Categories
Uncategorized ರಾಷ್ಟ್ರೀಯ ವಾರ್ತೆ

ಜಿ-20 ಸಮ್ಮೇಳನದಲ್ಲಿ “ಭಾರತ್” ಹೆಸರು!

ಜಿ-20 ಸಮ್ಮೇಳನದಲ್ಲಿ “ಭಾರತ್” ಹೆಸರು!
– ಚೀನಾ, ರಷ್ಯಾ ಹೊರತುಪಡಿಸಿ ಉಳಿದೆಲ್ಲಾ ಬಲಿಷ್ಠ ರಾಷ್ಟ್ರಗಳು ಹಾಜರ್
– ದೆಹಲಿಯಲ್ಲಿ ಹಿಂದೆಂದೂ ಕಾಣದಷ್ಟು ಭದ್ರತೆ

NAMMUR EXPRESS NEWS
ದೆಹಲಿ : ಇಂದಿನಿಂದ ಎರಡು ದಿನ G-20 ಸಮ್ಮೇಳನ ನಡೆಯಲಿದ್ದು, ದೆಹಲಿಯ ಪ್ರಗತಿ ಮೈದಾನದಲ್ಲಿ ಶೃಂಗಸಭೆ ನಡೆಸಲಾಗುತ್ತಿದೆ. ವಿಶ್ವ ದಿಗ್ಗಜರ ಸಭೆಗೆ ಭಾರತದ ಮುಂದಾಳತ್ವದಲ್ಲಿ ಭಾರತ ಮಂಟಪದಲ್ಲಿ ಚಿಂತನ-ಮಂಥನ ಮಾಡಲಾಗುತ್ತದೆ. ಅಚ್ಚರಿ ಎಂದರೆ ಸಭೆಯ ಅಧ್ಯಕ್ಷತೆ ವಹಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಟೇಬಲ್ ಎದುರು ಇಂಡಿಯಾ ಬದಲು ಭಾರತ್ ಎಂದು ಬೋರ್ಡ್ ಹಾಕಲಾಗಿದೆ. ಮೊದಲ ದಿನ ಎಲ್ಲಾ ದೇಶದ ಪ್ರಮುಖರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದರು. ಎರಡು ದಿನಗಳ ಕಾಲ ಜಾಗತಿಕ ಸಮಸ್ಯೆಗಳ ಚರ್ಚೆ , ವ್ಯಾಪಾರ, ವಾಣಿಜ್ಯ, ರಕ್ಷಣೆ, ಪರಿಸರ ವಿಚಾರಗಳ ಸಮಾಲೋಚನೆ ನಡೆಯಲಿದೆ. G-20ಯ 20 ರಾಷ್ಟ್ರಗಳ ನಾಯಕರ ನಡುವೆ ಸಮಾಲೋಚನೆ ನಡೆಸಲಾಗುತ್ತದೆ. ಚೀನಾ, ರಷ್ಯಾ ಹೊರತುಪಡಿಸಿ ಉಳಿದೆಲ್ಲಾ ಬಲಾಡ್ಯ ರಾಷ್ಟ್ರಗಳು ಭಾಗಿಯಾಗಲಿದೆ.

ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾತುಕತೆ :

ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸ್ಥಾನಕ್ಕೆ ಅಮೆರಿಕ ಬೆಂಬಲ ನೀಡುತ್ತಿದೆ. ಚಂದ್ರಯಾನ-3 ಯಶಸ್ವಿಗೊಳಿಸಿದ ಭಾರತಕ್ಕೆ ಬ್ರೆಡನ್ ಅಭಿನಂದನೆ ಸಲ್ಲಿಸಿದ್ದಾರೆ. ಧಾನಿ ನಿವಾಸ 7 ಲೋಕ ಕಲ್ಯಾಣ್ ಮಾರ್ಗ್‌ನಲ್ಲಿ ಸುದೀರ್ಘ ಚರ್ಚೆ ನಡೆಯಲಿದ್ದು ಸುಮಾರು 50 ನಿಮಿಷಗಳ ಕಾಲ ದ್ವಿಪಕ್ಷೀಯ ಮಾತುಕತೆ ನಡೆಸಲಾಗುತ್ತದೆ. ದೆಹಲಿಯಲ್ಲಿ ಹಿಂದೆಂದೂ ಕಾಣದಷ್ಟು ಭಾರೀ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ : ಮೊರಾಕೋದಲ್ಲಿ ಭಾರಿ ಭೂಕಂಪಕ್ಕೆ 296 ಮಂದಿ ಬಲಿ!

Categories
ರಾಷ್ಟ್ರೀಯ ವಾರ್ತೆ

ಭಾರತ- ಪಾಕ್ ಕ್ರಿಕೆಟ್ ಪಂದ್ಯಕ್ಕೆ ಕ್ಷಣಗಣನೆ!

ಭಾರತ- ಪಾಕ್ ಕ್ರಿಕೆಟ್ ಪಂದ್ಯಕ್ಕೆ ಕ್ಷಣಗಣನೆ!
– ಪಂದ್ಯಕ್ಕೆ ಮಳೆ ಅಡ್ಡಿ ಆಗುವ ಆತಂಕ
– ಯಾರ ಮುಡಿಗೇರಲಿದೆ ಏಷ್ಯಾಕಪ್ ಟ್ರೋಪಿ?

NAMMUR EXPRESS NEWS  : ಏಷ್ಯಾಕಪ್ 2023 ಸೂಪರ್-4 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ವೇಜ್ ಕದನಕ್ಕೆ ಕೊಲಂಬೊದ ಆರ್. ಪ್ರೇಮದಾಸ ಮೈದಾನ ಆತಿಥ್ಯವಹಿಸುತ್ತಿದೆ. ಉಭಯ ತಂಡಗಳ ಈ ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದ್ದು, ಇದಕ್ಕಾಗಿ ಎರಡೂ ತಂಡಗಳು ಕೊಲಂಬೊ ತಲುಪಿವೆ. ಆದರೆ ಪಂದ್ಯದ ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹೀಗಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಕೂಡ ಈ ಪಂದ್ಯಕ್ಕೆ ಮೀಸಲು ದಿನವನ್ನು ಇಟ್ಟುಕೊಂಡಿದ್ದು, ಸೆಪ್ಟೆಂಬರ್ 10 ರಂದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಮರುದಿನ ಅಂದರೆ ಸೆಪ್ಟೆಂಬರ್ 11 ರಂದು ಪಂದ್ಯವನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.

ಏಷ್ಯಾಕಪ್‌ ಲೀಗ್ ಸುತ್ತಿನಲ್ಲೂ ಭಾರತ-ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಆದರೆ ಆ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಪಾಕ್ ವೇಗಿಗಳ ದಾಳಿಗೆ ಸಿಲುಕಿ ಆರಂಭದಲ್ಲೇ ಹಿನ್ನಡೆ ಅನುಭವಿಸಿತ್ತು.

Categories
ರಾಷ್ಟ್ರೀಯ ವಾರ್ತೆ

ವಿಶ್ವ ಸುಂದರಿ ಸ್ಪರ್ಧೆಗೆ ಕರಾವಳಿಯ ಸಿನಿ ಶೆಟ್ಟಿ!

ವಿಶ್ವ ಸುಂದರಿ ಸ್ಪರ್ಧೆಗೆ ಕರಾವಳಿಯ ಸಿನಿ ಶೆಟ್ಟಿ!
– ಭಾರತವನ್ನು ಪ್ರತಿನಿಧಿಸಲಿದ್ದಾರೆ ಉಡುಪಿಯ ಹುಡುಗಿ
– 130 ದೇಶಗಳ ರೂಪದರ್ಶಿಯರು ಹಾಜರ್
– ಏನಿದು ಸ್ಪರ್ಧೆ… ಯಾರು ಯಾರು ಭಾಗವಹಿಸುತ್ತಾರೆ?

NAMMUR EXPRESS NEWS
ಸುಮಾರು 27 ವರ್ಷಗಳ ಬಳಿಕ ದೇಶದಲ್ಲಿ ಮಿಸ್ ಇಂಟರ್ ನ್ಯಾಷನಲ್ ಸ್ಪರ್ಧೆ ನಡೆಯಲಿದ್ದು ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಲ್ಲದೆ, ವಿವಿಧ ದೇಶಗಳ ಒಟ್ಟು 130 ಸುಂದರಿಯರು ಈ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. 2023ನೇ ಸಾಲಿನ 71ನೇ ಮಿಸ್‌ ವಲ್ಡ್ ಸ್ಪರ್ಧೆಯನ್ನು ಕಾಶ್ಮೀರದಲ್ಲಿ ಆಯೋಜನೆಯಾಗಿದ್ದು. ಡಿ.8ರಂದು ಕಾಶ್ಮೀರದಲ್ಲಿರುವ ಕಾಶ್ಮೀರ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. 27 ವರ್ಷಗಳ ಬಳಿಕ ಭಾರತದಲ್ಲಿ ಈ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ನಡೆಯುತ್ತಿದ್ದು, ಭಾರತದಲ್ಲಿ ಎರಡನೇ ಬಾರಿಗೆ ಸ್ಪರ್ಧೆ ನಡೆಯುತ್ತಿದೆ. 130 ದೇಶಗಳ ರೂಪದರ್ಶಿಯರು ಇದರಲ್ಲಿ ಭಾಗಿಯಾಗಲಿದ್ದಾರೆ.

ಉಡುಪಿಯ ಸಿನಿ ಶೆಟ್ಟಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಸಿನಿ ಶೆಟ್ಟಿ 2 ಆಗಸ್ಟ್ 2001 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ಆದರೂ ಈಕೆ ಕರಾವಳಿ ಬೆಡಗಿ, ಉಡುಪಿಯ ಜಿಲ್ಲೆಯ ಇನ್ನಂಜೆಯವರು. ಇವರು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಕಿರೀಟ ಗೆದ್ದಿದ್ದಾರೆ. 2022ರಲ್ಲಿ ಫೆಮಿನಾ ಮಿಸ್ ಕರ್ನಾಟಕ ಕೂಡ ಗೆದ್ದಿದ್ದಾರೆ.
ಹೋಟೆಲ್‌ ಉದ್ಯಮಿ ಸದಾನಂದ್‌ ಶೆಟ್ಟಿ ಮತ್ತು ಹೇಮಾ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಸಿನಿ ಶೆಟ್ಟಿ ನಟಿ, ಮಾಡೆಲ್ ಮತ್ತು ಕಂಟೆಂಟ್ ಕ್ರಿಯೇಟರ್ ಕೂಡ ಹೌದು.

71ನೇ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿರುವ ಸಿನಿ ಶೆಟ್ಟಿ ಇನ್ನು ಮಿಸ್ ವರ್ಲ್ಡ್ 2000 ಕಿರೀಟವನ್ನು ಅಲಂಕರಿಸಿದ ಪ್ರಿಯಾಂಕಾ ಚೋಪ್ರಾ ಅವರು ತಮಗೆ ಸ್ಫೂರ್ತಿ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆಯಷ್ಟೇ ರೂಪದರ್ಶಿಯಾಗಿ ವೃತ್ತಿ ಬದುಕು ಆರಂಭಿಸಿರುವ ಸಿನಿಶೆಟ್ಟಿ ಈಗಾಗಲೇ ಪ್ರತಿಷ್ಠಿತ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಮಿಂಚಿದ್ದಾರೆ. PME ಎಂಟರ್ಟೈನ್ಮೆಂಟ್, ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದಲ್ಲಿ ಈ ಬಾರಿಯ ವಿಶ್ವಸುಂದರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದನ್ನೂ ಓದಿ : ಶಿವಮೊಗ್ಗ ಅಡಿಕೆ ಮಾರುಕಟ್ಟೆ

Categories
ರಾಷ್ಟ್ರೀಯ ವಾರ್ತೆ

ದಾರಿ ತಪ್ಪಿಸಿ ಲಾರಿಯನ್ನೇ ಮುಳುಗಿಸಿದ ಗೂಗಲ್ ಮ್ಯಾಪ್..!

ದಾರಿ ತಪ್ಪಿಸಿ ಲಾರಿಯನ್ನೇ ಮುಳುಗಿಸಿದ ಗೂಗಲ್ ಮ್ಯಾಪ್..!
– ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ ಲಾರಿ!
– ತೆಲಂಗಾಣದಲ್ಲಿ ನಡೆದ ಅಚ್ಚರಿ ಘಟನೆ

NAMMUR EXPRESS NEWS
ತೆಲಂಗಾಣ: ನಾವು ಯಾವುದೋ ಗೊತ್ತಿರದ ಊರು, ದಾರಿಯಲ್ಲಿ ಸಾಗುವಾಗ ಗೂಗಲ್ ಮ್ಯಾಪ್ ಸಹಾಯ ಪಡೆಯುತ್ತೇವೆ.
ಅದು ತೋರಿಸಿದ ದಿಕ್ಕಿನೆಡೆಗೆ ಸಾಗುತ್ತೇವೆ. ಕೆಲವೊಮ್ಮೆ ದಾರಿ ತಪ್ಪಿ ಪೇಚಿಗೆ ಬಿದ್ದ ಘಟನೆಗಳೂ ಇವೆ. ಇಂಥದ್ದೇ ಸಂಗತಿಯೊಂದು ತೆಲಂಗಾಣದಲ್ಲಿ ನಡೆದಿದೆ. ಗೂಗಲ್ ಮ್ಯಾಪ್ ನೆಚ್ಚಿಕೊಂಡು ಹೋದ ಲಾರಿಯೊಂದು ನೀರಿನಲ್ಲಿ ಮುಳುಗಿದೆ. ಬಳಿಕ ಗ್ರಾಮಸ್ಥರ ಸಹಾಯ ಪಡೆದು ಅದನ್ನು ಮೇಲೆತ್ತಲಾಗಿದೆ.

ಘಟನೆಯ ವಿವರ:

ತಮಿಳುನಾಡಿನ ಲಾರಿಯೊಂದು ಮಂಗಳವಾರ ರಾತ್ರಿ ತೆಲಂಗಾಣದ ಸಿದ್ದಿಪೇಟೆ ಕಡೆಗೆ ಸಾಗುತ್ತಿತ್ತು. ಈ ವೇಳೆ, ಲಾರಿ ಚಾಲಕ ಮತ್ತು ಕ್ಲೀನರ್‌ಗೆ ದಾರಿ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಇಬ್ಬರೂ ಗೂಗಲ್ ಮ್ಯಾಪ್ ಹಾಕಿಕೊಂಡಿದ್ದಾರೆ. ಲಾರಿ ಜೆರ್ಯಾಲ ಮಾರ್ಗವಾಗಿ ಹುಸ್ನಾಬಾದ್‌ಗೆ ಹೋಗುತ್ತಿದ್ದಾಗ, ಗೌರವೆಲ್ಲಿ ಜಲಾಶಯದ ಬಳಿ ದಾರಿ ತಪ್ಪಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಚಾಲಕ ಶಿವ ಮತ್ತು ಕ್ಲೀನರ್ ಮೊಂಡಯ್ಯ ಅವರು ಗೂಗಲ್‌ಮ್ಯಾಪ್ ನಂಬಿಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ನೀರು ಬಂದಿದೆ. ಕತ್ತಲಲ್ಲಿ ಕಾಣಿಸದೇ ಮಳೆ ನೀರು ಎಂದುಕೊಂಡು ಮುಂದೆ ಸಾಗಿದ್ದಾರೆ. ಬಳಿಕ ನೀರು ಹೆಚ್ಚಾಗುತ್ತಾ ಸಾಗಿದೆ.

ಲಾರಿ ಸಾಗಿದಂತೆ ಆಳ ಹೆಚ್ಚಾಗಿದೆ. ನೀರು ಕ್ಯಾಬಿನ್ ಒಳಗೆ ನುಗ್ಗಿದೆ. ತಕ್ಷಣವೇ ಚಾಲಕ ವಾಹನ ನಿಲ್ಲಿಸಿದ್ದಾನೆ. ನೀರು ಲಾರಿಯನ್ನು ಮುಳುಗಿಸಿದೆ. ಇದರಿಂದ ಎಂಜಿನ್ ಆಫ್ ಆಗಿದೆ. ಇಬ್ಬರೂ ಹೊರಬಂದು ನೋಡಿದಾಗ ಅದು ಜಲಾಶಯದ ಹಿನ್ನೀರು ಆಗಿತ್ತು. ಅಚ್ಚರಿಗೊಂಡ ಚಾಲಕ, ಅಲ್ಲಿಂದ ಈಜಿಕೊಂಡು ಬಂದು ಪಕ್ಕದ ಗ್ರಾಮವಾದ ರಾಮಾವರಂಗೆ ಬಂದಿದ್ದಾರೆ. ಅಲ್ಲಿದ್ದ ಜನರನ್ನು ವಿಚಾರಿಸಿದಾಗ, ಆ ರಸ್ತೆಯನ್ನು ಮುಚ್ಚಲಾಗಿದೆ. ಅಲ್ಲಿ ಜಲಾಶಯದ ಹಿನ್ನೀರು ನುಗ್ಗಿದೆ ಎಂದು ತಿಳಿಸಿದ್ದಾರೆ. ಬಳಿಕ ಅವರು ಗೂಗಲ್‌ಮ್ಯಾಪ್ ಮಾಡಿದ ಅನಾಹುತದಿಂದಾಗಿ ಲಾರಿ ಮತ್ತು ಅವರು ನೀರುಪಾಲಾಗುವುದು ತಪ್ಪಿದೆ.

ಹಗ್ಗ ಕಟ್ಟಿ ಲಾರಿ ಹೊರಕ್ಕೆ:

ನಡೆದ ಘಟನೆಯನ್ನು ಗ್ರಾಮಸ್ಥರಿಗೆ ತಿಳಿಸಿದ ಚಾಲಕ ಶಿವ ಸಹಾಯ ಕೋರಿದ್ದಾರೆ. ಬೆಳಗಾದ ಬಳಿಕ ಗ್ರಾಮಸ್ಥರು ಲಾರಿ ಸಿಲುಕಿಕೊಂಡ ಸ್ಥಳಕ್ಕೆ ಆಗಮಿಸಿದ್ದಾರೆ. ಲಾರಿಗೆ ಹಗ್ಗಗಳನ್ನು ಬಿಗಿದು ಕಷ್ಟಪಟ್ಟು ಹಿಂದಕ್ಕೆ ಎಳೆದಿದ್ದಾರೆ. ಹರಸಾಹಸಪಟ್ಟು ಲಾರಿಯನ್ನು ದಡಕ್ಕೆ ಎಳೆಯಲಾಗಿದೆ. ಬಳಿಕ ನಂದಾರಾಮ್ ಸ್ಟೇಜ್‌ನ ಬೈಪಾಸ್ ರಸ್ತೆಯ ಮೂಲಕ ವಾಹನವನ್ನು ಕಳುಹಿಸಲಾಗಿದೆ.

ತಪ್ಪಾಗಿದ್ದೇನು?:

ಸಿದ್ದಿಪೇಟೆ ಜಿಲ್ಲೆಯ ಅಕ್ಕಣ್ಣಪೇಟೆ ಮಂಡಲದ ಗುಡತಿಪಲ್ಲಿಯಲ್ಲಿ ಗೌರವಳ್ಳಿ ಯೋಜನೆಯ ಭಾಗವಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಹಿನ್ನೀರಿನಿಂದಾಗಿ ಹಳೆಯ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಗೂಗಲ್‌ಮ್ಯಾಪ್‌ನಲ್ಲಿ ಮೊದಲ ರಸ್ತೆಗಳೇ ಇನ್ನು ತೋರಿಸುತ್ತಿದೆ. ಹೀಗಾಗಿ ವಾಹನಗಳು ತಪ್ಪಿ ಇದೇ ಮಾರ್ಗವಾಗಿ ಬಂದು ಸಿಲುಕೊಳ್ಳುತ್ತಿವೆ. ತಕ್ಷಣವೇ ಮ್ಯಾಪ್‌ನಲ್ಲಿ ಮಾರ್ಪಾಡು ಮಾಡಬೇಕಿದೆ ಎಂಬುದು ಪಕ್ಕದ ಗ್ರಾಮಸ್ಥರ ಆಗ್ರಹವಾಗಿದೆ.

Categories
ರಾಷ್ಟ್ರೀಯ ವಾರ್ತೆ

ಪ್ಯಾಕೇಟಲ್ಲಿ 1 ಬಿಸ್ಕೆಟ್​ ಕಡಿಮೆ ಕೊಟ್ಟ ಕಂಪನಿಗೆ 1 ಲಕ್ಷ ದಂಡ!

ಪ್ಯಾಕೇಟಲ್ಲಿ 1 ಬಿಸ್ಕೆಟ್​ ಕಡಿಮೆ ಕೊಟ್ಟ ಕಂಪನಿಗೆ 1 ಲಕ್ಷ ದಂಡ!
– ಗ್ರಾಹಕರಿಗೆ ಒಂದು ಬಿಸ್ಕೆಟ್ ಯಿಂದ 75 ಪೈಸೆ ನಷ್ಟವಾಗುತ್ತದೆ!: ಕೇಸ್​ ಕೊಟ್ಟವರು ಯಾರು?
– ಕಂಪನಿಗೆ ಪ್ರಶ್ನಿಸಿದಾಗ ಲೆಕ್ಕ ಅಲ್ಲ ತೂಕ ಎಂದ ಕಂಪನಿ

NAMMUR EXPRESS NEWS
ಚೆನ್ನೈ: 16 ಬಿಸ್ಕೆಟ್​​ಗಳಿರುವ ಒಂದು ಬಿಸ್ಕೆಟ್​ ಪ್ಯಾಕೇಟ್​ಗೆ 10 ರೂಪಾಯಿ ಇದೆ ಎಂದು ಅಂದುಕೊಂಡರೂ ಒಂದು ಬಿಸ್ಕೆಟ್​ಗೆ ಸುಮಾರು 75 ಪೈಸೆ ಆಗುತ್ತದೆ. ಒಂದು ವೇಳೆ ಲೆಕ್ಕ ತಪ್ಪಿ ಪ್ಯಾಕೇಟ್​ ಒಳಗೆ 15 ಬಿಸ್ಕೆಟ್ ಬಂದರೆ ಗ್ರಾಹಕರಿಗೆ 75 ಪೈಸೆ ನಷ್ಟವಾದಂತೆ. ಹೀಗಾಗಿ ಒಂದು ಕಡಿಮೆ ಬಂದಾಗ ಯಾರೂ ಮಾತನಾಡುವುದಿಲ್ಲ. ಹೋದ್ರೆ ಹೋಗ್ಲಿ 75 ಪೈಸೆ ಅಲ್ವಾ ಎಂದು ಅಂದುಕೊಳ್ಳುತ್ತೇವೆ. ಆದರೆ, ಎಲ್ಲ ಸಂದರ್ಭದಲ್ಲಿ ಇದು ಸತ್ಯವಲ್ಲ. ಯಾರಾದರೂ ತಲೆ ಕೆಟ್ಟು ಕೋರ್ಟ್​​ಗೆ ಹೋದರೆ ಬಿಸ್ಕೆಟ್​ ಕಂಪನಿಯ ಪರಿಣಾಮ ನೆಟ್ಟಗಿರುವುದಿಲ್ಲ ಎಂಬುದಕ್ಕೆ ಇಲ್ಲೊಂದು ಪ್ರಕರಣವೇ ಸಾಕ್ಷಿಯಾಗಿದೆ.
ಕಂಪನಿಗೆ ಗ್ರಾಹಕರ ನ್ಯಾಯಾಲಯ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.

ತಮಿಳುನಾಡಿನ ಜಿಲ್ಲಾ ಗ್ರಾಹಕ ವೇದಿಕೆಯೊಂದು ಇಂಥದ್ದೊಂದು ತೀರ್ಪು ನೀಡಿದೆ. ಐಟಿಸಿ ಲಿಮಿಟೆಡ್​ನ ಸನ್​​ಫೀಸ್ಟ್​ ಕಂಪನಿಗೆ ಈ ಮಟ್ಟಿಗೆ ದೊಡ್ಡ ದಂಡ ಬಿದ್ದಿರುವುದು. ಮಾರಿ ಲೈಟ್​ ಬಿಸ್ಕೆಟ್ ಪ್ಯಾಕೇಟ್​ನಲ್ಲಿ ಒಂದು ಬಿಸ್ಕೆಟ್ ಕಡಿಮೆ ಮೋಸ ಮಾಡಲಾಗಿದೆ ಎಂದು ಗ್ರಾಹಕ ನ್ಯಾಯಾಲಯ ತೀರ್ಮಾನಿಸಿದೆ. ಅಲ್ಲದೆ, ಒಂದು ಕಡಿಮೆ ಬಿಸ್ಕತ್ತು ಪಡೆದ ನೊಂದ ಗ್ರಾಹಕನಿಗೆ 1 ಲಕ್ಷ ರೂ.ಗಳನ್ನು ಪಾವತಿಸುವಂತೆ ಆದೇಶಿಸಿದೆ. ಕಂಪನಿಯು 16 ಬಿಸ್ಕತ್ತುಗಳನ್ನು ಒಳಗೊಂಡಿದೆ ಎಂದು ಜಾಹೀರಾತು ನೀಡಿ ಪ್ಯಾಕೆಟ್ ನಲ್ಲಿ ಕೇವಲ 15 ಬಿಸ್ಕತ್ತುಗಳನ್ನು ಪ್ಯಾಕ್ ಮಾಡಿರುವುದು ಗ್ರಾಹಕರಿಗೆ ವಂಚನೆ ಎಂದು ಹೇಳಲಾಗಿದೆ.

ಕೇಸ್​ ಕೊಟ್ಟವರು ಯಾರು?

ಪ್ರಸ್ತುತ ಪ್ರಕರಣದಲ್ಲಿ, ಚೆನ್ನೈ ನಿವಾಸಿ ದಿಲ್ಲಿಬಾಬು ಮನಾಲಿಯ ಮಾರಾಟಗಾರರಿಂದ ಬೀದಿ ಪ್ರಾಣಿಗಳಿಗೆ ಆಹಾರ ನೀಡಲು ಸುಮಾರು 25 ಪ್ಯಾಕೆಟ್ ಸನ್​​ಫೀಸ್ಟ್​​ ಬಿಸ್ಕೆಟ್​​ಗಳನ್ನು ಖರೀದಿಸಿದ್ದರು. ಈ ಬಿಸ್ಕೆಟ್​​ಗಳ ಪ್ಯಾಕೇಟ್​​ನಲ್ಲಿ 16 ಬಿಸ್ಕೆಟ್​ಗಳಿವೆ ಎಂದು ಬರೆಯಲಾಗಿತ್ತು. ಆದರೆ ಬಿಚ್ಚಿ ನೋಡಿದಾಗ ಕೇವಲ 15 ಬಿಸ್ಕತ್ತುಗಳು ಮಾತ್ರ ಇರುವುದನ್ನು ಗಮನಿಸಿದ್ದರು. ಕಡಿಮೆ ಇರುವ ಬಗ್ಗೆ ಅಸಮಾಧಾನಗೊಂಡ ನಂತರ ದಿಲ್ಲಿ ಬಾಬು ಅವರು ಐಟಿಸಿ ಮತ್ತು ಮಾರಾಟಗಾರರನ್ನು ವಿವರಣೆಗಾಗಿ ಸಂಪರ್ಕಿಸಿದ್ದರು. ಅವರು ಸಮಸ್ಯೆ ಪರಿಹರಿಸುವ ಬದಲು ದಿಲ್ಲಿ ಬಾಬು ಅವರನ್ನೇ ಹೀಯಾಳಿಸಿದ್ದರು. 10 ರೂಪಾಯಿ ಬಿಸ್ಕೆಟ್​​ಗೆ 10 ಕೋಟಿ ರೂ.ಗಳಲ್ಲಿ ಮೋಸ ಮಾಡಿದಂತೆ ಆಡುತ್ತಿರಲ್ವಾ ಎಂದು ನಿಂದಿಸಿದ್ದರು. ಬೇಸರಗೊಂಡ ಅವರು ಜಿಲ್ಲಾ ಗ್ರಾಹಕ ವೇದಿಕೆ ಮೆಟ್ಟಿಲೇರಿದ್ದರು.

ನ್ಯಾಯಾಲಯದಲ್ಲಿ ಅವರು ಕಂಪನಿಯ ಮೋಸದ ವ್ಯಾಪ್ತಿಯನ್ನು ಗಮನಸೆಳೆದರು. ಅವರ ಲೆಕ್ಕಾಚಾರದ ಪ್ರಕಾರ ಒಂದು ಬಿಸ್ಕತ್ತು ಬೆಲೆ 0.75 ರೂ. ಕಂಪನಿಯು ಪ್ರತಿದಿನ 50 ಲಕ್ಷ ಪ್ಯಾಕೆಟ್​​ಗಳನ್ನು ಉತ್ಪಾದಿಸುತ್ತದೆ. ಅಂದರೆ ಅದು ಪ್ರತಿದಿನ ತನ್ನ ಗ್ರಾಹಕರಿಗೆ 29 ಲಕ್ಷ ರೂ.ಗಿಂತ ಹೆಚ್ಚು ಮೋಸ ಮಾಡುತ್ತಿದೆ ಎಂದು ವಾದ ಮಾಡಿದರು.

ಲೆಕ್ಕ ಅಲ್ಲ ತೂಕ ಎಂದ ಕಂಪನಿ!

ಬಿಸ್ಕೆಟ್​ಗಳನ್ನು ತೂಕದ ಆಧಾರದ ಮೇಲೆ ಮಾರಾಟ ಮಾಡಲಾಗಿದೆಯೇ ಹೊರತು ಪ್ರಮಾಣವಲ್ಲ ಎಂದು ಹೇಳುವ ಮೂಲಕ ಕಂಪನಿಯು ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು. ಆದಾಗ್ಯೂ, ಪ್ಯಾಕೆಟ್ ಉಲ್ಲೇಖಿಸಿದ ಪ್ರಮಾಣಕ್ಕಿಂತ ಕಡಿಮೆ ಇತ್ತು. ಆದಾಗ್ಯೂ ಪ್ಯಾಕೆಟ್​ಗಳಲ್ಲಿ ನಮೂದಿಸಿರುವ 76 ಗ್ರಾಂ ಬದಲಿಗೆ 74 ಗ್ರಾಂ ಮಾತ್ರ ಇತ್ತು. ಈ ನಿಟ್ಟಿನಲ್ಲಿ, ಕಾನೂನು ಮಾಪನಶಾಸ್ತ್ರ ಕಾಯ್ದೆಯ ಪ್ರಕಾರ 4.5 ಗ್ರಾಂ ದೋಷವನ್ನು ಪತ್ತೆ ಹಚ್ಚಲಾಗಿತ್ತು.

Categories
ರಾಷ್ಟ್ರೀಯ ವಾರ್ತೆ

ದೇಶದ ಹೆಸರು ಬದಲಿಸಲು ಮುಂದಾಯ್ತಾ ಕೇಂದ್ರ ಸರ್ಕಾರ?

ದೇಶದ ಹೆಸರು ಬದಲಿಸಲು ಮುಂದಾಯ್ತಾ ಕೇಂದ್ರ ಸರ್ಕಾರ?
– ಚರ್ಚೆ ಹುಟ್ಟು ಹಾಕಿದ ರಾಷ್ಟ್ರಪತಿ ಭವನದ ಆಹ್ವಾನ ಪತ್ರಿಕೆ
– ವಿಶೇಷ ಅಧಿವೇಶನದಲ್ಲಿ ಪ್ರಸ್ತಾವ ಸ್ವೀಕಾರ ಸಾಧ್ಯತೆ!

NAMMUR EXPRESS NEWS
ನವದೆಹಲಿ: ಈ ಹಿಂದೆ ಯುಪಿಎ ಅಂತಿದ್ದ ವಿಪಕ್ಷಗಳ ಮೈತ್ರಿಕೂಟದ ಹೆಸರನ್ನು ಇಂಡಿಯಾ ಎಂದು ಮರುನಾಮಕರಣ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ, ಭಾರತದ ಹೆಸರನ್ನು ಬದಲಾಯಿಸಲು ಮುಂದಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತಹ ಕೆಲವು ಬೆಳವಣಿಗೆಗಳು ಸಹ ಇದೀಗ ನಡೆಯುತ್ತಿವೆ.
ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇಂಡಿಯಾ ಎನ್ನುವ ಬದಲು ಭಾರತ ಎಂಬ ಹೆಸರನ್ನು ಮುಂಚೂಣಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಷ್ಟ್ರಪತಿ ಭವನದ ಆಹ್ವಾನ ಪತ್ರದಲ್ಲಿ ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ.ಸೆ. 9 ಮತ್ತು 10ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ G-20 ದೇಶಗಳ ಸಮಾವೇಶ ನಡೆಯಲಿದ್ದು, ರಾಷ್ಟ್ರಪತಿ ಭವನದ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ.

ವಿಶೇಷ ಅಧಿವೇಶನದಲ್ಲಿ ಪ್ರಸ್ತಾವ ಸ್ವೀಕಾರ ಸಾಧ್ಯತೆ :

ಸೆ.18ರಿಂದ 5 ದಿನ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ರಿಪಬ್ಲಿಕ್ ಆಫ್ ಭಾರತ್ ಎಂಬ ಪ್ರಸ್ತಾವ ಸ್ವೀಕಾರ ಸಾಧ್ಯತೆ ಇದೆ. ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಆಹ್ವಾನ ಪತ್ರಿಕೆ ಮುದ್ರಣವಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಈ ಹೊಸ ಚರ್ಚೆಯ ಬಗ್ಗೆ ಈಗಾಗಲೇ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ದೇಶದ ಹೆಸರನ್ನು ‘ಇಂಡಿಯಾ’ ಬದಲು ಭಾರತ ಎನ್ನಲು ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಬೇಡಿಕೆ ಇಟ್ಟಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಪ್ರಧಾನಿ ಮೋದಿ ಒಂದು ರಜೆಯು ತೆಗೆದುಕೊಂಡಿಲ್ಲ..!

ಪ್ರಧಾನಿ ಮೋದಿ ಒಂದು ರಜೆಯು ತೆಗೆದುಕೊಂಡಿಲ್ಲ..!
– 9 ವರ್ಷ ಅಧಿಕಾರದಲ್ಲಿದ್ದರೂ ಕೂಡ ಒಂದು ರಜೆ ಇಲ್ಲ
– ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗ

NAMMUR EXPRESS NEWS
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಾವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ 9 ವರ್ಷಗಳಲ್ಲಿ ಒಂದೂ ರಜೆ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿ ಗಾದಿಗೆ ಏರಿದ್ದರು. ಒಂದೂ ರಜೆ ಇಲ್ಲದೇ ಪ್ರಧಾನಿಯವರು ಕೆಲಸ ಮಾಡಿದ್ದಾರೆಂದು ಪಿಎಂಒ ಹೇಳಿದೆ. ಪ್ರಧಾನ ಮಂತ್ರಿ ಕಚೇರಿಗೆ ಪ್ರಫುಲ್ ಎಸ್. ಸರ್ದಾ ಎನ್ನುವರು ಮಾಹಿತಿ ಹಕ್ಕು ಅಧಿನಿಯಮದಡಿ (ಆರ್‌ಟಿಐ) ಮಾಹಿತಿ ಕೋರಿದ್ದರು. ಅಲ್ಲದೇ ಪ್ರಧಾನಿಯವರು ತಾವು ಅಧಿಕಾರ ವಹಿಸಿಕೊಂಡ ನಂತರ ದೇಶ ವಿದೇಶಗಳಲ್ಲಿ 3000ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಜುಲೈ 31, 2023 ರಂದು ಸರ್ದಾ ಅವರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಅವರು ಈ ಎರಡು ಮಾಹಿತಿಗಳನ್ನು ಕೇಳಿ ಅರ್ಜಿ ಸಲ್ಲಿಸಿದ್ದರು.ಈ ಆರ್‌ಟಿಐ ಅರ್ಜಿಯ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪ್ರಧಾನಿ ಮೋದಿ ಅವರು ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಾರೆ ಎಂಬುದನ್ನು ಪ್ರಶಂಶಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಉಚಿತ ಕೊಡುಗೆಗಳಿಂದ ದೇಶಕ್ಕೆ ಹಾನಿ.!

ಉಚಿತ ಕೊಡುಗೆಗಳಿಂದ ದೇಶಕ್ಕೆ ಹಾನಿ.!
– ಸರ್ಕಾರದ ನೀತಿಗಳಲ್ಲಿ ಹಣಕಾಸಿನ ಶಿಸ್ತು ಅಗತ್ಯ
– ಮತ್ತೆ ‘ಪ್ರಧಾನಿ ಮೋದಿ’ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನೇರ ಎಚ್ಚರಿಕೆ

NAMMUR EXPRESS NEWS
ನವದೆಹಲಿ: ಸರ್ಕಾರದ ನೀತಿಗಳಲ್ಲಿ ಹಣಕಾಸಿನ ಶಿಸ್ತು ಅತ್ಯಂತ ಅಗತ್ಯ, ರಾಜ್ಯ ಸರ್ಕಾರಗಳು ಆರ್ಥಿಕ ಶಿಸ್ತಿನ ಬಗ್ಗೆ ಪ್ರಜ್ಞೆ ಹೊಂದಿರಬೇಕು. ಉಚಿತ ಯೋಜನೆಗಳು ತಾತ್ಕಾಲಿಕ ರಾಜಕೀಯ ಲಾಭ ತರಬಹುದು. ಆದರೇ ಉಚಿತ ಕೊಡುಗೆಗಳು ದೇಶಕ್ಕೆ ಹಾನಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ನೇರವಾಗೇ ಮತ್ತೆ ಎಚ್ಚರಿಕೆ ನೀಡಿದ್ದಾರೆ.

ಬೇಜವಾಬ್ದಾರಿತದನ ಹಣಕಾಸು ನೀತಿಗಳು ಹಾಗೂ ಜನಪ್ರಿಯ ಕಾರ್ಯಕ್ರಮಗಳು ಅಲ್ಪಾವಧಿಯಲ್ಲಿ ರಾಜಕೀಯ ಲಾಭವನ್ನು ತಂದುಕೊಡಬಲ್ಲವು. ಆದರೇ ಇಂತಹ ಕೊಡುಗೆಗಳಿಂದ ದೀರ್ಘಾವಧಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬುದಾಗಿ ಪರೋಕ್ಷವಾಗಿ ಉಚಿತ ಯೋಜನಗಳ ವಿರುದ್ಧ ಹರಿಹಾಯ್ದಿದ್ದಾರೆ.
ಜಾಗತಿಕ ಸಾಲದ ಬಿಕ್ಕಟ್ಟಿನ ಕುರಿತು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ವಿತ್ತೀಯ ಶಿಸ್ತಿನ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಸಾಲದ ಬಿಕ್ಕಟ್ಟು, ಜಗತ್ತಿಗೆ ಅದರಲ್ಲೂ ವಿಶೇಷವಾಗಿ ಅಭಿವೃದ್ಧಿ ಶೀಲ ದೇಶಗಳಿಗೆ ಅತ್ಯಂತ ಕಳವಳಕಾರಿ ವಿಚಾರವಾಗಿದೆ. ಸಾಲದ ಬಿಕ್ಕಟ್ಟಿಗೆ ಸಿಲುಕಿರುವ, ಬಿಕ್ಕಟ್ಟು ಅನುಭವಿಸುತ್ತಿರುವ ದೇಶಗಳು ಆರ್ಥಿಕ ಶಿಸ್ತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

Categories
ರಾಷ್ಟ್ರೀಯ ವಾರ್ತೆ

ಏಷ್ಯಾ ಕಪ್‌ನಲ್ಲಿ ಬದ್ಧ ವೈರಿಗಳ ಕಾದಾಟ..!

ಏಷ್ಯಾ ಕಪ್‌ನಲ್ಲಿ ಬದ್ಧ ವೈರಿಗಳ ಕಾದಾಟ..!
– ಮಧ್ಯಾಹ್ನ 3ಗಂಟೆಗೆ ಕ್ಯಾಂಡಿಯಲ್ಲಿ ಸೆಣೆಸಾಡಲಿವೆ ಭಾರತ-ಪಾಕ್

NAMMUR EXPRESS NEWS
ನವದೆಹಲಿ: ಏಷ್ಯಾ ಕಪ್‌ನಲ್ಲಿ ಬದ್ಧ ವೈರಿಗಳ ಕಾದಾಟ ನಡೆಯಲಿದ್ದು, ಕ್ಯಾಂಡಿಯಲ್ಲಿ ಭಾರತ-ಪಾಕ್ ಸೆಣೆಸಾಡಲಿವೆ. ಪಾಕ್ ವೇಗಕ್ಕೆ ಪ್ರತ್ಯುತ್ತರ ಕೊಡಲು ರೋಹಿತ್ ಬ್ಯಾಟರ್ಸ್ ರೆಡಿಯಾಗಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಶ್ರೀಲಂಕಾದ ಕ್ಯಾಂಡಿಯಲ್ಲಿ ಪಂದ್ಯ ನಡೆಯಲಿದ್ದು, ಭಾರತ-ಪಾಕ್ ಈವರೆಗೆ ಒಟ್ಟು 132 ಬಾರಿ ಕಾದಾಡಿದೆ. ಭಾರತ-ಪಾಕಿಸ್ತಾನ ಏಷ್ಯಾ ಕಪ್ ಎ ಗುಂಪಿನಲ್ಲಿದೆ. ಮೂರು ಬಾರಿ ಏಷ್ಯಾ ಕಪ್‌ನಲ್ಲಿ ಸೆಣೆಸುವ ಸಾಧ್ಯತೆಗಳಿವೆ.

ಇಂದು ಲೀಗ್ ಹಂತದ ಪಂದ್ಯದಲ್ಲಿ ಮೊದಲ ಕಾದಾಟವಾಗಿದ್ದು, ಕ್ಯಾಂಡಿ ಮೈದಾನ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿದೆ. ಗಾಯದ ಸಮಸ್ಯೆಯಿಂದಾಗಿ ಕನ್ನಡಿಗ ಕೆ.ಎಲ್.ರಾಹುಲ್ ಆಡ್ತಿಲ್ಲ, ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್,, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಜಸ್ಪೀತ್ ಬುಮ್ರಾ ಫೈನಲ್ ಇಲವೆನ್‌ನಲ್ಲಿ ಆಡುವ ಸಾಧ್ಯತೆಗಳಿವೆ. ಭಾರತ-ಪಾಕ್ ಏಷ್ಯಾಕಪ್‌ನಲ್ಲಿ 13 ಬಾರಿ ಮುಖಾಮುಖಿಯಾಗಿವೆ. ಟೀಂ ಇಂಡಿಯಾ 7 ಬಾರಿ ಪಾಕಿಸ್ತಾನವನ್ನು ಮಣಿಸಿದೆ.

ಟೀಂ ಇಂಡಿಯಾ ಸಂಭಾವ್ಯ ತಂಡ :
– ರೋಹಿತ್ ಶರ್ಮಾ- ಬ್ಯಾಟ್ಸ್‌ಮನ್
– ಶುಭಮನ್ ಗಿಲ್- ಬ್ಯಾಟ್ಸ್‌ಮನ್
– ವಿರಾಟ್ ಕೊಹ್ಲಿ- ಬ್ಯಾಟ್ಸ್‌ಮನ್
– ಸೂರ್ಯ ಕುಮಾರ್ ಯಾದವ್- ಬ್ಯಾಟ್ಸ್‌ಮನ್
– ಇಶಾನ್ ಕಿಶನ್ – ವಿಕೆಟ್ ಕೀಪರ್
– ಹಾರ್ದಿಕ್ ಪಾಂಡ್ಯ- ಆಲ್‌ರೌಂಡರ್
– ರವೀಂದ್ರ ಜಡೇಜಾ- ಆಲ್ ರೌಂಡರ್
– ಅಕ್ಷರ್ ಪಟೇಲ್- ಆಲ್ ರೌಂಡರ್
– ಕುಲದೀಪ್ ಯಾದವ್- ಸ್ಪಿನ್ ಬೌಲರ್
– ಮೊಹಮ್ಮದ್ ಶಮಿ- ಫಾಸ್ಟ್ ಬೌಲರ್
– ಜಸ್ಟೀತ್ ಬುಮ್ರಾ – ಫಾಸ್ಟ್ ಬೌಲರ್

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Categories
ರಾಷ್ಟ್ರೀಯ ವಾರ್ತೆ

ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅರೆಸ್ಟ್ – 538 ಕೋಟಿ ರೂ. ವಂಚನೆ

538 ಕೋಟಿ ರೂ. ವಂಚನೆ
– ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅರೆಸ್ಟ್

NAMMUR EXPRESS  ಮುಂಬೈ: 538 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಕೆನರಾ ಬ್ಯಾಂಕ್ ಗೆ 538 ಕೋಟಿ ರೂ. ವಂಚನೆ ಪ್ರಕರಣದಲ್ಲಿ ನರೇಶ್ ಗೋಯಲ್ ಅವರನ್ನು ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ಶುಕ್ರವಾರ ರಾತ್ರಿ ಬಂಧಿಸಿದೆ. ಕಳೆದ ಮೇ ನಲ್ಲಿ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಗೋಯಲ್ ಅವರ ವಿರುದ್ಧ ವಂಚನೆ, ಕ್ರಿಮಿನಲ್ ಪ್ರೀತೂರಿ ಪ್ರಕರಣ ದಾಖಲಿಸಲಾಗಿತ್ತು. ಈ ಹಿಂದೆ ಸಿಬಿಐ ಅಧಿಕಾರಿಗಳು ನರೇಶ್ ಗೊಯಲ್ ಅವರ ನಿವಾಸ, ಕಚೇರಿ ಸೇರಿ ಮುಂಬೈನ 7 ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ಈ ನಡುವೆ ಗೋಯಲ್ ಎರಡು ಬಾರಿ ಸಮನ್ಸ್ ಸ್ವೀಕರಿಸಿರಲಿಲ್ಲ. ಕೆನರಾ ಬ್ಯಾಂಕ್ ನಿಂದ 848 ಕೋಟಿ ರೂ. ಸಾಲ ಪಡೆದಿದ್ದ ಜೆಟ್ ವೇಸ್ ನ ನರೇಶ್ ಗೋಯಲ್ 538 ಕೋಟಿ ರೂ. ಸಾಲ ಮರುಪಾವತಿಸಿರಲಿಲ್ಲ. ಈ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದರು. ಈ ಸಂಬಂಧ ಕೆನರಾ ಬ್ಯಾಂಕ್ ಸಿಬಿಐಗೆ ದೂರು ನೀಡಿತ್ತು.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!