ಮೊಟ್ಟೆ, ಚಿಕನ್ ಪ್ರಿಯರಿಗೆ ಬೆಲೆ ಏರಿಕೆ ಶಾಕ್…!
– ಕೆಜಿ ಚಿಕನ್ ಬೆಲೆ 236 ರೂ, ಮಟನ್ ಕೂಡ ಸ್ವಲ್ಪ ಹೆಚ್ಚಳ
– ಮೊಟ್ಟೆ ಬೆಲೆ 6 ರೂ. ರಿಂದ 7 ರೂ ಏರಿಕೆ
NAMMUR EXPRESS NEWS
ಬೆಂಗಳೂರು: ಮೊಟ್ಟೆ, ಚಿಕನ್ ಬೆಲೆ ಹೆಚ್ಚಾಗಿದ್ದು ಚಿಕನ್ ಪ್ರಿಯರಿಗೆ ಶಾಕ್ ನೀಡಿದೆ.
ಚಿಕನ್ ಬೆಲೆ ವಿಥ್ ಸ್ಕೀನ್ ಗೆ ಕೆ.ಜಿಗೆ 236 ರೂ. ಹಾಗೂ ಚಿಕನ್ ವಿಥ್ ಔಟ್ ಸ್ಕೀನ್ ಕೆ.ಜಿಗೆ 266 ರೂ.ಆಗಿದೆ. ಜೊತೆಗೆ ಮಟನ್ ದರ ಸಹ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಹಾಗೆಯೇ ಒಂದು ಮೊಟ್ಟೆ ಬೆಲೆ 6 ರೂ. ರಿಂದ 7 ರೂ. ಆಗಿದೆ. ಬೇಸಿಗೆಯಾಗಿದ್ದರಿಂದ ಕೋಳಿಗಳು ಸಾಯುತ್ತಿವೆ. ಜೊತೆಗೆ ಆಂಧ್ರಪ್ರದೇಶಕ್ಕೆ ರಾಜ್ಯದಿಂದ ಹೆಚ್ಚು ರಫ್ತಾಗಿದೆ. ಹೀಗಾಗಿ ಅಭಾವ ಉಂಟಾಗಿದೆ ಅಂತ ಹೇಳಲಾಗುತ್ತಿದೆ.
ಬೆಲೆ ಏರಿಕೆ ಆಗಿರುವುದರಿಂದ ಮೊಟ್ಟೆಯಿಂದ ಮಾಡುವ ನಾನ್ ವೆಜ್ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದ್ದು, ಮೊಟ್ಟೆ ದರ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023
