Categories
ತೀರ್ಥಹಳ್ಳಿ

ಜ್ಞಾನದರ್ಶಿನಿ ಹುಲಿಮಂಡೆ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ

ಜ್ಞಾನದರ್ಶಿನಿ ಹುಲಿಮಂಡೆ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ
– ವಿದ್ಯಾರ್ಥಿಗಳಲ್ಲಿನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶ

NAMMUR EXPRESS NEWS
ಜ್ಞಾನದರ್ಶಿನಿ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ
ಹುಲಿಮಂಡೆ ತೀರ್ಥಹಳ್ಳಿ – ಜ್ಞಾನದರ್ಶಿನಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಿತು.

7ನೇ ತರಗತಿಯ ಅನುರಾಗ್ ಎಸ್.ಎಂ. ಮುಖ್ಯಮಂತ್ರಿಯಾಗಿ ಆಯ್ಕೆಯಾದರು, ಉಪ ಮುಖ್ಯಮಂತ್ರಿಯಾಗಿ ಶರಧಿ ಕೆ.ಎಸ್., ಗೃಹ ಸಚಿವರಾಗಿ ತಕ್ಷ ಎಚ್.ಪಿ., ಶಿಕ್ಷಣ ಸಚಿವರಾಗಿ ಸನ್ನಿಧಿ ಎ. ಆರ್., ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ದೈವಿಕ್ ಎಸ್., ಸಂಸ್ಕೃತಿ ಮತ್ತು ಯುವಜನ ಖಾತೆ ಸಚಿವೆಯಾಗಿ ನಿಸರ್ಗ ಆರ್., ಆಹಾರ ಸಚಿವೆಯಾಗಿ ಮಾನ್ಯ ಎಮ್, ಆರೋಗ್ಯ ಮತ್ತು ಸ್ವಚ್ಛತಾ ಸಚಿವೆಯಾಗಿ ಸಾನ್ಯಾ ಜಿ ಎಸ್ , ಕ್ರೀಡಾ ಸಚಿವರಾಗಿ ನಕುಲ್ ಎಚ್ ಜಿ, ಭಾಷಾ ಸಚಿವರಾಗಿ ಅಶ್ವಿನ್ ಹೆಚ್ ಜೆ , ಮಾಹಿತಿ ಸಚಿವರಾಗಿ ವಿಕಾಸ್ ಕೆ ಆರ್, ಮತ್ತು ಗಾರ್ಡನಿಂಗ್ ಸಚಿವೆಯಾಗಿ ನಾಗಶ್ರೀ ಹೆಚ್ ಆರ್ ಚುನಾಯಿತರಾದರು.

ಮುಖ್ಯ ಶಿಕ್ಷಕರಾದ ಪ್ರಣವ ಕೆ. ಭಟ್ ನೂತನವಾಗಿ ಆಯ್ಕೆಗೊಂಡ ಸಚಿವರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಚುನಾವಣಾಧಿಕಾರಿಗಳಾಗಿ ಶಿಕ್ಷಕರಾದ ದೀಪಿಕಾ ಜಿ.ಎಸ್., ಭವ್ಯ ಕೂಳೂರು, ಗಣೇಶ್ ಬಿ.ಎಸ್., ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪರಶುರಾಮ್ ಕೆ.ಎಲ್. ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿಯಾದ ಡಾ. ಲಕ್ಷ್ಮೀಶ ಭಟ್ ಮತ್ತು ಶಿಕ್ಷಕಿ ಶ್ರೀನಿಧಿ ಎಲ್. ಭಟ್ ಅವರು ಉಪಸ್ಥಿತರಿದ್ದು ನೂತನ ಮಂತ್ರಿಮಂಡಲಕ್ಕೆ ಸೂಕ್ತ ಮಾರ್ಗದರ್ಶನ ನೀಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.