ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೇಸ್‌ನಲ್ಲಿ ಭಿನ್ನಮತ ಸ್ಪೋಟ
* ಚಪ್ಪಲಿ ಹಾಕಿಕೊಂಡು ಆಸ್ಪತ್ರೆ ಆಪರೇಷನ್ ಥೇಟರ್‌ಗೆ ನುಗ್ಗಿ ವೈದ್ಯರಿಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್ ಯುವ ಮುಖಂಡ
* ಕಮಿಷನ್ ಕೇಳಿದ ಆರೋಪ,ಸದ್ಯ ಆಸ್ಪತ್ರೆ ರಕ್ಷಾ ಸಮಿತಿಗೆ ರಾಜೀನಾಮೆ ಸಲ್ಲಿಕೆ,ಸೂಕ್ತ ತನಿಖೆಗೆ ಬಿಜೆಪಿ ಒತ್ತಾಯ
NAMMMUR EXPRESS NEWS
ಎನ್.ಆರ್ ಪುರ: ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಆಪರೇಷನ್ ಥೇಟರ್‌ಗೆ ಹಾಕಿದ್ದ ಚಪ್ಪಲಿಯಲ್ಲೇ ನುಗ್ಗಿ, ವೈದ್ಯರಿಗೆ ಧಮ್ಕಿ ಹಾಕಿ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಈಗ ಸ್ವಪಕ್ಷೀಯ ಕಾರ್ಯಕರ್ತರೇ ಆಕ್ಷೇಪ ವ್ಯಕ್ತಪಡಿಸಿ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿಗಳಲ್ಲಿ ಕಮಿಷನ್ ಕೇಳುವುದು,ಆಸ್ಪತ್ರೆ ಅಧಿಕಾರಿಗಳ ಮೇಲೆ ಒತ್ತಡ ಹೇರುವುದು,ಧಮ್ಕಿ ಹಾಕುವುದು ಇಂತಹ ಆರೋಪಗಳು
ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಮೇಲೆ ಕೇಳಿಬಂದಿದ್ದು ಸದ್ಯ ಆಸ್ಪತ್ರೆಯ ರಕ್ಷಾ ಸಮಿತಿಗೆ ರಾಜೀನಾಮೆ ನೀಡಿದ್ದಾರೆ. ಇವರ ಬಗ್ಗೆ ಅನೇಕ ಆರೋಪಗಳು ಸ್ವಪಕ್ಷೀಯರಿಂದಲೇ ಕೇಳಿಬಂದಿರುವುದರಿಂದ ಈ ಘಟನೆಯ ಬಗ್ಗೆ ಸೂಕ್ತ ತನಿಖೆಯಾಬೇಕು ಸತ್ಯ ಹೊರಬರಬೇಕು ಎಂದು ಎನ್.ಆರ್ ಪುರ ಬಿಜೆಪಿ ಒತ್ತಾಯಿಸಿದೆ.
