Categories
ಚಿಕ್ಕಮಗಳೂರು

ಅರ್ಥಪೂರ್ಣವಾಗಿ ಪುನೀತ್ ಜನ್ಮದಿನ ಆಚರಿಸಿದ ಯುವಕರು

ಅರ್ಥಪೂರ್ಣವಾಗಿ ಪುನೀತ್ ಜನ್ಮದಿನ ಆಚರಿಸಿದ ಯುವಕರು

* ಹಳ್ಳಿಗಳ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ
* ಕಳೆದ 4 ವರ್ಷಗಳಿಂದ ಅಪ್ಪು ಜನ್ಮದಿನದಂದು ನೋಟ್ ಬುಕ್ ವಿತರಿಸುತ್ತಿರುವ ಯುವಕ

NAMMUR EXPRESS NEWS
ಶೃಂಗೇರಿ: ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್‌ರವರ 50 ನೇ ಜನ್ಮದಿನವನ್ನು ರಾಜ್ಯಾದ್ಯಂತ ಸಂಭ್ರಮ,ಶ್ರದ್ಧೆಯಿಂದ ಅಭಿಮಾನಿಗಳು ಆಚರಿಸಿದ್ದಾರೆ.ಕಳೆದ ವರ್ಷದಿಂದ ರಾಜ್ಯಸರ್ಕಾರ ಪುನೀತ್ ರಾಜ್ ಜನ್ಮದಿನವನ್ನು ಸ್ಪೂರ್ತಿ ದಿನವನ್ನಾಗಿ ಆಚರಿಸಲು ಘೋಷಿಸಿದೆ.
ಮಲೆನಾಡಿನಲ್ಲೂ ಅಪ್ಪು ಜನ್ಮದಿನವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ಗುಬ್ಬಗೋಡು ನಿವಾಸಿಯಾದ ಅಪ್ಪು ಅಭಿಮಾನಿ ಮಿಥುನ್ ಜಿ.ಆರ್ ಕಳೆದ ಮೂರು ವರ್ಷಗಳಿಂದ ತನ್ನ ನೆಚ್ಚಿನ ನಾಯಕನ ಜನ್ಮದಿನವನ್ನು ಹಳ್ಳಿಗಳಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್,ಪೆನ್ನು,ಚಿಕ್ಕಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದ್ದು, ನಾಲ್ಕನೇ ವರ್ಷವಾದ ಈ ಬಾರಿಯೂ ಕೂಡ ತಾಲೂಕಿನ ಕೋಗಿನಬೈಲು,ಮೀಗಾ,ಕಿಗ್ಗಾ,ಸಿರಿಮನೆ,ಸಿಂದೋಡಿ,ಯಡದಾಳು,ದುರ್ಗಾ ದೇವಸ್ಥಾನ,ತೆಕ್ಕೂರು,ವೈಕುಂಠಪುರ,ಕಲ್ಕಟ್ಟೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ವೈಕುಂಠಪುರದಲ್ಲಿನ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಸುಮಾರು 220 ವಿದ್ಯಾರ್ಥಿಗಳಿಗೆ ನೋಟ್ ಬುಕ್,ಪೆನ್ನು,ಚಿಕ್ಕಿ ವಿತರಿಸಿ ಅವರ ಮುಂದಿನ ಭವಿಷ್ಯ ಉತ್ತಮವಾಗಿರಲೆಂದು ಹಾರೈಸುವುದರೊಂದಿಗೆ ಮುಂದಿನ ದಿನಗಳಲ್ಲಿ ತಾವು ತಮ್ಮ ಕೈಲಾದ ಸಹಾಯವನ್ನು ಅಶಕ್ತರಿಗೆ ಮಾಡುವ ಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಮಾ.22 ರಿಂದ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಲಿರುವ ವೈಕುಂಠಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಯುವಕರ ತಂಡದ ವತಿಯಿಂದ ಶುಭ ಹಾರೈಸಲಾಯಿತು. ಮಿಥುನ್‌ನ ಈ ಕಾರ್ಯದಲ್ಲಿ ಗೆಳೆಯರಾದ ಸಚಿನ್,ಗಣೇಶ್,ಶ್ರೇಯಸ್ ಸಾಥ್ ನೀಡಿದರು. ಯುವಕರ ಈ ಕಾರ್ಯಕ್ಕೆ ಎಲ್ಲಾ ಶಾಲೆಯ ಎಸ್.ಡಿ.ಎಂ‌.ಸಿ ಸಮಿತಿ,ಶಾಲೆಯ ಶಿಕ್ಷಕ ವೃಂದದವರಿಂದ ಮೆಚ್ಚುಗೆ ವ್ಯಕ್ತಪಡಿಸಿ,ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.