂದ ಮನಸ್ಸು ಸಂತೋಷವಾಗಿ ಉಳಿಯುತ್ತದೆ. ಜೀವನದ ಪ್ರತಿಯೊಂದು ತಿರುವಿನಲ್ಲಿಯೂ ಅದೃಷ್ಟ ನಿಮ್ಮ ಕಡೆ ಇರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಹಣಕಾಸಿನ ಲಾಭಕ್ಕಾಗಿ ಅನೇಕ ಸುವರ್ಣ ಅವಕಾಶಗಳು ಹಣದ ಒಳಹರಿವುಗೆ ದಾರಿ ಮಾಡಿಕೊಡುತ್ತವೆ.

** ತುಲಾ ರಾಶಿ :
ಇಂದು ವೃತ್ತಿಪರ ಜೀವನದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಇಂದು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಕೆಲವರು ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತಾರೆ. ಜೀವನದಲ್ಲಿ ಧನಾತ್ಮಕ ಶಕ್ತಿಯ ಒಳಹರಿವು ಇರುತ್ತದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.

** ವೃಶ್ಚಿಕ ರಾಶಿ :
ಇಂದು ಹಣಕಾಸಿನ ವಿಚಾರದಲ್ಲಿ ತಜ್ಞರ ಸಲಹೆ ಪಡೆಯಲು ಹಿಂಜರಿಯಬೇಡಿ. ಇದರಿಂದ ನೀವು ಆರ್ಥಿಕವಾಗಿ ಸದೃಢರಾಗುತ್ತೀರಿ. ಹಣದ ಒಳಹರಿವು ಹೆಚ್ಚಾಗುತ್ತದೆ. ಹಣದ ಕೊರತೆ ದೂರವಾಗುತ್ತದೆ. ಕೆಲವರಿಗೆ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ. ವೃತ್ತಿ ಜೀವನದಲ್ಲಿ ಸ್ಪರ್ಧೆಯ ವಾತಾವರಣವಿರುತ್ತದೆ. ಕೆಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಸುಲಭವಾಗುತ್ತದೆ.

** ಧನಸ್ಸು ರಾಶಿ :
ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹಲವು ಅವಕಾಶಗಳು ದೊರೆಯಲಿವೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳಾಗುತ್ತವೆ.

** ಮಕರ ರಾಶಿ :
ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಖಂಡಿತವಾಗಿಯೂ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ಇಂದು, ಉದ್ಯೋಗಿಗಳು ಬಡ್ತಿ ಪಡೆಯಬಹುದು. ಕಚೇರಿಯಲ್ಲಿ ಹೊಸ ಪರಿಚಯವಾಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.

** ಕುಂಭ ರಾಶಿ :
ಇಂದು ಹಣಕಾಸಿನ ವಿಚಾರದಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಕುಟುಂಬದ ಕಿರಿಯ ಸಹೋದರ ಅಥವಾ ಸಹೋದರಿ ಕೆಲಸ ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ.

** ಮೀನ ರಾಶಿ :
ನೀವು ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡುವಿರಿ. ಇಂದು ನಿಮ್ಮ ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಪರಿಸ್ಥಿತಿ ಹದಗೆಡಲು ಬಿಡಬೇಡಿ ಮತ್ತು ಸಂವಾದದ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ.

Categories
ಕಾರವಾರ

ಭಟ್ಕಳದಲ್ಲಿದ್ದಾರೆ 14 ಜನ ಪಾಕಿಸ್ತಾನಿ ಪ್ರಜೆಗಳು !!

ಭಟ್ಕಳದಲ್ಲಿದ್ದಾರೆ 14 ಜನ ಪಾಕಿಸ್ತಾನಿ ಪ್ರಜೆಗಳು !!

* ದೀರ್ಘಾವಧಿ ವೀಸಾ ಹೊಂದಿರುವ 14 ಜನ ಪಾಕ್ ಮಹಿಳೆಯರು
* ಸದ್ಯಕ್ಕಿಲ್ಲ ಇವರ ಗಡಿಪಾರು, ಇನ್ನು ಹೆಚ್ಚಿನ ಸಂಖ್ಯೆ ಇರುವ ಸಾಧ್ಯತೆ

NAMMMUR EXPRESS NEWS
ಕಾರವಾರ: ಭಟ್ಕಳದಲ್ಲಿ 14 ಮಂದಿ ಪಾಕಿಸ್ತಾನ ಪ್ರಜೆಗಳು ನೆಲೆಸಿದ್ದು, ಅವರು ದೀರ್ಘಾವಧಿ ವೀಸಾ ಹೊಂದಿದ್ದು ಭಾರತದಲ್ಲೇ ಇರಲಿದ್ದಾರೆ.
ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ನಡೆದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನೆಲಸಿರುವ 14 ಜನ ಪಾಕಿಸ್ತಾನ ಮೂಲದ ಮಹಿಳೆಯರಿದ್ದು ದೀರ್ಘಾವಧಿ ವೀಸಾ ಇರುವ ಕಾರಣ ಭಟ್ಕಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಭಟ್ಕಳ ಹಾಗೂ ಪಾಕಿಸ್ತಾನದ ನಡುವೆ ಸ್ವತಂತ್ರ ಪೂರ್ವದಲ್ಲೇ ವೈವಾಹಿಕ ಸಂಬಂಧಗಳು ನಡೆಯುತ್ತಿತ್ತು, ಭಟ್ಕಳದ ಮುಸ್ಲಿಂ ಹೆಣ್ಣನ್ನು ಪಾಕಿಸ್ತಾನದ ವರನಿಗೆ ನೀಡಿದರೆ ಪಾಕಿಸ್ತಾನದ ಹೆಣ್ಣನ್ನು ಭಟ್ಕಳಕ್ಕೆ ನೀಡುವುದು ನಡೆದುಕೊಂಡು ಬಂದಿದೆ.
ಈಗಾಗಲೇ ಹಲವು ವರ್ಷದಿಂದ 10 ಪಾಕಿಸ್ತಾನ ಮೂಲದ ಮಹಿಳೆಯರಿದ್ದು ಇವರಲ್ಲಿ ನಾಲ್ಕು ಜನ ಭಾರತದಲ್ಲೇ ಮಕ್ಕಳು ಜನಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಣವಾಗುತ್ತದೆ.
ಈ ಮಹಿಳೆಯರು ಭಾರತದ ಪೌರತ್ವಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಇವರಿಗಾಗಲಿ ಭಾರತದಲ್ಲಿ ಹುಟ್ಟಿದ ಇವರ ಮಕ್ಕಳಿಗೆ ಪೌರತ್ವ ನೀಡಿಲ್ಲ. ದೀರ್ಘಾವಧಿ ವೀಸಾ ಹಾಗೂ ಭಾರತೀಯ ಪುರುಷರನ್ನು ವಿವಾಹವಾಗಿದ್ದರಿಂದ ಸದ್ಯ ಈ 14 ಮಹಿಳೆಯರು ಭಟ್ಕಳದಲ್ಲೇ ಇರಲಿದ್ದಾರೆ.
ಕೆಲವು ವರ್ಷದ ಹಿಂದೆ ಬಾಂಗ್ಲಾದ ಮಹಿಳೆ ಸಹ ಗಡಿ ಉಲ್ಲಂಘಿಸಿ ಭಟ್ಕಳಕ್ಕೆ ಬಂದು ಇಲ್ಲಿನ ಯುವಕನನ್ನು ವಿವಾಹವಾಗಿದ್ದು ಈಕೆ ಸದ್ಯ ಜೈಲಿನಲ್ಲಿದ್ದು ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ.
ಭಟ್ಕಳದಲ್ಲಿ 14 ಜನ ಪಾಕಿಸ್ತಾನಿ ಮಹಿಳೆಯರಲ್ಲದೇ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇರುವ ಸಾಧ್ಯತೆ ಇದ್ದು ಈ ಕುರಿತು ಮಾಹಿತಿ ಕಲೆಹಾಕಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಭಟ್ಕಳಕ್ಕೆ ತೆರಳಿದ್ದು ಮಾಹಿತಿ ಕಲೆಹಾಕುತಿದ್ದಾರೆ.