Categories
ಚಿಕ್ಕಮಗಳೂರು

ಕುಡಿಯುವ ನೀರಿಗಾಗಿ ಕೊಪ್ಪ ಬಂದ್ ಆಗುತ್ತಾ…?

ಕುಡಿಯುವ ನೀರಿಗಾಗಿ ಕೊಪ್ಪ ಬಂದ್ ಆಗುತ್ತಾ…?

– ಶುದ್ಧ ನೀರು ಕೊಡುವ ಉದ್ದೇಶಕ್ಕೆ ಲೇ ಔಟ್ ಅಡ್ಡಿ
– ಜೀವರಾಜ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ

NAMMUR EXPRESS NEWS
ಕೊಪ್ಪ: ಭಾರತೀಯ ಜನತಾ ಪಾರ್ಟಿ ಕೊಪ್ಪ ಮಂಡಲದ ವತಿಯಿಂದ ಕೊಪ್ಪ ಪಟ್ಟಣ ಪಂಚಾಯತಿ ಮುಂಭಾಗ ಹಿರಿ ಕೆರೆಯ ನೀರು ಕಲುಷಿತವಾಗುವುದನ್ನು ಖಂಡಿಸಿ ಹಾಗೂ ಹಿರಿಕೆರೆ ಮೇಲ್ಬಾಗದಲ್ಲಿ ಅನಧಿಕೃತವಾಗಿ ಲೇಔಟ್ ನಿರ್ಮಾಣ ಮಾಡುವುದನ್ನು ಖಂಡಿಸಿ ಕೊಪ್ಪ ನಗರದ ಸಾರ್ವಜನಿಕರಿಗೆ ಉತ್ತಮ ಶುದ್ಧ ನೀರು ಕೊಡುವ ಉದ್ದೇಶದಿಂದ ಕೊಪ್ಪ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಯಲ್ಲಿ ಕೊಪ್ಪ ನಗರದ ಸಾರ್ವಜನಿಕರು, ಮಾಜಿ ಸಚಿವ, ಶಾಸಕ ಡಿ.ಎನ್.ಜೀವರಾಜ್‌ ಹಾಗೂ ಪಕ್ಷದ ತಾಲೂಕು ಅಧ್ಯಕ್ಷರು ಹಾಗೂ ಪಕ್ಷದ ವಿವಿಧ ಜವಾಬ್ದಾರಿಗಳನ್ನು ಹೊತ್ತಿರುವಂತ ಎಲ್ಲ ಪದಾಧಿಕಾರಿಗಳೂಳು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರುಗಳು ಭಾಗವಹಿಸಿದ್ದರು.

ಲೇಔಟ್ ಕಾಮಗಾರಿ ಸ್ಥಗಿತವಾಗದಿದ್ದರೆ ಕೊಪ್ಪ ಬಂದ್‌!

ಸುಧೀರ್ಘ ಕಾಲದಿಂದ ಪಪಂಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಕ್ಷೇತ್ರದ ಶಾಸಕರಿಗೆ ಆಗಿಲ್ಲ. 7 ವರ್ಷ ಕಳೆದರೂ ಬಾಳೆಹೊನ್ನೂರಿನ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಶಾಸಕರ ವಿರುದ್ಧ ಕಿಡಿಕಾರಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿರಿಕೆರೆ ಮೇಲ್ಬಾಗದಲ್ಲಿ ನಿರ್ಮಾಣ ವಾಗುತ್ತಿರುವ ಖಾಸಗಿ ಲೇಔಟ್‌ನ ಕಲುಷಿತ ನೀರು ಕೆರೆಗೆ ಸೇರದಂತೆ ಲೇಔಟ್ ನಿರ್ಮಾಣ ತಡೆ ಹಿಡಿಯಬೇಕೆಂದು ಆಗ್ರಹಿಸಿ ಕೊಪ್ಪ ಮಂಡಳ ಬಿಜೆಪಿಯಿಂದ ಬುಧವಾರ ಪಪಂ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಕೊಪ್ಪ ಪಟ್ಟಣಿಗರು ಮಾತ್ರ ಹಿರಿಕೆರೆ ನೀರು ಕುಡಿಯುವುದಿಲ್ಲ. ಪಟ್ಟಣಕ್ಕೆ ವಿವಿಧ ಕೆಲಸ ಗಳಿಗಾಗಿ ಶೃಂಗೇರಿ, ನ.ರಾ. ಪುರ, ತೀರ್ಥಹಳ್ಳಿ ಭಾಗಗಳಿಂದ ಕೊಪ್ಪಕ್ಕೆ ಬರುವ ಇತರರು ಈ ಕಲುಷಿತ ನೀರೇ ಕುಡಿಯುವ ಸಂಗತಿ ಬಂದಿದೆ. ಜನ ಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ಲೇಔಟ್ ಕಾಮಗಾರಿ ಸ್ಥಗಿತ ಗೊಳಿಸಬೇಕು. ಮುಂದಿನ 10 ದಿನದಲ್ಲಿ ಕೆಲಸ ಸ್ಥಗಿತಗೊಳಿಸದೆ ಇದ್ದಲ್ಲಿ ಕೊಪ್ಪ ಬಂದ್‌ಗೆ ಕರೆಕೊಡುತ್ತೇವೆ ಎಂದ ಅವರು ಸ್ಥಳದಲ್ಲಿದ್ದ ತಹಸೀಲ್ದಾರ್‌ಮತ್ತು ಮುಖ್ಯಾಧಿಕಾರಿ ಚಂದ್ರಕಾಂತ್‌ನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಮುಖಂಡ ಎಸ್.ಎನ್.ರಾಮಸ್ವಾಮಿ ಮಾತನಾಡಿ ಲೇಔಟ್ ನಿರ್ಮಾಣವಾಗುತ್ತಿರುವ ಜಾಗಕ್ಕೆ ಬಹಳ ದೊಡ್ಡ ಇತಿಹಾಸ ವಿದೆ.ಈಭಾಗದಲ್ಲಿ ಪ್ರಕೃತಿ ಲೇಔಟ್ ಆದಾಗಲೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಕೆ. ದಿನೇಶ್ ಮಾತನಾಡಿ ಕಳೆದೆರಡು ತಿಂಗಳಿನಿಂದ ನಾಗರಿಕರು ಪ್ರತಿಭಟನೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಚುನಾವಣೆ ನೀತಿಸಂಹಿತೆ ಮುಕ್ತಾಯ ವಾಗಿರುವುದರಿಂದ ಈಗ ಪ್ರತಿಭಟನೆ ಮಾಡುತ್ತಿದ್ದೇವೆ. ಸೂಕ್ತ ಕ್ರಮ ಕೊಪ್ಪ ಬಿಜೆಪಿಯಿಂದ ಲೇಔಟ್ ನಿರ್ಮಾಣ ಸ್ಥಗಿತಗೊಳಿಸುವಂತೆ ಪ.ಪಂ. ಕಚೇರಿ ಎದುರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

90ರ ದಶಕದಲ್ಲಿ ಲೇಔಟ್ ನಿರ್ಮಾಣಕ್ಕೆ ಮುಂದಾದಾಗ ತಡೆಹಿಡಿಯ ಲಾಗಿತ್ತು. ಬಿಜೆಪಿ ಆಡಳಿತ ರಾಜ್ಯದಲ್ಲಿ ಕೊನೆಯಾದಾಗ ಮತ್ತೆ ಲೇಔಟ್ ನಿರ್ಮಾಣ ಕೈಗೊಂಡಿದ್ದಾರೆ. ಲೇಔಟ್ ಯಾರು ಮಾಡುತ್ತಿದ್ದಾರೆ ಎಂಬುದು ಮುಖ್ಯವಲ್ಲ. ಜನರಿಗೆ ಕುಡಿಯುವ ನೀರಿಗೆ ತೊಂದರೆ ಯಾಗುತ್ತಿದೆ. ಶಾಸಕರಿಗೆ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಈಗಾಗಲೇ ಲೇಔಟ್‌ ನಿರ್ಮಾಣ ಕಾಮಗಾರಿ ಸ್ಥಳ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಹೇಳಿದ್ದಲ್ಲಿ ಲೇಔಟ್ ಕಾಮಗಾರಿ ನಿಂತುಹೋಗುತ್ತದೆ. ಆದರೆ ಶಾಸಕರು ಇದಕ್ಕೆ ಮುಂದಾಗುತ್ತಿಲ್ಲ. ಇದರಿಂದ ಮುಂದಾಗುವ ಅನಾಹುತಗಳಿಗೆ ಶಾಸಕರೇ ನೇರ ಹೊಣೆ. ಅದಕ್ಕೆ ಶಾಸಕರೇ ಬೆಲೆ ತೆರಬೇಕಾಗುತ್ತದೆ ಎಂದರು.

ಲೇಔಟ್ ನಿರ್ಮಾಣ ಸ್ಥಗಿತ ಗೊಳಿಸುವಂತೆ ಪಪಂ ಕಚೇರಿ ಎದುರು ತಹಸೀಲ್ದಾರ್‌ರರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾಕಾರರು ಶಾಸಕರ ಆಪ್ತ ಸಹಾಯಕರ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿದರು. ಡಾ. ಜಿ.ಎಸ್. ಮಹಾಬಲರಾವ್, ಎಚ್.ಆರ್. ಜಗದೀಶ್ ದಿವಾಕರ್ ಭಟ್, ಪದ್ಮಾವತಿ ರಮೇಶ್, ಪಪಂ ಸದಸ್ಯರಾದ ಇದ್ದೀನಬ್ಬ, ಗಾಯತ್ರಿ ಶೆಟ್ಟಿ, ಗಾಯತ್ರಿ ಭಟ್, ಸುಜಾತ, ರೇಖಾ ಪ್ರಕಾಶ್‌ ಇದ್ದರು.

ಕೊಪ್ಪ ಬಂದ್ ಮಾಡಬೇಕಾಗುತ್ತೆ ಹುಷಾರ್

ಜನಸಾಮನ್ಯರ ಬೇಡಿಕೆಯಂತೆ ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದಂತೆ ಆರೋಗ್ಯದ ಹಿತದೃಷ್ಟಿಯಿಂದ ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಿರುವ ಲೇಔಟ್ ಕಾಮಗಾರಿ ವಿರುದ್ಧ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮುಂದಿನ 10 ದಿನದಲ್ಲಿ ಕೆಲಸ ಸ್ಥಗಿತಗೊಳಿಸದೆ ಇದ್ದಲ್ಲಿ ಕೊಪ್ಪ ಬಂದ್‌ಗೆ ಕರೆ ನೀಡಲಾಗುವುದು.

– ಡಿ.ಎನ್.ಜೀವರಾಜ್
ಮಾಜಿ ಸಚಿವರು, ಮಾಜಿ ಶಾಸಕರು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.