Categories
ಕೊಪ್ಪ ಚಿಕ್ಕಮಗಳೂರು ಬೆಂಗಳೂರು ರಾಜಕೀಯ ರಾಜ್ಯ

ಜಯಪ್ರಕಾಶ್‌ ಹೆಗ್ಡೆ ಇಂದು ಕಾಂಗ್ರೆಸ್ ಸೇರ್ಪಡೆ!

ಜಯಪ್ರಕಾಶ್‌ ಹೆಗ್ಡೆ ಇಂದು ಕಾಂಗ್ರೆಸ್ ಸೇರ್ಪಡೆ!
– ಮತ್ತೆ ಶೋಭಾ ವಿರುದ್ಧ ಕಣಕ್ಕಿಳಿಯುತ್ತಾರೆಯೇ?
– ಏನಿದು ರಾಜಕೀಯ… ಹೇಗಿದೆ ಉಡುಪಿ ಚಿಕ್ಕಮಗಳೂರು ಕಣ..?

NAMMUR EXPRESS NEWS
ಬೆಂಗಳೂರು: ಕರಾವಳಿಯ ಪ್ರಭಾವಿ ರಾಜಕಾರಣಿ ಜಯಪ್ರಕಾಶ್‌ ಹೆಗ್ಡೆ ಇಂದು ಕಾಂಗ್ರೆಸ್‌ಗೆ ಮರು ಸೇರ್ಪಡೆಯಾಗಲು ಸಿದ್ಧತೆ ನಡೆದಿದೆ. ಉಡುಪಿ-ಚಿಕ್ಕಮಗಳೂರು ಭಾಗದಲ್ಲಿ ಹಲವು ವರ್ಷಗಳಿಂದ ಪ್ರಭಾವಿ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿರುವ ಜಯಪ್ರಕಾಶ್‌ ಹೆಗ್ಡೆ ಅವರು ಮಂಗಳವಾರ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ವಾಪಾಸ್ಸಾಗುತ್ತಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸಂಜೆ ಅವರು ಅಧಿಕೃತವಾಗಿ ಕಾಂಗ್ರೆಸ್‌ ಮರು ಸೇರ್ಪಡೆಯಾಗಲಿದ್ದಾರೆ.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ 2ನೇ ಹಂತದ ಅಭ್ಯರ್ಥಿಗಳ ಟಿಕೆಟ್‌ ಘೋಷಣೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿರಬೇಕಾದರೆ, ಅವರ ಸೇರ್ಪಡೆಯು ಚುನಾವಣಾ ಕಣಕ್ಕಿಳಿಯುವ ಮುನ್ಸೂಚನೆಯನ್ನು ನೀಡಿದೆ. ಮೂಲಗಳು ಪ್ರಕಾರ, ಜಯಪ್ರಕಾಶ್‌ ಹೆಗ್ಡೆ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದು, 2ನೇ ಹಂತದ ಪಟ್ಟಿ ಬಿಡುಗಡೆಯಲ್ಲಿ ಹೆಗ್ಡೆಗೆ ಟಿಕೆಟ್‌ ಘೋಷಣೆಯಾಗಲಿದೆ.

ಹೆಗ್ಡೆ ಅವರು ಸಚಿವರಾಗಿ, ಶಾಸಕರಾಗಿ, ಸಂಸದರಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡ ಪ್ರಭಾವಿ ರಾಜಕಾರಣಿ. 21012ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಹೆಗ್ಡೆ ಭಾರೀ ಅಂತರದ ಗೆಲುವು ಸಾಧಿಸಿದ್ದರು. ಈ ಹಿಂದೆ ಜೆಎಚ್‌ ಪಟೇಲ್‌ ಸಿಎಂ ಆಗಿದ್ದಾಗಲೂ ಜಯಪ್ರಕಾಶ್‌ ಗೆದ್ದು ಮಂತ್ರಿಯೂ ಆಗಿ ಕೆಲಸ ಮಾಡಿದವರು. ಹೀಗಿರುವಾಗ, ಹೆಗ್ಡೆ ಅವರು ಕರಾವಳಿ ಭಾಗದ ರಾಜಕಾರಣದಲ್ಲಿ ತಮ್ಮದೇ ವರ್ಚಸ್ಸು, ದಶಕಗಳ ರಾಜಕೀಯ ಅನುಭವ-ಪ್ರಬುದ್ಧತೆಯನ್ನು ಹೊಂದಿರುವ ನಾಯಕ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಗ್ಡೆ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದಲೇ ಬಿಜೆಪಿ ಶೋಭಾ ಕರಂದ್ಲಾಜೆ ವಿರುದ್ಧ ಸ್ಪರ್ಧಿಸಿದ್ದರು. ಮೋದಿ ವರ್ಚಸ್ಸು ಮುಂದೆ ಸೋತಿದ್ದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬ್ರಹ್ಮಾವರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆಯ ಹಂತದಲ್ಲಿ ಟಿಕೆಟ್‌ ಕೈತಪ್ಪಿದ್ದ ಕಾರಣಕ್ಕೆ ಬಿಜೆಪಿ ಸೇರಿದ್ದ ಅವರಿಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಇನ್ನು ಈ ಬಾರಿ ಬಿಜೆಪಿಯಲ್ಲಿ ಲೋಕಸಭೆಗೆ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಹೆಗ್ಡೆಗೆ ಅದು ಸಿಗುವುದಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಮತ್ತೆ ಕಾಂಗ್ರೆಸ್‌ನ ಕದ ತಟ್ಟಿದ್ದು, ಮತ್ತೊಮ್ಮೆ ಶೋಭಾ ವಿರುದ್ಧ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ, ಕಾಂಗ್ರೆಸ್‌ ಸೇರ್ಪಡೆಯಾಗುವ ಅವರಿಗೆ ಪಕ್ಷದಿಂದ ಟಿಕೆಟ್‌ ನೀಡುವುದು ವರಿಷ್ಠರಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೊಂಡ ಬಳಿಕಷ್ಟೇ ಖಚಿತಗೊಳ್ಳಲಿದೆ.

ಸುಧೀರ್ ಕುಮಾರ್ ಅವರಿಗೆ ಡೌಟು!?

ಉಡುಪಿ ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೋಳ್ಳಿ, ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಅಂಶುಮಂತ್ ಸೇರಿ ಹಲವರು ಆಸಕ್ತಿ ಹೊಂದಿದ್ದರು.

ಬಿಜೆಪಿಯಿಂದ ಹಲವರ ಹೆಸರು?

ಬಿಜೆಪಿ ಪಕ್ಷದಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ಪ್ರಮುಖರಾದ ಸಿಟಿ ರವಿ, ಜೀವರಾಜ್, ಪ್ರಮೋದ್ ಮದ್ವರಾಜ್ ಹೆಸರು ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.