Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಶಕ್ತಿ ಯೋಜನೆ ವಿಜಯೋತ್ಸವ..!

ತೀರ್ಥಹಳ್ಳಿಯಲ್ಲಿ ಶಕ್ತಿ ಯೋಜನೆ ವಿಜಯೋತ್ಸವ..!
– ಕೆ. ಎಸ್. ಆರ್.ಟಿ. ಸಿ ಬಸ್ ಡ್ರೈವರ್, ಕಂಡಕ್ಟರ್ ಗಳಿಗೆ ಸನ್ಮಾನ
– ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಚ್ಚಿoದ್ರ ಹೆಗ್ಡೆ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆಯ ಯಶಸ್ವಿಯಾಗಿ ಸುಮಾರು 5 ಕೋಟಿ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ತೀರ್ಥಹಳ್ಳಿ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಸಚಿಂದ್ರ ಹೆಗಡೆ ತಿಳಿಸಿದರು.
ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದ ಆವರಣದಲ್ಲಿ ಗ್ಯಾರಂಟಿ ಯಶಸ್ವಿ ಕಾರ್ಯಕ್ರಮದ ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ ಸಲುವಾಗಿ, ಕರ್ನಾಟಕ ರಾಜ್ಯ ಸಾರಿಗೆ ಬಸ್, ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಸರಳವಾಗಿ ಸನ್ಮಾನ ಕಾರ್ಯಕ್ರಮವನ್ನು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೆರವೇರಿಸಿದರು. ಈ ಸರಳ ಕಾರ್ಯಕ್ರಮ ಮಳೆ ನಡುವೆಯೂ ಯಶಸ್ವಿಯಾಗಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪಕ್ಷದ ಪ್ರಮುಖರಾದ ಮುಡಬ ರಾಘವೇಂದ್ರ, ಅಮರನಾಥ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ರಹಮತುಲ್ಲಾ ಅಸಾದಿ , ಗೀತಾ ರಮೇಶ್, ಡಾ.ಸುಂದರೇಶ್, ಶ್ರೇಯಸ್, ರಾಘವೇಂದ್ರ ಶೆಟ್ಟಿ, ಜಿನಾ ವಿಕ್ಟರ್, ಕುರುವಳ್ಳಿ ನಾಗರಾಜ್, ಮಂಜುಳಾ ನಾಗೇಂದ್ರ, ಸುಶೀಲಾ ಶೆಟ್ಟಿ, ರತ್ನಾಕರ್ ಶೆಟ್ಟಿ, ನಾಗೇಶ್ ಮೇಳಿಗೆ, ವಿಕ್ರಂ ಕಬಸೆ ಹಾಗೂ ಶ್ರೀಕಾಂತ್ ಬೆಟ್ಟಮಕ್ಕಿ ಸೇರಿ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.