ಸೆ.14ಕ್ಕೆ ರಾಜಧಾನಿಯ ಅಡಿಕೆನಾಡು ಸೊಸೈಟಿ ವಾರ್ಷಿಕ ಸಭೆ
– ವಿನಯ ಗುರೂಜಿ ದಿವ್ಯ ಸಾನಿಧ್ಯದಲ್ಲಿ ಸಮಾರಂಭ ಕಾರ್ಯಕ್ರಮ
– ಮಲೆನಾಡು ಮೂಲದ ಸಾಧಕರಿಗೆ, ಸೇವಕರಿಗೆ, ಪ್ರತಿಭೆಗಳಿಗೆ ಸನ್ಮಾನ
NAMMUR EXPRESS NEWS
ಬೆಂಗಳೂರು: ಅಡಿಕೆನಾಡು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನ 9ನೇ ಸರ್ವಸದಸ್ಯರ ವಾರ್ಷಿಕ ಸಭೆಯು ದಿನಾಂಕ 14-09-2025 ನೇ ಭಾನುವಾರ ಬೆಳಗ್ಗೆ 9.30 ಗಂಟೆಗೆ ಚಂದ್ರ ಸಾಗರ ಕಲ್ಯಾಣ ಮಂಟಪ, ಅಶೋಕ ಪಿಲ್ಲರ್ ಹತ್ತಿರ ಜಯನಗರ 2ನೇ ಬ್ಲಾಕ್, ಬೆಂಗಳೂರುರಲ್ಲಿ ಸಭೆ ನಡೆಯಲಿದೆ. ನಂತರ ಸಮಾರಂಭ ಕಾರ್ಯಕ್ರಮ 11.00 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಅವದೂತ ವಿನಯ ಗುರೂಜೀ ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಮೋಜಿ ಗೌಡರು ವಿಧಾನಪರಿಷತ್ ಸದಸ್ಯರು (M.L.C) ಬೆಂಗಳೂರು ಪದವೀಧರರ ಕ್ಷೇತ್ರ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ನೆಕ್ಸಪ್ಲೇಸ್ ಇನ್ಫೋ ಪ್ರೈವೇಟ್ ಲಿಮಿಟೆಡ್, ಜಯರಾಮ್ ಜಿ. ಕಿಮ್ಮನೆ ಅಡಿಕೆ ಉದ್ಯಮಿಗಳು, KTG ಕಂಪನಿಗಳು ಹಾಗೂ ಲಗ್ನುರಿ ಗಾಲ್ಫ್ ರೆಸಾರ್ಟ್ ಮಾಲೀಕರು, ಡಾ. ಆರತಿ ಕೃಷ್ಣ ರವರು M.L.C ಮಾನ್ಯ ಉಪಾಧ್ಯಕ್ಷರು, ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಸರ್ಕಾರ, ಧರ್ಮೇಶ್ ರವರು ನಿರ್ದೇಶಕರು ರಾಜ್ಯ ಒಕ್ಕಲಿಗರ ಸಂಘ, ಬೆಂಗಳೂರು ಮುಖ್ಯ ಅತಿಥಿಯಾಗಿ ಆಗಮಿಸುವವರು. ಈ ಸಮಾರಂಭದ ಅಧ್ಯಕ್ಷತೆಯನ್ನು ಎಂ. ಜಿ. ಮಣಿ ಹೆಗಡೆ ಅಧ್ಯಕ್ಷರು ಅಡಿಕೆನಾಡು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇವರು ವಹಿಸಲಿದ್ದು. ಈ ಸಮಾರಂಭದಲ್ಲಿ ಬೆಂಗಳೂರಿನಲ್ಲಿರುವ ಮಲೆನಾಡಿನ ಪ್ರತಿಭಾವಂತರಿಗೆ ಸನ್ಮಾನ ಹಾಗೂ ಮಲೆನಾಡಿನ ಮುತ್ತುಗಳು ಎಂಬ ಬಿರುದನ್ನು ನೀಡಿ ಗೌರವಿಸಲಾಗುವುದು.
ಸನ್ಮಾನಿತರು ಯಾರು ಯಾರು..?
ಕೆ. ಸಿ. ಗಿರಿ ಕೆ.ಎಸ್.ಪಿ.ಎಸ್. ಪೊಲೀಸ್ ಉಪ ಅಧೀಕ್ಷಕರು, ಚನ್ನಪಟ್ಟಣ, ಹೆಚ್. ವಿ. ಸುದರ್ಶನ್ ಪೊಲೀಸ್ ಇನ್ಸ್‌ಪೆಕ್ಟರ್, ಹೆಚ್.ಆರ್. ಮೂರ್ತಿ ಕೃಷಿ ಉದ್ಯಮ, ಮೈಸೂರು, ಎ.ಡಿ. ಪ್ರೀತಂ ಪೊಲೀಸ್ ಇನ್ಸ್‌ಪೆಕ್ಟರ್, ಡಾ|| ಯಲ್ಲಪ್ಪ MBBS, MD ಇವರು ಕೂಡ ಈ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರರಿಂದ ಸರ್ವರಿಗೂ ಸ್ವಾಗತ
ರಾಜಧಾನಿಯ ಮಲೆನಾಡಿಗರಿಗೆ ಆರ್ಥಿಕ ಸ್ವಾವಲಂಬನೆ ಜತೆಗೆ ಮಲೆನಾಡಿಗರ ಸಂಘಟನೆಗೆ ಬಹು ದೊಡ್ಡ ಕಾಣಿಕೆ ನೀಡಿರುವ ಈ ಸೊಸೈಟಿ ಅಧ್ಯಕ್ಷರಾದ ಮಣಿ ಹೆಗ್ಡೆ, ಉಪಾಧ್ಯಕ್ಷರಾದ ಎಲ್.ಸಿ. ಕೃಷ್ಣಮೂರ್ತಿ, ನಿರ್ದೇಶಕರಾದ ಎಂ ಆರ್ ಜಯೇಶ, ಹೆಚ್. ಸಿ. ನಾಗರಾಜ್, ಜೆ.ಡಿ.ಕುಮಾರಸ್ವಾಮಿ, ಬಿ.ಬಿ. ರತ್ನಾಕರ್, ಎನ್.ಎ.ಪ್ರಭಾಕರ್, ಕೆ.ಎಸ್. ಪುಟ್ಟಪ್ಪಗೌಡ, ಹೆಚ್.ಎಲ್. ಅಶೋಕ್, ಯು.ಆರ್. ಶಮಿತ ಮಲ್ನಾಡ್, ಕೆ.ಎಸ್. ಶ್ವೇತಶ್ರೀ ವಿಜಯ್, ಡಿ.ಕೆ.ಕೃಷ್ಣಮೂರ್ತಿ, ಎಲ್. ದಾಸಪ್ಪ, ಎಸ್.ಕಾಳಿದಾಸ್, ರಮ್ಯಾ ಎಸ್. ನಾಯಕ್ ಸರ್ವರನ್ನು ಸ್ವಾಗತಿಸಿದ್ದಾರೆ.
ಹೊಸದಾಗಿ ಸದಸ್ಯರಾಗುವವರಿಗೂ ಅವಕಾಶ
ಹೊಸದಾಗಿ ಸದಸ್ಯರಾಗ ಬಯಸಯವವರು ಸ್ಥಳದಲ್ಲಿ ಸದಸ್ಯರಾಗಬಹುದು ಆಹ್ವಾನ ಪತ್ರಿಕೆ ತಲುಪದಿದ್ದಲ್ಲಿ ಈ ಪ್ರಕಟಣೆಯನ್ನೇ ಆಹ್ವಾನವೆಂದು ಪರಿಗಣಿಸಿ ಸಭೆಗೆ ಆಗಮಿಸಬೇಕಾಗಿ ವಿನಂತಿ.
ರಾಜಧಾನಿಯ ಸಮಸ್ತರಿಗೂ, ಮಲೆನಾಡಿನ ಸರ್ವರಿಗೂ ಸ್ವಾಗತ
