ಸಿದ್ದರಾಮಯ್ಯ ವಾಟ್ಸಾಪ್ ಚಾನಲ್ ಆರಂಭ!
– ದೇಶದಲ್ಲೇ ಮೊದಲು ಚಾನಲ್ ಆರಂಭ ಮಾಡಿದ ಸಿಎಂ
– 50 ಸಾವಿರಕ್ಕೂ ಅಧಿಕ ಜನರನ್ನು ಹೊಂದಿದ ಚಾನಲ್
NAMMUR EXPRESS NEWS
ಬೆಂಗಳೂರು: ಸಾಮಾಜಿಕ ಜಾಲತಾಣ ವಾಟ್ಸಾಪ್ ಆರಂಭಿಸಿರುವ ‘ವಾಟ್ಸಾಪ್ ಚಾನಲ್’ ಎಂಬ ಹೊಸ ಆವಿಷ್ಕಾರದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾನಲ್ ಆರಂಭಿಸಿದ್ದಾರೆ. ಸೆ.12ರಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಟ್ಸಾಪ್ ಚಾನಲ್ ಆರಂಭಿಸಿದ್ದು, 50 ಸಾವಿರಕ್ಕೂ ಅಧಿಕ ಸಬ್ ಸ್ಕ್ರಿಬರ್‌ಗಳನ್ನು ಹೊಂದಿದ್ದಾರೆ. ಸರಕಾರವೊಂದರ ಮುಖ್ಯಸ್ಥರು (ಮುಖ್ಯಮಂತ್ರಿ) ಈ ರೀತಿ ವಾಟ್ಸಾಪ್ ಚಾಲನ್ ಆರಂಭಿಸಿರುವುದು ಇದೇ ಮೊದಲು.
ಜನರಿಗೆ ಬೆರಳ ತುದಿಯಲ್ಲಿ ಸರಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಒದಗಿಸಿ, ಆಡಳಿತವನ್ನು ಮತ್ತಷ್ಟು ಪಾರದರ್ಶಕವಾಗಿಸಲು Chief Minister of Karnataka ಎಂಬ ಹೆಸರಿನ ಚಾನಲ್ ಕಾರ್ಯಾರಂಭ ಮಾಡಿದೆ. ತಾವು ಕೂಡ ವಾಟ್ಸಾಪ್ ಚಾನಲ್ ಸೆಕ್ಷನ್‌ನಲ್ಲಿ Chief Minister of Karnataka ಎಂದು ಸರ್ಚ್ ಮಾಡುವ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ಚಾನಲ್ ಅನ್ನು ಸಂಬ್ಸ್ಕ್ರೈಬ್ ಮಾಡಬಹುದಾಗಿದೆ.