Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಾಳೆಯಿಂದ ಪುನರಾರಂಭಗೊಳ್ಳಲಿದೆ ಐಪಿಎಲ್ -2025

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ – 2025
* ನಾಳೆಯಿಂದ ಪುನರಾರಂಭಗೊಳ್ಳಲಿದೆ ಐಪಿಎಲ್ -2025
* ಪ್ಲೇ ಆಫ್ ರೇಸ್‌ನಲ್ಲಿರೋ ಏಳು ತಂಡಗಳು

NAMMMUR EXPRESS SPORTS NEWS
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ – 2025ರ ಪಂದ್ಯಗಳನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಮೇ 17ರಿಂದ ಮತ್ತೆ ಐಪಿಎಲ್ ಆರಂಭವಾಗಲಿದ್ದು, ಎಲ್ಲಾ ತಂಡಗಳು ಸಿದ್ಧತೆ ಆರಂಭಿಸಿವೆ. ಈಮಧ್ಯೆ, ತವರಿಗೆ ಮರಳಿರುವ ಕೆಲವು ವಿದೇಶಿ ಆಟಗಾರರ ಅಲಭ್ಯತೆ ಕುರಿತು ಫ್ರಾಂಚೈಸಿಗಳಿಗೆ ಇದೀಗ ತಲೆನೋವು ಶುರುವಾಗಿದೆ.
2025ನೇ ಆವೃತ್ತಿಯಲ್ಲಿ ಟ್ರೋಫಿಯ ಕನಸು ಏಳು ತಂಡಗಳಿಗೆ ಇನ್ನೂ ಜೀವಂತವಾಗಿದೆ. ಇದೀಗ ಪ್ಲೇಆಫ್ ತಲುಪಲು ಯಾವ ತಂಡಗಳು ಎಷ್ಟೆಷ್ಟು ಅಂಕ ಗಳಿಸಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಐಪಿಎಲ್ 2025 ಪ್ಲೇಆಫ್ ತಲುಪಲು 17 ಅಂಕಗಳನ್ನು ಗಳಿಸಬೇಕಿದೆ.

* ಗುಜರಾತ್ ಟೈಟಾನ್ಸ್ – 16 ಅಂಕಗಳು, NRR 0.793
* ಆರ್‌ಸಿಬಿ – 16 ಅಂಕಗಳು, NRR 0.482
* ಪಂಜಾಬ್ ಕಿಂಗ್ಸ್ – 15 ಅಂಕಗಳು, NRR 0.376
* ಮುಂಬೈ ಇಂಡಿಯನ್ಸ್ – 14 ಅಂಕಗಳು, NRR 1.156
* ಡೆಲ್ಲಿ ಕ್ಯಾಪಿಟಲ್ಸ್ – 13 ಅಂಕಗಳು, NRR 0.362
* ಕೋಲ್ಕತ್ತಾ ನೈಟ್ ರೈಡರ್ಸ್ – 11 ಅಂಕಗಳು, NRR 0.193
* ಲಕ್ನೋ ಸೂಪರ್ ಜೈಂಟ್ಸ್ – 10 ಅಂಕಗಳು, NRR -0.469

ಆರ್‌ಸಿಬಿ ತಂಡಕ್ಕೆ ಮರಳಿದ ಲಿವಿಂಗ್ ಸ್ಟೋನ್ ಮತ್ತು ರೊಮೊರಿಯೋ ಶೆಫರ್ಡ್ !

ನಾಳೆಯಿಂದ ಪುನರಾರಂಭಗೊಳ್ಳಲಿರುವ ಐಪಿಎಲ್ ಪಂದ್ಯದ ಮೊದಲ ಪಂದ್ಯ ಆರ್‌ಸಿಬಿ ಹಾಗೂ ಕೊಲ್ಕತ್ತಾ ತಂಡಗಳ ನಡುವೆ ನಡೆಯಲಿದ್ದು,ಈ ನಡುವೆ ಸ್ವದೇಶಕ್ಕೆ ಮರಳಿದ್ದ ರೊಮಾರಿಯೋ ಶೆಫರ್ಡ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಆರ್ ಸಿಬಿ ತಂಡ ಸೇರಿಕೊಳ್ಳಲಿದ್ದಾರೆ. ಇಡೀ ಐಪಿಎಲ್ ಟೂರ್ನಿಯಲ್ಲಿ ರೊಮಾರಿಯೋ ಶೆಫರ್ಡ್ ತಂಡದಲ್ಲಿರಲಿದ್ದಾರೆ. ಬಳಿಕ ಅವರ ರಾಷ್ಟ್ರೀಯ ತಂಡದ ಸೇವೆಗೆ ನಿಯೋಜನೆಯಾಗಲಿದ್ದಾರೆ ಎಂದು ಹೇಳಲಾಗಿದ್ದು, ಲಿವಿಂಗ್ ಸ್ಟೋನ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ ಕಾರಣ ಆರ್ ಸಿಬಿಯಲ್ಲಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ.
ಉಳಿದಂತೆ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬದಲಿಗೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಾತ್ಕಾಲಿಕ ಬದಲಿ ಆಟಗಾರ ಎಂದು ಪರಿಗಣಿಸಲಾಗಿದೆ ಎಂದು ಆರ್ ಸಿಬಿ ತಂಡದ ಮೂಲಗಳು ತಿಳಿಸಿವೆ.
ಈ ನಡುವೆ ಗಾಯಗೊಂಡು ಹೊರಗುಳಿದಿರುವ ದೇವದತ್ ಪಡಿಕ್ಕಲ್ ಬದಲಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಈಗಾಗಲೇ ತಂಡ ಸೇರಿಕೊಂಡಿದ್ದು, ನಾಯಕ ರಜತ್ ಪಾಟಿದಾರ್ ಗಾಯದ ಸಮಸ್ಯೆ ತಂಡಕ್ಕೆ ತಲೆನೋವಾಗಿದೆ.
ಮತ್ತೊಂದೆಡೆ ಹೇಜಲ್ ವುಡ್ ಬದಲಿಗೆ ಶ್ರೀಲಂಕಾದ ಬೇಬಿ ಮಲಿಂಗಾ ಎಂದೇ ಖ್ಯಾತಗಳಿಸಿರುವ ನುವಾನ್ ತುಷಾರ ಆರ್ ಸಿಬಿ ತಂಡ ಸೇರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ನ್ಯೂಜಿಲೆಂಡ್ ಬೌಲರ್ ಮ್ಯಾಟ್ ಹೆನ್ರಿ ಮತ್ತು ಫಿಲ್ ಸಾಲ್ಟ್ ಕೂಡ ಆರ್ ಸಿಬಿ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿಂಗ್ ಕೊಹ್ಲಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿಂಗ್ ಕೊಹ್ಲಿ
* ಮತ್ತೆ ಆರಂಭವಾಗಲಿದೆ ಐಪಿಎಲ್ ಹಬ್ಬ

NAMMMUR EXPRESS SPORTS NEWS
ದೆಹಲಿ: ಕ್ರಿಕೆಟ್ ಜಗತ್ತಿನ ರನ್ ಮಷಿನ್ ಕಿಂಗ್ ಕೊಹ್ಲಿ ಅಂತರಾಷ್ಟ್ರೀಯ ಟೆಸ್ಟ್​ಗೂ ವಿದಾಯ ಹೇಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ರೋಹಿತ್​ ಶರ್ಮಾ ಅವರ ಹಾದಿಯನ್ನೇ ಕೊಹ್ಲಿ ಅನುಸರಿಸಿ ಟೆಸ್ಟ್‌ಗೆ ವಿದಾಯ ಹೇಳಲು ಉದ್ದೇಶಿಸಿದ್ದಾರೆ ಎಂದು ಕ್ರಿಕೆಟ್ ಮೂಲಗಳು ಬಹಿರಂಗಪಡಿಸಿವೆ. ಅಲ್ಲದೆ ಕೊಹ್ಲಿ ಈ ವಿಷಯವನ್ನು ಬಿಸಿಸಿಐ ಗಮನಕ್ಕೂ ತಂದಿದ್ದಾರೆ ಎಂದು ವರದಿಗಳಾಗಿವೆ.

* ರನ್ ಮಷಿನ್ ಟೆಸ್ಟ್​ ದಾಖಲೆ
36 ವರ್ಷದ ವಿರಾಟ್​ ಕೊಹ್ಲಿ 123 ಟೆಸ್ಟ್ ಪಂದ್ಯಗಳಲ್ಲಿ 30 ಶತಕಗಳು ಸೇರಿದಂತೆ 46.85 ಸರಾಸರಿಯೊಂದಿಗೆ 9230 ರನ್ ಗಳಿಸಿದ್ದಾರೆ. ಆದಾಗ್ಯೂ, ಕಳೆದ ಐದು ವರ್ಷಗಳಲ್ಲಿ ಅವರ ಸರಾಸರಿ ಕುಸಿದಿದೆ, 37 ಪಂದ್ಯಗಳಲ್ಲಿ ಕೇವಲ ಮೂರು ಶತಕಗಳು ಬಾರಿಸಿದ್ದು 1990 ರನ್ ಗಳಿಸಿದ್ದಾರೆ.

ಸದ್ಯ ಐಪಿಎಲ್ 2025ರಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ಕೊಹ್ಲಿ 11 ಪಂದ್ಯಗಳನ್ನು ಆಡಿ 143.46 ಸ್ಟ್ರೈಕ್ ರೇಟ್‌ನೊಂದಿಗೆ 505 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.

* ಮತ್ತೆ ಆರಂಭವಾಗಲಿದೆ ಐಪಿಎಲ್ ಹಬ್ಬ
ಐಪಿಎಲ್ 2025 ಮೇ 17 ರಿಂದ ಮತ್ತೆ ಶುರುವಾಗಲಿದೆ ಎಂದು ಬಿಸಿಸಿಐ ಸೋಮವಾರ ಹೇಳಿದೆ. ಭಾರತ-ಪಾಕ್ ಗಡಿ ವಿಚಾರದಿಂದ ಐಪಿಎಲ್ ಒಂದು ವಾರ ನಿಂತುಹೋಗಿತ್ತು. ಉಳಿದ ಪಂದ್ಯಗಳು ಆರು ಕಡೆಗಳಲ್ಲಿ ನಡೆಯುತ್ತೆ, ಫೈನಲ್ ಜೂನ್ 3 ಕ್ಕೆ ಅಂತ ಬಿಸಿಸಿಐ ಹೇಳಿದೆ.

* ಹೀಗಿದೆ ಐಪಿಎಲ್ -2025 ರ ಹೊಸ ಶೆಡ್ಯೂಲ್
ಮೇ 17 (ಶನಿವಾರ) – ರಾತ್ರಿ 7:30 ಕ್ಕೆ ಆರ್‌ಸಿಬಿ vs ಕೆಕೆಆರ್ (ಸ್ಥಳ: ಬೆಂಗಳೂರು)

ಮೇ 18 (ಭಾನುವಾರ) – ಮಧ್ಯಾಹ್ನ 3:30ಕ್ಕೆ ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ (ಸ್ಥಳ: ಜೈಪುರ)

ಮೇ 18 (ಭಾನುವಾರ) – ರಾತ್ರಿ 7:30 ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ (ಸ್ಥಳ: ದೆಹಲಿ)

ಮೇ 19(ಸೋಮವಾರ) – ರಾತ್ರಿ 7:30 ಕ್ಕೆ ಲಕ್ನೋ ಸೂಪರ್ ಜೈಂಟ್ಸ್ vs ಸನ್‌ರೈಸರ್ಸ್ ಹೈದರಾಬಾದ್ (ಸ್ಥಳ: ಲಕ್ನೋ)

ಮೇ 20 (ಮಂಗಳವಾರ) – ರಾತ್ರಿ 7:30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ (ಸ್ಥಳ: ದೆಹಲಿ)

ಮೇ 21(ಬುಧವಾರ) – ರಾತ್ರಿ 7:30 ಕ್ಕೆ ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಸ್ಥಳ: ಮುಂಬೈ)

ಮೇ 25 (ಗುರುವಾರ) – ರಾತ್ರಿ 7:30 ಕ್ಕೆ ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಸ್ಥಳ: ಅಹಮದಾಬಾದ್)

ಮೇ 23 (ಶುಕ್ರವಾರ) – ರಾತ್ರಿ 7:30 ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ (ಸ್ಥಳ: ಬೆಂಗಳೂರು)

ಮೇ 24 (ಶನಿವಾರ) – ರಾತ್ರಿ 7:30 ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಸ್ಥಳ: ಜೈಪುರ)

ಮೇ 25 (ಭಾನುವಾರ) – ಮಧ್ಯಾಹ್ನ 3:30 ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್ (ಸ್ಥಳ: ಅಹಮದಾಬಾದ್)

ಮೇ 25 (ಭಾನುವಾರ) – ರಾತ್ರಿ 7:30ಸನ್‌ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ (ಸ್ಥಳ: ದೆಹಲಿ)

ಮೇ 26 (ಸೋಮವಾರ) – ರಾತ್ರಿ 7:30 ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಸ್ಥಳ: ಜೈಪುರ)

ಮೇ 27(ಮಂಗಳವಾರ) – ರಾತ್ರಿ 7:30 ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ (ಸ್ಥಳ: ಲಕ್ನೋ)

ಮೇ 28 (ಬುಧವಾರ) – ರಾತ್ರಿ 7:30: ಕೆಕೆಆರ್ vs ಡೆಲ್ಲಿ ಕ್ಯಾಪಿಟಲ್ಸ್ (ಸ್ಥಳ: ದೆಹಲಿ)

ಐಪಿಎಲ್ 2025: ಪ್ಲೇ ಆಫ್
ಮೇ 29(ಗುರುವಾರ) – ರಾತ್ರಿ 7:30 ಕ್ವಾಲಿಫೈಯರ್ 1 (ಸ್ಥಳ: ನಂತರ ತಿಳಿಸಲಾಗುವುದು)

ಮೇ 30 (ಶುಕ್ರವಾರ) – ರಾತ್ರಿ 7:30 ಎಲಿಮಿನೇಟರ್ (ಸ್ಥಳ: ನಂತರ ತಿಳಿಸಲಾಗುವುದು)

ಮೇ 31(ಶನಿವಾರ) – ರಾತ್ರಿ 7:30 ಕ್ವಾಲಿಫೈಯರ್ 2 (ಸ್ಥಳ: ನಂತರ ತಿಳಿಸಲಾಗುವುದು)

ಜೂ.02 (ಸೋಮವಾರ) – ರಾತ್ರಿ 7:30: TBD (ಸ್ಥಳ: ನಂತರ ತಿಳಿಸಲಾಗುವುದು)

ಜೂ.03 (ಮಂಗಳವಾರ) – ರಾತ್ರಿ 7:30 TBD (ಸ್ಥಳ: ನಂತರ ತಿಳಿಸಲಾಗುವುದು)

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಚೆನ್ನೈ ವಿರುದ್ಧ ಮುಗ್ಗರಿಸಿದ ಕೋಲ್ಕತ್ತಾ,ಪ್ಲೇ ಆಫ್ ಹಾದಿ ಕಠಿಣ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025

* ಚೆನ್ನೈ ವಿರುದ್ಧ ಮುಗ್ಗರಿಸಿದ ಕೋಲ್ಕತ್ತಾ,ಪ್ಲೇ ಆಫ್ ಹಾದಿ ಕಠಿಣ
* ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ

NAMMMUR EXPRESS SPORTS NEWS
ಕೋಲ್ಕತ್ತಾ: ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದಲ್ಲಿ ಚೆನ್ನೈ 2 ವಿಕೆಟ್‌ ಗೆಲುವು ದಾಖಲಿಸಿದೆ. ಆ ಮೂಲಕ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು. ಆದರೆ ಸೋತ ಕೆಕೆಆರ್‌ ತಂಡದ ಪ್ಲೇ ಆಫ್ ಹಾದಿ ಇನ್ನಷ್ಟು ಕಠಿಣವಾಗಿದೆ.
ನೂರ್‌ ಅಹ್ಮದ್‌ (31/ 4) ಅವರ ಸ್ಪಿನ್‌ ಮೋಡಿ ಹಾಗೂ ಡೆವಾಲ್ಡ್‌ ಬ್ರೆವಿಸ್‌ (52 ರನ್‌) ಅವರ ಸ್ಪೋಟಕ ಅರ್ಧಶತಕದ ಸಹಾಯದಿಂದ ತಂಡ ಗೆಲುವು ದಾಖಲಿಸಿತು. ಕೆಕೆಆರ್‌ ನೀಡಿದ್ದ 180 ರನ್‌ ಗುರಿ ಹಿಂಬಾಲಿಸಿದ ಚೆನ್ನೈ 19.4 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 183 ರನ್‌ ಗಳಿಸಿ ಜಯಿಸಿತು.
ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, ನೂರ್‌ ಅಹ್ಮದ್‌ ಸ್ಪಿನ್‌ ಮೋಡಿಯ ಹೊರತಾಗಿಯೂ ಅಜಿಂಕ್ಯ ರಹಾನೆ, ಆಂಡ್ರೆ ರಸೆಲ್‌ ಹಾಗೂ ಮನೀಷ್‌ ಪಾಂಡೆ ಬ್ಯಾಟಿಂಗ್‌ ಬಲದಿಂದ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 179 ರನ್‌ಗಳನ್ನು ಕಲೆ ಹಾಕಿತ್ತು.
ಕೆಕೆಆರ್‌ ಪರ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ನಾಯಕ ಅಜಿಂಕ್ಯ ರಹಾನೆ 33 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 48 ರನ್‌ಗಳನ್ನು ಕಲೆ ಹಾಕಿದರು. ಆದರೆ, ಅರ್ಧಶತಕ ದಂಚಿನಲ್ಲಿ ಅವರು ರವೀಂದ್ರ ಜಡೇಜಾಗೆ ವಿಕೆಟ್‌ ಒಪ್ಪಿಸಿದರು. ರಹಾನೆ ವಿಕೆಟ್‌ ಒಪ್ಪಿಸಿದ ಬಳಿಕ ಸ್ಪೋಟಕ ಬ್ಯಾಟ್‌ ಮಾಡಿದ ಕನ್ನಡಿಗ ಮನೀಷ್‌ ಪಾಂಡೆ 28 ಎಸೆತಗಳಲ್ಲಿ 36 ರನ್‌ಗಳನ್ನು ಸಿಡಿಸಿದರೆ, ಆಂಡ್ರೆ ರಸೆಲ್‌ 21 ಎಸೆತಗಳಲ್ಲಿ 38 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಕೆಕೆಆರ್‌ 150ರ ಗಡಿ ದಾಟಲು ನೆರವು ನೀಡಿದ್ದರು.

* ಕೆಕೆಆರ್‌ ಪ್ಲೇ ಆಫ್ ಹಾದಿ ಕಠಿಣ
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಪ್ಲೇ ಆಫ್ ಹಾದಿ ಇನ್ನಷ್ಟು ಕಠಿಣವಾಗಿದೆ. ಇದೀಗ 11 ಅಂಕಗಳನ್ನು ಹೊಂದಿರುವ ಕೆಕೆಆರ್‌, ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಒಂದು ವೇಳೆ ಗೆದ್ದರೂ ಕೆಕೆಆರ್‌ನ ನಾಕ್‌ ಔಟ್‌ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ.

* ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ
ಮುಂಬೈ: 2024 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ಬಳಿಕ ಚುಟುಕು ಮಾದರಿಗೆ ವಿದಾಯ ಹೇಳಿದ್ದ ರೋಹಿತ್ ಶರ್ಮಾ, ಇದೀಗ ಐಪಿಎಲ್ ನಡುವೆ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಳ್ಳುವ ಮೂಲಕ ರೋಹಿತ್ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ವಾಸ್ತವವಾಗಿ ರೋಹಿತ್ ಬಹಳ ಸಮಯದಿಂದ ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ರನ್‌ಗಳಿಸಲು ಕಷ್ಟಪಡುತ್ತಿದ್ದರು. ಇದರ ಜೊತೆಗೆ, ರೋಹಿತ್ ನಾಯಕತ್ವದಲ್ಲಿ, ಟೀಂ ಇಂಡಿಯಾ ನ್ಯೂಜಿಲೆಂಡ್‌ ವಿರುದ್ಧ ತವರಿನಲ್ಲೇ ವೈಟ್ ವಾಶ್ ಅನುಭವಿಸಿತ್ತು. ಆ ನಂತರ ಆಸ್ಟ್ರೇಲಿಯಾದ ನೆಲದಲ್ಲಿ ಮುಜುಗರವನ್ನು ಎದುರಿಸಬೇಕಾಯಿತು.
ಹಿಟ್‌ಮ್ಯಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದು ಅದರಲ್ಲಿ, ‘ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ನಿಮಗೆಲ್ಲರಿಗೂ ಹೇಳಲು ಬಯಸುತ್ತೇನೆ. ನನ್ನ ದೇಶವನ್ನು ಬಿಳಿ ಬಟ್ಟೆ ಧರಿಸಿ ಪ್ರತಿನಿಧಿಸುವುದು ನನಗೆ ದೊಡ್ಡ ಗೌರವವಾಗಿದೆ. ಇಷ್ಟು ವರ್ಷಗಳ ಕಾಲ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು’ ಎಂದು ರೋಹಿತ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ವಾಸ್ತವವಾಗಿ ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದೀಗ ಈ ಸರಣಿಗೂ ಮುನ್ನ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿರುವುದರಿಂದ ಭಾರತ ಟೆಸ್ಟ್ ತಂಡಕ್ಕೆ ಯಾರು ನಾಯಕರಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಆದಾಗ್ಯೂ ನಾಯಕತ್ವದ ರೇಸ್‌ನಲ್ಲಿ ಮೂವರ ಹೆಸರುಗಳು ಮುಂಚೂಣಿಯಲ್ಲಿವೆ.
ರೋಹಿತ್ ಶರ್ಮಾ ನಿವೃತ್ತಿಯ ನಂತರ, ಟೀಂ ಇಂಡಿಯಾವನ್ನು ಟೆಸ್ಟ್‌ನಲ್ಲಿ ಮುನ್ನಡೆಸುವ ರೇಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಹೆಸರು ಮುಂಚೂಣಿಯಲ್ಲಿದೆ. ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಭಾರತ ತಂಡವನ್ನು ಮುನ್ನಡೆಸಿದ್ದರು. ಟೀಂ ಇಂಡಿಯಾ ಗೆಲ್ಲುವಲ್ಲಿ ಯಶಸ್ವಿಯಾದ ಏಕೈಕ ಪಂದ್ಯ ಇದಾಗಿತ್ತು. ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಅನುಭವ ಹೊಂದಿದ್ದು, ನಾಯಕನಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.ಟೀಂ ಇಂಡಿಯಾದ ಮುಂದಿನ ಟೆಸ್ಟ್ ನಾಯಕನಾಗುವ ರೇಸ್‌ನಲ್ಲಿ ಶುಭ್​ಮನ್ ಗಿಲ್ ಹೆಸರೂ ಸೇರಿದೆ. ಶುಭ್​ಮನ್ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ಉಪನಾಯಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆಯ್ಕೆದಾರರು ನಾಯಕನನ್ನು ಆಯ್ಕೆ ಮಾಡುವಾಗ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡರೆ, ಗಿಲ್ ಅವರ ಮೊದಲ ಆಯ್ಕೆಯಾಗಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ಶುಭ್​ಮನ್ ಅವರ ಪ್ರದರ್ಶನ ಉತ್ತಮವಾಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗುವ ರೇಸ್‌ನಲ್ಲಿ ರಿಷಭ್ ಪಂತ್ ಹೆಸರೂ ಸೇರಿದೆ. ಪಂತ್ ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಪಂದ್ಯಗಳಲ್ಲಿ ಭಾರತ ತಂಡಕ್ಕೆ ಸ್ಮರಣೀಯ ಗೆಲುವುಗಳನ್ನು ನೀಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆಯ್ಕೆದಾರರು ಪಂತ್ ಹೆಸರನ್ನು ಸಹ ಪರಿಗಣಿಸಬಹುದು. ಪಂತ್‌ಗೆ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿದ ಅನುಭವ ಬಹಳಷ್ಟಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಕೊನೆ ಬಾಲ್ ಥ್ರಿಲ್ಲರ್ ಗೆದ್ದ ಗುಜರಾತ್ ಟೈಟಾನ್ಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಕೊನೆ ಬಾಲ್ ಥ್ರಿಲ್ಲರ್ ಗೆದ್ದ ಗುಜರಾತ್ ಟೈಟಾನ್ಸ್
* ಮತ್ತೆ ಅಗ್ರಸ್ಥಾನಕ್ಕೇರಿದ ಗುಜರಾತ್

NAMMMUR EXPRESS SPORTS NEWS
ಮುಂಬೈ: ಮಧ್ಯರಾತ್ರಿಯವರೆಗೂ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮಳೆಯಿಂದ ಬಾಧಿತ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ಮತ್ತೆ ಅಗ್ರಸ್ಥಾನದಲ್ಲಿದೆ. ಗುಜರಾತ್ ತಂಡವು 132/6 ಅಂಕಗಳನ್ನು ಗಳಿಸಿತ್ತು, ಕೊನೆಯ ಎರಡು ಓವರ್‌ಗಳಲ್ಲಿ 24 ರನ್‌ಗಳ ಅಗತ್ಯವಿತ್ತು, ಆದರೆ ವಾಂಖೆಡೆ ಕ್ರೀಡಾಂಗಣದಲ್ಲಿ ಮಳೆ ಮರಳಿತು. ಆದಾಗ್ಯೂ, ಆಟ ಪುನರಾರಂಭವಾಗುತ್ತಿದ್ದಂತೆ, ಗುಜರಾತ್ ತಂಡಕ್ಕೆ 147 (6 ಎಸೆತಗಳಲ್ಲಿ 15) ರನ್‌ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು, ಅದನ್ನು ಅವರು ಅಂತಿಮ ಎಸೆತದಲ್ಲಿ ಸಾಧಿಸಿದರು. ಇದಕ್ಕೂ ಮೊದಲು, ವಿಲ್ ಜ್ಯಾಕ್ಸ್ ಅರ್ಧಶತಕ ಗಳಿಸಿದರು ಆದರೆ ಗುಜರಾತ್‌ನ ಕ್ಲಿನಿಕಲ್ ಬೌಲಿಂಗ್ ಪ್ರದರ್ಶನದಿಂದ ಮುಂಬೈ ತಂಡವು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು, ಇದನ್ನು 155/8 ಕ್ಕೆ ಸೀಮಿತಗೊಳಿಸಲಾಯಿತು. ರಯಾನ್ ರಿಕಲ್ಟನ್ ಔಟಾದ ನಂತರ ಜ್ಯಾಕ್ಸ್ ಬೇಗನೆ ಮಧ್ಯಕ್ಕೆ ನಡೆಯಬೇಕಾಯಿತು ಮತ್ತು ಮುಂಬೈ ಇಂಡಿಯನ್ಸ್ ಪರ ತನ್ನ ಮೊದಲ ಅರ್ಧಶತಕ ಗಳಿಸುವ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡರು. ಎರಡೂ ತಂಡಗಳು 14 ಅಂಕಗಳೊಂದಿಗೆ ಸಮಬಲ ಸಾಧಿಸಿವೆ ಆದರೆ ಗುಜರಾತ್ 10 ಪಂದ್ಯಗಳಿಗೆ ಹೋಲಿಸಿದರೆ ಮುಂಬೈ 11 ಪಂದ್ಯಗಳನ್ನು ಆಡಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಗೆಲುವಿನ ನಿರೀಕ್ಷೆಯಲ್ಲಿದ್ದ ಹೈದ್ರಾಬಾದ್‌ಗೆ ಮಳೆರಾಯ ಶಾಕ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಗೆಲುವಿನ ನಿರೀಕ್ಷೆಯಲ್ಲಿದ್ದ ಹೈದ್ರಾಬಾದ್‌ಗೆ ಮಳೆರಾಯ ಶಾಕ್
* ಪ್ಲೇ ಆಫ್‌ನಿಂದ ಹೊರಬಿದ್ದ 3 ನೇ ತಂಡ ಸನ್ ರೈಸರ್ಸ್ ಹೈದ್ರಾಬಾದ್

NAMMMUR EXPRESS SPORTS NEWS
ಹೈದ್ರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯವು ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಗಿದ್ದು, ಇದರೊಂದಿಗೆ ಹೈದ್ರಾಬಾದ್ ತಂಡವು ಅಧಿಕೃತವಾಗಿ ಐಪಿಎಲ್‌ 18ನೇ ಆವೃತ್ತಿಯಿಂದ ಹೊರಬಿದ್ದಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಖಾತೆಗೆ ಒಂದು ಅಂಕ ಸೇರ್ಪಡೆಯಾಗಿದ್ದು, 11 ಪಂದ್ಯಗಳ ನಂತರ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಂದ್ಯ ರದ್ದಾಗಿದ್ದು ಡೆಲ್ಲಿ ತಂಡಕ್ಕೆ ತುಸು ನಿಟ್ಟುಸಿರು ಬಿಡುವಂತಾಗಿದೆ. ಸೋಲುವ ಹಂತದಲ್ಲಿದ್ದ ಪಂದ್ಯ ರದ್ದಾಗಿದ್ದು ತಂಡಕ್ಕೆ ತುಸು ಲಾಭವಾಗಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ, ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುವ ಮೂಲಕ 7 ವಿಕೆಟ್‌ ಕಳೆದುಕೊಂಡು ಕೇವಲ 133 ರನ್‌ ಮಾತ್ರ ಗಳಿಸಲು ಶಕ್ತವಾಯ್ತು. ಅಲ್ಪ ಮೊತ್ತವನ್ನು ಸುಲಭವಾಗಿ ಚೇಸಿಂಗ್‌ ಮಾಡುವ ಲೆಕ್ಕಾಚಾರ ಸನ್‌ರೈಸರ್ಸ್‌ ತಂಡದ್ದಾಗಿತ್ತು. ಆದರೆ, ಮೊದಲ ಇನ್ನಿಂಗ್ಸ್‌ ಮುಕ್ತಾಯವಾದ ನಂತರ ಹೈದರಾಬಾದ್‌ನಲ್ಲಿ ಜೋರಾಗಿ ಮಳೆ ಸುರಿಯಿತು. ಹೀಗಾಗಿ ಪಂದ್ಯವನ್ನು ಕೆಲಕಾಲ ಮುಂದೂಡಬೇಕಾಯ್ತು. ಕೊನೆಗೆ ಮಳೆ ನಿಂತರೂ, ಜೋರಾಗಿ ಸುರಿದ ಮಳೆಯಿಂದಾಗಿ ಮೈದಾನದೆಲ್ಲಡೆ ನೀರು ನಿಂತಿತ್ತು. ಸಕಾಲಕ್ಕೆ ಪಂದ್ಯ ಮರುಆರಂಭ ಮಾಡಲು ಸಾಧ್ಯವಾಗದ ಕಾರಣದಿಂದ ಪಂದ್ಯವನ್ನು ರದ್ದುಪಡಿಸಲಾಯ್ತು. ಚೇಸಿಂಗ್‌ನಲ್ಲಿ ಒಂದೂ ಓವರ್‌ ಎಸೆಯಲು ಸಾಧ್ಯವಾಗದ ಕಾರಣ, ಫಲಿತಾಂಶವಿಲ್ಲದೆ ಪಂದ್ಯ ರದ್ದು ಮಾಡಲಾಯ್ತು. ಹೀಗಾಗಿ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ಹಂಚಲಾಯ್ತು. ಸನ್ ರೈಸರ್ಸ್ ತಂಡದ ಖಾತೆಯಲ್ಲಿ ಒಟ್ಟು 7 ಅಂಕಗಳು ಮಾತ್ರವೇ ಬಿತ್ತು. ಇದರೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಉಳಿದ ತಂಡವು ಟೂರ್ನಿಯಿಂದ ಹೊರಬಿದ್ದಿದೆ.

* ಪ್ಯಾಟ್‌ ಕಮಿನ್ಸ್‌ ಮಾರಕ ದಾಳಿ
ಪಂದ್ಯದಲ್ಲಿ ಡೆಲ್ಲಿ ಇನ್ನಿಂಗ್ಸ್‌ ಸಂಪೂರ್ಣವಾಗಿ ನಡೆಯಿತು. ಇನ್ನಿಂಗ್ಸ್‌ ಆರಂಭದಲ್ಲಿಯೇ ತಂಡದ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ಔಟಾದರು. ಕರುಣ್‌ ನಾಯರ್‌ ಗೋಲ್ಡನ್‌ ಡಕ್‌ಗೆ ಬಲಿಯಾದರೆ, ಫಾಫ್ ಡುಪ್ಲೆಸಿಸ್‌ 3 ರನ್‌ ಮಾತ್ರ ಗಳಿಸಿದರು. ಅಭಿಷೇಕ್‌ ಪೊರೆಲ್‌ ಕೂಡಾ 8 ರನ್‌ ಗಳಿಸಿ ನಿರ್ಗಮಿಸಿದರು. ವಿಶೇಷವೆಂದರೆ, ಈ ಮೂರೂ ವಿಕೆಟ್‌ ಪಡೆದಿದ್ದು ಸನ್ ರೈಸರ್ಸ್ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌. ಇಷ್ಟೇ ಅಲ್ಲ, ಎಲ್ಲಾ ಮೂರು ಕ್ಯಾಚ್‌ ಪಡೆದಿದ್ದು ವಿಕೆಟ್‌ ಕೀಪರ್‌ ಇಶಾನ್‌ ಕಿಶನ್.‌ಡೆಲ್ಲಿ ನಾಯಕ ಅಕ್ಷರ್‌ ಪಟೇಲ್‌ 6 ರನ್‌ ಗಳಿಸಿದರೆ, ಕೆಎಲ್‌ ರಾಹುಲ್‌ ಆಟ 10 ರನ್‌ಗೆ ಅಂತ್ಯವಾಯ್ತು. ಕೊನೆಯಲ್ಲಿ ಅಬ್ಬರಿಸಿದ ಅಶುತೋಷ್‌ ಶರ್ಮಾ 41 ರನ್‌ ಸಿಡಿಸಿದರು. ಇವರಿಗೆ ಸಾಥ್‌ ನೀಡಿದ ಟ್ರಿಸ್ಟಾನ್ ಸ್ಟಬ್ಸ್‌ ಅಜೇಯ 41 ರನ್‌ ಪೇರಿಸಿದರು.
ಡೆಲ್ಲಿ ಇನ್ನಿಂಗ್ಸ್‌ ಮುಕ್ತಾಯವಾದ ಇನ್ನಿಂಗ್ಸ್‌ ಬ್ರೇಕ್‌ ವೇಳೆ ಮಳೆ ಸುರಿಯಲು ಆರಂಭವಾಯ್ತು. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯ್ತು. ಉಭಯ ತಂಡಗಳು ತಲಾ ಒಂದು ಅಂಕಗಳನ್ನು ಪಡೆದಿವೆ. ಪಂದ್ಯವನ್ನು ಡೆಲ್ಲಿ ತಂಡ ಸೋಲುವ ಭೀತಿಯಲ್ಲಿತ್ತು, ಹೀಗಾಗಿ ಸಿಕ್ಕ ಒಂದು ಅಂಕ ಅಕ್ಷರ್‌ ಪಟೇಲ್‌ ಪಡೆಗೆ ಲಾಭವಾಗಲಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಕೆಕೆಅರ್‌ಗೆ ಒಂದು ರನ್‌ ಜಯ,ಪ್ಲೇ ಆಫ್ ಕನಸು ಜೀವಂತ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್-2025
* ಕೆಕೆಅರ್‌ಗೆ ಒಂದು ರನ್‌ ಜಯ,ಪ್ಲೇ ಆಫ್ ಕನಸು ಜೀವಂತ
* ಪಂಜಾಬ್ ಆರ್ಭಟಕ್ಕೆ ಲಖನೌ ನಿರುತ್ತರ

NAMMMUR EXPRESS SPORTS NEWS
* ಕೆಕೆಅರ್‌ಗೆ ಒಂದು ರನ್‌ ಜಯ,ಪ್ಲೇ ಆಫ್ ಕನಸು ಜೀವಂತ
ಕೊಲ್ಕತ್ತಾ:ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ರೋಮಾಂಚಕಾರಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಕೊನೆಯ ಎಸೆತದಲ್ಲಿ 1 ರನ್​ನಿಂದ ಜಯ ಸಾಧಿಸಿದೆ.ತಮ್ಮ ತವರು ಮೈದಾನವಾದ ಈಡನ್ ಗಾರ್ಡನ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 206 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೊನೆಯವರೆಗೂ ಹೋರಾಟ ನೀಡಿದ ರಾಜಸ್ಥಾನ ತಂಡ 205 ರನ್ ಕಲೆಹಾಕಿ ಕೇವಲ 1 ರನ್‌ನಿಂದ ಸೋಲೊಪ್ಪಿಕೊಂಡಿತು. ರಾಜಸ್ಥಾನ್ ಪರ ರಿಯಾನ್ ಪರಾಗ್ 95 ರನ್​ಗಳ ನಾಯಕನ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಕೋಲ್ಕತ್ತಾ ತಂಡ ಆಡಿರುವ 11 ಪಂದ್ಯಗಳಲ್ಲಿ 11 ಅಂಕಗಳನ್ನು ಸಂಪಾದಿಸಿದ್ದು, ತನ್ನ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

* ಪಂಜಾಬ್ ಆರ್ಭಟಕ್ಕೆ ಲಖನೌ ನಿರುತ್ತರ
ಪಂಜಾಬ್: ಕಿಂಗ್ಸ್​ ಲಖನೌ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ 37 ರನ್​ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಧರ್ಮಾಶಾಲಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 236 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. 237 ರನ್​ಗಳ ಗುರಿ ಬೆನ್ನಟ್ಟಿದ ಲಖನೌ ಸೂಪರ್ ಜೈಂಟ್ಸ್ ಆಯುಷ್ ಬದೋನಿ (74) ಹಾಗೂ ಅಬ್ದುಲ್ (45) ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ 20 ಓವರ್ಗಳಲ್ಲಿ ವಿಕೆಟ್ ಕಳೆದುಕೊಂಡು 199 ರನ್​ಗಳಿಸಿದಷ್ಟೇ ಶಕ್ತವಾಯಿತು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ರಣರೋಚಕ ಪಂದ್ಯದಲ್ಲಿ ಚೆನ್ನೈ ಫಿನೀಶ್ ಆರ್‌ಸಿಬಿ‌ಗೆ ಥ್ರಿಲ್ಲಿಂಗ್ ಜಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ರಣರೋಚಕ ಪಂದ್ಯದಲ್ಲಿ ಚೆನ್ನೈ ಫಿನೀಶ್ ಆರ್‌ಸಿಬಿ‌ಗೆ ಥ್ರಿಲ್ಲಿಂಗ್ ಜಯ
* ಕೊಹ್ಲಿ ದಾಖಲೆಗಳ ಸುರಿಮಳೆ,ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ ಟಾಪರ್

NAMMMUR EXPRESS NEWS
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಕೊನೆಯ ಓವರ್‌ನಲ್ಲಿ ರೋಚಕ ಎರಡು ರನ್‌ಗಳಿಂದ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ಸಿಎಸ್ ಕೆ ತಂಡಕ್ಕೆ ಪಂದ್ಯವನ್ನು ಗೆಲ್ಲಲು 214 ರನ್ ಗಳ ಸವಾಲು ನೀಡಿತು.ಆರ್‌ಸಿಬಿ ಪರವಾಗಿ ಗಮನ ಸೆಳೆದಿದ್ದು ತಂಡದ ಮಧ್ಯಮ ಕ್ರಮಾಂಕದ, ವಿಂಡೀಸ್ ಆಟಗಾರ ರೊಮಾರಿಯೊ ಶೆಫರ್ಡ್. ಇನಿಂಗ್ಸ್ ನ 18ನೇ ಓವರ್ ನಲ್ಲಿ ತಂಡವು ಐದು ವಿಕೆಟ್ ಕಳೆದುಕೊಂಡಾಗ ಕ್ರೀಸ್ ಗೆ ಕಾಲಿಟ್ಟಿದ್ದ ಶೆಪರ್ಡ್, ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ ಗಳನ್ನು ತೀವ್ರವಾಗಿ ದಂಡಿಸಿದರು. ಕೇವಲ 14 ಎಸೆತಗಳಲ್ಲಿ 54 ರನ್ ಸಿಡಿಸುವ ಮೂಲಕ ಅವರು, ತಂಡದ ಮೊತ್ತವು 213 ರನ್ ಗಳಿಗೆ ಏರಿಸಲು ಸಹಾಯ ಮಾಡಿದರು. 6ನೇ ವಿಕೆಟ್‌ಗೆ ಅವರು ಟೀಮ್ ಡೇವಿಡ್ ಜೊತೆಗೆ ನೀಡಿದ 56 ರನ್ ಗಳ ಮುರಿಯದ ಜೊತೆಯಾಟ ಅದ್ಭುತವಾಗಿತ್ತು.ಆರಂಭಿಕರಾದ ಜಾಕೋಬ್ ಬೆಥೆಲ್ (55 ರನ್, 33 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (62 ರನ್, 33 ಎಸೆತ, 5 ಬೌಂಡರಿ, 5 ಸಿಕ್ಸರ್) ಮೊದಲ ವಿಕೆಟ್ ಗೆ 97 ರನ್ ಗಳ ಜೊತೆಯಾಟ ನೀಡಿ ತಂಡದ ಇನ್ನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕಿದರು. ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಬೆಥೆಲ್ ಅವರು ವಿಕೆಟ್ ಒಪ್ಪಿಸಿದರೂ ಕೊಹ್ಲಿ ತಂಡಕ್ಕೆ ರನ್ ಹೊಳೆ ಹರಿಸುತ್ತಾ ಇನಿಂಗ್ಸ್ ಮುನ್ನಡೆಸಿದರು. ಆದರೆ, ಮಧ್ಯಮ ಕ್ರಮಾಂಕದಿಂದ ದೊಡ್ಡ ಮಟ್ಟದ ಸಾಥ್ ಸಿಕ್ಕಲಿಲ್ಲ. ಪಡಿಕ್ಕಲ್ (17), ನಾಯಕ ಪಾಟಿದಾರ್ (11) ಜಿತೇಶ್ ಶರ್ಮಾ (7) ಬೇಗನೇ ವಿಕೆಟ್ ಒಪ್ಪಿಸಿದರು. ಆದರೆ, ಇನಿಂಗ್ಸ್ ಕೊನೆಯೆರಡು ಓವರ್ ಗಳಲ್ಲಿ ಜೊತೆಯಾದ ಟಿಮ್ ಡೇವಿಡ್ (ಅಜೇಯ 2) ಹಾಗೂ ರೊಮಾರಿಯೊ ಶೆಪರ್ಡ್ (53 ರನ್, 14 ಎಸೆತ, 4 ಬೌಂಡರಿ, 6 ಸಿಕ್ಸರ್) ತಂಡದ ಮೊತ್ತ 200 ರನ್ ಗಡಿ ದಾಟಲು ನೆರವಾದರು.
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಐಪಿಎಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ ಎಂದು ನಂಬಿ ಮೈದಾನಕ್ಕೆ ಆಗಮಿಸದೇ ಮನೆಯಲ್ಲೇ ಕುಳಿತ ಅಭಿಮಾನಿಗಳು ಕೈ ಕೈ ಹಿಚಕಿಕೊಂಡರು. ಏಕೆಂದರೆ ವರುಣನ ಬಿಡುವಿನಿಂದ ಆರ್‌ಸಿಬಿ ತಂಡ ಪ್ರವಾಸಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅದ್ಬುತ ಆಟವಾಡಿತು. ಮಳೆಯ ಭೀತಿಯಲ್ಲೂ ಮೈದಾನಕ್ಕೆ ಬಂದ 25 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕೊಹ್ಲಿ, ಬಾಥೆಲ್, ಶೆಪರ್ಡ್ ಆಟವನ್ನು ಕಣ್ತುಂಬಿಕೊಂಡರು.
ಚಿನ್ನಸ್ವಾಮಿಯಲ್ಲಿ ಇಲ್ಲಿನ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಗೆದ್ದ ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್‌ ಆರಂಭಿಸಿದ ಬೆಂಗಳೂರು ತಂಡ, ಕೊಹ್ಲಿ ಮತ್ತು ಜಾಕೋಬ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ಪಡೆಯಿತು. ಖಲೀಲ್‌ ಅಹ್ಮದ್‌ ಎಸೆದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್‌ ಫೋರ್‌ ಸಿಡಿಸಿದ ಜಾಕೋಬ್‌, ಬ್ಯಾಟಿಂಗ್‌ ರಸದೌತಣವಿತ್ತರು.

* ಗೇಲ್‌ ದಾಖಲೆ ಮುರಿದ ಕೊಹ್ಲಿ
ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ಸಿಕ್ಸರ್‌ ಸಿಡಿಸಿದ ವಿರಾಟ್‌ ಕೊಹ್ಲಿ(62; 33 ಎಸೆತ, 5 ಫೋರ್‌, 5 ಸಿಕ್ಸರ್‌), ಟಿ20 ಮಾದರಿಯಲ್ಲಿ ಒಂದೇ ತಾಣದಲ್ಲಿ ಅತ್ಯಧಿಕ ಸಿಕ್ಸರ್‌ ದಾಖಲಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. 3 ಸಿಕ್ಸರ್‌ ಸಿಡಿಸಿದ ವೇಳೆ ಅವರು, ಚಿನ್ನಸ್ವಾಮಿ ಕ್ರೀಡಾಂಗಣ ಕ್ರಿಸ್‌ ಗೇಲ್‌ ದಾಖಲಿಸಿದ್ದ 151 ಸಿಕ್ಸರ್‌ಗಳ ದಾಖಲೆಯನ್ನು ಅಳಿಸಿ ಹಾಕಿದರು. ಸದ್ಯ ಕೊಹ್ಲಿ ಬೆಂಗಳೂರಿನಲ್ಲಿ 154 ಸಿಕ್ಸರ್‌ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ಮಧ್ಯೆ, ಕೊಹ್ಲಿ ಐಪಿಎಲ್‌ನಲ್ಲಿ ಅತಿಹೆಚ್ಚು ಅರ್ಧ ಶತಕ ಗಳಿಸಿದ್ದ ಡೇವಿಡ್‌ ವಾರ್ನರ್‌(61) ಅವರ ದಾಖಲೆಯನ್ನು ಸರಿಗಟ್ಟಿದರು. ಚೆನ್ನೈ ವಿರುದ್ಧ 62 ರನ್‌ ಗಳಿಸಿದ ಕೊಹ್ಲಿ, ಐಪಿಎಲ್‌ನಲ್ಲಿ ಒಟ್ಟಾರೆ 62 ಅರ್ಧ ಶತಕ ಹಾಗೂ 8 ಶತಕ ಗಳಿಸಿದ್ದಾರೆ.

* 2ನೇ ಅತಿ ವೇಗದ ಅರ್ಧ ಶತಕ
ವೆಸ್ಟ್‌ ಇಂಡೀಸ್‌ನ ದೈತ್ಯ ಆಟಗಾರ ರೊಮಾರಿಯೊ ಶೆಫರ್ಡ್‌, ಐಪಿಎಲ್‌ ಇತಿಹಾಸದಲ್ಲಿ 2ನೇ ಜಂಟಿ ಅತಿ ವೇಗದ ಅರ್ಧ ಶತಕ ಗಳಿಸಿದರು. ಚೆನ್ನೈ ವಿರುದ್ಧ ಕೇವಲ 14 ಎಸೆತಗಳಲ್ಲಿ4 ಬೌಂಡರಿ, 6 ಸಿಕ್ಸರ್‌ ಒಳಗೊಂಡ ಅಜೇಯ 53 ರನ್‌ ಗಳಿಸಿ ಈ ಸಾಧನೆ ಮಾಡಿದರು. 2023ರಲ್ಲಿ ರಾಜಸ್ಥಾನ ರಾಯಲ್ಸ್‌ನ ಯಶಸ್ವಿ ಜೈಸ್ವಾಲ್‌, ಕೆಕೆಆರ್‌ ವಿರುದ್ಧ 13 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. ಆದರೆ 30 ವರ್ಷದ ಶೆಫರ್ಡ್‌ ಅವರ ಅರ್ಧ ಶತಕ ಹಾಲಿ ಟೂರ್ನಿಯಲ್ಲಿ ದಾಖಲಾದ ಅತಿ ವೇಗದ ಅರ್ಧ ಶತಕವಾಗಿದೆ.
ಖಲೀಲ್‌ ಸೇರಿದಂತೆ ನಿರಾಶಾದಾಯಕ ಬೌಲಿಂಗ್‌ ಪರ್ದರ್ಶಿಸಿದ ಚೆನ್ನೈ, ಆರ್‌ಸಿಬಿ ಎದುರಿನ ಪಂದ್ಯ ಸೇರಿದಂತೆ 11 ಪಂದ್ಯಗಳಲ್ಲಿ 2ನೇ ಬಾರಿ ಪವರ್‌ ಪ್ಲೇ ಅವಧಿಯಲ್ಲಿವಿಕೆಟ್‌ ಪಡೆಯಲು ವಿಫಲಗೊಂಡಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬಯಿ ವಿರುದ್ಧ ಇಂತಹ ಸ್ಥಿತಿ ಎದುರಿಸಿತ್ತು. 29 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಕೊಹ್ಲಿ ಹಾಲಿ ಟೂರ್ನಿಯಲ್ಲಿ7ನೇ ಅರ್ಧ ಶತಕ ಗಳಿಸಿದ ಸಾಧನೆ ಮಾಡಿದರು. 2016ರಲ್ಲಿ ಆರ್‌ಸಿಬಿ ಪರ ಸಸತ ನಾಲ್ಕು ಬಾರಿ ಅರ್ಧಶತಕಕ್ಕೂ ಅಧಿಕ ರನ್‌ ಗಳಿಸಿದ್ದ ಕೊಹ್ಲಿ, ಪ್ರಸಕ್ತ ಸಾಲಿನಲ್ಲಿ ಹಿಂದಿನ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಹೈದ್ರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಗುಜರಾತ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್-2025
* ಹೈದ್ರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಗುಜರಾತ್
* ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಗುಜರಾತ್
* ಇಂದು ಬೆಂಗಳೂರಲ್ಲಿ ಆರ್‌ಸಿಬಿ ಚೆನ್ನೈ ತಂಡಗಳ ನಡುವೆ ಪಂದ್ಯ

NAMMMUR EXPRESS NEWS
ಹೈದ್ರಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್​ನ್ನು 38 ರನ್‌ಗಳಿಂದ ಸೋಲಿಸಿದೆ. ಗುಜರಾತ್ ಪರ ನಾಯಕ ಶುಭಮನ್ ಗಿಲ್ 76 ರನ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್, ಹೈದರಾಬಾದ್​ಗೆ 225 ರನ್​ಗಳ ದೊಡ್ಡ ಗುರಿ ನೀಡಿತ್ತು. ಇದಕ್ಕೆ ಪ್ರತಿಯಾಗಿ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್‌ಗಳನಷ್ಟೇ ಗಳಿಸಲು ಸಾಧ್ಯವಾಯಿತು . ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಆರ್​ಸಿಬಿಯನ್ನು ಹಿಂದಿಕ್ಕಿ ಎರಡನೇ ಸ್ಥಾನ ತಲುಪಿದೆ. ಗುಜರಾತ್ 10 ಪಂದ್ಯಗಳಲ್ಲಿ ಏಳು ಗೆಲುವುಗಳೊಂದಿಗೆ 14 ಅಂಕಗಳನ್ನು ಹೊಂದಿದೆ.
ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಆರಂಭಿಕವಾಗಿ ಕಣಕ್ಕಿಳಿಸಿದರು. ಸುದರ್ಶನ್ 48 ರನ್ ಮತ್ತು ಗಿಲ್ 76 ರನ್ ಗಳಿಸಿದರು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ಜೋಸ್ ಬಟ್ಲರ್ ಎಂದಿನಂತೆ ವೇಗವಾಗಿ 37 ಎಸೆತಗಳಲ್ಲಿ 67 ರನ್ ಗಳಿಸಿ ಮಿಂಚಿದರು.
ವಾಷಿಂಗ್ಟನ್ ಸುಂದರ್ 21 ಮತ್ತು ಶಾರುಖ್ ಖಾನ್ 6 ರನ್ ಗಳಿಸಿದರು. ಗುಜರಾತ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು. ಸನ್‌ರೈಸರ್ಸ್ ಹೈದರಾಬಾದ್ ಪರ ಜಯದೇವ್ ಉನಾದ್ಕಟ್ ಗರಿಷ್ಠ ಮೂರು ವಿಕೆಟ್ ಕಬಳಿಸಿದರು. ಅವರಲ್ಲದೆ, ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಜೀಶನ್ ಅನ್ಸಾರಿ ತಲಾ ಒಂದು ವಿಕೆಟ್​ ಪಡೆದರು.
ಬೃಹತ್​ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್​ಗೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. ಟ್ರಾವಿಸ್ ಹೆಡ್ 4.3 ಓವರ್‌ನಲ್ಲಿ ತಂಡದ ಮೊತ್ತ 49 ರನ್​ ಆಗಿದ್ದಾಗ 20 ರನ್ ಗಳಿಸಿದ್ದ ಹೆಡ್​​ ಔಟಾಗುವ ಮೂಲಕ ತಂಡಕ್ಕೆ ಆರಂಭಿಕ ಹೊಡೆತ ಬಿತ್ತು. ಮತ್ತೊಂದೆಡೆ, ಅಭಿಷೇಕ್ ಶರ್ಮಾ 4 ಬೌಂಡರಿ ಮತ್ತು 6 ಅಮೋಘ ಸಿಕ್ಸರ್‌ಗಳು ಸಹಿತ 74 ರನ್ ಬಾರಿಸಿದರು. ಆದರೆ, ಅವರಿಗೆ ತಕ್ಕ ಸಾಥ್​ ಸಿಗಲಿಲ್ಲ.
ಹೆಡ್​​ ವಿಕೆಟ್​ ಪತನದ ಬಳಿಕ ಬಂದ​​ ಇಶಾನ್ ಕಿಶನ್ 13, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್​ ಬ್ಯಾಟರ್​ ಹೆನ್ರಿಚ್​ ಕ್ಲಾಸೆನ್ 23 ಮತ್ತು ತದನಂತರ ಅನಿಕೇತ್ ವರ್ಮಾ 3 ರನ್ ಮಾತ್ರ ಗಳಿಸಿದರು. ಈ ನಡುವೆ, ಕಮಿಂದು ಮೆಂಡಿಸ್ ಖಾತೆ ತೆರೆಯದೇ ಪೆವಿಲಿಯನ್‌ಗೆ ಮರಳಿದರು. ಕೊನೆಯಲ್ಲಿ ನಿತೀಶ್ ಕುಮಾರ್ ರೆಡ್ಡಿ 21 ರನ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ 19 ರನ್ ಬಾರಿಸಿ ಹೋರಾಟ ತೋರಿದರು. ಆದರೆ, ತಂಡವನ್ನು ಗೆಲುವಿನತ್ತ ಕೊಂಡೊಯ್ಯುಲಾಗಲಿಲ್ಲ.
ನಿಗದಿತ 20 ಓವರ್‌ಗಳಲ್ಲಿ ಹೈದ್ರಾಬಾದ್ ಆರು ವಿಕೆಟ್‌ಗಳಿಗೆ 186 ರನ್‌ ಮಾತ್ರ ಗಳಿಸಿ 38 ರನ್‌ಗಳ ಸೋಲುಂಡಿತು. ಗುಜರಾತ್ ಟೈಟಾನ್ಸ್ ಪರ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರೆ, ಕೋಟ್ಜೆ ಹಾಗೂ ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

* ಇಂದು ಆರ್‌ಸಿಬಿ ಮತ್ತು ಚೆನ್ನೈ ಪಂದ್ಯ
ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಪಂದ್ಯ ನಡೆಯಲಿದೆ. ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಚೆನ್ನೈ ಕಡೆಯ ಪಂದ್ಯಗಳಲ್ಲಿ ಗೆಲ್ಲಲು ಹಾಗೂ ತವರಿನಲ್ಲಿ ಪಂದ್ಯ ಗೆದ್ದು ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತ ಪಡಿಸುವ ತವಕದಲ್ಲಿರುವ ಆರ್‌ಸಿಬಿ ತಂಡಗಳು ಗೆಲುವಿಗಾಗಿ ರೋಚಕ ಕಾದಾಟದ ನಡೆಸುವ ನಿರೀಕ್ಷೆಯಿದೆ. ಮತ್ತೊಂದೆಡೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ಭೀತಿ ಎದುರಾಗಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಮುಂಬೈ ಹರಿಸಿದ ರನ್ ಮಳೆಯಲ್ಲಿ ಕೊಚ್ಚಿಹೋದ ರಾಜಸ್ಥಾನ್
* ಸತತ 6 ಜಯದೊಂದಿಗೆ ಮುಂಬೈ ಪಾಯಿಂಟ್ ಟೇಬಲ್ ಟಾಪರ್, ಪ್ಲೇ ಆಫ್‌ನಿಂದ ರಾಜಸ್ಥಾನ ಹೊರಕ್ಕೆ

NAMMMUR EXPRESS SPORTS NEWS
ಜೈಪುರ:ರಯಾನ್ ರಿಕೆಲ್ಟನ್, ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ನಾಯಕ ಹಾರ್ದಿಕ್‌ ಪಾಂಡ್ಯ ಅವರ ರನ್‌ ಮಳೆಯ ಆಟದಿಂದ ರಾಜಸ್ಥಾನ ರಾಯಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ಕೇವಲ 2 ವಿಕೆಟ್‌ ನಷ್ಟಕ್ಕೆ 217 ರನ್‌ ಕಲೆಹಾಕಿತು. ಕಠಿಣ ಗುರಿನ್ನು ಬೆನ್ನಟ್ಟಿದ ರಾಜಸ್ಥಾನ 16.1 ಓವರ್‌ಗಳಲ್ಲಿ 117 ರನ್‌ ಗಳಿಸಿ ಆಲೌಟ್‌ ಆಯಿತು. ಸತತ 6 ಜಯದೊಂದಿಗೆ ಉತ್ತಮ ರನ್‌ ರೇಟ್‌ ಹೊಂದಿರುವ ಕಾರಣ ಮುಂಬೈ ಇಂಡಿಯನ್ಸ್‌ ಅಂಕಪಟ್ಟಿಯಲ್ಲಿ 14 ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಏರಿದೆ, ಅಷ್ಟೇ ಅಂಕ ಪಡೆದಿರುವ ಆರ್‌ಸಿಬಿ ಎರಡನೇ ಸ್ಥಾನಕ್ಕೆ ಜಾರಿದೆ.
ರಾಜಸ್ಥಾನ್‌ ತಂಡವು ಆರಂಭಿಕ ಹಂತದಲ್ಲೇ ಆಘಾತ ಅನುಭವಿಸಿತು. ಗುಜರಾತ್‌ ವಿರುದ್ಧ ಆಡಿದ ಪಂದ್ಯದಲ್ಲಿ ಆರಂಭಿಕರಾದ ಯಶಸ್ವಿ ಜೆಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಅದೇ ಆಟದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈ ಜೋಡಿ ನಿರಾಸೆ ಮೂಡಿಸಿತು. ಮೊದಲೇ ಓವರ್‌ನಲ್ಲೇ ದೀಪಕ್‌ ಚಹರ್‌ ಬೌಲಿಂಗ್‌ ದಾಳಿಗೆ ವೈಭವ್‌ ಸೂರ್ಯವಂಶಿ ಓಟಾಗಿ, ಪೆವಿಯನ್‌ನತ್ತ ಮುಖ ಮಾಡಿದರು. ಯಶಸ್ವಿ ಜೈಸ್ವಾಲ್‌ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರದೇ ಬೋಲ್ಟ್‌ಗೆ ಕ್ಲೀನ್‌ ಬೋಲ್ಡ್‌ ಆದರು. ಅದಾಗಲೇ ರಾಜಸ್ಥಾನ ತಂಡ 2 ಓವರ್‌ಗೆ 18 ರನ್‌ನಷ್ಟಕ್ಕೆ 2 ವಿಕೆಟ್‌ ಕಳೆದುಕೊಂಡಿತ್ತು.
ಬಳಿಕ ಬಂದ ನಿತೀಶ್‌ ರಾಣಾ ಕೂಡ 11 ಎಸೆತಗಳಲ್ಲಿ 9 ರನ್‌ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಯಾರು ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. 8 ಎಸೆತಗಳಲ್ಲಿ 16 ರನ್‌ ಬಾರಿಸಿದ್ದ ತಂಡದ ನಾಯಕ ರಿಯಾನ್‌ ಪರಾಗ್‌ರನ್ನು ಜಸ್ಪ್ರೀತ್‌ ಬುಮ್ರಾ ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ ಬಂದ ಜುರೇಲ್‌ 11 ಎಸೆತಕ್ಕೆ 11ರನ್‌ ಕಲೆಹಾಕಿದರೆ, ಹೆಟ್ಮೆಯರ್‌ ಶೂನ್ಯಕ್ಕೆ ಔಟಾದರು.
ಅಷ್ಟರಲ್ಲಾಗಲೇ 4 ಓವರ್‌ನಲ್ಲೇ ರಾಜಸ್ಥಾನ ತಂಡವು 5 ವಿಕೆಟ್‌ ಕಳೆದುಕೊಂಡಿತ್ತು. ಬಳಿಕ ಕ್ರೀಸ್‌ಗೆ ಬಂದ ಜೋಫ್ರಾ ಆರ್ಚರ್‌ 27 ಎಸೆತಗಳಲ್ಲಿ 30 ರನ್‌ ಬಾರಿಸಿ, ಮುಂಬೈ ಬೌಲರ್ಸ್‌ಗಳ ದಾಳಿಗೆ ಬಲಿಯಾದರು. ಬಳಿಕ ಬಂದ ಮಹೀಶ್‌ ತೀಕ್ಷಣ ಹಾಗೂ ಕುಮಾರ್‌ ಕಾರ್ತಿಕೇಯ ಒಂದಕ್ಕಿಗೆ ಮುಂಬೈ ಬೌಲರ್ಸ್‌ಗೆ ಶರಣಾದರು. ಮುಂಬೈ ಬೌಲರ್ಸ್‌ಗಳ ದಾಳಿಗೆ ರಾಜಸ್ಥನ ಧೂಳಿಪಟವಾಯ್ತು.
ಮುಂಬೈ ಪರ ಬೋಲ್ಟ್‌ ಹಾಗೂ ಕರಣ್‌ ಶರ್ಮಾ ತಲಾ 3 ವಿಕೆಟ್‌ ಪಡೆದರು. ಬುಮ್ರಾ 2 ವಿಕೆಟ್‌, ದೀಪಕ್‌ ಚಹರ್‌ ಹಾಗೂ ಹಾರ್ದಿಕ್‌ ಪಾಂಡ್ಯ ತಲಾ 1 ವಿಕೆಟ್‌ ಪಡೆದರು.
ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ, ರಯಾನ್‌ ರಿಕಲ್ಟನ್‌ ಭರ್ಜರಿ ಜೊತೆಯಾಟವಾಡಿ ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆರ್‌ಆರ್‌ ತಂಡದ ಬೌಲರ್‌ಗಳು ವಿಫಲರಾದರು.ಪವರ್ ಪ್ಲೇನಲ್ಲಿ ಇವರಿಬ್ಬರ ಜೊತೆಯಾಟವು ಸ್ಟೇಡಿಯಂನಲ್ಲಿ ಫ್ಯಾನ್ಸ್‌ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮುಂಬೈ ಇಂಡಿಯನ್ಸ್‌ ಮೊದಲ 6 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಸಿಡಿಸಿತು.ರಯಾನ್‌ ರಿಕಲ್ಟನ್‌ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದ್ದು, 9ನೇ ಓವರ್‌ನಲ್ಲಿ ಕುಮಾರ್‌ ಕಾರ್ತಿಕೇಯ ಎಸೆದ ಐದನೇ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ, 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 71 ಎಸೆತಗಳಲ್ಲಿ 116 ರನ್‌ ಕಲೆ ಹಾಕಿದ ರೋಹಿತ್‌ ಹಾಗೂ ರಯಾನ್‌ ಜೊಡಿಯ ಓಟಕ್ಕೆ 11 ನೇ ಓವರ್‌ನಲ್ಲಿ ಮಹೀಶ್‌ ತೀಕ್ಷಣ್ ಬ್ರೇಕ್‌ ಹಾಕಿದರು. ರಯಾನ್‌ ರಿಕಲ್ಟನ್‌ 38 ಎಸೆತಗಳಲ್ಲಿ 61 ರನ್‌ (7 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಓಟಾದರು.
ರಯಾನ್‌ ರಿಕಲ್ಟನ್‌ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿ, 9ನೇ ಓವರ್‌ನಲ್ಲಿ ಕುಮಾರ್‌ ಕಾರ್ತಿಕೇಯ ಎಸೆದ ಐದನೇ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ, 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 71 ಎಸೆತಗಳಲ್ಲಿ 116 ರನ್‌ ಕಲೆ ಹಾಕಿದ ರೋಹಿತ್‌ ಹಾಗೂ ರಯಾನ್‌ ಜೊಡಿಯ ಓಟಕ್ಕೆ 11 ನೇ ಓವರ್‌ನಲ್ಲಿ ಮಹೀಶ್‌ ತೀಕ್ಷಣ್ ಬ್ರೇಕ್‌ ಹಾಕಿದರು. ರಯಾನ್‌ ರಿಕಲ್ಟನ್‌ 38 ಎಸೆತಗಳಲ್ಲಿ 61 ರನ್‌ (7 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಔಟಾದರು.
ಉತ್ತಮ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ ಮತ್ತೊಮ್ಮೆ ಅರ್ಧಶತಕ ಬಾರಿಸಿ ಮಿಂಚಿದರು. ಇವರು 36 ಎಸೆತಗಳಲ್ಲಿ 53 ರನ್‌ (9 ಬೌಂಡರಿ) ಬಾರಿಸಿ 12ನೇ ಓವರ್‌ನ 4ನೇ ಎಸೆತದಲ್ಲಿ ರಿಯಾನ್‌ ಪರಾಗ್‌ಗೆ ವಿಕಟ್‌ ಒಪ್ಪಿಸಿದರು. ಅದಾಗಲೇ ಮುಂಬೈ ತಂಡ 2 ವಿಕೆಟ್‌ ನಷ್ಟಕ್ಕೆ 123 ರನ್‌ ಕಲೆ ಹಾಕಿತ್ತು.
ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ತಮ್ಮ ಪವರ್‌ ಫುಲ್‌ ಹೊಡೆತಗಳಿಂದ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತಿತು. ಈ ಜೋಡಿ ಕಟ್ಟಿ ಹಾಕುವುದು ರಾಜಸ್ಥಾನ ತಂಡಕ್ಕೆ ದೊಡ್ಡ ಸವಾಲಾಯಿತು.
ಫಜಲ್‌ ಫರೂಕಿ ಅವರ 18ನೇ ಓವರ್ ಒಂದರಲ್ಲೇ 21 ರನ್‌ಗಳು ಹರಿದು ಬಂದಿದೆ. ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 48 ರನ್‌ ಸಿಡಿಸಿದರು. ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ ಸೇರಿದಂತೆ ಅಜೇಯ 48 ರನ್‌ ಕಲೆ ಹಾಕಿದರು. ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 217 ರನ್‌ ಕಲೆಹಾಕಿತ್ತು. ರಾಜಸ್ಥಾನ್‌ ಬೌಲರ್ಸ್‌ಗಳಾದ ಮಹೀಶ್ ತೀಕ್ಷಣ್‌, ರಿಯಾನ್‌ ಪರಾಗ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

* ಪಿಂಕ್‌ ಜೆರ್ಸಿ ಧರಿಸಿದ್ದ ರಾಜಸ್ಥಾನ್ ರಾಯಲ್ಸ್
ವಿಶೇಷವಾಗಿ ಗ್ರಾಮೀಣ ಮಹಿಳೆಯರ ಉನ್ನತಿಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ಕ್ರಮ ಕೈಗೊಂಡಿದೆ. ಮಹಿಳಾ ಸಬಲೀಕರಣದ ಕಡೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಫ್ರಾಂಚೈಸಿ ಈ ಕ್ರಮ ತೆಗೆದುಕೊಂಡಿದೆ. ಮುಂಬೈ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ ತಂಡದ ಆಟಗಾರರು ಗುಲಾಬಿ ಬಣ್ಣದ ಜೆರ್ಸಿಗಳನ್ನು ಧರಿಸಿ ಮೈದಾನಕ್ಕೆ ಪ್ರವೇಶಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಸತತ ಎಂಟನೇ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಸತತ ಎಂಟನೇ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್
* ಚಹಲ್ ಹ್ಯಾಟ್ರಿಕ್ – ಚೆನ್ನೈ ಪ್ಲೇ ಆಫ್‌ನಿಂದ ಔಟ್

NAMMMUR EXPRESS SPORTS NEWS
ಚೆನ್ನೈ: ಚೆಪಾಕ್ ಕ್ರೀಡಾಂಗಣದಲ್ಲಿ ಮಿಸ್ಟರಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರ ಮ್ಯಾಜಿಕ್ ಸ್ಪೆಲ್‌ಗೆ ಕುಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ ಗಳಿಂದ ಸೋಲೊಪ್ಪಿಕೊಳ್ಳುವುದರೊಂದಿಗೆ ಐಪಿಎಲ್ ನ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿದೆ. ಆಡಿರುವ 10 ಪಂದ್ಯಗಳಲ್ಲಿ ಕೇವಲ 2 ಪಂದ್ಯವನ್ನು ಮಾತ್ರ ಗೆದ್ದಿರುವ ಚೆನ್ನೈ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಿದಲ್ಲೇ ಉಳಿದಿದೆ. ಹೀಗಾಗಿ ಇನ್ನು ಉಳಿದಿರುವ 4 ಪಂದ್ಯಗಳಲ್ಲಿ 4ನ್ನು ಗೆದ್ದರೂ ಪ್ಲೇ ಆಫ್ ಹಂತಕ್ಕೇರುವುದು ಅಸಾಧ್ಯ. ಇದೇವೇಳೆ ಪಂಜಾಬ್ ಕಿಂಗ್ಸ್ ಇದೀಗ ಆಡಿರುವ 10 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 13 ಅಂಕಗಳನ್ನು ಕಲೆ ಹಾಕಿ 2ನೇ ಸ್ಥಾನಕ್ಕೇರಿದೆ.
ಗೆಲ್ಲಲು 191 ರನ್ ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್ ಪ್ರಯಾಸಪಟ್ಟು ಕೇವಲ 2 ಚೆಂಡುಗಳಿರುವಾಗ ಗುರಿ ತಲುಪಿತು. ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ 41 ಎಸೆತಗಳಿಂದ 72 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಆರಂಭಿಕ ಪ್ರಭ್ ಸಿಮ್ರಾನ್ ಸಿಂಗ್ ಅವರು 36 ಎಸೆತಗಳಿಂದ 54 ರನ್ ಗಳಿಸಿದರು.ಚೆನ್ನೈ ಪರ ಖಲೀಲ್ ಅಹ್ಮದ್ ಮತ್ತು ಪತಿರಣ ಅವರು ತಲಾ 2 ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜಾ ಮತ್ತು ನೂರ್ ಅಹ್ಮದ್ ಉಳಿದೆರಡು ವಿಕೆಟ್‌ಗಳನ್ನು ಕಿತ್ತರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕ್ಕೆ ವೇಗಿಗಳಾದ ಅರ್ಶದೀಪ್ ಸಿಂಗ್ ಮತ್ತು ಮಾರ್ಕೋ ಯಾನ್ಸನ್ ಆರಂಭದಲ್ಲೇ ಆಘಾತ ನೀಡಿದರು. ಶೇಖ್ ರಶೀದ್ (11) ಆಯುಷ್ ಮಾತ್ರೆ(7) ಅವರ ವಿಕೆಟ್ ಅನ್ನು ಬೇಗನೇ ಕಳೆದುಕೊಂಡ ಚೆನ್ನೈಸಂಕಷ್ಟದಲ್ಲಿ ಸಿಲುಕಿತು. ದೊಡ್ಡ ಮೊತ್ತ ಗಳಿಸುವ ಸೂಚನೆ ನೀಡಿದ ಆಲ್ರೌಂಡರ್ ರವೀಂದ್ರ ಜಡೇಜಾ(17) ಅವರು ಸಹ ತಂಡದ ಮೊತ್ತ 48 ಆಗಬೇಕಾದರೆ ಪೆವಿಲಿಯನ್ ಸೇರಿಕೊಂಡದ್ದು ಚೆನ್ನೈಗೆ ದೊಡ್ಡ ಹೊಡೆತ ನೀಡಿತು. ಈ ಮಧ್ಯೆ ತಂಡವನ್ನು ಮೇಲೆತ್ತಿದ್ದು ಸ್ಯಾಮ್ ಕುರ್ರನ್ ಅವರ ಇನ್ನಿಂಗ್ಸ್ ಕೇವಲ 47 ಎಸೆತಗಳಿಂದ 88 ರನ್ ಗಳಿಸಿದ ಅವರು ಸಣ್ಣಪುಟ್ಟ ಜೊತೆಯಾಟಗಳೊಂದಿಗೆ ತಂಡದ ಮೊತ್ತವನ್ನು ದೊಡ್ಡ ಮೊತ್ತದೆಡೆಗೆ ಕೊಂಡೊಯ್ಯುವ ಉತ್ಸಾಹದಲ್ಲಿದ್ದರು. ಆದರೆ ಮಾರ್ಕೋ ಯಾನ್ಸನ್ ಅವರು ಈ ಯತ್ನಕ್ಕೆ ತಣ್ಣೀರೆರಚಿದರು. 9 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ್ದ ಅವರು ಕೀಪರ್ ಇಂಗ್ಲಿಸಗೆ ಕ್ಯಾಚಿತ್ತು ಔಟಾದರು.
ನಂತರ ಯುಜುವೇಂದ್ರ ಚಹಲ್ ಆಡಿದ್ದೇ ಆಟವಾಯಿತು. ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ಭೀತಿ ಹುಟ್ಟಿಸಿದ್ದ ಮಹೇಂದ್ರ ಸಿಂಗ್ ಧೋನಿ(11) ಅವರನ್ನು 19ನೇ ಓವರ್ ನ ಎರಡನೇ ಎಸೆತದಲ್ಲಿ ಔಟ್ ಮಾಡಿದ ಚಹಲ್ 4ನೇ ಎಸೆತದಲ್ಲಿ ದೀಪಕ್ ಹೂಡಾ), 5ನೇ ಎಸೆತದಲ್ಲಿ ಅನ್ಶುಲ್ ಕಾಂಭೋಜ್ ಮತ್ತು 6ನೇ ಎಸೆತದಲ್ಲಿ ನೂರ್ ಅಹ್ಮದ್ ಅವರನ್ನು ಬಲಿ ಪಡೆವ ಮೂಲಕ ಈ ಸೀಸನ್ ನ ಮೊದಲ ಹ್ಯಾಟ್ರಿಕ್ ಗಳಿಸಿದರು. ಇಡೀ ಓವರ್ ನಲ್ಲಿ ಅವರು ನಾಲ್ಕು ವಿಕೆಟ್ ಕಬಳಿಸಿದರು. ಇದಾದ ಬಳಿಕ ಕೊನೆಯವರಾಗಿ ಶಿವಂ ದುಬೆ ಅವರು ಅರ್ಶದೀಪ್ ಸಿಂಗ್ ಅವರ ಬೌಲಿಂಗ್ ನಲ್ಲಿ ಔಟಾದರು. ಕೇವಲ 6 ರನ್ ಗಳ ಅಂತರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ 5 ವಿಕೆಟ್ ಗಳು ಉರುಳಿದವು.
ಪಂಜಾಬ್ ಕಿಂಗ್ಸ್ ಪರ ಚಹಲ್ 4 ವಿಕೆಟ್, ಅರ್ಶದೀಪ್ ಸಿಂಗ್ ಮತ್ತು ಮಾರ್ಕೋ ಯಾನ್ಸನ್ ತಲಾ 2 ವಿಕೆಟ್ ಪಡೆದರು. ಒಮರಾಜೈ ಮತ್ತು ಹರ್ ಪ್ರೀತ್ ಬ್ರಾರ್ ತಲಾ 1 ವಿಕೆಟ್ ಪಡೆದರು. ನಾಯಕನ ಆಟವಾಡಿದ ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.