Categories
ರಾಷ್ಟ್ರೀಯ ವಾರ್ತೆ

ವಿಸ್ಕಿ ಪ್ರಿಯರಿಗೆ ಗುಡ್ ನ್ಯೂಸ್!

ವಿಸ್ಕಿ ಪ್ರಿಯರಿಗೆ ಗುಡ್ ನ್ಯೂಸ್!

– ಕರ್ನಾಟಕಕ್ಕೆ ಕಾಲಿಟ್ಟ ಎಬಿಡಿ ಐಕಾನಿಕ್ ವೈಟ್ ವಿಸ್ಕಿ
– 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯ!

NAMMUR EXPRESS NEWS
ದೆಹಲಿ: ಪ್ರೀಮಿಯಂ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಮೂಲಕ ಪೋರ್ಟ್ಫೋಲಿಯೋ ವಿಸ್ತರಣೆ ಮುಂದುವರಿಕೆ ಬೆಂಗಳೂರು, ಕರ್ನಾಟಕ, ಭಾರತದ 3ನೇ ಅತಿದೊಡ್ಡ ಸ್ಪಿರಿಟ್ಸ್ ಕಂಪನಿ ಅಲೈಡ್ ಬ್ಲೆಂಡರ್ಸ್ ಆಂಡ್ ಡಿಸ್ಟಿಲ್ಲರ್ಸ್ ಲಿಮಿಟೆಡ್ (ಎಬಿಡಿಎಲ್) ತನ್ನ ಐಕಾನಿಕ್ ವೈಟ್ ವಿಸ್ಕಿ ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಘೋಷಣೆ ಮಾಡಿದೆ.
ಐಕಾನಿಕ್ ವೈಟ್ ಅನ್ನು ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ಸ್ಪಿರಿಟ್ಸ್ ಬ್ರ್ಯಾಂಡ್ ಎಂದು ಪರಿಗಣಿಸಲಾಗಿದೆ. ಇದೇ ವೇಳೆ, ಇಡೀ ದೇಶದ ವಿವಿಧ ಭಾಗದಲ್ಲಿರುವ ವಿಸ್ಕಿ ಪ್ರಿಯರ ಪ್ರೀತಿಯನ್ನೂ ಇದು ಗಳಿಸುತ್ತಿದೆ. ಕರ್ನಾಟಕದ P&A ಸ್ಪಿರಿಟ್ ಮಾರ್ಕೆಟ್ನಲ್ಲಿ ಗಮನಾರ್ಹ ಪಾಲನ್ನು ಪಡೆದುಕೊಳ್ಳಲು ಐಕಾನಿಕ್ ವೈಟ್ ವಿಸ್ಕಿ ಸೂಕ್ತ ಅವಕಾಶವನ್ನು ಹೊಂದಿದ್ದು, ಗ್ರಾಹಕರಿಗೆ ವಿಸ್ಕಿ ಕುಡಿಯುವ ಅನುಭವವನ್ನೂ ಇದು ಉದ್ದೀಪಿಸುತ್ತಿದೆ. ಭಾರತೀಯ ಧಾನ್ಯದ ಸ್ಪಿರಿಟ್ಸ್ನ ಮಿಶ್ರಣ ಇದಾಗಿದೆ. ಉನ್ನತ ಗುಣಮಟ್ಟ ಮತ್ತು ಉತ್ತಮ ಸ್ವಾದವನ್ನು ಒದಗಿಸುವ ರೀತಿಯಲ್ಲಿ ಈ ಮಿಶ್ರಣವನ್ನು ರೂಪಿಸಲಾಗಿದ್ದು, ಸ್ಫರ್ಧಾತ್ಮಕ P&A ವಿಭಾಗದಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ. ಕರ್ನಾಟಕದಲ್ಲಿ ಸ್ಪಿರಿಟ್ ಉದ್ಯಮದಲ್ಲಿ 80% ಕ್ಕೂ ಹೆಚ್ಚನ್ನು ವಿಸ್ಕಿ ಹೊಂದಿದ್ದು, ಐಕಾನಿಕ್ ವೈಟ್ ಅನ್ನು ಪರಿಚಯಿಸುವುದು ಎಬಿಡಿಯ ಪ್ರಮುಖ ಹೆಜ್ಜೆಯಾಗಿದೆ. P&A ವಲಯದಲ್ಲಿ ಮಹತ್ವದ ಪಾತ್ರ ವಹಿಸಲು ಮತ್ತು ಕರ್ನಾಟಕದ ಪೋರ್ಟ್ಫೋಲಿಯೋವನ್ನು ಪ್ರೀಮಿಯಂ ಆಗಿಸುವ ಗುರಿಯನ್ನು ಹೊಂದಿದೆ. ಗ್ರಾಹಕರು ಸ್ಮರಣಾರ್ಹ ಅನುಭವವನ್ನು ಹೊಂದುವುದಕ್ಕೆ ಬಯಸುತ್ತಿರುವ ವಲಯದಲ್ಲಿ ಅದ್ಭುತ ಮೌಲ್ಯವನ್ನು ಒದಗಿಸುವುದಕ್ಕೆ ನಮ್ಮ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ. ರಾಜ್ಯಾದ್ಯಂತ ಬ್ರ್ಯಾಂಡ್ ನಾಲ್ಕು ವಿಭಿನ್ನ ಎಸ್ಕೆಯುಗಳಲ್ಲಿ ಲಭ್ಯವಿರುತ್ತದೆ – 750 ಮಿ.ಲೀ ₹970, 375 ಮಿ.ಲೀ. ₹485, 180 ಮಿ.ಲೀ, ರೂ. 235 ಹಾಗೂ 90 ಮಿ.ಲೀ ₹120 ಆಗಿದೆ. ಐಕಾನಿಕ್ ವೈಟ್ ಈಗಾಗಲೇ ಭಾರತದ ಮಾರ್ಕೆಟ್ಗಳಾದ ಮಹಾರಾಷ್ಟ್ರ, ಹರ್ಯಾಣ, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಚಂಡೀಗಢ, ಗೋವಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ ಮತ್ತು ಇತರೆ ಸೇರಿದಂತೆ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ.

Categories
ರಾಷ್ಟ್ರೀಯ ವಾರ್ತೆ

ಕರ್ನಾಟಕ ಟಾಪ್ ನ್ಯೂಸ್

ಕರ್ನಾಟಕ ಟಾಪ್ ನ್ಯೂಸ್

– ಗರ್ಭಿಣಿಯನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್‌ ಏಕಾಏಕಿ ಸ್ಪೋಟ!
– ಮಾರ್ಗ ಮಧ್ಯೆ ಕಾರಿನಲ್ಲಿಯೇ 4.5 ಕೆಜಿ ಮಗುವಿಗೆ ಜನ್ಮ ನೀಡಿದ ಮಹಿಳೆ!
– ಭಾರತದಲ್ಲಿ ಮೊದಲ ಬಾರಿಗೆ ಓಡಲಿದೆ ಹೈಡೋಜನ್ ರೈಲು!
– ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ SBI!

NAMMUR EXPRESS NEWS
ಮಹಾರಾಷ್ಟ್ರ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನ. 13ರಂದು ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಗರ್ಭಿಣಿಯನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್‌ ಬಾಂಬ್ ನಂತೆ ಸ್ಪೋಟಗೊಂಡಿದೆ. ಗರ್ಭಿಣಿಯನ್ನು ಆಕೆಯ ಮನೆಯವರು ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಸ್ವಲ್ಪ ಸಮಯದಲ್ಲೇ ಆಂಬುಲೆನ್ಸ್ ನಲ್ಲಿ ಬಾಂಬ್ ಸ್ಫೋಟದಂತೆ ಭಾರಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಮಾಧಾನದ ವಿಷಯವೆಂದರೆ ಸ್ಫೋಟದ ವೇಳೆ ಆಂಬ್ಯುಲೆನ್ಸ್‌ನಲ್ಲಿ ಇದ್ದವರೆಲ್ಲಾ ಹೊರಗೆ ಬಂದಿದ್ದರು. ಆಂಬ್ಯುಲೆನ್ಸ್ ಡ್ರೈವರ್ ವಾಹನದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ತಕ್ಷಣ ಅವ್ರು ಆಂಬ್ಯುಲೆನ್ಸ್‌ ಅನ್ನು ನಿಲ್ಲಿಸಿ ಎಲ್ಲರನ್ನೂ ಆಂಬ್ಯುಲೆನ್ಸ್‌ ನಿಂದ ಹಿರ ಬರುವಂತೆ ಸೂಚಿಸಿದ್ದಾರೆ. ಅಲ್ಲದೆ ಹತ್ತಿರದಲ್ಲಿದ್ದವರನ್ನು ಕಾರಿನಿಂದ ದೂರ ಸರಿಯುವಂತೆ ಹೇಳಿದ್ದಾರೆ.

* ಮಾರ್ಗ ಮಧ್ಯೆ ಕಾರಿನಲ್ಲಿಯೇ 4.5 ಕೆಜಿ ಮಗುವಿಗೆ ಜನ್ಮ ನೀಡಿದ ಮಹಿಳೆ!

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬಳು ಕಾರಿನಲ್ಲಿ 4.5ಕೆಜಿ (10 ಪೌಂಡ್) ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆಗೆ ತಲುಪಲು ಸಮಯವಿಲ್ಲದ ಕಾರಣ, ಆಕೆಯ ಪತಿ ಶಾಂತವಾಗಿರುವಂತೆ ಹೇಳುತ್ತಿದ್ದು, ಸುರಕ್ಷಿತವಾಗಿ ಚಾಲನೆ ಮಾಡಲು ಪ್ರಯತ್ನಿಸಿದರು. ಹೆರಿಗೆ ಸನ್ನಿಹಿತವಾಗುತ್ತಿದ್ದಂತೆ, ಪತಿ ಬೇಗನೆ ಆಕೆ ಸೀಟ್ ಬೆಲ್ಟ್ ಬಿಚ್ಚಿ, ಪ್ರಯಾಣಿಕರ ಸೀಟಿನಲ್ಲಿಯೇ ಹೆರಿಗೆಗೆ ತಯಾರಿ ನಡೆಸಲು ಪ್ಯಾಂಟ್ ಕೆಳಗಿಳಿಸಲು ಸಹಾಯ ಮಾಡಿದನು. ವೈದ್ಯಕೀಯ ಸಹಾಯವಿಲ್ಲದೆ ಹೆರಿಗೆಯ ಬಗ್ಗೆ ಅನಿಶ್ಚಿತತೆಯ ಹೊರತಾಗಿಯೂ, ಆಕೆ ಕಾರಿನಲ್ಲಿ ಮಗುವಿಗೆ ಜನ್ಮ ನೀಡುವಲ್ಲಿ ಯಶಸ್ವಿಯಾದಳು. ನಂತರ ಅವರ ನವಜಾತ ಮಗ ಕೆಲವು ಕ್ಷಣಗಳ ನಂತರ ಆರೋಗ್ಯಕರವಾಗಿ ಅಳುತ್ತಿದ್ದು, ಆಸ್ಪತ್ರೆಗೆ ಆಗಮಿಸಿದ ನಂತರ, ಸಿಬ್ಬಂದಿ ತ್ವರಿತವಾಗಿ ಕೆಲಸ ಮುಂದುವರೆಸಿದ್ದು, ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತ ಮತ್ತು ಚೆನ್ನಾಗಿದ್ದಾರೆ ಎಂದು ಖಚಿತಪಡಿಸಿಕೊಂಡರು. ಧೈರ್ಯಶಾಲಿ ಕ್ಷಣವನ್ನು ಸೆರೆಹಿಡಿಯುವ ವೀಡಿಯೊ ವೈರಲ್ ಆಗಿದ್ದು, ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ದಂಪತಿಗಳ ತಾಳ್ಮೆ, ಶೌರ್ಯವನ್ನ ವೀಕ್ಷಕರು ಶ್ಲಾಘಿಸಿದ್ದಾರೆ. ಈ ಘಟನೆ ಅಮೆರಿಕದಿಂದ ಬಂದಿದ್ದು, 2015ರಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

* ಭಾರತದಲ್ಲಿ ಮೊದಲ ಬಾರಿಗೆ ಓಡಲಿದೆ ಹೈಡೋಜನ್ ರೈಲು!

ನವದೆಹಲಿ : ಸದ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಭಾರತದ ರೈಲು ಹಳಿಗಳ ಮೇಲೆ ಹೈಡೋಜನ್ ರೈಲು ಓಡಲಿದೆ.
ಡಿಸೆಂಬರ್ ನಲ್ಲಿ ಈ ಒಂದು ರೈಲನ್ನು ಭಾರತೀಯ ರೈಲ್ವೆ ಇದನ್ನು ಲಾಂಚ್ ಮಾಡಲಿದೆ. ಈ ರೈಲು ಓಡಲು ಯಾವುದೇ ರೀತಿಯ ಡಿಸೇಲ್ ಆಗಲಿ ವಿದ್ಯುತ್ ಶಕ್ತಿ ಆಗಲಿ ಬೇಕಿಲ್ಲ. ಇದು ಹೊರಸೂಸುವ ಕಾರ್ಬನ್ನ ಪ್ರಮಾಣ ಸೊನ್ನೆ ಎಂದು ಹೇಳಲಾಗಿದೆ. ಆರಂಭದಲ್ಲಿ ನೀರಿನಿಂದಲೇ ಈ ರೈಲು ತನ್ನ ಓಡುವ ಶಕ್ತಿಯನ್ನ ಉತ್ಪಾದಿಸಿಕೊಳ್ಳುವ ಈ ರೈಲು ಬಳಿಕ ಹೈಡೋಜನ್ ಶೆಲ್ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಿಕೊಂಡು ಓಡುತ್ತದೆ ಎಂದು ಕೂಡ ಹೇಳಲಾಗಿದೆ. 2030ರ ವೇಳೆಗೆ ಇಡೀ ರೈಲ್ವೆ ಇಲಾಖೆ ಜಿರೋ ಕಾರ್ಬನ್ ಎಮಿಟರ್ ಆಗಿ ಹೊರಹೊಮ್ಮುವ ಗುರಿಯನ್ನು ಇಟ್ಟುಕೊಂಡಿದೆ.
ವಾಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ. ಡಿಸೇಲ್ ಇಂಜಿನ್ಗಳ ರೈಲಿನಿಂದ ತೀವ್ರ ವಾಯುಮಾಲಿನ್ಯವಾಗುತ್ತದೆ. ಆದ್ರೆ ಹೈಡೋಜನ್ ಸೆಲ್ಗಳಿಂದ ಓಡುವ ಈ ರೈಲು ಯಾವುದೇ ರೀತಿಯ ಕಾರ್ಬನ್ ಡೈಯಾಕ್ಸೆಡ್ ಹಾಗೂ ನೆಟ್ರೋಜನ್ ಆಕ್ಸಿಡ್ಗಳನ್ನ ಹೊರಸೂಸುವುದಿಲ್ಲ.ಹೀಗಾಗಿ ಭವಿಷ್ಯದಲ್ಲಿ ಇದು ಪರಿಸರ ಸ್ನೇಹಿ ರೈಲ್ವೆಯಾಗಿ ದೇಶಾದ್ಯಂತ ಗುರುತಿಸಿಕೊಳ್ಳಲಿದೆ. ಹಿಮಾಚಲ ಪ್ರದೇಶ, ನೀಲಗಿರಿ ಮೌಂಟೇನ್ ರೈಲ್ವೆ, ಕಲ್ಕಾ- ಶಿಮ್ಲಾ ರೈಲ್ವೆ ಇಂತಹ ಪ್ರದೇಶಗಳಲ್ಲಿ ಓಡಿಸಲು ಚಿಂತನೆ ನಡೆದಿದೆ. 2025ರೊಳಗೆ ದೇಶದಲ್ಲಿ ಒಟ್ಟು 35 ಹೈಡೋಜನ್ ರೈಲುಗಳನ್ನು ಓಡಿಸುವ ಗುರಿಯನ್ನು ಹೊಂದಿದೆ ರೈಲ್ವೆ ಇಲಾಖೆ. ಈ ರೈಲಿನ ವೇಗ ಗಂಟೆಗೆ 140 ಕಿಲೋ ಮೀಟ‌ರ್ ಎಂದು ಹೇಳಲಾಗುತ್ತಿದೆ.

* ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ SBI!

ಮುಂಬೈ: ಎಸ್‌ಬಿಐ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್‌ ಆಧಾರಿತ ಸಾಲದ (ಎಂಸಿಎಲ್‌ಆರ್) ಮೇಲಿನ ಬಡ್ಡಿದರವನ್ನು ಶೇ.0.05ರಷ್ಟು ಹೆಚ್ಚಿಸಿದೆ. ಇಂದಿನಿಂದಲೇ ನ.15 ಈ ಆದೇಶ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಒಂದು ವರ್ಷದ ಎಂಸಿಎಲ್‌ಆ‌ರ್ ಬಡ್ಡಿದರವನ್ನು ಶೇ.9ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ದೀರ್ಘಕಾಲದ ಗೃಹ ಸಾಲದ ಮೇಲಿನ ಇಎಂಐ ಏರಿಕೆಯಾಗಲಿದೆ. ಎಸ್‌ಬಿಐ ನೀಡಿರುವ ಸಾಲದ ಪೈಕಿ ಶೇ 42ರಷ್ಟು ಸಾಲಗಳು ಎಂಸಿಎಲ್‌ಆ‌ರ್ ಬಡ್ಡಿದರದೊಟ್ಟಿಗೆ ಸಂಯೋಜನೆಗೊಂಡಿವೆ.

Categories
ರಾಷ್ಟ್ರೀಯ ವಾರ್ತೆ

ರಾಜಧಾನಿಯಲ್ಲಿ ಎಂಎಸ್‌ಎಮ್‌ಇ, ಸ್ಟಾರ್ಟ್‌ಅಪ್ ಕಾಂಕ್ಲೇವ್

ರಾಜಧಾನಿಯಲ್ಲಿ ಎಂಎಸ್‌ಎಮ್‌ಇ, ಸ್ಟಾರ್ಟ್‌ಅಪ್ ಕಾಂಕ್ಲೇವ್
– ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಸ್ವಾಗತ
– ಅಂತಾರಾಷ್ಟ್ರೀಯ ಚೇಂಬರ್ ಫಾರ್ ಸರಸ್ವತ್ ಎಂಟ್ರಪ್ರನರ್ಸ್, ಮಾಹೆ ಬೆಂಗಳೂರು ಸಹಯೋಗ
– ನೀವೂ ಸ್ಟಾರ್ಟ್ ಅಪ್ ಉದ್ಯಮಿಗಳಾ?.. ನೋಂದಾಯಿಸಿಕೊಂಡು ಪಾಲ್ಗೊಳ್ಳಿ.. ಉದ್ಯಮ ಆಸಕ್ತರಿಗೂ ಅವಕಾಶ

NAMMUR EXPRESS NEWS
ಅಂತಾರಾಷ್ಟ್ರೀಯ ಚೇಂಬರ್ ಫಾರ್ ಸರಸ್ವತ್ ಎಂಟ್ರಪ್ರನರ್ಸ್, ಮಾಹೇ ಬೆಂಗಳೂರು ಸಹಯೋಗದಲ್ಲಿ 2024 ನೇ ಸಾಲಿನ ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕಾಂಕ್ಲೇವ್ ಮತ್ತು ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್, 16ನೇ ನವೆಂಬರ್ 2024 ರಂದು ರಾಜಧಾನಿ ಬೆಂಗಳೂರಲ್ಲಿ ನಡೆಯುತ್ತಿದೆ. ನ.16ರ ಬೆಳಿಗ್ಗೆ 9 ಗಂಟೆಗೆ ಡಾ. ರಾಮದಾಸ್ ಎಂ ಪೈ ಕನ್ವೆನ್ಶನ್ ಹಾಲ್, ಮಾಹೇ ಬೆಂಗಳೂರು ಕ್ಯಾಂಪಸ್, ಯಲಹಂಕ, ಬೆಂಗಳೂರಿನಲ್ಲಿ ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕಾಂಕ್ಲೇವ್ ಆರಂಭವಾಗಲಿದೆ.

ಸಾರಸ್ವತ ಸಮಾಜದ ನವೋದ್ಯಮಿಗಳು ಸೇರಿದಂತೆ ಎಲ್ಲಾ ಸಮುದಾಯದ ತಮ್ಮ ಹೆಸರನ್ನು ಕೆಳಗೆ ಕೊಟ್ಟಿರುವ ಸ್ಕ್ಯಾನರ್ ಮೂಲಕ ನೊಂದಾಯಿಸಿಕೊಳ್ಳಬಹುದು. ಈ ಕಾಂಕ್ಲೇವ್ ಸ್ಮಾಲ್ ಮತ್ತು ಮಿಡಿಯಂ ಎಂಟರ್‌ಪ್ರೈಸಸ್ ಕ್ಷೇತ್ರದ ಉದ್ಯಮಿಗಳನ್ನು, ಕೈಗಾರಿಕಾ ನಾಯಕರನ್ನು, ಉದ್ಯಮ ಕಟ್ಟುವ ಹಂಬಲವಿರುವ ಯುವ ಮನಸ್ಸುಗಳನ್ನು ಮತ್ತು ಔದ್ಯೋಗಿಕರ ಅಗ್ರಗಣ್ಯರನ್ನು ಒಂದುಗೂಡಿಸುವ ಉದ್ದೇಶದೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಉದ್ಯಮದ ಹೊಸ ಪಯಣಕ್ಕೆ ಅವಕಾಶ

ಸ್ಟಾರ್ಟ್‌ಅಪ್ ನಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಗೆ ಪ್ರೋತ್ಸಾಹ ನೀಡುವುದರೊಂದಿಗೆ ಎಂಎಸ್‌ಎಮ್‌ಇ ವಲಯದ ವಿಭಿನ್ನ ಸವಾಲುಗಳನ್ನು ಚರ್ಚಿಸಲು ಈ ವೇದಿಕೆ ಅವಕಾಶ ಒದಗಿಸುತ್ತದೆ. ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರದ ತಜ್ಞರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಬ್ರಾಂಡಿಂಗ್, ಫಂಡಿಂಗ್ ಆಯ್ಕೆಗಳು, ಬಿಸಿನೆಸ್ ಸ್ಕೇಲಿಂಗ್, ನಿಯಮಾವಳಿ ಸೇರಿ ಬ್ಯುಸಿನೆಸ್ ಮಾರ್ಕೆಟ್ ಮುಂತಾದ ಪ್ರಮುಖ ವಿಷಯಗಳ ಕುರಿತಾಗಿ ಚರ್ಚೆ ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಿಎ ಸಂಕೇತ್ ಎಸ್ ನಾಯಕ್
ಕಾರ್ಯಕ್ರಮ ಸಂಯೋಜಕರು, ಬೆಂಗಳೂರು
ದೂರವಾಣಿ ಸಂಖ್ಯೆ: 9731923402.

ಶಿಯಾ ಬ್ಯಾಕರ್
ಸೀನಿಯರ್ ಎಕ್ಸಕ್ಯೂಟಿವ್ ಮಾರ್ಕೆಟಿಂಗ್
ಮಾಹೆ, ಬೆಂಗಳೂರು
ದೂರವಾಣಿ ಸಂಖ್ಯೆ: 8156801972

Categories
ರಾಷ್ಟ್ರೀಯ ವಾರ್ತೆ

ರಾಜಧಾನಿಯಲ್ಲಿ ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕಾಂಕ್ಲೇವ್

ರಾಜಧಾನಿಯಲ್ಲಿ ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕಾಂಕ್ಲೇವ್
– ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್ ಕಾರ್ಯಕ್ರಮ
– ಅಂತಾರಾಷ್ಟ್ರೀಯ ಚೇಂಬರ್ ಫಾರ್ ಸರಸ್ವತ್ ಎಂಟ್ರಪ್ರನರ್ಸ್, ಮಾಹೇ ಬೆಂಗಳೂರು ಸಹಯೋಗ
– ನೀವೂ ಸ್ಟಾರ್ಟ್ ಅಪ್ ಉದ್ಯಮಿಗಳಾ? ನೋಂದಾಯಿಸಿಕೊಂಡು ಪಾಲ್ಗೊಳ್ಳಿ

ಅಂತಾರಾಷ್ಟ್ರೀಯ ಚೇಂಬರ್ ಫಾರ್ ಸರಸ್ವತ್ ಎಂಟ್ರಪ್ರನರ್ಸ್, ಮಾಹೇ ಬೆಂಗಳೂರು ಸಹಯೋಗದಲ್ಲಿ
2024 ನೇ ಸಾಲಿನ ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕಾಂಕ್ಲೇವ್ ಮತ್ತು ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್, 16ನೇ ನವೆಂಬರ್ 2024 ರಂದು ರಾಜಧಾನಿ ಬೆಂಗಳೂರಲ್ಲಿ ನಡೆಯುತ್ತಿದೆ. ನ.16ರ ಬೆಳಿಗ್ಗೆ 9 ಗಂಟೆಗೆ ಡಾ. ರಾಮದಾಸ್ ಎಂ ಪೈ ಕನ್ವೆನ್ಶನ್ ಹಾಲ್, ಮಾಹೇ ಬೆಂಗಳೂರು ಕ್ಯಾಂಪಸ್, ಯಲಹಂಕ, ಬೆಂಗಳೂರಿನಲ್ಲಿ ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕಾಂಕ್ಲೇವ್ ಆರಂಭವಾಗಲಿದೆ. ಸಾರಸ್ವತ ಸಮಾಜದ ನವೋದ್ಯಮಿಗಳು ಸೇರಿದಂತೆ ಎಲ್ಲಾ ಸಮುದಾಯದ ತಮ್ಮ ಹೆಸರನ್ನು ಕೆಳಗೆ ಕೊಟ್ಟಿರುವ ಸ್ಕ್ಯಾನರ್ ಮೂಲಕ ನೊಂದಾಯಿಸಿಕೊಳ್ಳಬಹುದು.

ಈ ಕಾಂಕ್ಲೇವ್ ಸ್ಮಾಲ್ ಮತ್ತು ಮಿಡಿಯಂ ಎಂಟರ್‌ಪ್ರೈಸಸ್ ಕ್ಷೇತ್ರದ ಉದ್ಯಮಿಗಳನ್ನು, ಕೈಗಾರಿಕಾ ನಾಯಕರನ್ನು, ಉದ್ಯಮ ಕಟ್ಟುವ ಹಂಬಲವಿರುವ ಯುವ ಮನಸ್ಸುಗಳನ್ನು ಮತ್ತು ಔದ್ಯೋಗಿಕರ ಅಗ್ರಗಣ್ಯರನ್ನು ಒಂದುಗೂಡಿಸುವ ಉದ್ದೇಶದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಸ್ಟಾರ್ಟ್‌ಅಪ್ ನಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಗೆ ಪ್ರೋತ್ಸಾಹ ನೀಡುವುದರೊಂದಿಗೆ ಎಂಎಸ್‌ಎಮ್‌ಇ ವಲಯದ ವಿಭಿನ್ನ ಸವಾಲುಗಳನ್ನು ಚರ್ಚಿಸಲು ಈ ವೇದಿಕೆ ಅವಕಾಶ ಒದಗಿಸುತ್ತದೆ. ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರದ ತಜ್ಞರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ.
ಬ್ರಾಂಡಿಂಗ್, ಫಂಡಿಂಗ್ ಆಯ್ಕೆಗಳು, ಬಿಸಿನೆಸ್ ಸ್ಕೇಲಿಂಗ್, ನಿಯಮಾವಳಿ ಸೇರಿ ಬ್ಯುಸಿನೆಸ್ ಮಾರ್ಕೆಟ್ ಮುಂತಾದ ಪ್ರಮುಖ ವಿಷಯಗಳ ಕುರಿತಾಗಿ ಚರ್ಚೆ ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಸಿಎ ಸಂಕೇತ್ ಎಸ್ ನಾಯಕ್
ಕಾರ್ಯಕ್ರಮ ಸಂಯೋಜಕರು, ಬೆಂಗಳೂರು
ದೂರವಾಣಿ ಸಂಖ್ಯೆ: 9731923402,

ಶಿಯಾ ಬ್ಯಾಕರ್
ಸೀನಿಯರ್ ಎಕ್ಸಕ್ಯೂಟಿವ್ ಮಾರ್ಕೆಟಿಂಗ್
ಮಾಹೆ, ಬೆಂಗಳೂರು
ದೂರವಾಣಿ ಸಂಖ್ಯೆ: 8156801972 ಇವರನ್ನು ಸಂಪರ್ಕಿಸಿ.

Categories
ರಾಷ್ಟ್ರೀಯ ವಾರ್ತೆ

ದೇಶದೆಲ್ಲೆಡೆ ಮಕ್ಕಳ ದಿನಾಚರಣೆ ಸಂಭ್ರಮ!

ದೇಶದೆಲ್ಲೆಡೆ ಮಕ್ಕಳ ದಿನಾಚರಣೆ ಸಂಭ್ರಮ!
– ಮಕ್ಕಳ ವಿವಿಧ ಕಾರ್ಯಕ್ರಮ: ಏನಿದು ಮಕ್ಕಳ ದಿನಾಚರಣೆ
– ಭಾರತದ ಮೊದಲ ಪ್ರಧಾನಿ ನೆಹರೂ ಜನ್ಮ ದಿನ ಮಕ್ಕಳ ದಿನ ಆಗಿದ್ದು ಹೇಗೆ?

NAMMUR EXPRESS NEWS
ಬದುಕು ಎಂದರೆ ಏನು ಎಂಬ ಅರಿವೇ ಇಲ್ಲದೇ, ತಮ್ಮದೇ ಲೋಕದಲ್ಲಿ ಮುಳುಗಿ ಆಟ, ಪಾಠವ ಕಲಿಯುತ್ತಾ, ಶಾಲಾ ಸಮವಸ್ತ್ರದ ಬದಲು ಬಣ್ಣದ ಬಟ್ಟೆಯನ್ನು ತೊಟ್ಟು , ಶಾಲೆಯಲ್ಲಿ ಭಾಷಣದ ನಂತರ ಕೊಡುವ ಸಿಹಿ ತಿನಿಸುಗಾಗಿ ಕಾಯುವ ಆ ಕ್ಷಣಗಳು ಅವಿಸ್ಮರಣೀಯವಲ್ಲವೇ..?
ಆದುದರಿಂದ ಮಕ್ಕಳ ದಿನಾಚರಣೆ ಮಕ್ಕಳಿಗೆ ಹೇಗೆ ವಿಶೇಷವೋ ಹಾಗೇ ಅಂದಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಮಕ್ಕಳ ದಿನಾಚರಣೆ ದೊಡ್ಡವರಿಗೂ ಒಂದು ಸುಂದರ ಅವಕಾಶವಾಗಿದೆ.
ಇಂದಿನ ಮಕ್ಕಳು ನಾಳಿನ ಭಾರತವನ್ನು ರೂಪಿಸುತ್ತಾರೆ. ನಾವು ಅವುಗಳನ್ನು ಪೋಷಿಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಜವಾಹರಲಾಲ್ ನೆಹರು ರವರ ನುಡಿ ಅರ್ಥಗರ್ಭಿತವಾದದ್ದು.
ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಮೊದಲಿಗೆ ನವೆಂಬರ್ 20 ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿತ್ತು. ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನವನ್ನು ಘೋಷಣೆ ಮಾಡಿತ್ತು. ಆದರೆ 1964 ರ ನಂತರ ಭಾರತದಲ್ಲಿ ಮಕ್ಕಳ ದಿನಾಚರಣೆ ನವೆಂಬರ್ 14 ರಂದು ಆಚರಣೆ ಆಗುತ್ತಿದೆ.
ಒಮ್ಮೆ ಜವಾಹರಲಾಲ್ ನೆಹರುರವರ ಅನುಯಾಯಿಗಳು ಅವರ ಜನ್ಮದಿನವನ್ನು ಅವರ ಹುಟ್ಟಿದ ದಿನವನ್ನಾಗಿ ಆಚರಿಸುತ್ತೇವೆ ಎಂದು ಕೇಳಿದಾಗ , ನೆಹರುರವರು ಗೌರವದಿಂದ ಅವರ ಮಾತು ಆಲಿಸಿದರು. ನಂತರ , “ಮಕ್ಕಳು ತೋಟದಲ್ಲಿ ಅರಳುವ ಸುಂದರ ಹೂವುಗಳು, ತಾನೂ ಬಿದ್ದು ಹೋಗುವ ಮರ”. ಆದುದರಿಂದ ತಾನು ಹುಟ್ಟಿದ ದಿನವನ್ನು ತನ್ನ ದಿನಾಚರಣೆಯನ್ನಾಗಿ ಅಚರಿಸುವ ಬದಲು ಮಕ್ಕಳ ದಿನವನ್ನಾಗಿ ಆಚರಿಸಿ,ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ ಎಂಬ ಕರೆಯನ್ನು ನೆಹರು ನೀಡುತ್ತಾರೆ. ಇದು ನೆಹರು ಅವರಿಗೆ ಮಕ್ಕಳ ಕುರಿತ ಪ್ರೇಮ ಮತ್ತು ಮಕ್ಕಳ ಮುಂದಿನ ನಾಯಕತ್ವದ ಪ್ರತೀಕವಾಗಿ ಉಳಿಯಿತು.
ಅಂದಿನಿಂದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಎಂದು ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ.
ಗಿಡಗಳಿಗೆ ಚೆನ್ನಾಗಿ ಎಷ್ಟು ಬೇಕೋ ಅಷ್ಟು ನೀರು, ಗೊಬ್ಬರ ಹಾಕಿ ಬೆಳೆಸಿದಾಗ ಮಾತ್ರ ಪರಿಮಳ ಬೀರುವ ಸುಂದರ ಹೂವುಗಳು ಅರಳುತ್ತವೆ. ಅಂತೆಯೇ ಮುಗ್ಧ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಶಿಕ್ಷಣವನ್ನು ಪೂರೈಸಬೇಕೆಂದು ನೆಹರೂ ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಇಂದು ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಮಕ್ಕಳ ದಿನಾಚರಣೆಯನ್ನ ಪ್ರತೀ ವರ್ಷವೂ ಶಾಲೆಗಳಲ್ಲಿ ಆಚರಿಸಿ ಚಾಕೋಲೇಟ್‌, ಸಿಹಿ ತಿನಿಸು ನೀಡಿ, ಮಕ್ಕಳಿಗೆ ಶುಭಾಶಯ ತಿಳಿಸಿ, ಜತೆಗೆ ಈ ದಿನದ ಮಹತ್ವವನ್ನು ಸಹ ತಿಳಿಸಲಾಗುತ್ತದೆ. ಶಿಕ್ಷಕರು ಮಾತ್ರವಲ್ಲದೇ ಮಕ್ಕಳಿಗೂ ಸಹ ಈ ದಿನದ ಬಗ್ಗೆ ಮಾತನಾಡಲು ಶಾಲೆಗಳಲ್ಲಿ ಅವಕಾಶ ನೀಡಲಾಗುತ್ತದೆ. ಒಂದು ರೀತಿಯಲ್ಲಿ ಒಂದು ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮವೇ ಮಕ್ಕಳಿಗಾಗಿ ಏರ್ಪಟ್ಟಿರುತ್ತದೆ.
ಈ ದಿನದಂದು, ಶಾಲೆಗಳು ಮತ್ತು ಸಂಸ್ಥೆಗಳು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತವೆ. ಪೋಷಕರು ಮತ್ತು ಶಿಕ್ಷಕರಿಗೆ ಮಕ್ಕಳಲ್ಲಿ ಅಡಕ ವಾಗಿರುವ ಪ್ರತಿಭೆಯನ್ನು ಹೊರಗೆಳೆಯಲು ಮತ್ತು ಅವರ ಪ್ರಗತಿಯನ್ನು ಪ್ರತಿಬಿಂಬಿಸಲು ಸಹಕಾರಿಯಾಗಿದೆ.
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗಿದ್ದು ಜವಾಹರಲಾಲ್ ನೆಹರು ರವರು. ಅವರು 1947 ರಿಂದ 1964 ರವರೆಗೆ ಅಂದರೆ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. ಮಕ್ಕಳು ಪ್ರೀತಿಯಿಂದ ನೆಹರು ರವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಧ್ಯೇಯವಾಗಿತ್ತು. ಆದ್ದರಿಂದ ಅವರ ಸವಿನೆನಪಿಗಾಗಿ ಅವರ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಎಲ್ಲಾ ಮಕ್ಕಳಿಗೆ ಮಕ್ಕಳ ದಿನದ ಶುಭಾಶಯಗಳು

ಮಕ್ಕಳ ಆಟ ಚಂದ.. ಮಕ್ಕಳ ಮಾತು ಚಂದ
ಮಕ್ಕಳನ್ನು ಆದಷ್ಟು ಮೊಬೈಲ್ ಇಂದ ದೂರವಿರಿಸಿ.
ಸಂಸ್ಕೃತಿ.. ಸಂಪ್ರದಾಯ.. ಬದುಕೋದನ್ನು ಕಲಿಸಿ

Categories
ರಾಷ್ಟ್ರೀಯ ವಾರ್ತೆ

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್…!

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್…!
– ಶೀಘ್ರವೇ ಪೆಟ್ರೋಲ್-ಡೀಸೆಲ್ ದರ ಇಳಿಕೆ..!

NAMMUR EXPRESS NEWS
ನವದೆಹಲಿ: ವಾಹನ ಸವಾರರಿಗೆ ಸರ್ಕಾರಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಪೆಟ್ರೋಲ್, ಡೀಸೆಲ್ 10 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಜಗತ್ತಿನಾದ್ಯಂತ ನಿತ್ಯ ರಸ್ತೆಗಿಳಿಯುವ ಕೋಟ್ಯಂತರ ವಾಹನಗಳಿಗೆ ಅವಶ್ಯಕವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನ. ಈ ಎರಡು ಇಂಧನಗಳಿಲ್ಲದಿದ್ದರೆ ಜಗತ್ತು ನಿಂತೇ ಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ಇಂದಿಗೂ ನಾವು ಆ ಇಂಧನಗಳ ಮೇಲೆ ಅವಲಂಬಿತರಾಗಿದ್ದೇವೆ.

ಮೂಲತಃ ತೈಲ ನಿಕ್ಷೇಪಗಳಿಂದ ದೊರೆಯುವ ಕಚ್ಚಾತೈಲದಿಂದ ಉತ್ಪಾದಿಸಲಾಗುವ ಪೆಟ್ರೋಲ್ ಅಥವಾ ಡೀಸೆಲ್ ನವೀಕರಿಸಲಾಗದ ಶಕ್ತಿಯ ರೂಪಗಳಾಗಿದ್ದು ಜಾಗತಿಕವಾಗಿ ಅಪಾರ ಬೇಡಿಕೆ ಹೊಂದಿರುವ ಇಂಧನ ಶಕ್ತಿಗಳಾಗಿವೆ. ಅಲ್ಲದೆ, ಕಚ್ಚಾತೈಲ ತನ್ನದ ಆದ ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದ್ದು ಅದರ ಬೆಲೆ ಎಂದಿಗೂ ಸ್ಥಿರವಾಗಿರುವುದಿಲ್ಲ. ಸ್ಥಳೀಯ ಕಾರಣಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗುವ ವಿದ್ಯಮಾನಗಳು ಸಾಮಾನ್ಯವಾಗಿ ಇಂಧನ ದರಗಳ ಮೇಲೆ ಪ್ರಭಾವ ಬೀರುತ್ತವೆ.

ಇನ್ನು, ಈ ಇಂಧನಗಳ ಬೆಲೆ ಡೈನಾಮಿಕ್ ಆಗಿರುವುದರಿಂದ ಭಾರತದಲ್ಲಿ 2017 ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮಷ್ಟೆ ಪರಿಷ್ಕರಿಸಲಾಗುತ್ತಿತ್ತು. ಈಗ ನಿತ್ಯದ ಅಪ್ಡೇಟ್ ವಾಹನ ಸವಾರರಿಗೆ ಸಾಕಷ್ಟು ನೆರವಾಗುತ್ತಿದೆ ಎನ್ನಬಹುದು.

Categories
ರಾಷ್ಟ್ರೀಯ ವಾರ್ತೆ

ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ‘ಪಿಎಂ ವಿದ್ಯಾಲಕ್ಷ್ಮಿ’

ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ‘ಪಿಎಂ ವಿದ್ಯಾಲಕ್ಷ್ಮಿ’
– ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಖಾತ್ರಿರಹಿತ ಶಿಕ್ಷಣ ಸಾಲ ಭಾಗ್ಯ
– 10 ಲಕ್ಷ ರು.ವರೆಗೆ ಶಿಕ್ಷಣ ಸಾಲ ನೀಡಲು ಸಂಪುಟ ಅಸ್ತು

NAMMUR EXPRESS NEWS
ನವದೆಹಲಿ :
ಪ್ರತಿಭಾವಂತ ವಿದ್ಯಾರ್ಥಿಗಳಿಗೆ 7.5 ಲಕ್ಷ ರು.ನಿಂದ 10 ಲಕ್ಷ ರು.ವರೆಗೆ ಖಾತರಿರಹಿತ ಸಾಲದ ಆರ್ಥಿಕ ನೆರವು ನೀಡುವ ‘ಪಿಎಂ ವಿದ್ಯಾಲಕ್ಷ್ಮಿ ಯೋಜನೆ’ಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ 3,600 ಕೋಟಿ ನಿಧಿಯನ್ನು ಮೀಸಲಿಡಲಾಗಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌, ‘ಆರ್ಥಿಕ ಸಮಸ್ಯೆಗಳಿಂದಾಗಿ ದೇಶದ ಯುವಕರು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ತಪ್ಪಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡಲು ಈ ಯೋಜನೆ ರೂಪಿಸಲಾಗಿದೆ’ ಎಂದರು.

ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಕ್ಯುಎಚ್‌ಇಐ) ಪ್ರವೇಶ ದೊರೆತ ವಿದ್ಯಾರ್ಥಿಗಳಿಗೆ, ತಮ್ಮ ತಮ್ಮ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಕೊಲಾಟರಲ್‌ ರಹಿತ ಅಥವಾ ಖಾತರಿದಾರರಿಲ್ಲದೆ ಬ್ಯಾಂಕ್‌ ಹಾಗೂ ಆರ್ಥಿಕ ಸಂಸ್ಥೆಗಳಿಂದ ಸಾಲ ನೀಡಲಾಗುತ್ತದೆ. ಅಂದರೆ, ವಾರ್ಷಿಕ ₹8 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುವ ಪರಿವಾರದ ಹಾಗೂ ಯಾವುದೇ ಶಿಷ್ಯವೇತನ ಸೌಲಭ್ಯ ಪಡೆಯದ ವಿದ್ಯಾರ್ಥಿಗಳಿಗೆ 7.5 ಲಕ್ಷ ರು. ವರೆಗಿನ ಸಾಲದ ಶೇ.75ಕ್ಕೆ ಸರ್ಕಾರವೇ ಖಾತರಿ ಕೊಡಲಿದೆ. ಅಂತೆಯೇ, ₹8 ಲಕ್ಷಕ್ಕೂ ಅಧಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ 10 ಲಕ್ಷ ರು. ವರೆಗಿನ ಸಾಲದ ಮೇಲೆ ಶೇ.3ರಷ್ಟು ಬಡ್ಡಿ ವಿನಾಯಿತಿ ನೀಡಲಾಗುವುದು.

– ವಿದ್ಯಾರ್ಥಿಗಳು ಅರ್ಜಿ ಹೇಗೆ ಹಾಕಬೇಕು?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆ ಏಕೀಕೃತ ಪೋರ್ಟಲ್‌ ಪರಿಚಯಿಸಲಿದೆ. 860 ಕ್ಯುಎಚ್‌ಇಐ ಸಂಸ್ಥೆಗಳ 22 ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆಯಲು ಸಮರ್ಥರಾಗಿದ್ದಾರೆ. ಯೋಜನೆಯ ಲಾಭ ಪಡೆಯುವವರ ಪಟ್ಟಿಯನ್ನು ಎನ್‌ಐಆರ್‌ಎಫ್‌ ರ್‍ಯಾಂಕಿಂಗ್‌ ಆಧರಿಸಿ ಪ್ರತಿ ವರ್ಷ ಪರಿಷ್ಕರಿಸಲಾಗುವುದು.

– ಯಾರು ಅರ್ಹರು?

– ವಾರ್ಷಿಕ ₹8 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುವ ಕುಟುಂಬದ ಮಕ್ಕಳು ಅರ್ಹರು
– ಇವರು ಸರ್ಕಾರದಿಂದ ಬೇರಾವುದೇ ಶಿಷ್ಯ ವೇತನ ಸೌಲಭ್ಯ ಪಡೆಯುತ್ತಿರಬಾರದು
– 7.5 ಲಕ್ಷ ರು. ವರೆಗಿನ ಸಾಲದ ಶೇ.75ಕ್ಕೆ ಕೇಂದ್ರ ಸರ್ಕಾರವೇ ಖಾತರಿ ಕೊಡಲಿದೆ
– ₹8 ಲಕ್ಷಕ್ಕೂ ಅಧಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ 10 ಲಕ್ಷ ರು. ವರೆಗಿನ ಸಾಲದ ಮೇಲೆ ಶೇ.3ರಷ್ಟು ಬಡ್ಡಿ ವಿನಾಯಿತಿ

Categories
ರಾಷ್ಟ್ರೀಯ ವಾರ್ತೆ

ಟೋಕಿಯೋ ತಲುಪಿದ ಪಿಲಿವೇಷ ಸಾಕ್ಷ್ಯಚಿತ್ರ!

ಟೋಕಿಯೋ ತಲುಪಿದ ಪಿಲಿವೇಷ ಸಾಕ್ಷ್ಯಚಿತ್ರ!
– ಮಣಿಪಾಲದ ಮಾಹೆ ನಿರ್ಮಿಸಿದ ತುಳುನಾಡಿನ ಶಾರ್ಟ್ ಫಿಲ್ಮ್
– 2024ರ ಟೋಕಿಯೋ ಸಾಕ್ಷ್ಯಚಿತ್ರೋತ್ಸವಕ್ಕೆ ಆಯ್ಕೆ
– ಭಾರತದಿಂದ ಆಯ್ಕೆಯಾದ ಎರಡು ಚಲನಚಿತ್ರಗಳಲ್ಲಿ ಇದು ಒಂದು

NAMMUR EXPRESS NEWS
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನಿರ್ಮಿಸಿದ ತುಳುನಾಡಿನ ಸಾಕ್ಷ್ಯಚಿತ್ರ ಪಿಲಿವೇಷ (ಹುಲಿವೇಷ), ಟೋಕಿಯೊ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ (TDFF) 2024 ರಲ್ಲಿ ಅಧಿಕೃತ ಆಯ್ಕೆಯನ್ನು ಗಳಿಸಿದೆ. ಈ ಚಲನಚಿತ್ರವನ್ನು ದೃಶ್ಯ ಮಾನವಶಾಸ್ತ್ರ ಮತ್ತು ಎಥ್ನೋಗ್ರಾಫಿಕ್ ಫಿಲ್ಮ್ ವರ್ಗದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಲಾಗಿದೆ. ಪ್ರಪಂಚದಾದ್ಯಂತದ 800 ಕ್ಕೂ ಹೆಚ್ಚು ಆಯ್ಕೆಗಳಲ್ಲಿ, ಭಾರತದಿಂದ ಆಯ್ಕೆಯಾದ ಎರಡು ಚಲನಚಿತ್ರಗಳಲ್ಲಿ ಒಂದಾಗಿದೆ, ಇದು ಮಾಹೆ ಮತ್ತು ಅದು ಪ್ರತಿನಿಧಿಸುವ ಪ್ರದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ.

ಸಾಕ್ಷ್ಯಚಿತ್ರವನ್ನು ಡಿಸೆಂಬರ್ 5, 2024 ರಂದು ಉತ್ಸವದ ಭಾಗವಾಗಿ ಪ್ರದರ್ಶಿಸಲು ನಿರ್ಧರಿಸಲಾಗಿದೆ, ಇದು ನವೆಂಬರ್ 30 ರಿಂದ ಡಿಸೆಂಬರ್ 13, 2024 ರವರೆಗೆ ನಡೆಯುವ ಕಾರ್ಯಕ್ರಮವಾಗಿದೆ. ಇಂಟರ್ ಕಲ್ಚರಲ್ ಸ್ಟಡೀಸ್ ಮತ್ತು ಡೈಲಾಗ್ ಕೇಂದ್ರದ (CISD) ಸಂಯೋಜಕ ಡಾ. ಪ್ರವೀಣ್ ಕೆ ಶೆಟ್ಟಿ ಹಾಗು CISD ನಲ್ಲಿ ಸಂಶೋಧನಾ ಸಹವರ್ತಿ ಶ್ರೀ. ನಿತೇಶ್ ಅಂಚನ, ನಿರ್ದೇಶಿಸಿದ್ದಾರೆ. ಚಿತ್ರವು ಕರಾವಳಿ ಕರ್ನಾಟಕ ಪ್ರದೇಶಕ್ಕೆ ಸ್ಥಳೀಯವಾದ ಸಾಂಪ್ರದಾಯಿಕ ಜಾನಪದ ನೃತ್ಯವಾದ ಪಿಲಿವೇಷದ ಅನ್ವೇಷಣೆಯನ್ನು ನೀಡುತ್ತದೆ.

ಸಿಐಎಸ್‌ಡಿಯು ಮಣಿಪಾಲದ ಮಾಹೆಯಲ್ಲಿರುವ ಮಣಿಪಾಲದ ಯುರೋಪಿಯನ್ ಅಧ್ಯಯನ ಕೇಂದ್ರದಲ್ಲಿ ನೆಲೆಗೊಂಡಿದೆ ಮತ್ತು ಡಿಸರ್ನಿಂಗ್ ಇಂಡಿಯಾ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೆಪ್ಟೆಂಬರ್ 2021 ರಲ್ಲಿ ಪ್ರಾರಂಭವಾದ ಈ ಯೋಜನೆಯು ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು-ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಳ್ಳುವ ಪ್ರದೇಶವನ್ನು ಆನ್‌ಲೈನ್ ಕೋರ್ಸ್ ಮೂಲಕ ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ಸಾಕ್ಷ್ಯಚಿತ್ರಗಳು, ಪರಿಣಿತ ಉಪನ್ಯಾಸಗಳು ಮತ್ತು ಶೈಕ್ಷಣಿಕ ವಾಚನಗೋಷ್ಠಿಯನ್ನು ಒಳಗೊಂಡಿರುತ್ತದೆ, ತುಳುನಾಡಿನ ಜೀವನ ಸಂಪ್ರದಾಯಗಳಲ್ಲಿ ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ. ಈ ಕೋರ್ಸ್ ಅನ್ನು ಈಗಾಗಲೇ 450 ವಿದ್ಯಾರ್ಥಿಗಳು ಭಾಗವಹಿಸಿ ಪೂರ್ಣಗೊಳಿಸಿದ್ದಾರೆ. ಪ್ರಾಥಮಿಕವಾಗಿ ವಿದ್ಯಾರ್ಥಿಗಳು, ಪ್ರದೇಶದ ಪರಂಪರೆಯ ಬಗ್ಗೆ ತಮ್ಮ ತಿಳುವಳಿಕೆಯನ್ನು ಪುಷ್ಟೀಕರಿಸಿದ್ದಾರೆ.
ಕೋರ್ಸ್ ಜೊತೆಗೆ, CISD ತುಳುನಾಡಿನ ಸಂಸ್ಕೃತಿಗಳು ಎಂಬ ಪುಸ್ತಕವನ್ನು ಪ್ರಕಟಿಸಿದೆ, ಇದು ಪ್ರದೇಶದ ಸಾಂಸ್ಕೃತಿಕ ಸಂಪ್ರದಾಯಗಳ ವಿವಿಧ ಅಂಶಗಳ ದೃಶ್ಯ ಒಳನೋಟಗಳು ಮತ್ತು ಮಾಹಿತಿಯನ್ನು ನೀಡುತ್ತದೆ. ಸ್ಥಳೀಯ ಪರಂಪರೆಯನ್ನು ದಾಖಲಿಸಲು ಮತ್ತು ಉತ್ತೇಜಿಸಲು ತನ್ನ ಧ್ಯೇಯವನ್ನು ಮುಂದುವರೆಸುತ್ತಾ, CISD ಈಗ ಕಂಬಳದ ಸುತ್ತ ಕೇಂದ್ರೀಕೃತವಾಗಿರುವ ಹೊಸ ಯೋಜನೆಯ ಮೇಲೆ ಕೇಂದ್ರೀಕರಿಸುತ್ತಿದೆ, ಇದು ಪ್ರದೇಶದ ಕೃಷಿ ಪದ್ಧತಿಗಳೊಂದಿಗೆ ಸಂಪರ್ಕ ಹೊಂದಿದ ಸಾಂಪ್ರದಾಯಿಕ ಕೋಣಗಳ ಓಟದ ಪಂದ್ಯವಾಗಿದೆ.

Categories
ರಾಷ್ಟ್ರೀಯ ವಾರ್ತೆ

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ನಕಲಿ ಆಲೂಗಡ್ಡೆ!

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ನಕಲಿ ಆಲೂಗಡ್ಡೆ!
* ಹಲವು ಮಾರುಕಟ್ಟೆಯಲ್ಲಿ ನಕಲಿ ಆಲೂಗಡ್ಡೆಗಳು ಪತ್ತೆ!
* ಏನಿದು ನಕಲಿ, ಅಸಲಿ ಆಲೂಗಡ್ಡೆ!

NAMMUR EXPRESS NEWS
ನವದೆಹಲಿ: ನಕಲಿ ಬೆಳ್ಳುಳ್ಳಿ, ಅಕ್ಕಿ ಬಳಿಕ ಈಗ ಆಲೂಗಡ್ಡೆ ಸರದಿ. ಹೌದು. ಕಾಳ ಸಂತೆಯಲ್ಲಿ ನಕಲಿ ಆಲೂಗಡ್ಡೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ವ್ಯಾಪಾರಿಗಳು ಗ್ರಾಹಕರ ಆರೋಗ್ಯಕ್ಕಿಂತ ತಾವು ಮಾಡುವ ಹಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕಲಬೆರಕೆ ಉಪ್ಪು, ಕಲಬೆರಕೆ ಕಾಳುಗಳು, ಕಲಬೆರಕೆ ಅಡುಗೆ ಎಣ್ಣೆ, ಕಲಬೆರಕೆ ಹಾಲು, ಕಲಬೆರಕೆ ಅಕ್ಕಿ, ಕಲಬೆರಕೆ ಮಾಂಸ, ಕೊನೆಗೆ ಎಳನೀರು ಕುಡಿಯುವುದು ಕೂಡ ಕಲಬೆರಕೆ. ಹೀಗೆ ಎಲ್ಲವೂ ಭ್ರಷ್ಟವಾಗುತ್ತಿದೆ. ಈ ಕ್ರಮದಲ್ಲಿ ಇತ್ತೀಚೆಗೆ ಮತ್ತೊಂದು ವಂಚನೆ ಬೆಳಕಿಗೆ ಬಂದಿದೆ. ಹೊಸ ಆಲೂಗೆಡ್ಡೆಯಲ್ಲೂ ಕಲಬೆರಕೆ ಇರುವುದು ಅಧಿಕಾರಿಗಳ ತಪಾಸಣೆಯಿಂದ ತಿಳಿದುಬಂದಿದೆ.

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ಆಲೂಗಡ್ಡೆಗಳು ಪತ್ತೆಯಾಗಿವೆ. ವರ್ತಕರು ಕಳೆಗುಂದಿದ ಆಲೂಗಡ್ಡೆಗೆ ರಾಸಾಯನಿಕಗಳನ್ನು ಹಚ್ಚಿ ತಾಜಾವಾಗಿ ಕಾಣುತ್ತಾರೆ. ಅವರು ಲಾಭಕ್ಕಾಗಿ ಗ್ರಾಹಕರ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಹಾಗಾಗಿ ಆಲೂಗೆಡ್ಡೆ ಖರೀದಿಸುವಾಗ ಗ್ರಾಹಕರು ಕೂಡ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಖರೀದಿಸುವ ಮುನ್ನ ಯಾವುದು ನಕಲಿ ಮತ್ತು ಯಾವುದು ಅಸಲಿ ಎಂಬುದನ್ನು ಪರಿಶೀಲಿಸಿ. ಅದೃಷ್ಟವಶಾತ್ ನಕಲಿ ಆಲೂಗಡ್ಡೆಯನ್ನು ಗುರುತಿಸಲು ಕೆಲವು ಸುಲಭ ಮಾರ್ಗಗಳಿವೆ ಅದನ್ನು ಗುರುತಿಸಿಕೊಳ್ಳಬೇಕು.

ನಕಲಿ ಗುರುತಿಸುವುದು ಹೇಗೆ..?

ವಾಸನೆ: ನಿಜವಾದ ಆಲೂಗಡ್ಡೆ ನೈಸರ್ಗಿಕ ಮಣ್ಣಿನ ವಾಸನೆಯನ್ನು ಹೊಂದಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ನಕಲಿ ಆಲೂಗಡ್ಡೆ ಕೃತಕ ರಾಸಾಯನಿಕಗಳಂತೆ ವಾಸನೆ ಮಾಡುತ್ತದೆ.
ಬಣ್ಣ: ಆಲೂಗಡ್ಡೆಯನ್ನು ಕತ್ತರಿಸಿ ನೋಡಬೇಕು. ನಕಲಿ ಆಲೂಗಡ್ಡೆ ಒಳಗೆ ಮತ್ತು ಹೊರಗೆ ವಿಭಿನ್ನ ಬಣ್ಣಗಳಲ್ಲಿ ಕಾಣುತ್ತದೆ. ಶುದ್ಧ ಆಲೂಗೆಡ್ಡೆ ಬಣ್ಣವು ಒಳಗೆ ಮತ್ತು ಹೊರಗೆ ಒಂದೇ ಆಗಿರುತ್ತದೆ.
ನೀರಿನ ಪರೀಕ್ಷೆ: ಆಲೂಗೆಡ್ಡೆ ಗೆಡ್ಡೆಗಳನ್ನು ನೀರಿನಲ್ಲಿ ಮುಳುಗಿಸಿ, ಯಾವುದು ನಕಲಿ ಮತ್ತು ಯಾವುದು ಶುದ್ಧ ಎಂದು ಗುರುತಿಸಬಹುದು. ರಾಸಾಯನಿಕಗಳಿಂದಾಗಿ ನಕಲಿ ಆಲೂಗಡ್ಡೆ ನೀರಿನಲ್ಲಿ ತೇಲುತ್ತದೆ. ಆದರೆ ಶುದ್ಧ, ತಾಜಾ ಆಲೂಗೆಡ್ಡೆ ಗೆಡ್ಡೆಗಳು ನೀರಿನಲ್ಲಿ ಮುಳುಗುತ್ತವೆ.
ಮಣ್ಣು: ಮಣ್ಣನ್ನು ನೀರಿನಲ್ಲಿ ಬೆರೆಸಿದಾಗ ನಕಲಿ ಆಲೂಗಡ್ಡೆಗಳ ಮೇಲಿನ ಲೇಪನವು ಸುಲಭವಾಗಿ ಕರಗುತ್ತದೆ. ಆದರೆ ಕ್ಲೀನ್ ಆಲೂಗಡ್ಡೆ ಮೇಲೆ ನೈಸರ್ಗಿಕ ಮಣ್ಣು ಸುಲಭವಾಗಿ ತೆಗೆಯಲಾಗುವುದಿಲ್ಲ. ಅದನ್ನು ತೊಡೆದುಹಾಕಲು ನೀವು ಗಟ್ಟಿಯಾಗಿ ಸ್ಕ್ರಬ್ ಮಾಡಬೇಕು.
ಚರ್ಮ: ಆಲೂಗಡ್ಡೆಯನ್ನು ತೊಳೆಯುವಾಗ ಶುದ್ಧ ಆಲೂಗಡ್ಡೆಯ ಮೇಲಿನ ಚರ್ಮವನ್ನು ಸುಲಭವಾಗಿ ತೆಗೆಯಲಾಗುತ್ತದೆ. ಆದರೆ ನಕಲಿ ಆಲೂಗೆಡ್ಡೆಯ ಮೇಲಿನ ಸಿಪ್ಪೆಯು ಬಾಡುವುದರಿಂದ ಸುಲಭವಾಗಿ ಊದುವುದಿಲ್ಲ.

 

Categories
ರಾಷ್ಟ್ರೀಯ ವಾರ್ತೆ

ಭಾರತದ ಕಾಫಿಗೆ ಈಗ ಅತೀ ಹೆಚ್ಚು ಬೆಲೆ!

ಭಾರತದ ಕಾಫಿಗೆ ಈಗ ಅತೀ ಹೆಚ್ಚು ಬೆಲೆ!
* ಕಾಫಿ ಪುಡಿ ದರ 100 ರೂ. ಜಾಸ್ತಿ ಆಯ್ತು!
* ಹಾಲು ಖರೀದಿ ದರ 5 ರೂ. ಏರಿಕೆ ಸಾಧ್ಯತೆ

NAMMUR EXPRESS NEWS
ಬೆಂಗಳೂರು: ಭಾರತದ ಕಾಫಿಗೆ ಐತಿಹಾಸಿಕ ಧಾರಣೆ ಸಿಗುವ ಮೂಲಕ ದಾಖಲೆ ನಿರ್ಮಿಸಿದೆ. ಅರೇಬಿಕಾ ಕಾಫಿಗಿಂತ ಕಡಿಮೆ ಧಾರಣೆ ಹೊಂದುತ್ತಿದ್ದ ರೊಬಸ್ಟಾ ಪಾರ್ಚ್‌ಮೆಂಟ್ ಈ ವರ್ಷ 50 ಕೆ.ಜಿ. ಬ್ಯಾಗ್‌ಗೆ 20,000 ರೂ. ತಲುಪುವ ಮೂಲಕ ಭಾರತದ ಕಾಫಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಕಾಫಿ ಧಾರಣೆ ಹೆಚ್ಚಾಗುತ್ತಿದ್ದಂತೆ ಇತ್ತ ಕಾಫಿಪುಡಿ ಬೆಲೆಯೂ ಗಗನಕ್ಕೇರಿದೆ. ಜಗತ್ತಿನಲ್ಲೇ ಅತಿಹೆಚ್ಚು ಕಾಫಿ ಉತ್ಪಾದಿಸುವ ಬ್ರೆಜಿಲ್, ವಿಯೆಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದ ಇಳುವರಿ ಸಂಪೂರ್ಣ ಕುಂಠಿತವಾಗಿದೆ. ಭಾರತದಲ್ಲೂ ವಾರ್ಷಿಕ ಉತ್ಪಾದನೆಯ ಗುರಿ ತಲುಪಿಲ್ಲ. ಇದರಿಂದ ಲಂಡನ್ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚಾಗಿದ್ದು, ಇದು ಧಾರಣೆ ಏರಿಕೆಗೆ ಕಾರಣವಾಗಿದೆ.

ಕಾಫಿ ಧಾರಣೆ 20,000 ರೂ.ಗೆ ತಲುಪಿರುವ ಜತೆಗೆ ಕೊರತೆಯೂ ಉಂಟಾಗಿದೆ. ಇದರಿಂದ ಬೆಂಗಳೂರಿನಲ್ಲಿ ಕಾಫಿ ಪುಡಿ ದರ ಒಂದು ಕೆ.ಜಿ.ಗೆ 100 ರೂ. ಹೆಚ್ಚಾಗಿದೆ. ಚಿಕ್ಕಮಗಳೂರಿನಲ್ಲಿ ಉತ್ತಮ ಗುಣಮಟ್ಟದ ಕಾಫಿ ಪುಡಿ ಕೆ.ಜಿ.ಗೆ 480 ರೂ.ಗೆ ಮಾರಾಟ ಆಗುತ್ತಿದೆ. ಇನ್ನೆರಡು ದಿನದಲ್ಲಿ ಕಾಫಿ ಪುಡಿ ದರವನ್ನು 530 ರೂ.ಗಳಿಗೆ ಹೆಚ್ಚಿಸಲು ಕಾಫಿ ವರ್ಕ್ಸ್ ಮಾಲೀಕರು ಚಿಂತನೆ ನಡೆಸಿದ್ದಾರೆ. ಹೋಟೆಲ್, ಕಾಫಿ ಶಾಪ್‌ ಗಳಲ್ಲೂ ಕಾಫಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದ್ದು, ಕಾಫಿ ಧಾರಣೆಯ ನಿಯಂತ್ರಣ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವುದರಿಂದ ಇದರ ಮೇಲೆ ಸರಕಾರಗಳು ಹಿಡಿತ ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಬೆಲೆ ಏರಿಕೆಯ ಬಿಸಿಯನ್ನು ಗ್ರಾಹಕರು ಅನುಭವಿಸುವುದು ಅನಿವಾರ್ಯವಾಗಿದೆ.

* ಹಾಲು ಖರೀದಿ ದರ 5 ರೂ. ಏರಿಕೆ?

ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ 5 ರೂಪಾಯಿ ಹೆಚ್ಚಿಸಲು ಚಿಂತನೆ ನಡೆದಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಟಕೇಶ ಹೇಳಿದ್ದಾರೆ. ಲೀಟರ್ ಹಾಲಿಗೆ 5 ರೂ. ಏರಿಕೆ ಮಾಡುವಂತೆ ರೈತರ ಒತ್ತಾಯವಿದ್ದು,ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದುತಿಳಿಸಿದ್ದಾರೆ. ಆದರೆ, ಇದರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.