ರಥೋತ್ಸವದ ರಂಗು
– ಅದ್ಭುತವಾಗಿ ಸಿಂಗಾರಗೊಂಡ ರಥ!
– ರಥಬೀದಿ ಉತ್ಸವಕ್ಕೆ ಹೊರಟ ರಾಮೇಶ್ವರ!
– ಬೀದಿಯುದ್ದಕ್ಕೂ ಜನ ಸಾಗರ!
NAMMUR EXPRESS NEWS
ತೀರ್ಥಹಳ್ಳಿ ಜಾತ್ರೆ ವಿಶೇಷ: ತೀರ್ಥಹಳ್ಳಿಯ ಜಾತ್ರಾ ಮಹೋತ್ಸವ ಎರಡನೆಯ ದಿನಕ್ಕೆ ಕಾಲಿಟ್ಟಿದ್ದು ದೇವರನ್ನು ಹೊತ್ತು ಉತ್ಸವಕ್ಕೆ ಕರೆದೊಯ್ಯುವ ರಥ, ಹೂವು ಹಣ್ಣು ಹಾರಗಳಿಂದ, ವಿದ್ಯುತ್ ದೀಪಾಲಂಕಾರಗಳಿಂದ, ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತ್ತಿದೆ. ದಾರಿಯುದ್ದಕ್ಕೂ ರಥ ಎಳೆಯಲು ಜನ ಕಿಕ್ಕಿರಿದು ಸೇರಿದ್ದಾರೆ. ಪೂಜಾನುಷ್ಠಾನಗಳ ನಂತರ ರಥ ದೇವಸ್ಥಾನದಿಂದ ಹೊರಟಿದ್ದು ರಥ ಬೀದಿಯ ಮಾರ್ಗದಲ್ಲಿ ರಥ ಸಂಚಲನವಾಗಲಿದೆ. ಬಿಸಿಲು ಜಾಸ್ತಿಯೇ ಇದ್ದರು ಜನ ಅದಕ್ಕೆ ಕೇರ್ ಮಾಡದೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಿಸಿಲು ನೆತ್ತಿಯೇರಿದ್ದರೂ ಜಾತ್ರೆಯ ಕಳೆ ಸ್ವಲ್ಪವೂ ಕುಂದಿಲ್ಲ. ಇಂದು ಕೂಡ ಅನ್ನ ಸಂತರ್ಪಣೆಯನ್ನು ಮಂಡಳಿ ಆಯೋಜಿಸಿದ್ದು, ಸುಮಾರು ಹದಿನೈದು ಸಾವಿರದಷ್ಟು ಭಕ್ತರು ಅನ್ನ ಪ್ರಸಾದ ಸ್ವೀಕರಿಸಲಿದ್ದಾರೆ.