Categories
ಬೆಂಗಳೂರು ಮಾಹಿತಿ

ಪಡಿತರ ಚೀಟಿದಾರರಿಗೆ ಶೀಘ್ರವೇ ಬಿಪಿಎಲ್ ಹೆಲ್ತ್ ಕಾರ್ಡ್

ಪಡಿತರ ಚೀಟಿದಾರರಿಗೆ ಶೀಘ್ರವೇ ಬಿಪಿಎಲ್ ಹೆಲ್ತ್ ಕಾರ್ಡ್
– ವೈದ್ಯಕೀಯ ಸೇವೆಗೆ ಪ್ರತ್ಯೇಕ ಪಡಿತರ ಚೀಟಿ
– ವೈದ್ಯಕೀಯ ಸೌಲಭ್ಯದ ಅಗತ್ಯ ಇರುವವರಿಗೆ ಆದ್ಯತೆ

NAMMUR EXPRESS NEWS
ಬೆಂಗಳೂರು: ವೈದ್ಯಕೀಯ ಸೇವೆಗೆ ಪ್ರತ್ಯೇಕ ಪಡಿತರ ಚೀಟಿ ನೀಡಲು ಚಿಂತನೆ ನಡೆಸಲಾಗಿದೆ.
ಮನೆ ಮನೆ ಸರ್ವೆ ಮಾಡಿ ಸಲಹೆ ಪಡೆದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಬಿಪಿಎಲ್ ( B P L Card ) ಪಡಿತರಚೀಟಿದಾರರನ್ನು ಎ, ಬಿ ಎಂದು ವರ್ಗೀಕರಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಆರೋಗ್ಯ ಸೇವೆಗಾಗಿಯೇ ಪ್ರತ್ಯೇಕ ಪಡಿತರ ಚೀಟಿ ನೀಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮನೆ ಮನೆ ಸರ್ವೆ ಮಾಡಿ ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದ ಎಷ್ಟು ಜನ ಅಕ್ಕಿ ಮತ್ತು ಆರೋಗ್ಯ ಸೇವೆ ಎರಡನ್ನೂ ಕೂಡ ಬಯಸುತ್ತಾರೆ ಎಂಬುದು ಗೊತ್ತಾಗಲಿದೆ ಎಂದರು.

ಬಿಪಿಎಲ್ ಕಾರ್ಡ್ಗಾಗಿ ಹೊಸದಾಗಿ ಮೂರು ಲಕ್ಷ ಅರ್ಜಿಗಳು ಬಂದಿದ್ದು, ವೈದ್ಯಕೀಯ ಸೌಲಭ್ಯದ ಅಗತ್ಯ ಇರುವವರಿಗೆ ಆದ್ಯತೆ ನೀಡಲಾಗುವುದು. ಪರಿಶೀಲನೆ ನಡೆಸಿ ಅರ್ಹತೆಯುಳ್ಳವರಿಗೆ ನೀಡಲಾಗುವುದು. ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಹಣ ವರ್ಗಾವಣೆಯಾಗುತ್ತಿದ್ದು, ರಾಜ್ಯದಲ್ಲಿ 1, 28,17,337 ಪಡಿತರಚೀಟಿದಾರರು ಇದ್ದು, 97,27,165 ಪಡಿತರಚೀಟಿದಾರರಿಗೆ ಈ ರೀತಿ ಅಕ್ಕಿ ಬದಲು ಹಣ ವರ್ಗಾವಣೆಯಾಗಲಿದೆ ಎಂದರು.

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!

HOW TO APPLY : NEET-UG COUNSELLING 2023

Categories
ಮಾಹಿತಿ

ಇನ್ಮುಂದೆ ಬ್ಯಾಂಕ್‌ ವಾರಕ್ಕೆ 2 ದಿನ ಇರಲ್ವಾ?

ಇನ್ಮುಂದೆ ಬ್ಯಾಂಕ್‌ ವಾರಕ್ಕೆ 2 ದಿನ ಇರಲ್ವಾ?
– ಬ್ಯಾಂಕ್ ಉದ್ಯೋಗಿಗಳಿಗೆ ಐದೇ ದಿನ ಕೆಲಸ?
– ಜು.28ಕ್ಕೆ ಮಹತ್ವದ ಸಭೆ: ಏನಿದು ಹೊಸ ನಿಯಮ?

NAMMUR EXPRESS NEWS
( Bank ) ಭಾರತದಲ್ಲಿರುವ ಬ್ಯಾಂಕುಗಳು ಇನ್ನು ಮುಂದೆ ವಾರಕ್ಕೆ ಐದು ದಿನ ಮಾತ್ರವೇ ಕಾರ್ಯನಿರ್ವಹಿಸುವ ಸಾಧ್ಯತೆ ದಟ್ಟವಾಗಿದೆ. ಬ್ಯಾಂಕ್ ನೌಕರರಿಗೆ ವಾರಕ್ಕೆ ಎರಡು ದಿನ ರಜೆ ನೀಡುವ ಕುರಿತು ಜು.28ರ ಶುಕ್ರವಾರ ಭಾರತೀಯ ಬ್ಯಾಂಕಿಂಗ್ ಸಂಘ (ಐಬಿಎ) ಹಾಗೂ ಬ್ಯಾಂಕ್ ನೌಕರರ ಒಕ್ಕೂಟಗಳ ಸಂಯುಕ್ತವೇದಿಕೆ ಮಧ್ಯೆ ಮಹತ್ವದ ಸಭೆ ನಡೆಯಲಿದ್ದು, ಅಂದು ಅಂತಿಮ ನಿರ್ಧಾರ ಹೊರಬೀಳುವ ಸಂಭವವಿದೆ. ಹಾಲಿ ಭಾನುವಾರ ಎಲ್ಲ ಬ್ಯಾಂಕುಗಳಿಗೂ ರಜೆ ಇದೆ. ಇದರ ಜತೆಗೆ 2ನೇ ಹಾಗೂ 4ನೇ ಶನಿವಾರದಂದು ಕೂಡ ರಜೆ ಸಿಗುತ್ತಿದೆ. ತಿಂಗಳಲ್ಲಿ 2 ಶನಿವಾರ ಬ್ಯಾಂಕಿಂಗ್ ಸೇವೆ ಲಭ್ಯವಿದೆ. ಇನ್ನು ಮುಂದೆ ಅದು ಕೂಡ ಇರುವುದಿಲ್ಲ. ಅದರ ಬದಲಿಗೆ ವಾರದ ಐದು ದಿನ ಹೆಚ್ಚುವರಿಯಾಗಿ 40 ನಿಮಿಷ ಕೆಲಸ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕುಗಳಲ್ಲಿ ಐದು ದಿನ ಕಾರ್ಯನಿರ್ವಹಣಾ ಅವಧಿ ಪರಿಚಯಿಸುವ ವಿಚಾರ ಪರಿಶೀಲನೆಯಲ್ಲಿದೆ ಎಂದು ಬ್ಯಾಂಕಿಂಗ್ ಸಂಘ ಮಾಹಿತಿ ನೀಡಿದೆ. ಈ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಜಾರಿಗೆ ತರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆ ತಿಳಿಸಿದೆ.

5 ದಿನ ಕರ್ತವ್ಯಾವಧಿ ಮಾತ್ರವಲ್ಲದೆ, ವೇತನ ಹೆಚ್ಚಳ ಹಾಗೂ ನಿವೃತ್ತ ನೌಕರರಿಗೆ ಸಮೂಹ ಆರೋಗ್ಯ ವಿಮಾ ಪಾಲಿಸಿಯ ಅಗತ್ಯ ಕುರಿತಂತೆಯೂ ಜು.28ರ ಸಭೆಯಲ್ಲಿ ಚರ್ಚೆಯಾಗಲಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದಲ್ಲಿ ಕೇಂದ್ರ ಸರ್ಕಾರ ವಾರಕ್ಕೆ ಐದು ದಿನದ ಕಾರ್ಯನಿರ್ವಹಣಾ ಅವಧಿಯನ್ನು ಜಾರಿಗೊಳಿಸಿದೆ. ಆ ಬಳಿಕ ಬ್ಯಾಂಕಿಂಗ್ ವಲಯದಲ್ಲೂ ಅದೇ ಪದ್ಧತಿ ಪರಿಚಯಿಸಬೇಕು ಎಂಬ ಕೂಗು ಆರಂಭವಾಗಿತ್ತು. ಇದಕ್ಕೆ ತನ್ನ ಯಾವುದೇ ಆಕ್ಷೇಪ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಈ ಹಿಂದೆಯೇ ಹೇಳಿತ್ತು.

ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?

HOW TO APPLY : NEET-UG COUNSELLING 2023

Categories
ಮಾಹಿತಿ

ಕಾರ್ಗಿಲ್ ಯುದ್ಧ ನಡೆದಿದ್ದು ಹೇಗೆ..?

ಕಾರ್ಗಿಲ್ ಯುದ್ಧ ನಡೆದಿದ್ದು ಹೇಗೆ..?
– ಕಾರ್ಗಿಲ್ ವಿಜಯ್ ಯಾತ್ರೆಯಲ್ಲಿ ಪಾಕ್ ಮಾಡಿದ್ದೇನು?
– ದೇಶಕ್ಕಾಗಿ ಜೀವ ಕೊಟ್ಟ 527 ಸೈನಿಕರು ಹುತಾತ್ಮರಾಗಿದ್ದು ಹೇಗೆ..?

NAMMUR EXPRESS NEWS – ವಿಶೇಷ ವರದಿ: ಮನಿಷಾ
ನವದೆಹಲಿ : ದೇಶದ ಗಡಿ ಭಾಗದಲ್ಲಿ ತಮ್ಮಪ್ರಾಣದ ಹಂಗು ತೊರೆದು ದೇಶಕ್ಕಾಗಿ ತಮ್ಮ ಜೀವ ಬಲಿಕೊಟ್ಟ ಕಾರ್ಗಿಲ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಒಂದು ಅಧ್ಯಾಯವಾಗಿ ನಿಂತಿದೆ. ರಾಷ್ಟ್ರದ ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ಆಪರೇಷನ್ ವಿಜಯ್ ಅನ್ನು ಮುನ್ನಡೆಸಿದ ಕಾರ್ಗಿಲ್ ಯುದ್ಧ ವೀರರ ಶೌರ್ಯ ಮತ್ತು ಶೌರ್ಯಕ್ಕೆ ಗೌರವ ಸಲ್ಲಿಸಲಾಗುತ್ತಿದೆ. ಪ್ರತಿ ವರ್ಷ, ಜುಲೈ 26 ರಂದು, ಭಾರತವು ಈ ವಿಜಯವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಸ್ಮರಿಸುತ್ತದೆ.

ಏನಿದು ಕಾರ್ಗಿಲ್ ವಿಜಯ್ ದಿವಸ್!

ಭಾರತ ಶಾಂತಿ ಪ್ರಿಯ ದೇಶ. ತಾನಾಗಿ ತಾನು ಯಾರ ಮೇಲು ದಾಳಿ ಮಾಡಿದ ಇತಿಹಾಸ ಇಲ್ಲ. ಆದ್ರೆ ವಿನಾಕಾರಣ ಯುದ್ದ ಮಾಡಲು ಬಂದ್ರೆ ಹಿಡಿಮುಡಿ ಕಟ್ಟಿರುವ ಇತಿಹಾಸವೇ ಹೆಚ್ಚು. ಅದರಲ್ಲಿ ಪಾಕಿಸ್ತಾನ 1999ರಲ್ಲಿ ಕದನ ವಿರಾಮ ಮಾಡಿ ಭಾರತದ ಮೇಲೆ ಮಹಾಮೋಸವನ್ನು ಮಾಡಿದ ದಿನವನ್ನು ಮರೆಯಲು ಸಾದ್ಯವಿಲ್ಲ ಆಗಿನ ಪ್ರಧಾನಿಯಾಗಿದ ಅಟಲ್ ಬಿಹಾರಿ ವಾಜಪೇಯಿಯವರು ಭಾರತದಿಂದ ಪಾಕಿಸ್ತಾನದ ಲಾಹೋರ್ ಗೆ ಮೊದಲ ಬಸ್ ಸಂಚಾರವನ್ನು ಪ್ರಾರಂಭಿಸಿ ಸ್ವತಃ ಅವರೇ ಬಸ್ಸಿನಲ್ಲಿ ಪಾಕಿಸ್ತಾನವನ್ನು ತಲುಪುವ ಮೂಲಕ ಶತ್ರುತ್ವವನ್ನು ಮರೆತು ಮಿತ್ರತ್ವವನ್ನು ಸಾಧಿಸುತ್ತೇವೆ ಎಂಬ ಸಂದೇಶವನ್ನು ಸಾರಿ ಪಾಕಿಸ್ತಾನದಾದೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡು ಭಾರತಕ್ಕೆ ಮರಳಿ ಬರುತ್ತಾರೆ.
ಅದರೆ ಈ ಒಪ್ಪಂದ ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ಹಾಗೆ ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತೆ ಆಯ್ತು. ಒಪ್ಪಂದ ಮಾಡಿ ಕೊಂಡುಬಂದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಮಾಡಿ ಕಾರ್ಗಿಲ್ 130 ಆಯಕಟ್ಟಿನ ಬಂಕರ್ ಅನ್ನು ಆಕ್ರಮಿಸಿಕೊಡಿತು .

ಈ ಅಕ್ರಮದ ಬಗ್ಗೆ ಭಾರತೀಯ ಸೈನ್ಯಕ್ಕೆ ಯಾವುದೇ ಮಾಹಿತಿ ದೊರೆತಿರುವುದು ಇಲ್ಲ. ಏಕೆಂದರೆ ಕಾರ್ಗಿಲ್ ಆಲ್ಲಿ ಚಳಿಗಾಲದ ಸಮಯದಲ್ಲಿ ಮೈನಸ್ ಡಿಗ್ರೀ ಅಷ್ಟು ಚಳಿಯಿರುವ ಕಾರಣ ಅಲ್ಲಿದ್ದ ಯೋದರು ಹೊರಬಂದಿರುತ್ತಾರೆ . ಇದ್ದರ ಬಗ್ಗೆ ಮಾಹಿತಿ ತಿಳಿದಿದ್ದ ಪಾಕಿಸ್ತಾನ ಈ ಸಮಯವನ್ನು ಸದುಪಯೋಗ ಪಡೆದು ಕೊಂಡು ಕಾರ್ಗಿಲ್ ಅನ್ನ ಆಕ್ರಮಿಸಿಕೊಡಿತ್ತು. ಈ ಆಕ್ರಮದ ಬಗ್ಗೆ ಭಾರತೀಯ ಸೈನ್ಯಕ್ಕೆ ಒಂದೂ ಚಿಕ್ಕ ಸುಳಿಯು ಇರಲಿಲ್ಲ. ಕಾರ್ಗಿಲ್ ಪ್ರದೇಶದಲ್ಲಿ ವಾಸವಿದ್ದ ದನಗಾಹಿಗಳಲ್ಲಿ ಒಬ್ಬರಾದ ತಾಶಿ ಅವರೂ ಬಂಕರ್ ಅಲ್ಲೀ ಕೇಳಿ ಬರುತ್ತಿದ್ದ ಮಾತು ಹಾಗೂ ಕೆಲವು ಚಟವಟಿಕೆಗಳಿಂದ ಅನುಮಾನ ಬಂದ ಕಾರಣ ಈ ವಿಚಾರದ ಬಗ್ಗೆ ಭಾರತೀಯ ಸೈನ್ಯಕ್ಕೆ ತಿಳಿಸುತ್ತಾರೆ.

ಕ್ರೂರ ಮನಸ್ಸಿನ ಪಾಕಿಗಳಿಗೆ ಬುದ್ದಿ ಕಲಿಸಿದ ಆಪರೇಶನ್ ವಿಜಯ್!

ದನಗಾಹಿಗಳ ಮಾತು ಕೇಳಿದ ತಕ್ಷಣವೇ ಕಾರ್ಯ ಪ್ರವೃತ್ತರಾದ ಸೇನಾಧಿಕಾರಿಗಳು ಯೋಧರನ್ನು ಕಾರ್ಗಿಲ್ ಬಳಿ ಗಸ್ತು ತಿರುಗಲೆಂದು ಕಳುಹಿಸಿಕೊಟ್ಟರು. ಆಕ್ರಮಣ ಮನಸ್ಥಿತಿಯಲ್ಲಿದ್ದ ಪಾಕ್‌ನ ಸೈನಿಕರು ಗಸ್ತು ತಿರುಗಲು ಹೋದ ಭಾರತದ 5 ಜನ ಯೋಧರ ಕೊಂದು ದೇಹ ಮೂಟೆ ಕಟ್ಟಿ ಕಳಿಸುತ್ತಾರೆ. ಇಂಥಹ ಕ್ರೂರ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ ಪ್ರತ್ಯುತ್ತರ ನೀಡುವ ಸಲುವಾಗಿ ಮೇ 3 1999ರಂದು 20ಸಾವಿರ ಯೋಧರನ್ನು ಒಳಕೊಂಡ ಸೈನ್ಯವನ್ನು ಸಿದ್ಧಗೊಳಿಸಿ ಆಪರೇಶನ್ ವಿಜಯ್ ಕಾರ್ಯಾಚರಣೆಯನ್ನ ಪ್ರಾರಂಬಿಸುತ್ತಾರೆ.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ 5000 ಸೈನಿಕರ ಪಡೆಯನ್ನ ಸಿದ್ದ ಮಾಡಿ ಯುದ್ಧಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದರು. ಈ ಯುದ್ದ ಸತತ ಎರಡೂ ತಿಂಗಳು ನಡೆಯಿತು ಸಾಕಷ್ಟು ಸವಾಲುಗಳೂ ಇದ್ದರೂ ಯುದ್ದ ಅಸ್ತ್ರ ಹಿಡಿದು ಕೊಂಡು ಪಾಕಿಸ್ತಾನದ ಸೈನಿಕರಿಂದ ಅಕ್ರಮಕ್ಕೆ ಒಳಗಾದ ಬಂಕರ್ ಅನ್ನು ಹಿಂಪಡೆದು ಕೊಂಡಿತು. ಈ ಯುದ್ದದಲ್ಲಿ 527 ಸೈನಿಕರು ಹುತಾತ್ಮರಾದರು. ಅಷ್ಟೇ ಅಲ್ಲದೆ 1140ಜನ ಗಾಯಾಳುಗಳು ಆಗಿದ್ದಾರೆ. ಅದರಲ್ಲಿ ಕರ್ನಾಟಕದ 13 ಜನ ವೀರ ಯೋಧರು ಹುತಾತ್ಮರಾದರು.

ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನ ಸೈನಿಕರು ಏಷ್ಟು ಜನ ಮರಣ ಹೊಂದಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಪಾಕಿಸ್ತಾನ ಇನ್ನೂ ನೀಡಿಲ್ಲ. ಯುದ್ದದಲ್ಲಿ ಹೋರಾಡಿದ ವೀರಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಭಾರತ ಸರ್ಕಾರ ಆಚರಿಸುತ್ತ ಬಂದಿದೆ. ಈ ದಿನ ಪ್ರತಿ ವರ್ಷ ಸಾಧನೆ ಗೈದ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ.ಗಾಳಿ ಬಿಸಿಲು ಮಳೆ ಎದೆಗುಂದದೆ ನಮ್ಮ ರಕ್ಷಣೆಗೆ ಸದಾ ಗಡಿಯಲ್ಲಿ ಪ್ರಾಣ ಒತ್ತೆ ಇಟ್ಟುವ ಯೋಧನಿಗೆ ಒಂದು ಸಲಾಂ..!

ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?

HOW TO APPLY : NEET-UG COUNSELLING 2023

Categories
ಮಾಹಿತಿ

ರೇಷನ್ ಕಾರ್ಡ್‌ನಲ್ಲಿ ಯಜಮಾನಿ ಹೆಸರು ಬದಲಿಸಬೇಕೆ.?

ರೇಷನ್ ಕಾರ್ಡ್‌ನಲ್ಲಿ ಯಜಮಾನಿ ಹೆಸರು ಬದಲಿಸಬೇಕೆ.?
– ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್
– ಗೃಹ ಲಕ್ಷ್ಮೀ ಯೋಜನೆಗೆ ಯಜಮಾನಿ ನಮೂದು ಕಡ್ಡಾಯ

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರ ಮನೆ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ ಎರಡು ಸಾವಿರ ರೂ. ನೀಡಲಿದ್ದು, ಇದಕ್ಕಾಗಿ ಪಡಿತರ ಚೀಟಿಯಲ್ಲಿ ಮಹಿಳೆಯರು ಮನೆಯ ಯಜಮಾನಿ ಎಂದು ದಾಖಲಾಗಿರಬೇಕು.
ರಾಜ್ಯದಲ್ಲಿ 1.53 ಕೋಟಿ ಮಂದಿ ಪಡಿತರ ಚೀಟಿ ಹೊಂದಿದ್ದಾರೆ. ಅವರಲ್ಲಿ 1.22 ಕೋಟಿ ಪಡಿತರ ಚೀಟಿಯಲ್ಲಿ ಮಾತ್ರ ಮಹಿಳಾ ಮುಖ್ಯಸ್ಥರು ಇದ್ದಾರೆ. ಇವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಉಳಿದ ಪಡಿತರ ಚೀಟಿಗಳಲ್ಲಿ ಪುರುಷರು ಮುಖ್ಯಸ್ಥರಾಗಿರುವುದರಿಂದ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ನಮೂದಿಸಲು ಅವಕಾಶ ನೀಡಲಾಗಿದೆ. ಕೂಡಲೇ ನೀವು ಕೂಡ ಇದನ್ನು ಸದುಪಯೋಗ ಮಾಡಿಕೊಳ್ಳಬಹುದು.

ರೇಷನ್‌ ಕಾರ್ಡ್‌ಲ್ಲಿ ಮುಖ್ಯಸ್ಥರ ಹೆಸರು ಬದಲಾವಣೆಗೆ ಏನು ಮಾಡಬೇಕು ಇಲ್ಲಿದೆ ಡೀಟೇಲ್ಸ್

  • ನಿಮ್ಮ ಸಮೀಪದ ಪಡಿತರ ಚೀಟಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ.
  •  ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಕ್ಕೆ ಅರ್ಜಿಯನ್ನು ಭರ್ತಿ ಮಾಡಿ.
  • ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ.
  • ಬಯೋಮೆಟ್ರಿಕ್ ದೃಡೀಕರಣದ ಮೂಲಕ ದಾಖಲೆಗಳನ್ನು ದೃಢೀಕರಿಸಿ.
  • ಪಡಿತರ ಸೇವಾ ಕೇಂದ್ರದಲ್ಲಿ ಮಾಹಿತಿಯನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ.
    ಅಲ್ಲಿ ನೀಡಲಾಗುವ ಸ್ವೀಕೃತಿಯನ್ನು ಜಾಗ್ರತೆಯಿಂದ ಸಂರಕ್ಷಿಸಿ ಇಟ್ಟುಕೊಂಡಿರಿ.
  • ಅರ್ಜಿ ಸಲ್ಲಿಕೆ ನಂತರ, ಆಹಾರ ಕಚೇರಿಯಿಂದ ನಿಮಗೆ ಎಸ್‌ಎಂಎಸ್‌ ಬರಲಿದೆ
  • ಎಸ್‌ಎಂಎಸ್ ಬಂದ ಬಳಿಕ ನಿಮ್ಮಲ್ಲಿರುವ ಸ್ವೀಕೃತಿ ಪತ್ರವನ್ನು ನೀಡಿ ಹೊಸ (ಮನೆ ಯಜಮಾನಿಯನ್ನು ಬದಲಿಸಿದ) ಪಡಿತರ ಚೀಟಿ ಪಡೆಯಬಹುದು.

ಆನ್‌ಲೈನ್‌ನಲ್ಲಿ ರೇಷನ್‌ ಕಾರ್ಡ್ ತಿದ್ದುಪಡಿ ಹೇಗೆ.?

  • https://ahara.kar.nic.in/ ಲಾಗ್
    ಇನ್ ಆಗಿ ಮೇನ್ ಪೇಜ್‌ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್ ಮಾಡಿ
  • (https://ahara.kar.nic.in/lpg/)
    ತೆರೆದುಕೊಳ್ಳಲಿದೆ.
  • ಬಳಿಕ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ, ಅಲ್ಲಿ ಕ್ಲಿಕ್ ಮಾಡಿರಿ. ಈಗ ಹೊಸ ಪೇಜ್ ತೆರೆಯಲಿದೆ.
  • ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
  • ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ.
  • ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮಿಟ್ ಮಾಡಿರಿ.
  • ಅರ್ಜಿ ಸಲ್ಲಿಕೆಯ ರಿಜಿಸ್ಟರ್‌ ನಂಬರ್‌ ಸಿಗಲಿದೆ
  • ಈ ನಂಬರ್ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಟ್ರಾಕ್ ಮಾಡಬಹುದು.

ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!

HOW TO APPLY : NEET-UG COUNSELLING 2023

Categories
ಮಾಹಿತಿ

ದೇಶದಲ್ಲೇ ಕರ್ನಾಟಕದ ಶಾಸಕರು ಶ್ರೀಮಂತರು!

ದೇಶದಲ್ಲೇ ಕರ್ನಾಟಕದ ಶಾಸಕರು ಶ್ರೀಮಂತರು!
– ಡಿಸಿಎಂ ಡಿಕೆಶಿ ದೇಶದಲ್ಲೇ ಶ್ರೀಮಂತ ಶಾಸಕ!
– ದೇಶದ ಮೊದಲ 3 ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇ
– ಟಾಪ್ 20 ಮಂದಿ ಪೈಕಿ 12 ಮಂದಿ ಇಲ್ಲಿಯವರೇ

NAMMUR EXPRESS NEWS
ಬೆಂಗಳೂರು: ದೇಶದಲ್ಲೇ ಕರ್ನಾಟಕದ ಶಾಸಕರು ಶ್ರೀಮಂತರು!. ಇನ್ನು ಕರ್ನಾಟಕ ಡಿಸಿಎಂ ಡಿಕೆಶಿ ದೇಶದಲ್ಲೇ ಶ್ರೀಮಂತ ಶಾಸಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ದೇಶದ ಮೊದಲ 3 ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇ. ಟಾಪ್ 20 ಮಂದಿ ಪೈಕಿ 12 ಮಂದಿ ಇಲ್ಲಿಯವರೇ ಆಗಿದ್ದಾರೆ. ಈ ಮೂಲಕ ಕರ್ನಾಟಕ ಶ್ರೀಮಂತಿಕೆಯಲ್ಲೂ ಮುಂದಿದೆ.

ಏನಿದು ವರದಿ?:

ಎಡಿಆರ್ ಮತ್ತು ಎನ್​ಇಡಬ್ಲ್ಯೂ ಬಿಡುಗಡೆ ಮಾಡಿದ ಜನಪ್ರತಿನಿಧಿಗಳ ಮಾಹಿತಿ ವರದಿಯೊಂದರಲ್ಲಿ ದೇಶದ ಶಾಸಕರ ಆಸ್ತಿಪಾಸ್ತಿ, ಸಾಲ ಇತ್ಯಾದಿ ವಿವರ ಬಹಿರಂಗವಾಗಿದೆ. ಈ ವರದಿ ಪ್ರಕಾರ ಸಚಿವ ಡಿ.ಕೆ ಶಿವಕುಮಾರ್ ಅವರು ಭಾರತದ ಅತಿ ಶ್ರೀಮಂತ ಶಾಸಕ ಎನಿಸಿದ್ದಾರೆ. ಕುತೂಹಲವೆಂದರೆ ಶ್ರೀಮಂತ ಶಾಸಕರು ಕರ್ನಾಟಕದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

100 ಕೋಟಿ ದಾಟಿದವರು 32 ಮಂದಿ ಇದ್ದಾರೆ!

100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಬಿಲಿಯನೇರ್ ಶಾಸಕರ ಪಟ್ಟಿಯಲ್ಲಿ ಕರ್ನಾಟಕದವರು 32 ಮಂದಿ ಇದ್ದಾರೆ. ದೇಶದ ಯಾವ ರಾಜ್ಯದಲ್ಲೂ ಇಷ್ಟೊಂದು ಬಿಲಿಯನೇರ್ ಶಾಸಕರು ಇಲ್ಲ. ದೇಶದ ಮೊದಲ ಮೂರು ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇ. ಹಾಗೆಯೇ, ಅಗ್ರ 20 ಸಿರಿವಂತ ಶಾಸಕರ ಪಟ್ಟಿಯಲ್ಲಿ ಕರ್ನಾಟಕದವರೇ 12 ಮಂದಿ ಇದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್​ನಲ್ಲಿ ಘೋಷಿಸಲಾಗಿರುವ ಅಂಶಗಳನ್ನು ಆಧರಿಸಿ ಎಡಿಆರ್ ಮತ್ತು ಎನ್​ಇಡಬ್ಲ್ಯೂ ಈ ಪಟ್ಟಿ ಪ್ರಕಟಿಸಿದೆ. ಅತಿಹೆಚ್ಚು ಬಿಲಿಯನೇರ್ ಶಾಸಕರಿರುವ ರಾಜ್ಯಗಳು ಎಡಿಆರ್ ಒಟ್ಟು 4001 ಶಾಸಕರ ಘೋಷಿತ ಆಸ್ತಿವಿವರಗಳನ್ನು ಅವಲೋಕಿಸಿದ್ದು ನೂರು ಕೋಟಿ ರೂಗೂ ಹೆಚ್ಚು ಮೊತ್ತದ ಆಸ್ತಿಗಳನ್ನು 88 ಶಾಸಕರು ಹೊಂದಿರುವ ಸಂಗತಿಯನ್ನ ಬೆಳಕಿಗೆ ತಂದಿದೆ. ಇದರಲ್ಲಿ ಹೆಚ್ಚಿನವರು ಕರ್ನಾಟಕದವರೇ.

1000 ಕೋಟಿ ರೂಗೂ ಹೆಚ್ಚು ಆಸ್ತಿ ಇರುವ ಮೂವರು ಕನ್ನಡಿಗರೇ!

ದೇಶದ ಅತಿ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಕರ್ನಾಟಕದವರದ್ದೇ. ಡಿಕೆ ಶಿವಕುಮಾರ್, ಕೆಎಚ್ ಪುಟ್ಟಸ್ವಾಮಿ ಗೌಡ ಮತ್ತು ಪ್ರಿಯಾಕೃಷ್ಣ ಅವರು ಮೊದಲ ಮೂರು ಸ್ಥಾನದಲ್ಲಿದ್ದಾರೆ. ಈ ಬಾರಿ ಅಚ್ಚರಿ ಮೂಡಿಸಿದ್ದು ಪುಟ್ಟಸ್ವಾಮಿಗೌಡರದ್ದು. ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಪುಟ್ಟಸ್ವಾಮಿಗೌಡ ಅವರು ತಮ್ಮ ಬಳಿ 1,267 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ 1,413 ಕೋಟಿ ರೂ ಘೋಷಿತ ಆದಾಯದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ ಅವರ ಘೋಷಿತ ಆಸ್ತಿ 1,156 ಕೋಟಿ ರೂ ಇದೆ.

ದೇಶದ ಟಾಪ್ 20 ಶ್ರೀಮಂತ ಶಾಸಕರಲ್ಲಿ ಕರ್ನಾಟಕದವರು..ಮತ್ತವರ ಘೋಷಿತ ಆಸ್ತಿ ಮೌಲ್ಯ

  1. ಡಿ.ಕೆ ಶಿವಕುಮಾರ್, ಕಾಂಗ್ರೆಸ್: 1,413ಕೋಟಿ ರೂ
  2. ಕೆ.ಎಚ್ ಪುಟ್ಟಸ್ವಾಮಿಗೌಡ, ಪಕ್ಷೇತರ: 1,267 ಕೋಟಿ ರೂ
  3. ಪ್ರಿಯಾಕೃಷ್ಣ, ಕಾಂಗ್ರೆಸ್: 1,156 ಕೋಟಿ ರೂ
  4. ಬಿ.ಎಸ್ ಸುರೇಶ, ಕಾಂಗ್ರೆಸ್: 648 ಕೋಟಿ ರೂ
  5. ಎನ್.ಎ. ಹ್ಯಾರಿಸ್, ಕಾಂಗ್ರೆಸ್: 439 ಕೋಟಿ ರೂ
  6. ಎಚ್.ಕೆ. ಸುರೇಶ್, ಬಿಜೆಪಿ: 435 ಕೋಟಿ ರೂ
  7. ಆರ್.ವಿ. ದೇಶಪಾಂಡೆ, ಕಾಂಗ್ರೆಸ್: 363 ಕೋಟಿ ರೂ
  8. ಎಂ.ಆರ್ ಮಂಜುನಾಥ್, ಜೆಡಿಎಸ್: 316 ಕೋಟಿ ರೂ
  9. ಎಸ್.ಎನ್. ಸುಬ್ಬಾರೆಡ್ಡಿ, ಕಾಂಗ್ರೆಸ್: 313 ಕೋಟಿ ರೂ
  10. ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್: 312 ಕೋಟಿ ರೂ
  11. ಎಂ.ಕೃಷ್ಣಪ್ಪ, ಕಾಂಗ್ರೆಸ್: 296 ಕೋಟಿ ರೂ
  12. ಮುನಿರತ್ನ, ಬಿಜೆಪಿ: 293 ಕೋಟಿ ರೂ

ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!

HOW TO APPLY : NEET-UG COUNSELLING 2023

Categories
ಮಾಹಿತಿ

ಇನ್ನುಂದೆ ಒಂದು ಐಡಿಗೆ ಕೇವಲ 4 ಸಿಮ್ ಕಾರ್ಡ್!

ಇನ್ನುಂದೆ ಒಂದು ಐಡಿಗೆ ಕೇವಲ 4 ಸಿಮ್ ಕಾರ್ಡ್!
– ಕೇಂದ್ರದಿಂದ ಮಹತ್ವದ ನಿರ್ಧಾರ: ಏನಿದು ಹೊಸ ನಿಯಮ?
– ಶೀಘ್ರದಲ್ಲೇ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ

NAMMUR EXPRESS NEWS
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಹೆಚ್ಚಾಗಿದ್ದು, ಹೆಚ್ಚು ಹೆಚ್ಚು ಸಿಮ್ ಕಾರ್ಡ್ ಬಳಸಿ ಜನರಿಗೆ ಟೋಪಿ ಹಾಕುವ ವಂಚಕರು ಸಾಕಷ್ಟಿದ್ದಾರೆ. ಹೀಗಾಗಿ ಸಿಮ್ ಕಾರ್ಡ್ ಗಳ ಸಂಖ್ಯೆಯನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಲ್ಲಿಯವರೆಗೆ, ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್ ಗಳನ್ನು ವಿತರಿಸಲಾಗುತ್ತಿತ್ತು. ಇನ್ನುಂದೆ ಒಂದು ಐಡಿಯಲ್ಲಿ ಕಂಡುಬರುವ ಸಿಮ್ ಕಾರ್ಡ್ ಗಳ ಸಂಖ್ಯೆಯನ್ನು 9 ರಿಂದ 4ಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರವು ಆನ್ ಲೈನ್ ವಂಚನೆ ತಡೆಯಲು ಮಹತ್ವದ ಕ್ರಮ ಕೈಗೊಂಡಿದ್ದು, ಇನ್ಮುಂದೆ ಸಿಮ್ ಕಾರ್ಡ್ ಗಳ ಸಂಖ್ಯೆನ್ನು 9 ರ ಬದಲು 4 ಕ್ಕೆ ಇಳಿಸಲು ಸರ್ಕಾರ ಯೋಜಿಸುತ್ತಿದೆ. ಏಕೆಂದರೆ ಇದು ವಂಚಕರಿಗೆ ಒಂದೇ ಐಡಿಯಲ್ಲಿ ಅನೇಕ ಸಿಮ್ ಕಾರ್ಡ್ ಗಳನ್ನು ಪಡೆಯಲು ಮತ್ತು ಅವುಗಳನ್ನು ಆನ್ ಲೈನ್ ವಂಚನೆಗೆ ಬಳಸಲು ಕಷ್ಟವಾಗುತ್ತದೆ. ಸಿಮ್ ಕಾರ್ಡ್ ಗಳ ಸಂಖ್ಯೆಯನ್ನು ಒಂದೇ ಐಡಿಗೆ ನಾಲ್ಕಕ್ಕೆ ಸೀಮಿತಗೊಳಿಸುವ ಮಾರ್ಗಸೂಚಿಗಳನ್ನು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಅನುಮೋದಿಸಿದ್ದಾರೆ ಎಂದು ಹೇಳಲಾಗಿದೆ. ಈ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುವುದು. ಇದಲ್ಲದೆ, ಗ್ರಾಹಕರ ಪರಿಶೀಲನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಸರ್ಕಾರ ಯೋಜಿಸುತ್ತಿದೆ. ಇದು ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ.

ನಿಮ್ಮ ಐಡಿಯಲ್ಲಿ ಎಷ್ಟು ಸಿಮ್ ಇದೆ?… ನೀವೇ ಚೆಕ್ ಮಾಡಬಹುದು?

ಸರ್ಕಾರವು ಹೊಸ ಸೌಲಭ್ಯವನ್ನು ಪರಿಚಯಿಸಿದೆ, ಇದರಿಂದ ನಿಮ್ಮಐಡಿಯಲ್ಲಿ ಎಷ್ಟು ಸಿಮ್ ಕಾರ್ಡ್ ಗಳನ್ನು ನೀಡಬಹುದು ಎಂಬುದನ್ನು ನೀವು ಕಂಡುಹಿಡಿಯಬಹುದು. ಸಂಚಾರ್ ಸಾಥಿ ಪೋರ್ಟಲ್ ನಲ್ಲಿ ಈ ಸೌಲಭ್ಯ ಲಭ್ಯವಿದೆ. ನಿಮ್ಮ ಸಂಖ್ಯೆಗೆ ಮೋಸದ ಸಿಮ್ ನೀಡಲಾಗಿದೆ ಎಂದು ನೀವು ಭಾವಿಸಿದರೆ, ನೀವು ಸಂಚಾರ್ ಸಾಥಿ ಪೋರ್ಟಲ್ ಗೆ ಹೋಗಿ ಅದನ್ನು ಹುಡುಕಬಹುದು ಮತ್ತು ಅದನ್ನು ನಿರ್ಬಂಧಿಸಬಹುದು. ಆನ್ ಲೈನ್ ವಂಚನೆಯಿಂದ ಜನರನ್ನು ರಕ್ಷಿಸಲು ಈ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇದು ಜನರಿಗೆ ತಮ್ಮಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳನ್ನು ನೀಡಲಾಗಿದೆ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ ಮತ್ತು ಯಾವುದೇ ಮೋಸದ ಸಿಮ್ ನೀಡಿದ್ದರೆ ಅವರು ಅದನ್ನು ನಿರ್ಬಂಧಿಸಬಹುದು.

ಅನಗತ್ಯ ಕರೆಗಳು ಮತ್ತು ವಂಚನೆ ಕರೆಗಳನ್ನು ತಡೆಯಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಟೆಲಿಕಾಂ ಕಂಪನಿಗಳಿಗೆ ಎಐ ಫಿಲ್ಟರ್ ಗಳನ್ನು ಸ್ಥಾಪಿಸಲು ಸಹಾಯ ಮಾಡುವುದು ಇದರಲ್ಲಿ ಸೇರಿದೆ. ಎಐ ಫಿಲ್ಟರ್ ಗಳು ಅಪರಿಚಿತ ಕರೆಗಳು ಮತ್ತು ಸಂದೇಶಗಳನ್ನು ಗುರುತಿಸಬಹುದು ಮತ್ತು ಅವುಗಳನ್ನು ನಿರ್ಬಂಧಿಸಬಹುದು. ಈ ಕ್ರಮ ಸ್ವಾಗತಾರ್ಹ. ಇದು ಅನಗತ್ಯ ಕರೆಗಳು ಮತ್ತು ವಂಚನೆ ಕರೆಗಳಿಂದ ಜನರನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!

 

HOW TO APPLY : NEET-UG COUNSELLING 2023

Categories
ಬೆಂಗಳೂರು ಮಾಹಿತಿ

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!
– ಜುಲೈ 19ರಿಂದ ನೋಂದಣಿ ಪ್ರಕ್ರಿಯೆ
– ಯಾರಿಗೆಲ್ಲ ಯೋಜನೆ ಲಾಭ?… ಅರ್ಜಿ ಹಾಕೋದು ಹೇಗೆ?

NAMMUR EXPRESS
ಬೆಂಗಳೂರು: ಕಾಂಗ್ರೆಸ್‌ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಜುಲೈ 19ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ ಆಗಲಿದೆ. ಈ ಯೋಜನೆಯು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಸರಕಾರದ ನಾಲ್ಕನೇ ಭರವಸೆಯಾಗಿದ್ದು, ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ತಿಂಗಳಿಗೆ ರೂ 2,000 ನಗದು ಸಹಾಯವನ್ನು ಭರವಸೆ ನೀಡುತ್ತದೆ. ಈ ಯೋಜನೆ ಭಾರೀ ಮಹತ್ವ ಪಡೆದಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ಈ ಯೋಜನೆಯ ಮೂಲಕ 12.8 ಮಿಲಿಯನ್ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಜುಲೈ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಈ ಯೋಜನೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಅವರು ಹೇಳಿದರು.

“ಜುಲೈ 19 ರಂದು ಯೋಜನೆ ಪ್ರಾರಂಭವಾದ ನಂತರ ಅರ್ಜಿಗಳ ಸಲ್ಲಿಕೆ ಪ್ರಾರಂಭವಾಗುತ್ತದೆ. ಈ ಯೋಜನೆಯಡಿ ನೋಂದಣಿ ಪ್ರಕ್ರಿಯೆಯು ಉಚಿತವಾಗಿದೆ ಮತ್ತು ಇದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಅರ್ಜಿ ಸಲ್ಲಿಸಲು ಯಾವುದೇ ಗಡುವು ಇಲ್ಲ. “ಎಪಿಎಲ್/ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವವರು ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿದಾರರಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದರು. ಸಚಿವರ ಪ್ರಕಾರ, ಅರ್ಹ ಮಹಿಳೆಯರು ತಮ್ಮ ಮೊಬೈಲ್ ಸಂಖ್ಯೆಗೆ ನೋಂದಣಿಯ ಸಮಯ, ದಿನಾಂಕ ಮತ್ತು ಸ್ಥಳದ ಬಗ್ಗೆ ಎಸ್‌ಎಮ್‌ಎಸ್‌ ಅನ್ನು ಪಡೆಯುತ್ತಾರೆ.

ಅರ್ಜಿ ಸಲ್ಲಿಸೋದು ಎಲ್ಲಿ?..ಏನೇನು ದಾಖಲೆ ಬೇಕು?

ಫಲಾನುಭವಿಗಳು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಮತ್ತು ಬಾಪೂಜಿ ಸೇವಾ ಕೇಂದ್ರ ಎಂದು ಸರ್ಕಾರ ಗುರುತಿಸಿರುವ ಗೊತ್ತುಪಡಿಸಿದ ಕೇಂದ್ರಗಳಿಗೆ ಹೋಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿದಾರರು ತಮ್ಮ ಪಡಿತರ ಚೀಟಿ, ಬಡತನ ರೇಖೆಗಿಂತ ಕೆಳಗಿನ ಕಾರ್ಡ್ (ಬಿಪಿಎಲ್), ಬಡತನ ರೇಖೆಗಿಂತ ಮೇಲಿನ ಕಾರ್ಡ್ (ಎಪಿಎಲ್), ಅಥವಾ ಅಂತ್ಯೋದಯ ಕಾರ್ಡ್‌ಗಳನ್ನು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಹೊಂದಿರಬೇಕು ಎಂದು ಸಚಿವರು ಹೇಳಿದರು, ಯಾರಾದರೂ ತಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡದಿದ್ದರೆ. ಆಧಾರ್‌ನೊಂದಿಗೆ, ಅವರು ಪಾಸ್‌ಬುಕ್ ಅನ್ನು ತಯಾರಿಸಬಹುದು.

ಗೃಹ ಲಕ್ಷ್ಮಿ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನೇರ ಲಿಂಕ್‌ಗಳ ವಿವರ :

ಲಿಂಕ್ 1 – https://sevasindhuservices.karnataka.gov.in/
ಲಿಂಕ್ 2 – https://sevasindhugs.karnataka.gov.in/

ಅರ್ಹತೆಯ ಮಾನದಂಡ:

ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಾಗಲು, ಕುಟುಂಬವು ಕೆಲವು ಮಾನದಂಡಗಳನ್ನು ಪೂರೈಸಬೇಕು.
ಈ ಯೋಜನೆಯು ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ ಮತ್ತು ಪ್ರತಿ ಕುಟುಂಬಕ್ಕೆ ಒಬ್ಬ ಮಹಿಳೆ ಮಾತ್ರ ಅರ್ಜಿ ಸಲ್ಲಿಸಬಹುದು. ಯೋಜನೆಗೆ ಅರ್ಹತೆ ಪಡೆಯಲು, ಅರ್ಜಿದಾರನು ತನ್ನ ಮನೆಯ ಮುಖ್ಯಸ್ಥನಾಗಿರಬೇಕು. ಇದು ಅವರ ಮನೆಗಳು ಮತ್ತು ಕುಟುಂಬಗಳನ್ನು ನಡೆಸುವ ಜವಾಬ್ದಾರಿ ಹೊಂದಿರುವ ಮಹಿಳೆಯರನ್ನು ಬೆಂಬಲಿಸುತ್ತದೆ ಮತ್ತು ಉನ್ನತೀಕರಿಸುತ್ತದೆ. ಯೋಜನೆಗೆ ಅರ್ಹತೆ ಪಡೆಯಲು, ಅರ್ಜಿದಾರರು ಕರ್ನಾಟಕದಲ್ಲಿ ನೆಲೆಸಿರಬೇಕು. ಯೋಜನೆಗೆ ಅರ್ಹತೆ ಪಡೆಯಲು, ಕುಟುಂಬದ ವಾರ್ಷಿಕ ಆದಾಯವು ರೂ.ಗಿಂತ ಕಡಿಮೆಯಿರಬೇಕು. 2 ಲಕ್ಷ. ಅರ್ಜಿದಾರರು ರಾಜ್ಯ ಅಥವಾ ಫೆಡರಲ್ ಮಟ್ಟದಿಂದ ಯಾವುದೇ ರೀತಿಯ ಸರ್ಕಾರಿ-ಚಾಲಿತ ಕಲ್ಯಾಣ ಯೋಜನೆಯ ಫಲಾನುಭವಿಯಾಗಿರಬಾರದು. ತೆರಿಗೆದಾರರಾಗಿರುವ ಮಹಿಳೆಯರು ಯೋಜನೆಯ ಪ್ರಯೋಜನಗಳಿಗೆ ಅನರ್ಹರಾಗಿರುತ್ತಾರೆಯೋಜನೆಗಾಗಿ

ಬೇಕಾಗುವ ಅಗತ್ಯ ದಾಖಲೆಗಳ ಪಟ್ಟಿ:

ಆಧಾರ್ ಕಾರ್ಡ್: ನಿಮ್ಮ ಆಧಾರ್ ಕಾರ್ಡ್ ಗುರುತಿನ ದಾಖಲೆಯಾಗಿ ಅಗತ್ಯವಿದೆ.
ಪಡಿತರ ಚೀಟಿ: ಅರ್ಹತೆ ಮತ್ತು ನಿವಾಸದ ಪುರಾವೆಯಾಗಿ ನಿಮ್ಮ ಪಡಿತರ ಚೀಟಿಯನ್ನು ನೀವು ಒದಗಿಸಬೇಕಾಗುತ್ತದೆ.
ವಿಳಾಸ ಪುರಾವೆ: ನಿಮ್ಮ ವಸತಿ ವಿಳಾಸವನ್ನು ಸಾಬೀತುಪಡಿಸಲು ನೀವು ಬಳಸಬಹುದಾದ ಯಾವುದೇ ಡಾಕ್ಯುಮೆಂಟ್, ಉದಾಹರಣೆಗೆ ಗ್ಯಾಸ್ ಬಿಲ್ ಅಥವಾ ಡ್ರೈವಿಂಗ್ ಲೈಸೆನ್ಸ್.
ನಿವಾಸ ಪ್ರಮಾಣಪತ್ರ: ಈ ಡಾಕ್ಯುಮೆಂಟ್ ಭಾರತದ ಕರ್ನಾಟಕ ರಾಜ್ಯದಲ್ಲಿ ನಿಮ್ಮ ಕಾನೂನುಬದ್ಧ ನಿವಾಸವನ್ನು ದೃಢೀಕರಿಸುತ್ತದೆ.
ಬ್ಯಾಂಕ್ ಖಾತೆ ವಿವರಗಳು: ಹಣಕಾಸಿನ ನೆರವು ಠೇವಣಿ ಮಾಡುವ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀವು ಬಹಿರಂಗಪಡಿಸಬೇಕು.
ಆದಾಯ ಪ್ರಮಾಣಪತ್ರ: ಯೋಜನೆಗೆ ನಿಮ್ಮ ಆದಾಯದ ಅರ್ಹತೆಯನ್ನು ನಿರ್ಧರಿಸಲು, ನೀವು ಆದಾಯ ಪ್ರಮಾಣಪತ್ರವನ್ನು ಒದಗಿಸಬೇಕು.

ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್

HOW TO APPLY : NEET-UG COUNSELLING 2023

Categories
ಮಾಹಿತಿ

ಆಟಿ ಅಮಾವಾಸ್ಯೆಸಂಭ್ರಮ – ದೇವರೇ ತಂದು ಔಷಧಿ ಮರದಲ್ಲಿ ಇಡುವ ನಂಬಿಕೆ!

ಆಟಿ ಅಮಾವಾಸ್ಯೆಸಂಭ್ರಮ!
– ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಚರಣೆ
– ಸಂಪ್ರದಾಯದ ಹಬ್ಬದಲ್ಲಿ ಜನರ ಅರೋಗ್ಯ ಕಾಳಜಿ
– ದೇವರೇ ತಂದು ಔಷಧಿ ಮರದಲ್ಲಿ ಇಡುವ ನಂಬಿಕೆ!

NAMMUR EXPRESS NEWS
ಉಡುಪಿ/ಮಂಗಳೂರು: ಉಡುಪಿ, ದಕ್ಷಿಣ ಕನ್ನಡದಲ್ಲಿ ವಿಶೇಷ ಆಟಿ ಅಮಾವಾಸ್ಯೆಯ ಸಂಭ್ರಮ ಕಂಡು ಬಂದಿತು.ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಪಾಲೆ ಮರ (ಹಾಲೆ ಮರ) ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತೆಗೆದ ಬಳಿಕ ಬಳಿಕ ಕಹಿ ರಸವನ್ನು ತುರಿ ಹಾಕಿದ ಗಂಜಿಯನ್ನಾಗಿ ತಯಾರಿಸಿ ಮನೆಮಂದಿ ಎಲ್ಲರೂ ಹಬ್ಬದಂತೆ ಅಚರಿಸುವುದು ವಾಡಿಕೆ. ಈ ಹಬ್ಬವನ್ನು ಎಲ್ಲೆಡೆ ಮನೆ ಮಂದಿಯೆಲ್ಲಾ ಸೇರಿ ಆಚರಣೆ ಮಾಡಿದರು.
ಉಡುಪಿ ,ದಕ್ಷಿಣ ಕನ್ನಡದಲ್ಲಿ ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ (ಹಾಲೆ ಮರ)ದ ಸನಿಹ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದು ಬರಬೇಕು. ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು. ಅಂದು ಮನೆಮಂದಿಯೆಲ್ಲರೂ ಆರೋಗ್ಯವರ್ಧಕವಾದ ಪಾಲೆಯ ಅತಿ ಕಹಿಯಾದ ರಸವನ್ನು ಕುಡಿಯುತ್ತಾರೆ. ನಂತರ ತೆಂಗಿನ ಕಾಯಿ ತುರಿ ಹಾಕಿದ ಗಂಜಿ ಉಣ್ಣುತ್ತಾರೆ.
ವೈಜ್ಞಾನಿಕವಾಗಿ ಈ ಆಚರಣೆಯನ್ನು ಗಮನಿಸಿದರೆ, ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ. ಅನ್ಯ ಆಹಾರ ಸೇವನೆಗೆ ಮೊದಲು ಖಾಲಿ ಹೊಟ್ಟೆಗೆ ಸೇವಿಸುವುದು ಅತೀ ಉತ್ತಮವೆಂದು ತಿಳಿವಳಿಕೆ ಇದೆ.

ದೇವರೇ ತಂದು ಔಷಧಿ ಮರದಲ್ಲಿ ಇಡುವ ನಂಬಿಕೆ!

ಆಟಿ ಮಾಸದಲ್ಲಿ ಆಟಿ ಕಳಂಜ ದೈವವು ಅಮಾವಾಸ್ಯೆಯಂದು ಅನೇಕ ಬಗೆಯ ಔಷಧೀಯ ಗುಣಗಳನ್ನು ತಂದು ಮರದಲ್ಲಿರಿಸುತ್ತದೆ. ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಬಲವಾಗಿದೆ. ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್‌ ನಂತಹ ಕಾಯಿಲೆಗಳನ್ನು ಗುಣಪಡಿಸುವ ಹಲವು ಬಗೆಯ ಔಷಧೀಯ ಗುಣವಿದೆ. ಆಯುರ್ವೇದ ಔಷಧಿಗಳಲ್ಲಿ ಇದು ಧಾರಾಳವಾಗಿ ಬಳಕೆಯಾಗುತ್ತಿದೆ.

ಆಚರಣೆ ವಿಶೇಷ ಏನು…?

ಇಪ್ಪತ್ತರ ದಶಕದಲ್ಲಿ ಆಟಿ ತಿಂಗಳಿನಲ್ಲಿ ವಿಪರೀತ ಮಳೆ. ಅಂದು ವೈದ್ಯಕೀಯ ಚಿಕಿತ್ಸೆಗಳು ಗಗನಕುಸುಮವಾಗಿತ್ತು. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚು. ಅಂದಿನ ಕಾಲದಲ್ಲಿ ಸೊಪ್ಪು ಹಲಸು ಕಣಿಲೆ ಸೇರಿದಂತೆ ಹಳ್ಳಿಯ ಆಹಾರವನ್ನು ಸೇವಿಸುತಿದ್ದರು. ಅಮವಾಸ್ಯೆಯಂದು ಹಾಲೆಮರದ ಕಷಾಯವನ್ನು ಸೇವಿಸುತ್ತಾರೆಯೋ ಆರೋಗ್ಯದಿಂದಿರುತ್ತಾರೆ ಎಂಬುವುದು ಜನರ ಭಾವನೆಯಾಗಿದೆ. ಇಂದಿಗೂ ಆಟಿ ಅಮಾವಾಸ್ಯೆ ಆಚರಣೆಯನ್ನು ಇಲ್ಲಿನ ಜನ ಉಳಿಸಿಕೊಂಡು ಬರುತ್ತಿದ್ದಾರೆ.

ಹಲವೆಡೆ ಕಷಾಯ ವಿತರಣೆ

ಆಟಿ ಅಮಾವಾಸ್ಯೆಯ ಜು.17ರಂದು ಕರಾವಳಿಯ ಹಲವೆಡೆ ಹಾಲೆ ಮರದ ಕಷಾಯ ವಿತರಿಸಲಾಯಿತು. ಜನರು ಜಾತಿ ಮತ ಭೇದವಿಲ್ಲದೆ ಮುಂಜಾನೆ 5 ಗಂಟೆಯಿಂದಲೇ ಕಷಾಯವನ್ನು ಪಡೆದುಕೊಂಡರು. ಬಾಟಲಿಯಲ್ಲಿ ಕಷಾಯ ಮತ್ತು ಮೆಂತೆ ಗಂಜಿ ನೀಡುವ ವ್ಯವಸ್ಥೆಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಲ್ಪಿಸಲಾಗಿತ್ತು. ಕಷಾಯಕ್ಕಾಗಿ ಮುಂಜಾನೆಯಿಂದಲೇ ಜನರು ಸಾಲುಗಟ್ಟಿ ನಿಂತು ಕಷಾಯವನ್ನು ಸೇವಿಸಿದರು.

ಮಲೆನಾಡಲ್ಲೂ ಆಚರಣೆ ಉಂಟು!

ಮಲೆನಾಡಿನಲ್ಲಿ ಆಷಾಢ ಮುಗಿದ ನಂತರ ದಕ್ಷಿಣ ಕನ್ನಡದಲ್ಲಿ ಆಶಾಡ ಪ್ರಾರಂಭವಾದ ದಿನ ಈ ಕಷಾಯ ಕುಡಿಯುವ ಪದ್ಧತಿ ಬೆಳೆದು ಬಂದಿದೆ. ಮಲೆನಾಡು ಹಾಗೂ ಕರಾವಳಿ ಹೊಂದಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲೂ ಆಚರಣೆ ಮಾಡಲಾಗುತ್ತದೆ. ಮಲೆನಾಡಿಗರಿಗೆ ಆಷಾಢವು ಒಂದು ತಿಂಗಳ ಮೊದಲೇ ಆಚರಣೆ ಮಾಡಲಾಗುತ್ತದೆ ಕರಾವಳಿಯಲ್ಲಿ ಒಂದು ತಿಂಗಳ ನಂತರ ಪ್ರಾರಂಭವಾಗುತ್ತದೆ. ಈ ದಿನ ಹಾಲೆ ಮರ ದಿವ್ಯ ಔಷಧಿ ಗುಣಗಳಿಂದ ಕೂಡಿರುತ್ತದೆ ಎಂಬುದು ಹಿಂದಿನವರ ನಂಬಿಕೆ.

ಗರಿಷ್ಠ ಎಷ್ಟು ಸ್ವೀಕರಿಸಬಹುದು?:

ತೊಗಟೆಯನ್ನು ನೀರು ಮಿಶ್ರ ಮಾಡಿ ಜಜ್ಜಿ ರಸವನ್ನು ತೆಗೆಯುತ್ತಾರೆ. ಇದನ್ನು ವ್ಯಕ್ತಿಯೊಬ್ಬ ಗರಿಷ್ಠ 24 ಮಿ.ಲೀ. ಸೇವಿಸಬಹುದು. ಕುದಿಸಿ ಕಷಾಯ ಮಾಡುವುದಾದರೆ ಗರಿಷ್ಠ 50 ಮಿ.ಲೀ. ಸೇವಿಸಬಹುದು. ಕೆಲವರು ಜೀರಿಗೆ, ಬೆಳ್ಳುಳ್ಳಿ, ಅರಶಿನವನ್ನು ಮಿಶ್ರ ಮಾಡುವುದೂ ಇದೆ.

ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್

HOW TO APPLY : NEET-UG COUNSELLING 2023

Categories
ಮಾಹಿತಿ

ಐಟಿ ಫೈಲಿಂಗ್‌ಗೆ ಜುಲೈ 31ರ ಗಡುವು

ಐಟಿ ಫೈಲಿಂಗ್‌ಗೆ ಜುಲೈ 31ರ ಗಡುವು
– ನಿಮ್ಮ ಆದಾಯ ತೆರಿಗೆ ಫೈಲ್ ಮಾಡಿ..
– ಅವಧಿ ವಿಸ್ತರಣೆ ಸಾಧ್ಯತೆ ಕಡಿಮೆ

NAMMUR EXPRESS NEWS
ನವದೆಹಲಿ: ವಯುಕ್ತಿಕ ತೆರಿಗೆ 2022-23ರ ಮೌಲ್ಯಮಾಪನ ವರ್ಷಕ್ಕೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಐಟಿಆರ್ ಫೈಲಿಂಗ್ ಮಾಡಲು ಕೊನೆಯ ಕ್ಷಣದವರೆಗೆ ಕಾಯಬೇಡಿ ಮತ್ತು ಯಾವುದೇ ಅವಧಿ ವಿಸ್ತರಣೆಯಾಗಬಹುದು ಎಂದು ನಿರೀಕ್ಷಿಸಬೇಡಿ ಎಂದು ಇಲಾಖೆ ಹೇಳಿದೆ. ಐಟಿ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕವನ್ನು ಜುಲೈ 31ರ ನಂತರ ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲದಿರುವುದರಿಂದ ಆದಾಯ ತೆರಿಗೆ ಪಾವತಿದಾರರು ಆದಷ್ಟು ಬೇಗನೆ ಐಟಿಆರ್ ಫೈಲಿಂಗ್ ಮುಗಿಸಿಕೊಳ್ಳುವುದು ಸೂಕ್ತ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಲೋತ್ರಾ ತಿಳಿಸಿದ್ದಾರೆ.

ಐಟಿ ರಿಟರ್ನ್ ಫೈಲ್ ಮಾಡಲು ಇದೇ ಜುಲೈ 31 ಕೊನೆಯ ದಿನವಾಗಿದೆ. ಈ ದಿನಾಂಕವನ್ನು ಕೇಂದ್ರ ಸರ್ಕಾರ ವಿಸ್ತರಿಸುವ ಸಾಧ್ಯತೆಗಳು ಕಡಿಮೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಲೋತ್ರಾ ತಿಳಿಸಿದ್ದಾರೆ.
ವೈಯುಕ್ತಿಕ ತೆರಿಗೆದಾರರು ಐಟಿ ರಿಟರ್ನ್ಸ್ ಮಾಡುವುದು ಕಡ್ಡಾಯ. ಜತೆಗೆ ಬ್ಯಾಂಕ್ ಲೋನ್ ಮುಂತಾದ ಸೌಲಭ್ಯಗಳಿಗೆ ಕಡ್ಡಾಯ ದಾಖಲೆ ಕೂಡ ಇದಾಗಿದೆ.

ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್

HOW TO APPLY : NEET-UG COUNSELLING 2023

Categories
ಬೆಂಗಳೂರು ಮಾಹಿತಿ

ಗೃಹ ಲಕ್ಷ್ಮೀ ಯೋಜನೆಗೆ ಜು.16ಕ್ಕೆ ಚಾಲನೆ!

ಗೃಹ ಲಕ್ಷ್ಮೀ ಯೋಜನೆಗೆ ಜು.16ಕ್ಕೆ ಚಾಲನೆ!
– ಮನೆ ಯಜಮಾನಿಗೆ 2000 ರೂ.ನೀಡುವ ಯೋಜನೆ
– ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಚಾಲನೆ?

NAMMUR EXPRESS NEWS
ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮೀ ಯೋಜನೆಗೆ ಜು.16ರಂದು ಚಾಲನೆ ಸಿಗಲಿದೆ. ಪ್ರತಿ ತಿಂಗಳು 2000 ನೀಡುವ ಯೋಜನೆಗೆ ಜಾರಿಗೆ ಜುಲೈ 16ರಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಚಾಲನೆ ನೀಡುವ ಸಾಧ್ಯತೆ ಇದೆ. ಈಗಾಗಾಲೇ ಶಕ್ತಿ ಯೋಜನೆ ಹಾಗೂ ಅನ್ನ ಭಾಗ್ಯ ಯೋಜನೆಗೆ ಜಾರಿಗೊಳಿಸಿದ್ದು, ಇದೀಗ ರಾಜ್ಯದ ಮಹಿಳೆಯರು ಎದುರು ನೋಡುತ್ತಿರುವ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ತಯಾರಿ ನಡೆಸಿದ್ದು, ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಂದ ಚಾಲನೆ ಕೊಡಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಇನ್ನೂ ವಿಧಾನಸಭಾ ಚುನಾವಣೆಯ ಬಳಿಕ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್‌ ಇದೇ ಜುಲೈ 16 ರಿಂದ 18ರವರೆಗೆ ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಲಾಗಿದೆ ಎನ್ನಲಾಗಿದೆ.

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಗೃಹ ಲಕ್ಷ್ಮಿ ಯೋಜನೆ ಜಾರಿ ವಿಚಾರದಲ್ಲಿ ಯಾವ ಗೊಂದಲ ಕೂಡಾ ಇಲ್ಲ. ದಿನಾಂಕ ದ ಬಗ್ಗೆ ಮಾತ್ರ ಗೊಂದಲ ಇದೆ, ಆಧಾರ್ ಲಿಂಕ್ ಇರುವ ಅಕೌಂಟ್ ಗೆ ಮಾತ್ರ ಹಣ ಹಾಕಬೇಕಾ ಅಥವಾ ಆಧಾರ್ ಲಿಂಕ್ ಇಲ್ಲದೇ ಇರುವ ಅಕೌಂಟ್ ಗೂ ಹಾಕಬೇಕಾ ಅನ್ನೋದಷ್ಟೇ ಗೊಂದಲ. ಅದು ಬಿಟ್ಟರೆ ಹಣ ರೆಡಿ ಇದೆ, ಫಲಾನುಭವಿಗಳ ಲಿಸ್ಟ್ ಕೂಡಾ ರೆಡಿ ಇದೆ ಎಂದು ಹೇಳಿದ್ದಾರೆ.

ಆಗಸ್ಟ್‌ ತಿಂಗಳಿನಿಂದ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂಪಾಯಿ ಜಮಾ ಮಾಡಲಾಗುವುದು. ಕಾಂಗ್ರೆಸ್ ಕೊಟ್ಟಿರುವ ಭರವಸೆಯನ್ನು ಈಡೇರಿಸಲಿದೆ. ಸ್ಥಿರ ಸರ್ಕಾರ ಮತ್ತು ಸಮೃದ್ಧ ಕರ್ನಾಟಕ ನಮ್ಮ ಗುರಿಯಾಗಿದೆ ಎಂದು ಹೆಬ್ಬಾಳ್ಕರ್ ಹೇಳಿದ್ದರು. ಕಾಂಗ್ರೆಸ್‌ ಸರ್ಕಾರ ತಯಾರಿ ನಡೆಸಿದಂತೆ ಇದೇ ಜುಲೈ 18ರಂದು ಅರ್ಜಿ ಸ್ವೀಕರಿಸಲು ಪ್ರಕ್ರಿಯೆ ಆರಂಭಿಸಿದರೆ, ರಾಜ್ಯಾದ್ಯಂತ ಇರುವ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಬಹುದು. ಸಲ್ಲಿಸಿದ ಅರ್ಜಿಗಳನ್ನ ಪರಿಶೀಲನೆ ಮಾಡಿ ಒಂದು ತಿಂಗಳ ಒಳಗೆ ಎಲ್ಲರ ಖಾತೆಗೆ ಹಣ ಹಾಕಲು ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಿದೆ ಎನ್ನಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ನೀಡುವ ‘ಗೃಹ ಲಕ್ಷ್ಮಿ’ ಯೋಜನೆಯಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ಪೂರ್ಣಗೊಂಡಿದೆ. ಗೃಹ ಲಕ್ಷ್ಮಿ ಗೆ ಪ್ರತ್ಯೇಕ ಆ್ಯಪ್‌ ಸಿದ್ಧಪಡಿಸಲಾಗಿದೆ. ಅಲ್ಲದೇ ಬಾಪೂಜಿ ಸೇವಾ ಕೇಂದ್ರ, ನಾಡಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ಗೃಹ ಲಕ್ಷ್ಮಿ ಯೋಜನೆಯ ಮಾರ್ಗಸೂಚಿಗಳು ಬಿಡುಗಡೆಯಾದ ಬೆನ್ನಲ್ಲೇ ಆ ಯೋಜನೆಗೆ ಸಲ್ಲಿಸಬೇಕಾಗಿರುವ ಅರ್ಜಿಯ ನಮೂನೆಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಕುಟುಂಬ ಕಲ್ಯಾಣ ಇಲಾಖೆಯು ಈ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮನೆಯ ಯಜಮಾನಿ ಯಾರೆಂದು ಘೋಷಿಸುವ, ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಇರುವ ಫೋನ್ ನಂಬರ್, ರೇಷನ್ ಕಾರ್ಡ್, ವೋಟರ್ ಐಡಿ ಕಾರ್ಡ್ ನಂಬರ್ ಸೇರಿದಂತೆ ಹಲವಾರು ಮಾಹಿತಿಗಳನ್ನು ನೀಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?

HOW TO APPLY : NEET-UG COUNSELLING 2023