Categories
ಬೆಂಗಳೂರು

ಒಕ್ಕಲಿಗರ ಸಂಘದಲ್ಲಿ ಮತ್ತೆ ಜಟಾಪಟಿ!

ಒಕ್ಕಲಿಗರ ಸಂಘದಲ್ಲಿ ಮತ್ತೆ ಜಟಾಪಟಿ!
– ಅಧ್ಯಕ್ಷ ಸ್ಥಾನ ಈಗ ಕೋರ್ಟ್ ಕಟಕಟೆಗೆ ಹೋಗುತ್ತಾ?
– ಸಂಘದ ಸಭೆಯಲ್ಲಿ ಕೋಲಾಹಲ: ಏನಿದು ಸುದ್ದಿ?

NAMMUR EXPRESS NEWS
ಬೆಂಗಳೂರು: ಒಕ್ಕಲಿಗರ ಸಂಘದ ಅಧ್ಯಕ್ಷರ ಆಯ್ಕೆಯಲ್ಲಿ ಮತ್ತೆ ಜಟಾಪಟಿ ಶುರುವಾಗಿದೆ.
ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರು ಮಾತನಾಡಿ, ಇವತ್ತು 35 ಜನರ ಕಾರ್ಯಕಾರಣಿ ಸಭೆ ನಡೆದಿದೆ. ಸಭೆ ಕಾನೂನು ರೀತಿ, ಬೈಲಾ ರೀತಿ ನಡೆದಿಲ್ಲ, ಕೆಂಚಪ್ಪಗೌಡರ ಗುಂಪು ಹಂಗಾಮಿ ಅಧ್ಯಕ್ಷರ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಚರ್ಚೆ ಮಾಡಿದ್ದಾರೆ.

ಈ ಹಿಂದೆ ಪದಾಧಿಕಾರಿಗಳಿಗೆ ಯಾವುದೇ ನೋಟೀಸ್ ನೀಡದೇ ಕೇವಲ 19 ಜನರು ಸೇರಿ ಸಭೆ ಮಾಡಿ ಅಧ್ಯಕ್ಷ ಆಯ್ಕೆ ಮಾಡಿಕೊಂಡಿದ್ದರು. ನಂತರ ಕೋರ್ಟ್ ಆ ಪ್ರಕ್ರಿಯೆಯನ್ನ ಅಸಿಂಧು ಮಾಡಿತ್ತು. ಇವತ್ತು ಅವಿಶ್ವಾಸ ನಿರ್ಣಯ ಮಂಡನೆ ಮಾಡುವಂತೆ ಹೇಳಿತ್ತು. ಆದರೆ ಇವತ್ತಿನ ಸಭೆಯಲ್ಲೂ ಮತ್ತೊಂದು ತಂಡ ನಿಯಮ ಉಲ್ಲಂಘಿಸಿದೆ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಕೈ ಎತ್ತಿ ಬೆಂಬಲ ಸೂಚಿಸುವ ನಿಯಮ ಇಲ್ಲ, ಅವರ ಪರವಾಗಿ 16 ಸದಸ್ಯರಿದ್ದಾರೆ, ಆದ್ರೆ ಅವರು 18 ಜನ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಧ್ಯಕ್ಷರ ಆಯ್ಕೆ ಗುಪ್ತ ಮತದಾನದ ಮೂಲಕ ಆಗಬೇಕು ಎಂದು ಹೇಳಿದ್ದಾರೆ.
ಆದ್ರೆ ಕೆಂಚಪ್ಪಗೌಡರ ತಂಡ ಗುಪ್ತ ಮತದಾನಕ್ಕೆ ಒಪ್ಪದೇ, ಸದಸ್ಯರಿಂದ ಬಲವಂತವಾಗಿ ಬೆಂಬಲ ಘೋಷಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ನಾವು ಆಡಿಯೋ, ವಿಡಿಯೋಗಳನ್ನು ಕೋರ್ಟ್‌ ಗೆ ನೀಡುತ್ತೆವೆ. ನಂತರ ಕೋರ್ಟ್ ಯಾವ ಆದೇಶ ನೀಡುತ್ತದೆ ಅದಕ್ಕೆ ನಾವು ಬದ್ದರಿದ್ದೇವೆ. ಮತ್ತೊಂದು ತಂಡ ಸಭೆಯಲ್ಲಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರು ಹೇಳಿದ್ದಾರೆ.

ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.