Categories
ಚಿಕ್ಕಮಗಳೂರು

ಸಿರಿಮನೆ ಜಲಪಾತ ಪ್ರವಾಸಿಗರಿಗೆ ಮುಕ್ತ!

ಸಿರಿಮನೆ ಜಲಪಾತ ಪ್ರವಾಸಿಗರಿಗೆ ಮುಕ್ತ!
– ತೀವ್ರ ಮಳೆ ಕಾರಣ ಜಲಪಾತ ಪ್ರವೇಶ ನಿಷೇಧ ಆಗಿತ್ತು
– ಮಲೆನಾಡಲ್ಲಿ ಹೆಚ್ಚಿದ ಪ್ರವಾಸಿಗರ ಸಂಖ್ಯೆ

NAMMUR EXPRESS NEWS
ಶೃಂಗೇರಿ: ತೀವ್ರ ಮಳೆಯ ಕಾರಣದಿಂದ ಮುಚ್ಚಲ್ಪಟ್ಟಿದ್ದ , ಸಿರಿಮನೆ ಜಲಪಾತವನ್ನು ಶುಕ್ರವಾರ ತೆರೆಯಲಾಗಿದ್ದು , ಪ್ರವಾಸಿಗರಿಗೆ ಪ್ರವೇಶ ನೀಡಲಾಗುತ್ತಿದೆ. ಕಳೆದ 15 ದಿನಗಳಿಂದ ಮಳೆಯ ಕಾರಣ ಈ ಸಿರಿಮನೆ ಫಾಲ್ಸ್ ಪ್ರವೇಶ ನಿಷೇಧ ಮಾಡಲಾಗಿತ್ತು. ಇತ್ತೀಚಿಗೆ ಕೊಡಚಾದ್ರಿ ಪ್ರವಾಸ ಪ್ರವಾಸಿಗರಿಗೆ ಮುಕ್ತವಾಗಿತ್ತು. ಮಳೆ ಕಡಿಮೆ ಹಿನ್ನೆಲೆ ಪ್ರವಾಸಿಗರು ಮಲೆನಾಡ ಕಡೆ ಲಗ್ಗೆ ಹಾಕುತ್ತಿದ್ದೂ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹೆಚ್ಚಾಗಿರುವುದು ಕಂಡು ಬಂತು. ಕುಪ್ಪಳಿ, ಕುಂದಾದ್ರಿ, ಕವಲೆದುರ್ಗಾ, ಶೃಂಗೇರಿ, ಹೊರನಾಡು, ಸಿಗಂದೂರು, ಶಿವಮೊಗ್ಗ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಸೇರಿ ಎಲ್ಲೆಡೆ ಪ್ರವಾಸಿಗರು ಹೆಚ್ಚಾಗಿರುವುದು ಕಂಡು ಬರುತ್ತಿದೆ.

ಹೋಂ ಸ್ಟೇ, ಹೋಟೆಲ್ ರಶ್ ರಶ್

ಶಿವಮೊಗ್ಗ, ಚಿಕ್ಕಮಗಳೂರು, ತೀರ್ಥಹಳ್ಳಿ, ಶೃಂಗೇರಿ, ಹೊರನಾಡು ಭಾಗದಲ್ಲಿ ವೀಕೆಂಡ್ ಪ್ರವಾಸೋದ್ಯಮ ಹೆಚ್ಚುತ್ತಿದೆ. ಹೋಂ ಸ್ಟೇ, ಹೋಟೆಲ್, ಲಾಡ್ಜ್ ವ್ಯವಹಾರ ಕೊಂಚ ಏರಿಕೆ ಆಗುತ್ತಿದೆ.

ಒಂದು ವಾರದಿಂದ ಮಳೆಯೇ ಇಲ್ಲ

ಮಲೆನಾಡ ಬಹುತೇಕ ಕಡೆ ಒಂದು ವಾರದಿಂದ ಮಳೆಯೇ ಇಲ್ಲದಾಗಿದೆ. ಬಿಸಿಲು ಕಾಣುತ್ತಿದೆ. ಹೀಗಾಗಿ ಜನ ಮಲೆನಾಡ ಕಡೆ ಬರುತ್ತಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.