Categories
ಉಡುಪಿ

ಬ್ರಹ್ಮಾವರ: ಮಾಬುಕಳದಲ್ಲಿ ಭೀಕರ ಅಪಘಾತ, ಮಹಿಳೆಯ ದೇಹ ಛಿದ್ರ ಛಿದ್ರ!

ಉಡುಪಿ ಟಾಪ್ ನ್ಯೂಸ್

ಬ್ರಹ್ಮಾವರ: ಮಾಬುಕಳದಲ್ಲಿ ಭೀಕರ ಅಪಘಾತ, ಮಹಿಳೆಯ ದೇಹ ಛಿದ್ರ ಛಿದ್ರ!

– ಉಡುಪಿ: ಸೈಬರ್ ಕ್ರೈಮ್, ಲಿಂಕ್ ಒತ್ತಿ ಲಕ್ಷಾಂತರ ರೂ. ಕಳೆದುಕೊಂಡ ಭೂಪ!
– ಉಡುಪಿ: ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಕರಿಮಣಿ ಸರಕ್ಕೆ ಕನ್ನ: ಆರೋಪಿ ಅರೆಸ್ಟ್!

NAMMUR EXPRESS NEWS
ಬ್ರಹ್ಮಾವರ ಸಮೀಪದ ರಾಷ್ಟೀಯ ಹೆದ್ದಾರಿ 66 ರ ಮಾಬುಕಳ ಸೇತುವೆ ಸಮೀಪ ನಡೆದ ಭೀಕರ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಏ. 03ರ ಸಂಜೆ ಮಾಬುಕಳ ಸೇತುವೆ ಸಮೀಪ ಸ್ಕೂಟರ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮಹಿಳೆಯ ದೇಹ ಛಿದ್ರ ಛಿದ್ರವಾಗಿದ್ದು ಭಯಾನಕವಾಗಿತ್ತು.
ಅಪಘಾತದಲ್ಲಿ ಸಹ ಸವಾರೆ ಬಾರ್ಕೂರು ಉದ್ದಾಲಗುಡ್ಡೆಯ ಪೂರ್ಣಿಮಾ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ತಕ್ಷಣ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

– ಉಡುಪಿ: ಸೈಬರ್ ಕ್ರೈಮ್, ಲಿಂಕ್ ಒತ್ತಿ ಲಕ್ಷಾಂತರ ರೂ. ಕಳೆದುಕೊಂಡ ಭೂಪ!

ಉಡುಪಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಮಾಯಕರು ಮೋಸದ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಉಡುಪಿಯಲ್ಲಿ ಕೂಡಾ ಅದೇ ರೀತಿಯ ಘಟನೆ ನಡೆದಿದ್ದು ವ್ಯಕ್ತಿಯೊಬ್ಬ ಲಕ್ಷಾಂತರ ರೂ‌. ಹಣ ಕಳೆದುಕೊಂಡಿದ್ದಾನೆ.
ಮೂಲತಃ ಉಡುಪಿಯ ದಿಲೀಪ್ ಎಂಬವರು ಹಣ ಕಳೆದುಕೊಂಡವರಾಗಿದ್ದಾರೆ. ಇವರಿಗೆ ನೆಟ್ಫ್ಲಿಕ್ಸ್ ನ ಚಂದಾ ಮುಗಿದು ಹೋಗಿದ್ದ ಕಾರಣ ಇಮೇಲ್ ಗೆ ಒಂದು ಮೆಸೇಜ್ ಬಂದಿತ್ತು. ನಂತರ ಲಿಂಕ್ ಕ್ಲಿಕ್ ಮಾಡಿದಾಗ ಚಂದಾ ಪಡೆಯಲು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲು ಇನ್ನೊಂದು ಟ್ಯಾಬ್ ಓಪನ್ ಆಗಿದೆ. ಅವರು ಕ್ರೆಡಿಟ್ ಕಾರ್ಡ್ ಸಂಖ್ಯೆ ನಮೂದಿಸಿದಾಗ ಮೊಬೈಲ್ ಗೆ ಒಟಿಪಿ ಬಂದಿದೆ. ಅದನ್ನು ಎಂಟರ್ ಮಾಡಿದ್ದಾರೆ. ಆದರೆ ಸಮ್ಥಿಂಗ್ ವೆಂಟ್ ರಾಂಗ್ ಎಂಬ ಮೆಸೇಜ್ ಬಂದಿದ್ದು ಆಗ ದಿಲೀಪಿಗೆ ಅನುಮಾನ ಬಂದಿದೆ.
ಆಗ ಅವರು ಬ್ಯಾಂಕ್ ನ ಹೆಲ್ಪ್ಪೈನ್ ಗೆ ಕಾಲ್ ಮಾಡಿದಾಗ ಅವರ ಖಾತೆಯಿಂದ ಲಕ್ಷಕ್ಕೂ ಅಧಿಕ ಹಣ ಮಂಗಮಾಯವಾಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಉಡುಪಿ: ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಕರಿಮಣಿ ಸರಕ್ಕೆ ಕನ್ನ: ಆರೋಪಿ ಅರೆಸ್ಟ್!

ಉಡುಪಿ: ಬೆಳುವಾಯಿ ಕರಿಯನಂಗಡಿ ಬಳಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ “ಬೆಳುವಾಯಿಗೆ ದಾರಿ ಯಾವುದು” ಎಂದು ಕೇಳಿ ಆಕೆಯ ಕರಿಮಣಿ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳುವಾಯಿ ಕಾಯಿದೆಮನೆ ಇಂದಿರಾ ಅವರು ತಮ್ಮ ಅಳಿಯ ಭಾಸ್ಕರ ಅವರ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ಕರಿಮಣಿ ಸರಕ್ಕೆ ಕೈ ಹಾಕುವಾಗ ಎಳೆದಾಡಿದ ಆಕೆಯನ್ನು ಆತ ದೂಡಿ ಹಾಕಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.