ಡ್ರಗ್ ಕೇಸ್‌ನಲ್ಲಿ ಮತ್ತೆ ಜೈಲು ಸೇರ್ತಾರಾ ನಟಿಯರು..!!
* ನಟಿ ರನ್ಯಾ ರಾವ್ ಬೆನ್ನಲ್ಲೇ ಸಂಜನಾ,ರಾಗಿಣಿಗೆ ಬಿಗ್ ಶಾಕ್
* ನಟಿಮಣಿಯರ ಭವಿಷ್ಯ ಸುಪ್ರೀಂ ಅಂಗಳದಲ್ಲಿ
NAMMUR EXPRESS NEWS
ಬೆಂಗಳೂರು : ನಟಿ ರನ್ಯಾ ರಾವ್ ಬೆನ್ನಲ್ಲೇ ಮತ್ತಿಬ್ಬರು ಸ್ಯಾಂಡಲ್‌ವುಡ್ ನಟಿಯರಿಗೆ ಮಾಸ್ಟರ್‌ಸ್ಟೋಕ್ ಹೊಡೆದಿದೆ. ಸ್ಯಾಂಡಲ್‌ವುಡ್ ಡ್ರಗ್ ಕೇಸಲ್ಲಿ ಇಬ್ಬರು ನಟಿಯರಿಗೆ ಸಿಸಿಬಿ ಬಿಗ್‌ಶಾಕ್ ನೀಡಿದೆ.
ನಟಿ ಸಂಜನಾ ಮತ್ತು ರಾಗಿಣಿ ವಿರುದ್ಧ ದಾಖಾಲಾಗಿದ್ದ ಎಫ್ ಐ ಆರ್ ರದ್ದಾಗಿತ್ತು. ಇದನ್ನ ಪ್ರಶ್ನಿಸಿ ಸಿಸಿಬಿ ಅಧಿಕಾರಿಗಳು ಸುಪ್ರೀಂಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಸಿಸಿಬಿ ಡ್ರಗ್ಸ್ ಕೇಸಲ್ಲಿ ಎಫ್ ಐ ಆರ್ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ನಟಿಮಣಿಯರು ಅರ್ಜಿ ಸಲ್ಲಿಸಿದ್ದರು.
ನಟಿ ಸಂಜನಾ, ರಾಗಿಣಿ ದ್ವಿವೇದಿ ಹಾಗು ವೀರೇನ್ ಖನ್ನಾ ಮೇಲಿದ್ದ ಎಫ್ ಐ ಆರ್ ರದ್ದು ಮಾಡಿ ಹೈಕೋರ್ಟ್ ಆದೇಶಿಸಿತ್ತು.
ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಸಮ್ಮತಿ ಬಳಿಕ ಸುಪ್ರೀಂಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಹೋಗಲು ಕಾನೂನು ಇಲಾಖೆ ಅಸ್ತು ಎಂದಿತ್ತು. ಆ ಬಳಿಕ ಗೃಹ ಇಲಾಖೆಯಿಂದ ಅನುಮತಿ ಪಡೆದು ಸುಪ್ರೀಂಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸದ್ಯ ನಟಿಮಣಿಯರ ಭವಿಷ್ಯ ಸುಪ್ರೀಂ ಅಂಗಳದಲ್ಲಿದೆ.