Categories
ಚಿಕ್ಕಮಗಳೂರು

ಸಾಮ್ರಾಟ್ ಜೆಸಿಐ ಸಪ್ತಾಹ -2025 ಕ್ಕೆ ಅದ್ದೂರಿ ಚಾಲನೆ

ಸಾಮ್ರಾಟ್ ಜೆಸಿಐ ಸಪ್ತಾಹ -2025 ಕ್ಕೆ ಅದ್ದೂರಿ ಚಾಲನೆ

* ಶೃಂಗೇರಿ ಜೆಸಿಐ ಘಟಕದ ವತಿಯಿಂದ ಕಾರ್ಯಕ್ರಮ
* ಚಿಣ್ಣರಿಗೆ ರಾಧಾಕೃಷ್ಣ ವೇಷ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ,ಏಕ್ ಮಿನಿಟ್
* ಇಂದೂ ಕೂಡ ಹಲವು ಸ್ಪರ್ಧೆ

NAMMMUR EXPRESS NEWS
ಶೃಂಗೇರಿ: ಜೆಸಿಐ ಶೃಂಗೇರಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ಸಾಮ್ರಾಟ್ ಜೆಸಿಐ ಸಪ್ತಾಹ -2025 ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆತಿದೆ. 41ನೇ ವರ್ಷದ ಕಾರ್ಯಕ್ರಮವು ಒಂದು ವಾರಗಳ ಕಾಲ ನಡೆಯಲಿದೆ. ಶೃಂಗೇರಿ ಘಟಕದ ಜೆಸಿಐ ಅಧ್ಯಕ್ಷರಾದ ಅಶೋಕ್ ವಿ ಎಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೆಚ್ ಎಸ್ ವೇಣುಗೋಪಾಲ್, ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರತಿದಿನ ಕಾರ್ಯಕ್ರಮದಲ್ಲಿ ‘ಸಲ್ಯೂಟ್ ದಿ ಸೈಲ್ಯುಟ್ ದಿ ಸೈಲೆಂಟ್ ವರ್ಕರ್ಸ್’ ಶೀರ್ಷಿಕೆಯಲ್ಲಿ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕಿನ ಮೆಣಸೆ ಗ್ರಾ ಪಂ ಯ ನೀರು ನಿರ್ವಹಣಾ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕರು,ತಾಲೂಕಿನ ಮೆಸ್ಕಾಂ ನೌಕರರು,ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ನೌಕರರಿಗೆ ಸನ್ಮಾನಿಸಲಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಶಿಶುವಿಹಾರದಿಂದ 4 ನೇ ತರಗತಿ ಮಕ್ಕಳಿಗೆ ರಾಧಾಕೃಷ್ಣ ವೇಷ ಸ್ಪರ್ಧೆ,ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ,ಶ್ಯಾವಿಗೆ ತಿನ್ನುವ ಸ್ಪರ್ಧೆ,ಏಕ್ ಮಿನಿಟ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಎಲ್ಲಾ ಸ್ಪರ್ಧೆಗಳಲ್ಲಿ ಪುಟಾಣಿಗಳು ರಾಧಾ ಕೃಷ್ಣ ವೇಷ ತೊಟ್ಟು ಸಂಭ್ರಮಿಸಿದರೆ,ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

* ಇಂದು ಏನೇನು ಕಾರ್ಯಕ್ರಮ
ಇಂದು ನಡೆಯುವ ಕಾರ್ಯಕ್ರಮದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ಸ್ ಶೀರ್ಷಿಕೆಯಡಿಯಲ್ಲಿ ಕೆರೆಕಟ್ಟೆ ಹಾಗೂ ನೆಮ್ಮಾರು ಗ್ರಾ ಪಂ ಯ ನೀರು ನಿರ್ವಹಣಾ ಸಿಬ್ಬಂದಿ ಹಾಗೂ ಸ್ವಚ್ಛತಾ ವಾಹನ ಸಿಬಂದಿಗಳಿಗೆ ಸನ್ಮಾನ ಕಾರ್ಯಕ್ರಮವಿದೆ.
ನಂತರ ಶಿಶುವಿಹಾರದಿಂದ 1 ನೇ ತರಗತಿ ಮಕ್ಕಳು ಹಾಗೂ 2 ರಿಂದ 4 ನೇ ತರಗತಿ ಮಕ್ಕಳಿಗೆ ಗ್ರಾಮೀಣ ಪ್ರದೇಶದ ಜನರ ಹಾಗೂ ವಧುವರರ ವೇಷಭೂಷಣ ಸ್ಪರ್ಧೆ ನಡೆಯಲಿದೆ. 5 ರಿಂದ 7 ನೇ ತರಗತಿ ಮಕ್ಕಳಿಗೆ ಕನ್ನಡ ಕವಿಗಳ ಕವನ ವಾಚನ ಸ್ಪರ್ಧೆ,8 ರಿಂದ 10 ನೇ ತರಗತಿ ಮಕ್ಕಳಿಗೆ ಸಿನಿಮಾ ನೃತ್ಯ (ಸೋಲೋ), ಕಾಲೇಜು ವಿಭಾಗಕ್ಕೆ ಸಿನಿಮಾ ನೃತ್ಯ(ಗ್ರೂಪ್), ಸಾರ್ವಜನಿಕರಿಗೆ ತೋಲ್ ಮೋಲ್ ಕೆ ಬೋಲ್ ಹಾಗೂ ಸ್ಥಳದಲ್ಲೇ ಹೂದಾನಿ ತಯಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇಂದಿನ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು,ಮಕ್ಕಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜೆಸಿಐ ಶೃಂಗೇರಿ ಘಟಕ ಮನವಿ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.