ಮಲೆನಾಡನಲ್ಲಿ ಕಾಡಾನೆ ಹಾವಳಿಗೆ ಬೀಳತ್ತಾ ಬ್ರೇಕ್ !
* ಖಾಸಗಿ ಸಂಸ್ಥೆಯಿಂದ 3 ಡಿವೈಸ್ ಅನ್ವೇಷಣೆ, ಆಗುತ್ತಾ ಸಕ್ಸಸ್
* ದಿನಬೆಳಗಾದರೂ ತೋಟ,ಜಮೀನಿಗೆ ಹೋಗಲು ಹೆದರುವ ಪರಿಸ್ಥಿತಿ
NAMMMUR EXPRESS NEWS
ಬೆಂಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಗೆ ರೈತರು ಸುಸ್ತಾಗಿದ್ದಾರೆ. ದಿನ ರೈತರ ತೋಟಕ್ಕೆ ಲಗ್ಗೆ ಇಡೋ ಕಾಡನೆ ಮಕ್ಕಳಂತೆ ಸಾಕಿದ ಬೆಳೆಗಳನ್ನ ನಾಶ ಮಾಡುತ್ತಿದ್ದು, ಇದರ ನಡುವೆ ತೋಟಕ್ಕೆ ಹೋಗಲು ಭಯಪಡುವತಂಹ ಸ್ಥಿತಿ ಸೃಷ್ಠಿಯಾಗಿದೆ. ಇದನ್ನೆಲ್ಲ ಗಮನಿಸಿದ ಖಾಸಗಿ ಸಂಸ್ಥೆಯೊಂದು ರೈತರ ಸಮಸ್ಯೆ ವಿರುದ್ಧ ಹೋರಾಡುವುದ್ದಕ್ಕಾಗಿ ನಿಂತಿದ್ದು, ಕೊಂಚ ಮಟ್ಟಿಗೆ ರಿಲೀಫ್ ನೀಡುವ ಯೋಜನೆ ಮಾಡಿದೆ.
* ಕಾಡಾನೆ ಹಾವಳಿಗೆ 3 ಡಿವೈಸ್ ತಂತ್ರಜ್ಞಾನ, ಆಗುತ್ತಾ ಸಕ್ಸಸ್ ??
ಕಾಫಿನಾಡಿನ ಮಲೆನಾಡು ಭಾಗದಲ್ಲಿ ದಿನ ಬೆಳಗಾದ್ರೆ ರೈತರು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳೋದೆ ದೊಡ್ಡ ಸವಾಲಾಗಿದೆ. ಕಾರಣ ಕಾಡು ಪ್ರಾಣಿಗಳ ಹಾವಳಿ, ಕಾಡಿನಿಂದ ತೋಟಗಳಿಗೆ ಲಗ್ಗೆ ಇಡೋ ಕಾಡಾನೆಗಳ ಹಿಂಡು ಬೆಳೆಗಳನ್ನ ನಾಶ ಮಾಡಿಬಿಡುತ್ತಿವೆ,ಅಡಿಕೆ ಮರಗಳನ್ನ ಮುರಿದು ಹಾಕುತ್ತಿವೆ. ಇದರಿಂದ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಬೆಳೆ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿವೆ. ಇದಕ್ಕೆಲ್ಲಾ ಇನ್ಮೇಲೆ ಬ್ರೇಕ್ ಬೀಳುವ ಸಾಧ್ಯತೆ ಇದೆ.
ಎನ್.ಆರ್ ಪುರ ಭಾಗದಲ್ಲಿ ಒಂದು ವರ್ಷದಲ್ಲಿ ಐದು ಜನ ಕಾಡಾನೆಗೆ ಮೃತಪಟ್ಟಿದ್ದಾರೆ. ಹೀಗಾಗಿ ಜೀವ ಭಯದಲ್ಲಿ ಓಡಾಡುವಂತಹ ಸ್ಥಿತಿ ಇದೆ. ಇದನ್ನೆಲ್ಲಾ ಗಮನಿಸಿದ ಖಾಸಗಿ ಸಂಸ್ಥೆಯೊಂದು ರೈತರ ಸಮಸ್ಯೆಗೆ ಬ್ರೇಕ್ ಹಾಕಲು ಹೊಸ ಡಿವೈಸ್ ಕಂಡು ಹಿಡಿಯಲು ಮುಂದಾಗಿದೆ.
ಬೆಂಗಳೂರು ಮೂಲದ ಖಾಸಗಿ ಕಂಪನಿ ರೈತರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮೂರು ಡಿವೈಸ್ಗಳನ್ನ ಕಂಡು ಹಿಡಿಯಲು ಮುಂದಾಗಿದೆ. ಒಂದು ಜೋರಾಗಿ ಶಬ್ಧ ಮಾಡುವ ಸೈರನ್, ಇನ್ನೊಂದು ಪ್ರಕಾಶಮಾನವಾದ ಬೆಳಕು ಚೆಲ್ಲುವ ಲೈಟ್,ಮತ್ತೊಂದು ಅಟೋಮ್ಯಾಟಿಕ್ ಶಬ್ದ ಮಾಡುವ ಗನ್.ಇವೆಲ್ಲವೂ ಸೆನ್ಸಾರ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಈ ಬಗ್ಗೆ ಶೃಂಗೇರಿ,ಕೊಪ್ಪ, ಎನ್.ಆರ್ ಪುರ ಭಾಗದ ಹಲವು ರೈತರಿಗೆ ಮಾಹಿತಿ ನೀಡಿದ್ದಾರೆ.
* ಡಿವೈಸ್ ಅಳವಡಿಸಿಕೊಳ್ಳಲು ರೈತರಿಂದ ಚಿಂತನೆ
ಈಗಾಗಲೇ ಸಾಕಷ್ಟು ಬೆಳೆಗಳನ್ನು ಕಳೆದುಕೊಂಡು ನಷ್ಟ ಅನುಭವಿಸಿರೋ ರೈತರು, ಒಮ್ಮೆ ಪರಿಹಾರ ಸಿಕ್ಕಿದ್ರೆ ಸಾಕಪ್ಪ ಅಂತಿದ್ದಾರೆ. ಇದರ ನಡುವೆ ರೈತರಿಗೆ ಈ ಡಿವೈಸ್ಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.