Categories
ತೀರ್ಥಹಳ್ಳಿ ಬೆಂಗಳೂರು

ಬೆಂಗಳೂರಿನಲ್ಲಿ ಈಡಿಗ ಕ್ರಿಕೆಟ್ ಟೂರ್ನಮೆಂಟ್ ಸಕ್ಸಸ್!

ಬೆಂಗಳೂರಿನಲ್ಲಿ ಈಡಿಗ ಕ್ರಿಕೆಟ್ ಟೂರ್ನಮೆಂಟ್ ಸಕ್ಸಸ್!
– ಫೈನಲ್ ಗೆದ್ದ ತೀರ್ಥಹಳ್ಳಿ ಎಸ್ ಎನ್ ಜಿ ವಿ ತಂಡ
– ಅತ್ಯಂತ ಶಿಸ್ತಿನ ಆಯೋಜನೆ: ಗಣ್ಯರ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ಬೆಂಗಳೂರಿನಲ್ಲಿ ಈಡಿಗ ಕ್ರಿಕೆಟ್ ಲೀಗ್ ಅತ್ಯಂತ ಯಶಸ್ವಿಯಾಗಿ ನಡೆಯಿತು. ಆರ್ಯ ಈಡಿಗ ಯೂತ್ ಕಮಿಟಿ ವತಿಯಿಂದ ನಡೆದ ಟೂರ್ನಿಯಲ್ಲಿ ಸಮಾಜ ಬಾಂಧವರ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ತೀರ್ಥಹಳ್ಳಿ ತಾಲೂಕಿನಿಂದ ತೀರ್ಥಹಳ್ಳಿ ಎಸ್ ಎನ್ ಜಿ ವಿ ತಂಡ ಫೈನಲ್ ಗೆಲ್ಲುವ ಮೂಲಕ ಪ್ರಥಮ ಟೂರ್ನಮೆಂಟ್ ನಲ್ಲಿ ತಮ್ಮ ಚಾಪನ್ನು ಮೂಡಿಸಿತು. ತಂಡದ ಮಾಲೀಕರಾದ ಲೋಕೇಶ್ ಟೆಂಕಬೈಲು, ಮೋಹನ್ ಸಿಂಧುವಾದಿ, ವಿಶಾಲ್ ಕುಮಾರ್ ಹಾಗೂ ಆದರ್ಶ ಆಟಗಾರರಿಗೆ ಅಭಿನಂದನೆ ತಿಳಿಸಿದರು. ತಂಡ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರವೀಣ್ ಮಂಡಗದ್ದೆ ಹಾಗೂ ಸತೀಶ್ ಚಿಡುವ ರವರಿಗೂ ಧನ್ಯವಾದ ತಿಳಿಸಿದರು. ಇನ್ನು ಬೆಂಗಳೂರು ಎಸ್ ಎನ್ ಜಿವಿ ತಂಡದ ಮಾಲೀಕರಾದ ಎಸ್ ಎನ್ ಜಿ ವಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಂಟ್ರಲ್ಲಿ ರಾಘವೇಂದ್ರ ಅವರು ತಂಡಕ್ಕೆ ಸಂಪೂರ್ಣ ಸಹಕಾರ ನೀಡಿದರು. ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ತಿಮ್ಮಗೌಡ್ರು ಬಹುಮಾನ ಕೊಡುವುದರ ಮೂಲಕ ಎಸ್ ಎಲ್ ಜಿ ವಿ ತೀರ್ಥಹಳ್ಳಿ ತಂಡಕ್ಕೆ ಶುಭ ಹಾರೈಸಿದರು. ತೀರ್ಥಹಳ್ಳಿ ಹಾಗೂ ಶಿವಮೊಗ್ಗದ ಎಲ್ಲಾ ಪದಾಧಿಕಾರಿಗಳಿಗೂ ತಂಡಕ್ಕೆ ಬೆಂಬಲ ಕೊಟ್ಟಿದ್ದಕ್ಕೆ ತೀರ್ಥಹಳ್ಳಿ ಎಸ್ ಎನ್ ಜಿ ವಿ ತಂಡವು ಈ ಮೂಲಕ ಧನ್ಯವಾದ ತಿಳಿಸಿದೆ.

ಉತ್ತಮ ಪ್ರದರ್ಶನ ನೀಡಿದ ತಂಡಗಳು!

ಹೊಸಮನೆ ಉಮೇಶ್ ಹಾಗೂ ರಘುನಾಥ್ ಮೆಡಿಕಲ್, ಷಣ್ಮುಖ ಬಿಡೆ ಅವರ ಮಾಲೀಕತ್ವದ ತಂಡ ಅತ್ಯುತ್ತಮ ಆಟದ ಮೂಲಕ ಸೆಮಿ ಫೈನಲ್ ನಲ್ಲಿ ಜಯ ಕೈ ಚೆಲ್ಲಿತು. ಎಲ್ಲಾ ತಂಡಗಳು ಶಿಸ್ತಿನ ಆಟದ ಮೂಲಕ ಗಮನ ಸೆಳೆದವು. ಸಮಾಜದ ರಾಜಕೀಯ, ಧಾರ್ಮಿಕ ಕ್ಷೇತ್ರದ ಗಣ್ಯರು ಭಾಗಿಯಾಗಿದ್ದರು.

ಯುವಕರ ಅತ್ಯುತ್ತಮ ಆಯೋಜನೆ

ಆರ್ಯ ಈಡಿಗ ಯೂತ್ ಕಮಿಟಿ ಬೆಂಗಳೂರು ಇದರ ಪ್ರಮುಖರಾದ ಸಂತೋಷ, ನೂತನ್, ಪ್ರಶಾಂತ್, ಗಿರೀಶ್, ಭರತ್, ನವೀನ್, ಧೀರಜ್ ಸೇರಿ ಅನೇಕರು ಈ ಟೂರ್ನಿಗಾಗಿ ಶ್ರಮಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.