Categories
ಚಿಕ್ಕಮಗಳೂರು

ಚಿಕ್ಕಮಗಳೂರು ಸುದ್ದಿಗಳು

ಪ್ರವಾಸಕ್ಕೆಂದು ಬಂದಿದ್ದ ಯುವಕ ನಾಪತ್ತೆ: ಆಮೇಲೆ ಮನೆ ಬಳಿಯೇ ಪತ್ತೆ!
– ಸ್ನೇಹಿತರ ನಡುವೆ ಮಾತಿನ ಚಕಮಕಿ ಬಳಿಕ ಕಣ್ಮರೆಯಾಗಿದ್ದ
– ಚಾರ್ಮಾಡಿ ಘಾಟಿಯಲ್ಲಿ ಪ್ರಪಾತಕ್ಕೆ ವಾಹನ ಪಲ್ಟಿ

NAMMUR EXPRESS NEWS
ಪ್ರವಾಸಕ್ಕೆ ಬಂದಿದ್ದ ಯುವಕ ಅನುಮಾನಾಸ್ಪದ ಕಣ್ಮರೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆ ಗುಡ್ಡ ಬಳಿ ನಡೆದಿರುವ ಬಗ್ಗೆ ವರದಿಯಾಗಿದ್ದು ಆತ ಸ್ನೇಹಿತರ ಜತೆ ಗಲಾಟೆ ಮಾಡಿಕೊಂಡು ಬೇರೆ ವಾಹನ ಏರಿ ಮನೆಗೆ ತೆರಳಿದ್ದು ಪೊಲೀಸರು, ಅಧಿಕಾರಿಗಳು ಸುಖಾ ಸುಮ್ಮನೆ ಪೇಚಿಗೆ ಸಿಲುಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬೆಳ್ತಂಗಡಿ ತಾಲೂಕಿನ ಕೊಯ್ಯುರು ಗ್ರಾಮದ ದೀಕ್ಷಿತ್ (27) ಸೇರಿ ದೇವರಮನೆ ಗುಡ್ಡಕ್ಕೆ ನಾಲ್ಕು ಜನ ಯುವಕರು ಪ್ರವಾಸಕ್ಕೆ ಬಂದಿದ್ದಾಗ ಗುಡ್ಡೆತೋಟ ಬಳಿ ಕಾರು ನಿಲ್ಲಿಸಿ ಜಗಳವಾಡಿಕೊಂಡಿದ್ದಾರೆ. ಮಾತಿನ ಚಕಮಕಿ ಬಳಿಕ ಸಿಟ್ಟು ಮಾಡಿಕೊಂಡು ದೀಕ್ಷಿತ್ ಕಾರು ಹತ್ತದೆ ಹೋಗಿದ್ದಾನೆ. ರಾತ್ರಿಯಿಡಿ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳಿಂದ ಯುವಕನಿಗಾಗಿ ಶೋಧಕಾರ್ಯ ನಡೆಸುತ್ತಿದ್ದರು. ಇದೀಗ ಆತ ತನ್ನ ಮನೆ ಬಳಿಯೇ ಪತ್ತೆಯಾಗಿದ್ದಾನೆ.

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಕಾರು ಪಲ್ಟಿ

ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ಕಾರು ಮತ್ತು ಗೂಡ್ಸ್‌ ವಾಹನ ಡಿಕ್ಕಿ ಹೊಡೆದುಕೊಂಡಿದ್ದು, ಕಾರಿನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರು ಮತ್ತು ಮಹಾರಾಷ್ಟ್ರ ಕಡೆಗೆ ಸಾಗುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದುಕೊಂಡಿವೆ. ಗಾಯಾಳುಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.