Categories
ಚಿಕ್ಕಮಗಳೂರು

ಬಾಳೆಹೊನ್ನೂರು ಕಾಡಾನೆ ಆಪರೇಷನ್!

ಬಾಳೆಹೊನ್ನೂರು ಕಾಡಾನೆ ಆಪರೇಷನ್!
* ಹೇಗಿತ್ತು ಕಾಡಾನೆ ಸೆರೆ ಕಾರ್ಯಾಚರಣೆ…?
* ಸಕ್ರೇಬೈಲ್‌ನ ಕುಮ್ಕಿ ಆನೆ ತಂಡದಿಂದ ಒಂದು ಪುಂಡಾನೆ ಸೆರೆ
* ಮತ್ತೆರಡು ಕಾಡಾನೆ ಹಿಡಿಯೋದು ಯಾವಾಗ?

NAMMMUR EXPRESS NEWS
ಬಾಳೆಹೊನ್ನೂರು: ಮಲೆನಾಡು ಭಾಗದಲ್ಲಿ ಕಳೆದೊಂದು ವರ್ಷದಿಂದ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ರೈತರ ಜಮೀನಿಗೆ ನುಗ್ಗಿ ರೈತ ಬೆಳೆದ ಬೆಳೆ ನಾಶ ಮಾಡುತ್ತಿವೆ. ಕಾಡಾನೆ ದಾಳಿಗೆ ಶೃಂಗೇರಿ ಕ್ಷೇತ್ರದಲ್ಲಿ ಕಳೆದ 8 ತಿಂಗಳಲ್ಲಿ 5 ಮಂದಿ ಬಲಿಯಾಗಿದ್ದು ಕಳೆದ ಕೇವಲ 4 ದಿನಗಳಲ್ಲಿ ಬಾಳೆಹೊನ್ನೂರು ಭಾಗದ ಬನ್ನೂರು ಹಾಗೂ ಅಂಡವಾನೆ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದಿತ್ತು. ಇದರಿಂದ ರೊಚ್ಚಿಗೆದ್ದ ಜನ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ರಾತ್ರೋರಾತ್ರಿ ಪ್ರತಿಭಟಿಸಿದರು,

ಬಾಳೆಹೊನ್ನೂರು,ಖಾಂಡ್ಯ ಹೋಬಳಿ ಸಂಪೂರ್ಣ ಬಂದ್

ಬಾಳೆಹೊನ್ನೂರು,ಖಾಂಡ್ಯ ಹೋಬಳಿ ಸಂಪೂರ್ಣ ಬಂದ್ ಮಾಡಿ ಅರಣ್ಯ ಇಲಾಖೆ ಕಛೇರಿಗೆ ಮುತ್ತಿಗೆ ಕರೆ ಕೊಟ್ಟರು,ಎಲ್ಲಾ ರಾಜಕೀಯ ಪಕ್ಷಗಳು,ವಿವಿಧ ಸಂಘಟನೆ,ಸಂಘ ಸಂಸ್ಥೆಗಳು,ಸಾರ್ವಜನಿಕರೆಲ್ಲಾ ಸೇರಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕರು,ಮಾಜಿ ಶಾಸಕರು,ರಾಜ್ಯ ನಾಯಕರುಗಳೆಲ್ಲ ಭಾಗವಹಿಸಿ ಸ್ಥಳಕ್ಕೆ ಡಿ ಸಿ,ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್,ಅರಣ್ಯ ಸಚಿವ ಈಶ್ವರ್ ಖಂಡ್ರೆ ಬರುವಂತೆ ಪಟ್ಟು ಹಿಡಿದರು. ಕಾಡು ಪ್ರಾಣಿಗಳು ಮಾನವನ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ರೈತರ ಆಕ್ರೋಶಕ್ಕೆ ಮಣಿದ ಸರ್ಕಾರ

ಪರಿಸ್ಥಿತಿಯ ತೀವ್ರತೆ ಅರಿತು ಹಾಗೂ ರೈತರ ಆಕ್ರೋಶಕ್ಕೆ ಮಣಿದ ಸರ್ಕಾರ ತಕ್ಷಣವೇ ಕಾಡಾನೆ ಸೆರೆಗೆ ಆದೇಶಿಸಿ ಸಕ್ರೇಬೈಲ್ ಕುಮ್ಕಿ ಆನೆಗಳ ತಂಡವನ್ನು ಸ್ಥಳಕ್ಕೆ ಕಳುಹಿಸಿ,ಅರವಳಿಕೆ ತಜ್ಞರು,ಕಾರ್ಯಾಚರಣೆಗೆ ವಿಶೇಷ ತಜ್ಞರನ್ನು ಕಳುಹಿಸಿತು. ಕಾರ್ಯಾಚರಣೆ ಆರಂಭವಾಗಿ ಒಂದು ದಿನದ ನಂತರ ಹವಾಮಾನ, ಭಾರೀ ಮಳೆಯಂತಹ, ಹಲವು ಸವಾಲುಗಳ ನಡುವೆ ಒಂದು ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ತಂಡ ಯಶಸ್ವಿಯಾಗಿದ್ದು,ಸೆರೆ ಹಿಡಿದ ಕಾಡಾನೆಯನ್ನು ಸಕ್ರೇಬೈಲ್‌ಗೆ ರವಾನಿಸಲಾಗಿದೆ. ಇನ್ನೊಂದು ಕಾಡಾನೆಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಮೂರು ಆನೆ ಇವೆ…

ಸದ್ಯ ಇಲಾಖೆಯಿಂದ ಎರಡು ಕಾಡಾನೆಗಳ ಸೆರೆಗೆ ಆದೇಶವಿದ್ದು ಆದರೆ ಕ್ಷೇತ್ರದಲ್ಲಿ ಮೂರು ಕಾಡಾನೆಗಳಿಂದ ಉಪಟಳ ಹೆಚ್ಚಾಗಿದೆ. ಆ ಮೂರು ಕಾಡಾನೆಗಳನ್ನು ಸೆರೆಹಿಡಿಯ ಬೇಕೆಂಬ ಒತ್ತಾಯ ಮೊದಲಿನಿಂದಲೂ ಕೇಳಿ ಬಂದಿದೆ. ಸದ್ಯ ಸೆರೆ ಸಿಕ್ಕಿರುವುದು ಮರಿಯಾನೆಯಾಗಿದ್ದು ದಾಳಿ ಮಾಡಿ ಇಬ್ಬರನ್ನು ಬಲಿ ತೆಗೆದುಕೊಂಡ ಆನೆ ಬೇರೆಯದೇ ಇದೆ ಎಂಬ ಚರ್ಚೆಗಳು ಸ್ಥಳೀಯರಿಂದ ಕೇಳಿಬರುತ್ತಿದೆ. ಅದೇನೆ ಇರಲಿ ತೊಂದರೆ ಕೊಡುತ್ತಿರುವ ಪುಂಡಾನೆಗಳನ್ನು ಸೆರೆ ಹಿಡಿದು ರೈತರು,ಸಾರ್ವಜನಿಕರ ಜೀವ ಜೀವನವನ್ನು ಇಲಾಖೆ,ಸರ್ಕಾರ ರಕ್ಷಿಸಿಬೇಕಾಗಿದೆ ಇದು ನಮ್ಮೂರ್ ಎಕ್ಸ್‌ಪ್ರೆಸ್ ಕಳಕಳಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.