Categories
ರಾಷ್ಟ್ರೀಯ ವಾರ್ತೆ

ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ!

ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ!
– ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ
– ಎಲ್ಲೆಡೆ ಸಂತಾಪ: ಮರೆಯಾದ ದೇಶದ ಹಿರಿಯ ನಾಯಕ..!

NAMMUR EXPRESS NEWS
ನವದೆಹಲಿ: ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ (92) ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಮೂಲಕ ದೇಶದ ಮಹಾನ್ ಚೇತನ ಮರೆಯಾಗಿದೆ. ವಿಶ್ವ ಮಟ್ಟದಲ್ಲಿ ಭಾರತದ ಆರ್ಥಿಕತೆಯನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್ ನಾಯಕ, ಮಾಜಿ ಪ್ರಧಾನಿ ಸಿಂಗ್ ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆತರಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಕಾರಣ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಆದರೆ, ರಾತ್ರಿ ಹೊತ್ತಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಮನಮೋಹನ್ ಸಿಂಗ್ ಅವರು 1991-96ರ ಅವಧಿಯಲ್ಲಿ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ದೇಶದ ಹಣಕಾಸು ಸಚಿವರಾಗಿ ಪ್ರಾಮುಖ್ಯತೆಯನ್ನು ಗಳಿಸಿದರು. ಯುಪಿಎಯ ಎರಡು ಅವಧಿಯ ಪ್ರಧಾನಿಯಾಗಿ ಅವರು (2004 ಮತ್ತು 2014) ಸೇವೆ ಸಲ್ಲಿಸಿದರು. ಈ ವರ್ಷದ (2024) ಆರಂಭದ ವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಏಪ್ರಿಲ್‌ನಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು. ಗಾಂಧಿ ಕುಟುಂಬ ಹೊರತು ಪಡಿಸಿ ಕಾಂಗ್ರೆಸ್‌ನಲ್ಲಿ ಹೆಚ್ಚು ಅವಧಿಯ ಪ್ರಧಾನಿ ಆಗಿದ್ದ ಹೆಗ್ಗಳಿಕೆ ಇವರದ್ದಾಗಿದೆ.
ಎಲ್ಲೆಡೆ ಸಂತಾಪ: ಕಾಂಗ್ರೆಸ್ ನಾಯಕರು, ದೇಶದ ಮಾಜಿ ಪ್ರಧಾನಿ ನಿಧನಕ್ಕೆ ಎಲ್ಲೆಡೆ ಸಂತಾಪ ವ್ಯಕ್ತವಾಗುತ್ತಿದೆ.

Categories
ರಾಷ್ಟ್ರೀಯ ವಾರ್ತೆ

ದೇಶದೆಲ್ಲೆಡೆ ಸಂಭ್ರಮದ ಕ್ರಿಸ್ಮಸ್‌

ದೇಶದೆಲ್ಲೆಡೆ ಸಂಭ್ರಮದ ಕ್ರಿಸ್ಮಸ್‌
– ಏಸು ಕ್ರಿಸ್ತರ ಜನ್ಮ ಸ್ಮರಣೆಗಾಗಿ ವಿಶೇಷ ಪ್ರಾರ್ಥನೆ
– ಚರ್ಚ್‌ಗಳಲ್ಲಿ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗಿ
– ಡಿ. 25ರಂದು ಚರ್ಚ್‌ಗಳಲ್ಲಿ ಅದ್ದೂರಿ ಕಾರ್ಯಕ್ರಮ

NAMMUR EXPRESS NEWS
ಬೆಂಗಳೂರು/ಮಂಗಳೂರು: ಏಸು ಕ್ರಿಸ್ತರ ಜನ್ಮ ಸ್ಮರಣೆಗಾಗಿ ಆಚರಿಸುವ ಕ್ರಿಸ್ಮಸ್‌ ಹಬ್ಬವನ್ನು ಕ್ರೈಸ್ತ ಬಾಂಧವರು ರಾಜ್ಯದ ಎಲ್ಲೆಡೆ ಸೇರಿ ವಿಶ್ವದ ಮೂಲೆ ಮೂಲೆಯಲ್ಲಿ ಡಿ. 24 ರಾತ್ರಿ ಭಕ್ತಿ, ಶ್ರದ್ಧೆ, ಸಂಭ್ರಮ ಸಡಗರದಿಂದ ಆಚರಿಸಲಾಗಿದ್ದು, ಡಿ.25ರಂದು ಹಬ್ಬ ನಡೆಯಲಿದೆ. ವಿವಿಧ ಚರ್ಚ್‌ಗಳನ್ನು ವಿದ್ಯುದ್ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ರಾತ್ರಿಯೆಲ್ಲಾ ವಿಶೇಷ ಪೂಜೆ, ಪ್ರಾರ್ಥನೆ, ಅಲಂಕಾರ ನಡೆಯಿತು. ಚರ್ಚ್‌ ಆವರಣದಲ್ಲಿ ಮತ್ತು ಕ್ರೈಸ್ತರ ಮನೆ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು (ಗೋದಲಿ) ನಿರ್ಮಿಸಲಾಗಿತ್ತು, ನಕ್ಷತ್ರಗಳನ್ನು ಜೋಡಿಸಲಾಗಿತ್ತು. ಚರ್ಚ್‌ಗಳಲ್ಲಿ ರಾತ್ರಿ ವೇಳೆ ಜರಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕ್ರಿಸ್ಮಸ್‌ ಗೀತೆಗಳನ್ನು (ಕ್ಯಾರಲ್ಸ್‌) ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿ ಯೇಸು ಕಂದನಿಗೆ ನಮಿಸಿದರು. ಕ್ರೈಸ್ತ ಸಮುದಾಯದವರಿಗೆ ಪ್ರಮುಖ ಹಬ್ಬವಾಗಿರುವ ಕ್ರಿಸ್ಮಸ್ ಆಚರಣೆ ನಡೆಯುತ್ತಿದೆ. ಎಲ್ಲಾ ಚರ್ಚ್‌ಗಳಲ್ಲಿ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿದರು. ಡಿ. 25ರಂದು ಚರ್ಚ್‌ ಗಳಲ್ಲಿ ಹಬ್ಬದ ಬಲಿ ಪೂಜೆ, ಇತ್ಯಾದಿ ನಡೆಯುತ್ತಿದೆ. ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.

ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು

Categories
ರಾಷ್ಟ್ರೀಯ ವಾರ್ತೆ

ಒಂದು ರಾಷ್ಟ್ರ, ಒಂದು ಚುನಾವಣೆಗೆ ಗ್ರೀನ್ ಸಿಗ್ನಲ್?!

BREAKING NEWS INDIA

ಒಂದು ರಾಷ್ಟ್ರ, ಒಂದು ಚುನಾವಣೆಗೆ ಗ್ರೀನ್ ಸಿಗ್ನಲ್?!
– ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
– ಇನ್ಮೇಲೆ ನಡೆಯಲಿದೆಯಾ ಒಂದೇ ಬಾರಿ ಎಲ್ಲಾ ಚುನಾವಣೆ?!

NAMMUR EXPRESS NEWS
ನವ ದೆಹಲಿ : ಒಂದು ರಾಷ್ಟ್ರ, ಒಂದು ಚುನಾವಣೆ ಬಿಲ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ರಾಮನಾಥ್ ಕೋವಿಂದ್ ಸಮಿತಿ ಸಲ್ಲಿಸಿರುವ ವರದಿಗೆ ಸಂಪುಟದ ಒಪ್ಪಿಗೆ ದೊರೆತಿದೆ. ಎನ್ಎಎ ಸರ್ಕಾರವು ಈಗ ಮಸೂದೆಯ ಬಗ್ಗೆ ಒಮ್ಮತವನ್ನು ಸಾಧಿಸಲು ಮತ್ತು ವಿಸ್ತ್ರತ ಚರ್ಚೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲು ಯೋಜಿಸಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಈ ಉಪಕ್ರಮವು ಎರಡೂ ಲೋಕಸಭೆಯ ಚುನಾವಣೆಗಳನ್ನು ಸಮನ್ವಯಗೊಳಿಸುವ ಗುರಿಯನ್ನು ಹೊಂದಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ನೀತಿಯು ಲೋಕಸಭೆ ಚುನಾವಣೆಯನ್ನು ರಾಜ್ಯ ವಿಧಾನಸಭೆ ಚುನಾವಣೆಗಳು ಮತ್ತು ದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೊಂದಿಗೆ ನಡೆಸುವ ಗುರಿ ಹೊಂದಿದೆ.

Categories
ರಾಷ್ಟ್ರೀಯ ವಾರ್ತೆ

ದೇಶದೆಲ್ಲೆಡೆ ಪುಷ್ಪ 2 ಹವಾ..!

ದೇಶದೆಲ್ಲೆಡೆ ಪುಷ್ಪ 2 ಹವಾ..!
– ಬಹುನಿರೀಕ್ಷಿತ ಪುಷ್ಪ 2 ಚಿತ್ರ ಬಿಡುಗಡೆ
– ಚಿತ್ರಮಂದಿರಲ್ಲಿ ಕಾಲ್ತುಳಿತದಿಂದ ಮಹಿಳೆ ಸಾವು, ಬಾಲಕನ ಸ್ಥಿತಿ ಗಂಭೀರ

NAMMUR EXPRESS NEWS
ಹೈದರಾಬಾದ್‌: ಬಹುನಿರೀಕ್ಷಿತ ಪುಷ್ಪ 2 ಚಿತ್ರ ದೇಶದ ಎಲ್ಲೆಡೆ ಬಿಡುಗಡೆಯಾಗಿದೆ. ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.
ಬೆಂಗಳೂರು ಸೇರಿದಂತೆ ಹಲವು ಚಿತ್ರಮಂದಿರಗಳ ಬೆಳಗ್ಗಿನ ಶೋ ರದ್ದುಪಡಿಸಲಾಗಿದೆ. ರಾಜ್ಯದ ಬಹುತೇಕ ಕಡೆ ಕನ್ನಡ ಅವತರಿಣಿಕೆಯ ಸಿನಿಮಾ ಜನರ ಮನ ಗೆಲ್ಲುತ್ತಿದೆ.

ಚಿತ್ರಮಂದಿರಲ್ಲಿ ಕಾಲ್ತುಳಿತದಿಂದ ಮಹಿಳೆ ಸಾವು!

ಟಾಲಿವುಡ್ ತವರು ಹೈದರಾಬಾದ್‌ನಲ್ಲಿ ಭಾರೀ ಅವಘಡವೊಂದು ಸಂಭವಿಸಿದೆ. ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿಕ್ಕಡ್‌ಪಲ್ಲಿಯ ಥಿಯೇಟರ್‌ನಲ್ಲಿ ಡಿ. 4 ರಂದು ತಡರಾತ್ರಿ ಕಾಲ್ತುಳಿತ ಸಂಭವಿಸಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 12 ವರ್ಷದ ಮಗ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಪುಷ್ಪ 2- ದಿ ರೂಲ್ ಚಿತ್ರ ಡಿಸೆಂಬರ್ 5ರ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅದಕ್ಕೂ ಮುನ್ನ ನಡೆದ ಪ್ರೀಮಿಯ‌ರ್ ಶೋ ನೋಡಲು ಹೈದರಾಬಾದ್‌ನ ಕುಟುಂಬ ಚಿತ್ರಮಂದಿರಕ್ಕೆ ಬಂದಿತ್ತು. ರೇವತಿ (39) ಮೃತ ಮಹಿಳೆ. ಅವರ ಒಂಬತ್ತು ವರ್ಷದ ಮಗ ಶ್ರೀತೇಜಾನನ್ನು ಆಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ, ತೇಜಾ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತಡರಾತ್ರಿಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದಿಲ್‌ಸುಖ್‌ನಗರ ನಿವಾಸಿಯಾದ ರೇವತಿ, ಶ್ರೀ ತೇಜಾ ಅವರ ಪತಿ ಭಾಸ್ಕ‌ರ್ ಮತ್ತು ಕಿರಿಯ ಮಗುವಿನೊಂದಿಗೆ ಆರ್‌ಟಿಸಿ ಕ್ರಾಸ್‌ ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ಗೆ ಬಂದಿದ್ದರು. ರಾತ್ರಿ 10.30ರ ಸುಮಾರಿಗೆ ಕುಟುಂಬದೊಂದಿಗೆ ಥಿಯೇಟರ್‌ನಿಂದ ಹೊರಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Categories
ರಾಷ್ಟ್ರೀಯ ವಾರ್ತೆ

ಇನ್ಮುಂದೆ ಅಕೌಂಟಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ಖಾತೆ ಬಂದ್‌!

ಇನ್ಮುಂದೆ ಅಕೌಂಟಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ಖಾತೆ ಬಂದ್‌!
– ಖಾತೆದಾರರು ಎಷ್ಟು ಮೊತ್ತವನ್ನು ಇಟ್ಟುಕೊಳ್ಳಬೇಕು?
– ಏನಿದು ಹೊಸ ನಿಯಮ? ಯಾಕೆ ಅಕೌಂಟ್ ಬಂದ್?

NAMMUR EXPRESS NEWS
ನವದೆಹಲಿ : ಭಾರತೀಯ ಬ್ಯಾಂಕ್‌ಗಳು ಹೊಸ ನೀತಿಯನ್ನು ಪರಿಚಯಿಸಿದ್ದು, ಬ್ಯಾಂಕ್‌ ಖಾತೆದಾರರು ತಮ್ಮ ಖಾತೆಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಈ ಅಗತ್ಯವನ್ನು ಪೂರೈಸಲು ವಿಫಲವಾದರೆ ಶಾಶ್ವತ ಖಾತೆ ಮುಚ್ಚುವಿಕೆಗೆ ಕಾರಣವಾಗಬಹುದು. ಹೊಸ ನೀತಿಯ ಪ್ರಕಾರ, ಗ್ರಾಹಕರು ತಮ್ಮ ಖಾತೆಗಳಲ್ಲಿ ಎಲ್ಲಾ ಸಮಯದಲ್ಲೂ ಸೀಮಿತ ಕನಿಷ್ಠ ಬ್ಯಾಲೆನ್ಸ್ ಅನ್ನು ಹೊಂದಿರಬೇಕಾಗುತ್ತದೆ. ಬ್ಯಾಂಕ್ ಬ್ಯಾಲೆನ್ಸ್‌ ಮೊತ್ತದ ಅವಶ್ಯಕತೆಯು ಬ್ಯಾಂಕುಗಳು ಮತ್ತು ಖಾತೆ ಪ್ರಕಾರಗಳಲ್ಲಿ ಬದಲಾಗುತ್ತದೆ. ಖಾತೆದಾರರು ತಮ್ಮ ಖಾತೆಗಳನ್ನು ಸಕ್ರಿಯವಾಗಿ ಬಳಸುತ್ತಾರೆ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸ್ಥಿರತೆಗೆ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ದೇಶದ ಬ್ಯಾಂಕಿಂಗ್‌ ಸಂಸ್ಥೆಗಳ ನಡುವಿನ ಚರ್ಚೆಯ ನಂತರ ಈ ನೀತಿಯನ್ನು ಪ್ರಾರಂಭಿಸಲಾಗಿದೆ. ದೇಶದ ಕೇಂದ್ರ ಬ್ಯಾಂಕಿಂಗ್‌ ಪ್ರಾಧಿಕಾರವಾಗಿ, ಗ್ರಾಹಕರು ಮತ್ತು ಬ್ಯಾಂಕ್‌ಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಈ ಕ್ರಮ ಕೈಗೊಂಡಿದೆ.

ಕನಿಷ್ಟ ಬ್ಯಾಲೆನ್ಸ್ ನಿರ್ವಹಿಸುವುದರಿಂದ ಪ್ರಯೋಜನಗಳೇನು?

ಬ್ಯಾಂಕ್‌ ಖಾತೆಗಳಲ್ಲಿ ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.
ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಇದು ಸಹಾಯ ಮಾಡುತ್ತದೆ. ಸಾಕಷ್ಟು ಬ್ಯಾಲೆನ್ಸ್‌ಗಳು ವ್ಯವಹಾರಗಳು ಮತ್ತು ವ್ಯಕ್ತಿಗಳಿಗೆ ಸಾಲ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಲು ಬ್ಯಾಂಕ್‌ಗಳನ್ನು ಸಕ್ರಿಯಗೊಳಿಸುತ್ತದೆ, ಇದರಿಂದಾಗಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೆಚ್ಚುವರಿಯಾಗಿ, ಬ್ಯಾಂಕ್‌ಗಳು ಡಿಜಿಟಲ್‌ ಬ್ಯಾಂಕಿಂಗ್‌ ಸೇವೆಗಳು ಮತ್ತು ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಪರಿಚಯಿಸಿವೆ, ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್‌ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಅನೂವು ಮಾಡಿಕೊಡುತ್ತದೆ.

ಖಾತೆದಾರರು ಎಷ್ಟು ಮೊತ್ತವನ್ನು ಇಟ್ಟುಕೊಳ್ಳಬೇಕು?

ಭಾರತದ ಅತಿದೊಡ್ಡ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2020 ರಲ್ಲಿ ಉಳಿತಾಯ ಖಾತೆಯಲ್ಲಿ ಪ್ರತಿ ತಿಂಗಳು ಕನಿಷ್ಠ ಬ್ಯಾಲೆನ್ಸ್‌ನ ಅಗತ್ಯವನ್ನು ರದ್ದುಗೊಳಿಸಿದೆ. ಎಸ್‌ಬಿಐ ಬ್ಯಾಂಕ್ ಹೊಂದಿರುವವರು ತಮ್ಮ ಖಾತೆಯಲ್ಲಿ ಮಾಸಿಕ ಸರಾಸರಿ 3000, 2000 ಮತ್ತು 1000 ರೂ. ಇದಲ್ಲದೆ, ಖಾಸಗಿ ವಲಯದ ಬ್ಯಾಂಕ್‌ ಎಚ್‌ಡಿಎಫ್‌ಸಿಯಲ್ಲಿ, ಮೆಟ್ರೋ ನಗರಗಳಲ್ಲಿ ಖಾತೆದಾರರ ಸರಾಸರಿ ಮಾಸಿಕ ಬ್ಯಾಲೆನ್ಸ್ 10,000 ರೂ ಆಗಿದ್ದರೆ, ಸಣ್ಣ ನಗರಗಳಲ್ಲಿ ಈ ಮೊತ್ತವನ್ನು 5000 ರೂ ಇಟ್ಟುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದು 2500 ರೂ. ಇಡುವುದನ್ನು ಕಡ್ಡಾಯಗೊಳಿಸಲಾಗಿದೆ. ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ 10,000 ರೂ., ಸಣ್ಣ ಪಟ್ಟಣಗಳಲ್ಲಿ 5000 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 2000 ರೂ.ಗಳ ಕನಿಷ್ಠ ಮೊತ್ತದ ಉಳಿತಾಯ ಖಾತೆಯನ್ನು ICCI ಬ್ಯಾಂಕ್‌ನಲ್ಲಿ ನಿರ್ವಹಿಸುವುದು ಕಡ್ಡಾಯವಾಗಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆದಾರರು ಮೂರು ತಿಂಗಳವರೆಗೆ ರೂ 20,000 ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ. ಆದರೆ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 10,000 ರಿಂದ 500 .

ಕನಿಷ್ಠ ಮೊತ್ತವನ್ನು ಏಕೆ ಇಡಬೇಕು?

ಭಾರತೀಯ ಬ್ಯಾಂಕ್‌ಗಳಿಂದ ಕಡ್ಡಾಯ ಖಾತೆ ಬ್ಯಾಲೆನ್ಸ್‌ನ ಪರಿಚಯವು ಹಣಕಾಸಿನ ಶಿಸ್ತನ್ನು ಉತ್ತೇಜಿಸಲು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ದಂಡ ಅಥವಾ ಖಾತೆಯನ್ನು ಮುಚ್ಚುವುದನ್ನು ತಪ್ಪಿಸಲು ಗ್ರಾಹಕರು ತಮ್ಮ ಬ್ಯಾಂಕ್‌ಗಳು ಸೂಚಿಸಿದ ಕನಿಷ್ಠ ಬ್ಯಾಲೆನ್ಸ್‌ ಅನ್ನು ನಿರ್ವಹಿಸಬೇಕು. ಈ ನಿಯಮಗಳನ್ನು ಅನುಸರಿಸುವ ಮೂಲಕ, ವ್ಯಕ್ತಿಗಳು ಭಾರತದಲ್ಲಿ ಹೆಚ್ಚು ಸ್ಥಿರ ಮತ್ತು ಬಲವಾದ ಬ್ಯಾಂಕಿಂಗ್ ಪರಿಸರಕ್ಕೆ ಕೊಡುಗೆ ನೀಡಬಹುದು.

Categories
ರಾಷ್ಟ್ರೀಯ ವಾರ್ತೆ

ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿ ಮಸೂದೆಗೆ ಸೂಚನೆ

ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿ ಮಸೂದೆಗೆ ಸೂಚನೆ
– ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರ
– ಬ್ಯಾಂಕ್ ಖಾತೆದಾರರಿಗೆ 4 ನಾಮಿನಿ ಗೆ ಅವಕಾಶ

NAMMUR EXPRESS NEWS
ನವದೆಹಲಿ: ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ 2024ರ ಮೂಲಕ ಪ್ರಸ್ತಾಪಿಸಲಾದ ಬದಲಾವಣೆ ಗಳು ಬ್ಯಾಂಕಿಂಗ್ ವಲಯದ ಆಡಳಿತ ಬಲಪಡಿಸಲಿದೆ ಮತ್ತು ಗ್ರಾಹಕರ ಅನುಕೂಲತೆ ಹೆಚ್ಚಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಲೋಕಸಭೆಯ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಸೂದೆ ಮಂಡಿಸಿದ ಸಚಿವರು, ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ-1934, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ-1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1970 ಮತ್ತು ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1980ರಲ್ಲಿ ಬದಲಾವಣೆಗಳನ್ನು ತರಲು ಒಟ್ಟು 19 ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಬ್ಯಾಂಕ್ ಖಾತೆದಾರರು ತಮ್ಮ ಖಾತೆಯಲ್ಲಿ ನಾಲ್ಕು ನಾಮಿನಿಗಳನ್ನು ಹೊಂದಲು ಈ ಮಸೂದೆ ಪ್ರಸ್ತಾಪಿಸುತ್ತದೆ.

ಒಟ್ಟಾರೆ ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಪಾಡುವ ಹಲವು ಅಂಶಗಳು ಈ ಮಸೂದೆಯಲ್ಲಿವೆ. ಬ್ಯಾಂಕಿಂಗ್ ಕ್ಷೇತ್ರವು ವರ್ಷಗಳಲ್ಲಿ ವಿಕಸನಗೊಂಡಿರುವುದರಿಂದ ಮತ್ತು ಬ್ಯಾಂಕ್ ಆಡಳಿತ, ಹೂಡಿಕೆದಾರರ ರಕ್ಷಣೆಯನ್ನು ಸುಧಾರಿಸುವ ದೃಷ್ಟಿಯಿಂದ ಐದು ಕಾಯ್ದೆಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡುವುದು ಅಗತ್ಯವಾಗಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ, 2024ನ್ನು ಲೋಕಸಭೆ ಅಂಗೀಕರಿಸಿದೆ. ಬ್ಯಾಂಕ್ ಖಾತೆದಾರರಿಗೆ ನಾಲ್ಕು ಫಲಾನುಭವಿಗಳನ್ನು ನಾಮ ನಿರ್ದೇಶನ ಮಾಡುವ ನಿಬಂಧನೆಗಳನ್ನು ಈ ಕಾಯ್ದೆ ಪರಿಚಯಿಸಿದೆ. ಸಂವಿಧಾನದ (97ನೇ ತಿದ್ದುಪಡಿ) ಕಾಯ್ದೆ-2011ಕ್ಕೆ ಅನುಗುಣವಾಗಿ, ಅಧ್ಯಕ್ಷ ಮತ್ತು ಪೂರ್ಣಾವಧಿಯ ನಿರ್ದೇಶಕರನ್ನು ಹೊರತುಪಡಿಸಿ ಸಹಕಾರಿ ಬ್ಯಾಂಕ್‌ಗಳಲ್ಲಿನ ನಿರ್ದೇಶಕರ ಅಧಿಕಾರಾವಧಿಯನ್ನು 8 ರಿಂದ 10 ವರ್ಷಗಳವರೆಗೆ ವಿಸ್ತರಿಸಲು ತಿದ್ದುಪಡಿ ಪ್ರಸ್ತಾಪಿಸಿದೆ. ಕೇಂದ್ರ ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರು ರಾಜ್ಯ ಸಹಕಾರಿ ಬ್ಯಾಂಕ್‌ಗಳಲ್ಲಿ ಮಂಡಳಿಯ ಸ್ಥಾನಗಳನ್ನು ಹೊಂದಲು ಅನುಮತಿ ನೀಡಲೂ ಮಸೂದೆ ಪ್ರಸ್ತಾಪಿಸಿದೆ.

Categories
ರಾಷ್ಟ್ರೀಯ ವಾರ್ತೆ

ಇನ್ನು ಹೊಸ ಪಾನ್ ಕಾರ್ಡ್: ಕ್ಯೂ ಆರ್ ಕೋಡ್ ಇರುತ್ತೆ!

ಇನ್ನು ಹೊಸ ಪಾನ್ ಕಾರ್ಡ್: ಕ್ಯೂ ಆರ್ ಕೋಡ್ ಇರುತ್ತೆ!
– ಡಿಜಿಟಲ್ ಇಂಡಿಯಾ ಉತ್ತೇಜಿಸಲು ಸರ್ಕಾರದ ಪ್ಲಾನ್
– ಹಳೆಯ ಪ್ಯಾನ್ ನವೀಕರಿಸಲು ಶೀಘ್ರದಲ್ಲಿ ವೆಬ್ಸೈಟ್ ಪ್ರಾರಂಭ

NAMMUR EXPRESS NEWS
ನವ ದೆಹಲಿ: ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸಲು ಸರ್ಕಾರ ಪ್ಯಾನ್ 2.0 ಅನ್ನು ಅನುಮೋದಿಸಿದೆ. ಇದು ಪ್ಯಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ. ಈ QR ಕೋಡ್ ಸುರಕ್ಷಿತವಾಗಿರುತ್ತದೆ. ಸ್ಕ್ಯಾನ್ ಮಾಡಿದ ನಂತರ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಈಗ ಈ QR ಕೋಡ್ ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಕಾಣಿಸುತ್ತದೆ. PAN 2.0 ನಲ್ಲಿರುವ QR ಕೋಡ್ ನಕಲಿ PAN ಕಾರ್ಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಪ್ಯಾನ್ ಕಾರ್ಡ್ ಪರಿಶೀಲನೆ ಸುಲಭವಾಗುತ್ತದೆ. QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮಾಹಿತಿಯನ್ನು ನೇರವಾಗಿ ಪರಿಶೀಲಿಸಬಹುದು. ನೀವು ಅದನ್ನು ಮೊಬೈಲ್ ಅಪ್ಲಿಕೇಶನ್ ಅಥವಾ ಪೋರ್ಟಲ್ ಮೂಲಕ ಸ್ಕ್ಯಾನ್ ಮಾಡಬಹುದು. ತಕ್ಷಣವೇ ಮಾಹಿತಿಯನ್ನು ಪಡೆಯಬಹುದು. ಕ್ಯೂಆರ್ ಕೋಡ್ ಹೆಸರು, ಹುಟ್ಟಿದ ದಿನಾಂಕ, ಪ್ಯಾನ್ ಸಂಖ್ಯೆ ಮತ್ತು ಇತರ ವಿವರಗಳನ್ನು ಎನ್‌ಕ್ರಿಪ್ಟ್ ಮಾಡಿದ ರೂಪದಲ್ಲಿ ಒಳಗೊಂಡಿರುತ್ತದೆ. ಇದು ಹೆಚ್ಚು ಸುರಕ್ಷಿತವಾಗಿರುತ್ತದೆ. ವಂಚನೆ ನಿಲ್ಲುತ್ತದೆ, ಕ್ಯೂಆರ್ ಕೋಡ್ ನಕಲಿ ಪ್ಯಾನ್ ಕಾರ್ಡ್ ಮಾಡಲು ಕಷ್ಟವಾಗುತ್ತದೆ. ಡಿಜಿಟಲ್ ವಹಿವಾಟುಗಳಲ್ಲಿ ಸಹಾಯ, ಇದನ್ನು ತಕ್ಷಣವೇ ಸ್ಕ್ಯಾನ್ ಮಾಡಬಹುದು. ಬ್ಯಾಂಕ್, ಸಾಲ ಅಥವಾ ಇತರ ಹಣಕಾಸು ಸೇವೆಗಳಲ್ಲಿ ಬಳಸಬಹುದು. ಪೇಪರ್ ಲೆಸ್ ಪರಿಶೀಲನೆ, ಇನ್ನು ಮುಂದೆ ಹಾರ್ಡ್ ಕಾಪಿ ಅಗತ್ಯವಿಲ್ಲ, ಡಿಜಿಟಲ್ ಪರಿಶೀಲನೆಯಿಂದ ಕಾಮಗಾರಿ ಚುರುಕುಗೊಳ್ಳಲಿದೆ. QR ಕೋಡ್ ಸಹಾಯದಿಂದ, ಪ್ಯಾನ್ ಅನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಪ್ರವೇಶಿಸಬಹುದು. ಹಳೆಯ ಪ್ಯಾನ್ ಅನ್ನು ನವೀಕರಿಸಬಹುದಾದ ಪೋರ್ಟಲ್ ಅನ್ನು ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಲಿದೆ. ನೀವು ಕೇವಲ ಆಧಾರ್ ಲಿಂಕ್ ಮಾಡಿ ಮತ್ತು ಹೊಸ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಈ ನವೀಕರಣವು ಡಿಜಿಟಲ್ ಮತ್ತು ಸುರಕ್ಷಿತ ಹಣಕಾಸು ವ್ಯವಸ್ಥೆಯ ಕಡೆಗೆ ಒಂದು ದೊಡ್ಡ ಹೆಜ್ಜೆಯಾಗಿದೆ. ನಿಮ್ಮ ಪ್ಯಾನ್ ಕಾರ್ಡ್ ಈಗ ಹೆಚ್ಚು ಆಧುನಿಕ ಮತ್ತು ಸುರಕ್ಷಿತವಾಗಿರಲಿದೆ.

Categories
ರಾಷ್ಟ್ರೀಯ ವಾರ್ತೆ

ಕರ್ನಾಟಕ ಟಾಪ್ ನ್ಯೂಸ್

ಕರ್ನಾಟಕ ಟಾಪ್ ನ್ಯೂಸ್

– ಅಜ್ಜಿ ರೇಪ್ ಮಾಡಲು ಹೋಗಿ, ಅಜ್ಜ ಅಜ್ಜಿ ಡಬಲ್ ಮರ್ಡರ್!
– ಚಿಕ್ಕಮಗಳೂರಲ್ಲಿ ಡಬಲ್ ಮರ್ಡರ್ ಮಾಡಿದ ಸೈಕೊ!
– ಎಸ್ಸಾರ್ ಗ್ರೂಪ್ ಸಹ-ಸಂಸ್ಥಾಪಕ ಶಶಿಕಾಂತ್ ರೂಯಾ ವಿಧಿವಶ
– ಬೆಂಗಳೂರು: ಸ್ನಾನಕ್ಕೆ ಹೋಗಿದ್ದ ಮಹಿಳೆ ನಿಗೂಢ ಸಾವು!
– ಬೆಂಗಳೂರು: ಕಾರಿನ ಟೈಯರ್ ಹರಿದು ಮಗು ದುರ್ಮರಣ
– ಹೈದರಾಬಾದ್: ಪೂರಿ ತಿನ್ನಲು ಹೋಗಿ 11ರ ಬಾಲಕ ಸಾವು!

NAMMUR EXPRESS NEWS
ನವದೆಹಲಿ: ಭಾರತದ ಬಿಲಿಯನೇರ್​ಗಳಲ್ಲಿ ಒಬ್ಬರೆನಿಸಿದ್ದ ಹಾಗೂ ಎಸ್ಸಾರ್ ಗ್ರೂಪ್​ನ ಸಹ-ಸಂಸ್ಥಾಪಕರಾದ ಶಶಿಕಾಂತ್ ರೂಯಾ ನ. 25ರಂದು ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ಕುಟುಂಬ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ ಮಾಹಿತಿ ಪ್ರಕಾರ ಮಧ್ಯರಾತ್ರಿ 11:55ಕ್ಕೆ ಕೊನೆಯುಸಿರೆಳೆದಿದ್ದಾರೆ. ಇತ್ತೀಚಿನ ವರ್ಷಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಚಿಕಿತ್ಸೆಗಾಗಿ ಅಮೆರಿಕಕ್ಕೂ ಹೋಗಿದ್ದರು. ಕಳೆದ ತಿಂಗಳಷ್ಟೇ ಅವರು ಭಾರತಕ್ಕೆ ವಾಪಸ್ಸಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು, ಉದ್ಯಮಿಗಳು ಶಶಿ ರೂಯಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ‘ಉದ್ಯಮ ವಲಯದಲ್ಲಿ ಶಶಿಕಾಂತ್ ರೂಯಾ ಅವರದ್ದು ಮೇರು ವ್ಯಕ್ತಿತ್ವ. ತಮ್ಮ ಬದ್ಧತೆಯಿಂದ ಅವರು ಭಾರತದಲ್ಲಿ ಬಿಸಿನೆಸ್ ಸ್ವರೂಪವನ್ನು ಬದಲಿಸಿದ್ದರು. ಅವರ ಸಾವು ನಿಜಕ್ಕೂ ಬೇಸರ ತಂದಿದೆ. ಅರ ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ನನ್ನ ಸಂತಾಪಗಳಿರುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಶಿ ರೂಯಾ ಅವರು ದೇಶ ವಿದೇಶಗಳಲ್ಲಿ ಹಲವು ಉದ್ಯಮ ಸಂಘಟನೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಭಾರತೀಯ ವಾಣಿಜ್ಯ ಮತ್ತು ಉದ್ಯಮ ಚೇಂಬರ್ಸ್​ನ ಮ್ಯಾನೇಜಿಂಗ್ ಕಮಿಟಿಯಲ್ಲಿ ಅವರು ಇದ್ದರು. ಭಾರತ ಅಮೆರಿಕ ಜಂಟಿ ಬಿಸಿನೆಸ್ ಮಂಡಳಿಯ ಅಧ್ಯಕ್ಷರಾಗಿದ್ದರು. ಭಾರತೀಯ ಹಡಗು ಮಾಲೀಕರ ಸಂಘದ ಅಧ್ಯಕ್ಷರಾಗಿದ್ದರು. ಪ್ರಧಾನಿಗಳ ಇಂಡೋ ಯುಎಸ್ ಸಿಇಒ ಫೋರಂನ ಸದಸ್ಯರಾಗಿದ್ದರು. ಭಾರತ ಜಪಾನ್ ಬಿಸಿನೆಸ್ ಕೌನ್ಸಿಲ್​ನಲ್ಲೂ ಸದಸ್ಯರಾಗಿದ್ದರು.

* ಬೆಂಗಳೂರು: ಸ್ನಾನಕ್ಕೆ ಹೋಗಿದ್ದ ಮಹಿಳೆ ನಿಗೂಢ ಸಾವು!

ಬೆಂಗಳೂರು: ಸಂಬಂಧಿಕರ ಮನೆಗೆ ಆಗಮಿಸಿದ್ದ ಮಹಿಳೆಯೊಬ್ಬರು ಸ್ನಾನಕ್ಕೆ ಹೋಗಿದ್ದಾಗ ಬಾತ್‌ರೂಮ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ನಡೆದಿದೆ. ಮಹಿಳೆಯ ಮುಖದಲ್ಲಿ ಪರಚಿದ ಗಾಯಗಳಾಗಿದ್ದು, ಮೃತ ಮಹಿಳೆಯನ್ನು ಲಕ್ಷ್ಮಿ (25) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ತಿರುಪತಿ ಮೂಲದ ಮಹಿಳೆ ತನ್ನ ಪತಿಯೊಂದಿಗೆ ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಬಳಿಕ ಅಡೇಪೇಟೆಯಲ್ಲಿರುವ ಸಂಬಂಧಿ ಸುಹಾಸಿನಿ ಎಂಬುವವರ ಮನೆಗೆ ತೆರಳಿದ್ದರು.ಮನೆಯಲ್ಲಿ ಬಾತ್‌ರೂಮ್‌ ನಲ್ಲಿ ನಗ್ನ ಹಾಗೂ ಮುಖದಲ್ಲಿ ಪರಚಿದ ಗಾಯಗಳಾಗಿರುವ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಈ ಸಾವು ನೆಲಮಂಗಲ ಟೌನ್‌ ಪೊಲೀಸರಿಗೆ ತಲೆನೋವಾಗಿದೆ. ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಪ್ರಾಥಮಿಕ ತನಿಖೆಯಲ್ಲಿ ಸಾವಿಗೆ ಕಾರಣ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ನಿಜಾಂಶ ಬೆಳಕಿಗೆ ಬರಲಿದೆ.

* ಬೆಂಗಳೂರು: ಕಾರಿನ ಟೈಯರ್ ಹರಿದು 2 ವರ್ಷದ ಮಗು ದುರ್ಮರಣ

ಬೆಂಗಳೂರು: ಕಾರು ಡಿಕ್ಕಿಯಾಗಿ 2 ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಆನೇಕಲ್ ಪಟ್ಟಣದ ಶನೇಶ್ವರ ದೇವಸ್ಥಾನದ ಸಮೀಪ ನಡೆದಿದೆ. ಬೆಂಗಳೂರಿನ ಕಡಲೆಕಾಯಿ ಪರಿಷೆಗೆ ತನ್ನ ಪೋಷಕರ ಜೊತೆ ಬಂದಿದ್ದ ಎರಡು ವರ್ಷದ ಮಗು ಏಕಾಶ್ ಈ ಅಪಘಾದಲ್ಲಿ ದುರ್ಮರಣ ಹೊಂದಿದೆ. ಮಗುವಿನ ದೇಹದ ಮೇಲೆ ಕಾರಿನ ಟೈಯರ್ ಹರಿದ ಕಾರಣ ಮಗು ಸ್ಥಳದಲ್ಲೇ ಸಾವನ್ನಪಿದ್ದು, ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಚಿಕ್ಕಮಗಳೂರು: ಅಜ್ಜಿ ರೇಪ್ ಮಾಡಲು ಹೋಗಿ, ಅಜ್ಜ ಅಜ್ಜಿ ಡಬಲ್ ಮರ್ಡರ್ ಮಾಡಿದ ಸೈಕೊ!

ಚಿಕ್ಕಮಗಳೂರು: ಅಜ್ಜ ಅಜ್ಜಿ ಡಬಲ್ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಸೈಕೊ ಕ್ಯಾಬ್ ಡ್ರೈವರ್ ನನ್ನು ಘಟನೆ ನಡೆದ 48 ಗಂಟೆಗಳ ಒಳಗೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ಪೊಲೀಸರು ಬಂಧಿಸಿದ್ದಾರೆ. ಅಜ್ಜಿ ರೇಪ್ ಮಾಡಲು ಹೋಗಿ ಅಜ್ಜ ಅಜ್ಜಿ ಇಬ್ಬರನ್ನೂ ಮುಗಿಸಿದ ನಿಶಾಂತ್ ಕೊಲೆಗೆ ಕಾರಣವಾದ ರೋಚಕತೆಯನ್ನು ಪೊಲೀಸರು ಕೊನೆಗೂ ಬಾಯಿ ಬಿಡಿಸಿದ್ದಾರೆ. ನ. 22 ರಂದು ಬೆಳ್ಳಂಬೆಳಗ್ಗೆ ಮುತ್ತೋಡಿ ಅಭಯಾರಣ್ಯಕ್ಕೆ ಹೊಂದಿಕೊಂಡಿರೋ ಕೊಳಗಾಮೆ ಗ್ರಾಮದ ತೋಟದ ಲೈನ್ ನಲ್ಲಿ ಕೂಲಿ ಕಾರ್ಮಿಕರಾದ ಬಸಪ್ಪ, ಲಲತಾ ಎನ್ನುವ ವೃದ್ದ ದಂಪತಿಗಳು ಹೆಣವಾಗಿ ಬಿದ್ದಿದ್ದರು.
ನಿಶಾಂತ್ ವೃದ್ದ ದಂಪತಿಗಳಿಗೆ ಹತ್ತಿರದ ಸಂಬಂಧಿ ಎನ್ನುವ ಮಾಹಿತಿಯೂ ಪೊಲೀಸರಿಗೆ ಲಭ್ಯವಾಯಿತು. ಕೊಲೆ ನಡೆದಿದ್ದು ಹಣಕ್ಕಾಗಿ ಅಲ್ಲ‌, ಅತ್ಯಾಚಾರಕ್ಕೆ ಯತ್ನಿಸಿದಾಗ ವಿರೋಧ ಪಡಿಸಿದ ಇಬ್ಬರನ್ನು ಕೊಂದು ಪರಾರಿಯಾಗಿದ್ದ ಅನ್ನೋದು ತಿಳಿದು ಬಂದಿದೆ. ಮಾರಕ ಕಾಯಿಲೆಗೆ ತುತ್ತಾಗಿದ್ದ ಎಂದು ಸ್ನೇಹಿತರು ಹೇಳಿದ್ದರಿಂದ ಅಜ್ಜಿಯನ್ನು ರೇಪ್ ಮಾಡಲು ಮುಂದಾಗಿದ್ದ ಇವನ ಸೈಕೊ ಟ್ರೀಟ್ ಮೆಂಟ್ ಗೆ ಪೊಲೀಸರಿಗೆ ಬೆಚ್ಚಿ ಬಿದ್ದಿದ್ದಾರೆ. ರಾತ್ರೋರಾತ್ರಿ ಹತ್ಯೆ ಮಾಡಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಪಾಪಿಯನ್ನು ಮಲ್ಲಂದೂರು ಪಿಎಸ್‌ಐ ಗುರು ಸಜ್ಜನ್ ನೇತೃತ್ವದ ತಂಡ ಬಂಧಿಸಿದ್ದಾರೆ.

* ಹೈದರಾಬಾದ್: ಮೂರು ಪೂರಿ ಒಟ್ಟಿಗೆ ತಿನ್ನಲು ಹೋಗಿ 11ರ ಬಾಲಕ ಸಾವು

ಹೈದರಾಬಾದ್: 11 ವರ್ಷದ ಬಾಲಕ ಪೂರಿ ತಿಂದು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಸಿಕಂದರಾಬಾದ್‌ನ ಶಾಲೆಯೊಂದರಲ್ಲಿ ನಡೆದಿದೆ. ಮೃತ ಬಾಲಕನನ್ನು 6ನೇ ತರಗತಿಯ ವಿಕಾಸ್ ಜೈನ್ ಎಂದು ಗುರುತಿಸಲಾಗಿದೆ.
ಸಿಕಂದರಾಬಾದ್‌ನ ತಿವೋಲಿ ಥಿಯೇಟರ್ ಬಳಿ ಇರುವ ಶಾಲೆಯಲ್ಲಿ ವಿಕಾಸ್ ಜೈನ್ 6ನೇ ತರಗತಿಯಲ್ಲಿ ಓದುತ್ತಿದ್ದ. ಮನೆಯಿಂದ ತಂದ ಪೂರಿಯನ್ನು ಮಧ್ಯಾಹ್ನ ಊಟದ ಸಮಯದಲ್ಲಿ ತಿನ್ನುವಾಗ ಈ ಘಟನೆ ಸಂಭವಿಸಿದೆ.

Categories
ರಾಷ್ಟ್ರೀಯ ವಾರ್ತೆ

ರಂಗ ಕಲಾವಿದರಿದ್ದ ಮಿನಿ ಬಸ್ ಅಪಘಾತ!

ರಂಗ ಕಲಾವಿದರಿದ್ದ ಮಿನಿ ಬಸ್ ಅಪಘಾತ!
– ಗೂಗಲ್ ಮ್ಯಾಪ್ ಎಡವಟ್ಟಿಗೆ ಇಬ್ಬರ ಬಲಿ?
– ಕಣ್ಣೂರಿನ ಆಸ್ಪತ್ರೆಗೆ ದಾಖಲು

NAMMUR EXPRESS NEWS
ಕಣ್ಣೂರು
: ರಂಗಭೂಮಿ ಕಲಾವಿದರನ್ನು ಹೊತ್ತು ಸಾಗುತ್ತಿದ್ದ ಮಿನಿಬಸ್‌ವೊಂದು ಕಣ್ಣೂರಿನ ಸಮೀಪದ ಕೆಲಕಮ್ ಬಳಿ ಅಪಘಾತಕ್ಕೆ ಒಳಗಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್ ಸಾವನ್ನಪ್ಪಿರುವ ದುರ್ದೈವಿಗಳು. ಈ ಇಬ್ಬರು ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಮತ್ತೋರ್ವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಶಬ್ದ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಮಿನಿ ಬಸ್ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬಸ್ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅನಾಹುತ ನಡೆದಿದೆ. ನ. 15ರಂದು ಬೆಳಗ್ಗೆ 4 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.  ಕಯಂಕುಮಂ ದೇವ ಕಮ್ಯೂನಿಕೇಷನ್ ರಂಗಭೂಮಿ ಗುಂಪು ಕಡನ್ನಪಲ್ಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಸ್ ವಯನಾಡ್‌ನ ಸುಲ್ತಾನ್ ಬತ್ತೇರಿ ಕಡೆ ಸಾಗುತ್ತಿತ್ತು. ಪೆರಿಯಾ ಚೂರ್ಮದ ನೆಡುಂಪೊಲ್ಲಿ- ವಾಡಿ ರಸ್ತೆ ಬಂದ್ ಆಗಿದ್ದ ಕಾರಣ ಕೊಟ್ಟಿಯೂರು ಬಾಯ್ಸ್ ಟೌನ್ ರಸ್ತೆ ಮಾರ್ಗವಾಗಿ ಕೆಲಕಮ್ ಪರ್ಯಾಯ ಮಾರ್ಗವನ್ನು ಮ್ಯಾಪ್ ತೋರಿಸಿದೆ. ಮಲಯಂಪಡಿಯಲ್ಲಿ ಕಡಿದಾದ ಎಸ್ ತಿರುಗಳಿಂದಾಗಿ మిని ಬಸ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಕಾಯಂಕುಲಂನ ಉನ್ನಿ, ಉಮೇಶ್, ಸುರೇಶ್ ಮತ್ತು ಶಿಬು, ಎರ್ನಾಕುಲಂನ ಬಿಂಧು, ಕಲ್ಲುವತುಕ್ಕಲ್‌ನ ಚೆಲ್ಲಪ್ಪನ್ ಮತ್ತು ಕೊಲ್ಲಂನ ಶ್ಯಾಮ್ ಹಾಗೂ ಅಥಿರುಂಗಲ್‌ನ ಸುಭಾಶ್ ಎಂದು ಗುರುತಿಸಲಾಗಿದ್ದು, ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Categories
ರಾಷ್ಟ್ರೀಯ ವಾರ್ತೆ

ನವಜಾತ ಶಿಶು ವಾರ್ಡ್‌ನಲ್ಲಿ ದಿಢೀರ್ ಬೆಂಕಿ!

ನವಜಾತ ಶಿಶು ವಾರ್ಡ್‌ನಲ್ಲಿ ದಿಢೀರ್ ಬೆಂಕಿ!

– ತಡರಾತ್ರಿ ಆಕಸ್ಮಿಕ ಬೆಂಕಿ, 10 ಶಿಶುಗಳ ಸಾವು!
– 40ಕ್ಕೂ ಹೆಚ್ಚು ಶಿಶುಗಳು ಪಾರು!
– ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್‌ ಸಂಪರ್ಕ ಕಡಿತ!

NAMMUR EXPRESS NEWS
ಉತ್ತರ ಪ್ರದೇಶ: ನವಜಾತ ಶಿಶುಗಳ ವಾರ್ಡ್‌ನಲ್ಲಿ ತಡರಾತ್ರಿ ಆಕಸ್ಮಿಕ ಬೆಂಕಿ ಉಂಟಾಗಿ 10 ಶಿಶುಗಳು ಸುಟ್ಟು ಕರಕಲಾಗಿರುವ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿರುವ ಮಹಾರಾಣಿ ಲಕ್ಷ್ಮೀ ಬಾಯಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಆಸ್ಪತ್ರೆಯ ವಾರ್ಡ್ ನಲ್ಲಿ 40ಕ್ಕೂ ಹೆಚ್ಚು ಶಿಶುಗಳಿದ್ದು, ಅವರೆಲ್ಲರನ್ನೂ ಪಾರು ಮಾಡಲಾಗಿದೆ. ಆರಂಭದಲ್ಲಿ ವಾರ್ಡ್‌ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಕ್ಷಣಮಾತ್ರದಲ್ಲಿ ವ್ಯಾಪಿಸಿಕೊಂಡಿತು. ಈ ವೇಳೆಗಾಗಲೇ 10 ಮಂದಿ ಶಿಶುಗಳು ಬೆಂಕಿಗೆ ಆಹುತಿಯಾಗಿದ್ದವು. ಈ ವೇಳೆ ವಾರ್ಡ್‌ನಲ್ಲಿದ್ದ ಸಿಬ್ಬಂದಿ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಒಳಗಿನ ಘಟಕದ ಕೆಲವು ಮಕ್ಕಳನ್ನು ಸಹ ರಕ್ಷಿಸಲಾಗಿದೆ, ಇದುವರೆಗೆ 40 ಮಕ್ಕಳನ್ನು ರಕ್ಷಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ವಾರ್ಡ್‌ನಲ್ಲಿದ್ದ ಎಲ್ಲರಲ್ಲಿಯೂ ಭೀತಿ ಆವರಿಸಿಕೊಂಡಿತು. ಸಿಬ್ಬಂದಿ, ಮಕ್ಕಳ ಕುಟುಂಬ ವರ್ಗದವರು ಗಾಬರಿಯಿಂದ ಓಡಾಡಲು ಆರಂಭಿಸಿದರು. ಹೀಗಾಗಿ, ಅಲ್ಲಿ ಕಾಲ್ತುಳಿತ ಮಾದರಿಯ ಸ್ಥಿತಿ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು.