ಮಹಾನಟಿ ರಿಯಾಲಿಟಿ ಶೋನಲ್ಲಿ ಮಲೆನಾಡ ಹುಡುಗಿಯರು!
– ತೀರ್ಥಹಳ್ಳಿಯ ಮಾನ್ಯ ರಮೇಶ್ ಅತ್ಯುತ್ತಮ ನಟನೆ ಪ್ರದರ್ಶನ
– ಕೊಪ್ಪದ ಪ್ರತಿಭೆ ಸೌಗಂಧಿಕಾ ಎನ್ ಎಸ್ ಕೂಡ ಆಯ್ಕೆ
NAMMUR EXPRESS NEWS
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಥಹಳ್ಳಿ ಹುಡುಗಿ ಮಾನ್ಯ ರಮೇಶ್ ಅತ್ಯುತ್ತಮ ನಟನೆ ಪ್ರದರ್ಶನ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹೆಗ್ಗೋಡಿನ ರಮೇಶ್ ಎಚ್. ಜಿ ಹಾಗೂ ಶೋಭಾ ಬಿ. ಎಸ್ ದಂಪತಿಗಳ ಪುತ್ರಿ ಮಾನ್ಯ ವೃತ್ತಿಯಲ್ಲಿ ಇಂಟಿರಿಯರ್ ಡಿಸೈನರ್ ಆಗಿದ್ದಾರೆ. ತೀರ್ಥಹಳ್ಳಿಯ ಸಹ್ಯಾದ್ರಿ ಸ್ಕೂಲ್ ಅಲ್ಲಿ ಎಲ್ ಕೆಜಿಯಿಂದ 10ನೇ ತರಗತಿವರೆಗೆ ಓದಿದ್ದಾರೆ. ಪಿಯುಸಿಯನ್ನು ಅಮೃತ ಭಾರತಿ ಹೆಬ್ರಿ, ಆಚಾರ್ಯ ಕಾಲೇಜು ಬೆಂಗಳೂರಲ್ಲಿ ಡಿಗ್ರಿ ಮಾಡಿದ್ದಾರೆ.
ಸೌಗಂಧಿಕಾ ಎನ್ ಎಸ್ ಚಿಕ್ಕಮಗಳೂರು ಜಿಲ್ಲೆಯ ಕಲಾವಿದೆ ಆಗಿದ್ದು ಅವರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಕೊಪ್ಪ ಮತ್ತು ಶೃಂಗೇರಿ ಮಧ್ಯದ ನಂದಿಗೋಡು ಗ್ರಾಮದವರು.
ಮಲೆನಾಡು ಕಲಾವಿದರ ತವರು ಈಗಾಗಲೇ ರಿಯಾಲಿಟಿ ಶೋ ನಲ್ಲಿ ಹತ್ತಾರು ಮಲೆನಾಡ ಪ್ರತಿಭೆಗಳು ಮಿಂಚುತ್ತಿವೆ. ಕಳೆದ ಸಾಲಿನ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಥಹಳ್ಳಿ ಮೂಲದ ಆಶಿಕಾ ಸೋಮಶೇಖರ್ ಭಾಗಿಯಾಗಿ ಉತ್ತಮ ನಟನೆ ಮಾಡಿದ್ದರು.
