Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಪಂಜಾಬ್ ತವರಲ್ಲೇ ಸೇಡು ತೀರಿಸಿಕೊಂಡ ಆರ್‌ಸಿಬಿ
* ಮುಂಬೈ ಎದುರು ಮಂಡಿಯೂರಿದ ಚೈನ್ನೈ

NAMMMUR EXPRESS SPORTS NEWS
* ಪಂಜಾಬ್ ತವರಲ್ಲೇ ಸೇಡು ತೀರಿಸಿಕೊಂಡ ಆರ್‌ಸಿಬಿ
ಪಂಜಾಬ್: ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ತಂಡಗಳ ನಡುವೆ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಆರ್‌ಸಿಬಿ ತಂಡವು ಸುಲಭ ಗೆಲುವು ಸಾಧಿಸಿ ಪಂಜಾಬ್ ವಿರುದ್ಧ ತವರಲ್ಲಿ ಸೋತಿದ್ದ ಸೇಡು ತೀರಿಸಿಕೊಂಡಿತು. ಯಶಸ್ವಿಯಾಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿ ಪಂಜಾಬ್‌ಗೆ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೆಂಗಳೂರು ತಂಡ 18.5 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು.ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಆರ್​ಸಿಬಿಗೆ 7 ವಿಕೆಟ್​ಗಳ ಜಯ ತಂದುಕೊಟ್ಟರು.

* ಮುಂಬೈ ಎದುರು ಮಂಡಿಯೂರಿದ ಚೈನ್ನೈ
ಮುಂಬೈ: ಪ್ರಾರಂಭದಲ್ಲಿ ನಿರಂತರವಾಗಿ ಸೋಲುತ್ತಿದ್ದ ಮುಂಬೈ ಇಂಡಿಯನ್ಸ್ ಇದೀಗ ಗೆಲುವಿನ ಹಳಿಗೆ ಮರಳಿದ್ದು ಪ್ಲೇ ಆಫ್ ಮಾರ್ಗದಲ್ಲಿ ಉಳಿದ ತಂಡಗಳಿಗೆ ಪೈಪೋಟಿ ನೀಡುವ ಎಲ್ಲಾ ಲಕ್ಷಣಗಳನ್ನು ಕಾಣುತ್ತಿದೆ. ಇದೇವೇಳೆ ಕಳೆದ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಒಟ್ಟಾರೆ ಟೂರ್ನಿಯಲ್ಲಿ 6ನೇ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲೂ ಕೊನೆ ಸ್ಥಾನದಲ್ಲಿ ಉಳಿದಿದೆ. ಭಾನುವಾರ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರು 2ನೇ ವಿಕೆಟ್ ಗೆ 113 ರನ್ ಗಳ ಜೊತೆಯಾಟವಾಡಿ ಚೆನ್ನೈ ಕೈಯಿಂದ ಗೆಲುವನ್ನು ಕಸಿದುಕೊಂಡರು.

MI Vs CSK – ರೋಹಿತ್ ಶರ್ಮಾ ಘರ್ಜನೆಗೆ ಬೆಚ್ಚಿಬಿದ್ದ ಚೆನ್ನೈ: ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲೂ ಮೇಲಕ್ಕೇರಿದ ಮುಂಬೈ
ಪ್ರಾರಂಭದಲ್ಲಿ ನಿರಂತರವಾಗಿ ಸೋಲುತ್ತಿದ್ದ ಮುಂಬೈ ಇಂಡಿಯನ್ಸ್ ಇದೀಗ ಗೆಲುವಿನ ಹಳಿಗೆ ಮರಳಿದ್ದು ಪ್ಲೇ ಆಫ್ ಮಾರ್ಗದಲ್ಲಿ ಉಳಿದ ತಂಡಗಳಿಗೆ ಪೈಪೋಟಿ ನೀಡುವ ಎಲ್ಲಾ ಲಕ್ಷಣಗಳನ್ನು ತೋರಿದೆ. ಇದೇವೇಳೆ ಕಳೆದ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಒಟ್ಟಾರೆ ಟೂರ್ನಿಯಲ್ಲಿ 6ನೇ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲೂ ಕೊನೇ ಸ್ಥಾನದಲ್ಲಿ ಉಳಿದಿದೆ. ಭಾನುವಾರ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರು 2ನೇ ವಿಕೆಟ್ ಗೆ 113 ರನ್ ಗಳ ಜೊತೆಯಾಟವಾಡಿ ಚೆನ್ನೈ ಕೈಯಿಂದ ಗೆಲುವನ್ನು ಕಸಿದುಕೊಂಡರು.
ಗೆಲುವಿಗೆ 177 ರನ್ ಗುರಿ ಪಡೆದ ಮುಂಬೈ ಇಂಡಿಯನ್ಸ್ ಕೇವಲ 1 ವಿಕೆಟ್ ಕಳೆದುಕೊಂಡು ಇನ್ನೂ 26 ಎಸೆತಗಳು ಬಾಕಿ ಉಳಿದಿರುವಂತೆ ಜಯಭೇರಿ ಬಾರಿಸಿತು. ಮುಂಬೈ ಇಂಡಿಯನ್ಸ್ ತಂಡದ ಪರ ರೋಹಿತ್ ಶರ್ಮಾ(76) ಮತ್ತು ಸೂರ್ಯಕುಮಾರ್ ಯಾದವ್ (68) ಅವರು ಮುರಿಯದ 2ನೇ ವಿಕೆಟ್ ಗೆ 113 ರನ್ ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರೋಹಿತ್ ಶರ್ಮಾ ಅವರು 45 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ಗಳನ್ನು ಒಳಗೊಂಡ ಅಜೇಯ 76 ರನ್ ಬಾರಿಸಿದರು. ಅದೇ ರೀತಿ ಸೂರ್ಯಕುಮಾರ್ ಯಾದವ್ ಅವರು 30 ಎಸೆತಗಳಿಂದ 6 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನು ಒಳಗೊಂಡ ಅಜೇಯ 68 ರನ್ ಬಾರಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಡೆಲ್ಲಿ ಮತ್ತು ರಾಜಸ್ಥಾನ್ ಪಂದ್ಯ ಟೈ – ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ
* ಗಾಯದಿಂದ ಅರ್ಧಕ್ಕೆ ತೆರಳಿದ ಸಂಜು ಸ್ಯಾಮ್ಸನ್

NAMMMUR EXPRESS SPORTS NEWS
ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಟೈ ಆಗಿದ್ದು, ನಂತರ ನಡೆದ ಸೂಪರ್ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಆರಂಭಿಕ ಆಟಗಾರ ಜೇಕ್ ಫ್ರೇಸರ್ ಮೆಕ್​ಗುರ್ಕ್ 9 ರನ್ ಗಳಿಸಿದಾಗ ಜೈಸ್ವಾಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಅಭಿಷೇಕ್ ಪೊರೆಲ್ 1 ಸಿಕ್ಸರ್, 5 ಬೌಂಡರಿಗಳೊಂದಿಗೆ 37 ಎಸೆತಗಳಲ್ಲಿ 49 ರನ್ ಗಳಿಸಿದಾಗ ಹಸರಂಗ ಬೌಲಿಂಗ್‌ನಲ್ಲಿ ಕ್ಯಾಚ್ ನೀಡುವ ಮೂಲಕ ಅರ್ಧ ಶತಕದಿಂದ ವಂಚಿತರಾದರು. ಕರುಣ್ ನಾಯರ್ ಶೂನ್ಯಕ್ಕೆ ರನ್ ಔಟಾದರೆ,ನಂತರ ಬಂದ ಕೆಎಲ್ ರಾಹಲ್ ಎರಡು ಸಿಕ್ಸರ್,ಎರಡು ಬೌಂಡರಿಗಳೊಂದಿಗೆ 32 ಎಸೆತಗಳಲ್ಲಿ 38 ಮತ್ತು ನಾಯಕ ಅಕ್ಸರ್ ಪಟೇಲ್ 34 ರನ್ ಗಳಿಸಿದರು. ನಂತರ ತ್ರಿಸ್ಟನ್ ಸ್ಟುಬ್ಸ್ ಹಾಗೂ ಅಶುತೋಷ್ ಶರ್ಮಾ ಔಟಾಗದೆ ಕ್ರಮವಾಗಿ 34 ಮತ್ತು 15 ರನ್ ಗಳಿಸುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಸೇರಿಸಿತು. ರಾಜಸ್ಥಾನ ರಾಯಲ್ಸ್ ಪರ ಜೋಪ್ರಾ ಅರ್ಚರ್ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷ್ಣ ಮತ್ತು ವನಿದು ಹಸರಂಗ ತಲಾ ಒಂದೊಂದು ವಿಕೆಟ್ ಕಿತ್ತರು.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 189 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 4 ಸಿಕ್ಸರ್, 3 ಬೌಂಡರಿಗಳೊಂದಿಗೆ 37 ಎಸೆತಗಳಲ್ಲಿ 51 ರನ್ ಮಾಡಿ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಸಂಜು ಸ್ಯಾಮ್ಸನ್ 31 ರನ್‌ಗಳಿಸಿದಾಗ ಗಾಯಗೊಂಡು ಅರ್ಧಕ್ಕೆ ಪಂದ್ಯದಿಂದ ರಿಟೈರ್ಡ್ ಹರ್ಟ್ ತೆಗೆದುಕೊಂಡರು. ಬಳಿಕ ಬಂದ ರಿಯಾನ್ ಪರಾಗ್ 8, ನಿತೀಶ್ ರಾಣಾ 51, ಧ್ರುವ ಜುರೆಲ್ 26 ಮತ್ತು ಶಿಮ್ರಾನ್ ಹೆಟ್ಮೆಯರ್ ಔಟಾಗದೇ 15 ರನ್ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್‌ಗಳಿಸಿ ಪಂದ್ಯ ಟೈ ಆಯಿತು.ನಂತರ ನಡೆದ ಸೂಪರ್ ಓವರ್‌ನಲ್ಲಿ ರಾಜಸ್ಥಾನ್ 11ರನ್‌ಗಳಿಸಿ 2 ವಿಕೆಟ್ ಕಳೆದುಕೊಂಡಿತು, ಡೆಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 13 ರನ್‌ಗಳಿಸಿ ಗೆಲುವು ಸಾಧಿಸಿತು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ ನ್ಯೂಸ್

ಐಪಿಎಲ್ -2025

* ಲೋ ಸ್ಕೋರ್ ಚೇಸ್ ಮಾಡಲಾಗದೇ ಸೋತ ಕೆಕೆಆರ್
* ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ರನ್ ಮಾಡಿ ಗೆದ್ದ ಪಂಜಾಬ್
* ಚಹಲ್ ಚಮತ್ಕಾರಕ್ಕೆ ಕೆಕೆಆರ್ ಉಡೀಸ್

NAMMMUR EXPRESS SPORTS NEWS
ಮುಲ್ಲಾನ್ ಪುರ:ಕಳೆದ ವರ್ಷ ಐಪಿಎಲ್‌ನ ಈಡನ್ ಗಾರ್ಡನ್ ಕ್ರೀಡಾಂಗಡದಲ್ಲಿ ಕೆಕೆಆರ್ ವಿರುದ್ಧ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆದ್ದು ದಾಖಲೆ ಬರೆದಿದ್ದ ಪಂಜಾಬ್ ಈ ಬಾರಿ ಅತಿ ಕಡಿಮೆ ಸ್ಕೋರ್ ಮಾಡಿ ರಕ್ಷಿಸಿಕೊಂಡ ದಾಖಲೆ ನಿರ್ಮಿಸಿದೆ.
18ನೇ ಆವೃತ್ತಿಯ ಐಪಿಎಲ್​ ಮತ್ತೊಂದು ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ.ಮುಲ್ಲನ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಕೆಕೆಆರ್ ಬೌಲರ್‌ಗಳು ಪಂಜಾಬ್ ಬ್ಯಾಟ್ಸ್‌ಮನ್‌ಗಳ ಮೇಲೆ ಮಾರಕ ದಾಳಿ ಮಾಡಿದರು.ಇದರಿಂದ ತತ್ತರಿಸಿದ ಪಂಜಾಬ್ ತಂಡ ಕೇವಲ 111 ರನ್‌ಗಳಿಗೆ ಆಲೌಟ್ ಆಯಿತು. ಪಂಜಾಬ್ ಬ್ಯಾಟ್ಸ್‌ಮನ್‌ಗಳ ಪೈಕಿ ಪ್ರಭು ಸಿಮ್ರಾನ್ ಸಿಂಗ್ 30, ಪ್ರಿಯಾಂಶ್ ಆರ್ಯ 22 ಮತ್ತು ಶಶಾಂಕ್ ಸಿಂಗ್ 18 ರನ್ ಗಳಿಸಿದರು. ಕೆಕೆಆರ್ ಪರ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರೆ, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು.
ಸೂಪರ್ ಫಾರ್ಮ್‌ನಲ್ಲಿದ್ದ ಕೋಲ್ಕತ್ತಾ ತಂಡ ಈ ಕಡಿಮೆ ಸ್ಕೋರ್​ ಅನ್ನು ಸುಲಭವಾಗಿ ಚೇಸ್ ಮಾಡಿ ಗೆಲ್ಲುವ ನಿರೀಕ್ಷೆಯಲ್ಲಿತ್ತು, ಆದರೆ ಪಂಜಾಬ್ ತಂಡ ಅದ್ಭುತ ಬೌಲಿಂಗ್ ಮೂಲಕ ಕೆಕೆಆರ್​ ತಂಡವನ್ನು ಚಿಂದಿ ಉಡಾಯಿಸಿತು.ಕೆಕೆಆರ್​ನ ಆರಂಭಿಕ ಬ್ಯಾಟರ್​ ಸುನಿಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಸಿಂಗಲ್​ ಡಿಜಿಟ್​ಗೆ ಔಟಾದರೆ, ಅಂಗ್‌ಕ್ರಿಶ್, ರಘುವಂಶಿ 37 ರನ್‌ಗಳ ಇನ್ನಿಂಗ್ಸ್ ಪಂದ್ಯಕ್ಕೆ ಜೀವ ತುಂಬಿತು. ರಹಾನೆ ಕೂಡ 17 ರನ್ ಗಳಿಸಿದರು. ಆದರೆ ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಪಂಜಾಬ್ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು.ಬಳಿಕ ಬ್ಯಾಕ್​ ಟು ಬ್ಯಾಕ್​ ವಿಕೆಟ್​​ ಉರುಳಿದ ಪರಿಣಾಮ ಕೆಕೆಆರ್​ ಸೋಲನುಭವಿಸಿತು. ಪಂಜಾಬ್​ ಪರ ಯುಜುವೇಂದ್ರ ಚಹಲ್ ತನ್ನ ಚಮತ್ಕಾರಿ ಬೌಲಿಂಗ್‌ನಿಂದ 4 ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಾಯಿಸಿದರು. ಇದರೊಂದಿಗೆ ಪಂಜಾಬ್​ ಕಡಿಮೆ ಮೊತ್ತದ ಸ್ಕೋರ್​ ರಕ್ಷಿಸಿಕೊಂಡ ತಂಡವಾಗಿ ದಾಖಲೆ ಬರೆದಿದೆ.
ಇದಕ್ಕೂ ಮೊದಲು, ಐಪಿಎಲ್‌ನಲ್ಲಿ ಅತಿ ಕಡಿಮೆ ಮೊತ್ತವನ್ನು ರಕ್ಷಿಸಿದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿತ್ತು. 2009ರ ಐಪಿಎಲ್‌ನಲ್ಲಿ ಸಿಎಸ್‌ಕೆ 116/9 ಸ್ಕೋರ್ ಗಳಿಸಿತ್ತು. ಈಗ ಪಂಜಾಬ್ ಈ ದಾಖಲೆಯನ್ನು ಮುರಿದಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ – 2025
* ಕೊನೆಗೂ ಜಯದ ಹಾದಿಗೆ ಸಿಎಸ್‌ಕೆ
* ಸಿಎಸ್‌ಕೆ ಪ್ಲೇ ಆಫ್ ಕನಸು ಜೀವಂತ

NAMMMUR EXPRESS SPORTS NEWS
ಉತ್ತರ ಪ್ರದೇಶ: ಎಂ.ಎಸ್ ಧೋನಿ ಕೇವಲ 11 ಎಸೆತಗಳಲ್ಲಿ 26 ರನ್ ಗಳಿಸುವ ಮೂಲಕ ಐಪಿಎಲ್ 2025 ರ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ನಾಟಕೀಯ ಗೆಲುವು ಸಾಧಿಸಿತು. 30 ಎಸೆತಗಳಲ್ಲಿ 56 ರನ್ ಗಳಿಸಬೇಕಾದಾಗ ಬ್ಯಾಟಿಂಗ್‌ಗೆ ಇಳಿದ ಧೋನಿ ಬಿರುಸಿನ ಬ್ಯಾಟಿಂಗ್ ಮತ್ತು ಶಿವಂ ದುಬೆ ಅವರ 43 ರನ್‌ಗಳು ಸಿಎಸ್‌ಕೆ ಐಪಿಎಲ್ 2025 ರಲ್ಲಿ ತಮ್ಮ ಎರಡನೇ ಗೆಲುವು ಸಾಧಿಸುವಂತೆ ಮಾಡಿತು, ಸತತ ಐದು ಸೋಲುಗಳ ಸರಣಿಯನ್ನು ಕೊನೆಗೊಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ 63 ರನ್ ಗಳಿಸಿ ತಮ್ಮ ತಂಡವು 20 ಓವರ್‌ಗಳಲ್ಲಿ 166/7 ರನ್ ಗಳಿಸಲು ಸಹಾಯ ಮಾಡಿದರು. ರನ್ ಚೇಸ್‌ನಲ್ಲಿ, ಐಪಿಎಲ್ ಚೊಚ್ಚಲ ಆಟಗಾರ ಶೇಕ್ ರಶೀದ್ ಸಿಎಸ್‌ಕೆಗೆ ಅದ್ಭುತ ಆರಂಭ ನೀಡಿದರು, ಆದರೆ ಮಧ್ಯಮ ಓವರ್‌ಗಳಲ್ಲಿ ಅವರು ದಾರಿ ತಪ್ಪಿದರು.

* ಕೆಕೆಆರ್‌ಗಿಂದು ಪಂಜಾಬ್ ಸವಾಲು
ಗೆಲುವಿನ ತವಕದಲ್ಲಿರುವ ಎರಡೂ ತಂಡಗಳು ಇಂದು ಸೆಣಸಾಡಲಿವೆ. ತವರಲ್ಲಿ ಗೆಲುವಿನ ಹಾದಿಗೆ ಬರುವ ನಿರೀಕ್ಷೆಯಲ್ಲಿ ಪಂಜಾಬ್ ಇದ್ದರೆ, 4 ನೇ ಜಯದ ನಿರೀಕ್ಷೆಯಲ್ಲಿ ಕೆಕೆಆರ್ ಇದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಪಿಂಕ್ ಸಿಟಿಯಲ್ಲಿ ಗ್ರೀನ್ ಜೆರ್ಸಿಯಲ್ಲಿ ಆರ್‌ಸಿಬಿ ಆರ್ಭಟಕ್ಕೆ ತತ್ತರಿಸಿದ ರಾಜಸ್ಥಾನ್
* ಡೆಲ್ಲಿ ಗೆಲುವಿನ ಓಟಕ್ಕೆ ಬ್ರೇಕ್ ಗೆಲುವಿನ ಹಾದಿಗೆ ಮರಳಿದ ಮುಂಬೈ

NAMMMUR EXPRESS SPORTS NEWS
* ಪಿಂಕ್ ಸಿಟಿಯಲ್ಲಿ ಗ್ರೀನ್ ಜೆರ್ಸಿಯಲ್ಲಿ ಆರ್‌ಸಿಬಿ ಆರ್ಭಟಕ್ಕೆ ತತ್ತರಿಸಿದ ರಾಜಸ್ಥಾನ್
ರಾಜಸ್ಥಾನ್: ಐಪಿಎಲ್​ನ 28ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗ್ರೀನ್ ಜೆರ್ಸಿ ತೊಟ್ಟು ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ರಾಜಸ್ಥಾನ ರಾಯಲ್ಸ್ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡ ಮೊದಲ ಓವರ್‌ನಿಂದಲೇ ರಾಜಸ್ಥಾನ ವಿರುದ್ಧ ಪ್ರತಿದಾಳಿ ನಡೆಸಿತು. ಒಂದು ಕಡೆ ಸಾಲ್ಟ್​ ಇನ್ನೊಂದು ಕಡೆಯಿಂದ ಕೊಹ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಮೂಲಕ ರನ್‌ ಮಳೆ ಹರಿಸಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್‌‌ನಿಂದ ತಂಡ 9 ವಿಕೆಟ್‌ಗಳ ಜಯ ಸಾಧಿಸಿತು.
ಐಪಿಎಲ್​ನ 28ನೇ ಪಂದ್ಯದಲ್ಲಿ
ಸಾಲ್ಟ್ ತಮ್ಮ ಅದ್ಭುತ ಬ್ಯಾಟಿಂಗ್​ನಿಂದ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಾಯದಿಂದ 65ರನ್ ಬಾರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಸಾಲ್ಟ್​ ನಿರ್ಗಮನದ ಬಳಿಕ ಪಡಿಕ್ಕಲ್​ನೊಂದಿಗೆ ತಮ್ಮ ಬ್ಯಾಟಿಂಗ್​ ಮುಂದುವರೆಸಿದ ಕೊಹ್ಲಿ ರಾಜಸ್ಥಾನ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಕೊಹ್ಲಿ 45 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯವಾಗಿ 62 ರನ್​ ಬಾರಿಸಿದರು. ಕೊಹ್ಲಿ ಜೊತೆ ಸೇರಿ ಪಡಿಕ್ಕಲ್​ 40 ರನ್​ ಕಲೆಹಾಕಿದರು. ಈ ಇಬ್ಬರ ಬ್ಯಾಟಿಂಗ್​ ಬಲದಿಂದಾಗಿ ಬೆಂಗಳೂರು ತಂಡ ಕೇವಲ 17.3 ಓವರ್‌ಗಳಲ್ಲಿ 174 ರನ್‌ಗಳ ಗುರಿಯನ್ನು ತಲುಪಿತು. ರಾಜಸ್ಥಾನದ ಬೌಲರ್‌ಗಳಲ್ಲಿ ಕಾರ್ತಿಕೇಯ ಒಂದು ವಿಕೆಟ್ ಪಡೆದರು. ಫಿಲಿಪ್ ಸಾಲ್ಟ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ (75) ಅರ್ಧಶತಕ ಸಿಡಿಸಿದರು. ಕೊನೆಯಲ್ಲಿ ಧ್ರುವ್ ಜುರೆಲ್ (35*) ಭರ್ಜರಿ ಬ್ಯಾಟ್​ ಬೀಸಿದರು. ಉಳಿದಂತೆ ನಾಯಕ ಸಂಜು ಸ್ಯಾಮ್ಸನ್​ (15) ಮತ್ತು ರಿಯಾನ್ ಪರಾಗ್ 30 ರನ್ ಗಳಿಸಿದರು. ಬೆಂಗಳೂರು ತಂಡದ ಬೌಲರ್‌ಗಳಲ್ಲಿ ಯಶ್ ದಯಾಲ್​, ಹೇಜಲ್‌ವುಡ್, ಕೃನಾಲ್ ಮತ್ತು ಭುವಿ ತಲಾ ಒಂದು ವಿಕೆಟ್ ಪಡೆದರು.

100 ಅರ್ಧ ಶತಕ ಗಳಿಸಿದ ವಿರಾಟ್ – ಟಿ20 ಯಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲಿಗ
ಕಿಂಗ್,ರನ್ ಮೆಷಿನ್ ಎಂದೆಲ್ಲಾ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 100 ಬಾರಿ ಅರ್ಧಶತಕ ಬಾರಿಸಿದ ವಿಶ್ವದ 2ನೇ, ಏಷ್ಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾನುವಾರ ರಾಜಸ್ತಾನ ವಿರುದ್ಧ ಪಂದ್ಯ ದಲ್ಲಿ ಅವರು 62 ರನ್ ಸಿಡಿಸಿದರು. ಇದು ಟಿ20ಯಲ್ಲಿ ಅವರ 100ನೇ ಅರ್ಧಶತಕ. ಒಟ್ಟು 405 ಪಂದ್ಯಗಳನ್ನಾಡಿರುವ ಕೊಹ್ಲಿ, 388 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅವರು 9 ಶತಕಗಳನ್ನೂ ಬಾರಿಸಿದ್ದು, ಒಟ್ಟಾರೆ 13134 ರನ್ ಕಲೆಹಾಕಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿಗಿಂತ ಹೆಚ್ಚು ಅರ್ಧಶತಕ ಬಾರಿಸಿದ್ದು ಆಸ್ಟ್ರೇಲಿಯಾ ಡೇವಿಡ್ ವಾರ್ನರ್, ಅವರು 108 ಬಾರಿ ಈ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 90, ವೆಸ್ ಇಂಡೀಸ್‌ನ ಕ್ರಿಸ್ ಗೇಲ್ 88, ಇಂಗ್ಲೆಂಡ್‌ ಜೋಸ್ ಬಟ್ಲರ್ 86 ಅರ್ಧಶತಕ ಗಳಿಸಿದ್ದಾರೆ.

* ಡೆಲ್ಲಿ ಗೆಲುವಿನ ಓಟಕ್ಕೆ ಬ್ರೇಕ್ ಗೆಲುವಿನ ಹಾದಿಗೆ ಮರಳಿದ ಮುಂಬೈ
ಡೆಲ್ಲಿ: ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಿದೆ. ಸತತ ಎರಡು ಪಂದ್ಯಗಳಲ್ಲಿ ಸೋತ ನಂತರ ಮುಂಬೈ ತಂಡ ಡೆಲ್ಲಿ ಕ್ಯಾಪಿಟಲ್ಸ್‌ನ ತವರು ಮೈದಾನದಲ್ಲಿ ಮುಂಬೈ ಗೆಲುವಿನ ನಗೆ ಬೀರಿದೆ. ಡೆಲ್ಲಿ ಬ್ಯಾಟರ್ಸ್ ತಂಡಕ್ಕೆ ಗೆಲುವು ತಂದು ಕೊಡುವುದರಲ್ಲಿ ಎಡವಿದ್ದಾರೆ, ಪರಿಣಾಮ ಮುಂಬೈ ತಂಡವು ಒಂದು ಓವರ್ ಬಾಕಿ ಇರುವಾಗಲೇ ಡೆಲ್ಲಿ ತಂಡವನ್ನು ಆಲೌಟ್ ಮಾಡಿ 12 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಮುಂಬೈ ಇಂಡಿಯನ್ಸ್ ನೀಡಿದ 206 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಗೆಲುವಿನ ಹೊಸ್ತಿಲಲ್ಲಿತ್ತು. ಡೆಲ್ಲಿ ಪರ ಅಬ್ಬರಿಸಿದ ಕನ್ನಡಿಗ ಕರುಣ್ ನಾಯರ್ 89 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಆದರೆ ದುರದೃಷ್ಟವಶಾತ್ ನಾಯರ್ ವಿಕೆಟ್ ಕಳೆದುಕೊಂಡಿತು ಬಳಿಕ ಬಂದ ಕೆಎಲ್ ರಾಹುಲ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಅಗ್ರ ಕ್ರಮಾಂಕ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ರಯಾನ್ ರಿಕಲ್ಟನ್ 41, ಸೂರ್ಯಕುಮಾರ್ ಯಾದವ್ 40, ತಿಲಕ್ ವರ್ಮಾ 59 ರನ್ ಗಳಿಸಿದರೆ, ನಮನ್ ಧೀರ್ ಕೂಡ 38 ರನ್ ಕಲೆ ಹಾಕದರು. ಈ ಅದ್ಭುತ ಇನ್ನಿಂಗ್ಸ್‌ಗಳ ಆಧಾರದ ಮೇಲೆ ಮುಂಬೈ ತಂಡವು 205 ರನ್‌ಗಳನ್ನು ಗಳಿಸಿತು.
ಮುಂಬೈ ತಂಡದಿಂದ 206 ರನ್‌ಗಳ ಗೆಲುವಿನ ಗುರಿ ಪಡೆದ ಡೆಲ್ಲಿ ತಂಡವು ಉತ್ತಮ ಆರಂಭವನ್ನು ಪಡೆಯಿತು. ಕರುಣ್ ನಾಯರ್ ಕೇವಲ 40 ಎಸೆತಗಳಲ್ಲಿ 89 ರನ್ ಗಳಿಸಿ ಔಟಾದರು. ಬಳಿಕ ಬಂದ ಕೆ.ಎಲ್ ರಾಹುಲ್ ಅವರ ಮೇಲೆ ಭಾರೀ ನಿರೀಕ್ಷೆಯಿತ್ತು, ಮೊನ್ನೆ ಬೆಂಗಳೂರು ತಂಡದ ವಿರುದ್ಧ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿ ಡೆಲ್ಲಿ ತಂಡಕ್ಕೆ ಆಸರೆಯಾದ ರಾಹುಲ್ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಮುಂಬೈ ವಿರುದ್ಧವೂ ಗೆಲುವಿನ ಉಡುಗೊರೆ ನೀಡುವ ರಾಹುಲ್ ಯೋಜನೆ ವಿಫಲವಾಯಿತು.
ರಾಹುಲ್ 13 ಎಸೆತಗಳಲ್ಲಿ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ರಾಹುಲ್ ವಿಕೆಟ್ ಕಳೆದುಕೊಳ್ಳುತ್ತಿದಂತೆ ಡೆಲ್ಲಿ ಚೇಸಿಂಗ್ ಹಳಿ ತಪ್ಪಿತು. 27 ಎಸೆತಗಳಲ್ಲಿ ಕೇವಲ 46 ರನ್ ಗಳಿಸುವ ಅಗತ್ಯವಿತ್ತು. ಇಂತಹ ಸಂದರ್ಭದಲ್ಲಿ ಡೆಲ್ಲಿ ಕೇವಲ 33 ರನ್‌ಗಳನ್ನು ಮಾತ್ರ ಗಳಿಸಿ,18 ಎಸೆತಗಳ ಅಂತರದಲ್ಲಿ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಗುಜರಾತ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಲಕ್ನೋ
* ಪಂಜಾಬ್ ವಿರುದ್ಧ ಅಬ್ಬರಿಸಿದ ಹೈದ್ರಾಬಾದ್

NAMMMUR EXPRESS SPORTS NEWS
* ಗುಜರಾತ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಲಕ್ನೋ
ಲಕ್ನೋ: ಗುಜರಾತ್ ವಿರುದ್ಧದ ನಡೆದ ಪಂದ್ಯದಲ್ಲಿ ಲಕ್ನೋ ತಂಡ 6 ವಿಕೆಟ್‌ಗಳ ಜಯ ಸಾಧಿಸಿದೆ. 181 ರನ್‌ಗಳ ಗುರಿಯನ್ನು ಲಕ್ನೋ ತಂಡ ಇನ್ನು 3 ಎಸೆತಗಳ ಬಾಕಿ ಇರುವಾಗಲೇ ತಲುಪಿತು. ಐಡೆನ್ ಮಾರ್ಕ್ರಾಮ್ ಮತ್ತು ನಿಕೋಲಸ್ ಪೂರನ್ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಟಾಸ್ ಗೆದ್ದ ಲಕ್ನೋ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು,ಮೊದಲು ಬ್ಯಾಟ್ ಮಾಡಿದ ಗುಜರಾತ್ ಪರ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಅರ್ಧಶತಕ ಸಿಡಿಸಿ ತಂಡವನ್ನು 20 ಓವರ್‌ಗಳಲ್ಲಿ 180 ರನ್​ಗಳಿಗೆ ಕೊಂಡೊಯ್ದರು. ಇದಕ್ಕೆ ಉತ್ತರವಾಗಿ ಲಕ್ನೋ ತಂಡ 19.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 186 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದಿತು. ಲಕ್ನೋ ಪರ ಪೂರನ್ 34 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಏಳು ಸಿಕ್ಸರ್‌ಗಳ ಸಹಾಯದಿಂದ 61 ರನ್ ಗಳಿಸಿದರೆ, ಮಾರ್ಕ್ರಾಮ್ 31 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಾಯದಿಂದ 58 ರನ್ ಗಳಿಸಿದರು.

* ಪಂಜಾಬ್ ವಿರುದ್ಧ ಅಬ್ಬರಿಸಿದ ಹೈದ್ರಾಬಾದ್
ಹೈದ್ರಾಬಾದ್: ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ನಡುವಿನ 171ನ ರನ್​ಗಳ ಜೊತೆಯಾಟದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ಎರಡನೇ ಅತ್ಯಧಿಕ ರನ್ ಚೇಸ್ ಮಾಡಿ ಪಂಜಾಬ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಸನ್​ರೈಸರ್ಸ್​ ತಂಡ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ.
ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ ಬರೋಬ್ಬರಿ 245 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಆರಂಭಿಕ ಅಭಿಷೇಕ್ ಶರ್ಮಾ ಅವರ ದಾಖಲೆಯ ಐಪಿಎಲ್ ಶತಕದ ಬಲದಿಂದ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಈ ಸೀಸನ್​ನ ಎರಡನೇ ಗೆಲುವು ದಾಖಲಿಸಿದೆ.

ಮಿಂಚಿದ ಅಯ್ಯರ್‌: ಇದಕ್ಕೆ ಮೊದಲು ಶ್ರೇಯಸ್‌ ಅಯ್ಯರ್ ನೇತೃತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡ ಸವಾಲಿನ ಮೊತ್ತ ಗಳಿಸಿತ್ತು. ಆರಂಭ ಆಟಗಾರರಾದ ಪ್ರಿಯಾಂಶ್‌ ಆರ್ಯ (36 ರನ್ 13ಎಸೆತ,) ಮತ್ತು ಪ್ರಭಸಿಮ್ರನ್ ಸಿಂಗ್ (42ರನ್ 23 ಎಸೆತ) ಅವರು ಮೊದಲ ವಿಕೆಟ್‌ಗೆ ಬಿರುಸಿನ 66 ರನ್ 24 ಎಸೆತದಲ್ಲಿ ಸೇರಿಸಿದ್ದರು.
ಸನ್‌ ರೈಸರ್ಸ್‌ನ ಯಶಸ್ವಿ ಬೌಲರ್‌ ಹರ್ಷಲ್‌ ಪಟೇಲ್ (42ಕ್ಕೆ4) ಅವರು ಪ್ರಿಯಾಂಶ್ ಆರ್ಯ ವಿಕೆಟ್‌ ಪಡೆದು ಜೊತೆಯಾಟ ಮುರಿದರು. ಇನ್ನೊಂದೆಡೆ ಅಯ್ಯರ್‌ ‌ರನ್‌ ವೇಗ ಹೆಚ್ಚುವಂತೆ ನೋಡಿಕೊಂಡರು. ಹೀಗಾಗಿ ಪವರ್‌ಪ್ಲೇನಲ್ಲಿ ಪಂಜಾಬ್‌ ತಂಡ 1 ವಿಕೆಟ್‌ಗೆ 89 ರನ್‌ ಗಳಿಸಿತು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಚೆಪಾಕ್‌ನಲ್ಲಿ ಚೆನ್ನೈ ಮೇಲೆ ರೈಡ್ ಮಾಡಿದ ಕೋಲ್ಕತ್ತಾ
* ಸೋಲಿನ ಸರಪಳಿಯಲ್ಲಿ ಸಿಲುಕಿದ ಸಿಎಸ್‌ಕೆ

NAMMMUR EXPRESS SPORTS NEWS
ಚೆನ್ನೈ: ಚೆಪಾಕ್ ಅಂಗಳದಲ್ಲಿ ನಡೆದ ಐಪಿಎಲ್ -2025 ರ ಚೆನ್ನೈ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ತವರಲ್ಲಿ ಚೆನ್ನೈ ಸೋತಿದೆ. ಸತತ 4 ಸೋಲುಗಳಿಂದ ಕಂಗೆಟ್ಟಿದ್ದ ಸಿಎಸ್‌ಕೆ ತಂಡದ ಮೇಲೆ ಕೋಲ್ಕತ್ತಾ ತಂಡ ರೈಡ್ ಮಾಡಿದೆ.
ಋತುರಾಜ್ ಗಾಯದಿಂದಾಗಿ ಹೊರಬಿದ್ದು, ಚೆನ್ನೈಗೆ ಮತ್ತೆ ಎಂ.ಎಸ್.ಧೋನಿ ನಾಯಕರಾದರೂ ತಂಡದ ಸೋತಿದ್ದು, ಸೋಲಿನಿಂದ ಪಾಠ ಕಲಿಯದಂತಿರುವ ಚೆನ್ನೈಯನ್ನು ಶುಕ್ರವಾರ ಕೋಲ್ಕತಾ 8 ವಿಕೆಟ್‌ ಗಳಿಂದ ಸೋಲಿಸಿದೆ. ಚೆನ್ನೈ 6ರಲ್ಲಿ 5ನೇ ಸೋಲು ಕಂಡಿದ್ದು,ಕೋಲ್ಕತಾ 3ನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ಕಳೆದ 4 ಪಂದ್ಯಗಳಲ್ಲಿ ಚೇಸಿಂಗ್ ವೇಳೆ ಸೋತಿದ್ದ ಸಿಎಸ್‌ಕೆಗೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕಿತು. ಆದರೆ ಬ್ಯಾಟಿಂಗ್ ಲಯ ಕಳೆದುಕೊಂಡತೆ ಆಟಗಾರರು ಒಂದೊಂದು ರನ್ ಗಳಿಸಲೂ ಪರದಾಡಿದರು. ಚೆನ್ನೈ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 103 ರನ್ ಗಳಿಸಿತು. ಈ ಗುರಿ ಸುಲಭದ ಗುರಿಯನ್ನು ಕೆಕೆಆರ್‌ ಕೇವಲ 10.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು.
ಪವರ್‌ ಪ್ಲೇನಲ್ಲೇ ಕೆಕೆಆರ್ 71 ರನ್ ಚಚ್ಚಿತು. ಸುನಿಲ್ ನರೈನ್ ಸ್ಫೋಟಕ ಆಟದ ಮೂಲಕ ಚೆನ್ನೈ ಬೌಲರ್‌ಗಳ ಬೆವರಿಳಿಸಿದರು. ಕೇವಲ 18 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್‌ಳೊಂದಿಗೆ 44 ರನ್ ಸಿಡಿಸಿದರು.
ಚೆನ್ನೈ ಬ್ಯಾಟರ್‌ಗಳ ನಿರುತ್ತರ..
ಮೊದಲು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ
ಬ್ಯಾಟರ್‌ಗಳನ್ನು ಕೆಕೆಆರ್ ಸ್ಪಿನ್ನರ್ಸ್ ಕಟ್ಟಿಹಾಕಿದರು. ವಿಜಯ್ ಶಂಕರ್ (29), ಶಿವಂ ದುಬೆ(ಔಟಾಗದೆ 31) ರನ್‌ಗಳಿಸಿ ತಂಡದ ಮಾನ ಉಳಿಸಿದರು. 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಧೋನಿ 4 ಎಸೆತಕ್ಕೆ 1 ರನ್ ಗಳಿಸಿದರು.

* ಮೊದಲ ಬಾರಿ ಚೆನ್ನೈಗೆ ಸತತ ಐದು ಸೋಲು,ಅತಿ ಕನಿಷ್ಠ ಸ್ಕೋರ್,ಅತಿ ದೊಡ್ಡ ಸೋಲು !
ಚೆನ್ನೈ ತಂಡ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿತು. ಅಲ್ಲದೆ, ಚೆಪಾಕ್ ಕ್ರೀಡಾಂಗಣದಲ್ಲಿ ಸತತ 3 ಪಂದ್ಯಗಳಲ್ಲಿ ಸೋತಿದ್ದು ಇದೇ ಮೊದಲು.
ನಿನ್ನೆಯ ಪಂದ್ಯದಲ್ಲಿ ಚೆನ್ನೈ 103 ರನ್ ಗಳಿಸಿದ್ದು, ಇದು ಚೆಪಾಕ್‌ನಲ್ಲಿ ಚೆನ್ನೈನ ಅತಿ ಕನಿಷ್ಠ ಮೊತ್ತ. 2019ರಲ್ಲಿ ಮುಂಬೈ ವಿರುದ್ಧ 109 ರನ್ ಗಳಿಸಿತ್ತು. ಒಟ್ಟಾರೆ ಚೆನ್ನೈನಲ್ಲಿದು 2ನೇ ಕನಿಷ್ಠ. 2019ರಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ 70 ರನ್‌ಗೆ ಆಲೌಟಾಗಿದ್ದು ಈಗಲೂ ಕನಿಷ್ಠ ಮೊತ್ತವಾಗಿಯೇ ಉಳಿದಿದೆ.
ನಿನ್ನೆಯ ಪಂದ್ಯದಲ್ಲಿ ಕೆಕೆಆರ್ 59 ಎಸೆತ ಬಾಕಿ ಉಳಿಸಿ ಜಯಗಳಿಸಿತು. ಇದು ಚೆನ್ನೈ ತಂಡಕ್ಕೆ ಐಪಿಎಲ್‌ ನಲ್ಲೇ ಎಸೆತಗಳ ಆಧಾರದಲ್ಲಿ ಅತಿ ದೊಡ್ಡ ಸೋಲಾಗಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಮನೆಮಗನ ಆಟಕ್ಕೆ ಮನೆಯಂಗಳದಲ್ಲೇ ಮಣಿದ ಆರ್‌ಸಿಬಿ
* ರಾಹುಲ್ ಜವಾಬ್ದಾರಿಯುತ ಆಟ,93* ನಾಟೌಟ್

NAMMMUR EXPRESS SPORTS NEWS
ಬೆಂಗಳೂರು: ಐಪಿಎಲ್ -18 ನೇ ಆವೃತ್ತಿಯಲ್ಲಿ ಆರ್‌ಸಿ‌ಬಿ ತವರಲ್ಲಿ ಗೆಲ್ಲುವ ಕನಸಿಗೆ ಡೆಲ್ಲಿ ಕ್ಯಾಪಿಟಲ್ಸ್ ತಣ್ಣೀರೆರಚಿದೆ. ನಿನ್ನೆ ಆರ್‌ಸಿಬಿ ವಿರುದ್ಧ ತವರು ನೆಲ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳ ಜಯ ದಾಖಲಿಸಿದೆ.
ಕನ್ನಡಿಗ ಕೆ.ಎಲ್ ರಾಹುಲ್‌ರ ಜವಾಬ್ದಾರಿಯುತ ಅಜೇಯ 93 ರನ್ ಆಟದ ನೆರವಿನಿಂದ ಡೆಲ್ಲಿ ತಂಡ ಆರ್‌ಸಿಬಿ ನೀಡಿದ 163 ರನ್‌ನ್ನು ಚೇಸ್ ಮಾಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಸ್ಪೋಟಕ ಆರಂಭ ಪಡೆದರೂ, ಡೆಲ್ಲಿಯ ಅದ್ಭುತ ಬೌಲಿಂಗ್, ಫೀಲ್ಡಿಂಗ್ ಎದುರು 20 ಓವರ್‌ಲ್ಲಿ 7 ವಿಕೆಟ್‌ಗೆ 163 ರನ್ ಗಳಿಸಲಷ್ಟೇ ಸಾಧ್ಯವಾಯಿತು, ಸುಲಭಗುರಿಯಂತೆ ಕಂಡರೂ, ಡೆಲ್ಲಿಯ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಹೊಡೆತಗಳಿಗೆ ಕೈಹಾಕಿದಾಗಲೆಲ್ಲಾ, ಅವು ವಿಕೆಟ್‌ಗಳಾಗಿ ಪರಿವರ್ತನೆಗೊಂಡವು. 58 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ, ಕನ್ನಡಿಗ ರಾಹುಲ್ ಆಸರೆಯಾದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಿ ಬೆಳೆದಿರುವ ರಾಹುಲ್, ಮೈದಾನದ ಮೂಲೆ ಮೂಲೆಗೆ ಬಾಲ್ ಬಾರಿಸಿ ಕೇವಲ 53 ಬಾಲ್‌ಗಳಲ್ಲಿ 93 ರನ್ ಬಾರಿಸಿ ಆರ್‌ಸಿಬಿಗೆ ಬೆಂಡೆತ್ತಿದರು. ಬೆಂಗಳೂರು ತಂಡ ಸೋತಿದ್ದ ಅಭಿಮಾನಿಗಳಿಗೆ ನಿರಾಸೆ ತಂದರೂ, ಬೆಂಗಳೂರು ಹುಡುಗ ಮಿಂಚಿದ್ದು ಅಭಿಮಾನಿಗಳಿಗೆ ಖುಷಿ ನೀಡಿತು.

* 5 ಓವರ್‌ನಲ್ಲಿ 89 ರನ್, ಉಳಿದ 15 ಓವರ್‌‌ನಲ್ಲಿ 74 ರನ್!

ಆರ್‌ಸಿಬಿ 1ರಿಂದ 3, 19-20ನೇ ಓವರ್ ಸೇರಿ ಒಟ್ಟು 5 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 89 ರನ್ ಗಳಿಸಿದರೆ, ಇನ್ನುಳಿದ 15 ಓವರಲ್ಲಿ 7 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 71 ರನ್. ಮೊದಲ 3 ಓವರಲ್ಲಿ ಫಿಲ್‌ಸಾಲ್ಟ್ ಹಾಗೂ ಕೊನೆ 2 ಓವರಲ್ಲಿ ಟೀಮ್ ಡೇವಿಡ್ ಅಬ್ಬರದ ಆಟವಾಡಿದರು. ಆದರೆ ಇತರ ಬ್ಯಾಟರ್‌ಗಳು ಕೈಕೊಟ್ಟರು. ಇನ್ನಿಂಗ್ಸ್‌ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ಬರೊಬ್ಬರಿ 9 ಓವರ್‌ಗಳಲ್ಲಿ ರನ್ ಗಳಿಸಲೇ ಇಲ್ಲ.( ಇನ್ನಿಂಗ್ಸ್‌ನಲ್ಲಿ 55 ಡಾಟ್ ಬಾಲ್‌ಗಳಿದ್ದವು)

* 1000 ಬೌಂಡರಿ ಕೊಹ್ಲಿ ದಾಖಲೆ!

ಐಪಿಎಲ್‌ನಲ್ಲಿ 1000 ಬೌಂಡರಿ (ಫೋರ್, ಸಿಕ್ಸರ್) ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 1 ಫೋರ್. 2 ಸಿಕ್ಸ‌ರ್ ಸಿಡಿಸಿದ ಕೊಹ್ಲಿ, ಐಪಿಎಲ್‌ನ ಬೌಂಡರಿ ಸಂಖ್ಯೆ ಯನ್ನು 1001ಕ್ಕೆ ಹೆಚ್ಚಿಸಿದರು. ಒಟ್ಟು 280 ಸಿಕ್ಸರ್, 721 ಬೌಂಡರಿ ಸಿಡಿಸಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ – 2025
* ರಾಜಸ್ಥಾನ್ ಮೇಲೆ ರಾಯಲ್ ಸವಾರಿ ಮಾಡಿದ ಟೈಟಾನ್ಸ್
* ಇಂದು ತನ್ನ ತವರಲ್ಲೇ ಆರ್‌ಸಿಬಿ‌ಗೆ ಡೆಲ್ಲಿ ಸವಾಲ್

NAMMMUR EXPRESS SPORTS NEWS
ಅಹಮದಾಬಾದ್‌: ಐಪಿಎಲ್‌ -18 ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ 4ನೇ ಗೆಲುವು ಸಾಧಿಸಿದೆ, ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ರಾಜಸ್ಥಾನ 3ನೇ ಸೋಲು ಕಂಡಿದೆ, ಪಂದ್ಯದಲ್ಲಿ ಗುಜರಾತ್ 58 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ,ಪಾಂಯಿಂಟ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿದೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಸಾಯ್ ಸುದರ್ಶನ್ 53 ಎಸೆತಕ್ಕೆ 82, ಬಟ್ಲರ್ 36, ಶಾರುಖ್ ಖಾನ್ 36, ರಾಹುಲ್‌ ತೆವಾಟಿಯಾ24 ರನ್‌‌ಗಳ ಮೂಲಕ 6 ವಿಕೆಟ್ ನಷ್ಟಕ್ಕೆ 217 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ರಾಯಲ್ಸ್ ತನ್ನ ಬ್ಯಾಟಿಂಗ್ ವೈಫಲ್ಯದಿಂದ 19.2 ಓವರ್‌ಗಳಲ್ಲಿ 159 ರನ್‌ಗೆ ಆಲೌಟಾಯಿತು. ಹೆಟ್ಮೇಯ‌ರ್ (32 ಎಸೆತಕ್ಕೆ 52), ಸಂಜು ಸ್ಯಾಮ್ಸನ್‌ರ (41) ಹೋರಾಟ ವ್ಯರ್ಥವಾಯಿತು.12 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡ, ಪವರ್ -ಪ್ಲೇ ಅಂತ್ಯಕ್ಕೆ 57 ರನ್ ಗಳಿಸಿತ್ತು. ಆದರೆ 7ನೇ ಓವರ್‌ನಲ್ಲಿ ರಿಯಾನ್ (26) ಔಟಾದ ಬಳಿಕ ತಂಡ ಚೇತರಿಸಿಕೊಳ್ಳಲಿಲ್ಲ. ಪ್ರಸಿದ್ ಕೃಷ್ಣ 3 ವಿಕೆಟ್ ಪಡೆದರು.

* ಇಂದು ತನ್ನ ತವರಲ್ಲೇ ಆರ್‌ಸಿಬಿ‌ಗೆ ಡೆಲ್ಲಿ ಸವಾಲ್
ಬೆಂಗಳೂರು: ಇಂದು ಆರ್‌ಸಿಬಿ ಐಪಿಎಲ್ -2025 ರ ತನ್ನ 5 ನೇ ಪಂದ್ಯವನ್ನಾಡಲಿದೆ. ಇಂದು ನಡೆಯುವ ಪಂದ್ಯದಲ್ಲಿ ಆರ್‌ಸಿ‌ಬಿ ಡೆಲ್ಲಿ ತಂಡವನ್ನು ಎದುರಿಸಲಿದೆ. ಕೋಲ್ಕತ್ತಾ,ಮುಂಬೈ,ಚೆನ್ನೈನಲ್ಲಿ ಗೆದ್ದಿರುವ ಆರ್‌ಸಿಬಿ ತವರಲ್ಲಾಡಿದ ಒಂದು ಪಂದ್ಯ ಸೋತಿದ್ದು ಈಗ ಮತ್ತೆ ತವರಿನ ಪಂದ್ಯ ಗೆಲ್ಲಲೇ ಬೇಕಾದ ಪ್ರತಿಷ್ಠೆ ಎದುರಾಗಿದೆ. ಸತತ 3 ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಆರ್‌ಸಿಬಿ ಬ್ಯಾಟರ್ಸ್ ಹಾಗೂ ಡೆಲ್ಲಿ ಸ್ಪಿನ್ನರ್‌ಗಳ ನಡುವೆ ತೀವ್ರ ಪೈಪೋಟಿ ಇರಲಿದ್ದು ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಕೋಲ್ಕತ್ತಾ ಮೇಲೆ ರೈಡ್ ಮಾಡಿದ ಲಖನೌ
* ಪಂಜಾಬ್ ಕಿಂಗ್ಸ್ ಮುಂದೆ ಮಂಡಿಯೂರಿದ ಚೆನ್ನೈ
NAMMMUR EXPRESS SPORTS NEWS
ಕೋಲ್ಕತಾ: ಐಪಿಎಲ್‌ನಲ್ಲಿ ತನ್ನ 2ನೇ ಗರಿಷ್ಠ ಮೊತ್ತ ದಾಖಲಿಸಿದ ಲಖನೌ ಸೂಪರ್ ಜೈಂಟ್ಸ್, ಪವರ್‌-ಪ್ಲೇನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ರಿಂದ 90 ಹೊಡೆಸಿಕೊಂಡ ಹೊರತಾಗಿಯೂ 4 ರನ್ ಗಳ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
23 ರನ್‌ಗೆ 5 ವಿಕೆಟ್ ಕಳೆದುಕೊಂಡ ಕೆಕೆಆ‌ರ್, ತನ್ನ ತವರು ಮೈದಾನ ಈಡನ್‌ ಗಾರ್ಡನ್ಸ್‌ನಲ್ಲಿ ಸೋಲುಂಡು ನಿರಾಸೆಗೊಳಗಾಯಿತು.
ಮೊದಲು ಬ್ಯಾಟ್ ಮಾಡಿದ ಲಖನೌ ತನ್ನ ಮೂವರು ವಿದೇಶಿ ತಾರಾ ಬ್ಯಾಟರ್‌ಗಳ ಆರ್ಭಟದ ನೆರವಿನಿಂದ 20 ಓವರಲ್ಲಿ 3 ವಿಕೆಟ್ ಗೆ 238 ರನ್ ಪೇರಿಸಿತು. ಕೆಕೆಆರ್‌ನ ಅಗ್ರ ಕ್ರಮಾಂಕ ಸ್ಫೋಟಕ ಆಟವಾಡಿ, ಕೊನೆಯಲ್ಲಿ ರಿಂಕು ಸಿಂಗ್ ಹೋರಾಟ ನಡೆಸಿದರೂ ತಂಡ 20 ಓವರಲ್ಲಿ 7 ವಿಕೆಟ್ ಕಳೆದುಕೊಂಡು ಗಳಿಸಿದ್ದು 234 ರನ್
ಲಖನೌಗೆ ಏಡನ್ ಮಾರ್ಕ್‌ಮ್ ಹಾಗೂ ಮಿಚೆಲ್ ಮಾರ್ಷ್ ಅಮೋಘ ಆರಂಭಒದಗಿಸಿದರು. 28 ಎಸೆತದಲ್ಲಿ 47 ರನ್ ಚಚ್ಚಿದ ಮಾರ್ಕ್‌ರಮ್ ಮೊದಲ ವಿಕೆಟ್‌ಗೆ 99 ರನ್ ಜೊತೆಯಾಟದಲ್ಲಿ ಭಾಗಿಯಾದರು. ಮಾರ್ಷ್ 48 ಎಸೆತದಲ್ಲಿ 81 ರನ್ ಸಿಡಿಸಿದರೆ, ನಿಕೋಲಸ್ ಪೂರನ್ 36 ಎಸೆತದಲ್ಲಿ 7 ಬೌಂಡರಿ, 8 ಸಿಕ್ಸರ್ ನೊಂದಿಗೆ ಔಟಾಗದೆ 87 ರನ್ ಪೇರಿಸಿದರು. 2
ಕೆಕೆಆರ್ ಸಹ ಉತ್ತಮ ಆರಂಭ ಪಡೆಯಿತು. ಡಿ ಕಾಕ್ 15, ನರೈನ್ 30 ರನ್ ಚಚ್ಚಿದರು. ರಹಾನೆ 35 ಎಸೆತದಲ್ಲಿ 61 ರನ್ ಸಿಡಿಸಿದರೆ, ವೆಂಕಟೇಶ್ ಅಯ್ಯರ್ 29 ಎಸೆತದಲ್ಲಿ 45 ರನ್ ಗಳಿಸಿ ತಂಡದ ಜಯದ ಆಸೆಯನ್ನು ಜೀವಂತ ವಾಗಿರಿಸಿದರು. ಆದರೆ, 13ನೇ ಓವರ್‌ನ ಕೊನೆಯ ಎಸೆತದಲ್ಲಿ ರಹಾನೆ ವಿಕೆಟ್ ಪತನಗೊಂಡಿತು. ಆ ಬಳಿಕ ಕೆಕೆಆರ್ 23 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು.
ಆ್ಯಂಡ್ರೆ ರಸೆಲ್‌ರನ್ನು ಕ್ರೀಸ್‌ಗಿಳಿಸಲು ತಡ ಮಾಡಿದ್ದು ಕೆಕೆಆರ್‌ಗೆ ಸೋಲಿಗೆ ಕಾರಣವಾಯಿತು.ರಿಂಕು 15 ಎಸೆತದಲ್ಲಿ ಔಟಾಗದೆ 38 ರನ್ ಸಿಡಿಸಿದರೂ ಕೆಕೆಆರ್ ಗೆಲ್ಲಲಿಲ್ಲ.

* ಪಂಜಾಬ್ ಕಿಂಗ್ಸ್ ಮುಂದೆ ಮಂಡಿಯೂರಿದ ಚೆನ್ನೈ

ಮುಲ್ಲಾನ್‌ಪುರ್: ಕೇವಲ ಮೂವರು ಬ್ಯಾಟರ್‌ಗಳು ನೀಡಿದ ರನ್ ಕೊಡುಗೆಯಿಂದ 219 ರನ್‌ ಗಳ ಬೃಹತ್ ಮೊತ್ತ ಪೇರಿಸಿದ ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 18 ರನ್‌ಗಳ ಅಮೋಘ ಗೆಲುವು ದಾಖಲಿಸಿತು.
8 ಓವರಲ್ಲಿ ಪಂಜಾಬ್ 83 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಶ್ರೇಯಸ್ ಅಯ್ಯ‌ರ್, ಪ್ರಬ್‌ಸಿಮ್ರನ್, ಮ್ಯಾಕ್ಸ್‌ವೆಲ್, ಸ್ಪೋಯ್ಸಸ್, ನೇಹಲ್ ಔಟಾಗಿದ್ದರು. ಆದರೆ ಪ್ರಿಯಾನ್ಸ್‌ ಆರ್ಯಾ 103, ಶಶಾಂಕ್ ಸಿಂಗ್ 36 ಎಸೆತದಲ್ಲಿ ಔಟಾಗದೆ 52, ಮಾರ್ಕೊ ಯಾನ್ಸನ್ 19 ಎಸೆತದಲ್ಲಿ ಔಟಾಗದೆ 34 ರನ್ ಸಿಡಿಸಿ, ಪಂಜಾಬ್ ದೊಡ್ಡ ಮೊತ್ತ ದಾಖಲಿಸಲು ನೆರವಾದರು.
2018ರ ಬಳಿಕ 180ಕ್ಕೂ ಹೆಚ್ಚು ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತದ ಚೆನ್ನೈ, ಮತ್ತೊಮ್ಮೆ ವೈಫಲ್ಯ ಕಂಡಿತು. ರಚಿನ್, ಕಾನ್‌ವೇ, ದುಬೆ, ಧೋನಿ ಹೋರಾಡಿ ದರೂ, ಚೆನ್ನೈ ಗೆಲ್ಲಲಾಗಲಿಲ್ಲ, ಚೆನ್ನೈ ತಂಡಕ್ಕಿದು ಸತತ 4ನೇ ಸೋಲಾಗಿದೆ.