Categories
ತೀರ್ಥಹಳ್ಳಿ ಬೆಂಗಳೂರು

ಮತ್ತೆ ವಕೀಲಿ ವೃತ್ತಿ ಹಿಡಿದ ಕಿಮ್ಮನೆ!

ಮತ್ತೆ ವಕೀಲಿ ವೃತ್ತಿ ಹಿಡಿದ ಕಿಮ್ಮನೆ!
– ವಕೀಲಿ ವೃತ್ತಿ ಮರು ಶುರು ಮಾಡಿದ ಮಾಜಿ ಸಚಿವ
– ದಶಕಗಳ ಕಾಲ ಜನರ ಸೇವೆ ಮಾಡಿದ ನಾಯಕ

NAMMUR EXPRESS NEWS
ಬೆಂಗಳೂರು: ಮಾಜಿ ಶಿಕ್ಷಣ ಸಚಿವ, ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮತ್ತೆ ವಕೀಲಿ ವೃತ್ತಿಗೆ ಮರಳಿದ್ದಾರೆ. ದಶಕಗಳ ಕಾಲ ನ್ಯಾಯವಾದಿಗಳಾಗಿ ಜನರ ಸೇವೆ ಮಾಡಿದ ಕಿಮ್ಮನೆ ರತ್ನಾಕರ್ ಅವರು ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲುವ ಕಂಡಿದ್ದಾರೆ. ವಕೀಲರಾಗಿ ಸೇವೆ!: 11-1-2024 ರಂದು ಶಾಸಕ ಮತ್ತು ಸಚಿವರಾಗಿದ್ದಾಗ ವಕೀಲಿ ವೃತ್ತಿಯನ್ನು ಮಾಡುವುದಿಲ್ಲವೆಂದು ಕರ್ನಾಟಕ ಬಾರ್ ಕೌನ್ಸಿಲ್ ಗೆ ರದ್ದತಿ ಪತ್ರ ನೀಡಿದ್ದರು, ಗುರುವಾರ ಬೆಂಗಳೂರಿನ ಅಸೋಸಿಯೇಷನ್ ಗೆ ಭೇಟಿ ನೀಡಿ ಸದಸ್ಯರಿಂದ ವಕೀಲ ವೃತ್ತಿ ಆರಂಭಿಸುವ ಪ್ರಮಾಣ ಪತ್ರವನ್ನು ಪಡೆದರು. ಬಳಿಕ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ,ನಂತರ ಭಾರತ್ ಜೋಡ್ ಸಭಾಂಗಣದಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸಿ, ನಂತರ ವಿಕಾಸ ಸೌಧದಲ್ಲಿ ಸಣ್ಣ ನೀರಾವರಿ ಸಚಿವರಾದ ಬೋಸರಾಜ್ ಅವರನ್ನು ಭೇಟಿ ಮಾಡಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕೆಲವು ಕಾಮಗಾರಿಗಳ ಮನವಿ ಪತ್ರವನ್ನು ನೀಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.