Categories
ಚಿಕ್ಕಮಗಳೂರು

ತರೀಕೆರಿಯಲ್ಲೂ ಪಾಕ್ ಪರ ಘೋಷಣೆ,ದೂರು

ತರೀಕೆರಿಯಲ್ಲೂ ಪಾಕ್ ಪರ ಘೋಷಣೆ,ದೂರು

* ವಿಡಿಯೋ ವೈರಲ್,ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದ ದೂರು
* ಖಾಕಿ ಹೈ ಅಲರ್ಟ್, ಘೋಷಣೆ ಕೂಗಿದ್ದು ಸುಳ್ಳು ಎಂದ ಮುಸ್ಲಿಂ ಮುಖಂಡರು

NAMMMUR EXPRESS NEWS
ತರೀಕೆರೆ: ಮೊನ್ನೆ ಮೊನ್ನೆಯಷ್ಟೇ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನದ ಪರ ಹಾಕಲಾಗಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲೂ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಕೇಳಿ ಬಂದಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ದೂರು ನೀಡಿವೆ. ಆದರೆ ಈ ಆರೋಪವನ್ನು ಮುಸ್ಲಿಂ ಮುಖಂಡರು ಅಲ್ಲಗಳೆದಿದ್ದಾರೆ.

* ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಪರ ಘೋಷಣೆ
ಮೊನ್ನೆಯಷ್ಟೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿತ್ತು. ಭದ್ರಾವತಿಯ ಗಾಂಧಿ ವೃತ್ತದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಂಜೆ ವೇಳೆಗೆ ನಡೆದ ಮೆರವಣಿಗೆಯಲ್ಲಿ ದೇಶದ್ರೋಹಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ಕೂಡ ನಡೆಯುತ್ತಿದೆ.
ಭದ್ರಾವತಿಯ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗಾಂಧಿ ಚೌಕ್‌ನಲ್ಲಿ ಮೆರವಣಿಗೆಯು ನಿಂತಿದ್ದಾಗ, ಮಣಿ ಸ್ಟ್ಯಾಂಡ್‌ನಲ್ಲಿ ಡಿಜೆ ಸ್ಟಿಸ್ಟಂ ಅಳವಡಿಸಲಾಗಿತ್ತು. ಈ ವೇಳೆ ಯುವಕರ ಗುಂಪು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿತ್ತು.
ಈ ಘಟನೆ ಬೆನ್ನಲ್ಲೇ ಭದ್ರಾವತಿ ಬಳಿಕ ಪಕ್ಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲೂ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಆರೋಪ ಕೇಳಿ ಬಂದಿದ್ದು,ಮುಸ್ಲಿಂ ಯುವಕರ ಗುಂಪಿನಿಂದ ಪಾಕಿಸ್ತಾನದ ಪರ ಘೋಷಣೆ ಮೊಳಗಿದೆ, ವಿಡಿಯೋ ಒಂದು ಭಾರೀ ವೈರಲ್ ಆಗಿದೆ.

* ದೂರು ನೀಡಿದ ಬಿಜೆಪಿ, ಹಿಂದೂ ಪರ ಸಂಘಟನೆ ಕಾರ್ಯಕರ್ತರು
ಸದ್ಯ ತರೀಕೆರೆ ತಾಲೂಕಿನಾದ್ಯಂತ ಈ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಇದೇ ವಿಡಿಯೋ ಆಧಾರದ ಮೇಲೆ‌ ದೂರು ನೀಡಿವೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ದೂರು ನೀಡಿದ್ದಾರೆ.

* ವೈರಲ್ ಆಗಿರೋ ವಿಡಿಯೋದಲ್ಲಿ ಏನಿದೆ?
ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ಪಾಕಿಸ್ತಾನ ಪರ ಘೋಷಣೆ ಮೊಳಗಿಸಿರೋದು ಕೇಳಿ ಬರುತ್ತಿದೆ. ಪಾಕಿಸ್ತಾನ್‌ ಕೀ ಜೈ ಎಂಬ ಘೋಷಣೆ ಕೂಗಲಾಗಿದೆ. ಸದ್ಯ ಈ ಬಗ್ಗೆ ದೂರು ನೀಡಲಾಗಿದ್ದು, ಪಾಕಿಸ್ತಾನ ಕೀ ಜೈ ಎಂದು ಘೋಷಣೆ ಕೂಗಿದವರ ವಿರುದ್ಧ FIR ದಾಖಲಿಸಿ ಬಂಧನ ಮಾಡುವಂತೆ ಪಟ್ಟು ಹಿಡಿದಿದ್ದಾರೆ.

* ತರೀಕೆರೆ ಪಟ್ಟಣದಾದ್ಯಂತ ಬಿಗಿ ಭದ್ರತೆ
ಇದೇ ಸಪ್ಟೆಂಬರ್ 13 ರಂದು ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಈದ್ ಮೆರವಣಿಗೆ ಹಿನ್ನೆಲೆಯಲ್ಲಿ ತರೀಕೆರೆ ಪಟ್ಟಣದಲ್ಲಿ ಅಲಂಕಾರ ಮಾಡಲಾಗಿದೆ. ತರೀಕೆರೆ ಪಟ್ಟಣದ ಕೋಡಿ ಕ್ಯಾಂಪ್ ಬಳಿ‌ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ಹೇಳಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ತರೀಕೆರೆ ಪಟ್ಟಣದಲ್ಲಿ ಪೊಲೀಸ್ ಹೈ ಅಲರ್ಟ್ ಘೋಷಿಸಲಾಗಿದೆ.

* ಆರೋಪ ಅಲ್ಲಗಳೆದ ಮುಸ್ಲಿಂ ಮುಖಂಡರು ಹಾಗೂ ಸ್ಪಷ್ಟನೆ
ಇನ್ನು ಪಾಕ್ ಪರ ಘೋಷಣೆ ಆರೋಪವನ್ನು ಮುಸ್ಲಿಂ ಮುಖಂಡರು ಅಲ್ಲಗಳೆದಿದ್ದಾರೆ. ನಾವು ಯಾವುದೇ ಘೋಷಣೆ ಕೂಗಿಲ್ಲ. ನಾವು ಭಾರತೀಯ ಮಕ್ಕಳು. ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂಬ ವಿಡಿಯೋ ವೈರಲ್ ಆಗುತ್ತಿದೆ ಅದು ಆ ರೀತಿ ಅಲ್ಲ. ಯಾಸೀಂದಾ ಕಿ ಜೈ, ಇಸ್ಲಾಂ‌ ಜಿಂದಾಬಾದ್ ಎಂದು ಕೂಗಿದ್ದಾರೆ. ಇದೇ ಭಾರತೀಯ ಮಕ್ಕಳು ನಾವು. ಇದೇ ಮಣ್ಣಲ್ಲಿ ಹುಟ್ಟಿ ಇದೇ ಮಣ್ಣಲ್ಲಿ ನಾವು ಸಾಯ್ಬೇಕು ಅಂತ ಮುಸ್ಲಿಂ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.