Categories
ಬೆಂಗಳೂರು

ಇನ್ಮುಂದೆ ಹೊಸ ರೂಪದಲ್ಲಿ ಬರಲಿದೆ ನಂದಿನಿ ಹಾಲಿನ ಪ್ಯಾಕೆಟ್

ಇನ್ಮುಂದೆ ಹೊಸ ರೂಪದಲ್ಲಿ ಬರಲಿದೆ ನಂದಿನಿ ಹಾಲಿನ ಪ್ಯಾಕೆಟ್

* ದೇಶದಲ್ಲೇ ಮೊದಲ ಪ್ರಯತ್ನಕ್ಕೆ ಮುಂದಾದ ಕೆ ಎಂ ಎಸ್
* ಪರಿಸರ ಸ್ನೇಹಿ ಟಚ್ ಕೊಡಲು ಮುಂದಾದ ಬಮೂಲ್

NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಷ್ಟೇ ಅಲ್ಲದೇ ದೇಶ-ವಿದೇಶಗಳಲ್ಲೂ ಜನರ ಮೆಚ್ಚುಗೆ ಗಳಿಸಿರುವ ನಂದಿನಿ ಹಾಲಿಗೆ ಇನ್ಮುಂದೆ ಹೊಸ ರೂಪ ನೀಡಲು ಕೆಎಂಎಫ್ ಮುಂದಾಗಿದೆ. ಈಗ ಪಾಲಿಥಿನ್ ಕವರ್​​ ನಲ್ಲಿ ಪ್ಯಾಕ್ ಆಗಿ ಹೊರಬರುತ್ತಿರುವ ನಂದಿನಿ ಹಾಲಿಗೆ ಇದೀಗ ಪರಿಸರ ಸ್ನೇಹಿ ಟಚ್ ಕೊಡಲು ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ಮುಂದಾಗಿದೆ.
ಹೌದು., ಇನ್ಮುಂದೆ ಪಾಲಿಥಿನ್ ಪ್ಯಾಕೆಟ್​​‌ಗಳ ಬದಲಾಗಿ ಜೈವಿಕ ಅಂಶಗಳಾಗಿ ವಿಘಟನೆಯಾಗಬಲ್ಲ (ಮಣ್ಣಿನಲ್ಲಿ ಬೇಗ ಕೊಳೆಯುವ) ಪ್ಯಾಕೆಟ್​​ನಲ್ಲಿ ನಂದಿನಿ ಹಾಲು ಬರಲಿದೆ. ಪ್ರಯೋಗಿಕವಾಗಿ ಇದೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮಾತ್ರ ಹೊಸ ರೂಪದೊಂದಿಗೆ ನಂದಿನಿ ಹಾಲಿನ ಪ್ಯಾಕೆಟ್ ಬಿಡುಗಡೆಯಾಗಲಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಎಂಬ ಭೂತಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಪ್ಲಾಸ್ಟಿಕ್‌ ನಿಷೇಧ ಮಾಡಿದ್ದರೂ ಸಹ ಹಾಲು ಪೂರೈಕೆಯಲ್ಲಿ ಬಳಸಲಾಗುವ ಪಾಲಿಥಿನ್‌ ಕವರ್‌ಗಳನ್ನು ನಿಷೇಧ ಮಾಡಿರಲಿಲ್ಲ. ಕಾರಣ ಪ್ರತಿದಿನ ಮುಂಜಾನೆ ಪ್ರತಿ ಮನೆಗೆ ನಂದಿನಿ ಹಾಲನ್ನು ಪೂರೈಕೆ ಮಾಡಲು ಪಾಲಿಥಿನ್‌ ಪ್ಯಾಕೆಟ್‌ ಬದಲಿಗೆ ಪರ್ಯಾಯ ವಸ್ತು ಇರಲಿಲ್ಲ. ಇದೀಗ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್‌ (ಜೈವಿಕ ಅಂಶಗಳಾಗಿ ವಿಘಟನೆಯಾಗಬಲ್ಲ) ಪ್ಯಾಕೆಟ್​ ದೊರೆತ್ತಿದ್ದು, ಇದರಲ್ಲೇ ಹಾಲು ತುಂಬಿ ಮಾರಾಟ ಮಾಡಲು ಕೆಎಂಎಫ್​ ಮುಂದಾಗಿದೆ. ಮೆಕ್ಕೆಜೋಳ ಹಾಗೂ ಕಬ್ಬಿನಿಂದ ಈ ಪ್ಯಾಕೇಟ್​ಗಳು ತಯಾರಾಗುವುದರಿಂದ ಕೇವಲ 90 ದಿನಗಳಲ್ಲೇ ಮಣ್ಣಿನಲ್ಲಿ ಕರಗುತ್ತವೆ.ಪ್ರಸ್ತುತ ಹಾಲಿನ ಪ್ಯಾಕೆಟ್‌ಗೆ ಬಳಸುವ ಪಾಲಿಥಿನ್‌ ಕವರ್‌ ಮಣ್ಣಲ್ಲಿ ಕರಗಲು ಹಲವು ದಿನಗಳೇ ಬೇಕು. ಒಂದು ದಿನಕ್ಕೆ ಲಕ್ಷಾಂತರ ಕವರ್‌ಗಳನ್ನು ಬಳಸುವ ನಾವು ತಿಂಗಳು, ವರ್ಷಗಳನ್ನು ಲೆಕ್ಕ ಹಾಕದರೆ ಅಂಕಿಸಂಖ್ಯೆಗಳ ಪ್ರಮಾಣವನ್ನು ಊಹಿಸುವುದು, ಅದರಿಂದ ಪರಿಸದರ ಮೇಲಾಗುವ ದುಷ್ಪರಿಣಾಮಗಳನ್ನು ಯೋಚಿಸಿವುದು ಸಹ ಕಷ್ಟಸಾಧ್ಯ. ಇದೆಲ್ಲವನ್ನು ಮನಗಂಡು ಬಮೂಲ್‌ ಇದಕ್ಕೆ ಪರಿಹಾರ ಕಾಣಬೇಕೆಂಬ ಉದ್ದೇಶದಲ್ಲಿ ಕನಕಪುರದ ಶಿವನಹಳ್ಳಿ ಬಳಿ ಸ್ಥಾಪಿಸಿರುವ ಮೆಗಾಡೇರಿ ಪ್ಲಾಂಟ್‌ನಲ್ಲಿ ಹೊಸದಾಗಿ ಡಿ ಕಂಪೋಸಬಲ್‌ ಕವರ್‌ಗಳನ್ನು ಬಳಕೆ ಮಾಡಲು ಮುಂದಾಗಿದೆ. ಈ ಕವರ್‌ಗಳು ಪರಿಸರ ಸ್ನೇಹಿಯಾಗಿದ್ದು, ಹಾಲಿನ ಬಳಕೆ ಬಳಿಕ ಬೇಗನೇ ಮಣ್ಣಲ್ಲಿ ಕರಗುತ್ತೆ ಎನ್ನಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.