Categories
ರಾಷ್ಟ್ರೀಯ ವಾರ್ತೆ

ಜೈ ಹೋ ಭಾರತ್…ಗಣರಾಜ್ಯೋತ್ಸವಕ್ಕೆ ದೇಶ ಸಜ್ಜು!

ಜೈ ಹೋ ಭಾರತ್…ಗಣರಾಜ್ಯೋತ್ಸವಕ್ಕೆ ದೇಶ ಸಜ್ಜು!
– ರಾಷ್ಟ್ರಧ್ವಜವನ್ನು ಪ್ರದರ್ಶಿಸಲು ಶಿಷ್ಟಾಚಾರ ಕಡ್ಡಾಯ
– ಧ್ವಜಾರೋಹಣ, ರಾಷ್ಟ್ರೀಯ ಹಬ್ಬ ಆಚರಣೆಗೆ ಸಿದ್ಧತೆ

NAMMUR EXPRESS NEWS
ನವ ದೆಹಲಿ: ಭಾರತವು ತನ್ನ 76ನೇ ಗಣರಾಜ್ಯೋತ್ಸವವನ್ನು ಜನವರಿ 26ರಂದು ಆಚರಿಸಲು ಸಜ್ಜಾಗುತ್ತಿದ್ದಂತೆ, ರಾಷ್ಟ್ರೀಯ ರಾಜಧಾನಿ ಕರ್ತವ್ಯ ಪಥದಲ್ಲಿ ಭವ್ಯವಾದ ಹಬ್ಬಗಳಿಗೆ ಸಾಕ್ಷಿಯಾಗಲಿದೆ. ಜನವರಿ 26, 1950 ರಂದು ಭಾರತೀಯ ಸಂವಿಧಾನದ ಅಂಗೀಕಾರದ ನೆನಪಿಗಾಗಿ ಈ ದಿನವು ರಾಷ್ಟ್ರದ ಇತಿಹಾಸದಲ್ಲಿ ಒಂದು ಪ್ರಮುಖ ದಿನವಾಗಿದೆ. ಸಂವಿಧಾನದ ಅನುಷ್ಠಾನವು ಭಾರತವು ಗಣರಾಜ್ಯವಾಗಿ ಪರಿವರ್ತನೆಯನ್ನು ಸೂಚಿಸುತ್ತದೆ, ಇದು 1935 ರ ಭಾರತ ಸರ್ಕಾರದ ಕಾಯಿದೆಯಿಂದ ದೂರ ಸರಿಯುತ್ತಿದೆ. ಸಂವಿಧಾನ ಸಭೆಯಿಂದ ರಚಿಸಲಾಗಿದೆ ಮತ್ತು ನವೆಂಬರ್ 26, 1949 ರಂದು ಅಂತಿಮಗೊಳಿಸಲಾಯಿತು, ಸಂವಿಧಾನದ ಅಂಗೀಕಾರವು ಒಂದು ಸ್ಮಾರಕ ಹೆಜ್ಜೆಯಾಗಿದೆ. ಭಾರತದ ಸಾರ್ವಭೌಮತ್ವ ಮತ್ತು ಪ್ರಜಾಸತ್ತಾತ್ಮಕ ಆಡಳಿತದ ಕಡೆಗೆ ಗಣರಾಜ್ಯೋತ್ಸವವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ರಾಷ್ಟ್ರದಾದ್ಯಂತ ಶಾಲೆಗಳು, ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳು ತ್ರಿವರ್ಣ ಧ್ವಜ ಹಾರಾಡಲಿದೆ. ಈ ಐತಿಹಾಸಿಕ ದಿನವನ್ನು ಸ್ಮರಿಸುವಾಗ ನಮ್ಮ ಧ್ವಜ ಪ್ರತಿನಿಧಿಸುವ ಮೌಲ್ಯಗಳನ್ನು ಗೌರವಿಸೋಣ.

Categories
ರಾಷ್ಟ್ರೀಯ ವಾರ್ತೆ

ಜೈ ಶ್ರೀ ರಾಮ್.. ಭಾರತದೆಲ್ಲೆಡೆ ಸಂಭ್ರಮ!

ಜೈ ಶ್ರೀ ರಾಮ್.. ಭಾರತದೆಲ್ಲೆಡೆ ಸಂಭ್ರಮ!
– ಅಯೋಧ್ಯೆ ರಾಮನಿಗೆ ವರ್ಷದ ಹರ್ಷ: ಎಲ್ಲೆಡೆ ರಾಮನಿಗೆ ನಮನ
– ಶ್ರೀ ರಾಮನ ಪ್ರತಿಷ್ಠಾಪನೆ ದಿನ: ದೇಶದ ಹಬ್ಬದಂತೆ ಸಂಭ್ರಮ

NAMMUR EXPRESS NEWS
ಅಯೋಧ್ಯೆ: ಉತ್ತರ ಪ್ರದೇಶ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಹೀಗಾಗಿ ರಾಮಮಂದಿರದ ಮೊದಲ ವಾರ್ಷಿಕೋತ್ಸವ ಅದ್ದೂರಿಯಾಗಿ ದೇಶದ ಮೂಲೆ ಮೂಲೆಯಲ್ಲೂ ನಡೆಯಲಿದೆ. ಈಗಾಗಲೇ ದೇಶದ ಎಲ್ಲೆಡೆ ಸಂಭ್ರಮ ಕಳೆಗಟ್ಟಿದೆ. ಅಯೋಧ್ಯೆಯಲ್ಲಿ ಮೂರು ದಿನಗಳ ಉತ್ಸವ ಕೂಡ ನಡೆಯಲಿದೆ. ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ದಿನ ಎಲ್ಲೆಡೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೇಸರಿ ಧ್ವಜಗಳಿಂದ ಎಲ್ಲಾ ದೇವಸ್ಥಾನಗಳು ಹಾಗೂ ಪಟ್ಟಣಗಳು ಕಂಗೊಳಿಸುತ್ತಿವೆ. ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ದಿನವನ್ನು ಇಡೀ ದೇಶದ ಹಬ್ಬದಂತೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲು ಸಿದ್ಧತೆ ನಡೆದಿದೆ.

– ಅಯೋಧ್ಯೆ ದೇಶದ ನಂ.1 ಪ್ರವಾಸಿ ತಾಣ

ಉದ್ಘಾಟನೆಗೊಂಡ ವರ್ಷದೊಳಗೇ ಅಯೋಧ್ಯೆ ರಾಮಮಂದಿರ ದೇಶದ ನಂ.1 ಪ್ರವಾಸಿ ತಾಣ ಅಥವಾ ಭಕ್ತಾದಿಗಳ ನೆಚ್ಚಿನ ಭೇಟಿಯ ತಾಣವಾಗಿ ಹರ್ಮಿದೆ. 2024ರ ಜನವರಿ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ ಸುಮಾರು 47 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಪೈಕಿ ಅಯೋಧ್ಯೆ ಒಂದಕ್ಕೇ 13.3 ಕೋಟಿ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಅದರಲ್ಲಿ 3,153 ವಿದೇಶಿಗರೂ ಕೂಡ ಸೇರಿದ್ದಾರೆ. ಮಂದಿರದಿಂದ ರಾಜ್ಯದ ಪ್ರವಾಸೋದ್ಯಮದ ನಕಾಶೆಯನ್ನೇ ಬದಲಿಸಿದೆ. ಹಬ್ಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ಅಯೋಧ್ಯೆ ರಾಮನ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಮಾಡಿದ್ದರು. ದೇಶದ ಪ್ರಮುಖ 3 ಶಿಲ್ಪಿಗಳಲ್ಲಿ ಅರುಣ್ ಒಬ್ಬರಾಗಿದ್ದರು. ಮೈಸೂರಿನ ಎಚ್ ಡಿ ಕೋಟೆ ಕಲ್ಲು ಬಳಕೆ ಮಾಡಲಾಗಿತ್ತು.

ಗಿನ್ನಿಸ್ ದಾಖಲೆ ಬರೆದ ಲಕ್ಷ ಹಣತೆ!

ದೀಪಾವಳಿ ಸಂದರ್ಭದಲ್ಲಿ ಸರಯೂ ನದಿಯ ದಂಡೆಯ ಮೇಲೆ 22 ಲಕ್ಷ ಹಣತೆಗಳನ್ನು ಸರ್ಕಾರ ಬೆಳಗಿಸುವ ಮೂಲಕ ಗಿನ್ನೆಸ್‌ ದಾಖಲೆ ನಿರ್ಮಿಸಿತು. ರಾಮಮಂದಿರ ಸುರಕ್ಷತೆ ನಿರ್ವಹಣೆಗೆ ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪ್ರತಿಷ್ಠಿತ ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿಯನ್ನು ರಾಮಮಂದಿರ ಪಡೆದುಕೊಂಡಿದೆ.

ಹಳ್ಳಿ ಹಳ್ಳಿಯಲ್ಲೂ ಸಡಗರ: ವಿಶೇಷ ಆಚರಣೆ

ಶ್ರೀ ರಾಮ ಮಂದಿರ ನಿರ್ಮಾಣದ ದಿನವನ್ನು ದೇಶದ ಜನ ವಿಶೇಷವಾಗಿ ಆಚರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜ. 21ರಿಂದಲೇ ಆಚರಣೆಗೆ ಎಲ್ಲೆಡೆ ಕೇಸರಿ ಧ್ವಜ ಕಟ್ಟಲಾಗುತ್ತಿದೆ. ಇನ್ನು ರಾಮನ ದೇಗುಲ, ಸೇರಿ ದೇಗುಲಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

Categories
ರಾಷ್ಟ್ರೀಯ ವಾರ್ತೆ

ಪ್ರಯಾಗರಾಜ್‌ ಕುಂಭಮೇಳದಲ್ಲಿ ಭೀಕರ ಅಗ್ನಿ ದುರಂತ!

ಪ್ರಯಾಗರಾಜ್‌ ಕುಂಭಮೇಳದಲ್ಲಿ ಭೀಕರ ಅಗ್ನಿ ದುರಂತ!
– ತಾತ್ಕಾಲಿಕವಾಗಿ ನಿರ್ಮಿಸಿರುವ ಟೆಂಟ್‌ನಲ್ಲಿ ಬೆಂಕಿ
– ಮಹಾಕುಂಭ ಮೇಳ ಸುಂದರಿ ಮೊನಾಲಿಸಾ!
– ಸದ್ಯದ ಪಾಡು ಯಾರಿಗೂ ಬೇಡ!

NAMMUR EXPRESS NEWS
ಪ್ರಯಾಗ್‌ರಾಜ್‌: ಪ್ರಯಾಗರಾಜ್‌ಗೆ ಆಗಮಿಸಿರುವ ಭಕ್ತರು, ಸಾಧುಗಳು, ಸಂತರಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಟೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯ ಕೆನ್ನಾಲಿಗೆ ಹರಡಿ ಹಲವು ಟೆಂಟ್‌ಗಳು ನಾಶವಾಗಿವೆ. ಬೆಂಕಿಯ ಜ್ವಾಲೆಗೆ ಮಹಾಕುಂಭ ಮೇಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಕ್ಷಣವೇ ಸ್ಥಳದಲ್ಲಿದ್ದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದೆ. ಅಹಿತಕರ ಘಟನೆ ನಡೆಯದಂತೆ ಎಲ್ಲಾ ಕಟ್ಟೆಚ್ಚರ ವಹಿಸಲಾಗಿದೆ. ಇದರ ನಡುವೆ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ ಎನ್ನುವುದು ಬಹಿರಂಗವಾಗಿಲ್ಲ. ಆದರೆ ಮಹಾಕುಂಭ ಮೇಳ ಆರಂಭಕ್ಕೂ ಮೊದಲೇ ನೂರಾರು ಅಗ್ನಿಶಾಮಕ ದಳ ನಿಯೋಜಿಸಲಾಗಿದೆ. ಹೀಗಾಗಿ ತಕ್ಷಣವೇ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದೆ. ವಿಶ್ವವೇ ಅಚ್ಚರಿಪಡುವಂತೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಹಾಕುಂಭ ಮೇಳ ೋಜಗೊಂಡಿದೆ. ಪ್ರತಿ ದಿನ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ.

– ಸದ್ಯದ ಪಾಡು ಯಾರಿಗೂ ಬೇಡ!
ಮಹಾಕುಂಭ ಮೇಳ ಸುಂದರಿ ಮೊನಾಲಿಸಾ!

ನವದೆಹಲಿ : ಮಹಾಕುಂಭ ಮೇಳದಲ್ಲಿ ಮಣಿ, ಸರ, ಮಾಲೆ ಮಾರಾಟ ಮಾಡುತ್ತಿರುವ ಸುಂದರಿ ಮೊನಾಲಿಸಾ ಭಾರಿ ವೈರಲ್ ಆಗಿದ್ದಾಳೆ. ಮೊನಾಲಿಸಾ ಸೌಂದರ್ಯ, ಕಣ್ಣಿಗೆ ಜನ ಮಾರು ಹೋಗಿದ್ದರು. ಆದರೆ ಭಾರಿ ಜನಪ್ರಿಯತೆ ಪಡೆದ ಮೊನಾಲಿಸಾ ಸದ್ಯದ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಎಲ್ಲಿಗೂ ಹೋಗುವಂತಿಲ್ಲ. ಮನೆಯಲ್ಲಿ ಇರುವಂತಿಲ್ಲ. ಅತ್ತ ಪೋಷಕರು, ಸಹೋದರಿಯರಿಗೂ ಕಾಟ ತಾಳಲಾಗುತ್ತಿಲ್ಲ. ಮೊನಾಲಿಸಾ ಸದ್ಯದ ಪರಿಸ್ಥಿತಿಯ ವಿಡಿಯೋ ಇದೀಗ ನೈಜ ಚಿತ್ರಣ ಬಿಚ್ಚಿಡುತ್ತಿದೆ. ಮಹಾಕುಂಭ ಮೇಳಕ್ಕೆ ಆಗಮಿಸುತ್ತಿರುವ ಲಕ್ಷಾಂತರ ಮಂದಿ ಮೊನಾಲಿಸಾ ಭೇಟಿಯಾಗಿ ಫೋಟೋ ಕ್ಲಿಕ್ಕಿಸಲು ಬಯಸುತ್ತಿದ್ದಾರೆ.ಮೊನಾಲಿಸಾ ಎಲ್ಲಿದ್ದರೂ ತೆರಳಿ ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ವಿಡಿಯೋ ಮಾಡುತ್ತಿದ್ದಾರೆ. ಇತ್ತ ಯೂಟ್ಯೂಬ‌ರ್, ಬ್ಲಾಗರ್, ಸುದ್ದಿ ವಾಹಿನಿ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಹಲವಾರು ಇದೀಗ ಮೊನಾಲಿಸಾಳ ಸಂದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿ, ತಲೆ ಕವರ್ ಮಾಡಿ ಗುರುತು ಸಿಗದಂತೆ ಸಾಗಿದರೂ ಮೊನಾಲಿಸಾಳನ್ನು ಜನರು ಬಿಡುತ್ತಿಲ್ಲ. ಈ ಕುರಿತು ವಿಡಿಯೋ ವೈರಲ್ ಆಗಿದೆ. ಸಾವಿರಾರು ಮಂದಿ ಮನೆ ಹುಡುಕಿಕೊಂಡು ತೆರಳುತ್ತಿದ್ದಾರೆ. ಮನೆಗೆ ತೆರಳಿ ಕಾಟ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ ಮೊನಾಲಿಸಾ ಹಾಗೂ ಅವರ ಕುಟುಂಬಕ್ಕೆ ಸುರಕ್ಷತೆಯ ಸಮಸ್ಯೆಯೂ ಎದುರಾಗಿದೆ. ಜನಪ್ರಿಯಳಾಗಿರುವ ಕಾರಣ ಮೊನಾಲಿಸಾ ಹಿಂದೆ ಸಾವಿರಾರು ಮಂದಿ ಫೋಟೋಗಾಗಿ ಹಿಂದೆ ಬಿದ್ದಿದ್ದಾರೆ. ಮೊನಾಲಿಸಾಗೆ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಈಕೆಯ ಕಣ್ಣು, ಸೌಂದರ್ಯಕ್ಕೆ ಜನ ಮನಸೋತಿದ್ದಾರೆ. ಆದರೆ ದೇಶಾದ್ಯಂತ ಜನಪ್ರಿಯವಾಗಿರುವ ವೈರಲ್ ಸುಂದರಿಯ ಈಗಿನ ಸ್ಥಿತಿ ಮಾತ್ರ ಯಾರಿಗೂ ಬೇಡ.

Categories
ರಾಷ್ಟ್ರೀಯ ವಾರ್ತೆ

ಫೆ.1ಕ್ಕೆ ಕೇಂದ್ರ ಸರ್ಕಾರದ ಬಜೆಟ್..!

ಫೆ.1ಕ್ಕೆ ಕೇಂದ್ರ ಸರ್ಕಾರದ ಬಜೆಟ್..!
– ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಆಯವ್ಯಯ ಮಂಡನೆ
– ಮಾ.2ನೇ ವಾರ ಮತ್ತು ಏಪ್ರಿಲ್ ಮೊದಲ ವಾರ ಬಜೆಟ್ ಅಧಿವೇಶನ

NAMMUR EXPRESS NEWS
ದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 31 ಮತ್ತು ಫೆಬ್ರವರಿ 13ರ ಮಧ್ಯೆ ನಡೆಯುವ ಸಾಧ್ಯತೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಎಂಟನೇ ಬಾರಿಗೆ ಆಯವ್ಯಯ ಮಂಡನೆ ಮಾಡಲಿದ್ದಾರೆ. ಸಂಪ್ರದಾಯದಂತೆ ಜ.31ರಂದು ರಾಷ್ಟ್ರಪತಿ ದೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯ ಸಭೆಯ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಅಧಿವೇಶನ ಆರಂಭವಾಗಲಿದೆ. ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ ಎರಡನೇ ವಾರ ಮತ್ತು ಏಪ್ರಿಲ್ ಮೊದಲ ವಾರದ ಮಧ್ಯೆ ನಡೆಯಲಿದೆ. ಅಧಿವೇಶನದ ಮೊದಲ ಭಾಗವನ್ನು ಉಭಯ ಸದನಗಳಲ್ಲಿ ಅಧ್ಯಕ್ಷರ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಚರ್ಚೆ ನಡೆಯಲಿದೆ. ಅಧಿವೇಶನ ಪ್ರಧಾನ ಮಂತ್ರಿಯವರ ಉತ್ತರದೊಂದಿಗೆ ಕೊನೆಗೊಳ್ಳಲಿದೆ.

Categories
ರಾಷ್ಟ್ರೀಯ ವಾರ್ತೆ

ಮಹಾಕುಂಭ ಮೇಳ ಸಂಭ್ರಮ!

ಮಹಾಕುಂಭ ಮೇಳ ಸಂಭ್ರಮ!
– ಮಹಾಕುಂಭದ ಮೊದಲ ಅಮೃತ ಸ್ನಾನ: 4.5 ಕೋಟಿ ಜನ ಭಾಗಿ
– ಸಂಕ್ರಾಂತಿ ದಿನದಂದೇ ಅಮೃತ ಸ್ನಾನ, ಜ.29ರಂದು ಎರಡನೇ ಅಮೃತ ಸ್ನಾನ

NAMMUR EXPRESS NEWS
ಹಿಂದೂ ಗ್ರಂಥಗಳಲ್ಲಿ, ಕುಂಭಮೇಳವನ್ನು ‘ಅಮರತ್ವದ ಜಾತ್ರೆ’ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಕುಂಭಮೇಳದ ಸಮಯದಲ್ಲಿ ಲಕ್ಷಾಂತರ ಭಕ್ತರು ತಮ್ಮ ಆತ್ಮವನ್ನು ಶುದ್ದೀಕರಿಸಲು ಈ ಪವಿತ್ರ ಸ್ಥಳದಲ್ಲಿ ಸ್ನಾನ ಮಾಡಲು ಬರುತ್ತಾರೆ, ಪ್ರಪಂಚದಾದ್ಯಂತದ ಸಂತರು ಮತ್ತು ಭಕ್ತರು ನಂಬಿಕೆಯ ಸ್ನಾನ ಮಾಡುತ್ತಾರೆ. ಕುಂಭಮೇಳದಲ್ಲಿ ಅಮೃತಾ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಈಗಾಗಲೇ ಕೋಟಿ ಕೋಟಿ ಜನ ಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಮಹಾಕುಂಭದ ಮೊದಲ ಅಮೃತ ಸ್ನಾನ ಅಥವಾ ಶಾಹಿ ಸ್ನಾನವನ್ನು ಜನವರಿ 14 ರಂದು ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ನಡೆಯಿತು. ಕುಂಭದಲ್ಲಿ ಈ ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ನಾಗಾ ಸಾಧುಗಳು ಮತ್ತು ಇತರ ಸಂತರು ಅಮೃತ ಸ್ನಾನ ಮಾಡುತ್ತಾರೆ. ಮಹಾಕುಂಭದ ಮೊದಲ ರಾಜ ಸ್ನಾನ ಜನವರಿ 14ರ ನಡೆದಿದೆ. ಈ ದಿನ ಸೂರ್ಯ ದೇವನು ಧನು ರಾಶಿಯಿಂದ ಮಕರ ರಾಶಿಗೆ ತೆರಳುತ್ತಾನೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಗಂಗಾ ನದಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ಪುಣ್ಯ ಫಲ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಅಲ್ಲದೆ, ಈ ದಿನ ಪೂಜೆ ಪುನಸ್ಕಾರ ಮತ್ತು ಎಳ್ಳು, ಬೆಲ್ಲ ದಾನ ಮಾಡುವುದು ತುಂಬಾ ಒಳ್ಳೆಯದು. ಮಹಾಕುಂಭದ ಎರಡನೇ ಅಮೃತ ಸ್ನಾನವು 29 ಜನವರಿ 2025 ರಂದು ನಡೆಯಲಿದೆ. ಈ ದಿನ ಮೌನಿ ಅಮವಾಸ್ಯೆ ಬರುತ್ತದೆ. ಹಿಂದೂ ಧರ್ಮದಲ್ಲಿ ಮೌನಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಮೌನಿ ಅಮವಾಸ್ಯೆಯಂದು ಸ್ನಾನ, ದಾನ, ಮೌನ ವ್ರತ ಮಾಡುವ ಸಂಪ್ರದಾಯವಿದೆ. ಮೌನಿ ಅಮಾವಾಸ್ಯೆಯಂದು ಮಹಾಕುಂಭದಲ್ಲಿ ಸ್ನಾನ ಮಾಡುವುದರಿಂದ ದುಪಟ್ಟು ಹೆಚ್ಚು ಮಂಗಳಕರ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ. ಮಹಾಕುಂಭದ ಮೂರನೇ ಮತ್ತು ಕೊನೆಯ ಅಮೃತ ಸ್ನಾನವು 3 ಫೆಬ್ರವರಿ 2025 ರಂದು ನಡೆಯಲಿದೆ. ಈ ದಿನ ವಸಂತ ಪಂಚಮಿ ಹಬ್ಬ ಬರುತ್ತಿದೆ. ವಸಂತ ಪಂಚಮಿಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಪೂಜೆ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ವಸಂತ ಪಂಚಮಿಯ ದಿನದಂದು ಜ್ಞಾನದ ದೇವತೆಯಾದ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ.

ಮಹಾಕುಂಭದ ಮೊದಲ ಅಮೃತ ಸ್ನಾನ: 4.5 ಕೋಟಿ ಜನ ಭಾಗಿ

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಎರಡು ದಿನದಲ್ಲಿ 4.5 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಸೋಮವಾರದಿಂದ ಕುಂಭಮೇಳ ಆರಂಭವಾಗಿದ್ದು ಮೊದಲ ದಿನವೇ ಸುಮಾರು 1.6 ಕೋಟಿ ಜನರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳೆಗೆದ್ದು ಸ್ನಾನ ಮಾಡಿದ್ದರು. ಮಕರ ಸಂಕ್ರಾಂತಿ ದಿನವಾದ ಮಂಗಳವಾರ 13 ಅಖಾಡದ ಮುಖ್ಯ ಸಂತರು ಸೇರಿದಂತೆ 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮುಳುಗಿ ಪ್ರಥಮ ಶಾಹಿ ಸ್ನಾನ ಮಾಡಿದ್ದಾರೆ. ಮೊದಲಿಗೆ ಶ್ರೀ ಪಂಚಯತಿ ಅಖಾಡ ಮಹಾನಿರ್ವಾಣಿ ಹಾಗೂ ಶ್ರೀ ಶಂಭು ಪಂಚ ಯತಿ ಆಟಲ್ ಅಖಾಡದವರು ಅಮೃತ ಸ್ನಾನ ಮಾಡಿದರು. ಬಳಿಕ ಅನ್ಯ ಅಖಾಡದವರು, ಭಸ್ಮಲೇಪಿತ ನಾಗಸಾಧುಗಳು, ಸಂತರು, ಕಲ್ಪವಾಸಿಗಳು ಹಾಗೂ ಭಕ್ತರು ಸ್ನಾನ ಮಾಡಿದರು. ಈ ವೇಳೆ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆ ಸುರಿಸಲಾಯಿತು.

Categories
ರಾಷ್ಟ್ರೀಯ ವಾರ್ತೆ

ಸೈಬ‌ರ್ ವಂಚನೆ ನಷ್ಟಕ್ಕೆ ಬ್ಯಾಂಕ್ ಹೊಣೆ!?

ಸೈಬ‌ರ್ ವಂಚನೆ ನಷ್ಟಕ್ಕೆ ಬ್ಯಾಂಕ್ ಹೊಣೆ!?
– ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
– ಗ್ರಾಹಕರು ಬ್ಯಾಂಕ್ ಮಾಹಿತಿ ಹಂಚಿಕೊಳ್ಳಬೇಡಿ!
– ಸೈಬರ್ ವಿಚಾರದಲ್ಲಿ ಪೊಲೀಸ್ ಇಲಾಖೆ ಇನ್ನು ಅಲರ್ಟ್ ಆಗಬೇಕು!

NAMMUR EXPRESS NEWS
ನವದೆಹಲಿ:
ಸೈಬರ್ ವಂಚನೆ ಪ್ರಕರಣದಲ್ಲಿ ಗ್ರಾಹಕನ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದು ಗ್ರಾಹಕರಿಗೆ ಆರ್ಥಿಕ ನಷ್ಟ ಸಂಭವಿಸಿದರೆ ಅದಕ್ಕೆ ಸಂಬಂಧಪಟ್ಟ ಬ್ಯಾಂಕ್‌ಗಳೇ ಹೊಣೆ ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಇದೇ ವೇಳೆ ಗ್ರಾಹಕರು ಕೂಡಾ ಜಾಗ್ರತೆ ವಹಿಸಬೇಕು, ಒಟಿಪಿ ಸಂಖ್ಯೆ, ಸಿವಿವಿ, ಎಟಿಎಂ ಪಿನ್‌ನಂಥ ಸೂಕ್ಷ್ಮ ವಿಚಾರವನ್ನು ಹಂಚಿಕೊಳ್ಳುವುದು ಬಿಡಬೇಕು ಎಂದು ಸಲಹೆ ನೀಡಿದೆ. ಇತ್ತೀಚಿಗೆ ಹೆಚ್ಚುತ್ತಿರುವ ಸೈಬರ್ ಮೋಸದ ಹಿನ್ನೆಲೆ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಏನಿದು ಪ್ರಕರಣ?: ಅಸ್ಸಾಂನ ಪಲ್ಲಬ್ ಭೌಮಿಕ್, ಆನ್‌ಲೈನ್, ಮೂಲಕ ವಸ್ತುವೊಂದನ್ನು ಖರೀದಿಸಿದ್ದರು. ತೃಪ್ತಿಯಾಗದ ಕಾರಣ ಅದನ್ನು ಮರಳಿಸಲು ನಿರ್ಧರಿಸಿದ್ದರು. ಆ ವಸ್ತುವನ್ನು ಮರಳಿಸುವ ಪ್ರಕ್ರಿಯೆ ವೇಳೆ ಕಸ್ಟಮರ್ ಕೇರ್ ಹೆಸರಿನಲ್ಲಿ ಪಲ್ಲಬ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ನಿರ್ದಿಷ್ಟ ಆ್ಯಪ್ ಡೌನ್‌ ಲೋಡ್‌ಗೆ ಸೂಚಿಸಿದ್ದ. ಪಲ್ಲಬ್‌ ಆ್ಯಪ್‌ ಡೌನ್‌ ಲೋಡ್ ಮಾಡಿಕೊಂಡ ಬಳಿಕ ಕಸ್ಟಮರ್ ಕೇರ್ ಎಂದು ಹೇಳಿದ್ದ ವ್ಯಕ್ತಿಗೆ ಎಂಪಿನ್, ಒಟಿಪಿ ಎಲ್ಲವನ್ನೂ ನೀಡಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಅವರ ಖಾತೆಯಿಂದ 94204 ರು. ಹಣ ಎಗರಿಸಲಾಗಿತ್ತು.
ಇದನ್ನು ನಿಯಮದಂತೆ 24 ಗಂಟೆಯಲ್ಲಿ ಪಲ್ಲಬ್ ಬ್ಯಾಂಕ್ ಗಮನಕ್ಕೆ ತಂದಿದ್ದರು. ಆದರೆ ನೀವು ಒಟಿಪಿ, ಎಂಪಿನ್ ಸೇರಿದಂತೆ ರಹಸ್ಯ ಮಾಹಿತಿಯನ್ನು ವಂಚಕರಿಗೆ ನೀಡಿದ್ದೀರಿ. ಬ್ಯಾಂಕ್‌ನ ತಪ್ಪಿಲ್ಲ. ಹಣ ಮರಳಿಸಲಾಗಲ್ಲ ಎಂದು ಬ್ಯಾಂಕ್‌ ಹೇಳಿತ್ತು. ಈ ಬಗ್ಗೆ ಪಲ್ಲಬ್ ಹೈಕೋರ್ಟ್ ಮೊರೆ ಹೋಗಿದ್ದರು. ಗುವಾಹಟಿ ಹೈಕೋರ್ಟ್ ಪಲ್ಲಬ್ ಪರ ತೀರ್ಪು ನೀಡಿತ್ತು. ಇದನ್ನು ಎಸ್‌ಬಿಐ ಸುಪ್ರೀಂನಲ್ಲಿ ಪ್ರಶ್ನಿಸಿತ್ತು. ಈ ಕುರಿತು ತೀರ್ಪು ನೀಡಿರುವ ಸುಪ್ರೀಂ, ‘ಮೂರನೇ ವ್ಯಕ್ತಿಯಿಂದಾದ ವಂಚನೆಗೆ ಗ್ರಾಹಕ ಹೊಣೆಯಲ್ಲ ಎಂದು ಆರ್‌ಬಿಐ ನಿಯಮಗಳೇ ಹೇಳಿವೆ. ಸೈಬರ್ ವಂಚನೆಯಂಥ ಪ್ರಕರಣದಲ್ಲಿ ಗ್ರಾಹಕರ ಹಿತ ಕಾಪಾಡುವುದು ಬ್ಯಾಂಕ್‌ಗಳ ಹೊಣೆಗಾರಿಕೆ. ಈ ಪ್ರಕರಣದಲ್ಲಿ ತಾಂತ್ರಿಕ ಸಂಪನ್ಯೂಲ ಲಭ್ಯವಿದ್ದರೂ ವಂಚನೆ ತಡೆಯುವಲ್ಲಿ ಎಸ್‌ಬಿಐ ವಿಫಲವಾಗಿದೆ. ಈ ಹಿನ್ನೆಲೆ ಗ್ರಾಹಕನಿಗೆ ಹಣ ಮರಳಿಸುವಂತೆ ಎಸ್‌ಬಿಐಗೆ ನ್ಯಾಯಪೀಠ ಸೂಚಿಸಿದೆ.

ಸೈಬರ್ ಮೋಸಕ್ಕೆ ಪ್ರತಿ ದಿನ ಸಾವಿರಾರು ಜನ ಬಲಿ!

ಸೈಬರ್ ಮೋಸದ ಜಾಲಕ್ಕೆ ಪ್ರತಿ ದಿನ ಸಾವಿರಾರು ಮಂದಿ ಮೋಸ ಹೋಗುತ್ತಿದ್ದಾರೆ. ಆದರೆ ಇದನ್ನು ತಡೆಯುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಅತ್ಯುತ್ತಮ ಟೆಕ್ ತಂತ್ರಜ್ಞಾನ, ಪರಿಣಿತರ ತಂಡ ರಚನೆ ಮಾಡಿದಲ್ಲಿ ಕಳ್ಳರ ಹಿಡಿದು ಅವರ ಬುಡ ಸಮೇತ ಕೀಳುವುದು ದೊಡ್ಡ ವಿಚಾರ ಅಲ್ಲ. ಆದರೆ ಪೊಲೀಸ್ ಇಲಾಖೆ ಈ ವಿಷಯದಲ್ಲಿ ಕುರುಡು ಪ್ರದರ್ಶನ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

Categories
ರಾಷ್ಟ್ರೀಯ ವಾರ್ತೆ

ವಿಶ್ವದಲ್ಲೇ ಟ್ರಾಫಿಕ್ ಜಾಂ ಸಮಸ್ಯೆ ಬೆಂಗಳೂರು 3ನೇ ಸ್ಥಾನ !

ವಿಶ್ವದಲ್ಲೇ ಟ್ರಾಫಿಕ್ ಜಾಂ ಸಮಸ್ಯೆ ಬೆಂಗಳೂರು 3ನೇ ಸ್ಥಾನ !
– ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಸಿಲಿಕಾನ್ ಸಿಟಿ ಬೆಂಗಳೂರು
– ಕೊಲಂಬಿಯಾ ನಂ.1, ಕೋಲ್ಕತಾಗೆ 2ನೇ ಸ್ಥಾನ

NAMMUR EXPRESS NEWS
ನವದೆಹಲಿ: ಸಿಲಿಕಾನ್‌ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದೇಶದಲ್ಲಿ ಮಾತ್ರವಲ್ಲ, ಇದೀಗ ವಿಶ್ವಮಟ್ಟದಲ್ಲೂ ಸುದ್ದಿಯಾಗುತ್ತಿದೆ. ವಾಹನ ದಟ್ಟಣೆಗೆ ಹೆಸರುವಾಸಿಯಾದ ಬೆಂಗಳೂರು ನಿಧಾನಗತಿಯ ಟ್ರಾಫಿಕ್‌ಗಾಗಿ ವಿಶ್ವದಲ್ಲೇ 3ನೇ ಸ್ಥಾನ ಪಡೆದಿದೆ. ನೆದರ್‌ಲೆಂಡ್‌ನ ಲೊಕೇಷನ್‌ ಟೆಕ್ನಾಲಜಿ ಸಂಸ್ಥೆ ‘ಟಾಮ್‌ ಟಾಮ್‌’ ಬಿಡುಗಡೆ ಮಾಡಿರುವ ವಿಶ್ವದ ಪ್ರಮುಖ ನಗರಗಳ ಸಂಚಾರ ದಟ್ಟಣೆ ಕುರಿತ ವರದಿಯಲ್ಲಿ ಭಾರತದ ಮೂರು ನಗರಗಳು ವಿಶ್ವದ ಟಾಪ್‌ 5 ನಿಧಾನಗತಿಯ ಟ್ರಾಫಿಕ್‌ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅದರಲ್ಲಿ ಕೋಲ್ಕತಾ, ಬೆಂಗಳೂರು, ಪುಣೆ ಕ್ರಮವಾಗಿ 2 ರಿಂದ 4ನೇ ಸ್ಥಾನ ಪಡೆದುಕೊಂಡಿವೆ. ಮೊದಲ ಸ್ಥಾನದಲ್ಲಿ ಕೊಲಂಬಿಯಾದ ಬಾರಂಕ್ವಿಲಾ ನಗರವಿದೆ.

ಟ್ರಾಫಿಕ್‌ ಇಂಡೆಕ್ಸ್‌ ಹೇಳಿದ್ದೇನು?: ಟಾಟ್‌ ಟಾಮ್‌ ಟ್ರಾಫಿಕ್‌ ಇಂಡೆಕ್ಸ್‌ ಪ್ರಕಾರ 2024ರಲ್ಲಿ ಬೆಂಗಳೂರು ನಗರದಲ್ಲಿ 10 ಕಿ.ಮೀ. ಕ್ರಮಿಸಲು ಸರಾಸರಿ 30.10 ನಿಮಿಷ ಬೇಕಿತ್ತು. 2023ಕ್ಕೆ ಹೋಲಿಸಿದರೆ ಸಂಚಾರಿಸಲು ಬೇಕಾಗುವ ಸಮಯ 50 ಸೆಕೆಂಡ್‌ನಷ್ಟು ಹೆಚ್ಚಾಗಿದೆ. ಕೋಲ್ಕತಾದಲ್ಲಿ 10 ಕಿ.ಮೀ. ಕ್ರಮಿಸಲು 34.33 ನಿಮಿಷ ಬೇಕು. ಪುಣೆ, ನಿಧಾನಗತಿಯ ಟ್ರಾಫಿಕ್‌ ಹೊಂದಿರುವ ನಗರಗಳ ಪಟ್ಟಿಗೆ ಇದೇ ಮೊದಲ ಬಾರಿ ಸೇರ್ಪಡೆಯಾಗಿದ್ದು, ನಾಲ್ಕನೆಯ ಸ್ಥಾನ ಪಡೆದುಕೊಂಡಿದೆ. ಇನ್ನು ಭಾರತದ ಇತರೆ ನಗರಗಳಾದ ಹೈದರಾಬಾದ್‌ 18, ಚೆನ್ನೈ 31 ಮತ್ತು ಮುಂಬೈ 39ನೇ ಸ್ಥಾನದಲ್ಲಿದೆ.

ವರ್ಷ ವರ್ಷ ಐಟಿ ಸಿಟಿ ಟ್ರಾಫಿಕ್‌ ಸ್ಥಿತಿ ಗಂಭೀರ

2022ರಲ್ಲಿ ಬೆಂಗಳೂರು ನಗರದಲ್ಲಿ 10 ಕಿ.ಮೀ. ಕ್ರಮಿಸಬೇಕಿದ್ದರೆ ಸರಾಸರಿ 29 ನಿಮಿಷ 9 ಸೆಕೆಂಡ್‌, 2023ರಲ್ಲಿ 28 ನಿಮಿಷ 10 ಸೆಕೆಂಡ್‌, 2024ರಲ್ಲಿ 30 ನಿಮಿಷ 10 ಸೆಕೆಂಡ್‌ ಬೇಕಾಗಿತ್ತು. ಅತಿ ಹೆಚ್ಚು ಖಾಸಗಿ ಕಾರು ಹೊಂದಿರುವ ನಗರಗಳ ಪೈಕಿ ಬೆಂಗಳೂರು ಕೆಲ ವರ್ಷಗಳ ಹಿಂದೆಯೇ ದೆಹಲಿ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದಿದೆ. ನಗರದಲ್ಲಿ 25 ಲಕ್ಷಕ್ಕೂ ಹೆಚ್ಚು ಖಾಸಗಿ ಕಾರುಗಳಿವೆ. ನಿತ್ಯವೂ 2000 ವಾಹನಗಳು ರಸ್ತೆಗೆ ಇಳಿಯುತ್ತಿವೆ ಎಂದು ನಗರದಲ್ಲಿನ ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿರುವ ಬಗ್ಗೆ ವರದಿ ಒತ್ತಿ ಹೇಳಿದೆ.

ವಿಶ್ವದ ಟಾಪ್‌ 5 ನಗರಗಳು

1.ಬಾರಂಕ್ವಿಲಾ 36.6

2 ಕೋಲ್ಕತಾ 34.33

3 ಬೆಂಗಳೂರು 34.10

4 ಪುಣೆ 33.22

5 ಲಂಡನ್‌ 33.17

Categories
ರಾಷ್ಟ್ರೀಯ ವಾರ್ತೆ

ರಸ್ತೆ ಅಪಘಾತದಲ್ಲಿ ಗಾಯವಾದರೆ ಇನ್ನು ಕೇಂದ್ರದಿಂದ ಫ್ರೀ ಟ್ರೀಟ್ಮೆಂಟ್‌!

ರಸ್ತೆ ಅಪಘಾತದಲ್ಲಿ ಗಾಯವಾದರೆ ಇನ್ನು ಕೇಂದ್ರದಿಂದ ಫ್ರೀ ಟ್ರೀಟ್ಮೆಂಟ್‌!
– ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಘೋಷಣೆ!
– ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಹೊಸ ಯೋಜನೆ

NAMMUR EXPRESS NEWS
ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡರೆ ಇನ್ನು ಮುಂದೆ ಕ್ಯಾಶ್‌ಲೆಸ್ ಟೀಟ್‌ಮೆಂಟ್ ನೀಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಘೋಷಣೆ ಮಾಡಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜನವರಿ 7 ರಂದು ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಹೊಸ ಯೋಜನೆಯನ್ನು ಘೋಷಿಸಿದರು. ಇದರ ಪ್ರಕಾರ ಅಪಘಾತ ಸಂಭವಿಸಿದ 24 ಗಂಟೆಗಳ ಒಳಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಯೋಜನೆಯು ತಕ್ಷಣವೇ ಸಂತ್ರಸ್ತರ 7 ದಿನಗಳ ಚಿಕಿತ್ಸೆಯ ವೆಚ್ಚವನ್ನು ಅಥವಾ ಗರಿಷ್ಠ 1.5 ಲಕ್ಷ ರೂಪಾಯಿ ವೆಚ್ಚವನ್ನು ಭರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಅಂದಹಾಗೆ ಈ ಹಿಂದೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ-ಜನಾರೋಗ್ಯ ಯೋಜನೆ’ಯಡಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡಲು ಕೇಂದ್ರ ಸರಕಾರವು ಯೋಜನೆ ರೂಪಿಸಿತ್ತು. ಆರಂಭದಲ್ಲಿ ಚಂಡೀಗಢ ಮತ್ತು ಅಸ್ಸಾಂನಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಅವಘಡ ಸಂಭವಿಸಿದ ದಿನದಿಂದ ಏಳು ದಿನಗಳವರೆಗೆ ಗರಿಷ್ಠ 1.5 ಲಕ್ಷ ರೂ.ವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದಾಗಿತ್ತು. ಈ ಯೋಜನೆ ಯಶಸ್ವಿಯಾದ ಬಳಿಕ ಇದೀಗ ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಮುಂದಾಗಿದೆ.
ಈ ಕುರಿತು ಮಾತನಾಡದ ಸಚಿವ ಗಡ್ಕರಿ ಅವರು ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮೃತಪಟ್ಟರೆ ಮೃತ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ ಎಂದಿದ್ದಾರೆ. ಅಲ್ಲದೆ ನಾವು ಈ ನಗದು ರಹಿತ ಯೋಜನೆಯನ್ನು ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ನಡೆಸಿದ್ದೇವೆ. ನಾವು ಯೋಜನೆಯಲ್ಲಿ ಕೆಲವು ದೌರ್ಬಲ್ಯಗಳನ್ನು ಗಮನಿಸಿದ್ದೆವೆ. ನಾವು ಅವುಗಳನ್ನು ಸುಧಾರಿಸುತ್ತಿದ್ದೇವೆ ಮತ್ತು ಇದು ಖಂಡಿತವಾಗಿ ಪ್ರಯೋಜನಕಾರಿಯಾಗಿದೆ ಎಂದು ನವದೆಹಲಿ ಭಾರತ ಮಂಟಪದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಇನ್ಮುಂದೆ ಚಿನ್ನ ಮಾತ್ರವಲ್ಲ, ಬೆಳ್ಳಿಗೂ ಹಾಲ್‌ ಮಾರ್ಕ್‌!?

ಇನ್ಮುಂದೆ ಚಿನ್ನ ಮಾತ್ರವಲ್ಲ, ಬೆಳ್ಳಿಗೂ ಹಾಲ್‌ ಮಾರ್ಕ್‌!?
– ಹಾಲ್‌ಮಾರ್ಕ್ ಕೋಡ್ ಅನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ

NAMMUR EXPRESS NEWS
ನವದೆಹಲಿ : ಗ್ರಾಹಕರ ಬೇಡಿಕೆಗಳನ್ನು ಅನುಸರಿಸಿ ಬೆಳ್ಳಿ ಮತ್ತು ಬೆಳ್ಳಿಯ ಆಭರಣಗಳಿಗೆ ಕಡ್ಡಾಯ ಹಾಲ್‌ಮಾರ್ಕಿಂಗ್ ಅನ್ನು ಜಾರಿಗೆ ತರಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪರಿಗಣಿಸಬೇಕು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ಹೇಳಿದ್ದಾರೆ. “ಬೆಳ್ಳಿಯ ಹಾಲ್‌ಮಾರ್ಕ್‌ಗಾಗಿ ಗ್ರಾಹಕರಿಂದ ಬೇಡಿಕೆಯಿದೆ. ನೀವು (BIS) ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ಜೋಶಿ 78 ನೇ BIS ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಉತ್ಪನ್ನದ ದೃಢೀಕರಣವನ್ನು ಖಾತರಿಪಡಿಸುವ ಉದ್ದೇಶದಿಂದ ಸರ್ಕಾರವು ಪ್ರಸ್ತುತ ಚಿನ್ನ ಮತ್ತು ಚಿನ್ನದ ಆಭರಣಗಳಿಗೆ ಮಾತ್ರ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಿದೆ. ಅಸ್ತಿತ್ವದಲ್ಲಿರುವ ಹಾಲ್‌ಮಾರ್ಕಿಂಗ್ ವ್ಯವಸ್ಥೆಯು ವಿಶಿಷ್ಟವಾದ ಆರು-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ (HUID) ಅನ್ನು ಒಳಗೊಂಡಿದೆ, ಇದು ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುತ್ತದೆ. ಬೆಳ್ಳಿಯ ಹಾಲ್‌ಮಾರ್ಕಿಂಗ್‌ಗೆ ಸಂಭಾವ್ಯ ವಿಸ್ತರಣೆಯು ಭಾರತದ ಅಮೂಲ್ಯ ಲೋಹಗಳ ಗುಣಮಟ್ಟ ನಿಯಂತ್ರಣ ಕ್ರಮಗಳ ಗಮನಾರ್ಹ ವಿಸ್ತರಣೆಯನ್ನು ಗುರುತಿಸುತ್ತದೆ.

ಕಳೆದ ತಿಂಗಳು, ಸರ್ಕಾರಿ ಮೂಲಗಳು ಬೆಳ್ಳಿಗೆ ಕಡ್ಡಾಯ ಹಾಲ್‌ಮಾರ್ಕಿಂಗ್ ಯೋಜನೆಯು ಪ್ರಸ್ತುತ ಪರಿಗಣನೆಯಲ್ಲಿದೆ ಮತ್ತು ಅನುಷ್ಠಾನದ ವಿಷಯದಲ್ಲಿ ಹಲವಾರು ಸಮಸ್ಯೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿತ್ತು. ಇತರ ಸಮಸ್ಯೆಗಳ ಪೈಕಿ, ಬೆಳ್ಳಿಯ ಆಭರಣಗಳ ಮೇಲೆ HUID ಗಳ ಬಾಳಿಕೆ (ಹಾಲ್‌ಮಾರ್ಕ್ ವಿಶಿಷ್ಟ ಗುರುತು) ಬಗ್ಗೆ ಚರ್ಚೆ ಮಾಡಬೇಕಾಗಿದೆ. ಚಿನ್ನದ ಮೇಲೆ ಹಾಕಲಾಗುವ HUID ದೀರ್ಘಕಾಲ ಬಾಳಿಕೆ ಬರುತ್ತದೆ. ಅದೇ ರೀತಿ ಬೆಳ್ಳಿಯ ಮೇಲೆ ಹಾಕಿದಲ್ಲಿ ವರ್ಷಗಳು ಕಳೆದ ಹಾಗೆ ಅದು ಅಳಿಸಿಹೋಗಬಹುದು, ತನ್ನ ಗುರುತನ್ನೂ ಕಳೆದುಕೊಳ್ಳಬಹುದು. ಅದೆಷ್ಟೇ ವರ್ಷವಾದರೂ HUID ಅಳಿಸಿ ಹೋಗದೇ ಇರುವ ರೀತಿಯಲ್ಲಿ ಬೆಳ್ಳಿಯ ಆಭರಣದ ಮೇಲೆ ಹೇಗೆ ಎಂಬೋಸ್‌ ಮಾಡಬಹದು ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದೆ.

Categories
ರಾಷ್ಟ್ರೀಯ ವಾರ್ತೆ

ಹೊಸ ವರ್ಷಕ್ಕೆ ಹೊಸ ನಿಯಮ: ಜನರೇ ಸಿದ್ಧರಾಗಿ…!

ಹೊಸ ವರ್ಷಕ್ಕೆ ಹೊಸ ನಿಯಮ: ಜನರೇ ಸಿದ್ಧರಾಗಿ…!
– ಕಾರು, ಎಲ್ಪಿಜಿ ಗ್ಯಾಸ್, ಇಂಟರ್ನೆಟ್ ಡೇಟಾ ದರ ಹೆಚ್ಚಳ
– ಪಡಿತರ ವಿತರಣೆ ನಿಯಮ ಬದಲು, ಹಳೆ ಮೊಬೈಲ್ ಅಲ್ಲಿ ವಾಟ್ಸಪ್ ಬರಲ್ಲ
– ಹೊಸ ನಿಯಮಗಳು ಜ.1 ರಿಂದಲೇ ಜಾರಿ: ಏನೇನಿದೆ ನೋಡಿ!

NAMMUR EXPRESS NEWS
ನವದೆಹಲಿ: 2024 ವರ್ಷವು ಕಳೆದು ಹೊಸ ವರ್ಷ ಬರಲು ಕ್ಷಣಗಣನೆ ಆರಂಭವಾಗಿದೆ. ಒಂದು ಕಡೆ ಹೊಸ ವರ್ಷದ ಖುಷಿಯಾದರೆ ಇನ್ನೊಂದು ಕಡೆ ಹಲವು ನಿಯಮಗಳು ಜನರ ಜೇಬಿಗೆ ಕತ್ತರಿ ಹಾಕಲಿವೆ. ಹಲವು ಕಾರು ಕಂಪನಿಗಳು ತಮ್ಮ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಇದಲ್ಲದೇ ಜಿಎಸ್‌ಟಿ ಪೋರ್ಟಲ್‌’ನಲ್ಲಿ ಮೂರು ಪ್ರಮುಖ ಬದಲಾವಣೆಗಳಾಗಲಿವೆ. ಭಾರತೀಯ ರಿಸರ್ವ್ ಬ್ಯಾಂಕ್, ಸ್ಥಿರ ಠೇವಣಿಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆಗಳನ್ನ ಮಾಡಿದೆ.
– ಜಿಎಸ್‌ಟಿ ನಿಯಮ ಕಟ್ಟುನಿಟ್ಟು ತೆರಿಗೆದಾರರು ಜ.1ರಿಂದ ಕಟ್ಟುನಿಟ್ಟಾದ ಜಿಎಸ್‌ಟಿ ನಿಯಮ ಪಾಲಿಸಬೇಕು. ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್ (ಎಂಎಫ್‌ಎ) ಜಿಎಸ್‌ಟಿ ಪೋರ್ಟಲ್ ಪ್ರವೇಶಿಸುವ 20 ಕೋಟಿ ರೂ.ಗಿಂತ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಗ್ರಾಹಕರಿಗೆ ಈ ನಿಯಮ ಅನ್ವಯಿಸಲಿದೆ. ಹಾಗೆಯೇ 180 ದಿನಗಳಿಗಿಂತ ಹಳೆಯದಾದ ಮೂಲ ದಾಖಲೆಗಳಿಗೆ ಮಾತ್ರ ಇನ್ಮುಂದೆ ಇ-ವೇ ಬಿಲ್ ರಚಿಸಲು ಅವಕಾಶ ಸಿಗಲಿದೆ.

– ಎಲ್ ಪಿ ಜಿ ತುಟ್ಟಿ ಸಾಧ್ಯತೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 73.58 ಡಾಲರ್ ತಲುಪಿದೆ. ಹೀಗಾಗಿ ಜ.1ರಿಂದಲೇ ಎಲ್ಪಿಜಿ ಸಿಲಿಂಡ‌ರ್ ದರ ಏರಿಕೆ ಆಗುವುದು ಬಹುತೇಕ ನಿಶ್ಚಿತ ಆಗಿದೆ. ಇನ್ನು ಎಲ್‌ಪಿಜಿ ಸಿಲಿಂಡ‌ರ್ ದರವನ್ನು ಯುಪಿಐನಲ್ಲೇ ಪಾವತಿಸುವ ಅವಕಾಶವೂ ಗ್ರಾಹಕರಿಗೆ ಲಭಿಸಲಿದೆ.

– ಪಡಿತರ ವಿತರಣೆ ನಿಯಮ ಬದಲು

ಪಡಿತರ ವಿತರಣಾ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ ಆಗಲಿದೆ. ಹಿಂದುಳಿದ ಕುಟುಂಬಗಳಿಗೆ ಆಹಾರ ಭದ್ರತೆ ಖಚಿತಪಡಿಸಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಜ.1 ರಿಂದ ಪಡಿತರದ ಜತೆಗೆ 1 ಸಾವಿರ ರೂ. ಹೆಚ್ಚುವರಿ ಆರ್ಥಿಕ ನೆರವು ನೀಡುವ ನಿಯಮ ಜಾರಿಯಾಗಲಿದೆ. ಸರಿ ಸುಮಾರು 80 ಕೋಟಿ ಜನರು ಈ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಇದೇ ವೇಳೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದವರ ಕಾರ್ಡ್‌ ಗಳು ರದ್ದಾಗಲಿವೆ. ಇದಿಷ್ಟೇ ಅಲ್ಲ ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 3 ಲಕ್ಷ ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 2 ಲಕ್ಷ ರೂ.ಗೆ ನಿಗದಿಯಾಗಲಿದೆ.

– ಡೇಟಾ ಶುಲ್ಕ ಹೆಚ್ಚಳ

ಮೊಬೈಲ್ ಡೇಟಾ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ. ಜತೆಗೆ ಹಳೆಯ ಆಂಡ್ರಾಯ್ಡ್ ಸ್ಮಾಟ್ ೯ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಣೆ ಸ್ಥಗಿತವಾಗಲಿದೆ.

– ಪಿಎಫ್ ವಿತ್‌ ಡ್ರಾ ಇನ್ನಷ್ಟು ಸುಲಭ

ಜ.1ರಿಂದ ಪಿಂಚಣಿದಾರರ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮ ಜಾರಿಗೊಳಿಸಲಿದೆ. ಇದರನ್ವಯ ಪಿಂಚಣಿದಾರರು ದೇಶದ ಯಾವುದೇ ಮೂಲೆಯಿಂದಾದರೂ ಪಿಎಫ್ ವಿತ್ ಡ್ರಾ ಮಾಡಿಕೊಳ್ಳಬಹುದು. ಯಾವುದೇ ಬ್ಯಾಂಕ್‌ನಿಂದಾದರೂ ಈ ಸೌಲಭ್ಯ ಪಡೆದುಕೊಳ್ಳುವ ಅವಕಾಶ ನೌಕರರಿಗೆ ಸಿಗಲಿದೆ.

– RBI FD ನಿಯಮಗಳಲ್ಲಿ ಬದಲಾವಣೆಗಳು.!

ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 1, 2025 ರಿಂದ NBFC ಗಳು ಮತ್ತು HFC ಗಳ ಸ್ಥಿರ ಠೇವಣಿಗಳ (FD) ನೀತಿಗಳನ್ನು ಬದಲಾಯಿಸಿದೆ. ಇವುಗಳಲ್ಲಿ ಸಾರ್ವಜನಿಕರಿಂದ ಠೇವಣಿಗಳನ್ನು ತೆಗೆದುಕೊಳ್ಳುವ ನಿಯಮಗಳಲ್ಲಿನ ಬದಲಾವಣೆಗಳು, ದ್ರವ ಆಸ್ತಿಯನ್ನು ಹೊಂದಿರುವ ಶೇಕಡಾವಾರು ಮತ್ತು ಠೇವಣಿಗಳನ್ನ ವಿಮೆ ಮಾಡುತ್ತವೆ.

– ಕಾರುಗಳ ಬೆಲೆ ಹೆಚ್ಚಳ .!
ಹೊಸ ವರ್ಷ ಬಂತೆಂದರೆ ಕಾರುಗಳ ಬೆಲೆ ಹೆಚ್ಚಾಗಲಿದೆ. ಹಲವಾರು ಪ್ರಮುಖ ಕಾರು ಕಂಪನಿಗಳು ಬೆಲೆ ಏರಿಕೆಯನ್ನು ಘೋಷಿಸಿವೆ. ಇವುಗಳಲ್ಲಿ ಮಾರುತಿ ಸುಜುಕಿ, ಹುಂಡೈ, ಮಹೀಂದ್ರಾ, ಮರ್ಸಿಡಿಸ್ ಬೆಂಜ್, BMW ಮತ್ತು ಆಡಿ ಸೇರಿವೆ. ಈ ಕಂಪನಿಗಳು ಬೆಲೆಯನ್ನು ಸುಮಾರು 3% ಹೆಚ್ಚಿಸುತ್ತವೆ. ಹೊಸ ವರ್ಷಕ್ಕೆ ಸಜ್ಜಾಗುತ್ತಿರುವ ಭಾರತ ಹೊಸ ಹೊಸ ಬದಲಾವಣೆಗೂ ಸಜ್ಜಾಗುತ್ತಿದೆ. ಮಧ್ಯಮ ವರ್ಗದ ಮೇಲೆ ಪರಿಣಾಮ ಬೀರುವಂತಹ ಹಲವು ಹೊಸ ನಿಯಮಗಳು ಜ.1ರಿಂದಲೇ ಜಾರಿಯಾಗಲಿವೆ.