ಕಳಸ, ಜಯಪುರ, ಶೃಂಗೇರಿ ಭಾಗದಲ್ಲಿ ಕರೆಂಟ್ ಇಲ್ಲ..!
– ಗುರುವಾರ ಒಂದು ದಿನದ ವಿದ್ಯುತ್ ನಿಲುಗಡೆ
NAMMUR EXPRESS NEWS
ಕಳಸ/ಶೃಂಗೇರಿ: 66/33/11 ಕೆ.ವಿ. ವಿ.ವಿ ಕೇಂದ್ರ, ಬಾಳೆಹೊನ್ನೂರಿನಲ್ಲಿ 2024-25ನೇ ಸಾಲಿನ ಮೊದಲನೇಯ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಸದರಿ ವಿವಿ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಫೀಡರ್ ಗಳಲ್ಲಿ ದಿನಾಂಕ 20.06.2024(ಗುರುವಾರ) ದಂದು ಒಂದು ದಿನದ ವಿದ್ಯುತ್ ನಿಲುಗಡೆ ಆಗಲಿದೆ.
ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯ ವರೆಗೆ 66/33/11 ಬಾಳೆಹೊನ್ನೂರಿಂದ ಹೊರಹೊಮ್ಮುವ ಈ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
