Categories
ಚಿಕ್ಕಮಗಳೂರು

ಸೋರುತಿಹುದು ಎನ್.ಆರ್ ಪುರ ತಾಲೂಕು ಕಛೇರಿ

ಸೋರುತಿಹುದು ಎನ್.ಆರ್ ಪುರ ತಾಲೂಕು ಕಛೇರಿ

* ಏಳು ವರ್ಷದಿಂದ ಆಗಿಲ್ಲ ಮೇಲ್ಛಾವಣಿ ಕೆಲಸ,ಶಾಸಕರೇ ಈ ಕಡೆ ಗಮನ ಹರಿಸಿ
* ಈಡೇರಿಲ್ಲ ಶಾಸಕರ ಚುನಾವಣಾ ಭರವಸೆ, ತಾಲೂಕು ಕಛೇರಿ ಸ್ಥಳಾಂತರ ಕೇವಲ ಕನಸೇ

NAMMMUR EXPRESS NEWS
ಎನ್.ಆರ್ ಪುರ: ಮಳೆಗಾಲ ಬಂತೆಂದರೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭೂಕುಸಿತ, ಮರಗಳು ಬೀಳುವುದು,ಸಂಚಾರ ವ್ಯತ್ಯಯ,ವಿದ್ಯುತ್ ಸಮಸ್ಯೆಯಂತಹ ಅನೇಕ ಘಟನೆಗಳು ನಡೆದು ಸಾರ್ವಜನಿಕರು ತೊಂದರೆಗೆ ಸಿಲುಕುತ್ತಾರೆ. ಆಗ ತಾಲೂಕಿನ ತಹಶೀಲ್ದಾರ್ ನೇತೃತ್ವದಲ್ಲಿ ಸಾರ್ವಜನಿಕರ ಸಹಾಯಕ್ಕಾಗಿ ತಂಡವನ್ನು ರಚಿಸಿ ತೊಂದರೆಯಲ್ಲಿರುವವರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗುತ್ತದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ತಾಲೂಕು ಕಛೇರಿಯಲ್ಲಿ ಮಳೆಯಿಂದ ಕಛೇರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಹ ಸ್ಥಿತಿ ತಲೆದೂರಿದೆ.
ಹೌದು ಕಳೆದ ಏಳು ವರ್ಷಗಳಿಂದ ಮಳೆಗಾಲ ಬಂತೆಂದರೆ ಇಲ್ಲಿನ ಸಿಬ್ಬಂದಿಗಳಿಗೆ ಇದೇ ತಲೆಬಿಸಿಯಾಗಿದೆ. ಎನ್.ಆರ್ ಪುರ ತಾಲೂಕು ಕಛೇರಿಯ ಮೇಲ್ಛಾವಣಿ ಕೆಲಸವಾಗದೆ ಸಂಪೂರ್ಣ ಸೋರುತ್ತಿದೆ. ಮಳೆಯ ನೀರು ಕಛೇರಿ ಒಳಗೆ ಬರುತ್ತಿದ್ದು ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿದೆ.

* ಈಡೇರದ ಶಾಸಕರ ಚುನಾವಣಾ ಭರವಸೆ,ತಾಲೂಕು ಕಛೇರಿ ಸ್ಥಳಾಂತರ ಕೇವಲ ಕನಸೇ
ಕ್ಷೇತ್ರದ ಶಾಸಕರು ಚುನಾವಣಾ ಸಂದರ್ಭದಲ್ಲಿ ತಾಲೂಕಿನ ಜನರಿಗೆ ತಾನು ಗೆದ್ದಲ್ಲಿ ತಾಲೂಕು ಕಛೇರಿಯನ್ನು ಪಟ್ಟಣದ ಒಳಗೆ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು ಆದರೆ ಅದು ಕೇವಲ ಭರವಸೆಯಾಗಿಯೇ ಉಳಿದಿದ್ದು, ಕೊನೆ ಪಕ್ಷ ಏಳು ವರ್ಷಗಳಿಂದ ಮೇಲ್ಛಾವಣಿ ಕೆಲಸವಾಗದೆ ಕಛೇರಿ ಮೇಲ್ಛಾವಣಿ ಸೋರುತ್ತಿದೆ ಅದನ್ನಾದರೂ ಸರಿಪಡಿಸಿ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರನ್ನು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.